Watch Video
ಆಯುರ್ವೇದದಲ್ಲಿ ಬೇವು ತುಂಬಾ ಪ್ರಸಿದ್ಧವಾದ ಔಷಧಿಯುಕ್ತ ಆರ್ಬ್ ಆಗಿದೆ. ಬೇವನ್ನು ಸಂಸ್ಕೃತದಲ್ಲಿ "ನಿಂಬಾ" ಎಂದು ಕರೆಯಲಾಗುತ್ತದೆ. ಪ್ರಕೃತಿಯಲ್ಲಿ ಎಲ್ಲ ರೋಗಕ್ಕೂ ಔಷಧಿ ಸಿಗುತ್ತದೆ ಎನ್ನಲು ಬೇವಿನ ಮರವೇ ಸಾಕ್ಷಿ. ಬೇವಿನಲ್ಲಿ 130 ವಿಭಿನ್ನ ಬಯಲಾಜಿಕಲ್ ಆಕ್ಟಿವ್ ಕಾಂಪೌಂಡ್ ಇದೆ. ಹೀಗಾಗಿ ಬೇವು ಆ್ಯಂಟಿ- ವೈರಲ್ ಮತ್ತು ಆ್ಯಂಟಿ- ಬ್ಯಾಕ್ಟೀರಿಯಲ್ ಆಗಿದೆ. ಬೇವು ರಕ್ತವನ್ನು ಶುದ್ಧೀಕರಿಸಲು, ದೇಹದಲ್ಲಿನ ಡ್ಯಾಮೇಜ್ ನಿವಾರಿಸಲು, ವಿಷಕಾರಿ ಅಂಶವನ್ನು ತೆಗೆಯಲು, ಗುಳ್ಳೆ ತೆಗೆಯಲು ಸಹಕಾರಿಯಾಗಿದೆ.
ಇದನ್ನು ಓದಿ: ಕಪ್ಪು ವಲಯಗಳನ್ನು ಶಾಶ್ವತವಾಗಿ ತೊಡೆದು ಹಾಕಲು 17 ಪರಿಹಾರಗಳುಬೇವಿನ ಎಲೆಗಳ ಪೇಸ್ಟ್ ಮಾಡಿ, ನಿಮ್ಮ ಗಾಯದ ಮೇಲೆ ಹಾಕಿಕೊಳ್ಳುವುದರಿಂದ ಬೇಗನೆ ಗಾಯ ವಾಸಿಯಾಗುತ್ತದೆ.
ನೀರು ಹಸಿರು ಬಣ್ಣ ಬರುವವರೆಗೆ ಬೇವಿನ ಎಲೆಗಳನ್ನು ಕುದಿಸಿ, ತಣ್ಣಗಾಗಲು ಬಿಡಿ. ನಿಮ್ಮ ಕೂದಲನ್ನು ಶಾಂಪು ಹಾಕಿ ತೊಳೆದ ಮೇಲೆ, ಅದನ್ನು ಈ ನೀರಿನಿಂದ ಸ್ವಚ್ಛಗೊಳಿಸಿ.
ಕೆಲವು ಬೇವಿನ ಎಲೆಗಳನ್ನು ಕುದಿಸಿ, ನೀರು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ. ನಂತರ ನೀರನ್ನು ನಿಮ್ಮ ಕಣ್ಣು ತೊಳೆಯಲು ಬಳಸಿ. ಇದು ನಿಮ್ಮ ಕಣ್ಣಿನಲ್ಲಿ ಆಗುವ ಕಿರಿಕಿರಿಯನ್ನು ತಡೆಯುತ್ತದೆ.
ಇದನ್ನು ಓದಿ: ಮೊಡವೆಗಳಿಂದ ಶಾಶ್ವತ ಪರಿಹಾರಕ್ಕೆ 14 ಸಲಹೆಗಳುಕೆಲವು ಬೇವಿನ ಎಲೆಗಳನ್ನು ಪುಡಿ ಮಾಡಿ,ಪೇಸ್ಟ್ ಮಾಡಿ. ಅದನ್ನು ನಿಮ್ಮ ಮೊಡವೆಗಳು ಒಣಗುವವರೆಗೆ ಪ್ರತಿದಿನ ಅನ್ವಯಿಸಿ. ಬೇವಿನ ಪೇಸ್ಟ್ ಯಾವುದೇ ರೀತಿಯ ಕಪ್ಪು ಕಲೆ ಮತ್ತು ದೀರ್ಘಕಾಲದ ಹುಣ್ಣುಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಅರಿಶಿಣವನ್ನು ಬೇವಿನ ಎಲೆಗಳ ಪೇಸ್ಟಿನೊಂದಿಗೆ ಸೇರಿಸುವುದರಿಂದ ತುರಿಕೆ, ಉಂಗುರ ಹುಳುಗಳು ಮತ್ತು ಕೆಲವು ಚರ್ಮದ ಕಾಯಿಲೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಇದನ್ನು ಓದಿ: ರೋಗಗಳನ್ನು ತಪ್ಪಿಸಲು ಹತ್ತು ಆರೋಗ್ಯಕರ ಅಭ್ಯಾಸಗಳುನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಕೆಲವು ಬೇವಿನ ಎಲೆಗಳನ್ನು ಪುಡಿ ಮಾಡಿ ನೀರಿಗೆ ಹಾಕಿ ಕುಡಿಯಿರಿ.
ಸ್ವಲ್ಪ ಬೇವಿನ ಎಣ್ಣೆಯನ್ನು ತೆಗೆದುಕೊಂಡು ಅದನ್ನು ನೆತ್ತಿಗೆ ಉಜ್ಜಿಕೊಳ್ಳಿ, ಸ್ವಲ್ಪ ಸಮಯದವರೆಗೆ ಬಿಟ್ಟು ತೊಳೆಯಿರಿ. ಬೇವಿನ ಎಣ್ಣೆ ನಿಮ್ಮ ಕೂದಲನ್ನು ಬಲಪಡಿಸುತ್ತದೆ. ಕೂದಲು ಉದುರುವುದನ್ನು ನಿಲ್ಲಿಸುತ್ತದೆ.
ಬೇವಿನ ಎಣ್ಣೆ ಅತ್ಯಂತ ಪೋಷಣೆಯಾಗಿದೆ ಮತ್ತು ಇದನ್ನು ನಿಮ್ಮ ಫೇಸ್ ಪ್ಯಾಕ್‌ಗಳಿಗೆ ಸೇರಿಸಬಹುದು. ಇದು ವಯಸ್ಸಾದ ಚರ್ಮ, ಯಾವುದೇ ರೀತಿಯ ಚರ್ಮದ ಕಿರಿಕಿರಿ ಮತ್ತು ತುರಿಕೆಗೆ ಸಹಾಯ ಮಾಡುತ್ತದೆ.
ಇದನ್ನು ಓದಿ: ಕೂದಲು ಉದುರುವುದನ್ನು ತಡೆಯಲು ಮನೆಮದ್ದುಗಳುಅನೋರೆಕ್ಸಿಯಾ, ವಾಕರಿಕೆ, ಕರುಳಿನ ಹುಳುಗಳಿಗೆ ಚಿಕಿತ್ಸೆ ನೀಡಲು ಬೇವಿನ ಹೂಗಳನ್ನು ಬಳಸಬಹುದು. ಬೇವಿನ ಎಲೆಗಳು ಕಣ್ಣು, ಚರ್ಮದ ಕಾಯಿಲೆ ಮತ್ತು ತಲೆನೋವುಗಳಿಗೆ ಒಳ್ಳೆಯದೆಂದು ಆಯುರ್ವೇದ ಸೂಚಿಸುತ್ತದೆ. ಬೇವಿನಿಂದ ನೀವು ಬ್ರಶ್ ಮಾಡಿದರೆ ತುಂಬಾ ಒಳ್ಳೆಯದು, ಈಗ ಅದು ಟೂತ್ ಬ್ರಶ್ ಆಗಿ ಬದಲಾಗಿದೆ. ಬೇವಿನ ಬ್ರಷ್ ನಿಮ್ಮ ಬಾಯಿಯಲ್ಲಿನ ಕೀಟಾಣುಗಳನ್ನು ಕೊಲ್ಲಲು, ನಿಮ್ಮ ಉಗುಳಿನ ಆಲ್ಕಲೈನ್ ಲೆವೆಲ್ ಮೆಂಟೇನ್ ಮಾಡಲು, ಬಾಯಿಯಿಂದ ಒಳಗೆ ಹೋಗುವ ಬ್ಯಾಕ್ಟೀರಿಯಾವನ್ನು ದೂರ ಮಾಡಲು, ನಿಮ್ಮ ಹಲ್ಲನ್ನು ಗಟ್ಟಿ ಮಾಡಲು ಹಾಗೂ ನಿಮ್ಮ ಹಲ್ಲನ್ನು ಬಿಳಿಯನ್ನಾಗಿ ಮಾಡುತ್ತದೆ.
ಬೇವಿನ ಎಣ್ಣೆ ಬೇವಿನ ಬೀಜದಿಂದ ತಯಾರಿಸಲಾಗಿರುತ್ತದೆ. ಇದರಲ್ಲಿ ತುಂಬಾ ಮೆಡಿಸಿನಲ್ ಪ್ರಾಪರ್ಟಿಸ್ ಇದೆ. ಬೇವಿನ ಕಾಸ್ಮೆಟಿಕ್ಸ್ ಮತ್ತು ಬ್ಯೂಟಿ ಪ್ರಾಡಕ್ಟ್ಸ್ ಬರುತ್ತವೆ. ಅವುಗಳೆಂದರೆ ಬೇವಿನ ಸೋಪ್, ಹೇರ್ ಆಯಿಲ್ ಮತ್ತು ಹ್ಯಾಂಡ್ ವಾಷ್. ಇದು ಮಸ್ಕಿಟೋ ರಿಪಲೆಂಟ್ ಆಗಿಯೂ ಕೆಲಸ ಮಾಡುತ್ತದೆ.
ಬೇವಿನ ಪ್ರಯೋಜನ ಮತ್ತು ಉಪಯೋಗದ ಮೇಲಿನ ಈ ಲೇಖನವನ್ನು ಶೇರ್ ಮಾಡಿ ಸಹಕಾರಿಸಿ. ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಾಕ ತಿಳಿಸಿ.
ಹಕ್ಕುತ್ಯಾಗ(disclaimer): ಈ ಲೇಖನದಲ್ಲಿ ಪ್ರಸ್ತುತಪಡಿಸಲಾದ ವಿಷಯವು ಮಾಹಿತಿ ಆಧಾರವಾಗಿದೆ ಮತ್ತು ವೈದ್ಯಕೀಯ ಸಲಹೆಗೆ ಬದಲಿಯಾಗಿಲ್ಲ. ಈ ಆಹಾರಗಳು ನಿಮ್ಮ ದೇಹದ ಮೇಲೆ ಬೀರಬಹುದಾದ ಪರಿಣಾಮಗಳಿಗೆ ವೆಬ್‌ಸೈಟ್ ಜವಾಬ್ದಾರನಾಗಿರುವುದಿಲ್ಲ. ಹೊಸದನ್ನು ಪ್ರಾರಂಭಿಸುವ ಮೊದಲು ನೀವು ವೈದ್ಯರನ್ನು ಸಂಪರ್ಕಿಸಿ ಎಂದು ಖಚಿತಪಡಿಸಿಕೊಳ್ಳಿ.
Explore all our Posts by categories.
See all comments...