Watch Video
ಒಮ್ಮೆ ಒಬ್ಬ ಮಹತ್ವಾಕಾಂಕ್ಷೆಯ(ambitious) ಯುವಕನಿಗೆ ಯಶಸ್ವಿಯಾಗಿರುವ ವ್ಯಕ್ತಿಯ ಮನೆಗೆ ಹೋಗುವ ಅವಕಾಶ ದೊರೆಯುತ್ತದೆ. ಅವನು ಅಲ್ಲಿಗೆ ಹೋದ ನಂತರ ಮನೆಯನ್ನು ನೋಡಿ ತುಂಬಾ ಉತ್ಸುಕನಾಗುತ್ತಾನೆ. ಅದಕ್ಕೆ ಅವನು, "ಸರ್, ನೀವು ಇಷ್ಟು ಒಳ್ಳೆಯ ಬದುಕನ್ನು ಹೇಗೆ ಸಾಧಿಸಿದಿರಿ, ನೀವು ಇಂದು ಶ್ರೀಮಂತ ವ್ಯಕ್ತಿಯಾಗಿದ್ದೀರಾ, ನಿಮ್ಮ ಹತ್ತಿರ ಇಷ್ಟೆಲ್ಲ ಕಾರುಗಳಿವೆ, ಇಷ್ಟು ದೊಡ್ಡ ಬಂಗಲೆ ಇದೆ, ಸ್ವಿಮ್ಮಿಂಗ್ ಪೂಲ್ ಇದೆ. ಇದನ್ನೆಲ್ಲ ನೀವು ಹೇಗೆ ಸಾಧಿಸಿದೀರಿ" ಎಂದು ಕೇಳುತ್ತಾನೆ.
ಅದಕ್ಕೆ ಆ ಶ್ರೀಮಂತ ವ್ಯಕ್ತಿ, "ನಾನು ಇದನ್ನು ಸಾಧಿಸಲು ಇರುವ ರಹಸ್ಯದ(secrate) ಬಗ್ಗೆ ತಿಳಿಸುವೆನು, ಆದರೆ ನಿನಗೆ ನಾನು ತಿಳಿಸುವ ರೀತಿ ಇಷ್ಟವಾಗದೆ ಇರಬಹುದು" ಎಂದು ಹೇಳುತ್ತಾರೆ. ಅದಕ್ಕೆ ಆ ಹುಡುಗ, "ನೀವು ಯಾವುದೇ ರೀತಿಯಲ್ಲಾದರೂ ತಿಳಿಸಿ, ನಾನು ಆ ರಹಸ್ಯಗಳ ಬಗ್ಗೆ ತಿಳಿದುಕೊಳ್ಳಲು ಬಯಸುತ್ತೇನೆ" ಎಂದು ಹೇಳುತ್ತಾನೆ. ಇದರ ನಂತರ ಆ ಶ್ರೀಮಂತ ವ್ಯಕ್ತಿ ಆ ಹುಡುಗನನ್ನು ಸ್ವಿಮ್ಮಿಂಗ್ ಪೂಲ್ ಹತ್ತಿರ ಕರೆದುಕೊಂಡು ಹೋಗುತ್ತಾನೆ. "ಈ ಪೂಲ್ ನ ನೀರನ್ನು ಗಮನವಿಟ್ಟು ನೋಡು, ನಾನು ನಿನಗೆ ಏನನ್ನೋ ತೋರಿಸಲು ಬಯಸುತ್ತೇನೆ. ನೀನು ಪೂಲ್ ನ ಆಳವಾದ ಭಾಗವನ್ನು ನೋಡುತ್ತಿರೂ" ಎನ್ನುತ್ತಾನೆ. ಆ ಹುಡುಗ ನೀರಿನ ಹತ್ತಿರ ಹೋಗಿ ಒಳಗಡೆ ಏನಿದೆ ಎಂದು ನೋಡಲು ಪ್ರಾರಂಭಿಸುತ್ತಾನೆ.
ಆಗ ಆ ಶ್ರೀಮಂತ ವ್ಯಕ್ತಿ ಆ ಹುಡುಗನ ತಲೆಯನ್ನು ನೀರಿನಲ್ಲಿ ದಬ್ಬುತ್ತಾನೆ. ಇದರಿಂದ ಆ ಹುಡುಗ ಹಾತೊರೆಯುತ್ತಾನೆ, ಅವನಿಗೆ ಉಸಿರನ್ನು ತೆಗೆದುಕೊಳ್ಳಲು ಕಷ್ಟವೆನಿಸುತ್ತಿರುತ್ತದೆ. ಸ್ವಲ್ಪ ಸಮಯದ ನಂತರ ಆ ಶ್ರೀಮಂತ ವ್ಯಕ್ತಿ ಆತನನ್ನು ಅಲ್ಲಿಂದ ಹೊರ ತೆಗೆಯುತ್ತಾನೆ. ಆಗ ಆ ಹುಡುಗ ಗಾಬರಿಯಲ್ಲಿ, "ನೀವು ಹುಚ್ಚನ, ನೀವು ಏನು ಮಾಡುತ್ತಿದ್ದೀರಿ, ನಾನು ಸತ್ತೇ ಹೋಗುತ್ತಿದ್ದೆ" ಎಂದು ಹೇಳುತ್ತಾನೆ. ಇದಕ್ಕೆ ಆ ಶ್ರೀಮಂತ ವ್ಯಕ್ತಿ, "ನಾನು ಶ್ರೀಮಂತನಾಗಲು ಬಳಸಿದ ರಹಸ್ಯ ಇದುವೇ ಆಗಿದೆ" ಎಂದು ತಿಳಿಸುತ್ತಾನೆ.
ಇದಕ್ಕೆ ಆ ಹುಡುಗ ಗೊಂದಲದಲ್ಲಿ, "ನೀವು ಏನು ಹೇಳುತ್ತಿದ್ದೀರಾ" ಎಂದು ಕೇಳುತ್ತಾನೆ. ಅದಕ್ಕೆ ಆ ಶ್ರೀಮಂತ ವ್ಯಕ್ತಿ, "ನೀನು ಉಸಿರು ತೆಗೆದುಕೊಳ್ಳಲು ಎಷ್ಟು ಹಾತೊರೆಯುತ್ತಿದ್ದೆಯೋ, ಅಷ್ಟೇ ಶಕ್ತಿಯಲ್ಲಿ ನೀನು ಯಶಸ್ವಿಗಾಗಿ, ಅಂದರೆ ನಿನಗೆ ಉಸಿರು ತೆಗೆದುಕೊಳ್ಳುವುದು ಎಷ್ಟು ಮುಖ್ಯವಾಗಿತ್ತೋ, ಅಷ್ಟೇ ಮುಖ್ಯ ಯಶಸ್ಸನ್ನು ಸಾಧಿಸುವುದಾದರೆ, ನೀನು ಯಶಸ್ವಿ ಆಗುತ್ತೀಯ" ಎನ್ನುತ್ತಾರೆ.
ಇದನ್ನು ಓದಿ: How to Change Your Life in 30 Daysಈ ಕಥೆಯನ್ನು "ರಾಜು ಕನ್ನಡ ಮೀಡಿಯಂ" ಸಿನಿಮಾದಲ್ಲಿ ನೋಡಬಹುದು. ಈ ಕಥೆಯನ್ನು ಕೇಳಿದ ನಂತರ ಅನೇಕರಿಗೆ ಪ್ರೇರಣೆಯ ಭಾವನೆ ಬರುತ್ತದೆ. ಇದರ ನಂತರ ಅವರು, "ನಾನು ಯಶಸ್ವಿಯಾಗುತ್ತೇನೆ" ಎಂದೆಲ್ಲ ಯೋಚಿಸುತ್ತಾರೆ ಮತ್ತು "ನಾನು ವ್ಯಾಯಾಮ ಮಾಡುವೇ, ಪುಸ್ತಕವನ್ನು ಓದುವೇ, ಹೊಸ ವ್ಯಾಪಾರವನ್ನು ಪ್ರಾರಂಭಿಸುವೇ" ಎಂದೆಲ್ಲಾ ಯೋಚಿಸುತ್ತಾರೆ. ಆದರೆ ಇಷ್ಟೆಲ್ಲ ಆದ 2 - 3 ದಿನದಲ್ಲೇ ಅವರ ಪ್ರೇರಣೆ ಕುಗ್ಗುತ್ತದೆ ಮತ್ತು ಅವರು ಅವರ ಸಾಮಾನ್ಯ ಬದುಕಿಗೆ ಹಿಂತಿರುಗುತ್ತಾರೆ. ಈ ರೀತಿ ಏಕೆ ಆಗುತ್ತದೆ.
ಪ್ರೇರಣೆಯಿಂದ ನಿಮಗೆ ಅಡ್ರಿನಾಲಿನ್ ವಿಪರೀತ(adreline rush) ಸಿಗುತ್ತದೆ. ಆದರೆ ಕೇವಲ ಪ್ರೇರಣೆಯಿಂದಲೇ ನೀವು ಬದುಕನ್ನು ಬದಲಿಸಲು ಸಾಧ್ಯವಿಲ್ಲ. ಇದರ ಮೇಲೆ ಒಂದು ಸಾದೃಶ್ಯ(analogy) ಇದೆ, ಅದೆಂದರೆ, ನಿಮ್ಮ ಬದುಕು ಕಾರು ಆಗಿದ್ದಾರೆ, ನೀವು ಆ ಕಾರನ್ನು ಓಡಿಸಿ ಗುರಿ ತನಕ ತಲುಪಬೇಕೆಂದಿದ್ದರೆ, ಇದರಲ್ಲಿ ಪ್ರೇರಣೆ, ಆ ಕೀಲಿ(key) ಆಗಿದೆ. ಇದರಿಂದ ನೀವು ಕಾರನ್ನು ಪ್ರಾರಂಭಿಸುತ್ತೀರಾ. ಆದರೆ ಅದನ್ನು ಮುಂದೆ ತಳ್ಳಲು ಸಾಧ್ಯವಿಲ್ಲ. ಇದಕ್ಕೆ ನೀವು ಆಕ್ಸಿಲರೇಷನ್ ನೀಡಬೇಕು ಮತ್ತು ನಿಮ್ಮ ಜೀವನದಲ್ಲಿ ಈ ಆಕ್ಸಿಲರೇಷನ್ ಸ್ವಯಂ ಶಿಸ್ತು(self decipline) ಆಗಿದೆ. ಇದು ನಿಮ್ಮ ಗುರಿಯನ್ನು ಸಾಧಿಸಲು ತುಂಬಾ ಮುಖ್ಯವಾಗಿದೆ.
ದೀರ್ಘಾವಧಿಯಲ್ಲಿ ನೀವು ಯಶಸ್ಸನ್ನು ಸಾಧಿಸಲು ಶಿಸ್ತು ತುಂಬಾ ಮುಖ್ಯವಾಗಿದೆ. ಪ್ರೇರಣೆ ಕೂಡ ಮುಖ್ಯವಾಗಿದೆ, ಆದರೆ ಅದು ಕೇವಲ ಕೀಲಿ ಕೊಡುವುದಕ್ಕೆ ಸೀಮಿತವಾಗಿದೆ. ಏನನ್ನಾದರೂ ಹೊಸದನ್ನು ಪ್ರಾರಂಭಿಸಲು ಪ್ರೇರಣೆ ಮುಖ್ಯವಾಗಿದೆ. ಆದರೆ ಆ ಹೊಸದನ್ನು ಪ್ರಾರಂಭಿಸಿ ದೀರ್ಘಾವಧಿವರೆಗೂ ಅದು ಇರಬೇಕೆಂದರೆ, ಅದಕ್ಕೆ ನಿಮಗೆ ಸ್ವಯಂ ಶಿಸ್ತು ಬೇಕೇ ಬೇಕು. ಇಂದು ನೀವು ಸ್ವಯಂ ಶಿಸ್ತನ್ನು ಹೇಗೆ ಸಾಧಿಸಬೇಕು ಎಂಬುದನ್ನು ನಾವು ತಿಳಿಸಲಿದ್ದೇವೆ.
ಇದನ್ನು ನಾವು ಬ್ರಿಯಾನ್ ಟ್ರೇಸಿ(brian tracy) ಅವರ "no excuses, the power of self discipline" ಎಂಬ ಪುಸ್ತಕದಿಂದ ತಿಳಿಸಲಿದ್ದೇವೆ. ಈ ಪುಸ್ತಕದಲ್ಲಿ ಲೇಖಕರು "3r method" ಬಗ್ಗೆ ತಿಳಿಸಿದ್ದಾರೆ, ಅಂದರೆ 3 ಹಂತದ ಬಗ್ಗೆ ಆಗಿದೆ. ಇದನ್ನು ನೀವು ಫಾಲೋ ಮಾಡುವುದರಿಂದ ನಿಮ್ಮ ಸ್ವಯಂ ಶಿಸ್ತು ತುಂಬಾ ಗಟ್ಟಿಯಾಗುತ್ತದೆ ಮತ್ತು ಇದು ನಿಮಗೆ ದೊಡ್ಡದನ್ನು ಸಾಧಿಸಲು ಸಹಾಯ ಮಾಡುತ್ತದೆ. ನಾವು ಇಂದು ಆ "3r method" ಬಗ್ಗೆ ತಿಳಿಸಲಿದ್ದೇವೆ. ಅದರಲ್ಲಿ ಮೊದಲ "R" ಎಂದರೆ "reason" ಆಗಿದೆ.
ಇದನ್ನು ಓದಿ: unstoppable ಆಗಲು ಇರುವ 5 ಪಾಠಗಳುಲ್ಯೂಕಾಸ್(lucas) ಎಂಬ 20ರ ವಯಸ್ಸಿನ ಒಬ್ಬ ಹುಡುಗ ಇದ್ದಾನೆ. ಅವನ ಬದುಕಿನಲ್ಲಿ ಅನೇಕ ಸಮಸ್ಯೆಗಳಿದ್ದವು. ಅವನ ತಂದೆ ಇರಲಿಲ್ಲ, ಹೀಗಾಗಿ ಅವನ ತಾಯಿಯೇ ಅವನನ್ನು ಸಾಕುತ್ತಿರುತ್ತಾರೆ. ಅವನ ತಂಗಿಯನ್ನು ಕೂಡ ಅವರ ತಾಯಿಯೇ ನೋಡಿಕೊಳ್ಳುತ್ತಿದ್ದರು. ಲ್ಯೂಕಾಸ್ ತಂದೆ ಇಲ್ಲದ ಕಾರಣ ಅವನು ಕೆಟ್ಟ ವಿಷಯಗಳಲ್ಲಿ ಸಿಕ್ಕಿಕೊಳ್ಳುತ್ತಾನೆ. ಅವನ ತಾಯಿಯ ಮಾತನ್ನು ಕೇಳುತ್ತಿರಲಿಲ್ಲ, ಕೆಟ್ಟ ಜನರ ಜೊತೆ ಸಮಯ ಕಳೆಯುತ್ತಿದ್ದ, ಅನಾರೋಗ್ಯಕರ, ಕೆಟ್ಟ ಜೀವನವನ್ನು ನಡೆಸಲು ಪ್ರಾರಂಭಿಸಿದ. ಅದರಲ್ಲಿ ಅವನು ಧೂಮಪಾನ, ಮದ್ಯಪಾನ ಪಾರ್ಟಿಯಲ್ಲೇ ಸಮಯ ಕಳೆಯುತ್ತಿದ. ಅಂದರೆ ಅವನು ಬೇಜವಾಬ್ದಾರಿ(irresponsible) ಮತ್ತು ಸೋಮಾರಿಯಾಗಿರುತ್ತಾನೆ. ಇದರಿಂದ ಅವರ ತಾಯಿ ಅಧಿಕ ಒತ್ತಡ ತೆಗೆದುಕೊಂಡು ಕೆಲಸ ಮಾಡಿ, ಒಮ್ಮೆ ಕಾಯಿಲೆಗೆ ತುತ್ತಾಗುತ್ತಾರೆ. ಅವರನ್ನು ಎಮರ್ಜೆನ್ಸಿಯಲ್ಲಿ ಸೇರಿಸಿಕೊಳ್ಳುತ್ತಾರೆ. ಮುಂಚೆ ಅವರ ತಾಯಿ ಎಲ್ಲವನ್ನು ನೋಡಿಕೊಳ್ಳುತ್ತಿದ್ದ ಕಾರಣ, ಲ್ಯೂಕಾಸ್ ಮೇಲೆ ಆ ಜವಾಬ್ದಾರಿಯ ಒತ್ತಡವಿರಲಿಲ್ಲ. ಆದರೆ ಅವರ ತಾಯಿ ಅಡ್ಮಿಟ್ ಆದ ನಂತರ ಎಲ್ಲಾ ಜವಾಬ್ದಾರಿಯು ಅವನ ಮೇಲೆ ಬರುತ್ತದೆ. ಮನೆ ಕೆಲಸ, ಅವನ ತಂಗಿಯನ್ನು ನೋಡಿಕೊಳ್ಳುವ ಎಲ್ಲಾ ಜವಾಬ್ದಾರಿಯು ಲ್ಯೂಕಾಸ್ ಮೇಲೆ ಬರುತ್ತದೆ. ಅವನು ಅದನ್ನು ಮಾಡುತ್ತಿರುತ್ತಾನೆ.
ಒಮ್ಮೆ ಲ್ಯೂಕಾಸ್ ತಾಯಿಯು ಸತ್ತು ಹೋಗುತ್ತಾರೆ. ಇದರಿಂದ ಲ್ಯೂಕಾಸ್ ಜೀವನವೇ ಅಸ್ತವ್ಯಸ್ತವಾಗುತ್ತದೆ. ಲ್ಯೂಕಾಸ್ನ ತಂಗಿಯ ಜವಾಬ್ದಾರಿ ಪೂರ್ತಿ ಅವನ ತಲೆಯ ಮೇಲೆ ಬರುತ್ತದೆ ಮತ್ತು ಅವನ ತಾಯಿ ಸಾಯುವ ಮೊದಲು, "ಇನ್ನು ಮುಂದೆ ಎಲ್ಲವನ್ನು ನೀನೇ ನೋಡಿಕೊಳ್ಳಬೇಕು. ನಿನ್ನ ತಂಗಿಯನ್ನು ಹುಷಾರಾಗಿ ನೋಡಿಕೋ. ಎಲ್ಲಾ ಕೆಟ್ಟ ವಸ್ತುಗಳನ್ನು ಬಿಟ್ಟು ಬಿಡು" ಎನ್ನುತ್ತಾರೆ. ಇಷ್ಟೆಲ್ಲ ಭಾವನತ್ಮಕ ವಿಷಯಗಳು ಲ್ಯೂಕಾಸ್ ಜೀವನದಲ್ಲಿ ಆದಾಗ, ಅವನು ತುಂಬಾ ಅಳುತ್ತಾನೆ ಮತ್ತು "ನಾನು ಬದಲಾಗುವೇ" ಎಂದು ನಿರ್ಧಾರ ಮಾಡಿಕೊಳ್ಳುತ್ತಾನೆ.
ಇದರ ನಂತರ ಅವನು ಗೆಳೆಯರ ಜೊತೆ ಸುತ್ತಾಡುವ ಬದಲು, ಅರೆಕಾಲಿಕ ಕೆಲಸ(parttime work) ಮಾಡುತ್ತಾನೆ. ಇದರಿಂದ ಅವನು ಹಣ ಗಳಿಸಿ ಅವನ ತಂಗಿಯನ್ನು ನೋಡಿಕೊಳ್ಳುತ್ತಿದ. ಅವನು ಅವನ ಬದುಕಿನಲ್ಲಿ ಕೆಲವು ಗುರಿಯನ್ನು ಇಟ್ಟುಕೊಳ್ಳುತ್ತಾನೆ. "ನಾನು ಓದಿ ಒಳ್ಳೆಯ ವ್ಯಕ್ತಿ ಆಗುವೆ ಮತ್ತು ನನ್ನ ತಂಗಿಯ ಮದುವೆಯನ್ನು ಕೂಡ ಮಾಡುವೆ" ಎಂದು ಯೋಚಿಸಿದ. ಇದಕ್ಕಾಗಿ ಅವನು ತುಂಬಾ ಕಷ್ಟಪಡಲು ಪ್ರಾರಂಭಿಸಿದ. ಬೆಳಗ್ಗೆ ಕಾಲೇಜಿಗೆ ಹೋಗುತ್ತಿದ್ದ, ನಂತರ ಕೆಲಸಕ್ಕೆ ಹೋಗುತ್ತಿದ್ದ, ಹೀಗೆ 2 - 3 ಕೆಲಸ ಮಾಡುತ್ತಿದ. ಇವೆಲ್ಲವನ್ನೂ ಬಾರಿ ಬಾರಿ ಮಾಡುತ್ತಿದ್ದರಿಂದ ಅವನ ಸ್ವಯಂ ಶಿಸ್ತು ತುಂಬಾ ಬೆಳೆಯುತ್ತದೆ. ಇದರಿಂದ ಎಲ್ಲಾ ಕೆಲಸ ಅವನಿಗೆ ಸುಲಭವಾಗುತ್ತದೆ.
ಮುಂಚೆ ಓದಲು ಕಷ್ಟವೆನ್ನುತ್ತಿದ್ದ ಲ್ಯೂಕಾಸ್ಗೆ, ಈಗ ಓದುವುದು ಸುಲಭವಾಗಿದೆ. ಕೆಲಸದ ಜೊತೆ ಅವನು ಮನೆಯನ್ನು ಕೂಡ ನೋಡಿಕೊಳ್ಳುತ್ತಿದ. ಅಡುಗೆ ಮಾಡುವುದು, ಬಟ್ಟೆ ಒಗೆಯುವುದು, ಮನೆಯನ್ನು ಸ್ವಚ್ಛ ಮಾಡುವುದು, ಇವುಗಳ ಜೊತೆಗೆ ತನ್ನ ತಂಗಿಯನ್ನು ನೋಡಿಕೊಳ್ಳುವುದಕ್ಕೆ ಪ್ರಾರಂಭಿಸಿದ. ಇದರಿಂದ ಅವನು ಅವನ ಕಾಲೇಜನ್ನು ಮುಗಿಸುತ್ತಾನೆ, ಒಂದು ಒಳ್ಳೆಯ ಕೆಲಸ ಸಿಗುತ್ತದೆ, ಸ್ವಲ್ಪ ವರ್ಷ ಕೆಲಸ ಮಾಡಿ, ಹಣ ಗಳಿಸಿ, ತನ್ನ ತಂಗಿಯನ್ನು ಓದಿಸುತ್ತಾನೆ ಮತ್ತು ಮದುವೆಯನ್ನು ಮಾಡಿಸುತ್ತಾನೆ. ಇವೆಲ್ಲವನ್ನೂ ನೋಡಿ ಆತ ತನ್ನ ತಂಗಿಗೆ, "ಇಂದು ನಮ್ಮ ತಾಯಿ ಇದ್ದಿದ್ದರೆ ನಮ್ಮನ್ನು ನೋಡಿ ಎಷ್ಟು ಖುಷಿ ಪಡುತ್ತಿದ್ದರು" ಎಂದು ಹೇಳುತ್ತಾನೆ.
ಈ ಕಥೆಯಲ್ಲಿ ಲ್ಯೂಕಾಸ್ ಬೇಜವಾಬ್ದಾರಿ ಹುಡುಗನಾಗಿದನ್ನು. ಆದರೂ ಅವನು ಎಲ್ಲವನ್ನೂ ಬದಲಿಸಿಕೊಂಡು ಬದುಕನ್ನು ಪೂರ್ತಿಯಾಗಿ ಬದಲಿಸಿಕೊಂಡ. ಇವೆಲ್ಲವನ್ನು ಅವನು ಏಕೆ ಮಾಡಿದ? ಇದು ಏಕೆಂದರೆ ಅವನ ಹತ್ತಿರ ಒಂದು ಗಟ್ಟಿಯಾದ ಕಾರಣವಿತ್ತು(strong reason), ಅವನ ತಾಯಿ ಸತ್ತ ನಂತರ ಎಲ್ಲ ಜವಾಬ್ದಾರಿಯು ಅವನ ಮೇಲೆ ಬರುತ್ತದೆ. ಅವನು ಒಳ್ಳೆಯ ವ್ಯಕ್ತಿ ಆದ ಕಾರಣ ಇನ್ನು ಕೆಲಸವನ್ನು ಮಾಡಲೇಬೇಕು ಎಂದುಕೊಂಡ, ಅವನ ಹತ್ತಿರ ಯಾವುದೇ ಆಯ್ಕೆ ಇರಲಿಲ್ಲ. ಬದಲಿಗೆ ಒಂದು ಗಟ್ಟಿಯಾದ ಕಾರಣವಿತ್ತು, ಅದೆಂದರೆ "ನನ್ನ ತಾಯಿಗೆ ಹೆಮ್ಮೆಯಾ ಅನುಭವ ನೀಡಬೇಕು" ಎಂಬುದಾಗಿತ್ತು. ನಿಮ್ಮ ಬದುಕಿನಲ್ಲೂ ಒಂದು ಗಟ್ಟಿಯಾದ ಕಾರಣವನ್ನು ಕಂಡುಕೊಂಡರೆ, ಅದು ನಿಮ್ಮನ್ನು ಸ್ವಯಂ ಶಿಸ್ತಾಗಿ ಮಾಡುತ್ತದೆ.
ನೀವು ಭೂಮಿಯ ಯಾವುದೇ ಭಾಗದಲ್ಲಿರಿ, 6 ತಿಂಗಳಲ್ಲಿ ಈಜಿಪ್ಟ್ನ ಈ ಜಾಗದಲ್ಲಿ ಬಂಗಾರದ ಬೆಟ್ಟ ಸಿಗುತ್ತದೆ ಎಂದು ನಿಮಗೆ ಹೇಳಿದರೆ. ನೀವು ಎಷ್ಟೇ ಸೋಮಾರಿ, ಬೇಜವಾಬ್ದಾರಿ ಆಗಿದ್ದರು, ಈ ಮಾತನ್ನು ನಂಬಿದರೆ ಆರು ತಿಂಗಳ ನಂತರ ಆ ಸ್ಥಳಕ್ಕೆ ಹೋಗೆ ಹೋಗುತ್ತೀರಾ. ಏಕೆಂದರೆ, ಇದರಲ್ಲಿ ನಿಮಗೆ ಒಂದು ಗಟ್ಟಿಯಾದ ಕಾರಣ ದೊರೆತಿದೆ. ಹೀಗಾಗಿ ನಿಮ್ಮ ಬದುಕಿನಲ್ಲಿ ಒಂದು ಗಟ್ಟಿಯಾದ ಕಾರಣವನ್ನು ಹುಡುಕಿ. "ನೀವು ಏಕೆ ಶ್ರೀಮಂತರಾಗಲು ಬಯಸಿದ್ದೀರಾ?", "ನಿಮ್ಮ ಗುರಿಯನ್ನು ಏಕೆ ತಲುಪಬೇಕು?", ನೀವು ಎಷ್ಟು ದೊಡ್ಡ ಕಾರಣ ನೀಡುತ್ತೀರೋ ಅಷ್ಟು ಶಿಸ್ತಿನಲ್ಲಿ ಇದ್ದು, ನಿಮ್ಮ ಗುರಿಯನ್ನು ಸಾಧಿಸುತ್ತೀರಾ.
ಇದನ್ನು ಓದಿ: "Secrets of the Millionaire Mind" ಪುಸ್ತಕದ ಸಾರಾಂಶಇನ್ನೂ 2ನೇ "R" ಎಂದರೆ "research" ಆಗಿದೆ. ಒಮ್ಮೆ ನಿಮಗೆ ಗಟ್ಟಿಯಾದ ಕಾರಣ ಸಿಕ್ಕ ನಂತರ ಸಹಾಯ ಮಾಡುವುದೇ ಸಂಶೋಧನೆ(research). ಉದಾಹರಣೆಗೆ ಲೇಖಕ ಬ್ರಿಯಾನ್ ಟ್ರೇಸಿಯವರ ದಂತವೈದ್ಯ(dentist) ತುಂಬಾ ಪ್ರಚೋದಿತರಾಗಿದ್ದರು. ಅವರಿಗೆ ಅವರ ಕೆಲಸದ ಮೇಲೆ ತುಂಬಾ ಖುಷಿಯಾಗುತ್ತಿತು. ಅವರು ಅನೇಕ ರಿಸರ್ಚ್ಗಳನ್ನು ಮಾಡುತ್ತಿದ್ದರು, ಹಲವಾರು ಸೆಮಿನಾರ್ಗಳಿಗೆ ಹೋಗುತ್ತಿದ್ದರು, ಹಲವಾರು ಮಾರ್ಗದರ್ಶಕರಿಂದ(mentors) ಕಲಿಯುತ್ತಿದ್ದರು. ಈ ರೀತಿಯಲ್ಲಿ ಅವರು ಒಮ್ಮೆ ಒಂದು ಸಮ್ಮೇಳನಕ್ಕೆ(conference) ಹೋಗುತ್ತಾರೆ. ಅಲ್ಲಿ ಜಪಾನ್ನ ಒಂದು ದಂತವೈದ್ಯ ಅವರಿಗೆ, ಹಲ್ಲನ್ನು ಪೂರ್ತಿಯಾಗಿ ಹೊಸದಾಗಿ ಮಾಡುವುದು ಹೇಗೆ? ಎಂಬ ತಂತ್ರವನ್ನು ತಿಳಿಸಿದರು. ಆತ ಅದನ್ನು ಕಲಿತು ಅಮೆರಿಕಾಗೆ ಬಂದು ಪ್ರಯತ್ನಿಸಿದಾಗ, ಈ ಒಂದೇ ವಿಷಯ ಅವನನ್ನು ಬದಲಿಸಿತು. ಅವನ ಉದ್ಯೋಗ(carrier) ಗಗನಕುಸುಮವಾಗುತ್ತದೆ(sky rocket). ದೂರದ ಊರಿನಿಂದ ಜನರು ಅವನ ಹತ್ತಿರ ಬರಲು ಪ್ರಾರಂಭಿಸಿದರು ಮತ್ತು ಆತ ತನ್ನ ಸ್ವಂತ ಆಸ್ಪತ್ರೆಯನ್ನು ತೆಗೆಯುವಷ್ಟು ಹಣವನ್ನು ಮಾಡುತ್ತಾನೆ.
ಗಟ್ಟಿಯಾದ ಕಾರಣ ಸಿಕ್ಕ ನಂತರ ನೀವು ಮುಂದೆ ಮಾಡಬೇಕಿರುವ ವಿಷಯ ಸಂಶೋಧನೆ(research) ಆಗಿದೆ. ನೀವು ಅದರ ಮೇಲೆ ಅಧಿಕ ಸಂಶೋಧನೆ ಮಾಡಿದಷ್ಟು, ಅದಕ್ಕೆ ಒಳ್ಳೆಯ ಉತ್ತರ ಸಿಗುವ ಸಾಧ್ಯತೆ ಹೆಚ್ಚುತ್ತದೆ. ಅದನ್ನು ಫಾಲೋ ಮಾಡಿ ನೀವು ಒಳ್ಳೆಯ ಫಲಿತಾಂಶವನ್ನು ಸಾಧಿಸಬಹುದು. ಉದಾಹರಣೆಗೆ ಒಬ್ಬ ವ್ಯಕ್ತಿಗೆ ಕೋವಿಡ್ ನಂತರ ಅವನ ತೂಕ ಹೆಚ್ಚಿರುತ್ತದೆ. ಅವನು ತ್ವರಿತ ಆಹಾರಗಳನ್ನು(fast food) ತಿನ್ನಲು ಪ್ರಾರಂಭಿಸಿದ. ಅವನ ಗೆಳೆಯರು ಕೂಡ ಅವನನ್ನು ಅಣುಗಿಸುತ್ತಿದ್ದರು. ಆಗ ಅವನು ಜಿಮ್ಗೆ ಹೋಗಿ, ಆಹಾರ ಪದ್ಧತಿಯನ್ನು(diet) ಫಾಲೋ ಮಾಡಿ, ಅವನ ತೂಕವನ್ನು ಇಳಿಸುವ ಬಗ್ಗೆ ಯೋಚಿಸಿದ. ಅವನು ಅದನ್ನು ಮಾಡಲು ಪ್ರಾರಂಭಿಸಿದ ಮತ್ತು ಸ್ವಲ್ಪ ದಿನದ ನಂತರವೇ ಅವನ ಪ್ರೇರಣೆ ಕುಗ್ಗುತ್ತದೆ. ಅವನು ಜಿಮ್ಗೆ ಹೋಗುವುದನ್ನು ಮುಂದುಡುತ್ತಿದ್ದ, ಇದರಿಂದ ಅವನ ತೂಕ ಮತ್ತೊಮ್ಮೆ ಹೆಚ್ಚಲು ಪ್ರಾರಂಭಿಸಿತು.
ಇದರ ನಂತರ ಅವನು ಪ್ರೇರಣೆಯ ಬದಲು ಸಂಶೋಧನೆಯನ್ನು ಮಾಡಲು ಪ್ರಾರಂಭಿಸಿದ. ಅವನು ಆರೋಗ್ಯಕರವಾಗಿ ಇರುವ ಜನರ ವೀಡಿಯೋಗಳನ್ನು ನೋಡಲು ಪ್ರಾರಂಭಿಸಿದ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಆ ರೀತಿಯ ಬದುಕನ್ನು ಜೀವಿಸುತ್ತಿದ್ದ, ಜನರನ್ನು ಫಾಲೋ ಮಾಡಲು ಪ್ರಾರಂಭಿಸಿದ. ಯೂಟ್ಯೂಬ್ನಲ್ಲೂ ಆರೋಗ್ಯಕ್ಕೆ ಸಂಬಂಧಿಸಿದ ವೀಡಿಯೋಗಳನ್ನು ನೋಡುತ್ತಿದ್ದ ಮತ್ತು ಅವನು ಆರೋಗ್ಯಕ್ಕೆ ಸಂಬಂಧಿಸಿರುವ ಒಂದು ಪುಸ್ತಕವನ್ನು ಓದುತ್ತಾನೆ. ಇದೇ ರೀತಿ ಅವನು ಎಲ್ಲದರ ಮೇಲೂ ಅಧಿಕ ಸಂಶೋಧನೆ ಮಾಡಲು ಪ್ರಾರಂಭಿಸಿದ. ಉದಾಹರಣೆಗೆ carb ಎಂದರೇನು? ಪ್ರೋಟೀನ್ ಏನು? ಯಾವ fat ತಿನ್ನಬೇಕು? ತಿನ್ನಬಾರದು?, ಹೀಗೆ ಹಲವಾರು ರೂಪಗಳಿಗೆ ಹೋದ. ಅವನು ವಾಸ್ತವಿಕವಾಗಿ ಆರೋಗ್ಯಕರವಾಗಿ ಗಟ್ಟಿ ಇರುವ ಜನರ ಜೊತೆ ಸಂಪರ್ಕದಲ್ಲಿ ಇರುತ್ತಿದ.
ಇವೆಲ್ಲ ಮಾಡಿದ ನಂತರ ಅವನಲ್ಲಿ ಖುದ್ದಾಗಿ ಶಿಸ್ತು ಬರಲು ಪ್ರಾರಂಭವಾಯಿತು. ಅವನು ನಿಧಾನವಾಗಿ ಜಿಮ್ಗೆ ಹೋಗಲು ಪ್ರಾರಂಭಿಸಿದ, ಒಳ್ಳೆಯ ಆಹಾರ ಪದ್ಧತಿಯನ್ನು ಫಾಲೋ ಮಾಡಲು ಪ್ರಾರಂಭಿಸಿದ ಮತ್ತು ಹೀಗೆ ಅವನ ತೂಕ ಇಳಿಯುತ್ತಾ ಬಂದಿತು. ಅವನು ಈಗ ನಿಯಮಿತವಾಗಿ ಜಿಮ್ಗೆ ಹೋಗಲು ಪ್ರಾರಂಭಿಸಿದ. ಇವೆಲ್ಲ ಅವನು ಅಧಿಕ ಸಂಶೋಧನೆ ಮಾಡಿದ ನಂತರ ಸಾಧ್ಯವಾಯಿತು. ಇದನ್ನೇ ನೀವು ಕೂಡ ಮಾಡಬೇಕು.
ಇದನ್ನು ಓದಿ: ಅನ್‌ಫಕ್ ಯುವರ್ಸೆಲ್ಫ್ - ನಿಮ್ಮ ಬದುಕನ್ನು ಬದಲಾಯಿಸುವ ಪುಸ್ತಕಇನ್ನೂ ಕೊನೆಯ "R" ಎಂದರೆ "repetition" ಆಗಿದೆ. 19ನೇ ಶತಮಾನದಲ್ಲಿ ಕಾಂಗೋ ನದಿಯನ್ನು(congo river) ಅನ್ವೇಷಿಸಿದ ಹೆನ್ರಿ ಸ್ಟಾನ್ಲಿ(henry stanley) ಅವರು, ಅವರ ಪಯಣವನ್ನು 224 ಜನರ ಜೊತೆ ಪ್ರಾರಂಭಿಸಿದ್ದರು ಮತ್ತು ಅದನ್ನು ಮುಗಿಸುವಷ್ಟರಲ್ಲಿ ಕೇವಲ 114 ಜನ ಮಾತ್ರ ಉಳಿದಿದ್ದರು. ಈ ಅನ್ವೇಷಣೆಯನ್ನು ಮುಗಿಸಲು ಅವರಿಗೆ 3 ವರ್ಷವಾಯಿತು ಮತ್ತು ಅವರು ಕಾಂಗೋ ನದಿಯ ನಕ್ಷೆಯನ್ನು ಮಾಡಿದರು. ಇದರಿಂದಲೇ ಅವರನ್ನು ಆ ಸಮಯದಲ್ಲಿ "ಸ್ವಯಂ ಶಿಸ್ತು" ವ್ಯಕ್ತಿ ಎಂದು ಪರಿಗಣಿಸಲಾಗಿತು. ಏಕೆಂದರೆ ಅವರು ಇಷ್ಟು ಕಷ್ಟವಿರುವ ಕಾರ್ಯವನ್ನು ಬಿಟ್ಟುಕೊಡದೆ ಮುಗಿಸಿದರು.
ಅನೇಕರು ಇದು ಹೇಗೆ ಸಾಧ್ಯವಾಯಿತು? ಎಂದು ಯೋಚಿಸಬಹುದು. ಇದು ಏಕೆಂದರೆ, ಸ್ಟಾನ್ಲಿ ಅವರಿಗೆ ಈ ಪಯಣದಲ್ಲಿ ಕಾಡಿನಲ್ಲಿ ಇರಬೇಕಾದ ಪರಿಸ್ಥಿತಿ ಇತ್ತು, ಕೆಟ್ಟ ಸ್ಥಳಗಳಲ್ಲಿ ಇರಬೇಕಿತ್ತು. ಅಂತಹ ಜಾಗದಲ್ಲಿ ಪ್ರತಿದಿನ ಎದ್ದ ನಂತರ ಅವರು ಕ್ಷೌರ(shave) ಮಾಡಿಕೊಳ್ಳುತ್ತಿದ್ದರು. ಕಾಡಿನ ಮಧ್ಯದಲ್ಲಿ ಅವರು ಕ್ಷೌರ ಮಾಡಿಕೊಳ್ಳುತ್ತಿದ್ದರು. ಅವರಿಗೆ ತಿನ್ನಲು ಏನೂ ಇಲ್ಲದಿದ್ದರೂ, ಎಷ್ಟೇ ಸಮಸ್ಯೆ ಇದ್ದರೂ, ಅವರು ದಿನ ಬೆಳಗ್ಗೆ ಎದ್ದ ತಕ್ಷಣ ಕ್ಷೌರ ಮಾಡಿಕೊಳ್ಳುವ ದಿನಚರಿಯನ್ನು ಮಾಡಿಕೊಂಡಿದ್ದರು. ಇದುವೇ ಅವರ ಯಶಸ್ಸಿಗೆ ಮುಖ್ಯ ಕಾರಣವಾಗಿದೆ.
ನೀವು ಕೇವಲ ಕ್ಷೌರ ಮಾಡಿಕೊಳ್ಳುವುದರಿಂದ ಯಶಸ್ವಿಯಾಗಲು ಹೇಗೆ ಸಾಧ್ಯ? ಎಂದು ಯೋಚಿಸಬಹುದು. ಅದಕ್ಕೆ ಲೇಖಕರು, ಸ್ಟಾನ್ಲಿ, ಅವರ ಕೆಲಸದ ಜೊತೆ ಈ ಸ್ವಚ್ಛವಾದ ಕ್ಷೌರವನ್ನು(clean shave) ಸೇರಿಸಿಕೊಂಡಿದ್ದರು. ಅದು ಅವರಿಗೆ ಆತ್ಮವಿಶ್ವಾಸ ನೀಡುತ್ತಿತ್ತು. ಅದು ವಿಷಯ ಎಷ್ಟೇ ಹೊಡೆದು ಹೋಗಿದರು, ಕೆಲವು ಅವರ ನಿಯಂತ್ರಣದಲ್ಲಿ ಇದ್ದೇ ಇರುತ್ತದೆ ಎಂದು ನೆನಪಿಸುತ್ತಿತು. ಪ್ರತಿದಿನ ಕ್ಷೌರ ಮಾಡಿಕೊಳ್ಳುವುದು ಅವರಿಗೆ ಆ ದಿನವನ್ನು ಒಳ್ಳೆಯ ರೀತಿಯಲ್ಲಿ ನಿಭಾಯಿಸಲು ಆತ್ಮವಿಶ್ವಾಸ ನೀಡುತ್ತಿತು.
ಕೆಲವರ ಹವ್ಯಾಸ ಪ್ರಚೋದಕದ ರೀತಿ ಇರುತ್ತದೆ. ಉದಾಹರಣೆಗೆ ಕೆಲವರು ಧೂಮಪಾನ ಮಾಡಿದರೆ, ಅವರಿಗೂ ಧೂಮಪಾನ ಮಾಡಬೇಕೆಂದಿನಿಸುತ್ತದೆ. ಇದೇ ರೀತಿ ಸ್ಟಾನ್ಲಿಗೂ ಇತ್ತು. ಅವರಿಗೆ ಸ್ವಚ್ಛವಾದ ಕ್ಷೌರವನ್ನು ಮಾಡಿಕೊಂಡಾಗ, "ನಾನು ಎಲ್ಲವನ್ನು ಸರಿ ಮಾಡಬಹುದು" ಎಂಬ ಪ್ರೇರಣೆ ಇರುತ್ತಿತು. ಇದೇ ರೀತಿ ನೀವು ಒಂದು ದಿನಚರಿಯನ್ನು ಮಾಡಿ, ಪ್ರತಿದಿನ ಅದನ್ನು ಫಾಲೋ ಮಾಡುವುದರಿಂದ ಅದು ನಿಮ್ಮಲ್ಲಿ ಹವ್ಯಾಸ ಆಗುತ್ತದೆ. ಒಮ್ಮೆ ಒಂದು ವಿಷಯ ಹವ್ಯಾಸ ಆದ ನಂತರ ನಿಮ್ಮ ಸ್ವಯಂ ಶಿಸ್ತು ಆದಂತೆಯೇ. ಹೀಗಾಗಿ ಪುನರಾವರ್ತನೆಯ ಮೇಲೆ ಗಮನಹರಿಸಿ. ನಿಮಗೆ ಜಿಮ್ಗೆ ಹೋಗುವುದು ಹವ್ಯಾಸವಾದರೆ, ನೀವು ಪ್ರತಿದಿನ ಸ್ವಯಂ ಶಿಸ್ತಿನಿಂದ ಜಿಮ್ಗೆ ಹೋಗುತ್ತೀರಾ. ಜಿಮ್ಗೆ ಹೋಗಲಿಲ್ಲವೆಂದರೆ ನಿಮಗೆ ಬೇಸರವಾಗುತ್ತದೆ. ಹೀಗಾಗಿ ಪುನರಾವರ್ತನೆಯ ಶಕ್ತಿಯನ್ನು ಅರ್ಥ ಮಾಡಿಕೊಳ್ಳಿ.
ಸ್ವಯಂ ಶಿಸ್ತನ್ನು ಸುಧಾರಿಸಲು ನೀವು ಫಾಲೋ ಮಾಡಬೇಕಾದ "3R method" ಇದಾಗಿದೆ. ಮೊದಲ "R" reason, ಎರಡನೇ "R" research ಮತ್ತು ಕೊನೆಯ "R" repetation ಆಗಿದೆ. ಮೊದಲಿಗೆ ನಿಮ್ಮ ಗುರಿಯನ್ನು ಏಕೆ ಸಾಧಿಸಬೇಕು ಎಂಬುದರ ಗಟ್ಟಿಯಾದ ಕಾರಣವನ್ನು ಹುಡುಕಿ, ನಂತರ ಅದರ ಮೇಲೆ ಎಷ್ಟು ಸಾಧ್ಯವೋ ಅಷ್ಟು ಸಂಶೋಧನೆ ಮಾಡಿ. ಆ ರೀತಿಯ ಜೀವನ ಶೈಲಿಯನ್ನು ಜೀವಿಸುತ್ತಿರುವ ಜನರ ಜೊತೆ ಇರಿ. ಇದರ ನಂತರ ಕಲಿತದ್ದನ್ನು ಪುನರಾವರ್ತನೆಯಾಗಿ ಪ್ರತಿದಿನ ಮಾಡುತ್ತೀರಿ, ಅದನ್ನು ಅಭ್ಯಾಸವಾಗಿ ಮಾಡಿಕೊಳ್ಳಿ. ಈ ಮೂರನ್ನು ನೀವು ಮಾಡಿದರೆ ನಿಮ್ಮ ಗುರಿಯನ್ನು ನಿಜವಾಗಿಯೂ ಸಾಧಿಸಬಹುದು.
ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.
Explore all our Posts by categories.
See all comments...