Website designed by @coders.knowledge.

Website designed by @coders.knowledge.

Penny Stocks for Big Profits | ದೊಡ್ಡ ಲಾಭಕ್ಕಾಗಿ ಪೆನ್ನಿ ಸ್ಟಾಕ್‌ಗಳು

Watch Video

ಇಂದು ಪೆನ್ನಿ ಸ್ಟಾಕ್ನಲ್ಲಿ(penny stocks) ಅಧಿಕ ಹೂಡಿಕೆಯಾಗುತ್ತಿದೆ. ಹೀಗಾಗಿ ನಿಮಗೂ ಪೆನ್ನಿ ಸ್ಟಾಕ್ ಖರೀದಿಸಬೇಕೆ ಅಥವಾ ಇಲ್ಲವೇ ಎಂಬ ಅನುಮಾನವಿರುತ್ತದೆ. ಅದರಲ್ಲಿನ ಅಪಾಯ(risk) ಯಾವುವು? ಎಲ್ಲದರ ಬಗ್ಗೆ ಈ ಲೇಖನದಲ್ಲಿ ನಾವು ತಿಳಿಸಲಿದ್ದೇವೆ. ಆದರೆ ಮೊದಲಿಗೆ ಪೆನ್ನಿ ಸ್ಟಾಕ್ ಎಂದರೆ ಏನೆಂದು ತಿಳಿಯೋಣ. ಪೆನ್ನಿ ಸ್ಟಾಕ್ ಎಂದರೆ ಚಿಕ್ಕ ಮೈಕ್ರೋ ಕ್ಯಾಪ್(small micro cap) ಕಂಪನಿಗಳಾಗಿದ್ದು, ಅವುಗಳ ಷೇರಿನ ಬೆಲೆ 10 ರಿಂದ 20 ರೂ ಒಳಗೆ ಇರುತ್ತದೆ. ಈಗ ಲೇಖನಕ್ಕೆ ಬರೋಣ.

Why do people buy penny stocks?

ಒಂದು ಕಾರಣ ನಮ್ಮ ಹತ್ತಿರ ಬಜೆಟ್ ಕಡಿಮೆ ಇದ್ದು ಅಧಿಕ ಘಟಕಗಳನ್ನು(units) ತೆಗೆದುಕೊಳ್ಳಲು ನಾವು ಪೆನ್ನಿ ಸ್ಟಾಕ್ಗಳನ್ನು ಖರೀದಿಸುತ್ತೇವೆ. ಇನ್ನೊಂದು ಕಾರಣ ಷೇರು ಕಡಿಮೆ ಬೆಲೆಗೆ ಸಿಗುವುದರಿಂದ ಬೇಗನೆ ಬೆಳೆಯುತ್ತದೆ ಎಂದು ನಾವು ನಂಬುತ್ತೇವೆ. ಇನ್ನೊಂದು ಕಾರಣ ಈ ಚಿಕ್ಕ ಕ್ಯಾಪ್ ಕಂಪನಿಗಳ ವ್ಯಾಪಾರ ಬೇಗನೇ ಬೆಳೆಯಬಹುದು ಎಂದು ನಂಬಿ ಪೆನ್ನಿ ಸ್ಟಾಕ್ ಖರೀದಿಸುತ್ತೇವೆ. ಮತ್ತೊಂದು ಕಾರಣ ನನ್ನ ಹತ್ತಿರ ತುಂಬಾ ಕಡಿಮೆ ಬಂಡವಾಳವಿದ್ದು(capital), ದೊಡ್ಡ ಕಂಪನಿಗಳನ್ನು ಖರೀದಿಸಿದರೆ ಕೇವಲ 1 ರಿಂದ 2 ಷೇರು ಸಿಗುತ್ತದೆ. ಹೀಗಾಗಿ ಪೆನ್ನಿ ಸ್ಟಾಕ್ ಖರೀದಿಸಿ ವಿವಿಧ ಕಂಪನಿಗಳಲ್ಲಿ ವೈವಿಧ್ಯಮಯ(diverse) ಮಾಡುವುದು ಸರಿ ಅನಿಸುತ್ತದೆ. ಇಲ್ಲ ನಾವು ನಂಬುವ ಒಬ್ಬ ವ್ಯಕ್ತಿ ಆ ಕಂಪನಿಯನ್ನು ಖರೀದಿಸಲು ಹೇಳಿದರೆ ಅದು ಒಂದು ಕಾರಣವಾಗಿದೆ. ಈ ಎಲ್ಲಾ ಕಾರಣಗಳನ್ನು ತಪ್ಪು ಎನ್ನಲು ಸಾಧ್ಯವಿಲ್ಲ. ಈಗ ಈ ಎಲ್ಲಾ ಕಾರಣಗಳ ಬಗ್ಗೆ ವಿವರವಾಗಿ ತಿಳಿಯೋಣ.

ಇದನ್ನು ಓದಿ: ಅತ್ಯುತ್ತಮ ಮ್ಯೂಚುವಲ್ ಫಂಡ್ ಅನ್ನು ಆಯ್ಕೆ ಮಾಡುವುದು ಹೇಗೆ?

1. To have more units

is penny stock will grow fast in kananda
more units

ಪೆನ್ನಿ ಸ್ಟಾಕ್ ತೆಗೆದುಕೊಂಡರೆ ಅಧಿಕ ಘಟಕಗಳು ಸಿಗುತ್ತದೆ. ಇದರಿಂದ ನಾವು ಆರಾಮದಾಯಕವಾಗಿರುವೆವು(comfortable). ಇದನ್ನು ನಾವು ಎರಡು ಉದಾಹರಣೆಯ ಮೂಲಕ ತಿಳಿದುಕೊಳ್ಳೋಣ. ನಿಮ್ಮ ಹತ್ತಿರ 500 ರೂ ನೋಟ್ ಇದ್ದು ಅದನ್ನು ನೀವು 10 ರೂನ 50 ನೋಟ್ ಮಾಡಿದರೆ ನೀವು ಅಧಿಕ ಶ್ರೀಮಂತರು ಎಂದು ಭಾವಿಸುವಿರಾ? ಹಣದ ನೋಟ್ನಲ್ಲಿ ಇದು ಸಾಧ್ಯವಿಲ್ಲ. ಏಕೆಂದರೆ ಇಲ್ಲಿ ಮೌಲ್ಯ(value) ಪ್ರಾಮುಖ್ಯವಾಗುತ್ತದೆ. ಸ್ಟಾಕ್ನಲ್ಲೂ ನಮಗೆ ಇದರ ಬಗ್ಗೆ ತಿಳಿದಿರುತ್ತದೆ. ಆದರೂ ನಾವು ಗುಣಮಟ್ಟಕ್ಕಿಂತ(quality) ಪ್ರಮಾಣಕ್ಕೆ(quantity) ಪ್ರಾಮುಖ್ಯತೆ ನೀಡುತ್ತೇವೆ. ಏಕೆಂದರೆ ಅಧಿಕ ಪ್ರಮಾಣವಿದ್ದರೆ ನಾವು ಬೇಗನೆ ಹಣವನ್ನು ಬೆಳೆಸಬಹುದು ಎಂದು ನಂಬುತ್ತೇವೆ.

ನೀವು 8000 ರೂಗೆ ಬಂಗಾರ(gold) ಖರೀದಿಸಲು ಹೋದರೆ 1 ಗ್ರಾಂನ ನಾಣ್ಯ ಕಷ್ಟದಲ್ಲಿ ಸಿಗುತ್ತದೆ. ಅದೇ ನೀವು ಆ 8000 ರೂನಲ್ಲಿ ಕಬ್ಬಿಣ ತೆಗೆದುಕೊಳ್ಳಲು ಹೋದರೆ ನಿಮಗೆ ಬಕೆಟ್ನಷ್ಟು ಸಿಗುತ್ತದೆ. ಹಾಗಂತ ನಾವು ಆ ಚಿನ್ನದ ನಾಣ್ಯವನ್ನು ಬಿಟ್ಟು ಕಬ್ಬಿಣ ತೆಗೆದುಕೊಂಡು ಬರುವುದಿಲ್ಲ. ಕಬ್ಬಿಣ ಕಡಿಮೆ ಬೆಲೆಗೆ ಸಿಗುವುದರಿಂದ ಅದು ಬೇಗನೆ ಬೆಳೆಯುತ್ತದೆ ಎಂದು ನಾವು ಭಾವಿಸುವುದಿಲ್ಲ. ಆದರೆ ಸ್ಟಾಕ್ನಲ್ಲಿ ನಾವು ಆ ರೀತಿ ಮಾಡುವುದಿಲ್ಲ. ಏಕೆಂದರೆ ಸ್ಟಾಕ್ನಲ್ಲಿ ಪ್ರಮಾಣ ಆರಾಮ ನೀಡುತ್ತದೆ. ಆದರೆ ಸ್ಟಾಕ್ನಲ್ಲೂ ಪ್ರಮಾಣ ಮುಖ್ಯವಾಗಿದೆ.

ಇದನ್ನು ಓದಿ: ETF ಹೂಡಿಕೆ ತಂತ್ರ

2. Cheap shares likely to rise

is cheap shares always rise in kananda
cheap shares

ಅನೇಕರು ಚಿಕ್ಕ ಕಂಪನಿಗಳು ಬೇಗನೆ ಬೆಳೆಯುತ್ತವೆ ಮತ್ತು ದೊಡ್ಡ ಕಂಪನಿಗಳು ನಿಧಾನವಾಗಿ ಬೆಳೆಯುತ್ತವೆ ಎಂದು ನಂಬಿರುತ್ತಾರೆ. ಇದಕ್ಕಾಗಿ ಅನೇಕರು ಟೈಟಾನ್ ಕಂಪನಿಯ(titan company) ಉದಾಹರಣೆ ನೀಡುತ್ತಾರೆ. ಆದರೆ ನಾವು ಈ ರೀತಿ ಹೋಲಿಕೆ(comparision) ಮಾಡುವಾಗ ಕಂಪನಿಗಳ ಪಟ್ಟಿಯನ್ನು(list) ನೋಡಬೇಕು. ಎಷ್ಟು ಕಂಪನಿಗಳು 30 ವರ್ಷದಲ್ಲಿ 2 ರೂಯಿಂದ 1000 ರೂಗೆ ಬಂದಿದೆ ಎಂಬುದನ್ನು ನೋಡಬೇಕು. ಟೈಟಾನ್ ಬಗ್ಗೆ ತೆಗೆದುಕೊಂಡರೆ, ಅದಕ್ಕೆ ಟಾಟಾ ಗ್ರೂಪ್ನ(tata group) ಬೆಂಬಲವಿತ್ತು, ರಾಜ್ಯ ಸರ್ಕಾರದ ಬೆಂಬಲವಿತ್ತು, ಅವರು ನಂಬಿಕೆ ಇರದ ಮಾರುಕಟ್ಟೆಯಲ್ಲಿ ತಂದ ತಂತ್ರ(strategy) ತುಂಬಾನೇ ಪ್ರಮುಖವಾಗಿತ್ತು. ಹೀಗಾಗಿ ಟೈಟಾನ್ ಬೆಳೆಯಿತು. ಈ ರೀತಿಯಲ್ಲಿ ಸಾವಿರದಲ್ಲಿ ಒಂದು ಕಂಪನಿ ಇಷ್ಟು ಬೆಳೆಯುತ್ತದೆ.

tvs stock 10 years chart in kananda
tvs stock chart

ಈಗ ಒಬ್ಬ ಸಿಗರೇಟ್(cigaratte) ಸೇದಿದರು ನೂರು ವರ್ಷ ಬದುಕಿದ ಎಂದು ಕೇಳುತ್ತೇವೆ. ಅದನ್ನು ಕೇಳಿ ನಾವು ಸಿಗರೇಟ್ ಸೇದುವುದಿಲ್ಲ. ಇನ್ನು ಮುಂದಿನ ಪ್ರೆಶ್ನೆ ಏನೆಂದರೆ ದೊಡ್ಡ ಕಂಪನಿಗಳು ನಿಧಾನವಾಗಿ ಬೆಳೆಯುತ್ತವೆ? ನೀವು 12 ವರ್ಷದ ಹಿಂದಿನ ಟಿವಿಎಸ್(tvs) ಸ್ಟಾಕ್ ಪ್ರೈಸ್ ನೋಡಿ ಮತ್ತು ಅದನ್ನು ಇಂದಿನ ದಿನಕ್ಕೆ ಹೋಲಿಕೆ ಮಾಡಿ. ಅದು ಮಲ್ಟಿಬ್ಯಾಗರ್(multibagger) ರಿಟರ್ನ್ಸ್ ನೀಡಿದೆ. 12 ವರ್ಷದ ಹಿಂದೆಯೂ ಟಿವಿಎಸ್ ದೊಡ್ಡ ಕಂಪನಿಯಾಗಿತ್ತು. ಇದೇ ರೀತಿಯ ಮಾದರಿಯನ್ನು(pattern) ನೀವು ಎಂಆರ್ಎಫ್ನಲ್ಲೂ(mrf) ನೋಡಬಹುದು. ಹೀಗಾಗಿ ದೊಡ್ಡ ಕಂಪನಿಗಳು ಬೆಳೆಯುವುದಿಲ್ಲವೆಂದು ಹೇಳಲು ಸಾಧ್ಯವಿಲ್ಲ. ಹಾಗಂತ ನಾವು ಎರಡು ಕಂಪನಿಯ ಉದಾಹರಣೆ ನೀಡಿ ಇದನ್ನು ಸತ್ಯವೆನ್ನುವುದಿಲ್ಲ. ಇದರ ಬಗ್ಗೆ ವಿವರಣೆ ನೀಡುವೆವು.

ನಿಮಗೆ ಜಿಲೆಟ್(gillete), ಕೋಲ್ಗೇಟ್(colgate), ಎಚ್ಯುಎಲ್(hul), ಬಾಟಾ(bata) ರೀತಿಯ ಕಂಪನಿಗಳ ಬಗ್ಗೆ ತಿಳಿದಿದೆ. ಬಾಟಾ ಪಾದರಕ್ಷೆಗಳ(shoe) ತಯಾರಿಕೆ ಮಾಡುತ್ತದೆ. ಅದು ಎಷ್ಟು ಅಂತ ಪಾದರಕ್ಷೆಗಳನ್ನು ತಯಾರಿಕೆ ಮಾಡುತ್ತದೆ. ಕೋಲ್ಗೇಟ್ ಎಷ್ಟು ಅಂತ ಟೂತ್ಪೇಸ್ಟ್ ತಯಾರಿಕೆ ಮಾಡುತ್ತದೆ ಎಂದು ನಾವು ಯೋಚಿಸುತ್ತೇವೆ. ಹಾಗಂತ ಈ ಕಂಪನಿಗಳು ಶಿಫಾರಸು(recommendation) ಆಗಿಲ್ಲ. ಈ ಕಂಪನಿಗಳು ಅಧಿಕ ಲಾಭವನ್ನು ಗಳಿಸುತ್ತವೆ ಮತ್ತು ಇವುಗಳು ಒಂದು ಫೀಲ್ಡ್ನಲ್ಲಿ ಪೂರ್ತಿ ನೆನಸಿದ(saturate) ಕಾರಣ, ಅದರಲ್ಲಿ ಇವರಿಗೆ ಹೊಸ ಕಾರ್ಖಾನೆ ಮಾಡುವ ಅವಶ್ಯಕತೆ ಇಲ್ಲ, ಹೊಸದಾಗಿ ಮಜೂರಿ(hire) ಮಾಡುವ ಅವಶ್ಯಕತೆಯೂ ಇಲ್ಲ.

hul acquisition in kannada
hul acquisition

ಹೀಗಾಗಿ ಟೂತ್ಪೇಸ್ಟ್ ಮಾರಾಟದಿಂದ ಬರುವ ಹಣವು ಇವರಿಗೆ ಫ್ರೀಪ್ಲೋಟ್(free float) ರೀತಿ ಕೆಲಸ ಮಾಡುತ್ತದೆ. ಇವುಗಳಿಂದ ಈ ಕಂಪನಿಗಳು ಹೊಸ ಕೆಟಗರಿಯನ್ನು ಪ್ರಯತ್ನಿಸುತ್ತಿರುತ್ತವೆ. ಬೇರೆ ಕೆಟಗರಿಯ ಕಂಪನಿಗಳನ್ನು ಸ್ವಾಧೀನಪಡಿಸಿಕೊಳ್ಳುತ್ತವೆ(acquire). ನೀವು ಎಚ್ಯುಎಲ್(hul) ಕಂಪನಿಯನ್ನು ನೋಡಿದರೆ ಅದು ಕೂಡ ಪ್ರತಿ ವರ್ಷ ಅಧಿಕ ಸ್ವಾಧೀನ ಮಾಡುತ್ತದೆ. ನಾವು ಇಲ್ಲಿ ಅದು ಎಷ್ಟು ಮಾರಾಟ ಮಾಡಲು ಸಾಧ್ಯ ಎಂದು ಯೋಚಿಸುತ್ತೇವೆ. ಆದರೆ ಅದು ತನ್ನ ಪ್ರತಿಸ್ಪರ್ಧಿಯನ್ನು(competitor) ಖರೀದಿಸುತ್ತಿದೆ.

ಇದನ್ನು ಓದಿ: ಷೇರುಗಳನ್ನು ಖರೀದಿಸದೆ ಶ್ರೀಮಂತರಾಗಿ(Index Fund)

3. More growth in less capital

are penny stocks more profitable in kananda
more growth

ಅನೇಕರು ಕಡಿಮೆ ಬಂಡವಾಳದಲ್ಲಿ(capital) ಹೆಚ್ಚಿನ ಬೆಳವಣಿಗೆಯ(high growth) ಕಂಪನಿಗಳಲ್ಲಿ ಹೂಡಿಕೆ ಮಾಡಲು ಪೆನ್ನಿ ಸ್ಟಾಕ್ಗಳನ್ನು ಖರೀದಿಸುತ್ತಾರೆ. ಹೀಗಾಗಿ ಅಧಿಕ ಘಟಕಗಳನ್ನು ಖರೀದಿಸುತ್ತಾರೆ. ಆದರೆ ಷೇರು ಮಾರುಕಟ್ಟೆಯಲ್ಲಿ ಘಟಕಗಳಿಗೆ ನಿಮಗೆ ರಿಟರ್ನ್ಸ್ ಸಿಗುವುದಿಲ್ಲ. ಬದಲಿಗೆ ಎಷ್ಟು ಮೊತ್ತ(amount) ಹೂಡಿಕೆ ಮಾಡಿರುತ್ತೀರಾ ಎಂಬುದರ ಮೇಲೆ ನಿಂತಿದೆ.

ಉದಾಹರಣೆಗೆ ನೀವು 5 ರೂ ಷೇರು ಬೆಲೆ ಇರುವ ಕಂಪನಿಯ 20 ಷೇರು ತೆಗೆದುಕೊಂಡಿದ್ದೀರಿ ಎಂದುಕೊಳ್ಳಿ. ಅಂದರೆ ಒಟ್ಟು ಮೊತ್ತ 100 ರೂ ಆಗುತ್ತದೆ. ಇಲ್ಲ ಅದೇ 100 ರೂ ಅಲ್ಲಿ ಇನ್ನೊಂದು ಕಂಪನಿಯ 1 ಷೇರು ಖರೀದಿಸಿ. ಈಗ ಎರಡು ಷೇರು 20% ಬೆಳೆದರೆ ನಿಮ್ಮ 5 ರೂ, 6 ರೂ ಆಗುತ್ತದೆ, ಒಟ್ಟು 100 ರೂ, 120 ರೂ ಆಗುತ್ತದೆ. ಅದೇ ರೀತಿ 100 ರೂ ಷೇರು 20% ಬೆಳೆದು 120 ರೂ ಆಗಿರುತ್ತದೆ. ಹೀಗಾಗಿ ಎಷ್ಟು ಘಟಕಗಳು ಇದೆ ಎಂಬುದು ಮುಖ್ಯವಲ್ಲ. ಎರಡರಲ್ಲೂ 20% ಬೆಳೆದಿದೆ.

ಇಲ್ಲಿ ಅನೇಕರು 5 ರೂನ ಷೇರು, 100 ರೂ ಷೇರಿಗಿಂತ ಬೆಳೆಯುವ ಅವಕಾಶ ಅಧಿಕವಿದೆ ಎನ್ನಬಹುದು. ಆದರೆ ನಾವು ಈ ವಿಷಯದಲ್ಲಿ ಟಿವಿಎಸ್ ಮತ್ತು ಎಂಆರ್ಎಫ್ನ ಉದಾಹರಣೆ ನೀಡಿದ್ದೆವು. ಒಂದು ವೇಳೆ ಆ 5 ರೂ ಷೇರು ಚೆನ್ನಾಗಿದ್ದರೆ ಅದು ಏಕೆ ಇಲ್ಲಿಯವರೆಗೆ 5 ರೂನಲ್ಲೇ ನಿಂತಿದೆ. ಹೀಗಾಗಿ ಪ್ರಮಾಣದ ಮೇಲೆ ಷೇರು ನೋಡಬೇಡಿ.

ಇದನ್ನು ಓದಿ: ಅನುಭವಿ ಹೂಡಿಕೆದಾರನ ಹೂಡಿಕೆಯ ಪಾಠಗಳು

4. Insider tip

what is an insider tip in kananda
insider tip

ನಾವು ನಂಬುವ ಇಲ್ಲ ಯಾವುದಾದರೂ ಒಳಗಿನವರು ಸಲಹೆ(tips) ನೀಡಿದರೆ ನಾವು ಅದನ್ನು ನಂಬಿ ಅನ್ವಯಿಸುತ್ತೇವೆ. ಆದರೆ ಇದರಲ್ಲಿ ನಾವು 2 ವಿಷಯವನ್ನು ತಿಳಿಯಬಹುದು. ಮೊದಲನೆಯದಾಗಿ ನಿಮಗೆ ಸಲಹೆ ನೀಡುವವನಿಗೆ ಮೋಸ ಮಾಡಲಾಗುತ್ತಿದೆ. ಅವನ ನಂಬಿಕೆಯ ಮೇಲೆ ಆತನಿಗೆ ಇನ್ನೊಬ್ಬ ಆ ಸಲಹೆಯನ್ನು ನೀಡಿರುತ್ತಾನೆ. ಎರಡನೆಯದಾಗಿ ಆತ ನಿಮಗಾಗಿ ಒಳ್ಳೆಯದನ್ನು ಬಯಸಿರುವುದಿಲ್ಲ. ಹೀಗಾಗಿ ನೀವು ಈಗ ತಾನೇ ಷೇರು ಮಾರುಕಟ್ಟೆಗೆ ಬಂದು ಈ ರೀತಿಯ 5 ಇಲ್ಲ 10 ರೂ ಷೇರಿನ ಸಲಹೆ ನಿಮಗೆ ತಿಳಿದರೆ, ಅದು ನಿಮ್ಮ ತನಕ ಹೇಗೆ ಬಂತು ಎಂಬುದನ್ನು ಯೋಚಿಸಿ.

ಲಕ್ಷಗಟ್ಟಲೆ ಜನ ದಿನಪೂರ್ತಿ ಇದರಲ್ಲೇ ಮುಳುಗಿರುತ್ತಾರೆ. ಕೃತಕ ಬುದ್ಧಿಮತ್ತೆ(artificial intelligence) ಬಳಸಿ ಕಡಿಮೆ ಮೌಲ್ಯದ ಷೇರುಗಳನ್ನು(undervalued stock) ಹುಡುಕುತ್ತಿರುತ್ತಾರೆ. ಆ ರೀತಿಯ ಲಕ್ಷಗಟ್ಟಲೆ ಜನಗಳಿಗೆ ಸಿಗದ ಷೇರು, ನಿಮಗೆ ಸಿಕ್ಕಿತ್ತೇ, ಸಾಧ್ಯವಿಲ್ಲ. ನಿಮಗೆ ದೊರೆತಿರುವ ಸಲಹೆಯನ್ನು ಈ ಸ್ಮಾರ್ಟ್ ಹೂಡಿಕೆದಾರರು ತಿರಸ್ಕರಿಸಿರುತ್ತಾರೆ(reject). ಇಲ್ಲ ಅವರು ಹೊರ ಬರಲು ನಿಮ್ಮ ತನಕ ಈ ಮಾಹಿತಿಯನ್ನು ತಲುಪಿಸಿರಬಹುದು. ನಿಮ್ಮನ್ನು ಸಿಲುಕಿಸಲಾಗುತ್ತಿದೆ, ಹೀಗಾಗಿ ಈ ರೀತಿಯ ಸಲಹೆಗಳಿಂದ ಆಕರ್ಷಿತರಾಗಬೇಡಿ.

ಗುಣಮಟ್ಟ ಸ್ಟಾಕ್ಸ್ಗಳಲ್ಲಿ ಹೂಡಿಕೆ ಮಾಡುವುದು ಮುಖ್ಯವಾಗಿದೆ. ಅದು ನಿಮ್ಮ ಬಂಡವಾಳವನ್ನು ಸುರಕ್ಷಿತವಾಗಿ ಇಡುತ್ತದೆ. ಏಕೆಂದರೆ ಅವರ ಹತ್ತಿರ ಉಚಿತ ನಗದು ಹರಿವು(free cashflow) ಇರುತ್ತದೆ. ಅದರಿಂದ ಅದನ್ನು ಹೂಡಿಕೆ ಮಾಡಿ ಭಾರಿ ಭಾರಿ ಬೆಳವಣಿಗೆಯನ್ನು ಸಾಧಿಸಬಹುದು ಟೈಟಾನ್, ಹೆಚ್ಯುಎಲ್, ಏಷಿಯನ್ ಪೇಂಟ್ಸ್(asian paints), ಐಶರ್ ಮೋಟರ್ಸ್(eicher motors) ಈ ರೀತಿಯ ಸ್ಟಾಕ್ಗಳ ಉದಾಹರಣೆಗಳಾಗಿವೆ.

ನಮಗೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ. ಈ ರೀತಿಯ ಲೇಖನವನ್ನು ಅನೇಕರು ಓದುವುದಿಲ್ಲ. ಇಂದು ಅನೇಕರು ಈ ಪರಿಕಲ್ಪನೆಯ ಮೇಲೆ ವೀಡಿಯೋಗಳನ್ನು ಮಾಡಿ ಮೋಸ ಮಾಡುತ್ತಿರಬಹುದು. ಆದರೆ ನಾವು ಈ ಲೇಖನದಲ್ಲಿ ನಿಮಗೆ ಯಾವ ರೀತಿಯ ಮೋಸದ ವಿಷಯ ತಿಳಿಸಿಲ್ಲ, ಕೇವಲ ಮಾಹಿತಿಯನ್ನು ನೀಡಿದ್ದೇವೆ. ನೀವು ನಮ್ಮ ಮೇಲೆ ಇಡುವ ನಂಬಿಕೆಯೇ ಮುಖ್ಯವಾಗಿದೆ. ದಯವಿಟ್ಟು ಈ ಲೇಖನವನ್ನು ಇತರರಿಗೂ ಶೇರ್ ಮಾಡಿ ಸಹಕರಿಸಿ.

ಕೊನೆಯದಾಗಿ ಪೆನ್ನಿ ಸ್ಟಾಕ್ನಲ್ಲಿ ಹಣವನ್ನು ಹಾಕುವುದರಿಂದ 1 - 2 ಬಾರಿ ಲಾಭ ಆಗಬಹುದು, 3 ನೇ ಬಾರಿ ನಷ್ಟವಾಗುತ್ತದೆ. ಅದು ಎಷ್ಟೆಂದರೆ ನೀವು ಹಾಕಿರುವ ಪೂರ್ತಿ ಬಂಡವಾಳ ಹೋಗಬಹುದು. ಹೀಗಾಗಿ ಪ್ರಮಾಣ ಬಿಟ್ಟು ಗುಣಮಟ್ಟ ಸ್ಟಾಕ್ಗಳನ್ನು ನೋಡಿ ಹೂಡಿಕೆ ಮಾಡಿ.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

No Comments