ನಮ್ಮ ಪೂರ್ವಜರು ಶತಮಾನಗಳ ಹಿಂದೆ ಔಷಧೀಯ ಸಸ್ಯಗಳ ಬಳಕೆಯನ್ನು ಪ್ರಾರಂಭಿಸಿದ್ದಾರೆ. ಈಗಲೂ ನಮ್ಮಲ್ಲಿ ಅನೇಕರು ಇಂಥಹ ಸಾಂಪ್ರದಾಯಿಕ ಪರಿಹಾರಗಳನ್ನು ಅವಲಂಬಿಸಿದ್ದೇವೆ. ಜಗತ್ತಿನ ಹತ್ತು ಶಕ್ತಿಶಾಲಿ ಔಷಧೀಯ ಸಸ್ಯಗಳ ಪಟ್ಟಿ ಇಲ್ಲಿದೆ.
ಏಷ್ಯಾ ಖಂಡದ ಅನೇಕ ದೇಶಗಳಲ್ಲಿ ವಿಶೇಷವಾಗಿ ನಮ್ಮ ಭಾರತದಲ್ಲಿ ಶುಂಠಿ ದೈನಂದಿನ ಆಹಾರದ ಒಂದು ಭಾಗವಾಗಿದೆ. ಶುಂಠಿ ಬ್ಯಾಕ್ಟೀರಿಯ ವಿರೋಧಿ, ಆ್ಯಂಟಿವೈರಲ್ ಮತ್ತು ಉತ್ಕರ್ಷಣ ನಿರೋಧಕ ಸೇರಿದಂತೆ ಅನೇಕ ಪರಿಹಾರ ಕ್ರಮಗಳನ್ನು ಹೊಂದಿದೆ.
• ಶುಂಠಿ ರಸವು ಜೀರ್ಣಕಾರಿ ಪ್ರಕ್ರಿಯೆಯನ್ನು ಸಮತೋಲನಗೊಳಿಸುತ್ತದೆ,
• ದೇಹದ ಪೋಷಕಾಂಶಗಳನ್ನು ಹೀರಿಕೊಳ್ಳುವ ಶಕ್ತಿಯನ್ನು ಸುಧಾರಿಸುತ್ತದೆ,
• ಕ್ಯಾನ್ಸರ್, ಮಧುಮೇಹ ಮತ್ತು ಅಸ್ತಮಾದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ,
ಲ್ಯಾವೆಂಡರ್ ಹೊಳೆಯುವ ಚರ್ಮಕ್ಕೆ ಉತ್ತಮ ಪರಿಹಾರಗಳಲ್ಲಿ ಒಂದಾಗಿದೆ. ತೋಟಗಳಲ್ಲಿ ಕಾಣುವ ಲ್ಯಾವೆಂಡರ್ ಅನೇಕ ಔಷಧೀಯ ಗುಣಗಳನ್ನು ಸಹ ಹೊಂದಿದೆ. ಆತಂಕ, ಒತ್ತಡ ಮತ್ತು ನಿದ್ರಾಹೀನತೆಯಂತಹ ಅನೇಕ ವೈದ್ಯಕೀಯ ಪರಿಸ್ಥಿತಿಗಳಲ್ಲಿ ಇದು ಪ್ರಯೋಜನಕಾರಿಯಾಗಿದೆ.
• ಲ್ಯಾವೆಂಡರ್ ಎಣ್ಣೆ ಡ್ಯಾಂಡ್ರಫ್ ಅಂದರೆ ತಲೆಹೊಟ್ಟನ್ನು ದೂರವಿರಿಸುತ್ತದೆ,
ಬೆಳ್ಳುಳ್ಳಿ, ಈರುಳ್ಳಿ ಕುಟುಂಬದ ಸದಸ್ಯ. ಇದು ಹಲವು ದೇಶಗಳಲ್ಲಿ ವಿವಿಧ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಬೆಳ್ಳುಳ್ಳಿ ಕಡಿಮೆ ಕ್ಯಾಲೋರಿ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಬೆಳ್ಳುಳ್ಳಿಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ6, ಮ್ಯಾಂಗನೀಸ್ ಮತ್ತು ಫೈಬರ್ ಇರುತ್ತದೆ.
• ಬೆಳ್ಳುಳ್ಳಿ ಕ್ಯಾನ್ಸರ್ ಸೋಂಕುಗಳ ವಿರುದ್ಧ ಉತ್ತಮ ರಕ್ಷಣೆ ನೀಡುತ್ತದೆ,
• ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ,
• ಜೀರ್ಣಕ್ರಿಯೆ ವ್ಯವಸ್ಥೆಯನ್ನು ಸಮತೋಲನಗೊಳಿಸುತ್ತದೆ,
• ದೇಹದ ಪೋಷಕಾಂಶಗಳನ್ನು ಹೀರಿಕೊಳ್ಳುವ ಶಕ್ತಿಯನ್ನು ಸುಧಾರಿಸುತ್ತದೆ,
• ರಕ್ತದೊತ್ತಡ ಕಡಿಮೆ ಮಾಡುವುದರ ಜೊತೆ, ಹೃದಯ ಸಂಬಂಧಿ ಸಮಸ್ಯೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ಪುದೀನಾ ಒಂದು ಹೈಬ್ರಿಡ್ ಸಸ್ಯವಾಗಿದ್ದು, ಇದರ ಎಣ್ಣೆಯನ್ನು ಆಹಾರದ ಪರಿಮಳಕ್ಕಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದು ಶಾಂತಗೊಳಿಸುವ ಪರಿಣಾಮವನ್ನು ಹೊಂದಿದೆ ಮತ್ತು ಇತರ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
• ಪುದೀನ ಎಣ್ಣೆಯ ಬಳಕೆಯು ಮೆಮೊರಿ ಶಕ್ತಿ ಮತ್ತು ಜಾಗರೂಕತೆಯನ್ನು ಹೆಚ್ಚಿಸುತ್ತದೆ,
• ದೇಹದ ಯಾವುದೇ ನೋವಿಗೆ ತ್ವರಿತ ಪರಿಹಾರ ನೀಡುತ್ತದೆ,
• ಜೀರ್ಣಾಂಗ ವ್ಯವಸ್ಥೆ ಮತ್ತು ದೇಹದ ಪೋಷಕಾಂಶಗಳನ್ನು ಹೀರಿಕೊಳ್ಳುವ ಶಕ್ತಿಯನ್ನು ಸುಧಾರಿಸುತ್ತದೆ,
• ಪುದೀನಾದಲ್ಲಿರುವ ಮೆತನಾಲ್ ಸಾಂದ್ರತೆಯು ಪ್ರೊಸ್ಟೇಟ್ ಕ್ಯಾನ್ಸರನ್ನು ತಡೆಯುತ್ತದೆ.
See all comments...
mahesh • July 24th,2022
Wow woow beautiful