ಮಾಹಿತಿ ತಾಣದಲ್ಲಿ ರಿಜಿಸ್ಟರ್ ಆಗುವುದು ಹೇಗೆ? | How to Register in Mahithi Thana?
Mahithi Thana 1531
Watch Video
ನಾವು ಒಂದೇ ತರಹದ ಕೆಲಸವನ್ನು ಮತ್ತೆ ಮತ್ತೆ ಮಾಡುವ ಸನ್ನಿವೇಶಗಳಲ್ಲಿ ಸಿಕ್ಕಿಕೊಂಡಿರಬಹುದು ಅಥವಾ ಒಂದೇ ತರಹದ ತಪ್ಪನ್ನು ಮತ್ತೆ ಮತ್ತೆ ಮಾಡುತ್ತಿರಬಹುದು. ಹೀಗಾಗಿಯೇ ಬದುಕಿನ ತತ್ವಗಳು(life principles) ತುಂಬಾ ಮುಖ್ಯವಾಗಿದೆ. ಇದು ಹೊಸ ಸವಾಲು ಬಂದಾಗ ಹೊಸದನ್ನು ಮರುಶೋಧಿಸುವ(reinvent) ಅವಶ್ಯಕತೆಯಿಲ್ಲವೆಂದು ನೆನಪಿಸುತ್ತದೆ. ಆದರೆ ನಾವು ಈ ತತ್ವಗಳ ಮೇಲೆ ಸಮಯ ಮೀರುವವರೆಗೂ ಗಮನ ಹರಿಸುವುದಿಲ್ಲ. ಈ ಲೇಖನದಲ್ಲಿ ನಾವು ನೀವು ಬಿಲ್ಡಿಂಗ್ ಬ್ಲಾಕ್ ರೀತಿ ಬಳಸಬಹುದಾದ ತತ್ವಗಳ ಬಗ್ಗೆ ತಿಳಿಸಲಿದ್ದೇವೆ. ಇವು ನಿಮ್ಮ ಬದುಕಿನಲ್ಲಿ ಯಶಸ್ಸನ್ನು ಸಾಧಿಸಲು ಸಹಾಯ ಮಾಡುತ್ತವೆ.
ಇದನ್ನು ಓದಿ: ನಿಮ್ಮನ್ನು ಚುರುಕಾಗಿಸಲು 13 ದಿನನಿತ್ಯದ ಅಭ್ಯಾಸಗಳುನಿಮ್ಮ ವರ್ತನೆ(attitude) ನೀವು ಜಗತ್ತನ್ನು ಹೇಗೆ ನೋಡುತ್ತೀರಾ ಮತ್ತು ನೀವು ಹೇಗೆ ಬದುಕುತ್ತೀರಿ ಎಂಬುದನ್ನು ತಿಳಿಸುತ್ತದೆ. ಇಷ್ಟೇ ಅಲ್ಲದೆ ಇದು ನೀವು ಏನನ್ನು ಮಾಡುತ್ತೀರಿ ಮತ್ತು ಅದನ್ನು ಹೇಗೆ ಸಾಧಿಸುತ್ತೀರಿ ಎಂಬುದನ್ನು ತಿಳಿಸುತ್ತದೆ. ನೀವು ನಕಾರಾತ್ಮಕ ವರ್ತನೆ ಹೊಂದಿದ್ದರೆ, ನಿಮ್ಮ ಬದುಕು ಅಡೆತಡೆ, ವೈಫಲ್ಯ, ಸೋಲಿನಂತಹ ಗುಣಲಕ್ಷಣಗಳಿಂದ ಆಗುತ್ತದೆ. ಅದೇ ನೀವು ಸಕಾರಾತ್ಮಕ ವರ್ತನೆ ಹೊಂದಿದ್ದರೆ ನಿಮ್ಮ ಬದುಕು ಅನೇಕ ಅವಕಾಶ, ಖುಷಿ ಮತ್ತು ಯಶಸ್ಸಿನಿಂದ ಆಗಿರುತ್ತದೆ. ನಿಮ್ಮ ಬದುಕು ನಿಮ್ಮ ವರ್ತನೆಯ ಅಭಿವ್ಯಕ್ತಿಯ ಮೇಲೆ ನಿಂತಿದೆ. ಹೀಗಾಗಿ ಇದನ್ನು ಸರಿಯಾಗಿ ಆಯ್ಕೆ ಮಾಡುವುದು ತುಂಬಾ ಮುಖ್ಯವಾಗಿದೆ.
ಒಂದು ಕೆಲಸವನ್ನು ಹುಡುಕುವುದು ಸುಲಭವಿರಬಹುದು. ಆದರೆ ಚೆನ್ನಾಗಿ ಸಂಬಳ ನೀಡುವ ಕೆಲಸವನ್ನು ಹುಡುಕುವುದು ಕಷ್ಟವಾಗಿದೆ. ಇದೇ ರೀತಿಯಲ್ಲಿ ಒಬ್ಬರನ್ನು ಭೇಟಿ ಮಾಡಿ, ಅವರನ್ನು ಇಷ್ಟಪಟ್ಟು ಪ್ರೀತಿಗೆ ಬೀಳುವುದು ಸುಲಭವಿರಬಹುದು. ಆದರೆ ಆ ಸಂಬಂಧವನ್ನು ಅಧಿಕ ದಿನಗಳವರೆಗೆ ಉಳಿಸಿರಲು ಅಧಿಕ ಪರಿಶ್ರಮ ಬೇಕು. ಇದರ ಅರ್ಥ ನಿಮಗೆ ಸಾಧಿಸಲು ಯಾವುದೇ ಶಾರ್ಟ್ಕಟ್(shortcut) ಇರುವುದಿಲ್ಲ. ಕೆಲವೊಮ್ಮೆ ನಿಮ್ಮ ಅದೃಷ್ಟ ನಿಮ್ಮ ಯಶಸ್ಸಿಗೆ ಒಂದು ಪಾತ್ರವನ್ನು ವಹಿಸುತ್ತದೆ. ಆದರೆ ಒಬ್ಬರು ಪೂರ್ತಿಯಾಗಿ ಈ ಅದೃಷ್ಟದ ಮೇಲೆ ನಿಂತರೆ, ಕೊನೆಯಲ್ಲಿ ನಿರಾಶರಾಗೆ ಇರುತ್ತಾರೆ. ಅದಲ್ಲದೆ ಕೇವಲ ಸುಮ್ಮನೆ ಕೂತು ಬದುಕಿನಲ್ಲಿ ಏನಾದರೂ ಒಳ್ಳೆಯದಾಗಲಿ ಎಂದು ಭರವಸೆ ಇಟ್ಟುಕೊಂಡಿದ್ದಾರೆ, ಬದುಕಿನಲ್ಲಿ ಏನೂ ಬದಲಾಗುವುದಿಲ್ಲ.
ಇದನ್ನು ಓದಿ: ಉನ್ನತ ವ್ಯಕ್ತಿಯಾಗಲು ಇರುವ ಮಾರ್ಗನೀವು ಇದನ್ನು ಮುಂಚೆಯೇ ಕೇಳಿರುತ್ತೀರಾ. ಇದು ಅರ್ಥಮಾಡಿಕೊಳ್ಳಲು ಒಂದು ಸರಳ ಪರಿಕಲ್ಪನೆಯಾಗಿದೆ. ಆದರೆ ಕಡೆದಾಗಿ(overlooked) ಆಗಿ ನೋಡಲಾಗುತ್ತದೆ. ಜನರು ನಿಮ್ಮನ್ನು ಇಷ್ಟ ಪಡುತ್ತೇವೆ ಮತ್ತು ಕಾಳಜಿ ವಹಿಸುತ್ತೇವೆ ಎಂದು ಹೇಳುತ್ತಾರೆ. ಆದರೆ ನಿಜವಾಗಿಯೂ ಅವರು ನಿಮಗೆ ಯಾವುದೇ ರೀತಿಯ ಪ್ರೀತಿ ಮತ್ತು ಕಾಳಜಿ ತೋರಿಸುವುದಿಲ್ಲ. ಅವರು ಏನು ಹೇಳುತ್ತಿದ್ದಾರೆ ಎಂದು ಯೋಚಿಸದೆ ನಿಮಗೆ ಎಲ್ಲ ವಿಷಯಗಳನ್ನು ತಿಳಿಸುತ್ತಾರೆ.
ಅವರು ಅದನ್ನು ಹೇಳಲೇಬೇಕೆಂಬ ಭಾವನೆ ಬಂದಿರುವುದರಿಂದ ನಿಮಗೆ ತಿಳಿಸುತ್ತಾರೆ. ಅವರು ಏನೇ ಹೇಳಿದರೂ ಅವರ ಕ್ರಮ ಅವರ ಪದಗಳಲ್ಲಿ ಪ್ರತಿಬಿಂಬಿಸದಿದ್ದರೆ, ಅವರು ಹೇಳಿದ ವಿಷಯಕ್ಕೂ ಯಾವುದೇ ಅರ್ಥವಿರುವುದಿಲ್ಲ. ನೀವು ಇತರರು ನಿಮ್ಮ ಮೇಲೆ ನಂಬಿಕೆ ಇಡಬೇಕೆಂದು ಬಯಸಿದಲ್ಲಿ ನೀವು ಹೇಳಿದ ರೀತಿಯಲ್ಲೇ ಇರಬೇಕು.
ಸಮಯ ತುಂಬಾ ಅಮೂಲ್ಯವಾಗಿದೆ ಮತ್ತು ವಿಳಂಬ ಮಾಡುವುದು ಅದನ್ನು ಹಾಳು ಮಾಡಲು ಇರುವ ಸುಲಭ ಮಾರ್ಗವಾಗಿದೆ. ನೀವು ವಿಳಂಬ ಮಾಡುವಾಗ ನಿಮ್ಮ ಉತ್ಪಾದಕತೆಯನ್ನೇ ಹಾಳು ಮಾಡುತ್ತೀರಾ. ಇದು ಏಕೆಂದರೆ ನೀವು ನಿಮಗೆ ಸಾಧ್ಯವಾಗುವಷ್ಟು ಕೆಲಸಗಳನ್ನು ಮುಗಿಸಿರುವುದಿಲ್ಲ. ಆ ಕೆಲಸಗಳನ್ನು ನೀವು ಎಲ್ಲಿ ನಿಲ್ಲಿಸಿದ್ದೀರಾ, ಅಲ್ಲಿಂದ ಮತ್ತೆ ಪ್ರಾರಂಭಿಸಬೇಕಾಗುತ್ತದೆ. ಹೀಗಾಗಿ ಅವುಗಳನ್ನು ಈಗಲೇ ಮುಗಿಸಿಬಿಡಿ. ಇದು ಅತಿಕ್ರಮಿಸಿ(overwhelm) ಎನಿಸಬಹುದು. ಆದರೆ ನೀವು ಅದನ್ನು ಒಂದು ಧೈರ್ಯ ಮಾಡಿ ಪ್ರಾರಂಭಿಸಿದರೆ, ನೀವು ನಿಮ್ಮ ಉತ್ಪಾದಕತೆಯನ್ನು ನೋಡಿ ಆಶ್ಚರ್ಯಗೊಳ್ಳುತ್ತೀರಾ.
ಇದನ್ನು ಓದಿ: ನೀವು ಯೋಚಿಸುವುದಕ್ಕಿಂತ ಹೆಚ್ಚು ಆಕರ್ಷಕವಿರುವ 13 ರಹಸ್ಯ ಚಿಹ್ನೆಗಳುಬದುಕಿನಲ್ಲಿ ನಿಮಗೆ ಬೇಕಾಗಿರುವ ಎಲ್ಲಾ ವಸ್ತುಗಳು ಇದೆಯೆಂದು ಯೋಚಿಸುವುದು ಸುಲಭವಿರಬಹುದು. ಆದರೆ ವಾಸ್ತವವಾಗಿ ಅದು ತ್ಯಾಗದ(sacrifice) ಮೇಲೆ ನಿಂತಿದೆ. ನೀವು ಎಲ್ಲವನ್ನು ಗಳಿಸಿರುವುದಿಲ್ಲ, ಕೆಲವು ವಸ್ತುಗಳನ್ನು ಪಡೆಯಲು ನೀವು ಕೆಲವೊಂದನ್ನು ತ್ಯಾಗ ಮತ್ತು ಮುಖ್ಯ ವಸ್ತುಗಳಿಗೆ ಆದ್ಯತೆ ನೀಡಬೇಕಾಗುತ್ತದೆ. ತುಂಬಾ ಜನ ಅವರ ಬದುಕಿನಲ್ಲಿ ಆದ್ಯತೆ ನೀಡದೆ ಬದುಕುತ್ತಿದ್ದಾರೆ.
ಇದು ಒಂದು ನಿರ್ಣಾಯಕ ವಿಷಯವಾಗಿದ್ದು, ಇದನ್ನು ನೀವು ಪಾಲಿಸುವುದರಿಂದ ವಸ್ತುಗಳನ್ನು ಒಂದು ದೃಷ್ಟಿ ಕೋನದಲ್ಲಿ ಇರಿಸಲು ಮತ್ತು ಸದ್ಯಕ್ಕೆ ನಿಮಗೆ ಸಿಗದೇ ಇರುವ ವಸ್ತುಗಳ ಬಗ್ಗೆಯೂ ತಿಳಿಸುತ್ತದೆ. ಇವುಗಳ ಬಗ್ಗೆ ಯೋಚಿಸುವುದರಿಂದ ನಿಮಗೆ ಬೇಕಾಗಿರುವ ತ್ಯಾಗವನ್ನು ಮಾಡಿ ನಿಮ್ಮ ಗುರಿಯನ್ನು ಸಾಧಿಸಲು ಸುಲಭವಾಗಿಸುತ್ತದೆ.
ನಮ್ಮ ಬದುಕಿನಲ್ಲಿ ನಾವು ಬಲವಂತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸನ್ನಿವೇಶಗಳು ಬಂದೇ ಬರುತ್ತವೆ. ಅವುಗಳ ನಮ್ಮನ್ನು ಬೇಸರ ಮಾಡುವುದಲ್ಲದೆ ತಪ್ಪಿತಸ್ಥ ಭಾವನೆಗೆ ದೂಡುತ್ತವೆ. ಆಗಂತ ಅದರ ಅರ್ಥ ನೀವು ತೆಗೆದುಕೊಂಡಿರುವ ನಿರ್ಧಾರ ತಪ್ಪು ಎಂದಲ್ಲ. ಏಕೆಂದರೆ ಕೆಲವೊಮ್ಮೆ ತೆಗೆದುಕೊಳ್ಳುವ ಕಠಿಣ ನಿರ್ಧಾರಗಳು ತುಂಬಾ ಅವಶ್ಯಕವಾಗಿರುತ್ತದೆ. ನೀವು ಬೇರೆ ದೇಶಗಳಲ್ಲಿ ವಾಸಿಸುವ, ಇಲ್ಲ ಯಾವುದಾದರೂ ಸಂಬಂಧವನ್ನು ಮುರಿಯುವ, ನಿಮ್ಮ ಕೆಲಸವನ್ನು ತೊರೆಯುವ ಅಥವಾ ಹೊಸದನ್ನು ಪ್ರಾರಂಭಿಸುವಂತಹ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದರೆ, ನೀವು ಅತಿಯಾದ ಭಾವನೆಯಿಂದ ಕೂಡಿರುತ್ತೀರಾ. ಆದರೆ ಈ ಭಾವನೆಗಳು ತಾತ್ಕಾಲಿಕವಾಗಿದ್ದು, ಇದು ನೀವು ಮುಂದೂಡಲು ಮತ್ತು ಒಳ್ಳೆಯ ನಿರ್ಧಾರ ತೆಗೆದುಕೊಳ್ಳಲು ತಡೆಯಬಾರದು.
ಇದನ್ನು ಓದಿ: ಕಡಿಮೆ ಹಣದೊಂದಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಹೇಗೆ?ಕಳೆದುಹೋದ ಹಣವನ್ನು ಮತ್ತೆ ಮರಳಿ ಪಡೆಯಬಹುದು. ಆದರೆ ಒಮ್ಮೆ ಹೋದ ಖ್ಯಾತಿಯು ಮತ್ತೆ ಸಿಗುವುದಿಲ್ಲ. ಒಳ್ಳೆಯ ಖ್ಯಾತಿ ಇರುವ ವ್ಯಕ್ತಿಯನ್ನು ಎಲ್ಲರೂ ಗೌರವದಿಂದ ನೋಡುತ್ತಾರೆ. ಅವರ ಸಕಾರಾತ್ಮಕ ಗುಣಮಟ್ಟ(quality) ಮತ್ತು ಸಾಧನೆಯಿಂದಾಗಿ ಜನರು ಅವರ ರೀತಿಯಲ್ಲಿ ಇರಲು ಬಯಸುತ್ತಾರೆ. ಇದರ ವಿರುದ್ಧ ಕೂಡ ಸತ್ಯವಾಗಿದೆ. ಕೆಟ್ಟ ಖ್ಯಾತಿ ಇರುವ ವ್ಯಕ್ತಿಗೆ ಅತಿಯಾದ ಗೌರವ ಸಿಗುವುದಿಲ್ಲ. ನಿಮ್ಮ ಖ್ಯಾತಿಯನ್ನು ನಿರ್ಮಾಣ ಮತ್ತು ಸುರಕ್ಷಿತವಾಗಿಸಲು ಸಮಯ ತೆಗೆದುಕೊಳ್ಳುತ್ತದೆ. ಆದರೆ ಇದು ದೀರ್ಘಾವಧಿಯಲ್ಲಿ ನಿಮಗೆ ಪ್ರತಿಫಲ ನೀಡುತ್ತದೆ.
ಬದುಕು ಕಲಿಕೆಯ ಪ್ರಕ್ರಿಯೆ ಆಗಿದೆ ಮತ್ತು ಪ್ರತಿಯೊಂದು ಪಾಠವು ನೀವು ಅದನ್ನು ಕಲಿಯುವವರೆಗೂ ಪುನರಾವರ್ತಿಸುತ್ತಿರುತ್ತದೆ. ಇದು ಸ್ವಲ್ಪ ಕಷ್ಟವಿರಬಹುದು, ಏಕೆಂದರೆ ನಮ್ಮ ಮನಸ್ಸು ಅನೇಕ ಸಮಸ್ಯೆ, ಅಡೆತಡೆ ಮತ್ತು ರೇಗಾಟದಿಂದ ಆಗಿರುತ್ತದೆ. ಆದರೆ ನಮ್ಮ ಭಾವನೆಗಳು ಒಂದು ನಿರ್ದಿಷ್ಟ ಸಂದರ್ಭದಿಂದ ಹೇಗೆ ಕಲಿಯಬೇಕೆಂದು ತಿಳಿಸುತ್ತವೆ. ಏನಾದರೂ ನಿಮ್ಮನ್ನು ನಿರಾಶೆ ಮಾಡಿದರೆ, ಅದು ನಿಮ್ಮ ಯೋಚನೆಯಲ್ಲಿರುವ ತಪ್ಪಿನ ಬಗ್ಗೆ ತಿಳಿಸುತ್ತದೆ. ಅದನ್ನು ನೀವು ಸರಿ ಮಾಡಿಕೊಳ್ಳಬೇಕು. ನೀವು ಈ ರೀತಿಯ ಭಾವನಾತ್ಮಕ ಪ್ರತಿಕ್ರಿಯೆಗಳಿಂದ ಕಲಿತು ಅವುಗಳನ್ನು ಮತ್ತೊಮ್ಮೆ ಆಗದಂತೆ ನೋಡಿಕೊಳ್ಳಿ.
ಇದನ್ನು ಓದಿ: 10 ಹೆಚ್ಚುವರಿ ಆದಾಯದ ಐಡಿಯಾಗಳುನಿಮಗೆ ಸದ್ಯಕ್ಕೆ ಇರುವ ಅವ್ಯವಸ್ಥೆಯಿಂದ ಹೊರಬರುವುದು ಹೇಗೆ ಎಂಬ ಐಡಿಯಾ ಇಲ್ಲದಿದ್ದರೆ, ನೀವು ಒತ್ತಡಕ್ಕೆ ಒಳಗಾಗಬೇಡಿ. ಏಕೆಂದರೆ ಎಲ್ಲದಕ್ಕೂ ಒಂದು ಪರಿಹಾರ ಇದ್ದೇ ಇರುತ್ತದೆ. ನೀವು ಅದನ್ನು ಅನ್ವೇಷಿಸಬೇಕು. ಅದರ ಮೊದಲ ಹಂತ ಏನೆಂದರೆ ಆ ಸಮಸ್ಯೆಯೂ ನಿಮ್ಮ ಮೇಲೆ ಬೀರುತ್ತಿರುವ ಪರಿಣಾಮದ ಬಗ್ಗೆ ಅಷ್ಟು ಗಮನ ಹರಿಸಬೇಡಿ. ಬದಲಿಗೆ ನಿಮ್ಮ ಸಮಸ್ಯೆ ಕೇವಲ ತಾತ್ಕಾಲಿಕ ಮತ್ತು ಎಂದೆಂದಿಗೂ ಇರುವುದಿಲ್ಲವೆಂದು ಯೋಚಿಸಿ. ಇದು ನಿಮ್ಮ ತಲೆಗೆ ಹೋದಾಗ ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತೀರಾ.
ಅದನ್ನು ನೀವು ಹೋರಾಟ ಎಂದು ಭಾವಿಸದೆ ಸವಾಲಾಗಿ ತೆಗೆದುಕೊಳ್ಳುತ್ತೀರಿ, ಇಲ್ಲ ಸ್ಫೂರ್ತಿಯ ರೀತಿಯಲು ತೆಗೆದುಕೊಳ್ಳಬಹುದು. ನೀವು ಇವುಗಳಲ್ಲಿ ಕೇವಲ ಪರಿಹಾರವನ್ನು(solution) ಹುಡುಕುತ್ತಿದ್ದರೆ ಸಾಲುವುದಿಲ್ಲ. ಅವುಗಳನ್ನು ನಿಮ್ಮ ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ನಿಮ್ಮ ಜೀವನದಲ್ಲಿ ಬದಲಾವಣೆ ಇರುತ್ತದೆ.
ನಿಮ್ಮನ್ನು ಸ್ಪಷ್ಟ ಮತ್ತು ವಸ್ತುನಿಷ್ಠ ರೀತಿಯಲ್ಲಿ ನೋಡುವುದು ಸ್ವಯಂ ಅರಿವಾಗಿದೆ. ಇದು ನಿಮ್ಮ ಬದುಕಿನಲ್ಲಿ ಬುದ್ಧಿವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಕರಿಸುತ್ತದೆ ಮತ್ತು ನಿಮ್ಮ ನಡವಳಿಕೆಯನ್ನು ಪ್ರೇರೇಪಿಸುವ ವಿಷಯದ ಬಗ್ಗೆ ಅರ್ಥ ಮಾಡಿಸುತ್ತದೆ. ನೀವು ಒಮ್ಮೆ ನಿಮ್ಮ ಯೋಚನೆಗಳನ್ನು ಅರಿವು ಮಾಡಿಕೊಂಡಾಗ ನಿಮಗೆ ಅವುಗಳನ್ನು ನಿಯಂತ್ರಣ ಮಾಡಲು ಮತ್ತು ಅದನ್ನು ನಿಮ್ಮ ಸಹಾಯಕ್ಕೆ ಬಳಸಲು ಸಹಾಯ ಮಾಡುತ್ತದೆ. ನಿಮ್ಮನ್ನು ಸುಧಾರಿಸಿಕೊಳ್ಳಲು ಇರುವ ನಿಜವಾದ ದಾರಿಯೆಂದರೆ ನಿಮ್ಮ ಸ್ವಂತ ಅಸ್ತಿತ್ವದ ಬಗ್ಗೆ ತಿಳಿದುಕೊಳ್ಳುವುದಾಗಿದೆ. ಇದರಲ್ಲಿ ನೀವು ಮೊದಲಿಗೆ ನಿಮ್ಮ ಆತ್ಮವಿಶ್ವಾಸದ ಕೊರತೆ ಮತ್ತು ನಿಮ್ಮ ಯಶಸ್ಸನ್ನು ಸಾಧಿಸದಂತೆ ತಡೆಯುವ ಭಾವನೆಗಳ ಬಗ್ಗೆ ಯೋಚಿಸಬೇಕು.
ಇದನ್ನು ಓದಿ: ವೀರ್ಯವನ್ನು ಉಳಿಸಿಕೊಳ್ಳುವುದರಿಂದ ಆಗುವ ಲಾಭಗಳವುವು?ನಾವು ರೋಗಕ್ಕೆ ತುತ್ತಾಗುವವರೆಗೂ ನಮ್ಮ ಆರೋಗ್ಯದ ಬಗೆಗಿನ ಪ್ರಾಮುಖ್ಯತೆ ಬಗ್ಗೆ ಅರಿವಾಗುವುದಿಲ್ಲ. ದುರಾದೃಷ್ಟವಾಗಿ ಜನರು ಅವರ ಬದುಕಿನಲ್ಲಿ ಆರೋಗ್ಯಕರ ಹವ್ಯಾಸಗಳನ್ನು ಪಾಲಿಸಲು ತುರ್ತು ಪರಿಸ್ಥಿತಿಗಾಗಿ ಕಾಯುತ್ತಿರುತ್ತಾರೆ. ಆದರೆ ನೀವು ಆರೋಗ್ಯಕರ ಹವ್ಯಾಸಗಳನ್ನು ಈಗಲೇ ಪಾಲಿಸದಿದ್ದರೆ, ಮತ್ತೆ ಎಂದಿಗೂ ಪಾಲಿಸಲು ಸಾಧ್ಯವಿಲ್ಲ. ನಿಮಗೆ ನಿಮ್ಮ ಆರೋಗ್ಯ ಮುಖ್ಯವಾಗಿದ್ದರೆ ಅದನ್ನು ಆದ್ಯತೆ ಮಾಡಿಕೊಳ್ಳಿ.
ಬದುಕು ಸಂತೋಷ ಮತ್ತು ಬೇಸರ, ಒಳ್ಳೆಯ ಸಮಯ ಮತ್ತು ಕೆಟ್ಟ ಸಮಯಗಳಿಂದ ಕೂಡಿದೆ. ಆದರೆ ಬದಲಾಗದಿರುವ ಒಂದೇ ಒಂದು ವಿಷಯವೆಂದರೆ ಅದು ಬದಲಾವಣೆ ಆಗಿದೆ. ಹೀಗಾಗಿ ನಿಮ್ಮ ನಿಯಂತ್ರಣದಲ್ಲಿರುವ ವಿಷಯಗಳ ಮೇಲೆ ಅತಿಯಾಗಿ ಯೋಚಿಸಬೇಡಿ. ನಿಮ್ಮನ್ನು ಅತ್ಯುತ್ತಮ ಮತ್ತು ಕೃತಜ್ಞತೆಯಾಗಿ ಇರುವಂತೆ ಮಾಡಲು ಬದುಕು, ನಿಮಗೆ ಅನೇಕ ತಿರುವುಗಳನ್ನು ನೀಡಬಹುದು. ಹೀಗಾಗಿ ನಕರಾತ್ಮಕ ವಸ್ತುಗಳ ಬಗ್ಗೆ ಕೊರಗುವ ಬದಲು, ಯಾವುದೂ ಶಾಶ್ವತವಾಗಿ ಉಳಿಯುವುದಿಲ್ಲವೆಂದು ಯೋಚಿಸಿ.
ಕೆಟ್ಟ ಸನ್ನಿವೇಶಗಳು ದಾಟಿ ಹೋಗುತ್ತವೆ. ಒಂದು ವೇಳೆ ಅವು ತನಗೆ ಹೊಗಲಿಲ್ಲವೆಂದರೆ, ನೀವು ನಿಮ್ಮ ಬದುಕಿನಲ್ಲಿ ಕೆಲವು ಬದಲಾವಣೆ ಮಾಡಬೇಕಾಗಿರುತ್ತದೆ. ಒಳ್ಳೆಯ ವಸ್ತು ಕೊನೆಯಲ್ಲಿ ಬಂದೇ ಬರುತ್ತದೆ. ಹೀಗಾಗಿ ಅದನ್ನು ಮಂಜೂರಾಗಿ(granted) ಆಗಿ ತೆಗೆದುಕೊಳ್ಳಬೇಡಿ. ಪ್ರತಿದಿನವನ್ನು ಆನಂದಿಸಿ, ಏಕೆಂದರೆ ಮುಂದಿನ ದಿನ ಏನು ಬರಲಿದೆಯೆಂದು ನಿಮಗೆ ತಿಳಿದಿರುವುದಿಲ್ಲ.
ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.
Explore all our Posts by categories.
Mahithi Thana 1531
Info Mind 5202
See all comments...