Website designed by @coders.knowledge.

Website designed by @coders.knowledge.

16 Psychological Laws of Power | ಶಕ್ತಿಯ 16 ಮಾನಸಿಕ ನಿಯಮಗಳು

 0

 Add

Please login to add to playlist

Watch Video

ನೀವು ಮೈಕೆಲ್ಯಾಂಜೆಲೊ(michelangelo) ಬಗ್ಗೆ ತಿಳಿದಿರಬಹುದು. ಅವರು ಒಂದು ಸಮಯದಲ್ಲಿ ಪೂರ್ತಿ ಜಗತ್ತಿನಲ್ಲಿ ಪ್ರಸಿದ್ಧರಾದ ಪರಿಪೂರ್ಣ ಶಿಲ್ಪಿ(sculpturer) ಆಗಿದ್ದರು. ಅವರು ಅವರ ಕರಕುಶಲದಲ್ಲಿ(craft) ಮಾಸ್ಟರ್ ಆಗಿರುವುದರಿಂದ ಜಗತ್ತಿನಲ್ಲಿ ಎಲ್ಲರೂ ಅವರನ್ನು ಇಷ್ಟಪಡುತ್ತಿದ್ದರು. ಒಮ್ಮೆ ಒಬ್ಬ ದೊಡ್ಡ ವ್ಯಕ್ತಿ ಇವರಿಗೆ ಒಂದು ದೊಡ್ಡ ಮೂರ್ತಿಯನ್ನು ಕೆತ್ತಲು ಹೇಳಿ ಅಧಿಕ ಹಣವನ್ನು ನೀಡಿದ. ಆ ಮೂರ್ತಿಯನ್ನು ಕೆತ್ತಿದ ನಂತರ ಆ ದೊಡ್ಡ ವ್ಯಕ್ತಿ ಅದನ್ನು ನೋಡಿ, "ನನಗೆ ಇದರ ಮೂಗು ದೊಡ್ಡದನಿಸುತ್ತಿದೆ" ಎಂದನು. ತುಂಬಾ ಕೊಬ್ಬು ಇರುವ ಶಿಲ್ಪಿ ಇದ್ದಿದ್ದರೆ, "ಎಲ್ಲ ಸರಿ ಇದೆ" ಎಂದು ಹೇಳುತ್ತಿದ. ಆದರೆ ಮೈಕೆಲ್ಯಾಂಜೆಲೊ ಬುದ್ಧಿವಂತ ವ್ಯಕ್ತಿಯಾಗಿದ್ದರು. ಹೀಗಾಗಿ ವಾದಿಸುವ ಬದಲು, ಅವರ ಕೈಯಲ್ಲಿ ಸ್ವಲ್ಪ ಮಣ್ಣನ್ನು ತೆಗೆದುಕೊಂಡು, ಮೂಗನ್ನು ಚಿಕ್ಕದಾಗಿ ಮಾಡುವ ರೀತಿ ನಟನೆ ಮಾಡಿದರು. ನಟನೆ ಮಾಡುತ್ತಾ ಅವರ ಕೈಯಲ್ಲಿದ್ದ ಮಣ್ಣನ್ನು ಬಿಡುತ್ತಿದ್ದರು, ಇದರಿಂದ ಅವರು ಮೂಗನ್ನು ಚಿಕ್ಕದಾಗಿ ಮಾಡುತ್ತಿರುವ ರೀತಿ ಕಾಣಿಸುತ್ತಿತ್ತು.

ಇದಾದ ನಂತರ ಮೈಕೆಲ್ಯಾಂಜೆಲೊ ಆ ದೊಡ್ಡ ವ್ಯಕ್ತಿಗೆ, "ನೀವು ಅಲ್ಲಿ ಹೋಗಿ ಮೂಗು ಸರಿಯಾಗಿ ಕಾಣಿಸುತ್ತಿದೆಯೇ ನೋಡಿ" ಎಂದರು. ಆ ದೊಡ್ಡ ವ್ಯಕ್ತಿ ಆ ರೀತಿ ಮಾಡಿ, "ಈಗ ಸರಿ ಇದೆ" ಎಂದು ಹೇಳುತ್ತಾನೆ. ಇದರಲ್ಲಿನ ವಿಷಯವೇನೆಂದರೆ ಆ ದೊಡ್ಡ ವ್ಯಕ್ತಿ ನಿಂತ ಸ್ಥಳದಿಂದ ಅ ಮೂಗು ದೊಡ್ಡದಾಗಿ ಕಾಣಿಸುತ್ತಿತ್ತು, ಇದು ಮೈಕೆಲ್ ಅವರಿಗೂ ತಿಳಿದಿತ್ತು. ಒಂದು ವೇಳೆ ಅವನ ಮಾತು ಕೇಳಿ ಮೂಗನ್ನು ಚಿಕ್ಕದಾಗಿ ಮಾಡಿದ್ದಾರೆ, ಆ ಮೂರ್ತಿ ಕೆಡುತ್ತಿತು. ಇದರಿಂದ ಅವರು ಆ ಉಪಾಯವನ್ನು ಬಳಸಿದ್ದರು.

ಈ ಕಥೆಯ ಪಾಠವೇನೆಂದರೆ, ನೀವು ನಿಮ್ಮ ಮೌಲ್ಯವನ್ನು ಹೆಚ್ಚಿಸಲು ಬಯಸಿದ್ದಾರೆ. ಆದಷ್ಟು ವಾದಗಳನ್ನು(arguments) ನಿರ್ಲಕ್ಷಿಸಿ. ಕೆಲವೊಮ್ಮೆ ನೀವು ಮೂರ್ಖರ ಜೊತೆ ವಾದ ಮಾಡುತ್ತಿದ್ದರೆ ನೀವು ಗೆಲ್ಲುತ್ತಿರೋ ಇಲ್ಲವೋ ಗೊತ್ತಿಲ್ಲ, ಆದರೆ ನಿಮ್ಮ ಮೌಲ್ಯವು ಕಡಿಮೆಗೊಳ್ಳುತ್ತದೆ. ಹೀಗಾಗಿ ವಾದಗಳನ್ನು ನಿರ್ಲಕ್ಷಿಸಿ, ನಿಮ್ಮ ಕ್ರಮಗಳ(action) ಮೇಲೆ ಗೆಲ್ಲಲು ಪ್ರಯತ್ನಿಸಿ. ಇದುವೇ ನಿಮ್ಮ ಮೌಲ್ಯವನ್ನು ಹೆಚ್ಚಿಸಲು ಇರುವ ಮೊದಲ ಪಾಠವಾಗಿದೆ. ಇದನ್ನು "the 48 laws of power" ಎಂಬ ಪುಸ್ತಕದಿಂದ ತೆಗೆದುಕೊಳ್ಳಲಾಗಿದೆ. ಇದೇ ರೀತಿ ವಿವಿಧ ಪುಸ್ತಕಗಳಲ್ಲಿ ತಿಳಿಸಿದ 15 ಸೈಕಾಲಜಿಕಲ್ ನಿಯಮವನ್ನು(laws) ನಾನು ನಿಮಗೆ ಈ ಲೇಖನದಲ್ಲಿ ತಿಳಿಸಲಿದ್ದೇನೆ. ಇದನ್ನು ನೀವು ಫಾಲೋ ಮಾಡುವುದರಿಂದ ನಿಮ್ಮ ಮೌಲ್ಯವು ಬದುಕಿನಲ್ಲಿ ಹೆಚ್ಚುತ್ತದೆ.

ಇದನ್ನು ಓದಿ: ಕಡಿಮೆ ಮಾತನಾಡುವ ಜನರ 5 ಗುಣಗಳು

1. Make yourself scares wanted more.

why psychology says about ignoring in kannada
scarce personality

ಎರಡು ಜಾರ್ ಇಟ್ಟುಕೊಂಡು ಒಂದು ಪ್ರಯೋಗವನ್ನು ಮಾಡಲಾಗಿತ್ತು. ಒಂದು ಜಾರಿನಲ್ಲಿ ಅನೇಕ ಚಾಕಲೇಟ್ಗಳನ್ನು ಹಾಕಿದ್ದರು. ಇನ್ನೊಂದರಲ್ಲಿ ಕೇವಲ ಎರಡು ಚಾಕ್ಲೇಟ್ ಇಟ್ಟಿದ್ದರು. ಎರಡು ಜಾರ್ನಲ್ಲಿ ಒಂದೇ ರೀತಿಯ ಚಾಕ್ಲೆಟ್ ಇದ್ದವು, ಕೇವಲ ಪ್ಯಾಕೆಟ್ ಬೇರೆ ಬೇರೆ ಆಗಿತ್ತು. ಆದರೆ ಪ್ರಯೋಗದಲ್ಲಿ "ಎರಡು ಜಾರಿನಲ್ಲಿ ಯಾವ ಚಾಕ್ಲೆಟ್ ಚೆನ್ನಾಗಿದೆ" ಎಂದು ಕೇಳಿದಾಗ, ಜನರು ಕಡಿಮೆ ಚಾಕಲೇಟ್ ಇರುವುದು ಚೆನ್ನಾಗಿತ್ತು ಎಂದು ಹೇಳುತ್ತಾರೆ. ಈ ಪ್ರಯೋಗ "law of scarcity"ಯನ್ನು ಸಾಬೀತುಪಡಿಸುತ್ತದೆ. ಒಂದು ವಸ್ತು ಕಡಿಮೆ ಇದ್ದರೆ ಅದು ನಮಗೆ ಆಕರ್ಷಕವೆನಿಸುತ್ತದೆ.

ಹೀಗಾಗಿ ಮಾರಾಟಗಾರರು, "ಸರ್, ಆ ವಸ್ತು ಇವತ್ತೇ ಸಿಗುವುದು, ನಾಳೆಯಿಂದ ಸಿಗುವುದಿಲ್ಲ, ಈಗಾಗಿ ಬೇಗನೇ ಇದನ್ನು ಖರೀದಿಸಿ" ಎಂದು ಹೇಳುತ್ತಾರೆ. ಇಲ್ಲ "ಈ ವಸ್ತು ಲಿಮಿಟೆಡ್ ಎಡಿಷನ್ ಆಗಿದೆ" ಎಂದು ಹೇಳುತ್ತಾರೆ. ಇದರಿಂದ ಜನರು ಅದನ್ನು ಖರೀದಿಸುತ್ತಾರೆ. ಇದೇ ರೀತಿ ನಮ್ಮ ದೇಶದಲ್ಲಿ ಕಡಿಮೆ ಸೀಟ್ ಇರುವ ಕಾಲೇಜಿಗೆ ಅಧಿಕ ಬೇಡಿಕೆ(demand) ಇರುತ್ತದೆ. ಅಲ್ಲಿ ಸ್ಪರ್ಧೆ ಅಧಿಕವಿರುವ ಕಾರಣ, ಆ ಸೀಟಿನ ಮೌಲ್ಯ ಕೂಡ ಹೆಚ್ಚಿರುತ್ತದೆ. ಕಾಲೇಜ್ ಚೆನ್ನಾಗಿ ಇರಬಹುದು, ಆದರೆ ಈ ಕಡಿಮೆ ಸೀಟ್ ಇದೆ ಎಂಬ ಸೈಕಾಲಜಿಯಿಂದ ತುಂಬಾ ಜನ ಅದಕ್ಕೆ ಆಕರ್ಷಿತರಾಗುತ್ತಾರೆ. ಆದರೆ ಪಾಠ ಮಾಡುವ ವಿಷಯದಲ್ಲಿ ಅದು ದೊಡ್ಡದಿದೆಯೇ ಎಂದು ಅವರು ಖಚಿತವಿರುವುದಿಲ್ಲ. ಈ ರೀತಿ ಏಕೆ ಆಗುತ್ತದೆ ಎಂದರೆ, ಹಿಂದಿನಿಂದಲೂ ನಮಗೆ ಕಷ್ಟಪಟ್ಟು ಸಿಗುವ ವಸ್ತುವಿಗೆ ಅಧಿಕ ಮೌಲ್ಯವಿದೆ ಎಂದು ಅನಿಸುತ್ತದೆ.

ಒಂದು ಮಗುವಿನ ಹತ್ತಿರ ಚಿಕ್ಕ ವಯಸ್ಸಿನಿಂದಲೂ ಫೆರಾರಿ ಕಾರ್ ಇದ್ದಾರೆ. ಅವನಿಗೆ ಆ ಫೆರಾರಿ ಕಾರ್ ಮೇಲೆ ಅಷ್ಟು ಆಸಕ್ತಿ ಇರುವುದಿಲ್ಲ. ಅದೇ ಯಾರಾದರೂ ನಮಗೆ ಫೆರಾರಿ ಕಾರ್ ತಂದುಕೊಟ್ಟರೆ, ನಾವು ಅದಕ್ಕೆ ಅಧಿಕ ಮೌಲ್ಯ ನೀಡುತ್ತೇವೆ. ಇದು ಏಕೆಂದರೆ ಅದು ನಮಗೆ ವಿರಳವಾಗಿದೆ(scarce), ಈಗಾಗಿ ನಿಮ್ಮನ್ನು ಎಷ್ಟು ಸಾಧ್ಯವೋ ಅಷ್ಟು ವಿರಳ ಮಾಡಿಕೊಳ್ಳಿ. ಕೆಲವು ಹುಡುಗರು ಹುಡುಗಿಯರಿಗೆ ಪ್ರಭಾವ ಬೀರಲು ಅವರ ಜೊತೆ ಯಾವಾಗಲೂ ಇರುತ್ತಾರೆ. ಆದರೆ ಸತ್ಯ ಏನೆಂದರೆ ಆ ರೀತಿಯ ಹುಡುಗರು ಯಾರಿಗೂ ಇಷ್ಟವಾಗುವುದಿಲ್ಲ. ಅವರು ಯಾವಾಗಲೂ ಲಭ್ಯವಿರುತ್ತಾರೆ. ನೀವು ಆ ರೀತಿ ಆಗಬೇಡಿ, ನಿಮ್ಮ ಬದುಕಿನಲ್ಲಿ ಕೆಲವು ಗುರಿ ಇಟ್ಟುಕೊಳ್ಳಿ, ವಿರಳವಾಗಿರಿ. ನೀವು ಬೇಕಂತ ವಿರಳವಾಗಿ ಎಂದು ನಾವು ಹೇಳುತ್ತಿಲ್ಲ. ಆದರೆ ನೀವು ನಿಮ್ಮ ಗುರಿಯ ಮೇಲೆ ಕೆಲಸ ಮಾಡಿದರೆ, ನಿಮ್ಮ ಬದುಕಿಗೆ ಮೌಲ್ಯವನ್ನು ನೀಡಿದ್ದಾರೆ, ನೀವು ಖುದ್ದಾಗಿ ವಿರಳ ವ್ಯಕ್ತಿತ್ವವನ್ನು ಹೊಂದುತ್ತೀರಾ. ಇದು ಇತರರನ್ನು ಆಕರ್ಷಿಸುತ್ತದೆ ಮತ್ತು ಮೌಲ್ಯವನ್ನು ನೀಡುತ್ತದೆ.

ಇದನ್ನು ಓದಿ: ನೀವು ಎಂದಿಗೂ ಶ್ರೀಮಂತರಾಗದಿರಲು 7 ಕಾರಣಗಳು

2. Master the art of storytelling.

ಯಾವುದೇ ಗುಂಪಿನಲ್ಲಿ ಕಥೆ ಹೇಳುವುದರಲ್ಲಿ ಎಕ್ಸ್ಪರ್ಟ್ ಇರುವವರ ಮಾತನ್ನು ಎಲ್ಲರೂ ಕೇಳುತ್ತಿರುತ್ತಾರೆ. ಅವರು ಒಳ್ಳೆಯ ಕಥೆ ಹೇಳುವುದರಿಂದ ಗರಿಷ್ಠ ಜನರು ಅವರ ಹತ್ತಿರ ಆಕರ್ಷಿತರಾಗುತ್ತಾರೆ ಮತ್ತು ಅಧಿಕ ಮೌಲ್ಯವನ್ನು ನೀಡುತ್ತಾರೆ. ಇದು ಆಕರ್ಷಿಸಲು ಅಷ್ಟೇ ಅಲ್ಲದೆ, ಮಾರಾಟ ಮಾಡಲು ಕೂಡ ತುಂಬಾ ಉಪಯುಕ್ತವಾಗಿದೆ. ಇದು ಮಾರ್ಕೆಟಿಂಗ್, ಬಿಸಿನೆಸ್ ಎಲ್ಲಾ ಕಡೆ ಉಪಯುಕ್ತವಾಗಿದೆ. ಏಕೆಂದರೆ ಎಲ್ಲರಿಗೂ ಕಥೆಯನ್ನು ಕೇಳುವುದು ಇಷ್ಟವಾಗಿ ಕ್ರಮವನ್ನು(action) ತೆಗೆದುಕೊಳ್ಳುವಂತೆ ಮಾಡುತ್ತದೆ. ಹೀಗಾಗಿ ನೀವು ನಿಮ್ಮ ಮೌಲ್ಯವನ್ನು ಹೆಚ್ಚಿಸಲು ಬಯಸಿದರೆ ಕಥೆ ಹೇಳುವುದದರಲ್ಲಿ ಎಕ್ಸ್ಪರ್ಟ್ ಆಗಿ. ನೀವು ನಿಮ್ಮ ವೃತ್ತಿಯಲ್ಲಿ ಮುಂದುವರೆಯಬೇಕೆಂದರೆ ಕಥೆ ಹೇಳುವುದದರಲ್ಲಿ ಎಕ್ಸ್ಪರ್ಟ್ ಇರಬೇಕು.

3. So much depends upon reputation guard it with your life.

what is reputation in psychology in kannada
reputation

ಎರಡನೇ ವಿಶ್ವಯುದ್ಧದಲ್ಲಿ ಎರ್ವಿನ್ ರೊಮೇನಿಯನ್(erwin romanian) ಅವರು ಅಸಾಧಾರಣ ಕೌಶಲ್ಯಕ್ಕೆ ಪ್ರಸಿದ್ಧರಾಗಿದ್ದರು. ವಿರೋಧಿಗಳು ಎಲ್ಲರೂ ಅವರಿಗೆ ಭಯಪಡುತ್ತಿದ್ದರು. ಎಲ್ಲರಿಗೂ ಅವರ ಮುಂದೆ ನಿಂತು ಹೋರಾಟ(fight) ಮಾಡುವುದು ಒಂದು "ಸೂಸೈಡ್ ಮಿಷನ್" ಎನಿಸುತ್ತಿತ್ತು. ಇದರಿಂದ ಎಷ್ಟೋ ಜನರು ಹೋರಾಟ ಮಾಡುವ ಮುಂಚೆಯೇ ಸೋಲೊಪ್ಪಿಕೊಳ್ಳುತ್ತಿದ್ದರು. ನೀವು ಒಬ್ಬರ ಜೊತೆ ಇಲ್ಲದಿದ್ದಾಗ, ಇಲ್ಲ ಅವರ ಜೊತೆ ಮಾತನಾಡದಿದ್ದಾಗ ನಿಮ್ಮ ಖ್ಯಾತಿಯು(reputation) ಅವರ ಬಳಿ ಇರುತ್ತದೆ. ನಿಮ್ಮ ಬಗ್ಗೆ ಯಾರಾದರೂ ಮಾತನಾಡಲು ಪ್ರಾರಂಭಿಸಿದಾಗ, ನಿಮ್ಮ ಖ್ಯಾತಿಯು ಅವರ ತಲೆಯಲ್ಲಿ ಮೊದಲಿಗೆ ಬರುತ್ತದೆ. ನಿಮ್ಮ ಖ್ಯಾತಿಯು ಅಧಿಕವಿದ್ದಷ್ಟು ಮುಂದಿರುವ ವ್ಯಕ್ತಿ ನಿಮ್ಮ ಬಗ್ಗೆ ಮಾತನಾಡುವ ಮೊದಲು 100 ಬಾರಿ ಯೋಚಿಸುತ್ತಾನೆ. ಹೀಗಾಗಿ ನೀವು ಗಟ್ಟಿಯಾದ ಖ್ಯಾತಿಯನ್ನು ನಿರ್ಮಾಣ ಮಾಡಿಕೊಂಡು ಅದನ್ನು ಸಂರಕ್ಷಿಸಿಕೊಳ್ಳಿ.

ಇದನ್ನು ಓದಿ: ನೀವು ಯೋಚಿಸುವುದಕ್ಕಿಂತ ಹೆಚ್ಚು ಆಕರ್ಷಕವಿರುವ 13 ರಹಸ್ಯ ಚಿಹ್ನೆಗಳು

4. The law of self sabotage.

ಜೆಫ್ ಕೆಲರ್(jeff kellar) ಅವರ "attitude is everything" ಎಂಬ ಪುಸ್ತಕದಲ್ಲಿ ನಮ್ಮ ವರ್ತನೆ ಬದುಕನ್ನು ಸೃಷ್ಟಿಸುತ್ತದೆ ಎಂದು ಹೇಳಿದ್ದಾರೆ. ಅನೇಕರು "ನಾನು ಜೀವನದಲ್ಲಿ ಸಾಧಿಸಲು ಸಾಧ್ಯವಿಲ್ಲ, ಏಕೆಂದರೆ ನಾನು ಬಡ ಕುಟುಂಬದವನು, ನನ್ನ ಹತ್ತಿರ ಅಷ್ಟು ಸಾಮರ್ಥ್ಯವಿಲ್ಲ, ನನ್ನ ಅದೃಷ್ಟ ಸರಿ ಇಲ್ಲ" ಎಂದು ಯೋಚಿಸುತ್ತಾರೆ. ಈ ರೀತಿಯ ವರ್ತನೆ ಇರುವವರು ಸಾಮಾನ್ಯವಾಗಿ ಏನನ್ನು ಮಾಡಲು ಸಾಧ್ಯವಿಲ್ಲ. ಏಕೆಂದರೆ ವರ್ತನೆ ಎಂಬುವುದು ಕನ್ನಡಕದ(spect) ರೀತಿ ಆಗಿದೆ. ಇದರಿಂದಲೇ ನಾವು ಬದುಕನ್ನು ಅನುಭವಿಸುತ್ತೇವೆ. ಒಂದು ವೇಳೆ ಈ ಕನ್ನಡಕ ನೆಗೆಟಿವ್ ಆಗಿದ್ದಾರೆ, ನಮಗೆ ಎಲ್ಲವೂ ನೆಗೆಟಿವ್ ಆಗಿ ಕಾಣುತ್ತದೆ. ಇದರಿಂದ ನಮಗೆ ಯಾವುದೇ ರೀತಿಯ ಕ್ರಮವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ಮತ್ತು ನಮ್ಮ ಬದುಕಿನ ಸಮಸ್ಯೆಗಳನ್ನು ಬದಲಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ನಮಗೆ ನಮ್ಮ ಸಮಸ್ಯೆ, ಜಗತ್ತು, ಜನರು ಎಲ್ಲರೂ ನೆಗೆಟಿವ್ ಆಗಿ ಕಾಣುತ್ತಿರುತ್ತಾರೆ. ಪ್ರತಿಯೊಬ್ಬರೂ ನಮಗೆ ದುಃಖ ನೀಡುತ್ತಾರೆ.

ಅದೇ ನಾವು ಒಂದು ಪಾಸಿಟಿವ್ ಕನ್ನಡಕ ಹಾಕಿದ್ದಾರೆ, ನಮಗೆ ಎಲ್ಲ ಸನ್ನಿವೇಶ ಪಾಸಿಟಿವ್ ಎನಿಸುತ್ತದೆ. ನಾವು ಎಲ್ಲ ಸಮಸ್ಯೆಯ ಬದಲು ಪರಿಹಾರಗಳ ಮೇಲೆ ಗಮನ ಹರಿಸುತ್ತೇವೆ. ನಾವು ಸೋಲುವ ಬದಲು ಗೆಲ್ಲಲು ಪ್ರಯತ್ನಿಸುತ್ತೇವೆ. ನಾವು ದಿನವಿಡೀ ಸುಮ್ಮನೆ ಇರುವ ಬದಲು ಕ್ರಮವನ್ನು(actions) ತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿರುತ್ತೇವೆ. ಏಕೆಂದರೆ ನಾವು ಪಾಸಿಟಿವ್ ಆಗಿ ಇದ್ದು ಶಕ್ತಿಯಿಂದ ಕೂಡಿರುತ್ತೇವೆ. ಇದು ನಮ್ಮ ಮೌಲ್ಯವನ್ನು ಹೆಚ್ಚಿಸುತ್ತದೆ, ಹೀಗಾಗಿ ನಿಮ್ಮ ವರ್ತನೆಯ ಮೇಲು ಗಮನ ಹರಿಸಿ.

ಇದನ್ನು ಓದಿ: "Good Vibes Good Life" ಪುಸ್ತಕದ ವಿವರಣೆ

5. The law of authority.

ಕೆಲವು ಜನರು ಪೋಲಿಸ್ ರೀತಿ ಕಾಣಲು, ಇಲ್ಲ ಫ್ರಾಂಕ್ ಮಾಡಲು ಪೊಲೀಸ್ ಸಮವಸ್ತ್ರ(uniform) ಹಾಕಿಕೊಳ್ಳುತ್ತಾರೆ. ಇದು ಕೇವಲ ಕಾಮಿಡಿ ಮಾಡಲು ಮಾಡಲಾಗುತ್ತದೆ. ಆದರೆ ಈ ಅಧಿಕಾರದ(authority) ಪವರ್ ತುಂಬಾ ಶಕ್ತಿಶಾಲಿಯಾಗಿದೆ. ಒಂದು ಪ್ರಯೋಗದ ಪ್ರಕಾರ ಕೆಲವೊಂದಿಷ್ಟು ನಕಲಿ ಡಾಕ್ಟರ್ಗಳು ನರ್ಸ್ಗಳಿಗೆ ತಪ್ಪಾದ ಔಷಧಿಗಳನ್ನು ಬರೆದುಕೊಟ್ಟರು. ಆ ಔಷಧಿಗಳು ರೋಗಿಗಳಿಗೆ ಡೆಡ್ಲಿ ಆಗಿತ್ತು. ಇದು ಆ ನರ್ಸ್ಗಳಿಗೂ ತಿಳಿದಿತ್ತು. ಆದರೂ ಡಾಕ್ಟರ್ ಅದನ್ನು ಬರೆದುಕೊಟ್ಟಿದ್ದರಿಂದ, ಅವರು ಆ ರೋಗಿಗಳಿಗೆ ಔಷಧಿಯನ್ನು ನೀಡಿದರು. ಯಾವುದೇ ಒಂದು ಅಧಿಕಾರಿ ಹೇಳಿದ್ದಾರೆ, ಅವರೇ ಸರಿ ಎಂದು ನಮಗೆ ಅನಿಸುತ್ತದೆ. ಇದುವೇ ಕೆಲವೊಮ್ಮೆ ಸಮಸ್ಯೆಯನ್ನು ನೀಡುತ್ತದೆ ಮತ್ತು ಕೆಲವೊಮ್ಮೆ ನೀವು ಇದನ್ನು ಉಪಯೋಗಿಸಿಕೊಳ್ಳಬಹುದು.

ನಾವು ಪೊಲೀಸ್, ಅಗ್ನಿಶಾಮಕ, ಡಾಕ್ಟರ್ಗಳ ವೃತ್ತಿಯನ್ನು ನೋಡಿ ಗೌರವ ನೀಡುತ್ತೇವೆ. ಉದಾಹರಣೆಗೆ ನೀವು ಎಲ್ಲಿಗೋ ಹೋಗಿ ಕಾರ್ ಪಾರ್ಕಿಂಗ್ ಮಾಡಿರುತ್ತೀರಿ, ಯಾವುದಾದರು ವ್ಯಕ್ತಿ ಸಮವಸ್ತ್ರ ಹಾಕಿಕೊಂಡು ಬಂದು ಪಾರ್ಕಿಂಗ್ನ ಹಣ ಕೇಳಿದರೆ, ನೀವು ಅಧಿಕ ಯೋಚಿಸದೆ ಆತನಿಗೆ ಹಣವನ್ನು ನೀಡುತ್ತೀರಾ. ಆ ವ್ಯಕ್ತಿ ನಿಜವಾಗಿಯೂ ಅಧಿಕಾರಿ ಆಗಿದ್ದನ ಇಲ್ಲವಾ ಎಂದು ತಿಳಿಯುವುದಿಲ್ಲ.

ಈ ರೀತಿಯಲ್ಲಿ ಸಮವಸ್ತ್ರಗಳು ಅಧಿಕಾರಿಯನ್ನು ಸೃಷ್ಟಿಸುತ್ತವೆ. ಕೆಲವೊಮ್ಮೆ ಸಮವಸ್ತ್ರದ ಬದಲು ಶೀರ್ಷಿಕೆ(title) ಕೂಡ ಜನರಿಗೆ ತುಂಬಾ ಪ್ರಭಾವ ಬೀರುತ್ತದೆ. ಉದಾಹರಣೆಗೆ ಪಿ.ಎಚ್.ಡಿ, ಎಂ.ಬಿ.ಎ ರೀತಿಯ ಶೀರ್ಷಿಕೆಗಳು ಅಧಿಕಾರವನ್ನು ಸೃಷ್ಟಿಸುತ್ತವೆ. ಒಮ್ಮೆ ಎಸ್ಟೇಟ್ ಫ್ರಮ್ ಗ್ರೂಪ್ ಅವರು ಈ ನಿಯಮವನ್ನು ಅನ್ವಯಿಸಿದರು. ಅಲ್ಲಿ ಅವರ ಸ್ವಾಗತಕಾರ ಸಿಬ್ಬಂದಿಗಳಿಗೆ(receptionist staff) ಹಿರಿಯರ(senior) ಬಗ್ಗೆ ತಿಳಿಸುವ ಮೊದಲು ಅವರ ಅರ್ಹತೆಯ(qualification) ಬಗ್ಗೆ ತಿಳಿಸಿ ಎನ್ನಲಾಗಿತ್ತು. ಉದಾಹರಣೆಗೆ ಯಾವುದಾದರೂ ಪ್ರಾಪರ್ಟಿ ಮಾಡಬೇಕೆಂದಿದ್ದರೆ, ಆ ಸಿಬ್ಬಂದಿ, "ನಾನು ನಿಮಗೆ ಪೀಟರ್ ಜೊತೆ ಮಾತನಾಡಿಸುತ್ತೇನೆ. ಅವರಿಗೆ ಇದರಲ್ಲಿ 20 ವರ್ಷದ ಅನುಭವವಿದೆ,ಅವರು ನಮ್ಮ ಹೆಡ್ ಮ್ಯಾನೇಜರ್ ಆಗಿದ್ದಾರೆ" ಎಂದು ಹೇಳುತ್ತಿದ್ದರು. ಇದರಿಂದ 20% ಗೂ ಅಧಿಕರು ನೇಮಕಾತಿಗಳನ್ನು(appointments) ತೆಗೆದುಕೊಳ್ಳುತ್ತಿದ್ದರು ಮತ್ತು 50% ಗೂ ಅಧಿಕರು ಕಾಂಟ್ರಾಕ್ಟ್ಗೆ ಸಹಿ ಮಾಡುತ್ತಿದ್ದರು. ಈ ರೀತಿಯಲ್ಲಿ ನೀವು ನಿಮ್ಮ ಅದಿಕಾರದ ಮೇಲೂ ಕಾರ್ಯನಿರ್ವಹಿಸಿ, ನಿಮ್ಮ ಮೌಲ್ಯವನ್ನು ಹೆಚ್ಚಿಸಿಕೊಳ್ಳಬಹುದು.

ಇದನ್ನು ಓದಿ: "Atomic Habits" ಪುಸ್ತಕದ ವಿವರಣೆ

6. If you understand what drives people you can set strategic traps that reveal their bad sides.

what does the story of soleman teach us in kannada
strategic traps

ಬೈಬಲ್ನಲ್ಲಿ ಸುಲೇಮಾನ್(soleman) ಮೇಲೆ ಒಂದು ಆಸಕ್ತಿಕರ ಕಥೆ ಇದೆ. ಇದರಲ್ಲಿ ಎರಡು ತಾಯಂದಿರು ಅಳುತ್ತಾ ರಾಜ ಸುಲೇಮಾನ್ ಹತ್ತಿರ ಬರುತ್ತಾರೆ. ಇಬ್ಬರು ಒಂದು ಮಗುವಿಗಾಗಿ ಜಗಳವಾಡುತ್ತಿರುತ್ತಾರೆ, ಇಬ್ಬರು ಹೆಂಗಸರು "ಈ ಮಗು ನನ್ನದು" ಎನ್ನುತ್ತಾರೆ. ಒಬ್ಬ ಹೆಂಗಸು, "ಈ ಹೆಂಗಸಿಗೆ ಮಗುವೆ ಜನಿಸಿಲ್ಲ, ಹುಟ್ಟುವ ಮುಂಚೆಯೇ ಸತ್ತು ಹೋಯಿತು, ಹೀಗಾಗಿ ನನ್ನ ಮಗುವಿನ ಮೇಲೆ ಕಣ್ಣಿಟ್ಟಿದ್ದಾಳೆ" ಎನ್ನುತ್ತಾಳೆ. ಅದೇ ಇನ್ನೊಂದು ಹೆಂಗಸು, "ಆ ರೀತಿ ಇಲ್ಲ, ಈ ಮಗು ನಂದೇ, ಅವಳು ಸುಳ್ಳು ಹೇಳುತ್ತಿದ್ದಾಳೆ". ಹಿಂದಿನ ಸಮಯದಲ್ಲಿ ಇದನ್ನು ಸಾಬೀತುಪಡಿಸಲು ಡಿಎನ್ಎ ಪರೀಕ್ಷೆ(dna test) ಇರುತ್ತಿರಲಿಲ್ಲ. ಹೀಗಾಗಿ ರಾಜ ಸುಲೇಮಾನ್ಗೆ ಇದು ಯಾರ ಮಗು ಎಂದು ತೀರ್ಮಾನಿಸುವುದು ಕಷ್ಟಕರವೆನಿಸುತ್ತಿತ್ತು. ಅವರು ಸ್ವಲ್ಪ ಹೊತ್ತು ಯೋಚಿಸಿ ಒಂದು ಪರಿಹಾರವನ್ನು ತಂದರು. ಅವರು, "ನಾನು ಈ ಮಗುವನ್ನು ಎರಡು ಭಾಗವನ್ನಾಗಿ ಮಾಡುವೇ, ಅರ್ಧ ನೀನು ತೆಗೆದುಕೊ, ಇನ್ನರ್ದ ಇವಳು ತೆಗೆದುಕೊಳ್ಳಲ್ಲಿ" ಎಂದು ಹೇಳಿದರು.

ಈ ಮಾತು ಕೇಳಿ ಮೊದಲ ಹೆಂಗಸು ಜೋರಾಗಿ ಅಳಲು ಪ್ರಾರಂಭಿಸಿದಳು. ಅವಳು, "ರಾಜ ಆ ರೀತಿ ಮಾಡಬೇಡ, ಈ ಮಗುವನ್ನು ಆ ಹೆಂಗಸಿಗೆ ನೀಡು, ಮಗುವಿಗೆ ಹಾನಿ ಮಾಡಬೇಡ"ವೆನ್ನುತ್ತಾಳೆ. ಇನ್ನೊಂದು ಹೆಂಗಸು ಏನು ಹೇಳಲಿಲ್ಲ, ಅವಳ ಮುಖದಲ್ಲಿ ಒಂದು ನಗು ಇರುವುದನ್ನು ರಾಜ ಗಮನಿಸಿದರು. ಇದರಿಂದ ಮಗು ಮೊದಲು ಹೆಂಗಸಿನದ್ದು ಎಂದು ರಾಜನಿಗೆ ತಿಳಿಯಿತು. ಏಕೆಂದರೆ ನಿಜವಾದ ತಾಯಿ ತನ್ನ ಮಗುವಿಗೆ ಹಾನಿ ಮಾಡಲು ಬಯಸುವುದಿಲ್ಲ. ಈ ನ್ಯಾಯವು ಸುಲೇಮಾನ್ ಅವರ ಖ್ಯಾತಿಯನ್ನು ಹೆಚ್ಚಿಸಿತು.

ಈ ರೀತಿ ನೀವು ಕೂಡ ಒಂದು ಸಂದರ್ಭದಲ್ಲಿ ಜನರಿಗೆ ಸರಿಯಾದ ಪ್ರಶ್ನೆಯನ್ನು ಕೇಳಿದ್ದಾರೆ. ಅವರ ದೇಹ ಭಾಷೆಯನ್ನು(body language) ಅರ್ಥ ಮಾಡಿಕೊಂಡರೆ, ನೀವು ಅವರು ಏನು ಬಯಸುತ್ತಿದ್ದಾರೆ ಎಂದು ತಿಳಿಯಬಹುದು. ಇದರಿಂದ ನೀವು ಅವರನ್ನು ಕುಶಲತೆ(manipulate) ಮಾಡಿ, ನಿಮ್ಮ ಮೌಲ್ಯವನ್ನು ಹೆಚ್ಚಿಸಿಕೊಳ್ಳಬಹುದು. ಈ ಕಥೆಯಲ್ಲಿ ಇನ್ನೊಬ್ಬಳು ಕೇವಲ ಹೊಟ್ಟೆ ಉರಿದುಕೊಂಡಿದ್ದಳು. ಮೊದಲ ಹೆಂಗಸಿಗೂ ಮಗುವಿನ ಸುಖ ಸಿಗಬಾರದೆಂದು ಬಯಸಿದ್ದಳು. ಇದು ಅವಳ ಜೊತೆ ಮಾತನಾಡಿದಾಗ ರಾಜನಿಗೆ ತಿಳಿಯಿತು. ಈ ರೀತಿ ನೀವು ಮಾಡಬಹುದು, ಅವರ ದೇಹ ಭಾಷೆಯ ಬಗ್ಗೆ ತಿಳಿಯಿರಿ, ಅವರ ಆಸೆಯ ಬಗ್ಗೆ ತಿಳಿಯಿರಿ, ಇದು ನಿಮ್ಮ ಮೌಲ್ಯವನ್ನು ಹೆಚ್ಚಿಸಲು ಸಹಕರಿಸುತ್ತದೆ.

ಇದನ್ನು ಓದಿ: ಕಡಿಮೆ ಹಣದೊಂದಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಹೇಗೆ?

7. Admit when you don't know something and never blindly trust experts.

ಒಂದು ಅಧ್ಯಯನದಲ್ಲಿ ಅನೇಕರಿಗೆ, "ನಿನ್ನ ಡ್ರೈವಿಂಗ್ಸ್ ಕೌಶಲ್ಯ ಎಷ್ಟು ಚೆನ್ನಾಗಿದೆ" ಎಂದು ಕೇಳಲಾಗುತ್ತಿತ್ತು. 80% ಗೂ ಅಧಿಕರು, "ನಾವು ಸರಾಸರಿಗಿಂತ ಮೇಲಿದ್ದೇವೆ" ಎಂದು ತಿಳಿಸಿದರು. ಆದರೆ ಅದರಲ್ಲಿ ಕೇವಲ 49.9% ಜನರು ಮಾತ್ರ ಸರಾಸರಿಗಿಂತ ಮೇಲಿದ್ದರು. ಅನೇಕರಿಗೆ ಅವರು ತುಂಬಾ ಬುದ್ಧಿವಂತರೆನಿಸುತ್ತಾರೆ. ಆದರೆ ಅವರು ಅವರ ಸಾಮರ್ಥ್ಯವನ್ನು(capability) ಅವರ ನಿಜವಾದ ಸಾಮರ್ಥ್ಯಕ್ಕಿಂತ ಹೆಚ್ಚು ಎಂದು ತಿಳಿದುಕೊಂಡಿರುತ್ತಾರೆ.

ಹೀಗಾಗಿಯೇ ನೀವು ಒಬ್ಬ ವ್ಯಕ್ತಿಗೆ ಒಂದು ಪ್ರಶ್ನೆ ಕೇಳಿದಾಗ, ಅವಳಿಗೆ ಅದರ ಉತ್ತರ ಗೊತ್ತಿಲ್ಲದಿದ್ದರೂ, ಏನೋ ಯೋಚಿಸಿ ಉತ್ತರ ನೀಡುತ್ತಾಳೆ ಮತ್ತು ಅವಳಿಗೆ ಅಧಿಕ ತಿಳಿದಿದೆ ಎಂದು ತೋರಿಸುತ್ತಾಳೆ. ಇದು ಅವಳಿಗೆ ಒಳ್ಳೆಯ ಅನುಭವ(feeling) ನೀಡಬಹುದು. ಆದರೆ ಇತರರಿಗೆ ಸತ್ಯದ ಬಗ್ಗೆ ತಿಳಿದಿರುತ್ತದೆ. ಯಾರು ಜ್ಞಾನಿ ಮತ್ತು ಅಜ್ಞಾನಿ ಎಂದು ತಿಳಿದಿರುತ್ತದೆ. ಹೀಗಾಗಿ ನಿಮ್ಮ ಮೌಲ್ಯವನ್ನು ಹೆಚ್ಚಿಸಲು ನೀವು ನಿಮಗೆ ಆಸಕ್ತಿ ಇರುವ ವಿಷಯದ ಮೇಲೆ ಮಾತ್ರ ಮಾತನಾಡಿ. ಒಂದು ವೇಳೆ ಒಂದು ವಿಷಯದ ಬಗ್ಗೆ ಗೊತ್ತಿಲ್ಲದಿದ್ದರೆ, ನಿಮಗೆ ಅದು ತಿಳಿದಿಲ್ಲವೆಂದು ಒಪ್ಪಿಕೊಳ್ಳಿ. ಇದು ನೀವು ಎಷ್ಟು ಪ್ರಾಮಾಣಿಕ ಎಂದು ತೋರಿಸುತ್ತದೆ ಮತ್ತು ಜನರಲ್ಲಿ ನಿಮ್ಮ ಮೌಲ್ಯವನ್ನು ಹೆಚ್ಚಿಸುತ್ತದೆ.

8. The law of defensiveness.

ನಮಗೆಲ್ಲರಿಗೂ ಸ್ವತಂತ್ರವಾಗಿರುವುದು ತುಂಬಾ ಇಷ್ಟ. ಸ್ವತಂತ್ರ(free) ಎಂದರೆ, ಕೇವಲ ಹೊರಗಡೆ ನಡೆದಾಡುವುದಲ್ಲ, ಬದಲಿಕೆ ನಮ್ಮ ಐಡಿಯಾಗಳಿಗೆ ಸಂಬಂಧಿಸಿದ ವಿಷಯದ ಬಗ್ಗೆ ಮಾತನಾಡುವುದು, ಸ್ವತಂತ್ರವಾಗಿದೆ. ನೀವು ಕೇವಲ ಜನರ ಐಡಿಯಾಗಳನ್ನು ಚಾಲೆಂಜ್ ಮಾಡಿದ್ದಾರೆ, ರಕ್ಷಣಾತ್ಮಕ(defensive) ಆಗುವುದನ್ನು ನೋಡಿರುತ್ತೀರಾ. ಅಮೆರಿಕದ 36ನೇ ಅಧ್ಯಕ್ಷರಾದ ಲಿಂಡನ್ ಜಾನ್ಸನ್(lyndon johnson) ಅವರು ಅನೇಕರಿಗೆ ಪ್ರಭಾವ ಬೀರಿ, ಅಧಿಕಾರಕ್ಕೆ ಬಂದಿದ್ದರು. ಇದು ಏಕೆಂದರೆ ಅವರು ಯಾವತ್ತು ಇತರರ ಅಭಿಪ್ರಾಯವನ್ನು ಬದಲಿಸಲು ಬಯಸುತ್ತಿರಲಿಲ್ಲ. ಬದಲಿಗೆ ಅವರು ಅವರಿಗಿಂತ ಇತರರ ಮೇಲೆ ಗಮನ ಹರಿಸುತ್ತಿದ್ದರು. ಇತರರ ಯೋಚನೆ ಮತ್ತು ಐಡಿಯಾಗಳಿಗೆ ಗೌರವ ನೀಡುತ್ತಿದ್ದರು. ಇದರಿಂದ ಗರಿಷ್ಠ ಮಟ್ಟದ ಜನರು ಅವರನ್ನು ಇಷ್ಟಪಡುತ್ತಿದ್ದರು. ನೀವು ಇತರರು ನಿಮಗೆ ಗೌರವ ನೀಡಬೇಕೆಂದಿದ್ದಾರೆ, ಇತರರ ಯೋಚನೆ ಮತ್ತು ಐಡಿಯಾಗಳನ್ನು ಪ್ರಶಂಸಿಸಿ. ಅದು ಬಿಟ್ಟು ನೀವು ಅದಕ್ಕೆ ಅಗೌರವ ನೀಡಿದ್ದಾರೆ, ಅವರು ರಕ್ಷಣಾತ್ಮಕವಾಗಿ, ನಿಮಗೆ ಮೌಲ್ಯವನ್ನು ನೀಡುವುದಿಲ್ಲ.

ಇದನ್ನು ಓದಿ: ವೀರ್ಯಗಳ ಸಂಖ್ಯೆಯನ್ನು ಸ್ವಾಭಾವಿಕವಾಗಿ ಹೆಚ್ಚಿಸಿಕೊಳ್ಳುವುದು ಹೇಗೆ?

9. Make your accomplishment seem effortless.

what is the psychology  behind accomplishment in kannada
accomplishments

ಅಮೆರಿಕದ ಪ್ರಸಿದ್ಧ ಜಾದೂಗಾರನಾದ(magician) ಹ್ಯಾರಿ ಹೌದಿನಿ(harry houdini) ತುಂಬಾ ಪ್ರಸಿದ್ಧರಾಗಲು ಕಾರಣವೇನು? ಇದರ ಕಾರಣವೆಂದರೆ ಅವರು ಎಲ್ಲ ಸಾಹಸವನ್ನು(stunt) ಎಷ್ಟು ಸುಲಭವಾಗಿ ಮಾಡುತ್ತಿದ್ದಾರೆಂದರೆ, ಯಾವುದೇ ಚಿಕ್ಕ ಮಗು ಕೂಡ ಅದನ್ನು ಮಾಡಬಹುದಿತು. ಅವರು ಪ್ರಯತ್ನವಿಲ್ಲದ(effortless) ಮ್ಯಾಜಿಕ್ ಮಾಡುವುದೇ ಜನರನ್ನು ಆಕರ್ಷಿಸಿತು. ಇದೇ ರೀತಿ ನೀವು ಕೂಡ ಯಾವುದೇ ಕೆಲಸವನ್ನು ಪ್ರಯತ್ನವಿಲ್ಲದೆ ಮಾಡುತ್ತಿದ್ದಾರೆ, ಇದು ನಿಮ್ಮ ಮೌಲ್ಯವನ್ನು ಹೆಚ್ಚಿಸಲು ಸಹಕರಿಸುತ್ತದೆ. ಯಾವುದೇ ಕೆಲಸವನ್ನು ಪ್ರಯತ್ನವಿಲ್ಲದೆ ಮಾಡಲು ನೀವು ಅಧಿಕ ಕಷ್ಟ ಪಡಬೇಕು. ಒಂದೇ ಕೆಲಸವನ್ನು ನೀವು ಪದೇ ಪದೇ ಮಾಡುತ್ತಿದ್ದರೆ, ಆ ಕೆಲಸವು ನಿಮಗೆ ಸುಲಭವಾಗುತ್ತದೆ. ಹೀಗಾಗಿಯೇ ಕೌಶಲ್ಯ(skills) ಇರುವವರನ್ನು ಇತರರು ಗೌರವದಿಂದ ನೋಡುತ್ತಾರೆ.

10. Conceal your intention.

ನಿಮ್ಮ ಉದ್ದೇಶ, ಮನೆಯ ಸಮಸ್ಯೆ ಮತ್ತು ಇತರ ಯಾವುದೇ ವಿಷಯಗಳನ್ನು ನೀವು ಹೊರಗೆ ಹೋಗಿ ಹೇಳಬೇಡಿ, ಇದನ್ನು ಚಾಣಕ್ಯ ಕೂಡ ತಿಳಿಸಿದ್ದಾರೆ. ನಿಮ್ಮ ಗುರಿಯ ಬಗ್ಗೆ ಯಾರಿಗೂ ತಿಳಿಸಬೇಡಿ. ಏಕೆಂದರೆ ಜನರು ಅದರ ಬಗ್ಗೆ ನಿಮ್ಮ ಮುಂದೆ ಮಾತನಾಡದಿದ್ದರೂ ಹಿಂದೆ ಅದರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರುತ್ತಾರೆ. ಇದರಿಂದ ನಿಮ್ಮ ಮೌಲ್ಯವು ಕುಗ್ಗಬಹುದು. ಹೀಗಾಗಿ ನಿಮ್ಮ ಉದ್ದೇಶವನ್ನು ಯಾರಿಗಾದರೂ ತಿಳಿಸಲೇಬೇಕೆಂದಿದ್ದರೆ ನೀವು ನಂಬುವ ವ್ಯಕ್ತಿಗೆ ಮಾತ್ರ ತಿಳಿಸಿ. ನಿಮಗೆ ನಂಬಿಕೆ ಇಲ್ಲದವರಿಗೆ ತಿಳಿಸಲೇಬೇಡಿ.

ಯಾರಿಗಾದರೂ ಅವರ ಜೀವನದಲ್ಲಿ ಕೆಟ್ಟದಾದಾಗ, ಅವರ ಗುರಿಯನ್ನು ಪ್ರಚಾರ ಮಾಡುತ್ತಾ ಬರುತ್ತಾರೆ. ಇದರ ನಂತರ ಕೆಲಸ ಆಗುತ್ತದೆಯೋ ಇಲ್ಲವೋ ತಿಳಿದಿಲ್ಲ, ಆದರೆ ಜನರಿಗೆ ಅದರ ಬಗ್ಗೆ ಮಾತನಾಡಲು ಅಧಿಕ ವಿಷಯ ಸಿಗುತ್ತದೆ. ಕೆಲವೊಮ್ಮೆ ಕೆಲಸವಾಗುವುದಿಲ್ಲ. ಹೀಗಾಗಿ ನಿಮ್ಮ ಉದ್ದೇಶವನ್ನು ನಿಮ್ಮ ಹತ್ತಿರ ಮಾತ್ರ ಇಟ್ಟುಕೊಳ್ಳಿ ವಿಶೇಷವಾಗಿ ಪ್ರಾರಂಭದಲ್ಲಿ ನೀವು ಇದನ್ನು ಅನುಸರಿಸಲೇಬೇಕು.

ಇದನ್ನು ಓದಿ: ನಿಮ್ಮನ್ನು ಚುರುಕಾಗಿಸಲು 13 ದಿನನಿತ್ಯದ ಅಭ್ಯಾಸಗಳು

11. People look for social proof, give them.

ಆನ್ಲೈನ್ನಲ್ಲಿ ಎರಡು ಅದೇ ವಸ್ತುಗಳನ್ನು ಮಾರಲಾಗುತ್ತಿದೆ. ವಸ್ತು "ಎ"ಗೆ ಸಾವಿರ ಜನರಿಂದ 4 ಸ್ಟಾರ್ ರೇಟಿಂಗ್ ದೊರೆತಿದೆ. ವಸ್ತು "ಬಿ"ಗೆ ಎರಡು ಜನರಿಂದ 3 ಸ್ಟಾರ್ ರೇಟಿಂಗ್ ದೊರೆತಿದೆ. ಇದರಲ್ಲಿ ನೀವು ಯಾರ ಬಳಿ ವಸ್ತುಗಳನ್ನು ಖರೀದಿಸುತ್ತೀರಾ. ಇದಕ್ಕೆ ಉತ್ತರ ಹೈ ರೇಟಿಂಗ್ ಇರುವವರ ಹತ್ತಿರ ಎನ್ನಬಹುದು. ನಾವು ಮನುಷ್ಯರು ಹಿಂಡಿನ ನಡವಳಿಕೆಯನ್ನು(heard behavior) ಫಾಲೋ ಮಾಡುತ್ತೇವೆ. ನಮಗೆ ಏನು ಮಾಡಬೇಕೆಂದು ತಿಳಿಯದಿದ್ದಾಗ, ಗರಿಷ್ಠ ಜನರು ಏನು ಮಾಡುತ್ತಿದ್ದಾರೆ ಎಂದು ನೋಡುತ್ತೇವೆ ಮತ್ತು ಅದನ್ನೇ ಪುನರವರ್ತಿಸುತ್ತೇವೆ. ಏಕೆಂದರೆ ಗರಿಷ್ಠ ಮಟ್ಟದ ಜನರು ಅದನ್ನು ಮಾಡುತ್ತಿರುವುದರಿಂದ ಅದು ಸರಿಯೇ ಆಗಿರುತ್ತದೆ. ಆದರೆ ಕೆಲವೊಮ್ಮೆ ಅದು ಸರಿ ಆಗಿರುವುದಿಲ್ಲ.

ಇದನ್ನು ನಿಮ್ಮ ಮೌಲ್ಯವನ್ನು ಹೆಚ್ಚಿಸಲು ಹೇಗೆ ಬಳಸಬಹುದು? ನೀವು ಯಾವುದೇ ವ್ಯಾಪಾರ ಇಲ್ಲ ಕೆಲಸ ಮಾಡುತ್ತಿದ್ದಾರೆ, ಜನರಿಗೆ ಸಾಮಾಜಿಕ ಪುರಾವೆಯನ್ನು ತೋರಿಸಿ. ವ್ಯಾಪಾರದಲ್ಲಿ ನಿಮ್ಮ ಖುಷಿ ಗ್ರಾಹಕರ ಬಗ್ಗೆ ತಿಳಿಸಬಹುದು. ನೀವು ಯಾವುದೇ ಕೆಲಸಕ್ಕೆ ಅಪ್ಲೈ ಮಾಡುತ್ತಿದ್ದರು, ಸಾಮಾಜಿಕ ಪುರಾವೆಯನ್ನು ತೋರಿಸಬಹುದು.

12. Physical attractiveness.

"ನಾವು ಜನರ ಮನಸ್ಸನ್ನು ನೋಡಬೇಕು ಹೊರತು ಮುಖವನ್ನಲ್ಲ" ಎಂದು ನೀವು ಕೇಳಿರುತ್ತೀರಾ. ಆದರೆ ನಿಮಗೆ ಸತ್ಯ ತಿಳಿದಿರುತ್ತದೆ. ನಾವು ಯಾವಾಗಲೂ ಜನರ ಮುಖ ನೋಡಿ ಬೆಲೆ ನೀಡುತ್ತೇವೆ. ಒಂದು ಅಧ್ಯಯನದಲ್ಲಿ ದೊಡ್ಡ ದೊಡ್ಡ ಕಲಾವಿದರಿಗೆ(artist) ಹರಿದಿರುವ ಬಟ್ಟೆಗಳನ್ನು ಹಾಕಿ, ರಸ್ತೆಯಲ್ಲಿ ಪ್ರದರ್ಶನ ನೀಡಿಸಲಾಗುತ್ತಿತ್ತು. ಇದರಲ್ಲಿ ಕೆಲವು ಜನರ ಮಾತ್ರ ಅವರ ಮೇಲೆ ಗಮನ ಹರಿಸುತ್ತಿದ್ದರು. ಅದೇ ಆ ಕಲಾವಿದರನ್ನು ವೇದಿಕೆಯ ಮೇಲೆ ಪ್ರದರ್ಶನ ಮಾಡುವುದನ್ನು ನೋಡಿದಾಗ ಜನರು ಸಾವಿರ ರೂಪಾಯಿ ಕೊಟ್ಟು ಅವರ ಪ್ರದರ್ಶನವನ್ನು ನೋಡುತ್ತಾರೆ. ಇದು ಏನು ಹೇಳುತ್ತದೆ ಎಂದರೆ "ಯಾವುದೇ ಕಾಣುತ್ತದೆಯೋ, ಅದುವೇ ಮಾರಾಟವಾಗುತ್ತದೆ".

ಹೀಗಾಗಿ ಜನರು ನಿಮಗೆ ಮೌಲ್ಯ ನೀಡಬೇಕೆಂದರೆ ನಿಮ್ಮ ದೇಹ ಭಾಷೆಯು ಚೆನ್ನಾಗಿರಬೇಕು. ನಿಮ್ಮ ಡ್ರೆಸ್ಸಿಂಗ್ ಸೆನ್ಸ್, ಫಿಸಿಕಲ್ ಲುಕ್ ನಿಮ್ಮ ಮೌಲ್ಯದ ಮೇಲೆ ಅಧಿಕ ಪರಿಣಾಮವನ್ನು ಬೀರುತ್ತದೆ. ಇದರ ಅರ್ಥ ನೀವು ಲಕ್ಷಗಟ್ಟಲೆ ಖರ್ಚು ಮಾಡಿ ಎಂದು ಹೇಳುತ್ತಿಲ್ಲ. ಬದಲಿಗೆ ಅಚ್ಚುಕಟ್ಟಾಗಿ ಇರಿ. ನಿಮ್ಮ ಬಟ್ಟೆಗಳನ್ನು ಇಸ್ತ್ರಿ ಮಾಡಿ ಧರಿಸಿ, ನಿಮ್ಮ ಕೂದಲು ಸರಿಯಾಗಿರಲಿ, ಇದು ನಿಮ್ಮ ಮೌಲ್ಯವನ್ನು ಹೆಚ್ಚಿಸಲು ಸಹಕರಿಸುತ್ತದೆ.

ಇದನ್ನು ಓದಿ: ಅನ್‌ಫಕ್ ಯುವರ್ಸೆಲ್ಫ್ - ನಿಮ್ಮ ಬದುಕನ್ನು ಬದಲಾಯಿಸುವ ಪುಸ್ತಕ

13. Similarity.

what does similarity mean in psychology in kannada
similarities

ನಾವು ಮನುಷ್ಯರಿಗೆ ನಮ್ಮ ತರವೇ ಇರುವವರನ್ನು ಕಂಡರೆ ತುಂಬಾ ಇಷ್ಟವಾಗುತ್ತದೆ. ನೀವು ಇಬ್ಬರು ಬೇರೆ ಬೇರೆ ರಾಜಕೀಯ ದೃಷ್ಟಿಕೋನ ಇರುವವರನ್ನು ಒಟ್ಟಿಗೆ ನಿಲ್ಲಿಸಿದ್ದಾರೆ. ಅಲ್ಲಿ ಅವರು ವೈರಿಗಳ ಆಗುವ ಅವಕಾಶ ತುಂಬಾ ಇದೆ. ಅದೇ ಎರಡು ಸಮನಾದ ದೃಷ್ಟಿಕೋನ ಇರುವವರನ್ನು ಒಟ್ಟಿಗೆ ನಿಲ್ಲಿಸಿದ್ದಾರೆ. ಅವರಿಬ್ಬರ ಹತ್ತಿರ ಒಂದು ರೀತಿ ಸಂಪರ್ಕ ಆಗುತ್ತದೆ. ಹೀಗೆ ನೀವು ಒಂದು ಗುಂಪಿನಲ್ಲಿ ನಿಮ್ಮ ಮೌಲ್ಯವನ್ನು ಹೆಚ್ಚಿಸಲು ಬಯಸಿದ್ದಾರೆ, ನೀವು ಆ ಗುಂಪು ಮತ್ತು ನಿಮ್ಮಲ್ಲಿರುವ ಹೋಲಿಕೆಗಳನ್ನು ಹುಡುಕಿ ಮತ್ತು ಅದರ ಮೇಲೆ ಮಾತನಾಡಿ. ನೀವು ಈ ಹೋಲಿಕೆಗಳ ಬಗ್ಗೆ ಮಾತನಾಡಿದಷ್ಟು ನಿಮ್ಮ ಮಧ್ಯೆ ಸಂಪರ್ಕ ಆಗುತ್ತದೆ. ನಾವು ನಮ್ಮ ದೇಶದಲ್ಲಿ ಜಗಳ ಕಡಿಮೆ ಮಾಡಬೇಕೆಂದಿದ್ದರು, ಹೋಲಿಕೆಗಳನ್ನು ನೋಡಬೇಕು. ಹೋಲಿಕೆ ಏನೆಂದರೆ ನಾವು ಬದುಕಿನಲ್ಲಿ ಮುಂದುವರೆಯುವುದಾಗಿದೆ.

14. Lesson of complements.

ಕೆಲವೊಮ್ಮೆ ನೀವು ತಪ್ಪಾಗಿ ಪ್ರಶಂಸುತ್ತಿದ್ದರು ಮುಂದಿರುವ ವ್ಯಕ್ತಿಯು ಖುಷಿಯಾಗುತ್ತಾನೆ. ನೀವು ತಪ್ಪಾಗಿ ಪ್ರಶಂಶಿಸಿದ್ದೀರಿ ಎಂದು ಹೇಳಿದರು, ಆ ವ್ಯಕ್ತಿಯ ಮುಖದಲ್ಲಿ ಆ ಖುಷಿ ಇರುತ್ತದೆ. ಜನರಿಗೆ ಅಭಿನಂದನೆಯೆಂದರೆ ತುಂಬಾ ಇಷ್ಟವಾಗುತ್ತದೆ. ಜನರು ಅವರನ್ನು ಸೂಚನೆ(notice) ನೀಡಲಿ ಎಂದು ಬಯಸುತ್ತಾರೆ, ಅವರಿಗೆ ಗೌರವ ನೀಡಲಿ ಎಂದು ಬಯಸುತ್ತಾರೆ. ಅವರ ಬಗ್ಗೆ ಒಂದು ಒಳ್ಳೆಯ ವಿಷಯ ಹೇಳಲಿ ಎಂದು ಬಯಸುತ್ತಾರೆ. ನೀವು ಈ ರೀತಿ ಒಬ್ಬ ವ್ಯಕ್ತಿಗೆ ನಿಜವಾಗಿ ಪ್ರಶಂಸಿದರೆ, ಅವನು ಖುಷಿಯಾಗುತ್ತಾನೆ ಮತ್ತು ನಿಮ್ಮ ಮೌಲ್ಯಯು ಹೆಚ್ಚುತ್ತದೆ.

ಇದನ್ನು ಓದಿ: ಕಡಿಮೆ ಸಮಯದಲ್ಲಿ ಹೆಚ್ಚು ಅಧ್ಯಯನ ಮಾಡುವುದು ಹೇಗೆ?

15. The law of contacts.

what is psychological contacts theory in kannada
law of contacts

ಯಾರು ಅತಿ ಹೆಚ್ಚು ಸಂಪರ್ಕಗಳನ್ನು ಹೊಂದಿರುತ್ತಾರೋ ಜನರ ಅವರಿಗೆ ಅಷ್ಟೇ ಗೌರವವನ್ನು ನೀಡುತ್ತಾರೆ ಎಂದು ನೀವು ಕೇಳಿರುತ್ತೀರಾ. ನಾವು ಮನುಷ್ಯರು ಸಾಮಾಜಿಕ ಜೀವಿಗಳಾಗಿದ್ದೇವೆ(social creature). ಉದಾಹರಣೆಗೆ ಒಬ್ಬ ವ್ಯಕ್ತಿಗೆ ಒಬ್ಬನೇ ಆತ್ಮೀಯ ಗೆಳೆಯನಿದ್ದಾರೆ, ಆತ ಅಷ್ಟು ಶ್ರೀಮಂತ ಇರುವುದಿಲ್ಲ. ಈ ವ್ಯಕ್ತಿ ನಿಮಗೆ ಮೌಲ್ಯಯುತವೆನ್ನಿಸುತ್ತಾನೆಯೇ ಅಥವಾ ಇನ್ನೊಂದು ಕಥೆಯ ವ್ಯಕ್ತಿಗೆ, ದೊಡ್ಡ ದೊಡ್ಡ ವ್ಯಕ್ತಿಗಳ ಬಗ್ಗೆ ತಿಳಿದಿದೆ. ಈಗ ನೀವೇ ಹೇಳಿ ಇಬ್ಬರಲ್ಲಿ ಯಾರಿಗೆ ಅತೀ ಹೆಚ್ಚು ಮೌಲ್ಯವನ್ನು ನೀಡುತ್ತೀರಾ? ಉತ್ತರವನ್ನು ಕಮೆಂಟ್ ಮಾಡಿ.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Display Ads

Robert Kiyosaki all Books Summary

ರಾಬರ್ಟ್‌ ಕಿಯೋಸಾಕಿ ಅವರು ಬರೆದಿರುವ Rich dad poor dad ಮತ್ತು ಇತರ ಪುಸ್ತಕಗಳ ಬಗ್ಗೆ ಮಾಹಿತಿಯನ್ನು ತಿಳಿಯಲು ಈಗಲೇ ಲೇಖನವನ್ನು ಓದಿ.

Similar category

Explore all our Posts by categories.

Info Mind Ad

Poor Charlie's Almanack Book Summary

ಹೂಡಿಕೆಯನ್ನು ತೆಗೆದುಕೊಳ್ಳುವ ಮೊದಲು ಯಾವ ರೀತಿಯ ಆಲೋಚನೆ ಪ್ರಕ್ರಿಯೆ ಇರಬೇಕು ಎಂಬುದನ್ನು ಈಗಲೇ ಓದಿ.

commenters

sushma • March 4th,2023

ನಿಜವಾದ ಸಂಗತಿಗಳು , ಅತ್ಯದ್ಭುತ 👏👏