Watch Video
ಅಮೆರಿಕಾದಲ್ಲಿ ಕೆಳವರ್ಗದ(lower class) ಜನರು ಪ್ರತಿ ವರ್ಷ 400$ ಅಂದರೆ 30,000 ರೂ ಅನ್ನು ಲಾಟರಿ ಟಿಕೆಟ್ಗಾಗಿ ಖರ್ಚು ಮಾಡುತ್ತಾರೆ ಮತ್ತು ವರ್ಷದ ಯಾವುದೇ ಅವಧಿಯಲ್ಲಾದರೂ ಅವರ ಹತ್ತಿರ ಉಳಿತಾಯ(savings) ಇರುವುದಿಲ್ಲ. ಬದಲಿಗೆ ಇದರಲ್ಲಿ ಅರ್ಧ ಜನಗಳ ಹತ್ತಿರ ತುರ್ತುಪರಿಸ್ಥತಿಗೆ(emergency) 400$ ಕೂಡ ಉಳಿದಿರುವುದಿಲ್ಲ. ನೀವು ಜನರು ಲಾಟರಿ ಟಿಕೆಟ್ಗೆ ಖರ್ಚು ಮಾಡುವ ಬದಲು ಏಕೆ ಉಳಿಸುತ್ತಿಲ್ಲ ಎಂದು ಕೇಳಬಹುದು. ಇದು ಏಕೆಂದರೆ ಅವರ ಬದುಕನ್ನು ಆ ಲಾಟರಿ ಮಾತ್ರ ಬದಲಾಯಿಸುತ್ತದೆ ಎಂದು ನಂಬಿರುತ್ತಾರೆ ಮತ್ತು ಅವರು ಕಷ್ಟಪಟ್ಟು ಕೆಲಸ ಮಾಡಿ ಶ್ರೀಮಂತರಾಗಲು ಸಾಧ್ಯವಿಲ್ಲವೆಂದುಕೊಂಡಿದ್ದಾರೆ. ಅವರ ಪ್ರಕಾರ ಶ್ರೀಮಂತರಾಗಲು ಅದೃಷ್ಟ(lucky) ಇರಬೇಕು. ಆ ಲಾಟರಿ ಟಿಕೆಟ್ ಅವರಿಗೆ ಕನಸು ಮತ್ತು ನಂಬಿಕೆಯನ್ನು ನೀಡುತ್ತದೆ. ನಿಮ್ಮಲ್ಲಿ ಅನೇಕರು ಇದು ಎಷ್ಟು ವಿಚಿತ್ರ ಯೋಚನೆ ಎನ್ನಬಹುದು. ಏಕೆಂದರೆ ಲಾಟರಿ ಗೆಲ್ಲುವ ಅವಕಾಶ ತುಂಬಾ ಕಡಿಮೆ ಇದೆ. ಅದರಲ್ಲಿ ಕೋಟಿಯಲ್ಲಿ ಒಬ್ಬ ಗೆಲ್ಲಬಹುದು.
ನೀವು ಈ ರೀತಿಯ ಜನಗಳಿಗೆ ಇದರ ಬಗ್ಗೆ ತಿಳಿಸಲು ಹೋದರೆ, ಅವರೇ ನಿಮಗೆ ತಿಳಿಸಲು ಪ್ರಾರಂಭಿಸುತ್ತಾರೆ ಮತ್ತು ನೀವೇ ತಪ್ಪು ಎನ್ನುವಂತೆ ಮಾಡುತ್ತಾರೆ. ಹೀಗಾಗಿ ನಮಗೆ ಈ ಪುಸ್ತಕದಿಂದ ಅನೇಕ ವಿಷಯಗಳು ತಿಳಿಯುತ್ತವೆ. ಅಂದರೆ ನಾವು ತಾರ್ಕಿಕವಾಗಿ(logical) ಇರುವ ಬದಲು ಮನೋವ್ಯೆಜ್ಞಾನಿಕವಾಗಿದ್ದೇವೆ(psychological). ಏಕೆಂದರೆ ಇಂದು ಎಲ್ಲರೂ ಅವರ ಬದುಕಿನಲ್ಲಿ ಪರಿಪೂರ್ಣ ಆಯ್ಕೆಯನ್ನು ಮಾಡುತ್ತಿದ್ದೇವೆ ಎಂದು ಭಾವಿಸುತ್ತಾರೆ. ಆದರೆ ಸ್ವಲ್ಪ ವರ್ಷ ಕಳೆದ ನಂತರ ಹಿಂತಿರುಗಿ ನೋಡಿದಾಗ, "ನಾನು ಆ ರೀತಿ ಮಾಡಿದರೆ ಬದುಕು ಬೇರೆ ರೀತಿ ಇರುತ್ತಿತ್ತು" ಎಂದು ಯೋಚಿಸುತ್ತಾರೆ.
ಆರ್ಥಿಕ ನಿರ್ಧಾರ ಬಂದಾಗ ಅಮೆರಿಕದ ಕೆಳವರ್ಗ, ಭಾರತದ ಮಧ್ಯಮ ವರ್ಗ(middle class), ಜಗತ್ತಿನ ಶ್ರೀಮಂತ ವ್ಯಕ್ತಿ ಅಥವಾ ನಾವೆಲ್ಲರೂ ಅನೇಕ ನಿರ್ಧಾರಗಳನ್ನು ಭಾವನೆಗಳ(emotions) ಮೇಲೆ ತೆಗೆದುಕೊಳ್ಳುತ್ತೇವೆ, ಅಂದರೆ ಭಯ, ಆಸೆಯಿಂದಾಗಿದೆ. ನಂತರ ಅದನ್ನು ತರ್ಕದ(logic) ಜೊತೆ ಸಮರ್ಥಿಸಿಕೊಳ್ಳುತ್ತೇವೆ. ಈ ರೀತಿ ಏಕೆ ಆಗುತ್ತದೆ ಎಂದರೆ ನಮಗೆ ಕೆಲವು ವಿಷಯಗಳು ನಂತರ ತಿಳಿಯುತ್ತದೆ, ಅವುಗಳು ನಮಗೆ ಮುಂಚೆಯೇ ತಿಳಿದಿರಬೇಕಿತ್ತು. ಹೀಗಾಗಿ ನಾವು ಇಂದು ಈ ಪುಸ್ತಕದಿಂದ ಮನೋವ್ಯೆಜ್ಞಾನಿಕ ಮತ್ತು ಮನಸ್ಥಿತಿಗೆ ಸಂಬಂಧಿಸಿರುವ ವಿಷಯಗಳನ್ನು ತಿಳಿಸುತ್ತೇವೆ. ಇದರಿಂದ ನಾವು ಗೊತ್ತಿಲ್ಲದ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಹೀಗಾಗಿ ನೀವು ಇವುಗಳನ್ನು ತಿಳಿದುಕೊಂಡು ಬೇಗನೆ ಆರ್ಥಿಕವಾಗಿ ಬಿಡುಗಡೆಯಾಗಬಹುದು.
ಇದನ್ನು ಓದಿ: ಥಿಂಕ್ ಮತ್ತು ಗ್ರೋ ರಿಚ್ ಪುಸ್ತಕದ ಸಾರಾಂಶಒಂದು ಕಡೆ ಒಳ್ಳೆಯ ಕಾರು, ಒಳ್ಳೆಯ ಮನೆ ಇರುತ್ತದೆ. ಇವೆಲ್ಲ ನಮಗೆ ಕಾಣುತ್ತಿದೆ. ಆದರೆ ಇನ್ನೊಂದು ಕಡೆ ಆ ಮನೆಯ, ಆ ಕಾರಿನ ಸಾಲದ ಇಎಂಐ(emi), ಆ ವ್ಯಕ್ತಿಯ ಕೆಲಸದ ಒತ್ತಡ(stress) ಮತ್ತು ಅದರಿಂದ ಮನೆಯಲ್ಲಿ ಪ್ರತಿದಿನ ನಡೆಯುವ ಜಗಳ, ಇವೆಲ್ಲ ನಮಗೆ ಕಾಣುವುದಿಲ್ಲ. ಹೀಗಾಗಿ ನಮಗೆ ಕಾಣುವುದೆಲ್ಲ ಸಂಪೂರ್ಣ ಚಿತ್ರವಾಗಿರುವುದಿಲ್ಲ. ಆದರೆ ಇದು ನಾವು ತಪ್ಪಾಗಿ ಯೋಚಿಸುವಂತೆ ಮಾಡುತ್ತದೆ.
ನಾವು ಯಾವುದಾದರೂ ಶ್ರೀಮಂತ ವ್ಯಕ್ತಿ ಅವನ ಕಾರಿನಲ್ಲಿ ರಜೆಗೆ(vocation) ಹೋದರೆ, "ನನ್ನ ಹತ್ತಿರವೂ ಆ ರೀತಿಯ ಕಾರು ಇರಬೇಕಿತ್ತು" ಎಂದು ಯೋಚಿಸುತ್ತೇವೆ. ಆದರೆ ನಾವು ಆ ವ್ಯಕ್ತಿಗಳ ಜೀವನ ನಿಜವಾಗಿಯೂ ಮಜಾವಾಗಿದ್ದೇನೆ ಎಂದು ನೋಡುವುದಿಲ್ಲ. ನಾವು ಕೇವಲ ಅವರ ಬದುಕಿನ ದುಬಾರಿ(flasy) ವಸ್ತುಗಳ ಮೇಲೆ ಗಮನಹರಿಸುತ್ತೇವೆ.
ಅವನು ಜನರಿಂದ ಗೌರವಕ್ಕಾಗಿ ಕಾರನ್ನು ಖರೀದಿಸುತ್ತಾನೆ. ಆದರೆ ಜನರು ಅವನ ಕಾರನ್ನು ಗೌರವಿಸುತ್ತಿದ್ದಾರೆ. ಏಕೆಂದರೆ ನಮ್ಮ ಮುಂದೆ ಯಾವುದಾದರೂ ಕಾರು ಹೋದರೆ, "ನಾವು ಎಂತಹ ಕಾರು" ಎನ್ನುತ್ತೇವೆ ಹೊರತು "ಎಂತಹ ವ್ಯಕ್ತಿ" ಎನ್ನುವುದಿಲ್ಲ.
ಹೀಗಾಗಿ ಶ್ರೀಮಂತರೆಂದರೆ ಏನನ್ನಾದರೂ ತೋರಿಸುವುದಾಗಿದೆ ಎಂಬ ದೃಷ್ಟಿಕೋನ(perspective) ಜನರಲ್ಲಿ ಬಂದಿದೆ. ಆದರೆ ವಾಸ್ತವವಾಗಿ ನಿಜವಾದ ಸಂಪತ್ತು(wealth) ಎಂದರೆ ನಾವು ಸ್ವತಂತ್ರವಾಗಿ(independent) ಜೀವನ ನಡೆಸುವಂತೆ ಮಾಡುವುದಾಗಿದೆ. ಏಕೆಂದರೆ ನಾವು ನಮ್ಮ ಹಣದಿಂದ ಖರೀದಿಸಬಹುದಾದ ಪ್ರಮುಖ ಮತ್ತು ದುಬಾರಿ ವಸ್ತುವೆಂದರೆ ನಮ್ಮ ಸಮಯವಾಗಿದೆ(time).
ನಿಮ್ಮ ಹತ್ತಿರ ಜಗತ್ತಿನಲ್ಲಿರುವಷ್ಟು ಹಣವಿದೆ, ಆದರೆ ನೀವು ಇಷ್ಟಪಡದ ಕೆಲಸದಿಂದ ಸಮಯವಿಲ್ಲದ ಕಾರಣ ನಿಮಗೆ ಅದನ್ನು ಆನಂದಿಸಲು ಸಾಧ್ಯವಾಗಿಲ್ಲವೆಂದರೆ ನೀವು ಶ್ರೀಮಂತರಾಗಿ ಏನು ಪ್ರಯೋಜನವಾಗಿದೆ?
ಹೀಗಾಗಿ ಪುಸ್ತಕದ ಲೇಖಕರು, ಇತರರಿಗೆ ತೋರಿಸಲು ಬದುಕುವುದು ಬಡವರಾಗಲು ಇರುವ ಸುಲಭ ಮಾರ್ಗವಾಗಿದೆ ಎಂದು ಹೇಳುತ್ತಾರೆ. ನೀವು ಯಾವುದೋ ವ್ಯಕ್ತಿಯ ಹತ್ತಿರ 50 ಲಕ್ಷ ಕಾರು ಇರುವುದನ್ನು ನೋಡುತ್ತೀರಿ. ಆದರೆ ಇದರಿಂದ ಆತನ ಹತ್ತಿರ ಅಧಿಕ ಸಂಪತ್ತು ಇದೆಯೋ ಅಥವಾ ಇಲ್ಲವೇ ಎಂದು ತಿಳಿಯುವುದಿಲ್ಲ. ಆದರೆ ಅವನ ಧನದಿಂದ 50 ಲಕ್ಷ ಕಡಿಮೆ ಆಗಿದೆ ಎಂಬುದು ನಮಗೆ ತಿಳಿಯುತ್ತದೆ.
ಇದನ್ನು ಓದಿ: ಷೇರುಗಳನ್ನು ಖರೀದಿಸದೆ ಶ್ರೀಮಂತರಾಗಿ(Index Fund)ನೀವು 12 ಲಕ್ಷದ ಕಾರನ್ನು ಖರೀದಿಸಲು ಬಯಸಿದ್ದೀರಿ ಎಂದುಕೊಳ್ಳಿ. ಆಗಿದ್ದರೆ ನಿಮ್ಮ ಹತ್ತಿರ 3 ಆಯ್ಕೆ ಇದೆ ಅವೆಂದರೆ,
99 ರಷ್ಟು ಜನರು ಕಾರನ್ನು ಕದಿಯುವ ಆಯ್ಕೆ ಮಾಡುವುದಿಲ್ಲ. ಏಕೆಂದರೆ ಈಗ ಕಾರು ಸಿಗಬಹುದು, ಆದರೆ ಇದರಿಂದ ಭವಿಷ್ಯದಲ್ಲಿ ಬರುವ ತೊಂದರೆಗಳು ಅಧಿಕವಿರುತ್ತದೆ. ಹೀಗಾಗಿ ಇದರಲ್ಲಿನ ಪ್ರಯೋಜನ ಇದರಲ್ಲಿರುವ ತೊಂದರೆಗಳಿಗಿಂತ ಕಡಿಮೆ ಇದೆ.
ಯಾವುದಾದರೂ ವ್ಯಕ್ತಿ, ಕಾರನ್ನು ಕದ್ದರೆ ಅದು ಕೆಟ್ಟ ನಿರ್ಧಾರ ಎಂದು ನಾವು ಹೇಳುತ್ತೇವೆ. ಇದು ಏಕೆಂದರೆ ನಮಗೆ ಆ ವ್ಯಕ್ತಿಗೆ ಕಾಣದಿರುವ ವಿಷಯಗಳು ಕಾಣುತ್ತಿದೆ. ಹೀಗಾಗಿ 99 ರಷ್ಟು ಜನರು ಕಾರನ್ನು ಕದಿಯುವ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಇದರ ಬದಲು ಬಳಸಿದ(second hand) ಕಾರನ್ನು ಖರೀದಿಸಲು ಆದ್ಯತೆ(prefer) ನೀಡುತ್ತಾರೆ. ಏಕೆಂದರೆ "nothing is for free". ಇದೇ ರೀತಿ ನೀವು ಶ್ರೀಮಂತರಾಗಿ ಹೂಡಿಕೆಯಿಂದ ಹಣವನ್ನು ಗಳಿಸಲು ಬಯಸಿದರೆ, ನಿಮ್ಮ ಹತ್ತಿರ 2 ಆಯ್ಕೆ ಇದೆ ಅದರಲ್ಲಿ,
1. ನಿಮಗೆ ಅಧಿಕ ಲಾಭ ನೀಡುವ ಒಂದು ಆಸ್ತಿಯಲ್ಲಿ(asset) ದೀರ್ಘಾವಧಿಗೆ ಹೂಡಿಕೆ ಮಾಡಿ. ಅಂದರೆ ಇಂಡೆಕ್ಸ್ ಫಂಡ್(index fund), ಷೇರು(stocks) ಆಗಿದೆ. ಇದಕ್ಕಾಗಿ ನೀವು ಅದನ್ನು ಕಲಿಯಬೇಕು, ಇದರ ಬೆಲೆ ಈ ರೀತಿ ಇದೆ. ಇದನ್ನು ನೀವು ಡಾಲರ್ ಅಥವಾ ರೂಪಾಯಿಯಿಂದ ನೀಡುವುದಿಲ್ಲ. ಬದಲಿಗೆ ಅನುಮಾನ(doubt), ಅನಿಶ್ಚಿತತೆ(uncertainty), ಸ್ವಲ್ಪ ಸಮಯವನ್ನು ನೀಡಿ ಅದನ್ನು ಕಲಿತು ಪಾವತಿಸುತ್ತೀರಾ. ಆದರೆ ಇದರ ಬದಲಿಗೆ ನಿಮ್ಮ ಭವಿಷ್ಯ ಪ್ರಕಾಶಮಾನವಿರುತ್ತದೆ.
2. ಇಲ್ಲ ನೀವು ಹಣವನ್ನು ಅಧಿಕ ರಿಟರ್ನ್ಸ್ ಸಿಗದ ಒಂದು ಸುರಕ್ಷಿತ ಜಾಗದಲ್ಲಿ ಇರಿಸಿ. ಉದಾಹರಣೆಗೆ ಬ್ಯಾಂಕಿನ ಎಫ್ಡಿ(fd), ಚಿನ್ನ(gold) ಇತ್ಯಾದಿ. ಇವುಗಳಿಂದ ನಿಮಗೆ ಸುರಕ್ಷತೆ ಸಿಗುತ್ತದೆ, ಆದರೆ ಅಷ್ಟು ಲಾಭ ಆಗುವುದಿಲ್ಲ. ಇದುವೇ ಇದರ ಬೆಲೆಯಾಗಿದೆ. ಹೀಗಾಗಿ 2ನೇ ಆಯ್ಕೆಯಲ್ಲಿ ನೀವು ಕಡಿಮೆ ರಿಟರ್ನ್ಸ್ ಪಡೆದು ಅದರ ಬೆಲೆಯನ್ನು ಪಾವತಿಸುತ್ತೀರಾ.
ಆದರೆ ಸತ್ಯವೇನೆಂದರೆ ಅನೇಕರೂ 2ನೇ ಆಯ್ಕೆ ಮಾಡುತ್ತಾರೆ. ಈ ಪುಸ್ತಕದಲ್ಲಿ ಲೇಖಕರು ಇದನ್ನು ಕಾರನ್ನು ಕದಿಯುವುದಕ್ಕೆ ಹೋಲಿಸುತ್ತಾರೆ. ಇದು ಏಕೆಂದರೆ ಅನೇಕರು ಮನೆಗೆ, ಸುತ್ತಾಡಲು, ತಿನ್ನಲು ಅಧಿಕ ಖರ್ಚು ಮಾಡುತ್ತಾರೆ. ಆದರೆ ಅವರ ಮೇಲೆ ಹೂಡಿಕೆ ಮಾಡಲು ಅಧಿಕ ಖರ್ಚು ಮಾಡುವುದಿಲ್ಲ. ಏಕೆಂದರೆ ಅವರ ಮೇಲೆ ಹೂಡಿಕೆ ಮಾಡುವ ಬೆಲೆ ಅವರಿಗೆ ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಅವರಿಗೆ ತೋರಿಸುವಂತ ವಸ್ತುಗಳಾದ ಮನೆ, ಕಾರು, ಸುತ್ತಾಡುವುದು ಮುಖ್ಯವಾಗಿದೆ. ಅಂತವರಿಗೆ ಷೇರು ಮಾರುಕಟ್ಟೆಯ(share market) ಹೂಡಿಕೆ ಬೇಸರವೆನ್ನಿಸುತ್ತದೆ. ಜನರಿಗೆ ಅವರ ಭವಿಷ್ಯ ಸ್ಪಷ್ಟವಾಗಿ ಕಾಣದ ಕಾರಣ 2ನೇ ಆಯ್ಕೆ ಮಾಡುತ್ತಾರೆ. ಇದು ಆ ಕಾರನ್ನು ಕದ್ದವನಿಗೆ ಅದರ ನಿಜವಾದ ಬೆಲೆಯ ಬಗ್ಗೆ ತಿಳಿದಿಲ್ಲದಂತೆ ಆಗಿದೆ.
ಲೇಖಕರು, "growth is driven by compounding and takes time, only destruction happens suddenly" ಎಂದು ಹೇಳುತ್ತಾರೆ.
ಅಂದರೆ ನಿಮ್ಮ ಹಣವು ಕಾಂಪೌಂಡಿಂಗ್ನಿಂದ ನಿಧಾನವಾಗಿ ಬೆಳೆಯುತ್ತದೆ. ಆದರೆ ಕೆಟ್ಟದ್ದು ಒಂದು ರಾತ್ರಿಯಲ್ಲೇ ಆಗಬಹುದು.
ಇದನ್ನು ಓದಿ: ಅನುಭವಿ ಹೂಡಿಕೆದಾರನ ಹೂಡಿಕೆಯ ಪಾಠಗಳುಶ್ರೀಮಂತರಾಗಲು ಅನೇಕ ಮಾರ್ಗಗಳಿವೆ. ಆದರೆ ಬಡವರಾಗಲು ಹಣವನ್ನು ಸರಿಯಾಗಿ ನಿರ್ವಹಿಸದೆ(manage) ಇರುವ ಕಾರಣವೇ ಒಂದೇ ಮಾರ್ಗವಾಗಿದೆ ಮತ್ತು ಅದನ್ನು ಅಧಿಕ ಖರ್ಚು ಮಾಡುವುದು ಕೂಡ ಬರುತ್ತದೆ. ಹೀಗಾಗಿ ಶ್ರೀಮಂತರಾಗುವುದಕ್ಕಿಂತ ಶ್ರೀಮಂತರಾಗಿರುವುದು ಕಷ್ಟ ಎಂದು ಲೇಖಕರು ಹೇಳುತ್ತಾರೆ. ಏಕೆಂದರೆ ಒಬ್ಬ ವ್ಯಕ್ತಿಯ ಹತ್ತಿರ ಹಣವು ಇಲ್ಲದಾಗ ಅವನನ್ನು ನಿಯಂತ್ರಣ ಮಾಡುವ ಅವಶ್ಯಕತೆ ಇಲ್ಲ, ಏಕೆಂದರೆ ಅವನ ಹತ್ತಿರ ಹಣವು ಇಲ್ಲ. ಆದರೆ ಒಬ್ಬ ವ್ಯಕ್ತಿಯ ಹತ್ತಿರ ಅಧಿಕ ಹಣವಿದ್ದರೆ ಆತ ಸ್ವಯಂ ನಿಯಂತ್ರಣವನ್ನು(self control) ಕಲಿಯಲೇಬೇಕು. ಹೀಗಾಗಿ ನೀವು ಶ್ರೀಮಂತರಾಗಲು ಮತ್ತು ಶ್ರೀಮಂತರಾಗೆ ಇರಲು ಬೇರೆ ಬೇರೆ ರೀತಿಯ ಮನಸ್ಥಿತಿಯ ಅವಶ್ಯಕತೆ ಇದೆ.
ನೀವು ಪ್ರಾರಂಭದಲ್ಲಿ ಹಣವನ್ನು ಉಳಿಸಿ ಹೂಡಿಕೆ ಮಾಡುತ್ತಿದ್ದಾರೆ, ಈ ಹವ್ಯಾಸವು ನಿಮ್ಮನ್ನು ಶ್ರೀಮಂತನಾಗಿ ಇಡುತ್ತದೆ. ಹೀಗಾಗಿ ಇಂದು ಜಗತ್ತಿನ 90% ಗಿಂತ ಅಧಿಕ ಮಿಲಿಯನೇರ್(milliniore) ಸ್ವತಃ(self made) ಆಗಿದ್ದಾರೆ. ಜಗತ್ತಿನ 70 ರಷ್ಟು ಲಾಟರಿ ವಿಜೇತರು 10 ವರ್ಷದಲ್ಲಿ ಬಡವರಾಗುತ್ತಾರೆ. ಹೀಗಾಗಿ ನೀವು ಯಾವಾಗಲೂ ಬದುಕುಳಿಯುವ ಮನಸ್ಥಿತಿಯನ್ನು(survival mindset) ಹೊಂದಿರಬೇಕು. ಇದಕ್ಕಾಗಿ ನಿಮಗೆ 3 ವಸ್ತುಗಳ ಅವಶ್ಯಕತೆ ಇರುತ್ತದೆ.
ಇದನ್ನು ಓದಿ: "100 to 1 in the Stock Market" ಪುಸ್ತಕದ ಸಾರಾಂಶಅಂದರೆ ನೀವು ಮಾನಸಿಕ ಮತ್ತು ದೈಹಿಕವಾಗಿ ಎಷ್ಟು ಗಟ್ಟಿಯಾಗಬೇಕೆಂದರೆ ಮಾರುಕಟ್ಟೆ ಸೈಕಲ್ ನಿಂದ ನಿಮಗೆ ಏನು ಅನಿಸಬಾರದು. ನೀವು ರಿಯಲ್ ಎಸ್ಟೇಟ್(real estate) ಅಥವಾ ಬಂಗಾರದಲ್ಲಿ(gold) ಹೂಡಿಕೆ ಮಾಡುತ್ತಿದ್ದಾರೆ, ಇದರಲ್ಲೂ ಮಾರುಕಟ್ಟೆ ಸೈಕಲ್ ಇರುತ್ತದೆ ಎಂದು ತಿಳಿದಿದೆ. ಇದರ ಬೆಲೆ ಕೂಡ ಏರಿಳಿತವಾಗುತ್ತಿರುತ್ತದೆ. ಬೆಲೆ ಬಿದ್ದಾಗ ಮಾರುವ ಬದಲು ಅಧಿಕ ಖರೀದಿಸಿ. ಇದನ್ನೇ ಷೇರು ಮಾರುಕಟ್ಟೆ ಮತ್ತು ಮ್ಯೂಚುಯಲ್ ಫಂಡ್ನಲ್ಲೂ ಬಳಸಿ. ನೀವು ಮಾರುಕಟ್ಟೆ ಸೈಕಲ್ನಿಂದ ಹೆದರಬೇಡಿ, ಅದನ್ನು ನಿಮ್ಮ ಉಪಯೋಗಕ್ಕಾಗಿ ಬಳಸಿಕೊಳ್ಳಿ.
ನೀವು ಯಾವುದೇ ಹೂಡಿಕೆಯ ಪ್ಲಾನ್ ಮಾಡಿದಾಗ ಅದು ಆ ರೀತಿ ಹೋಗದಿದ್ದರೆ ಏನು ಮಾಡುವಿರಿ ಎಂಬುದನ್ನು ಯೋಚಿಸಿ. ಅಂದರೆ ನಿಮ್ಮ ಪ್ಲಾನ್ ಬಿ(plan b) ಏನಾಗಿದೆ? ಹೀಗಾಗಿಯೇ ಹೂಡಿಕೆಯ ಜಗತ್ತಿನಲ್ಲಿ ನಾವು 10 ರಿಂದ 20 ಕಂಪನಿಗಳ ಒಂದು ಪೋರ್ಟ್ಫೋಲಿಯೋವನ್ನು ಮಾಡುತ್ತೇವೆ ಮತ್ತು ತುರ್ತು ನಿಧಿಯನ್ನು(emergency fund) ಬದಿಯಲ್ಲಿ ಇರಿಸುತ್ತೇವೆ.
ಅಂದರೆ ನೀವು ಭವಿಷ್ಯದ ಬಗ್ಗೆ ಯಾವಾಗಲೂ ಧನಾತ್ಮಕ(positive) ಮತ್ತು ಆಶಾವಾದಿ(optimistic) ಇರಬೇಕು. ಒಳ್ಳೆಯ ಯೋಚನೆಯನ್ನು ಹೊಂದಿರಬೇಕು. ಆದರೆ ತಮ್ಮ ಪ್ರಸ್ತುತ ಯಶಸ್ಸಿನ ಮೇಲೆ ಎಚ್ಚರಿಕೆಯಿಂದ(alert) ಇರಬೇಕು. ಇದಕ್ಕಾಗಿ ಲೇಖಕರು ನಮಗೆ 2 ಹೂಡಿಕೆಯ ಉದಾಹರಣೆಗಳನ್ನು ನೀಡಿದ್ದಾರೆ.
ಇದನ್ನು ಓದಿ: One Up On Wall Street ಪುಸ್ತಕದ ಸಾರಾಂಶ Part- 1ನೀವು ಈ ಹೆಸರನ್ನು ಗೂಗಲ್ ಮಾಡಿ ನೋಡಬಹುದು. ಈ ವ್ಯಕ್ತಿಯು ತನ್ನ ಜೀವನಪೂರ್ತಿ ಭದ್ರತೆ ಸಿಬ್ಬಂದಿಯಾಗಿ(security) ಕೆಲಸ ಮಾಡಿದ್ದಾರೆ. ಆದರೆ ಈತ ಸಾಯುವ ಮೊದಲು 8M$ ಅನ್ನು ಹೊಂದಿದ್ದನು. ಆದರೆ ಒಬ್ಬ ವ್ಯಕ್ತಿ ಒಂದು ಚಿಕ್ಕ ಕೆಲಸದಿಂದ ಇಷ್ಟೊಂದು ಹಣವನ್ನು ಗಳಿಸಲು ಹೇಗೆ ಸಾಧ್ಯವಾಗುತ್ತದೆ? ಅದರ ಉತ್ತರವೇ ಉಳಿತಾಯ ಮತ್ತು ಹೂಡಿಕೆಯ ಅಭ್ಯಾಸ ಮಾಡಿಕೊಳ್ಳುವುದಾಗಿದೆ.
ಈತ ಜಗತ್ತಿನ ಟಾಪ್ ಕಾಲೇಜ್ ಆದ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ(harvard university) ಓದಿದ, ಜಗತ್ತಿನ ಟಾಪ್ ಕಂಪನಿಯಾದ ಮೆರಿಲ್ ಲಿಂಚ್ನಲ್ಲಿ(merrill lynch) ಕೆಲಸ ಮಾಡುತ್ತಿದ್ದ ಮತ್ತು ಒಂದು ಒಳ್ಳೆಯ ಪೋಸ್ಟ್ನಲ್ಲಿ ಕಾರ್ಯನಿರ್ವಾಹಕ(executive) ಆಗುತ್ತಾನೆ. ಆದರೆ ಅವನು ಅಧಿಕ ಖರ್ಚು ಮಾಡುತ್ತಿದ್ದ ಕಾರಣ 2008 ರಂದು ದಿವಾಳಿಯಾದ(bankrupt).
ಬಡತನಕ್ಕಿಂತ ಕೆಟ್ಟದ್ದು ಏನಿದೆ? ಅದುವೇ ಶ್ರೀಮಂತರಾಗಿ ಮತ್ತೆ ಬಡವರಾಗುವುದಾಗಿದೆ. ಹೀಗಾಗಿ ನೀವು ನೀವಾಗಿ 10 ಲಕ್ಷ ಹೂಡಿಕೆ ಮಾಡಿ ನಿರ್ವಹಿಸಲು ಸಾಧ್ಯವಾಗಿಲ್ಲವೆಂದರೆ 10 ಕೋಟಿಯನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ನಿಮ್ಮ ಸಮಸ್ಯೆ ಕಡಿಮೆ ಹಣ ಇರುವುದಲ್ಲ, ಬದಲಿಗೆ ನಿಮಗೆ ಹಣವನ್ನು ನಿರ್ವಹಣೆ ಮಾಡಲು ಬರುವುದಿಲ್ಲವಾಗಿದೆ. ಏಕೆಂದರೆ ಬಡವರು ನಮ್ಮ ಹತ್ತಿರ ಅಧಿಕ ಹಣ ಬಂದ ನಂತರ ನಿರ್ವಹಣೆ ಮಾಡುವುದನ್ನು ಕಲಿಯುವೆನ್ನು ಎನ್ನುತ್ತಾರೆ. ಆದರೆ ಶ್ರೀಮಂತರು ನಾವು ಸ್ವಲ್ಪ ಹಣವನ್ನು ನಿರ್ವಹಣೆ ಮಾಡಿದರೆ ನಮ್ಮ ಹಣವು ತಾನಾಗೆ ಬೆಳೆಯುತ್ತದೆ ಎಂದು ನಂಬಿರುತ್ತಾರೆ.
ಇದನ್ನು ಓದಿ: ಹಣವನ್ನು ನಿರ್ವಹಿಸಲು ಜಪಾನಿಯರ ರಹಸ್ಯಜಗತ್ತಿನಲ್ಲಿ 3 ರೀತಿಯ ಜನರು ಇರುತ್ತಾರೆ. ಒಬ್ಬರು ಉಳಿತಾಯ ಮಾಡುವವರು, ಇನ್ನೊಬ್ಬರು ಉಳಿತಾಯ ಮಾಡಲು ಸಾಧ್ಯವಿಲ್ಲವೆನ್ನುವವರು, ಇನ್ನು ಮೂರನೇಯವರು ಉಳಿತಾಯ ಮಾಡುವ ಅವಶ್ಯಕತೆ ಇಲ್ಲವೆಂದು ಹೇಳುವವರು. ನೀವು ಮೂರನೇ ರೀತಿಗೆ ಬರುವುದಿಲ್ಲವೆಂದು ಭಾವಿಸುತ್ತೇನೆ. ಏಕೆಂದರೆ ನೀವು ಈ ರೀತಿಯ ಲೇಖನಗಳನ್ನು ಓದುತ್ತಿದ್ದೀರಾ.
ನಾವು ಉಳಿತಾಯದ ಬಗ್ಗೆ ಅಧಿಕ ಕೇಳುತ್ತೇವೆ. ನಿಮ್ಮ ಬಾಲ್ಯದಿಂದಲೂ ಪೋಷಕರು ಉಳಿತಾಯ ಮಾಡಲು ಹೇಳಿರುತ್ತಾರೆ. ಆದರೆ ಈ ಉಳಿತಾಯ ಮಾಡುವುದು ಏಕೆ ಮುಖ್ಯವಾಗಿದೆ?
ನೀವು ಉಳಿತಾಯ ಮಾಡುವ ಪ್ರತಿಯೊಂದು ಹಣವು ನಿಮ್ಮ ಭವಿಷ್ಯದ ಸಮಯವನ್ನು ಉಳಿಸುತ್ತದೆ. ಇದು ನಿಮ್ಮ ಸಮಯವನ್ನು ಬೇರೆಯವರು ಬಳಸದಂತೆ ಸಹಾಯ ಮಾಡುತ್ತದೆ. ಹೀಗಾಗಿ ಲೇಖಕರು ನಿಮ್ಮ ಸಂಬಳ(salary) ಕಡಿಮೆ ಇದ್ದರೂ ನೀವು ಶ್ರೀಮಂತರಾಗುವಿರಿ, ಆದರೆ ನೀವು ಉಳಿತಾಯ ಮಾಡದಿದ್ದರೆ ಎಂದಿಗೂ ಶ್ರೀಮಂತನಾಗಲು ಸಾಧ್ಯವಿಲ್ಲ ಎನ್ನುತ್ತಾರೆ.
ಇದನ್ನು ಓದಿ: ಪ್ರಮುಖ 7 ಹಣದ ಮೇಲಿನ ಪಾಠಗಳುಇದರಲ್ಲಿ ಮೋರ್ಗನ್ ಹೌಸ್ಲ್(morgen housel) ಕೆಲವು ಜೀವನ ಸಲಹೆಗಳನ್ನು(life tips) ತಿಳಿಸಿದ್ದಾರೆ.
ನಿಮ್ಮ ಎಲ್ಲಾ ಆರ್ಥಿಕ ನಿರ್ಧಾರಗಳನ್ನು ಸ್ವತಂತ್ರವಾಗಿ ತೆಗೆದುಕೊಳ್ಳಿ ಹೊರತು, ಇತರರಿಗಾಗಿ ಅಥವಾ "ಅವರು ಮಾಡುತ್ತಿರುವುದರಿಂದ ನಾನು ಮಾಡುವೆ" ಎಂದು ಯೋಚಿಸಬೇಡಿ.
ನೀವು ಮಾಡುತ್ತಿರುವ ದೊಡ್ಡ ತಪ್ಪು ಎಂದರೆ ನಿಮ್ಮ ಭವಿಷ್ಯದ ಹಣವನ್ನು ಇಂದೇ ಖರ್ಚು ಮಾಡುವುದಾಗಿದೆ.
ಅಂದರೆ ವ್ಯಾಯಾಮ, ಓದುವುದು, ಪಾಡ್ಕ್ಯಾಸ್ಟ್(podcast), ಕಲಿಕೆ(learning) ಆಗಿದೆ. ಏಕೆಂದರೆ ಜೀವನದ ಸಂತೋಷವು ದಿನದ ಸಣ್ಣ ವಿಷಯಗಳಲ್ಲಿ ಅಡಗಿದೆ. ಇದರಿಂದ ನೀವು ಆರೋಗ್ಯಕರ(healthy), ಸಂಪತ್ತುರಹಿತ(wealthy) ಮತ್ತು ಬುದ್ಧಿವಂತ(wise) ಕೂಡ ಇರುವಿರಾ.
ನೀವು ಉಳಿಸಿದ 20% ತುರ್ತು ನಿಧಿಯಾಗಿ ಇರಿಸಿ. ಇದರಿಂದ ಮಾರುಕಟ್ಟೆ ಕೆಳಗೆ ಇದ್ದಾಗ ನಿಮ್ಮ ಹೂಡಿಕೆಯನ್ನು ಕಡಿಮೆ ಬೆಲೆಗೆ ಮಾರುವ ಅವಶ್ಯಕತೆ ಇರುವುದಿಲ್ಲ. ಇದಕ್ಕಾಗಿ ನಿಮ್ಮ ತುರ್ತು ನಿಧಿಯನ್ನು(emergency fund) ಬಳಸಬಹುದು.
ನಿಮ್ಮ ನಿಜವಾದ ಸಂಪತ್ತು, ದೀರ್ಘವಾದಿ ಹೂಡಿಕೆಯ ಕಾಂಪೌಂಡಿಂಗ್ನಿಂದ ಆಗುತ್ತದೆ. ಆದರೆ ನೀವು ಅದಕ್ಕೆ ಅಡ್ಡ ಬಾರದೆ ಕಾಂಪೌಂಡ್ ಆಗಲು ಬಿಡುತ್ತಿರಬೇಕು.
ಲೇಖಕರ ಪ್ರಕಾರ ಇಂಡೆಕ್ಸ್ ಪ್ರತಿಯೊಬ್ಬರಿಗೂ ಉತ್ತಮ ಆಯ್ಕೆ ಆಗಿದೆ.
ಏಕೆಂದರೆ ಅನೇಕರು ಕೋಟ್ಯಾಧಿಪತಿ ಜೀವನ ನಡೆಸಬೇಕು, ಜಗತ್ತನ್ನು ಸುತ್ತಾಡಬೇಕು ಎನ್ನುತ್ತಾರೆ. ಅವರು ಹೇಳುವ ರೀತಿ ಏನೆಂದರೆ ಕೋಟಿ ರೂಪಾಯಿಯನ್ನು ಖರ್ಚು ಮಾಡುವುದಾಗಿದೆ. ಇದು ಅವರು ಹೇಳುತ್ತಿರುವ ಮಾತಿಗೆ ವಿರುದ್ಧವಾಗಿದೆ. ಏಕೆಂದರೆ ನೀವು ನಿಮ್ಮ ಕೋಟಿಯಷ್ಟು ಹಣವನ್ನು ಖರ್ಚು ಮಾಡಿದರೆ, ಕೋಟ್ಯಾಧಿಪತಿ ಹೇಗೆ ಆಗುತ್ತೀರಾ?
ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.
Explore all our Posts by categories.
See all comments...