Watch Video
97:3 ರಲ್ಲಿ 97% ನಷ್ಟು ಜನರು ಅವರ 65ನೇ ವಯಸ್ಸಿಗಾಗಲೇ ಬಡವರಾಗಿರುತ್ತಾರೆ. ಇನ್ನು ಉಳಿದ 3% ಮಾತ್ರ ಆರ್ಥಿಕವಾಗಿ ಯಶಸ್ಸನ್ನು ಕಾಣುತ್ತಾರೆ. ಆ 97% ನಷ್ಟು ಜನರು ಬಡವರಾಗಲು ಈ 7 ಕಾರಣಗಳೇ ಮುಖ್ಯವಾಗಿದೆ.
"money is everthing" ಎಂದು ಅನೇಕ ಜನ ಹೇಳಿರುವುದನ್ನು ನೀವು ಕೇಳಿರುತ್ತೀರಿ. ಅವರ ಹತ್ತಿರ ಹಣ ಇಲ್ಲದೇ ಇರುವ ಕಾರಣ ಅವರು ಆ ರೀತಿ ಹೇಳುತ್ತಾರೆ. ಹಣವೇ ಎಲ್ಲವೂ ಅಲ್ಲ, ಆದರೆ ಹಣವೂ ತುಂಬಾ ಪ್ರಮುಖವಾಗಿದೆ. ಹಣವು ಜಗತ್ತನ್ನು ಮುಂದುವರೆಸುತ್ತಿದೆ, ಹಣವು ನಿಮ್ಮ ಕುಟುಂಬವನ್ನು ಕೇರ್ ಮಾಡುತ್ತಿದೆ, ಹಣವು ಸುರಕ್ಷತೆ ನೀಡುತ್ತದೆ, ಹಣವು ನಿಮಗೆ ಕಂಫರ್ಟನ್ನು ನೀಡುತ್ತದೆ, ಹಣವು ಕೇವಲ ಒಂದು ಉಪಕರಣವಾಗಿದೆ(tool) ಹೊರತು ಬೇರೇನಲ್ಲ. ನೀವು ಕೆಲವರಿಗೆ ನೀನು ನನಗೆ ಅಷ್ಟು ಪ್ರಮುಖವಲ್ಲ ಎಂದು ಹೇಳಿದಾಗ ಆ ವ್ಯಕ್ತಿ ನಿಮ್ಮ ಹತ್ತಿರ ಅಧಿಕ ದಿನ ಇರುವುದಿಲ್ಲ. ಇದನ್ನು ನೀವು ಹಣಕ್ಕೆ ವ್ಯಕ್ತಿಯೆಂದು ತಿಳಿದು ಹೇಳಿದ್ದೀರಿ ಎಂದು ಯೋಚಿಸಿ, ಆಗ ಹಣವೂ ಕೂಡ ನಿಮ್ಮ ಸುತ್ತ ಇರುವುದಿಲ್ಲ.
ಇದನ್ನು ಓದಿ: ಉನ್ನತ ವ್ಯಕ್ತಿಯಾಗಲು ಇರುವ ಮಾರ್ಗನೀವು ಶಾಲೆಗೆ ಹೋಗುವಾಗ ಗಣಿತ, ವಿಜ್ಞಾನ, ಕನ್ನಡ ರೀತಿಯ ವಿಷಯಗಳನ್ನು ಕಲಿಸುತ್ತಿದ್ದರು. ಆದರೆ ಹಣದ ಬಗ್ಗೆ ಯಾವುದಾದರೂ ವಿಷಯ ಇರುವುದೇ, ಇಲ್ಲ. ಶಾಲೆಯಲ್ಲಿ ಹೂಡಿಕೆಯ ಬಗ್ಗೆ ಕಳಿಸಿದ್ದಾರೆಯೇ? ಈ ರೀತಿಯ ಕೋರ್ಸ್‌ಗಳು ಶಾಲೆಗಳಲ್ಲಿ ಇರುವುದಿಲ್ಲ. ಏಕೆಂದರೆ ಸ್ಕೂಲಿ ಸಿಸ್ಟಮ್ ಅನ್ನು ನೀವೊಬ್ಬ ಒಳ್ಳೆಯ ಕೆಲಸಗಾರನಾಗಿ(nice worker) ಹೇಗಿರಬೇಕೆಂದು ಕಳಿಸಿಕೊಡುವಂತೆ ಡಿಸೈನ್ ಮಾಡಲಾಗಿದೆ. ನಿಮ್ಮ ಪ್ರೊಫೆಸರ್ ಶ್ರೀಮಂತರಲ್ಲ, ನಿಮ್ಮ ಇನ್ಸ್ಟ್ರಕ್ಟರ್ ಶ್ರೀಮಂತರಲ್ಲ, ನಿಮಗೆ ಬುದ್ಧಿವಾದ ಹೇಳುವ ಪ್ರಿನ್ಸಿಪಲ್ ಕೂಡ ಶ್ರೀಮಂತರಲ್ಲ. ಹೀಗಿರುವಾಗ ಅವರು ನೀವು ಹೇಗೆ ಶ್ರೀಮಂತನಾಗಬಹುದು ಎಂದು ಕಲಿಸಲು ಸಾಧ್ಯವಾಗುತ್ತದೆ.
ಇದನ್ನು ಓದಿ: ನೀವು ಯೋಚಿಸುವುದಕ್ಕಿಂತ ಹೆಚ್ಚು ಆಕರ್ಷಕವಿರುವ 13 ರಹಸ್ಯ ಚಿಹ್ನೆಗಳುನೀವು ಬೆಳೆಯುತ್ತ ಹಣದ ಮೇಲೆ ಸರಿಯಾದ ನಂಬಿಕೆಯನ್ನು ಇಟ್ಟುಕೊಂಡಿರುವುದಿಲ್ಲ. ನಿಮ್ಮ ಪೋಷಕರು ನಿಮ್ಮನ್ನು ಇಷ್ಟಪಡುತ್ತಾರೆ. ನಿಮಗಾಗಿ ಬೆಸ್ಟ್ ಅನ್ನು ನೀಡಲು ಬಯಸುತ್ತಾರೆ. ಆದರೆ ಅವರು ನಿಮಗೆ ವ್ಯಾಪಾರ(business) ಮತ್ತು ಫಿನಾನ್ಶಿಯಲ್ ಜ್ಞಾನ ನೀಡುವಷ್ಟು ಅರ್ಹತೆ(qualify) ಹೊಂದಿರುವುದಿಲ್ಲ ಮತ್ತು ನೀವು ನಿಮ್ಮ ಪೋಷಕರ ಮಾತನ್ನು ಅಚ್ಚುಕಟ್ಟಾಗಿ ಪಾಲಿಸುತ್ತೀರಾ. ಅವರು ಫೈನಾನ್ಶಿಯಲ್ ಬಗ್ಗೆ ತಿಳಿಸದ ಕಾರಣ, ನೀವು ಅದನ್ನು ತಿಳಿಯುವುದಿಲ್ಲ ಮತ್ತು ಶ್ರೀಮಂತರಾಗಲು ಸಾಧ್ಯವೇ ಆಗುವುದಿಲ್ಲ.
ನೀವು ಟೀನೇಜ್ನಲ್ಲಿ ಇದ್ದಾಗ ಸ್ವಲ್ಪ ಹಣವನ್ನು ಸ್ವಂತವಾಗಿ ಗಳಿಸಲು ಬಯಸುತ್ತೀರಾ. ಒಂದು ಸುಂದರವಾದ ಕಾರನ್ನು ಖರೀದಿಸಲು ಬಯಸುತ್ತೀರಾ. ಒಂದು ಒಳ್ಳೆಯ ಟ್ರಿಪಿಗೆ ಹೋಗಲು ಬಯಸುತ್ತೀರಾ. ನಿಮ್ಮ ಗೆಳೆಯರ ಜೊತೆ ಸುತ್ತಾಡಲು ಬಯಸುತ್ತೀರಾ ಮತ್ತು ನೀವು ನಿಮ್ಮ ಪೋಷಕರ ಹತ್ತಿರ ಹೋಗಿ "ನನಗೆ ಹಣ ಮಾಡಲು ಸಲಹೆ ನೀಡಿ" ಎಂದು ಕೇಳುತ್ತೀರಾ. ಅದಕ್ಕೆ ಅವರು "ಹೋಗಿ ಒಂದು ಕೆಲಸ ಹುಡುಕು" ಎಂದು ಹೇಳುತ್ತಾರೆ. ಆದರೆ ಕೇವಲ ಕೆಲದಿಂದಲೇ ಹಣ ಮಾಡಬಹುದೆಂದೇನಿಲ್ಲ. ನೀವು "ಹಣವು ಹೇಗೆ ಕಾರ್ಯ ನಿರ್ವಹಿಸುತ್ತದೆ" ಎಂದು ತಿಳಿಯಬೇಕು. ಹೆಚ್ಚು ಹಣ ಬರುವುದು ನಿಮ್ಮ ಮೌಲ್ಯದ ಮೇಲೆ ನಿಂತಿದೆ. ನೀವು ಮಾರುಕಟ್ಟೆಯಲ್ಲಿ ನಿಮ್ಮ ವಸ್ತುವಿಗೆ ಹೆಚ್ಚಿನ ಮೌಲ್ಯವನ್ನು ತಂದರೆ, ನೀವು ಅಧಿಕ ಹಣವನ್ನು ಗಳಿಸಬಹುದು. ಹೀಗಾಗಿ ಹಣಕ್ಕಾಗಿ ಗಂಟೆಗಟ್ಟಲೆ ಕೆಲಸ ಮಾಡುವ ಬದಲು ನಿಮ್ಮ ಐಡಿಯಾಗೆ ಕೆಲಸ ಮಾಡಿ ಕೋಟಿಗಟ್ಟಲೆ ಗಳಿಸಿ.
ಇದನ್ನು ಓದಿ: ರಾಬರ್ಟ್ ಕಿಯೋಸಾಕಿ ಅವರ ಎಲ್ಲಾ ಪುಸ್ತಕದ Summaryಈ ಮೀಡಿಯಾಗಳು ನಿಮ್ಮನ್ನು ಕಂಟ್ರೋಲ್ ಮಾಡಲು ನೀವು ಖರೀದಿಸಲು ಬಯಸುವಂತೆ ಮಾಡುತ್ತದೆ. ನಿಮ್ಮ ಆರಂಭಿಕ ವಯಸ್ಸಿನಿಂದಲೇ(early age) ನಿಮ್ಮ ಹತ್ತಿರ ಇರದ ಹಣವನ್ನು ಖರ್ಚು ಮಾಡುವಂತೆ ಅಭ್ಯಾಸ ಮಾಡಿಸಲಾಗುತ್ತದೆ. ಅದು ನಿಮಗೆ ಇಷ್ಟವಿಲ್ಲದ ವಸ್ತುಗಳನ್ನು ಖರೀದಿಸಲು, ನಿಮಗೆ ಇಷ್ಟವಿಲ್ಲದ ಜನರನ್ನು ಮೆಚ್ಚಿಸಲು, ನೀವು ಕ್ರೆಡಿಟ್ ಕಾರ್ಡ್ ಅನ್ನು ಬಳಸುತ್ತೀರಾ. ನೀವು ಒಂದು ರಜೆಗೆ ಹೋಗಲು ಬಯಸಿದರೆ ಕ್ರೆಡಿಟ್ ಕಾರ್ಡ್ ಬಳಸುತ್ತೀರಾ. ನೀವು ಇಷ್ಟಪಟ್ಟ ಕಾರನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲವೇ? ಇನ್ನೊಂದು ಕ್ರೆಡಿಟ್ ಕಾರ್ಡ್ ಅನ್ನು ತೆಗೆದುಕೊಳ್ಳಿ. ಈ ರೀತಿಯ ಯೋಚನೆಗಳಿಂದಲೇ ಇಂದು ಅನೇಕ ಕುಟುಂಬಗಳು ಬೀದಿಗೆ ಬಂದಿವೆ. ಹೀಗಾಗಿ ನೀವು ಕೂಡ ಈ ಮೀಡಿಯಾ ಇಲ್ಲ ಫೈನಾಶಿಯಲ್ ಸಂಸ್ಥೆಗಳ(institution) ನಿಯಂತ್ರಣದಲ್ಲಿ ಇರಬಹುದು.
ಶ್ರೀಮಂತರು ದುರಾಸೆ(greedy) ಇರುವವರು ಎಂದು ಮೀಡಿಯಾಗಳು, ನಿಮ್ಮ ಪೋಷಕರು ತಿಳಿಸಿ ನಿಮಗೆ ಬ್ರೈನ್ವಾಷ್(brain wash) ಮಾಡಿರುತ್ತಾರೆ. "ಶ್ರೀಮಂತರು ಕ್ರೂರರು, ನೀವು ಅವರ ಜೊತೆ ಇರುವ ಬದಲು ಒಬ್ಬನೇ ಇರು" ಎಂದು ತಿಳಿಸುತ್ತಾರೆ. ಈ ಮೀಡಿಯಾಗಳು ನೀವು ದುರಾಸೆಯಿಂದ ನೋಡಬೇಕೆಂದು ಬಯಸುವುದಿಲ್ಲ, ನೀವು ಕ್ರೂರನಾಗಿ ನೋಡುವಂತೆ ಬಯಸುವುದಿಲ್ಲ. ಇದರಿಂದಾಗಿಯೇ ನೀವು ಬಡವರಾಗಿರುತ್ತೀರಿ. ನೀವು ಇದನ್ನು ಸತ್ಯ ಎಂದುಕೊಂಡರೆ ಶ್ರೀಮಂತರಾಗಲು ಸಾಧ್ಯವಿಲ್ಲ.
ಇದನ್ನು ಓದಿ: "Good Vibes Good Life" ಪುಸ್ತಕದ ವಿವರಣೆ97% ರಷ್ಟು ಜನರು ಇನ್ನೊಬ್ಬರಿಗೆ ಪಾಯಿಂಟ್ ಮಾಡಿ ಯಾವಾಗಲೂ ದೂರುತ್ತಿರಿತ್ತಾರೆ(complaint). ಆದರೆ ಇನ್ನೊಬ್ಬರಿಗೆ ಒಂದು ಬೆರಳು ತೋರಿಸುವಾಗ ಅವರ ನಾಲ್ಕು ಬೆರಳು ಅವರ ಹತ್ತಿರ ಪಾಯಿಂಟ್ ಆಗುತ್ತಿರುವುದನ್ನು ಅವರು ಗಮನಿಸುವುದಿಲ್ಲ. ನೀವು ಸ್ವಂತವಾಗಿ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಪ್ರಾರಂಭಿಸಬೇಕು. ನಿಮ್ಮ ಒಂದು ಗುರಿ ಇಟ್ಟುಕೊಳ್ಳಬೇಕು. ನೀವು ನಿಮ್ಮನ್ನು "ಎಷ್ಟು ಗಂಟೆ ಟಿವಿ ಅಥವಾ ನೆಟ್ಫ್ಲಿಕ್ಸ್ ನೋಡುತ್ತ ಕಳೆಯುವೆ" ಮತ್ತು "ಎಷ್ಟು ಗಂಟೆ ಫೈನಾನ್ಶಿಯಲ್ ಮನೆ ಬ್ಯುಸಿನೆಸ್ ಪುಸ್ತಕಗಳನ್ನು ಓದುತ್ತ ಕಳೆಯುವೆ" ಎಂದು ಕೇಳಿಕೊಳ್ಳಿ. ನೀವು ಇದನ್ನು ಹೋಲಿಸಲೇಬೇಕು(compare). ಅನೇಕ ಜನರು ಅವರ ಸಮಯವನ್ನು ಹಣಕ್ಕಾಗಿ ಕೆಲಸ ಮಾಡುತ್ತಾ ಕಳೆದುಕೊಳ್ಳುತ್ತಾರೆ ಮತ್ತು ಅವರ ಕೆಲವು ಗಂಟೆಗಳನ್ನು ಹಣವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಕಲಿಯಲು ಯೋಚಿಸುವುದಿಲ್ಲ.
ಆಗಿದ್ದರೆ ಈ 7 ಕಾರಣಗಳಿಂದ ಅನೇಕ ಜನರು ಶ್ರೀಮಂತರಾಗಲು ಸಾಧ್ಯವಿಲ್ಲ, ಅವೆಂದರೆ
ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.
Explore all our Posts by categories.
See all comments...