Website designed by @coders.knowledge.

Website designed by @coders.knowledge.

ರಾಬರ್ಟ್‌ ಕಿಯೋಸಾಕಿ ಅವರ ಎಲ್ಲಾ ಪುಸ್ತಕದ Summary | Robert Kiyosaki all Books Summary

 0

 Add

Please login to add to playlist

Watch Video

ನಾವು ಈ ಲೇಖನದಲ್ಲಿ ರಾಬರ್ಟ್ ಕಿಯೋಸಾಕಿಯವರು ಬರೆದಿರುವ ಎಲ್ಲ ಪುಸ್ತಕದ ಕಾನ್ಸೆಪ್ಟನ್ನು ತಿಳಿಸಲಿದ್ದೇವೆ. ಮೊದಲಿಗೆ ನಾವು ಅವರ ಪ್ರಸಿದ್ಧ ಪುಸ್ತಕವಾದ "rich dad poor dad" ಬಗ್ಗೆ ತಿಳಿಸಲಿದ್ದೇವೆ.

1. Rich dad poor dad.

what are the main points of rich dad poor dad in kannada
rich dad poor dad

ಈ ಪುಸ್ತಕದ ಮುಖ್ಯ ಅಂಶ ಏನೆಂದರೆ ಬಡವರು, ಮಧ್ಯಮ ವರ್ಗ, ಶ್ರೀಮಂತರು ಹೇಗೆ ಯೋಚಿಸುತ್ತಾರೆ ಮತ್ತು ಹಣವನ್ನು ಹೇಗೆ ಖರ್ಚು ಮಾಡುತ್ತಾರೆ ಎಂಬುದರ ಬಗ್ಗೆ ತಿಳಿಸಲಾಗಿದೆ. ನಮ್ಮಲ್ಲಿ ಅನೇಕರಿಗೆ ಅಧಿಕ ಹಣ ಮಾಡಲು ಅಧಿಕ ಹಣ ಬೇಕು ಎನಿಸುತ್ತದೆ. ಆದರೆ ರಾಬರ್ಟ್ ಕಿಯೋಸಾಕಿ ಅದು ತಪ್ಪು ಎಂದು ಹೇಳುತ್ತಾರೆ. ಅಧಿಕ ಹಣ ಗಳಿಸಲು ಆರ್ಥಿಕ ಜ್ಞಾನದ(financial knowledge) ಅಗತ್ಯವಿದೆ. ಹೀಗಾಗಿ ನಾವು ಮೊದಲು ಬಡವರು, ಮಧ್ಯಮ ವರ್ಗದವರು ಮತ್ತು ಶ್ರೀಮಂತರು ಹಣವನ್ನು ಹೇಗೆ ಖರ್ಚು ಮಾಡುತ್ತಾರೆ ಎಂಬುದನ್ನು ತಿಳಿಯಬೇಕು. ಇದಕ್ಕೆ ನಾವು ಮೂರನ್ನು ಅರ್ಥಮಾಡಿಕೊಳ್ಳಬೇಕು, ಅವೆಂದರೆ ಆದಾಯ ಹೇಳಿಕೆ(income statement), ಆಯವ್ಯಯ ಪಟ್ಟಿ(balance sheet) ಮತ್ತು ನಗದು ಹರಿವು(cash flow).

ಆದಾಯ ಹೇಳಿಕೆ(income statement) ಎಲ್ಲ ವ್ಯಕ್ತಿಗಳು ತಮ್ಮ ಜೀವನದಲ್ಲಿ ಬಳಸುತ್ತಾರೆ. ಇದರಲ್ಲಿ 2 ರೀತಿ ಬರುತ್ತದೆ, ಅದೆಂದರೆ ಆದಾಯ(income) ಮತ್ತು ವೆಚ್ಚ(expenditure). ಇನ್ಕಮ್ ಎಂದರೆ ನಮಗೆ ಕೆಲಸದಿಂದ(job) ಬರುವ ಸಂಬಳವಾಗಿದೆ. ವೆಚ್ಚವೆಂದರೆ ನಮ್ಮ ತಿಂಗಳಿನ ಖರ್ಚುಗಳಾಗಿವೆ. ಎರಡನೆಯದಾಗಿ ಆಯವ್ಯಯ ಪಟ್ಟಿ(balance sheet), ಇದರಲ್ಲೂ 2 ರೀತಿ ಇದೆ. ಅವೆಂದರೆ ಸ್ವತ್ತು(assets) ಮತ್ತು ಬಾಧ್ಯತೆ(liabilities), ಈ ಎರಡನ್ನು ಅರ್ಥಮಾಡಿಕೊಳ್ಳುವುದೇ ನಾವು ಬಡವರಾಗುತ್ತೇವೆಯೇ ಇಲ್ಲ ಶ್ರೀಮಂತರಾಗುತ್ತೇವೆಯೇ ಎಂಬುದನ್ನು ತಿಳಿಸುತ್ತದೆ. ಅಸೆಟ್ಸ್ ನಾವು ಕೆಲಸ ಮಾಡದೆ ನಮಗೆ ಹಣ ಗಳಿಸಿ ಕೊಡುತ್ತದೆ. ಇದರಲ್ಲಿ ನೀವು ಕಡಿಮೆ ಕೆಲಸ ಮಾಡುತ್ತೀರಾ. ಇದಕ್ಕೆ ಉದಾಹರಣೆ ಬಾಡಿಗೆ ಹಣ, ಫ್ರಾಂಚೈಸ್ ಬ್ಯುಸಿನೆಸ್ ಇತ್ಯಾದಿ. ಲಿಯಬಿಲಿಟಿ ಎಂದರೆ ಒಂದು ವಸ್ತುವನ್ನು ಖರೀದಿಸಿದ ನಂತರವೂ ನಮ್ಮ ಹಣ ಅದಕ್ಕೆ ಖರ್ಚಾಗುವುದಾಗಿದೆ. ಉದಾಹರಣೆಗೆ ಒಂದು ಪರ್ಸನಲ್ ಕಾರ್, ಅದಕ್ಕೆ ಪ್ರತಿವರ್ಷ ಸರ್ವಿಸ್ ಚಾರ್ಜ್ ನೀಡಬೇಕಾಗುತ್ತದೆ. ನಮಗಾಗಿ ಮನೆ ತೆಗೆದುಕೊಂಡರೆ ಅದರ ಮೆಂಟೆನೆನ್ಸ್ ಚಾರ್ಜ್, ಹೀಗಾಗಿ ನಮ್ಮ ಜೇಬಿನಿಂದ ಹಣ ಹೋಗುತ್ತಿರುತ್ತದೆ.

ಇದನ್ನು ತಿಳಿದ ನಂತರ ಒಂದು ಆಸಕ್ತಿಕರ ವಿಷಯವೆಂದರೆ ಒಬ್ಬ ಬಡ ವ್ಯಕ್ತಿ ಹಣವನ್ನು ಹೇಗೆ ಖರ್ಚು ಮಾಡುತ್ತಾನೆ. ಬಡವ್ಯಕ್ತಿ ಕೂಲಿ ಮಾಡಿ ಆದಾಯ ಗಳಿಸುತ್ತಾನೆ. ಆತನ ಆದಾಯಕ್ಕಿಂತ ವೆಚ್ಚ ಅಧಿಕವಾಗಿರುತ್ತದೆ. ಹೀಗಾಗಿ ಅವನಿಗೆ ಸಿಗುವ ಹಣ ಅವನ ಜೇಬಿಗೆ ಆದಾಯದ(income) ರೀತಿ ಬರುತ್ತದೆ, ನಂತರ ಮೂಲಭೂತ ಅಗತ್ಯಗಳಾದ(basic need) ಆಹಾರ, ಬಾಡಿಗೆ, ಇತ್ಯಾದಿಗಳಿಗೆ ವೆಚ್ಚದ ರೀತಿಯಲ್ಲಿ ಖರ್ಚಾಗುತ್ತದೆ ಮತ್ತು ಇದು ರಿಪೀಟ್ ಆಗುತ್ತಿರುತ್ತದೆ. ಇವರ ಹತ್ತಿರ ಯಾವುದೇ ರೀತಿಯ ಸ್ವತ್ತು(asset) ಮತ್ತು ಬಾಧ್ಯತೆ(liabilities) ಇರುವುದಿಲ್ಲ. ಏಕೆಂದರೆ ಇವರು ಬದುಕಲು ಜೀವಿಸುತ್ತಿರುತ್ತಾರೆ. ಇಂತಹ ಜನಗಳಿಗೆ ಆರ್ಥಿಕ ಜ್ಞಾನ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಮತ್ತು ಇವರನ್ನು ಅಧಿಕ ಆದಾಯ ನೀಡುವ ಕೆಲಸದಲ್ಲಿ ಇರಿಸಿದರೆ, ಇವರ ಆರ್ಥಿಕ ಸ್ಥಿತಿಯನ್ನು ಸುಧಾರಿಸಬಹುದು.

ಇದರ ನಂತರ ಮಧ್ಯಮ ವರ್ಗದ ಜನರು ಬರುತ್ತಾರೆ. ಇವರು ಶ್ರೀಮಂತ ವ್ಯಕ್ತಿ ಆಗಬಹುದು. ಆದರೆ ಆರ್ಥಿಕ ಜ್ಞಾನ ಕಡಿಮೆ ಇರುವ ಕಾರಣ ಇವರುಗಳು ಸ್ವತ್ತು(assets) ಬದಲು ಬಾಧ್ಯತೆಗಳನ್ನು(liabilities) ಖರೀದಿಸುತ್ತಿರುತ್ತಾರೆ ಮತ್ತು ಇಲಿಗಳ ಓಟದಲ್ಲಿ(rat race) ಸಿಕ್ಕಿಕೊಳ್ಳುತ್ತಾರೆ. ಇವರಿಗೆ ಹಣವೂ ತಮ್ಮ ಕೆಲಸ ಇಲ್ಲ ಸ್ವಯಂ ಉದ್ಯೋಗದಿಂದ ಬರುತ್ತದೆ. ಇವರು ಮೊದಲೇ ಹೋಮ್ ಲೋನ್, ಕಾರ್ ಲೋನ್, ಕ್ರೆಡಿಟ್ ಕಾರ್ಡ್ ಬಿಲ್ಸ್ ರೀತಿಯ ಬಾದ್ಯತೆಗಳನ್ನು ತೆಗೆದುಕೊಂಡಿರುವುದರಿಂದ ಅವರ ಆದಾಯ ಈ ಬಾದ್ಯತೆಗಳಿಗೆ ಹೋಗುತ್ತದೆ, ನಂತರ ಅವರ ಮನೆಯ ದಿನ ನಿತ್ಯದ ಖರ್ಚಿಗೆ ಉಳಿದ ಹಣ ಹೋಗುತ್ತದೆ. ಇವರ ಹತ್ತಿರ ಕೂಡ ಯಾವುದೇ ಸ್ವತ್ತು(asset) ಇರುವುದಿಲ್ಲ ಮತ್ತು ಪ್ರತಿ ತಿಂಗಳು ಇವರು ಹೊಸ ಬಾಧ್ಯತೆಗಳನ್ನು(liabilities) ತೆಗೆದುಕೊಳ್ಳುತ್ತಿರುತ್ತಾರೆ. ಉದಾಹರಣೆಗೆ ಐಫೋನ್ ಖರೀದಿಸುವುದು ಇತ್ಯಾದಿ. ಹೀಗಾಗಿ ಒಬ್ಬ ಮಧ್ಯಮ ವರ್ಗದ ವ್ಯಕ್ತಿ ಇಲಿಗಳ ಓಟದಲ್ಲಿ ಇರುತ್ತಾನೆ.

ಕೊನೆಯದಾಗಿ ಶ್ರೀಮಂತ ವ್ಯಕ್ತಿ ಬರುತ್ತಾರೆ. ಇವರು ಎಷ್ಟು ಸ್ವತ್ತು(asset) ಮಾಡಿರುತ್ತಾರೆಂದರೆ ಆದ್ದರಿಂದಲೇ ಇವರ ಆದಾಯ ಜನರೇಟ್ ಆಗುತ್ತದೆ. ಇವರು ಆ ಸ್ವತ್ತುವಿನಿಂದ ಕಡಿಮೆ ಹಣವನ್ನು ಖರ್ಚು ಮಾಡುತ್ತಾರೆ. ಶ್ರೀಮಂತ ವ್ಯಕ್ತಿಗಳು ಸ್ವತ್ತುವಿನ ಹಣದಿಂದಲೇ ಬಾದ್ಯತೆಗಳನ್ನು ಖರೀದಿಸುತ್ತಾರೆ. ಸ್ವತ್ತುವಿನಿಂದ(asset) ಅಧಿಕ ಹಣ ಬರುತ್ತಿರುವ ಕಾರಣ, ಅವರು ಸ್ವತ್ತುವಿನ ಉಳಿದ ಹಣದಿಂದ ಇನ್ನಷ್ಟು ಸ್ವತ್ತುವನ್ನು(asset) ಗಳಿಸುತ್ತಾರೆ. ಹೀಗಾಗಿ ಅವರ ಸ್ವತ್ತುವಿನ(asset) ಭಾಗ ಬೆಳೆಯುತ್ತಿರುತ್ತದೆ. ಅದರಿಂದಲೇ ಶ್ರೀಮಂತರು ಶ್ರೀಮಂತರಾಗುತ್ತಲೇ ಇರುತ್ತಾರೆ. ಶ್ರೀಮಂತ ವ್ಯಕ್ತಿಗೆ ಮೊದಲು ಸ್ವತ್ತು(asset) ಮಾಡಬೇಕು, ಅದರಿಂದ ಬಾಧ್ಯತೆಗಳನ್ನು(liabilities) ಖರೀದಿಸಬೇಕು ಎಂದು ಚೆನ್ನಾಗಿ ತಿಳಿದಿರುತ್ತದೆ.

ಇದನ್ನು ಓದಿ: Rich Dad Poor Dadನ ಮುಖ್ಯ ಐದು ಕಲಿಕೆಗಳು

2. Cashflow quadrant.

what are the 4 cashflow quadrant in kannada
cashflow quadrant

ಈ ಪುಸ್ತಕದಲ್ಲಿ ಯಾವುದೇ ವ್ಯಕ್ತಿ 4 ರೀತಿಯಲ್ಲಿ ಹಣ ಗಳಿಸಬಹುದು ಎಂದು ತಿಳಿಸಲಾಗಿದೆ. ಅದನ್ನು ಚತುರ್ಭುಜದಲ್ಲಿ(quadrant) ತಿಳಿಸಲಾಗಿದೆ. ಅವೆಂದರೆ E, S, B ಮತ್ತು I. ಇದರಲ್ಲಿ E ಏಂದರೆ employee, S ಏಂದರೆ self employee ಅಥವಾ small business, B ಎಂದರೆ big business ಮತ್ತು I ಎಂದರೆ investor. ರಾಬರ್ಟ್ ಕಿಯೋಸಾಕಿಯವರ ಪ್ರಕಾರ ಆರ್ಥಿಕವಾಗಿ ಅಧಿಕ ಜ್ಞಾನ ಹೊಂದಿರುವ ವ್ಯಕ್ತಿಯು B ಮತ್ತು I quadrantನಲ್ಲಿ ಬರುತ್ತಾನೆ. ಇದು ಏಕೆಂದರೆ E ಮತ್ತು S quadrantನಿಂದ ಶ್ರೀಮಂತರಾಗುವುದು ಸ್ವಲ್ಪ ಕಷ್ಟವಾಗಿದೆ. ಈ 4 ಚತುರ್ಭುಜದ ಬಗ್ಗೆ ವಿವರವಾಗಿ(detail) ತಿಳಿಯೋಣ.

E ಎಂದರೆ employee, ಈ ವ್ಯಕ್ತಿ ಒಂದು ಕೆಲಸಕ್ಕೆ ಸೇರಿರುತ್ತಾನೆ. ಈತ ಹಣಕ್ಕಾಗಿ ತನ್ನ ಸಮಯವನ್ನು ನೀಡುತ್ತಿರುತ್ತಾನೆ. ಇವರು ಕೆಲಸ ಮಾಡುವುದನ್ನು ನಿಲ್ಲಿಸಿದರೆ ಹಣ ಬರುವುದು ನಿಲ್ಲುತ್ತದೆ. ಎರಡನೆಯದಾಗಿ S ಎಂದರೆ self employee ಅಥವಾ small business ಆಗಿದೆ. ಇವರು ತಮ್ಮದೇ ಆದ ಅಂಗಡಿ ಇಲ್ಲ ಒಂದು ಚಿಕ್ಕ ಬ್ಯುಸಿನೆಸ್ ಪ್ರಾರಂಭಿಸಿದವರಾಗಿದ್ದಾರೆ. ರಾಬರ್ಟ್ ಕಿಯೋಸಾಕಿಯವರ ಪ್ರಕಾರ ಈ ನಾಲ್ವರಲ್ಲಿ ಸ್ವಯಂ ಉದ್ಯೋಗಿಯ ಸ್ಥಿತಿಯು ತುಂಬಾ ಕೆಟ್ಟದ್ದಾಗಿದೆ. ಉದಾಹರಣೆಗೆ ಒಬ್ಬ ದಂತವೈದ್ಯ(dentist) ಇದನ್ನೇ ಎಂದುಕೊಳ್ಳಿ, ಅವರೆಷ್ಟು ಯಶಸ್ವಿ ಆಗುತ್ತಾರೋ ಅಷ್ಟು ರೋಗಿಗಳು ಅವರ ಹತ್ತಿರ ಬರುತ್ತಾರೆ. ಅವರು ಕೂಡ ಅಷ್ಟೇ ನಿರತರಾಗಿರುತ್ತಾರೆ(busy). ಹಬ್ಬದ ದಿನಗಳಲ್ಲೂ ಅವರು ನಿರತರಾಗಿರುತ್ತಾರೆ. ಅವರ ಕುಟುಂಬಕ್ಕೆ ಸ್ವಲ್ಪ ಸಮಯ ನೀಡುತ್ತಿರುತ್ತಾರೆ.

ಇದರ ನಂತರ B ಎಂದರೆ big business, ಇವರು ಇತರರ ಸಮಯವನ್ನು ತಮ್ಮ ಕೆಲಸಕ್ಕಾಗಿ ಬಳಸಿಕೊಳ್ಳುತ್ತಾರೆ. ಇವರುಗಳು ಫ್ರೀ ಇಲ್ಲದೆ ಇರಬಹುದು, ಆದರೆ ಇವರು ಇತರರಿಂದ ಕೆಲಸ ಮಾಡಿಸಿಕೊಳ್ಳುವುದನ್ನು ತಿಳಿದಿರುತ್ತಾರೆ. ಇದು ದೇಶಕ್ಕೆ ಒಳ್ಳೆಯದಾಗಿದೆ. ಏಕೆಂದರೆ ಇದರಿಂದಲೇ ಉದ್ಯೋಗಗಳು(jobs) ಸೃಷ್ಟಿಯಾಗುತ್ತದೆ. ಇದಕ್ಕೆ ಉದಾಹರಣೆ ಜೆಫ್ ಬೆಜೋಸ್, ಅವರು ಅಮೆಜಾನ್‌ನ ಸಿಇಒ ಸ್ಥಾನದಿಂದ ಹೊರಬಂದರು. ಇದರ ನಂತರವೂ ಅವರ ಹತ್ತಿರ ಅಮೆಜಾನ್‌ನ ಶೇರ್ಸ್ ಇದೆ ಮತ್ತು ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ.

ಇದರ ನಂತರ I ಎಂದರೆ investor ಬರುತ್ತಾರೆ. ಇವರು others people money ಕಾನ್ಸೆಪ್ಟನ್ನು ಅರ್ಥಮಾಡಿಕೊಂಡಿರುತ್ತಾರೆ. ಉದಾಹರಣೆಗೆ ರಾಬರ್ಟ್ ಕಿಯೋಸಾಕಿಯವರು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲು ಅವರ ಕೇವಲ 10 ರಿಂದ 20 ರಷ್ಟು ಹಣವನ್ನು ಮಾತ್ರ ಹಾಕುತ್ತಿದ್ದರು. ಇನ್ನು ಉಳಿದ ಹಣಕ್ಕೆ ಸಾಲ ತೆಗೆದುಕೊಳ್ಳುತ್ತಿದ್ದರು. ಆ ಸಾಲದ ಇನ್ವೆಸ್ಟ್ಮೆಂಟ್ ರಿಯಲ್ ಎಸ್ಟೇಟ್ನ ಬಾಡಿಗೆ ಹಣದಿಂದ ಹೋಗುತ್ತಿತ್ತು ಮತ್ತು ಇವರು ತಮ್ಮ ಪ್ರಾಪರ್ಟಿಯನ್ನು ಮ್ಯಾನೇಜ್ ಕೂಡ ಮಾಡುತ್ತಿರಲಿಲ್ಲ, ಅದಕ್ಕಾಗಿ ಇವರ ಹತ್ತಿರ ಉದ್ಯೋಗಿಗಳು ಇರುತ್ತಿದ್ದರು.

ಇದನ್ನು ಓದಿ: ಇಂಟೆಲಿಜೆಂಟ್ ಇನ್ವೆಸ್ಟರ್ ಪುಸ್ತಕದ ವಿಶ್ಲೇಷಣೆ

3. Guide to investing.

rich dad guide to investing book summary in kannada
guide to investing

ಇದರಲ್ಲಿ 5 ರೀತಿಯ ಹೂಡಿಕೆದಾರರ ಬಗ್ಗೆ ತಿಳಿಸಲಾಗಿದೆ. ಅದರಲ್ಲಿ ಮೊದಲನೆಯದಾಗಿ accredited investors, ನೀವು ಎಂದಾದರೂ ಬೈಜುನ ಷೇರನ್ನು ಮೊದಲೇ ಖರೀದಿಸಬೇಕಿತ್ತು ಎಂದು ಯೋಚಿಸಿದ್ದೀರಾ. ಬೈಜು ತುಂಬಾ ಬೇಗನೆ ಮುಂದುವರೆಯಿತು, ಆದರೆ ಈ ಕಂಪನಿಯ ಐಪಿಒ ಲಿಸ್ಟಿಂಗ್ ಆಗಿರಲಿಲ್ಲ, ಹೀಗಾಗಿ ಸಾಮಾನ್ಯ ವ್ಯಕ್ತಿ ಈ ಕಂಪನಿಯ ಷೇರನ್ನು ಖರೀದಿಸಲು ಸಾಧ್ಯವಿಲ್ಲ. ಏಕೆಂದರೆ ಭಾರತ ಸರ್ಕಾರದ ಪ್ರಕಾರ ಯಾವ ಕಂಪನಿ SEBI ಎಂದರೆ security exchange board of india ದಿಂದ ರೆಗ್ಯುಲೇಟ್ ಇಲ್ಲವೋ, ಅದರ ಶೇರ್‌ಗಳನ್ನು ಸಾಮಾನ್ಯವಾಗಿ ಶ್ರೀಮಂತ ವ್ಯಕ್ತಿ ಮಾತ್ರ ಖರೀದಿಸಬಹುದು.

ಯಾರ ವಾರ್ಷಿಕ ಆದಾಯ 2 ಕೋಟಿ ಇದೆಯೋ ಇಲ್ಲ, ಯಾರ ಹತ್ತಿರ 7.5 ಕೋಟಿಯಷ್ಟು ಆಸ್ತಿ(asset) ಇದೆಯೋ ಅವರನ್ನು accredited investors ಎನ್ನಲಾಗುತ್ತದೆ. ನಾವು ಈ ಕೆಟಗರಿಗೆ ಬರುವುದಿಲ್ಲ, ಹೀಗಾಗಿ ಬೈಜು ತರಹದ ಕಂಪನಿಗಳಲ್ಲಿ ಹೂಡಿಕೆ ಮಾಡಲು ಸಾಧ್ಯವಾಗುವುದಿಲ್ಲ.

ಎರಡನೇ ಕೆಟಗರಿ qualified investors, ಇವರಿಗೆ ಸಾರ್ವಜನಿಕವಾಗಿ ವ್ಯಾಪಾರ ಮಾಡುವ ಕಂಪನಿಗಳ ಜ್ಞಾನವಿರುತ್ತದೆ. ಅಂದರೆ ಕಂಪನಿಯ ಷೇರನ್ನು ಅನಲೈಸ್ ಮಾಡಲು ಗೊತ್ತಿರುವ ನಮ್ಮಲ್ಲೇ ಇರುವ ಜನರಾಗಿದ್ದಾರೆ. ಹೀಗಾಗಿ ನಾವು ಕೂಡ ಈ ಕೆಟಗರಿಗೆ ಬರುತ್ತೇವೆ.

ಮೂರನೇ ಕೆಟಗರಿ sophisticated investors, ಇವರಲ್ಲಿ qualified investors ನ ಎಲ್ಲಾ ಕ್ವಾಲಿಟಿ ಇರುತ್ತದೆ. ಅಂದರೆ ಇವರಿಗೆ ಕಂಪನಿ ಅನಲೈಸ್ ಮಾಡಲು ಬರುತ್ತದೆ ಮತ್ತು ಇದರ ಜೊತೆಗೆ ತೆರಿಗೆಗಳ(taxes) ಜ್ಞಾನ ಕೂಡ ಇರುತ್ತದೆ. ಇದರಿಂದ ಇವರು ಕಡಿಮೆ ತೆರಿಗೆ ನೀಡುತ್ತಾರೆ. ಹೀಗಾಗಿ ಇವರ ರಿಟರ್ನ್ qualified investors ಗಿಂತ ಅಧಿಕವಿರುತ್ತದೆ.

ನಾಲ್ಕನೇ ಕೆಟಗರಿ inside investors, ಇವರು ತಮ್ಮದೇ ಆದ ಆಸ್ತಿ ಇಲ್ಲ ಬ್ಯುಸಿನೆಸ್ ಪ್ರಾರಂಭಿಸುತ್ತಾರೆ. ಇದರಲ್ಲಿ ಅವರು ಬಾಡಿಗೆಗೆ ರೂಮ್ ನೀಡಿರಬಹುದು, ಇಲ್ಲ ಕೋಟಿಗಟ್ಟಲೆ ಕಂಪನಿಯನ್ನೇ ಮಾಡಿರುವ ಯಾವುದೇ ಇನ್ವೆಸ್ಟರ್ inside investors ಆಗಿದ್ದಾರೆ.

ಕೊನೆಯ ಕೆಟಗರಿ ultimate investors, ಇವರು ಹೂಡಿಕೆದಾರರಲ್ಲಿ ಅತ್ಯುನ್ನತ ವರ್ಗದವರಾಗಿದ್ದಾರೆ. ಇವರು ಒಂದು ದೊಡ್ಡ ಕಂಪನಿ ಮಾಡಿ, ಅದನ್ನು ಪಬ್ಲಿಕ್ ಮಾಡಿದ್ದಾರೆ. ಇದರಲ್ಲಿ ಇತರರು ಅವರ ಕಂಪನಿಯ ಶೇರ್ ಖರೀದಿಸುತ್ತಾರೆ. ಜೊಮಾಟೊದ ದೀಪಿಂದರ್ ಗೋಯಲ್ ಈ ಕೆಟಗರಿಗೆ ಬರುತ್ತಾರೆ, ಇದು ಏಕೆಂದರೆ ನಾವು ಅವರ ಕಂಪನಿಯ ಶೇರ್ ಖರೀದಿಸುತ್ತಿದ್ದೇವೆ.

ಇದನ್ನು ಓದಿ: ಗಮನ ಮತ್ತು ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ?

4. Increase your financial Iq.

how do you increase your financial iq book summary in kannada
increase your financial iq

ಇದರಲ್ಲಿ ರಾಬರ್ಟ್ ಅವರು ನೀವು ಅಧಿಕ ಹಣ ಗಳಿಸಿದ ನಂತರ ನಿಮ್ಮ ದೊಡ್ಡ ಖರ್ಚು ತೆರಿಗೆ(tax) ಆಗುತ್ತದೆ ಎಂದು ಹೇಳಿದ್ದಾರೆ. ಒಂದು ವೇಳೆ ನಾವು E ಅಥವಾ S ಕೆಟಗರಿಯಲ್ಲಿ ಇದ್ದರೆ ನಮಗೆ ತೆರಿಗೆ ಉಳಿಸಲು ಯಾವುದೇ ಮಾರ್ಗವಿಲ್ಲ. ಆದರೆ B ಮತ್ತು I ಕೆಟಗರಿಯ ಜನರು ತೆರಿಗೆಯಿಂದ ಕಾನೂನುಬದ್ಧವಾಗಿ(legal) ಪಾರಾಗಬಹುದು. ಇದನ್ನು ಭಾರತ ಸರ್ಕಾರವೇ ಹೇಳಿದೆ. ಇದು ಏಕೆಂದರೆ B ಎಂದರೆ business, ಇದು ಉದ್ಯೋಗವನ್ನು ಸೃಷ್ಟಿ ಮಾಡುತ್ತದೆ. I ಎಂದರೆ investors, ಇವರು ಬಿಸಿನೆಸ್‌ನಲ್ಲಿ ಹಣ ಹಾಕುತ್ತಾರೆ. ಇದರಿಂದಲೂ ಉದ್ಯೋಗ ಸೃಷ್ಟಿ ಆಗುತ್ತದೆ. ರಿಯಲ್ ಎಸ್ಟೇಟ್, ಇದರಿಂದ ದೇಶದ ಜನಗಳಿಗೆ ಆಶ್ರಯಕ್ಕಾಗಿ ಒಂದು ಒಳ್ಳೆಯ ಜಾಗ ಸಿಗುತ್ತದೆ. ಏಕೆಂದರೆ ಸರ್ಕಾರ ನಮ್ಮಿಂದ ತೆರಿಗೆಯನ್ನು ತೆಗೆದುಕೊಂಡರೂ, ಅದರ ಕೊನೆಯ ಗುರಿ ಕೂಡ ಇದೇ ಆಗಿದೆ. ಅಂದರೆ ಉದ್ಯೋಗ ಸೃಷ್ಟಿ ಮಾಡಬೇಕು, ಇಲ್ಲ ಜೀವನದ ಮಟ್ಟವನ್ನು(standard of living) ಬೆಳೆಸಬೇಕು.

ಈ ಪುಸ್ತಕದಲ್ಲಿ 5 financial iq ಬಗ್ಗೆ ತಿಳಿಸಲಾಗಿದೆ. ಅದರಲ್ಲಿ ಮೊದಲನೆಯದ್ದು

making more money, ಇದರಲ್ಲಿ ನೀವು ಅಧಿಕ ಆದಾಯ ನೀಡುವ ಕೌಶಲ್ಯವನ್ನು ಕಲಿತು, ಅದರಿಂದ ಅಧಿಕ ಆದಾಯ ಗಳಿಸಿ. ಯಾವ ವ್ಯಕ್ತಿ ವರ್ಷದಲ್ಲಿ 50 ಲಕ್ಷ ಗಳಿಸುತ್ತಾನೋ ಆತನ financial iq ವರ್ಷದಲ್ಲಿ 2 ಲಕ್ಷ ಗಳಿಸುವ ವ್ಯಕ್ತಿಗಿಂತ ಹೆಚ್ಚಿರುತ್ತದೆ.

ಎರಡನೆಯದ್ದು protecting your money, ಅಂದರೆ ನಾವು ಗಳಿಸುವ ಹಣವನ್ನು ಇತರರಿಂದ ಉಳಿಸಿಕೊಳ್ಳಬೇಕು.

ಮೂರನೆಯದ್ದು budgetting your money, ಇದೆಂದರೆ, ನಾವು ಪ್ರತಿ ತಿಂಗಳು ಶೇಕಡಾ 10 ರಷ್ಟು ಹಣ ಉಳಿಸಬೇಕು ಎಂದು ಯೋಚಿಸಿದರೆ, ಅದೇನೇ ಆದರೂ ನಾವು ಪ್ರತಿ ತಿಂಗಳು ಶೇಖಡ 10 ರಷ್ಟು ಹಣವನ್ನು ಉಳಿಸಲೇಬೇಕು. ಇದನ್ನು ನೀವು ಕರೆಂಟ್ ಬಿಲ್ ಎಂದುಕೊಳ್ಳಿ. ಒಂದು ವೇಳೆ 10% ಉಳಿಸದಿದ್ದರೆ ಕರೆಂಟ್ ಅನ್ನು ಕಟ್ ಮಾಡಲಾಗುತ್ತದೆ.

ನಾಲ್ಕನೆಯದ್ದು leveraging your money, ಇದರಲ್ಲಿ ಹಣಕಾಸು ಸಂಸ್ಥೆಗಳ(financial institution) ಸಹಾಯ ಪಡೆದು, ದುಬಾರಿ ಪ್ರಾಪರ್ಟಿಗಳನ್ನು ಖರೀದಿಸಬಹುದು. ಇದಕ್ಕೆ ಅಧಿಕ ಜ್ಞಾನವಿರಬೇಕು.

ಇನ್ನೂ ಐದನೆಯದು improving your financial information, ಇದರ ಅರ್ಥ ನಾವು ಯಾವುದೇ ತರಹದ ಹೂಡಿಕೆ ಮಾಡುತ್ತಿದ್ದರು, ಅದರ ಬಗ್ಗೆ ಪೂರ್ತಿಯಾಗಿ ತಿಳಿದಿರಬೇಕು. ವಾರೆನ್ ಬಫೆಟ್ ಅವರಿಗೆ 100% ನಂಬಿಕೆಯಿರುವ ಬೆಳವಣಿಗೆ ನೀಡುವ ಕಂಪನಿಯಲ್ಲಿ ಮಾತ್ರ ಹೂಡಿಕೆ ಮಾಡುತ್ತಾರೆ.

ಇದನ್ನು ಓದಿ: ಸೋಮಾರಿ ವಿದ್ಯಾರ್ಥಿಗಳ ನಾಲ್ಕು ಪರಿಣಾಮಕಾರಿ ಅಧ್ಯಯನ ಸಲಹೆಗಳು

5. The business of 21st century.

what is the business of 21st century summary in kannada
business of 21st century

ಈ ಪುಸ್ತಕದಲ್ಲಿ ರಾಬರ್ಟ್ ಕಿಯೋಸಾಕಿಯವರು ನೆಟ್ವರ್ಕ್ ಮಾರ್ಕೆಟಿಂಗ್ ಬಗ್ಗೆ ತಿಳಿಸಿದ್ದಾರೆ. ಇದರಲ್ಲಿ 8 ಅಸೆಟ್(asset) ಬಗ್ಗೆ ತಿಳಿಸಲಾಗಿದೆ ಮತ್ತು 8 ಅಸೆಟ್ಗಳನ್ನು ನೆಟ್ವರ್ಕ್ ಮಾರ್ಕೆಟಿಂಗ್ ಜೊತೆಗೆ ಕೂಡಿಸಲಾಗಿದೆ. ಈ 8 ಅಸೆಟ್ಗಳೆಂದರೆ,

1. Real world business education,

ರಾಬರ್ಟ್ ಕಿಯೋಸಾಕಿಯವರ ಪ್ರಕಾರ ನಾವು ನೆಟ್ವರ್ಕ್ ಮಾರ್ಕೆಟಿಂಗ್ ಪ್ರಾರಂಭಿಸಿದರೆ ನಮಗೆ ರಿಯಲ್ ವರ್ಲ್ಡ್ ಜ್ಞಾನ ಸಿಗುತ್ತದೆ. ಅಂದರೆ ನಾವು ಬ್ಯುಸಿನೆಸ್‌ನಲ್ಲಿ ಹೇಗೆ ಕೆಲಸ ಮಾಡುವುದು ಎಂದು ತಿಳಿಯುತ್ತದೆ.

2. Profitable path to personal development,

ರಾಬರ್ಟ್ ಕಿಯೋಸಾಕಿಯವರ ಪ್ರಕಾರ ನೆಟ್ವರ್ಕ್ ಮಾರ್ಕೆಟಿಂಗ್ ನಮಗೆ ಭಯವನ್ನು ಹ್ಯಾಂಡಲ್ ಮಾಡುವ ಬಗ್ಗೆ ಕಲಿಸುತ್ತದೆ.

3. A circle of friends who share your dreams and values,

ನೆಟ್ವರ್ಕ್ ಮಾರ್ಕೆಟಿಂಗ್ ನಿಂದ ಬ್ಯುಸಿನೆಸ್‌ನ ಜ್ಞಾನ ಬರುತ್ತದೆ ಮತ್ತು ನಮ್ಮ ರೀತಿಯೇ ಯೋಚಿಸುವ ಗೆಳೆಯರು ಸಿಗುತ್ತಾರೆ.

4. The power of your own network,

ಇದರ ಪ್ರಕಾರ ಪವರ್ ಎನ್ನುವುದು ವಸ್ತುವಿನಲ್ಲಿ(product) ಇರುವುದಿಲ್ಲ, ಬದಲಾಗಿ ನೆಟ್ವರ್ಕಿಂಗ್ನಲ್ಲಿ ಇರುತ್ತದೆ. ಹೀಗಾಗಿ ನಾವು ನಮ್ಮದೇ ಒಂದು ನೆಟ್ವರ್ಕ್ ಮಾಡಿ ಅದನ್ನು ಬೆಳೆಸಬೇಕು ಎಂದು ತಿಳಿಸಲಾಗಿದೆ.

5. A duplicable, fully scalable business,

ಇದರ ಅರ್ಥ ನೆಟ್ವರ್ಕ್ ಮಾರ್ಕೆಟಿಂಗ್ನಲ್ಲಿ ಅರೋಹ್ಯತೆಯ(scalability) ಸಮಸ್ಯೆ ಇರುವುದಿಲ್ಲ. ನಾವು ಎಷ್ಟು ಜನಗಳಿಗೆ ವಸ್ತು ಮಾರಬೇಕೆಂದುಕೊಳ್ಳುತ್ತೇವೆಯೋ ಅಷ್ಟು ಜನರಿಗೆ ಮಾರಬಹುದು.

6. Incomparable leadership skills,

ನೆಟ್ವರ್ಕ್ ಮಾರ್ಕೆಟಿಂಗ್ ನಿಂದ ನಮ್ಮ ನಾಯಕತ್ವದ ಗುಣಮಟ್ಟ ಬೇಗನೆ ಬೆಳೆಯುತ್ತದೆ.

7. mechanism for genuine welth creation,

ರಾಬರ್ಟ್ ಕಿಯೋಸಾಕಿ ಪ್ರಕಾರ ಸಂಪತ್ತು ಎಂದರೆ ಹಣವಲ್ಲ ಬದಲಿಗೆ ಸಮಯವಾಗಿದೆ. ಇದನ್ನು ನೆಟ್ವರ್ಕ್ ಮಾರ್ಕೆಟಿಂಗ್ ನಿಂದ ಸಾಧಿಸಬಹುದು.

8. Big dreams and the capacity of living,

ಅಂದರೆ ನೆಟ್ವರ್ಕ್ ಮಾರ್ಕೆಟಿಂಗ್ ನಿಂದ ನಾವು ದೊಡ್ಡ ಮನೆ ಇತ್ಯಾದಿ ಕನಸುಗಳನ್ನು ನನಸಾಗಿಸಿಕೊಳ್ಳಬಹುದು ಮತ್ತು ನಮ್ಮನ್ನು ಪೂರ್ತಿಯಾಗಿ ರೂಪಾಂತರ(transform) ಮಾಡಿಕೊಳ್ಳಬಹುದು.

ಇದೆಲ್ಲವನ್ನು ರಾಬರ್ಟ್ ಕಿಯೋಸಾಕಿಯವರು ಹೇಳಿರುವುದಾಗಿದೆ. ಹೀಗಾಗಿ ನೆಟ್ವರ್ಕ್ ಮಾರ್ಕೆಟಿಂಗ್ ಅನ್ನು ಯೋಚಿಸಿ ಮಾಡಿ.

ಇದನ್ನು ಓದಿ: 20ರ ವಯಸ್ಸಿನಲ್ಲಿ ನಿಮ್ಮ ಹಣ ಖರ್ಚಗುವ 7 ಬಲೆಗಳು

6. Why "A" Students Work for "C" Students.

ಈ ಪುಸ್ತಕದಲ್ಲಿ ಒಂದು ಪ್ರಸಿದ್ಧ ಉಲ್ಲೇಖವಿದೆ. ಅದೆಂದರೆ question: "c" ವಿದ್ಯಾರ್ಥಿ "a" ವಿದ್ಯಾರ್ಥಿಗಳಿಗೆ ಹೋಲಿಸಿದರೆ ಬದುಕಿನಲ್ಲಿ ಹೇಗೆ ಉತ್ತಮ ಮಾಡಬಹುದು.

answer: "a" ವಿದ್ಯಾರ್ಥಿಗಳು ಓದದಿರುವುದನ್ನು ಓದುವ ಮೂಲಕ...

ಈ ಪುಸ್ತಕದಲ್ಲಿ ಆರ್ಥಿಕ ಜ್ಞಾನದ ಬಗ್ಗೆ ತಿಳಿಸಲಾಗಿದೆ. "a" ಸ್ಟೂಡೆಂಟ್ಸ್ ಕೇವಲ ಅಕೆಡಮಿಕ್ ಎಜುಕೇಶನ್ ಮೇಲೆ ಮಾತ್ರ ಫೋಕಸ್ ಮಾಡುತ್ತಾರೆ ಮತ್ತು ಅಕಡಮಿಕ್ ಎಜುಕೇಶನ್ ಹೇಳಿಕೊಡುವ ಶಾಲೆಯಲ್ಲಿ ಫೈನಾನ್ಷಿಯಲ್ ಬಗ್ಗೆ ಹೇಳಿಕೊಡುವುದಿಲ್ಲ. ಹೀಗಾಗಿ ಅವರು ರಿಯಲ್ ವರ್ಲ್ಡ್‌ನಲ್ಲಿ ಎಂಪ್ಲಾಯಿ ಅಥವಾ ಸೆಲ್ಫ್ ಎಂಪ್ಲಾಯ್ ಆಗಲು ಮಾತ್ರ ಯೋಗ್ಯರಿರುತ್ತಾರೆ. ಆದರೆ "c" ಸ್ಟೂಡೆಂಟ್ಸ್ ಇತರೆ ಪ್ರದೇಶಗಳನ್ನು(area) ಅನ್ವೇಷಿಸುತ್ತಾರೆ. ಹೀಗಾಗಿ ಅವರು ಬ್ಯುಸಿನೆಸ್ ಇಲ್ಲ ಹೂಡಿಕೆದಾರರಾಗುವ ಅವಕಾಶ(chance) ಅಧಿಕವಿದೆ.

why a students work for c students summary in kannada
why a students work for c students

"a" ಸ್ಟೂಡೆಂಟ್ಸ್ ಎಷ್ಟೋ ಕಾನ್ಸೆಪ್ಟ್‌ಗಳನ್ನು ಓದುವುದಿಲ್ಲ, ಅದರೆ "c" ಸ್ಟೂಡೆಂಟ್ಸ್ ಅವುಗಳನ್ನು ಓದಿರುತ್ತಾರೆ. ಅವೆಂದರೆ,

  • 1. ನಮ್ಮ ಮನೆ ನಮಗೆ ಅಸೆಟ್(asset) ಅಲ್ಲ.
  • 2. savers are losers,
  • ಅಂದರೆ ಹಣವನ್ನು ಉಳಿಸುತ್ತಲೇ ಇರುವವರು ಅದನ್ನು ಕಳೆದುಕೊಳ್ಳುತ್ತಾರೆ. ಏಕೆಂದರೆ ಸರ್ಕಾರ ಅದಕ್ಕೆ ಇಷ್ಟಬಂದ ರೀತಿಯಲ್ಲಿ ಹಣವನ್ನು ಮುದ್ರಿಸುತ್ತದೆ. ಇದರಿಂದ ಹಣದುಬ್ಬರ(inflation) ಏರುತ್ತಲೇ ಇರುತ್ತದೆ. ಹೀಗಾಗಿ ನಮ್ಮ ಹಣವನ್ನು ಹಣದುಬ್ಬರವನ್ನು ಅನ್ನು ಸೋಲಿಸುವ ಅಕೌಂಟ್ನಲ್ಲಿ ಇಡಬೇಕು.

  • 3. ಸಾಲವನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಬಹುದು.
  • 4. ಶ್ರೀಮಂತರು ತೆರಿಗೆಯ ಬಗ್ಗೆ ಪೂರ್ತಿಯಾಗಿ ತಿಳಿದಿರುತ್ತಾರೆ. ತೆರಿಗೆಯಿಂದಲೇ ಹಣವನ್ನು ಗಳಿಸುತ್ತಿರುತ್ತಾರೆ.
  • 5. ಶ್ರೀಮಂತರು ಹಣಕ್ಕಾಗಿ ಕೆಲಸ ಮಾಡುವುದಿಲ್ಲ, ಬದಲಿಗೆ ಹಣವನ್ನು ತಮಗಾಗಿ ಹೇಗೆ ಕೆಲಸ ಮಾಡಿಸಬೇಕು ಎಂದು ಯೋಚಿಸುತ್ತಾರೆ.
ಇದನ್ನು ಓದಿ: ಷೇರು ಮಾರುಕಟ್ಟೆಯ ಮೇಲೆ ಸಂಪೂರ್ಣ ವಿವರ

7. Second Chance.

second chance book summary in kannada
second chance

ಇದರಲ್ಲಿ ರಾಬರ್ಟ್ 4 asset class ಬಗ್ಗೆ ತಿಳಿಸುತ್ತಾರೆ. ಇವುಗಳಲ್ಲಿ ನಾವು ಯಾವುದೇ ಅಸೆಟ್ ಕ್ಲಾಸ್ ಅನ್ನು ಆಯ್ಕೆ ಮಾಡಬಹುದು ಮತ್ತು ಅದರ ಬಗ್ಗೆ ಜ್ಞಾನ ಪಡೆಯಬಹುದು. ಇದುವೇ ನಮಗೆ ಸೆಕೆಂಡ್ ಚಾನ್ಸ್ ಆಗಿದೆ. ಇದು ಏಕೆಂದರೆ ಮೊದಲ ಚಾನ್ಸ್ ಅನ್ನು ನಾವು ನಮ್ಮ ಶಾಲೆಗಳಲ್ಲಿ ಕಳೆದುಕೊಂಡೆವು. ಆ 4 ಅಸೆಟ್ ಕ್ಲಾಸ್‌ಗಳೆಂದರೆ,

1. ಬ್ಯುಸಿನೆಸ್,

ಇದರ ಅರ್ಥ ಒಂದು ಬಿಸಿಸೆಸ್ ಪ್ರಾರಂಭಿಸಿ, ಅದು ನೀವು ಇಲ್ಲದೆಯೂ ನಡೆಯುವಂತೆ ಮಾಡಿ.

2. ರಿಯಲ್ ಎಸ್ಟೇಟ್,

ಅಪಾರ್ಟ್ಮೆಂಟ್, ರೂಂಗಳನ್ನು ನೀಡಿ, ಅದರಿಂದ ಬಾಡಿಗೆ ಪಡೆಯುತ್ತೀರಿ, ಪೂರ್ತಿ ಏರಿಯಾವನ್ನು ಹುಡುಕಿ, ಆ ಏರಿಯಾದಲ್ಲಿರುವ ಮನೆಗಳ ಸರಾಸರಿ ಬೆಲೆಯನ್ನು ಚೆಕ್ ಮಾಡಿ ಮತ್ತು ಯಾವ ಮನೆ ಸರಾಸರಿಗಿಂತ ಕಡಿಮೆ ಬೆಲೆಗೆ ಸಿಗುತ್ತದೆಯೋ ಅದನ್ನು ಖರೀದಿಸುವುದು ಸೂಕ್ತವಾಗಿದೆ.

3. ಪೇಪರ್ ಅಸೆಟ್ಸ್,

ಇಂಡೆಕ್ಸ್‌ ಫಂಡ್ಸ್, ಕಂಪನಿಯ ಶೇರ್, bonds ಇತ್ಯಾದಿ, ನಮಗೆ ಅಧಿಕ ರಿಟರ್ನ್‌ ನೀಡುವ ಪೇಪರ್ ಅಸೆಟ್ಸ್ ಆಗಿವೆ. ನಮಗೆ ಅವುಗಳ ಬಗ್ಗೆ ಪೂರ್ತಿಯಾದ ಜ್ಞಾನವಿರಬೇಕು. ಇದನ್ನು ನೀವು ಪೀಟರ್ ಲಿಂಚ್ ಅವರ ಪುಸ್ತಕವನ್ನು ಓದುವ ಮೂಲಕ ಪ್ರಾರಂಭಿಸಬಹುದು.

ಇದನ್ನು ಓದಿ: "ಲರ್ನ್ ಟು ಆರ್ನ್" ಪುಸ್ತಕದ 4 ಪ್ರಮುಖ ಹೂಡಿಕೆಯ ಕಲಿಕೆಗಳು.

4. ಕಮೊಡಿಟಿ.

ಕೃಷಿ, ಬಂಗಾರ ಮತ್ತು ಬೆಳ್ಳಿ ಕಮೋಡಿಟಿ ಅಸೆಟ್ ಕ್ಲಾಸ್‌ನಲ್ಲಿ ಬರುತ್ತವೆ. ಇತರೆ ಅಸೆಟ್ ಕ್ಲಾಸ್‌ಗಳಲ್ಲಿ ನಷ್ಟವಾದರೆ, ಈ ಅಸೆಟ್ ಕ್ಲಾಸ್ ಆ ನಷ್ಟವನ್ನು ಕಡಿಮೆ ಮಾಡುತ್ತದೆ.

8. Escape the Rat Race.

escape from the rat race summary in kannada
escape the rat race

ಇದು ಮಕ್ಕಳಿಗಾಗಿ ಮಾಡಿದ ಕಾಮಿಕ್ ಬುಕ್ ಆಗಿದೆ. ಇದರಲ್ಲಿ ಒಂದು ಇಲಿ ಆಮೆಗೆ rat race ನಿಂದ ಹೊರ ಬರುವುದು ಹೇಗೆ ಎಂಬುದನ್ನು ತಿಳಿಸುತ್ತದೆ. ಯಾವ ಪೋಷಕರು ತಮ್ಮ ಮಕ್ಕಳಿಗೆ ಬೇಗನೇ ಫೈನಾನ್ಶಿಯಲ್ ಎಜುಕೇಶನ್ ಕಲಿಸಲು ಬಯಸುತ್ತಾರೋ, ಅವರು ಈ ಪುಸ್ತಕವನ್ನು ಅವರ ಮಕ್ಕಳಿಗೆ ನೀಡಬಹುದು. ಇದರಲ್ಲಿರುವ ಕಾನ್ಸೆಪ್ಟ್ "ರಿಚ್ ಡ್ಯಾಡ್ ಪೂರ್ ಡ್ಯಾಡ್" ರೀತಿಯೇ ಇದೆ. ಹೀಗಾಗಿ "ರಿಚ್ ಡ್ಯಾಡ್ ಪೂರ್ ಡ್ಯಾಡ್" ಓದಿದವರು ಈ ಪುಸ್ತಕವನ್ನು ಖರೀದಿಸುವುದು ಅಷ್ಟೇನೂ ಉಪಯುಕ್ತವಲ್ಲ.

ಇನ್ನು ರಾಬರ್ಟ್ ಕಿಯೋಸಾಕಿಯವರ, "rich dad retire young retire rich", "conspiracy of rich", "why the rich are getting richer", "the business school" ಪುಸ್ತಕಗಳಲ್ಲಿ ಇವುಗಳ ಬಗ್ಗೆಯೇ ವಿವರವಾದ ವಿವರಣೆಯೊಂದಿಗೆ ತಿಳಿಸಲಾಗಿದೆ.

9. Brief Summary.

ಈಗ ಈ ಲೇಖನದಲ್ಲಿ ನೋಡಿರುವ ಮಾಹಿತಿಗಳನ್ನು ರಿವೈಸ್ ಮಾಡೋಣ.

ಮೊದಲನೆಯದಾಗಿ rich dad poor dad, ಇದರಲ್ಲಿ financial statement ಮೂಲಕ ಬಡವರು, ಮಧ್ಯಮ ವರ್ಗ ಮತ್ತು ಶ್ರೀಮಂತರು ತಮ್ಮ ಹಣವನ್ನು ಹೇಗೆ ಖರ್ಚು ಮಾಡುತ್ತಾರೆ ಎಂಬುದನ್ನು ತಿಳಿದೆವು.

ಇನ್ನು ಎರಡನೆಯದಾಗಿ cashflow quadrantನಲ್ಲಿ, ಎಂಪ್ಲಾಯಿ, ಸೆಲ್ಪ್ ಎಂಪ್ಲಾಯ್, ಬ್ಯುಸಿನೆಸ್ ಮತ್ತು ಹೂಡಿಕೆದಾರ ಚತುರ್ಭುಜಗಳಲ್ಲಿ ಯಾವುದರಲ್ಲಾದರೂ ಹೋಗಬಹುದೆಂದು ತಿಳಿಸಿದೆವು. ಇದರಲ್ಲಿ B ಮತ್ತು I ಚತುರ್ಭುಜದಲ್ಲಿರುವುದು ನಿಮ್ಮನ್ನು ಶ್ರೀಮಂತರಾಗಿ ಮಾಡುತ್ತದೆ ಎಂದು ತಿಳಿಸಿದೆವು.

ಇನ್ನು ಮೂರನೇಯದಾಗಿ financial iq ನಲ್ಲಿ ಹಿಂದಿನ ಎರಡೂ ಪುಸ್ತಕದ ಮಾಹಿತಿಯನ್ನು ವಿಲೀನ(merge) ಮಾಡಿ, E ಎಂದರೆ employee ಮತ್ತು S ಎಂದರೆ self employee ಗಳು ತಮ್ಮ ಹಣವನ್ನು ಯಾವ ರೀತಿ ಮ್ಯಾನೇಜ್ ಮಾಡುತ್ತಾರೆ ಎಂಬುದನ್ನು ತಿಳಿದೆವು. B ಮತ್ತು I ಗೆ ಸರ್ಕಾರ ತೆರಿಗೆಯಿಂದ ವಿನಾಯಿತಿ ಏಕೆ ನೀಡುತ್ತದೆ ಎಂದು ನೋಡಿದೆವು. ಇಷ್ಟೇ ಅಲ್ಲದೆ 5 financial iq ಬಗ್ಗೆ ತಿಳಿದೆವು ಅವೆಂದರೆ,

  • 1. ಅಧಿಕ ಹಣ ಗಳಿಸಿ,
  • 2. ಹಣವನ್ನು ಉಳಿಸಿ,
  • 3. ಬಜೆಟ್ ಮಾಡಿ,
  • 4. ಲಿವರೇಜ್ ಪಡೆಯಿರಿ,
  • 5. ನಿಮ್ಮ ಪೈನಾನ್ಶಿಯಲ್ ಎಜುಕೇಶನನ್ನು ಇಂಪ್ರೂವ್ ಮಾಡಿಕೊಳ್ಳಿ.

ಇನ್ನು ನಾಲ್ಕನೆಯದಾಗಿ guide to investing ನಲ್ಲಿ, ನಾವು 5 ತರಹದ ಹೂಡಿಕೆದಾರರ ಬಗ್ಗೆ ತಿಳಿದುಕೊಂಡೆವು, ಅವೆಂದರೆ,

  • 1) accredited investors.
  • 2) the qualified investors.
  • 3) the sophisticated investors.
  • 4) inside investors.
  • 5) the ultimate investors.

ಇನ್ನು ಐದನೆಯದಾಗಿ the business of 21st century ಪುಸ್ತಕದಲ್ಲಿ 8 asset ಬಗ್ಗೆ ತಿಳಿಸಿದೆವು. ಈ ಅಸೆಟ್ಗಳು ನೆಟ್ವರ್ಕ್ ಮಾರ್ಕೆಟಿಂಗ್ ನಿಂದ ಸಿಗಬಹುದೆಂದು ರಾಬರ್ಟ್ ಕಿಯೋಸಾಕಿಯವರ ಹೇಳುತ್ತಾರೆ.

ಇನ್ನೂ ಆರನೇಯದಾಗಿ why "a" students work for "c" students ನಲ್ಲಿ ಶಾಲೆಯು ನಮ್ಮನ್ನು ಎಂಪ್ಲಾಯಿ ಅಥವಾ ಸೆಲ್ಫ್ ಎಂಪ್ಲಾಯ್ ಮಾಡುತ್ತದೆಯೆಂದು ನೋಡಿದೆವು. ಹೀಗಾಗಿ ಆರ್ಥಿಕ ಜ್ಞಾನ ನಮ್ಮಗೆ ಮುಖ್ಯವಾಗಿದೆ. ಇದರಲ್ಲಿ ನಾವು ನಮ್ಮ ಮಾಹಿತಿ ತಾಣ ವೆಬ್‌ಸೈಟ್‌ನಲ್ಲಿರುವ ಫೈನಾಶಿಯಲ್ ಲೇಖನ ಮತ್ತು ವೀಡಿಯೋದ ಬಗ್ಗೆ ತಿಳಿಸಿದೆವು.

ನಂತರ ಇನ್ನು ಎಳನೇಯದಾಗಿ second chance ಪುಸ್ತಕದಲ್ಲಿ 4 ಅಸೆಟ್ ಕ್ಲಾಸ್ ಬಗ್ಗೆ ತಿಳಿಸಿದೆವು. ಅವೆಂದರೆ ಬ್ಯುಸಿನೆಸ್a ರಿಯಲ್ ಎಸ್ಟೇಟ್, ಪೇಪರ್ ಅಸೆಟ್ ಅಂದರೆ ಇಂಡೆಕ್ಸ್ ಫಂಡ್ಸ್, ಬಾಂಡ್ಸ್ ಮತ್ತು ಶೇರ್, ಕಮೋಡಿಟಿ ಅಂದರೆ ಬಂಗಾರ, ಬೆಳ್ಳಿ, ಇತ್ಯಾದಿಗಳಾಗಿವೆ.

ಎಂಟನೆಯದಾಗಿ ಮಕ್ಕಳಿಗಾಗಿ ಮಾಡಿದ escape the rat race ಪುಸ್ತಕದ ಬಗ್ಗೆ ತಿಳಿಸಿದೆವು. ಇದನ್ನು ಚಿಕ್ಕ ಮಕ್ಕಳಿಗೆ ಗಿಫ್ಟ್ ಆಗಿ ನೀಡಬಹುದು. ಇದರಿಂದ ಕಾರ್ಟೂನ್ ಮೂಲಕ ಅವರು ಫೈನಾನ್ಶಿಯಲ್ ಎಜುಕೇಷನ್ ಪಡೆಯಬಹುದು.

ಈ ಲೇಖನ ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಉಪಯುಕ್ತವೆನಿಸಿದಲ್ಲಿ ಶೇರ್ ಮಾಡಿ. ಇದರಿಂದ ಅವರು ತಮ್ಮ ಭವಿಷ್ಯವನ್ನು ಸುಧಾರಿಸಿಕೊಳ್ಳಬಹುದು. ಇದು ಏಕೆಂದರೆ financial knowledge is important ಆಗಿದೆ.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

No Comments