Website designed by @coders.knowledge.

Website designed by @coders.knowledge.

5 Rules of Money that Rich People knows and Poor do not | ಹಣದ 5 ನಿಯಮಗಳು

Watch Video

Lesson 1.

ನ್ಯೂ ಯಾರ್ಕ್ ಟೈಮ್ಸ್‌ನಲ್ಲಿ ಪ್ರಕಟವಾದ(publish) ಈ ಆರ್ಟಿಕಲ್ ಪ್ರಕಾರ, ಅಲಿ ಅಜಾಜಿ ಎಂಬುವನ್ನು ಸುಡುತ್ತಿರುವ ಕಟ್ಟಿಗೆ ತೆಗೆದುಕೊಂಡು ಅವನ ನಾಲ್ಕು ವರ್ಷದ ಮಗನ ಎದೆಯ ಮೇಲೆ ಇಟ್ಟನು ಎಂದು ತಿಳಿಸಲಾಗಿತು. ನಾವೆಲ್ಲ ಒಬ್ಬ ತಂದೆ ಈ ರೀತಿ ಮಾಡಲು ಹೇಗೆ ಸಾಧ್ಯ? ಎಂದು ಯೋಚಿಸುತ್ತೇವೆ. ಅವನು ಈ ರೀತಿ ಮಾಡಲು ಒಂದು ಕಾರಣವಿದೆ. ಅವನ ಮೊದಲ ಮಗ ಹಸಿವಿನಿಂದ ಕೆಲವು ದಿನಗಳ ಹಿಂದೆ ಸತ್ತುಹೋಗಿದ್ದನು. ಹೀಗಾಗಿ ಅವನು ಈ ಎರಡನೇ ಮಗನನ್ನು ಕಳೆದುಕೊಳ್ಳಲು ಬಯಸಿರಲಿಲ್ಲ. "ಸುಡುತ್ತಿರುವ ಕಟ್ಟಿಗೆಯನ್ನು ಎದೆಯ ಮೇಲೆ ಇಡುವುದರಿಂದ ಅವನ್ನು ಗುಣ ಪಡುತ್ತಾನೆ" ಎಂದು ಅವರ ಹಳ್ಳಿಯಲ್ಲಿ ಜನರು ತಿಳಿಸಿದಂತೆ ಅವನು ಮಾಡುತ್ತಾನೆ. ತುಂಬಾ ಜನ ಅಜಾಜಿ ಎಜುಕೇಟೆಡ್ ವಿದ್ಯಾವಂತರಾಗಿರಲ್ಲಿಲ್ಲವೆಂದು ಹೇಳಬಹುದು. ಹೀಗಾಗಿ ಅವನು ಈ ರೀತಿಯ ಸಿದ್ಧಾಂತವನ್ನು(theory) ನಿಜವೆಂದು ನಂಬಿದನು.

ಅಧಿಕ ಬುದ್ಧಿವಂತ ಜನರ ಗುಂಪಿರುವ ಸರ್ಕಾರದ ಬಗ್ಗೆ ನೋಡೋಣ. ಇದರಲ್ಲಿರುವವರು ತುಂಬಾ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಪ್ರಾರಂಭದಲ್ಲಿ ಮೋಟಾರ್ ಗಾಡಿಗಳ ಆವಿಷ್ಕಾರ ಆಗುವಾಗ, ತುಂಬಾ ಜನರ ಹತ್ತಿರ ಇನ್ನು ಕುದುರೆ ಗಾಡಿಯೇ ಇದ್ದವು. 1800 ರಂದು ಯುನೈಟೆಡ್ ಕಿಂಗ್‍ಡಮ್ "red flag traffic law" ಅನ್ನು ಪಾಸ್ ಮಾಡಿತು. ಇದರ ಪ್ರಕಾರ ಯಾವುದೇ ಗಾಡಿಯನ್ನು ಓಡಿಸಲು ಕನಿಷ್ಠ ಮೂರು ಜನರಾದರೂ ಇರಬೇಕು. ಇದರಲ್ಲಿ ಒಬ್ಬ ಚಾಲಕನಾಗಿದ್ದರೆ, ಇನ್ನೊಬ್ಬ ಕಾರ್ ಮೆಕ್ಯಾನಿಕ್ ಆಗಿರುತ್ತಾನೆ. ಇನ್ನು ಮೂರನೇ ವ್ಯಕ್ತಿ ಕೈಯಲ್ಲಿ ಕೆಂಪು ಧ್ವಜವನ್ನು ಹಿಡಿದು ಎಂಟು ಅಡಿ ದೂರ ನಡೆದುಕೊಂಡು ಹೋಗುತ್ತಿರಬೇಕು. ಇದರಿಂದ ಕುದುರೆ ಗಾಡಿಯಲ್ಲಿ ಬರುವವರಿಗೆ ಮೋಟರ್ ಗಾಡಿ ಬರುತ್ತಿರುವ ವಿಷಯದ ಬಗ್ಗೆ ತಿಳಿಯುತ್ತದೆ. ಇದಕ್ಕಿಂತ ಪೆನ್ಸಿವೆನಿಯಾದ 1896 ರಂದು ಹೇಳಿದ ಕಾನೂನು(law) ತುಂಬಾ ಆಸಕ್ತಿಕರವಾಗಿದೆ. ಇದರ ಪ್ರಕಾರ ಯಾವುದೇ ಕುದುರೆ ಗಾಡಿಗೆ ಮೋಟಾರ್ ಗಾಡಿ ಕೇವಲ ಟಚ್ ಆದರೂ ಕೂಡ,

  • 1) ಆ ಗಾಡಿಯನ್ನು ಅಲ್ಲೇ ನಿಲ್ಲಿಸಬೇಕು.
  • 2) ಇಡೀ ಗಾಡಿಯನ್ನು ಡಿಸ್ಕಸೆಂಬಲ್ ಮಾಡಬೇಕು.
  • 3) ಆ ಡಿಸ್ಕಸ್ಸೆಂಬಲ್ ಮಾಡಿದ ಭಾಗಗಳನ್ನು ಯಾವುದಾದರೂ ಮರದ ಅಡಿ ಇಡಬೇಕು.
    • ಇದನ್ನು ಕೇಳಿ ನಮ್ಮಲ್ಲಿ ಅನೇಕರಿಗೆ ನಗು ಬರಬಹುದು ಮತ್ತು ಸರ್ಕಾರ ಇಲ್ಲ ಕಾನೂನನ್ನು ಏಕೆ ಪಾಸ್ ಮಾಡಿತು ಎಂದು ಯೋಚಿಸಬಹುದು. ಮೊದಲು ಈ ಮೋಟಾರ್ ಗಾಡಿಗಳಿಂದ ಕೆಲವು ನಾಗರಿಕರ ಅಪಘಾತವಾಗಿದ್ದ ಕಾರಣ ಸರ್ಕಾರ ಈ ಕಾನೂನನ್ನು ಪಾಸ್ ಮಾಡಿತು.

      "ಸೈಕಾಲಜಿ ಆಫ್ ಮನಿ"ಯ ಲೇಖಕರಾದ ಮಾರ್ಗನ್ ಹೌಸಲ್, "ನಾವು ಯಾವುದನ್ನು ಎಷ್ಟು ನಿಜ ಎಂದು ನಂಬುತ್ತೇವೋ, ಅದನ್ನು ಸಾಬೀತುಪಡಿಸಲು ಅಷ್ಟೇ ಸಾಕ್ಷಿಗಳನ್ನು ತೆಗೆದುಕೊಳ್ಳುತ್ತೇವೆ" ಎಂದು ಹೇಳುತ್ತಾರೆ. ಇದು ಹಣಕ್ಕೂ ಸತ್ಯವಾಗಿದೆ. ಯಾರಾದರೂ ನಮಗೆ ನಕಾರಾತ್ಮಕ ಕಥೆಗಳನ್ನು ಹೇಳಿದ್ದರೆ, ಅವರು ಕಾಳಜಿ ವಹಿಸುವುದರಿಂದ ಹೇಳುತ್ತಿದ್ದರೇ ಎಂದುಕೊಳ್ಳುತ್ತೇವೆ. ಯಾರಾದರೂ ಸಕಾರಾತ್ಮಕ ಕಥೆಗಳನ್ನು ಹೇಳಿದರೆ, ಅವರು ನಮ್ಮ ಜೊತೆ ಯಾವುದೋ ವ್ಯಾಪಾರ ಮಾಡಲು ಬಯಸುತ್ತಿದ್ದಾರೆ ಎಂದುಕೊಳ್ಳುತ್ತೇವೆ. ಹೀಗಾಗಿ ನಾವು ಮೊದಲು ಈ ಸೈಕಾಲಜಿಯನ್ನು ಬದಲಿಸಿಕೊಳ್ಳಬೇಕು. ನಾವು ಸಂಗತಿಗಳ(facts) ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.

      ಇದನ್ನು ಓದಿ: ನಿಮಗೆ ಗಮನ ಹರಿಸಲು ಏಕೆ ಸಾಧ್ಯವಾಗುತ್ತಿಲ್ಲ

      Lesson 2.

      desire has a money rule in kannada
      sara blakely

      ಈ ಪಾಠವನ್ನು "ಥಿಂಕ್ ಅಂಡ್ ಗ್ರೋ ರಿಚ್" ಪುಸ್ತಕದಿಂದ ತೆಗೆದುಕೊಳ್ಳಲಾಗಿದೆ. ಇದರಲ್ಲಿ ಆಸೆಯ(desire) ಬಗ್ಗೆ ತಿಳಿಸಲಾಗಿದೆ. ಸಾರಾ ಬ್ಲೇಕ್ಲಿ(sara blakely) ಎಂಬುವರು ಫ್ಯಾಕ್ಸ್ ಯಂತ್ರವನ್ನು ಮಾರುತ್ತಿದ್ದರು. ಅವರ ಅನೇಕ ಆಸೆಗಳಿದ್ದವು. ಅವರು ತಮ್ಮ ಜೀವನದಲ್ಲಿ ದೊಡ್ಡ ಸಾಧನೆಯನ್ನು ಮಾಡಲು ಬಯಸಿದ್ದರು. ಅವರು ಅನೇಕ ಫ್ಯಾಕ್ಸ್ ಯಂತ್ರವನ್ನು ಮಾರಿ, ಒಂದು ದಿನ ಬೇಸರವಾಗಿ, ಆ ಫ್ಯಾಕ್ಸ್ ಯಂತ್ರವನ್ನು ಹೊತ್ತೊಯ್ಯುತ್ತಿದ್ದ ಗಾಡಿಯನ್ನು ಬದಿಗೆ ನಿಲ್ಲಿಸಿ ಅಳಲು ಪ್ರಾರಂಭಿಸಿದರು. ಅವರು ಆ ಸಮಯದಲ್ಲಿ "ಇದು ನನ್ನ ಬದುಕಲ್ಲ, ನನ್ನನ್ನು ಜನರು ಒಬ್ಬ ಸಾಮಾನ್ಯ ಸೇಲ್ಸ್ ಗರ್ಲ್ ಎಂದು ಹೊರಗಡೆ ಹಾಕುತ್ತಿದ್ದಾಗ ತುಂಬಾ ಬೇಸರವಾಗುತ್ತಿತ್ತು" ಎಂದು ಹೇಳುತ್ತಾರೆ.

      ಒಂದು ರಾತ್ರಿ ಸಾರಾ ಒಂದು ನೋಟ್ಬುಕ್ ತೆರೆದು "ನಾನು ಎಂತಹ ವಸ್ತು ಮಾಡಲು ಬಯಸುತ್ತೇನೆಂದರೆ ಅದನ್ನು ಲಕ್ಷಗಟ್ಟಲೆ ಜನರು ಬಳಸಬಹುದು ಮತ್ತು ಅದು ಅವರಿಗೆಲ್ಲ ಉಪಯುಕ್ತವಾಗುತ್ತದೆ" ಎಂದು ಬರೆದಿದ್ದರು. ಸ್ವಲ್ಪ ದಿನದ ನಂತರ ಸಾರಾ ಅವರಿಗೆ ಪಾರ್ಟಿಗೆ ಹೋಗಬೇಕಾಗಿತು. ಅವರು ಬಿಳಿ ಬಣ್ಣದ ಪ್ಯಾಂಟ್ ಧರಿಸುವುದಾಗಿ ನಿರ್ಧರಿಸಿದ್ದರು. ಆದರೆ ಆ ಪ್ಯಾಂಟಿಗೆ ಸೂಟ್ ಆಗುವ ಯಾವುದೇ ರೀತಿಯ ಅಂಡರ್ ಗಾರ್ಮೆಂಟ್ಸ್ ಅವರ ಬಳಿ ಇರಲಿಲ್ಲ. ಹೀಗಾಗಿ ಅವರು ಚರ್ಮದ ಬಣ್ಣದ ಪ್ಯಾಂಟ್ ತೆಗೆದುಕೊಂಡು, ಕಾಲಿನ ಕೆಳಗಿನಿಂದ ಮೂರು ಅಡಿಯಷ್ಟು ಕಟ್ ಮಾಡಿದರು ಮತ್ತು ಅದರ ಮೇಲೆ ಬಿಳಿ ಬಣ್ಣದ ಪ್ಯಾಂಟ್ ಧರಿಸಿದರು. ಅವರಿಗೆ ಈ ವಸ್ತುವು ಅಸ್ತಿತ್ವದಲ್ಲಿರಬೇಕೆಂದೆನಿಸಿತು.

      ಪಾರ್ಟಿಯಿಂದ ಬಂದ ನಂತರ ಸಾರಾ ಅವರು ಇದು ತುಂಬಾ ಜನ ಬಳಸಬಹುದಾದ ವಸ್ತು ಎಂದು ಯೋಚಿಸಿದರು. ಸಾರಾ ಅವರು ಎಲ್ಲ ಶೋರೂಮ್ಗಳಿಗೆ ಹೋಗಿ, ಆ ರೀತಿಯ ವಸ್ತು ಇದೆಯೇ ಎಂದು ಕೇಳಿದರು. ಯಾವಾಗ ಅವರಿಗೆ ಆ ರೀತಿಯ ವಸ್ತು ಇಲ್ಲವೆಂದು ಖಚಿತವಾಯಿತೋ, ಅವರೇ ಅದನ್ನು ಡಿಸೈನ್ ಮಾಡಲು ಪ್ರಾರಂಭಿಸಿದರು. ಇದರಲ್ಲಿರುವ ಆಸಕ್ತಿಕರ ವಿಷಯವೆಂದರೆ ಅವರ ಹತ್ತಿರ ಯಾವುದೇ ಫ್ಯಾಷನ್‌ಗೆ ಸಂಬಂಧಿಸಿದ ಡಿಗ್ರಿ ಇರಲಿಲ್ಲ. ಇದರ ನಂತರ ಈ ವಸ್ತುವನ್ನು ಜನರ ತನಕ ತಲುಪಿಸಲು ಹೂಡಿಕೆದಾರರ ಅಗತ್ಯವಿದೆ ಎಂದು ಸಾರಾ ಅವರು ತಿಳಿದುಕೊಂಡರು.

      ಆದರೆ ಅವರು ಭೇಟಿ ಮಾಡಿದ ಎಲ್ಲ ಹೂಡಿಕೆದಾರರು ಅವರನ್ನು ನೋಡಿ ನಗಲು ಪ್ರಾರಂಭಿಸಿದರು. "ನಿಮಗೆ ಇದರ ಮೇಲೆ ಯಾವುದೇ ರೀತಿಯ ಅನುಭವವಿಲ್ಲ", "ನೀವು ಇಲ್ಲಿಯವರೆಗೂ ಯಾವುದೇ ವ್ಯಾಪಾರವನ್ನು ಮಾಡಿಲ್ಲ, ಅಂದ ಮೇಲೆ ನಿಮಗೆ ಏಕೆ ನಾವು ಹಣ ನೀಡಬೇಕು" ಎಂದು ಕೇಳಿದರು. ಆದರೆ ಒಬ್ಬ ಹೂಡಿಕೆದಾರ ಸಾರಾ ಅವರಿಗೆ ಹಣ ನೀಡಲು ಒಪ್ಪಿದರು. ಅದಕ್ಕೆ ಸಾರಾ ಅವರು "ದೇವರ ಕೃಪೆ ನಿಮಗೆ ನನ್ನ ಐಡಿಯಾ ಇಷ್ಟವಾಯಿತು" ಎಂದರು. ಅದಕ್ಕೆ ಆ ಹೂಡಿಕೆದಾರ ನಕ್ಕು "ನಿನ್ನ ಐಡಿಯಾ ತುಂಬಾ ಅಸಂಬದ್ಧವಾಗಿದೆ. ಆದರೆ ನೀನು ತುಂಬಾ ಮಹತ್ವಾಕಾಂಕ್ಷೆಯಿಂದ ಕೂಡಿದೀಯಾ. ನಿನ್ನಲ್ಲಿ ಆಸೆಗಳಿವೆ, ಹೀಗಾಗಿ ನಾನು ಹಣ ನೀಡಲು ಒಪ್ಪಿದೆ" ಎಂದು ಹೇಳಿದರು.

      ಸಾರಾ ಅವರ ಈಗಿನ ಪರಿಸ್ಥಿತಿ ಹೇಗಿದೆ ಎಂದು ನಿಮಗೆ ತಿಳಿದಿದೆಯೇ? ಸಾರಾ ಅವರು ಈ ಬ್ರ್ಯಾಂಡ್‌ಗೆ ಸ್ಪ್ಯಾಂಕ್ಸ್(spanx) ಎಂಬ ಹೆಸರು ನೀಡಿದರು. ಇಂದು ಈ ವ್ಯಾಪಾರದ ಮೌಲ್ಯ 11,000 ಕೋಟಿಯಷ್ಟಿದೆ. "ಅನೇಕ ಲೇಡಿಸ್ ಇದನ್ನು ಮುಂಚೆಯೇ ಟ್ರೈ ಮಾಡಿದ್ದರು" ಎಂದು ಸಾರಾ ಹೇಳುತ್ತಾರೆ. ಆದರೆ ಅವರು ಮುಂಚೆಯೇ ಈ ರೀತಿಯ ಒಂದು ವಸ್ತುವನ್ನು ಮಾಡಬೇಕೆಂದು ಯೋಚಿಸಿದ್ದರಿಂದ, ಮುಕ್ತ ಮನಸ್ಸಿನಿಂದ ಇದನ್ನು ನೋಡಿ ಕ್ರಮವನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು. ಅವರ ಕುದಿಯುತ್ತಿರುವ ಆಸೆಯಿಂದ ಅವರ ಯಶಸ್ಸು ಸಾಧ್ಯವಾಯಿತು.

      ಇದನ್ನು ಓದಿ: ಸಂಪತ್ತು, ಆರೋಗ್ಯ ಮತ್ತು ಯಶಸ್ಸಿಗೆ 6 ಬೆಳಗಿನ ಅಭ್ಯಾಸಗಳು

      Lesson 3.

      persistence as a money rule in kannada
      franklin leanard

      ಪಾಠ 3 ಅನ್ನು "think and grow rich" ಪುಸ್ತಕದಿಂದ ತೆಗೆದುಕೊಳ್ಳಲಾಗಿದೆ. ಇದರಲ್ಲಿ ಹಠದ(persistence) ಬಗ್ಗೆ ತಿಳಿಸಲಾಗಿದೆ. ಫ್ರಾಂಕ್ಲಿನ್ ಲಿಯೊನಾರ್ಡ್(franklin leanard) ಅವರನ್ನು ಜನರು ಕಪ್ಪೆಂದರೆ ತುಂಬ ಬೇಸರವಾಗುತ್ತಿತು. ಏಕೆಂದರೆ ಜನರು ಕಪ್ಪು ವ್ಯಕ್ತಿ ಎಂದರೆ ಅಪರಾಧಿ(criminal) ಎಂದು ಭಾವಿಸುತ್ತಿದ್ದರು. ಫ್ರಾಂಕ್ಲಿನ್ ಅವರ ತಂದೆ ಅವರ 40ನೇ ವರ್ಷದಲ್ಲಿ ಡಾಕ್ಟರ್ ಆದರು. ಅವರು ಡಾಕ್ಟರ್ ಆಗುವ ಮೊದಲು ಅವರ ಕುಟುಂಬದಲ್ಲಿ ಹಣದ ಕೊರತೆ ಇತ್ತು. ಹೀಗಾಗಿ ಅವರ ತಂದೆ ಡಾಕ್ಟರ್ ಆದ ನಂತರವು ಹಣದ ಮೌಲ್ಯವನ್ನು ತಿಳಿದುಕೊಂಡಿದ್ದರು. ಅವರು ಕಡಿಮೆ ಹಣವನ್ನು ಖರ್ಚು ಮಾಡುತ್ತಿದ್ದರು. ಫ್ರಾಂಕ್ಲಿನ್ ತಾತ ಬ್ರಿಟಿಷರ ಗುಲಾಮರಾಗಿರುವುದು ಇದಕ್ಕೆ ಇನ್ನೊಂದು ಕಾರಣವಾಗಿದೆ. ಹೀಗಾಗಿ ಫ್ರಾಂಕ್ಲಿನ್ ಚಿಕ್ಕ ವಯಸ್ಸಿನಿಂದಲೂ ಏನಾದರೂ ದೊಡ್ಡದನ್ನು ಸಾಧಿಸುವ ಬಗ್ಗೆ ಯೋಚಿಸುತ್ತಿದ್ದರು. ಅವರು ಕಠಿಣ ಪರಿಶ್ರಮಿಸಲು ಪ್ರಾರಂಭಿಸಿದರು. ಅವರ ಮೊದಲ ಸಾಧನೆ, ಹಾರ್ಡ್ವರ್ಡ್ ಯೂನಿವರ್ಸಿಟಿಗೆ ಆಯ್ಕೆಯಾಗಿ, ಅವರ ಕೆಲಸ ಮೆಕಿನ್ಸೆಸ್(McKinsey) ಯಲ್ಲಿ ಆಯಿತು. ಆದರೆ ಫ್ರಾಂಕ್ಲಿನ್ ಇದಕ್ಕೆ ತೃಪ್ತಿಯಾಗಿರಲಿಲ್ಲ. ಅವರು ಕಪ್ಪು ಜನಗಳಿಗೆ ಏನಾದರೂ ಒಳ್ಳೆಯದನ್ನು ಮಾಡಲು ಯೋಚಿಸುತ್ತಿದ್ದರು. ಅವರು ಚಿಕ್ಕ ವಯಸ್ಸಿನಿಂದಲೂ ಅಧಿಕ ಸಿನಿಮಾಗಳನ್ನು ನೋಡುತ್ತಿದ್ದರು.

      ಅವರು ಟೈಟಾನಿಕ್ನ ನಾಯಕನಾದ ಲಿಯೋನಾರ್ಡೋ ಡಿಕಾಪ್ರಿಯೊ ಅವರ ಅಪ್ಪಿಯನ್ ವೇ ಪ್ರೊಡಕ್ಷನ್ ಕಂಪನಿಗೆ ಸೇರಿದರು. ಅಲ್ಲಿ ಅವರೆಗೆ ಜೂನಿಯರ್ ಎಕ್ಸಿಕ್ಯೂಟಿವ್ ಕೆಲಸ ದೊರೆಯಿತು. ಅಂದರೆ ಈ ಕಂಪನಿಗೆ ಬರುವ ಎಲ್ಲಾ ಸ್ಕ್ರಿಪ್ಟ್‌ಗಳನ್ನು ಫ್ರ್ಯಾಂಕ್ಲಿನ್ ಅವರು ಮೊದಲು ಓದುತ್ತಿದ್ದರು ಮತ್ತು ಒಳ್ಳೆಯ ಸ್ಕ್ರಿಪ್ಟನ್ನು ಬಾಸ್‌ಗೆ ನೀಡುತ್ತಿದ್ದರು. "ನಾನು ತುಂಬಾ ಬುದ್ಧಿವಂತನಲ್ಲ, ಆದರೆ ತುಂಬಾ ಕಷ್ಟ ಪಡಬಹುದು. ನೀವು ನನಗೆ 50 ಸ್ಕ್ರಿಪ್ಟ್ ನೀಡಿದ್ದಾರೆ, ನಾನು ಅವುಗಳನ್ನು ಶನಿವಾರ ಮತ್ತು ಭಾನುವಾರ ಓದಿ, ಸೋಮವಾರ ಬಂದು ಯಾವುದು ಒಳ್ಳೆಯ ಸ್ಕ್ರಿಪ್ಟ್‌ ಮತ್ತು ಯಾವುದೋ ಒಳ್ಳೆಯ ಸ್ಕ್ರಿಪ್ಟ್ ಅಲ್ಲವೆಂದು ಹೇಳಬಹುದು" ಎಂದು ಹೇಳುತ್ತಾರೆ.

      ಇದಾದ ನಂತರ ಫ್ರಾಂಕ್ಲಿನ್ ಅವರು ಅವರ ಕಚೇರಿಯ 75 ಜನರಿಗೆ ಮೇಲ್ ಕಳುಹಿಸಿದರು. ಅದರಲ್ಲಿ ಅವರು "ನೀವೆಲ್ಲ ಓದಿರುವ ಸ್ಕ್ರಿಪ್ಟ್‌ಗಳಲ್ಲಿ 10 ಅತ್ಯುತ್ತಮ ಸ್ಕ್ರಿಪ್ಟ್‌ಗಳನ್ನು ಕಳುಹಿಸಿ" ಎಂದು ತಿಳಿಸಿದರು. ಫ್ರಾಂಕ್ಲಿನ್ ಆ ಸ್ಕ್ರಿಪ್ಟ್‌ಗಳನ್ನು ಓದಿ, ಒಂದು ವೆಬ್‌ಸೈಟ್‌ನಲ್ಲಿ ಹಾಕಿದರು. ಆ ವೆಬ್‌ಸೈಟ್‌ಗೆ blacklist.com ಎಂಬ ಹೆಸರು ನೀಡಿದರು. ಇಲ್ಲಿಯವರೆಗೆ ಯಾರಿಗೂ ಕೂಡ ಇವರು, blacklist ಎಂಬ ವೆಬ್‌ಸೈಟ್‌ ಮಾಡಿದರು ಬಗ್ಗೆ ತಿಳಿದಿರಲಿಲ್ಲ. ಆದರೆ ಅವರನ್ನು ಭೇಟಿಯಾದ ಎಲ್ಲಾ ಜನರು ಬ್ಲಾಕ್ ಲಿಸ್ಟ್ ವೆಬ್‌ಸೈಟ್‌ ಅನ್ನು ಪ್ರಶಂಸಿಸುತ್ತಿದ್ದರು ಮತ್ತು ಒಬ್ಬ ಬಾಸ್ ಇವರಿಗೆ ಕರೆ ಮಾಡಿ "ನೀನು ಈ ಸ್ಕ್ರಿಪ್ಟ್ ಓದು, ಏಕೆಂದರೆ ಇದು ಮುಂದೆ ಬ್ಲ್ಯಾಕ್ ಲಿಸ್ಟ್ ವೆಬ್‌ಸೈಟ್‌ನಲ್ಲಿ ಶ್ರೇಣಿಯಲ್ಲಿ(rank) ಬರಲಿದೆ" ಎಂದು ಹೇಳುತ್ತಾರೆ.

      ಫ್ರಾಂಕ್ಲಿನ್ ಇದರಿಂದ ಎರಡನ್ನು ತಿಳಿದುಕೊಂಡರು. ಒಂದು ವೆಬ್‌ಸೈಟ್‌ಗೆ ಜನರು ಅವರು ಯೋಚಿಸುವುದಕ್ಕಿಂತ ಅಧಿಕ ಮೌಲ್ಯ ನೀಡುತ್ತಿದ್ದರು. ಇನ್ನು ಎರಡನೆಯದಾಗಿ ಅವರು ಇದನ್ನು ಇನ್ನಷ್ಟು ದೊಡ್ಡದಾಗಿ ಮಾಡಬಹುದೆಂದು ಯೋಚಿಸಿದ್ದರು. ಏಕೆಂದರೆ ಇದು ಉತ್ತಮವಾದ ಸ್ಕ್ರಿಪ್ಟ್ ಸಿಗುವ ವೇದಿಕೆ(platform) ಆಗಬಹುದೆಂದು ಅವರು ನಂಬಿದ್ದರು. ದೊಡ್ಡ ದೊಡ್ಡ ಫಿಲಂ ಕಂಪನಿಗಳು ಕೂಡ ಒಂದು ವರ್ಷದಲ್ಲಿ ಕೇವಲ 1000 ಸ್ಕ್ರಿಪ್ಟ್‌ಗಳನ್ನು ಓದಬಹುದು. ಆದರೆ ಅವುಗಳಲ್ಲಿ ಕೇವಲ ಒಂದು ಅಥವಾ ಎರಡು ಒಳ್ಳೆಯ ಸ್ಕ್ರಿಪ್ಟ್ ಸಿಗುತ್ತವೆ.

      ಫ್ರಾಂಕ್ಲಿನ್ ಅವರ ಈ ವೆಬ್‌ಸೈಟ್‌ ತುಂಬಾ ಪ್ರಸಿದ್ಧವಾಯಿತು ಮತ್ತು ಇದರಲ್ಲಿರುವ ಸ್ಕ್ರಿಪ್ಟ್ ಮೇಲೆ ಅನೇಕ ಸಿನಿಮಾಗಳು ಬಂದವು, ಅವುಗಳಲ್ಲಿ ಕೆಲವೆಂದರೆ, ದಿ ಸೋಶಿಯಲ್ ನೆಟ್ವರ್ಕ್, ಅಡ್ವೆಂಚರ್ ಲ್ಯಾಂಡ್, ದಿ ಪ್ರೆಸ್ಟೀಜ್ ಇತ್ಯಾದಿ. ಭಾರತದಲ್ಲಿ ಶೂಟ್ ಆದ "ಸ್ಲಮ್ ಡಾಗ್ ಮಿಲಿನಿಯರ್" ಎಂಬ ಹಾಲಿವುಡ್ ಸಿನಿಮಾವನ್ನು ಈ ವೆಬ್‌ಸೈಟ್‌ನಿಂದಲೇ ತೆಗೆದುಕೊಳ್ಳಲಾಗಿತ್ತು. ಇಂದು ಫ್ರಾಂಕ್ಲಿನ್ ಮಿಲಿನಿಯರ್ ಆಗಿದ್ದಾರೆ. ಇದರ ಪಾಠ ಏನೆಂದರೆ ಒಬ್ಬ ಗುಲಾಮನ ಮೊಮ್ಮಗ ತನ್ನ ಸೋಲನ್ನು ಒಪ್ಪಿಕೊಳ್ಳದೆ ಇರುವ ಕಾರಣ ಜೀವನದಲ್ಲಿ ಸಾಧಿಸಿದನು. ಈ ಸಾಧನೆಯನ್ನು ಮಾಡಲು ಅವರು 17 ವರ್ಷಕ್ಕೂ ಅಧಿಕ ಸಮಯ ತೆಗೆದುಕೊಂಡರು.

      ಒಂದು ಸಂದರ್ಶನದಲ್ಲಿ ಈ ವೆಬ್‌ಸೈಟ್‌ನ ಹೆಸರನ್ನು "ಬ್ಲಾಕ್ಲಿಸ್ಟ್" ಎಂದು ಏಕೆ ಇಟ್ಟಿದ್ದೀರಾ ಎಂದು ಕೇಳಿದಾಗ, "ನಾವು ಬ್ಲಾಕ್ ಎಂಬ ಶಬ್ದ ಬಳಸಿದಾಗ ಆ ವ್ಯಕ್ತಿ ಅಪರಾಧಿ ಇರಬಹುದೆಂದು ಎಲ್ಲರೂ ಯೋಚಿಸುತ್ತಾರೆ. ಆದರೆ ನಮ್ಮ ಸಮುದಾಯದಲ್ಲೂ(community) ಜಗತ್ತಿಗೆ ಮೌಲ್ಯ ನೀಡುವವರು ಇದ್ದಾರೆ ಎಂಬುದನ್ನು ಸಾಬೀತು ಪಡಿಸಬೇಕಿತ್ತು" ಎಂದು ಹೇಳಿದರು.

      ಇದನ್ನು ಓದಿ: ಬೇಗನೆ ಶ್ರೀಮಂತರಾಗಲು 15 ಹಣದ ನಿಯಮಗಳು

      Lesson 4: Without imagination it's all waste.

      imagination as a money rule in kannada
      avery wang

      ಒಬ್ಬ ವ್ಯಕ್ತಿ ಒಂದು ವ್ಯಾಪಾರವನ್ನು(business) ತೆರೆಯಲು ಬಯಸಿದ್ದ, ಇದಕ್ಕಾಗಿ ಅವನು ಎರಡು ಗೆಳೆಯರನ್ನು ಕರೆದುಕೊಂಡನು ಮತ್ತು ಈ ಮೂವರು ಸೇರಿ ಯಾವ ವ್ಯಾಪಾರವನ್ನು ತರೆಯಬೇಕು ಎಂಬುದರ ಬಗ್ಗೆ ಯೋಚಿಸಲು ಪ್ರಾರಂಭಿಸಿದರು. ಇವರಿಗೆ ಅನೇಕ ಐಡಿಯಾಗಳು ಬಂದವು. ಆದರೆ ಒಂದು ಐಡಿಯಾವನ್ನು ಆಯ್ಕೆ ಮಾಡಿಕೊಂಡರು. ಐಡಿಯಾ ಏನೆಂದರೆ ಯಾವುದೇ ಹಾಡನ್ನು ಗುರುತಿಸುವುದಾಗಿದೆ. ಅಂದರೆ ನೀವು ಒಂದು ರೆಸ್ಟೋರೆಂಟ್ನಲ್ಲಿ ಊಟ ಮಾಡುತ್ತಿರುವಾಗ ಹಾಡು ಕೇಳಿಸುತ್ತಿದ್ದರೆ, ನಿಮಗೆ ಆ ಹಾಡು ಯಾವುದು ಎಂದು ತಿಳಿದಿರುವುದಿಲ್ಲ. ಆಗ ನೀವು ಕೇವಲ ನಿಮ್ಮ ಫೋನ್ ಹೊರಗೆ ತೆಗೆದರೆ ನಿಮಗೆ ಆ ಹಾಡಿನ ಮೇಲಿನ ವಿವರ ತಿಳಿಯುತ್ತದೆ. ಆದರೆ ಇದು 1998ರ ಕಾಲವಾಗಿತ್ತು ಮತ್ತು ಈ ಸಮಯದಲ್ಲಿ ಜನಗಳ ಹತ್ತಿರ ಸ್ಮಾರ್ಟ್‌ಪೋನ್ ಇರಲಿಲ್ಲ. ಹೀಗಾಗಿ ಜನರು ಒಂದು ನಂಬರ್‌ಗೆ ಕರೆ ಮಾಡಿ, ಆ ಹಾಡನ್ನು ಕೇಳಿಸಬೇಕಿತು. ಇದಾದ ನಂತರ ಆ ಹಾಡು ಯಾವುದು ಎಂದು ಎಸ್ಎಂಎಸ್ ಮೂಲಕ ಗೊತ್ತಾಗುತ್ತಿತ್ತು.

      ಆ ಸಮಯದಲ್ಲಿ ಆಡಿಯೋ ಕೇಳಿ ಹಾಡನ್ನು ಗುರುತಿಸುವ ತಂತ್ರಜ್ಞಾನ ಇಲ್ಲದಿರುವುದನ್ನು ಅವರು ಗಮನಿಸಿದರು ಮತ್ತು ಆ ಮೂವರಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸುವವರು ಇರಲಿಲ್ಲ. ಅವರಿಗೆ ಈ ತಂತ್ರಜ್ಞಾನವನ್ನು ಅಳವಡಿಸುವ ಒಬ್ಬ ವ್ಯಕ್ತಿ ಬೇಕಿತು. ಹೀಗಾಗಿ ಇವರು ಎಂ.ಐ.ಟಿ, ಬರ್ಕ್ಲಿ ಮತ್ತು ಸ್ಟ್ಯಾಂಪಡ್ ಯೂನಿವರ್ಸಿಟಿಗಳಿಗೆ ಹೋಗಿ, ಈ ರೀತಿಯ ತಂತ್ರಜ್ಞಾನವನ್ನು ಅಭಿವೃದ್ಧಿ ಮಾಡಬೇಕು ಎಂದು ಅಲ್ಲಿನ ಪ್ರೊಫೆಸರ್‌ಗಳಿಗೆ ಕೇಳಿದರು. ಇದಕ್ಕೆ ಅಲ್ಲಿನ ಪ್ರೊಫೆಸರ್‌ಗಳು, "ಇದನ್ನು ಮಾಡುವುದು ಅಸಾಧ್ಯ" ಎಂದು ತಿಳಿಸಿದರು.

      ಇದಾದ ನಂತರ ಅವರು ಸಿಗ್ನಲಿಂಗ್ ಮತ್ತು ಪ್ರೋಸಸಿಂಗ್ನಲ್ಲಿ ಉನ್ನತ 5 ವ್ಯಕ್ತಿಗಳ ಬಗ್ಗೆ ತಿಳಿದುಕೊಂಡು, ಅವರನ್ನು ಮೀಟ್ ಮಾಡಲು ಹೋದರು. ಇವರಿಗೆ ಆಗ ಅವರಿ ವಾಂಗ್(avery wang) ಎಂಬ ಒಬ್ಬ ಪ್ರತಿಭಾವಂತ(genious) ಸಿಕ್ಕರು. ಅವರು "ನನಗೆ ಈ ತಂತ್ರಜ್ಞಾನವನ್ನು ಮಾಡಲು ಸಾಧ್ಯವಾಗುವುದೋ, ಇಲ್ಲ ಗೊತ್ತಿಲ್ಲ, ಆದರೆ ನಾನು ಪ್ರಯತ್ನಿಸುವೆ" ಎಂದು ಹೇಳುತ್ತಾರೆ. ಕೊನೆದಾಗಿ ಅವರು ಈ ತಂತ್ರಜ್ಞಾನವನ್ನು ಮಾಡಿದರು. ಜಗತ್ತಿನಲ್ಲಿ ಸ್ಮಾರ್ಟ್‌ಪೋನ್ ಬರಲು ಪ್ರಾರಂಭವಾಯಿತು, ಆಪಲ್, ಆಪಲ್ ಸ್ಟೋರ್ ಅನ್ನು ರಿಲೀಸ್ ಮಾಡಿತು ಮತ್ತು ಇವರು ಒಂದು ಅಪ್ಲಿಕೇಶನ್ ಮಾಡಿದರು, ಅದು ಎಷ್ಟೋ ವರ್ಷಗಳ ಕಾಲ ಆಪಲ್ ಸ್ಟೋರ್ನಲ್ಲಿ ಟಾಪ್ 100 ಆ್ಯಪ್ಗಳಲ್ಲಿ ಇತ್ತು.

      ಈ ವ್ಯಕ್ತಿಯ ಹೆಸರೇ ಕ್ರಿಸ್ ಬ್ಯಾಟನ್(cris batten) ಮತ್ತು ಅಪ್ಲಿಕೇಶನ್ ಹೆಸರೇ ಶಾಝಮ್(shazam). ಇದನ್ನು 2018ರಂದು ಆಪಲ್ ಕಂಪನಿ 400 ಮಿಲಿಯನ್ ಡಾಲರ್‌ಗೆ ಖರೀದಿಸಿತು. ನೀವು ಇಂದು ಆಪಲ್ ಫೋನ್ ಬಳಸುತ್ತಿದ್ದು, ಅದರಲ್ಲಿ ಸಿರಿಗೆ "ಈ ಹಾಡು ಯಾವುದು?" ಎಂದು ಕೇಳಿದರೆ, ಇದಕ್ಕೆ ಬಳಸಲಾಗಿರುವ ತಂತ್ರಜ್ಞಾನವು ಶಾಝಮ್ ಆಗಿದೆ ಮತ್ತು ಇವೆಲ್ಲ ಕೇವಲ ಕಲ್ಪನೆಯಿಂದ ಸಾಧ್ಯವಾಯಿತು.

      ಇದನ್ನು ಓದಿ: ರಾಬರ್ಟ್‌ ಕಿಯೋಸಾಕಿ ಅವರ ಎಲ್ಲಾ ಪುಸ್ತಕದ Summary

      Lesson 5.

      creating assets as a money rule in kannada
      mohnish pabrai

      ದಕ್ಷಣ ಸಂಸ್ಥೆಯ ಸಂಸ್ಥಾಪಕರು ಮತ್ತು ಪ್ರಸಿದ್ಧ ಹೂಡಿಕೆದಾರಾದ ಮೊಹ್ನಿಶ್ ಪಬ್ರೈ(mohnish pabrai) ಈ ರೀತಿ ಹೇಳಿದ್ದಾರೆ. ನಾನು ಕೆಲಸ ಮಾಡುವಾಗ ನನ್ನ ಬಳಿ ಹಣ ಗಳಿಸಲು ಯಾವುದೇ ಆಸ್ತಿ(asset) ಇರಲಿಲ್ಲ. ಆಗ ನಾನು ವಾರಕ್ಕೆ 168 ಗಂಟೆಗಳು ಇರುವುದನ್ನು ಗಮನಿಸಿದೆ ಮತ್ತು ಕೆಲಸದಲ್ಲಿ 5 ದಿನ, 8 ಗಂಟೆ ತೆಗೆದುಕೊಳ್ಳುತ್ತದೆ. ಅಂದರೆ 40 ಗಂಟೆ ನಾನು ಕೆಲಸ ಮಾಡುತ್ತೇನೆ. ನಾನು ಉಳಿದ 40 ಗಂಟೆಯನ್ನು ವೈಯಕ್ತಿಕ ಸಮಯಕ್ಕೆ ನೀಡಿದರು. ನನ್ನ ಹತ್ತಿರ ಇನ್ನಷ್ಟು 40 ಗಂಟೆ ಉಳಿಯುತ್ತದೆ. ಅದರಲ್ಲಿ ನಾನು ಯಾವುದಾದರೂ ಒಂದು ಅಡ್ಡ ವ್ಯಾಪಾರವನ್ನು ತೆರೆಯಬಹುದು.

      ಅವರ ಮೊದಲ ವ್ಯಾಪಾರ ಕೆಲಸ ಮಾಡದಿದ್ದರೆ, ಇನ್ನೊಂದು ವ್ಯಾಪಾರವನ್ನು ತೆರೆಯುವ ಬಗ್ಗೆ ಯೋಚಿಸಿದ್ದರು. ಅದು ಕೆಲಸ ಮಾಡದಿದ್ದರೆ, ಮತ್ತೊಂದು ವ್ಯಾಪಾರವನ್ನು ತೆರೆಯುವೇ ಎಂದು ಯೋಚಿಸಿದ್ದರು. ಇದು ಏಕೆಂದರೆ ಅವರ ಹತ್ತಿರ ಕೆಲಸವಿತ್ತು. ಹೀಗಾಗಿ ಅವರಿಗೆ ಯಾವುದೇ ರೀತಿಯ ಹೊರೆಯು ಇರಲಿಲ್ಲ. ಅವರು ಕೆಲಸದ ಜೊತೆಗೆ "ಟ್ರಾನ್ಸ್‌‌ ಟೆಕ್ ಐಎನ್‌ಸಿ" ಎಂಬ ಕಂಪನಿಯನ್ನು ತೆರೆದರು. ಇದು ಸಲಹಾ ವ್ಯವಹಾರದ(consulting business) ಕಂಪನಿ ಆಗಿದೆ ಮತ್ತು ಅವರಿಗೆ ಇದರಲ್ಲಿ 3 ಗ್ರಾಹಕರು ಸಿಕ್ಕಾಗ ಅವರ ಕೆಲಸವನ್ನು ತೊರೆದರು. ಇಂದು ನಾವು ಇವರನ್ನು ಒಬ್ಬ ಶ್ರೇಷ್ಠ ಹೂಡಿಕೆದಾರರಾಗಿ ನೋಡುತ್ತೇವೆ. ಇದರ ಅರ್ಥ ಏನೆಂದರೆ ನಾವು ನಮ್ಮ ಕೆಲಸದ ಜೊತೆಗೆ ಯಾವುದಾದರೂ ಒಂದು ಆಸ್ತಿಯನ್ನು(asset) ಮಾಡಿಕೊಳ್ಳಲೇಬೇಕು. ಅದು ಮನೆಯಿಂದ ಬಾಡಿಗೆ ಪಡೆಯುವುದು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು, ಇಲ್ಲ ಯಾವುದಾದರು ಅಡ್ಡ ವ್ಯಾಪಾರ. ಯಾವಾಗಲೂ ಆಸ್ತಿಯನ್ನು ಹೆಚ್ಚಿಸುವ ದೃಷ್ಟಿಕೋನದಲ್ಲಿ ನೋಡಬೇಕು.

      ಈ ಲೇಖನದಲ್ಲಿ ನಾವು ಮೂರು ಪ್ರಸಿದ್ಧ ಪುಸ್ತಕಗಳಾದ ಆದ "ಸೈಕಾಲಜಿ ಆಫ್ ಮನಿ", "ರಿಚ್ ಡ್ಯಾಡ್ ಪೂರ್ ಡ್ಯಾಡ್", "ಥಿಂಕ್ ಅಂಡ್ ಗ್ರೋ ರಿಚ್"ನಿಂದ 5 ಅದ್ಬುತವಾದ ಪಾಠಗಳನ್ನು ಕಲಿತೆವು.

      1. When you will belive anything.

      ಅಂದರೆ ನಕಾರಾತ್ಮಕ ಕಥೆಗಳು ಮನುಷ್ಯನ ಮೆದುಳನ್ನು ಆಕರ್ಷಿಸುತ್ತವೆ. ಇದರಿಂದಾಗಿ ನಾವು ವಾಸ್ತವವನ್ನು ಮರೆತು, ಇದರ ಮೇಲೆ ಗಮನ ಹರಿಸುತ್ತೇವೆ. ಆದರೆ ನಾವು ಸಂಗತಿಗಳ ಮೇಲು ನಂಬಿಕೆ ಇಡಬೇಕು.

      2. Desire.

      ಅಂದರೆ ಒಂದು ಕೆಲಸ ಮಾಡಲೇಬೇಕೆಂಬ ಆಸೆ ಇಲ್ಲದಿದ್ದರೆ ಏನು ಸಾಧ್ಯವಾಗುವುದಿಲ್ಲ. ಇದರಲ್ಲಿ ನಾವು ಸಾರಾ ಬಾರ್ಕ್ಲಿ ಅವರ ಕಥೆಯನ್ನು ನೋಡಿದೆವು. ಇವರಿಗೆ ವ್ಯಾಪಾರ ಮತ್ತು ಫ್ಯಾಶನ್ ಬಗ್ಗೆ ಏನು ತಿಳಿದಿರಲಿಲ್ಲ. ಆದರೂ ಇಂದು ಎರಡು ಬಿಲಿಯನ್ ಡಾಲರ್‌ನ ವ್ಯಾಪಾರವನ್ನು ತೆರೆದಿದ್ದಾರೆ.

      3. Persistence.

      ಇದರಲ್ಲಿ ನಾವು ಫ್ರಾಂಕ್ಲಿನ್ ಅವರ ಕಥೆಯನ್ನು ತಿಳಿಸಿದೆವು, ಅವರು ಹೇಗೆ ಬ್ಲಾಕ್ ಲಿಸ್ಟ್ ಎಂಬ ವೆಬ್‌ಸೈಟ್‌ ಮಾಡಿದರು ಎಂಬುದನ್ನು ತಿಳಿದೆವು. ಇವೆಲ್ಲ ಅವರ ಹಟದಿಂದ ಸಾಧ್ಯವಾಯಿತು.

      4. Imagination.

      ಇದರಲ್ಲಿ ನಾವು ಕ್ರಿಸ್ ಬಾಸ್ಟನ್ ಅವರು ಇಮ್ಯಾಜಿನೇಷನ್ ಮಾಡಿಕೊಂಡು ಇಂದಿಗೂ ಆಪಲ್ ಬಳಕೆದಾರರು ಬಳಸುವ ತಂತ್ರಜ್ಞಾನವಾದ ಶಾಝಮ್ ಆ್ಯಪ್ ಮಾಡಿದರು.

      5. Create assets.

      ಇದರಲ್ಲಿ ನಾವು ಮೊಹ್ನಿಶ್ ಪಬ್ರೈ ಅವರ ಕಥೆಯನ್ನು ನೋಡಿದೆವು, ಅವರು ಹೇಗೆ ಕೆಲಸದ ಜೊತೆಗೆ ಅವರ ಮೊದಲ ವ್ಯಾಪಾರವನ್ನು ತೆರೆದರು. ಇಂದು ಅವರು ಪೂರ್ಣ ಸಮಯದ ಹೂಡಿಕೆದರಾಗಿದ್ದಾರೆ. ಹೀಗಾಗಿ ಅವರಿಗೆ ಯಾವಾಗ ಬೇಕೋ ಆಗ ಕೆಲಸ ಮಾಡುತ್ತಾರೆ, ಏಕೆಂದರೆ ಅವರು rat race ನಿಂದ ಹೊರ ಬಂದಿದ್ದಾರೆ.

      ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

No Comments