Watch Video
ಅನೇಕರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸಲು ಅವರ ಹತ್ತಿರ ಎಷ್ಟು ಹಣ ಉಳಿಯುತ್ತದೆ ಎಂಬುದರ ಮೇಲೆ ನಿಂತಿದೆ ಎಂದು ಅನಿಸುತ್ತದೆ. ಆದರೆ ಇದು ಸತ್ಯವಲ್ಲ ಮತ್ತು ಇದು ಕೇವಲ ಪ್ರಾರಂಭವಾಗಿದೆ ಅಷ್ಟೇ. ನೀವು ಎಷ್ಟೇ ಗಳಿಸಿದರೂ ಹಣದ ನಿಯಮಗಳ ಬಗ್ಗೆ ತಿಳಿಯದಿದ್ದರೆ ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸಲು ಸಾಧ್ಯವಿಲ್ಲ.
ಆದರೆ ನೀವು ನಾವು ಈ ಲೇಖನದಲ್ಲಿ ತಿಳಿಸುವ 15 ಹಣದ ನಿಯಮಗಳ ಬಗ್ಗೆ ತಿಳಿದುಕೊಂಡರೆ, ನೀವು ನಿಮ್ಮ ಸಂಪತ್ತನ್ನು ಹೆಚ್ಚಿಸುವುದರ ಜೊತೆಗೆ ನಿಮ್ಮ ಕುಟುಂಬಕ್ಕೂ ಒಂದು ಒಳ್ಳೆಯ ಜೀವನ ಶೈಲಿ(life style) ನೀಡಬಹುದು. ಈ ಹಣದ ನಿಯಮಗಳನ್ನು ಅನೇಕರು ತಮ್ಮ ಜೀವನದಲ್ಲಿ ಬಳಸಿ ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸಿದ್ದಾರೆ. ಹೀಗಾಗಿ ನೀವು ಈ ಎಲ್ಲ ನಿಯಮಗಳನ್ನು ಪೇಪರ್‌ನಲ್ಲಿ ಬರೆದು ನೋಟ್ ಮಾಡಿಕೊಳ್ಳಿ.
ಏಕೆಂದರೆ ಈ ಲೇಖನ ನಿಮಗೆ ಒಂದು ಅತ್ಯುತ್ತಮ ಹೂಡಿಕೆಯಾಗಿದೆ. ಈ ಲೇಖನದ ಕೊನೆಯಲ್ಲಿ ಹಣದ ಮೇಲಿನ ನಿಮ್ಮ ವಿಚಾರ ಬದಲಾಗುತ್ತದೆ ಮತ್ತು ನೀವು ಶ್ರೀಮಂತರ ರೀತಿಯಲ್ಲಿ ಯೋಚಿಸಲು ಪ್ರಾರಂಭಿಸುವಿರಿ. ಬನ್ನಿ ಆ 15 ಹಣದ ನಿಯಮಗಳ ಬಗ್ಗೆ ತಿಳಿಯೋಣ.
ಇದನ್ನು ಓದಿ: ರಾಬರ್ಟ್ ಕಿಯೋಸಾಕಿ ಅವರ ಎಲ್ಲಾ ಪುಸ್ತಕದ Summaryಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸುವ ವಿಷಯ ಬಂದಾಗ ಅದೇ ಹಳೇ ಪುನರಾವರ್ತಿತ ಸಲಹೆಗಳನ್ನು(repeted advice) ಕೇಳುತ್ತೇವೆ. ಅದೆಂದರೆ "ನೀನು ಇನ್ನು ಮುಂದೆ ಕಡಿಮೆ ಹಣವನ್ನು ಖರ್ಚು ಮಾಡಲು ಪ್ರಾರಂಭಿಸು, ಜಿಪುಣನಾಗಿ ಬಿಡು". ಇದರಿಂದ ನಮ್ಮ ಹತ್ತಿರ ಕಡಿಮೆ ಹಣವಿದ್ದಾಗ ನಾವು ಜಿಪುಣತನವನ್ನು ತೋರಿಸುತ್ತೇವೆ ಮತ್ತು ಚಿಕ್ಕ ಚಿಕ್ಕ ವಸ್ತುಗಳಲ್ಲಿ ಹಣವನ್ನು ಹೇಗೆ ಉಳಿಸುವುದು ಎಂದು ಯೋಚಿಸುತ್ತೇವೆ.
ಈ ರೀತಿ ಮಾಡುವುದರಿಂದ ಕೆಲವರು ಜೀವನ ಪೂರ್ತಿ ಜಿಪುಣರಾಗೆ ಇರುತ್ತಾರೆ. ಕೆಲವರು ಇದರಿಂದ ತಮ್ಮ ದಿನನಿತ್ಯದ ಖರ್ಚಿಗೆ ಇತರರಿಂದ ಹಣ ಪಡೆಯುತ್ತಾರೆ. ನಾವು ಎಷ್ಟು ನಿಭಾಯಿಸಲು(afford) ಸಾಧ್ಯವೋ, ಅದಕ್ಕಿಂತ ಅಧಿಕ ಖರ್ಚು ಮಾಡಬಾರದು. ಆದರೆ ಕೆಲವೊಮ್ಮೆ ನಮಗೆ ಬೇಕಾಗಿರುವ ವಸ್ತುಗಳನ್ನು ಖರೀದಿಸಲು ನಮ್ಮ ಹತ್ತಿರ ಹಣವಿರುವುದಿಲ್ಲ. ಇಂಥಹ ಸಮಯದಲ್ಲಿ ಕಡಿಮೆ ಹಣವನ್ನು ಖರ್ಚು ಮಾಡಲು ಸಾಧ್ಯವೇ, ಇಲ್ಲ.
ಹೀಗಾಗಿ ನಿಮ್ಮ ಖರ್ಚುಗಳನ್ನು ಕಡಿತ ಗೊಳಿಸುವುದಕ್ಕಿಂತ ನಿಮ್ಮ ಗಳಿಕೆಯನ್ನು ಹೆಚ್ಚಿಸುವ ಬಗ್ಗೆ ಯೋಚಿಸಿ. ನೀವು ನಿಮ್ಮ ಆಸೆಗಳನ್ನು ಕಡಿತಗೊಳಿಸುವ ಅವಶ್ಯಕತೆಯಿಲ್ಲ. ನಿಮ್ಮ ಪ್ರಯತ್ನಗಳನ್ನು(effort) ಬದಲಾಯಿಸಬೇಕು ಅಷ್ಟೇ. ನೀವು scarcity mentality ಬದಲು abundance mentalityಯಿಂದ ಯೋಚಿಸಲು ಪ್ರಾರಂಭಿಸಿದ್ದಾರೆ, ನಿಮ್ಮ ಗಮನ ಹಣ ಉಳಿಸುವುದರ ಮೇಲೆ ಇರುವುದಿಲ್ಲ, ಬದಲಾಗಿ ಹೆಚ್ಚು ಹಣ ಗಳಿಸುವ ಬಗ್ಗೆ ಇರುತ್ತದೆ.
ಇದನ್ನು ಓದಿ: "ಲರ್ನ್ ಟು ಆರ್ನ್" ಪುಸ್ತಕದ 4 ಪ್ರಮುಖ ಹೂಡಿಕೆಯ ಕಲಿಕೆಗಳು.ಎಲಿಜಬೆತ್ ವಾರೆನ್ ಅವರು ಹಣದ ವಿಷಯ ಬಂದಾಗ ಜವಾಬ್ದಾರಿಯುತವಾಗಿ ಬುದ್ಧಿವಂತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇವರು ಗ್ರಾಹಕ ರಕ್ಷಣೆ, ಆರ್ಥಿಕ ಅವಕಾಶ, ಸಾಮಾಜಿಕ ಸುರಕ್ಷತೆ ನಿವ್ವಳದಲ್ಲಿ ಅಧಿಕ ಸಮಯ ಕಳೆಯುತ್ತಾರೆ. ಯಾರಾದರೂ ಇವರಿಗೆ ಆರ್ಥಿಕ ಸ್ವಾತಂತ್ರ್ಯದ ಸಲಹೆ ಕೇಳಿದರೆ ಇವರು ಆದಾಯವನ್ನು 3 ಭಾಗ ಮಾಡಲು ಹೇಳುತ್ತಾರೆ.
ಇದರಲ್ಲಿ ಮೊದಲ 50% ನಿಮ್ಮ needsಗಳಿಗೆ ಹೋದರೆ, 30% ನಿಮ್ಮ wantsಗಳಿಗೆ ಹೋಗುತ್ತದೆ ಮತ್ತು ಉಳಿದ 20% ಅನ್ನು ನೀವು ಹೂಡಿಕೆ ಮಾಡಬೇಕು. ಇದನ್ನು ಆರ್ಥಿಕ ಜಗತ್ತಿನಲ್ಲಿ ಅತ್ಯುತ್ತಮ ಸಲಹೆ ಎಂದು ಪರಿಗಣಿಸಲಾಗಿದೆ. ಎಷ್ಟೋ ಯಶಸ್ವಿ ಜನರು ಇದನ್ನು ಫಾಲೋ ಮಾಡುತ್ತಾರೆ. ನಿಮಗೆ ಸದ್ಯಕ್ಕೆ ಯಾವುದೇ ಮಾಸಿಕ ಯೋಜನೆ(monthly planning) ಗೊತ್ತಿಲ್ಲದಿದ್ದರೆ ಈ ನಿಯಮವನ್ನು ಬಳಸಬಹುದು.
ಇದನ್ನು ಓದಿ: ಇಂಟೆಲಿಜೆಂಟ್ ಇನ್ವೆಸ್ಟರ್ ಪುಸ್ತಕದ ವಿಶ್ಲೇಷಣೆ"we buy things we do not need, with money we do not have, to impress people we do not like" ಎಂಬ ಪ್ರಸಿದ್ಧ ಉಲ್ಲೇಖವಿದೆ. ಅಂದರೆ ನಾವಿಷ್ಟಪಡದ ಜನಗಳಿಗೆ ಪ್ರಭಾವ ಬೀರಲು(impress) ನಮಗೆ ಅಗತ್ಯವಿಲ್ಲದ ವಸ್ತುಗಳನ್ನು, ನಮ್ಮ ಹತ್ತಿರ ಇಲ್ಲದಿರುವ ಹಣದಿಂದ ಖರೀದಿಸುತ್ತೇವೆ, ಇದು ಕಹಿ ಸತ್ಯವಾಗಿದೆ. ಕೆಲವರು ಇದಕ್ಕಾಗಿ ಕ್ರೆಡಿಟ್ ಕಾರ್ಡ್ ಅನ್ನು ಬಳಸುತ್ತಾರೆ, ಇಲ್ಲ ಸಾಲ ಪಡೆಯುತ್ತಾರೆ, ಇಲ್ಲ ಉಳಿಸಿರುವ ಹಣವನ್ನು ವ್ಯರ್ಥ ಮಾಡುತ್ತಾರೆ. ಅವರು ಅವರ ಹತ್ತಿರ ಇರದ ಹಣವನ್ನು ಖರ್ಚು ಮಾಡುತ್ತಿರುತ್ತಾರೆ.
ನಿಮ್ಮ ಜೊತೆ ಇರುವ ಕೆಲವು ಜನರನ್ನು ಮೆಚ್ಚಿಸಲು ನೀವು ಸಾಲ ಪಡೆದು ಫೋನ್, ಬಟ್ಟೆ, ಶೂಸ್ ಇಲ್ಲ ಯಾವುದೇ ವಸ್ತುಗಳನ್ನು ಖರೀದಿಸುವ ಅಗತ್ಯವಿಲ್ಲ. ನೀವು ನಿಮ್ಮ ಸ್ವಂತ ಹಣದಿಂದ ಬೇಸರಗೊಳ್ಳದೆ ಅದನ್ನು ಖರೀದಿಸುವವರೆಗೂ ಕಾಯಬೇಕು. ಅನೇಕ ಬ್ಯಾಂಕ್‍ಗಳು ನೀವು ಅವರ ಕ್ರೆಡಿಟ್ ಕಾರ್ಡ್ ಬಳಸಿ ಅವರಿಗೆ ಲಾಭ ನೀಡಲಿ ಎಂದು ಬಯಸುತ್ತವೆ. ಹೀಗಾಗಿ ನಿಮ್ಮ ಹತ್ತಿರ ಇರದ ಹಣವನ್ನು ಖರ್ಚು ಮಾಡಲೇಬೇಡಿ.
ಇದನ್ನು ಓದಿ: Rich Dad Poor Dadನ ಮುಖ್ಯ ಐದು ಕಲಿಕೆಗಳುಶ್ರೀಮಂತರಾಗಲು ಹಣವನ್ನು ಉಳಿಸುವುದನ್ನು ಕಲಿಯುವುದು ಮೊದಲ ಹಂತವಾಗಿದೆ. ಆದರೆ ಕೇವಲ ಹಣವನ್ನು ಉಳಿಸಿ ಯಾರೂ ಕೂಡ ಶ್ರೀಮಂತರಾಗಿಲ್ಲ. ಉಳಿಸಿರುವ ಹಣವೂ 2 ರೀತಿಯಲ್ಲಿ ಅಡ್ವಾಂಟೇಜ್ ನೀಡುತ್ತದೆ. ಮೊದಲನೆಯದಾಗಿ ನಿಮ್ಮ ಸೇವಿಂಗ್ಸ್ ಸುರಕ್ಷಾ ಬಲೆ(safety net) ಆಗಿ ಕೆಲಸ ಮಾಡುತ್ತದೆ. ಅಂದರೆ ದುರಾದೃಷ್ಟದಿಂದ, ನಿಮ್ಮ ಬ್ಯಾಂಕ್‍ನಲ್ಲಿ ತಿಂಗಳಿನ ಖರ್ಚಿನ ಮೇಲೆ ಕನಿಷ್ಠ 3 ರಿಂದ 6 ತಿಂಗಳಿನಷ್ಟು ಹಣವು ಇರಬೇಕು. ಇದರಿಂದ ನೀವು ದಿನನಿತ್ಯ ಮತ್ತು ಮಾಸಿಕ ಖರ್ಚಿಗೆ ಹೋರಾಡುವ ಅಗತ್ಯವಿರುವುದಿಲ್ಲ.
ಎರಡನೆಯದಾಗಿ ನಗದು ದ್ರವ್ಯತೆಯಿಂದ(cash liquidity) ನೀವು ಡೀಲ್ಸ್ನಿಂದ ಸ್ವಾತಂತ್ರ್ಯವಿರುತ್ತೀರಾ. ಆದರೆ ನಿಮ್ಮ ಲಾಂಗ್ ಟರ್ಮ್ ಗುರಿ ಇವೆರಡೂ ಆಗಿರುವುದಿಲ್ಲ. ನಮ್ಮ ಗುರಿ ಇದಕ್ಕಿಂತ ದೊಡ್ಡದಿದ್ದು ಕೇವಲ ಸೇವಿಂಗ್ ಮಾಡಿ ಶ್ರೀಮಂತರಾಗಲು ಸಾಧ್ಯವಿಲ್ಲ.
ಇದನ್ನು ಓದಿ: 20ರ ವಯಸ್ಸಿನಲ್ಲಿ ನಿಮ್ಮ ಹಣ ಖರ್ಚಗುವ 7 ಬಲೆಗಳುದೊಡ್ಡ ದೊಡ್ಡ ಸಂಪತ್ತು ನಿರ್ಮಿಸುವ ಪಾಠಗಳಿವೆ. ಶ್ರೀಮಂತರು ವಸ್ತುಗಳನ್ನು ಖರೀದಿಸಲು ಕಾಯುವುದಿಲ್ಲ, ಬದಲಿಗೆ ಇನ್ನಷ್ಟು ಹಣದ ಯಂತ್ರಗಳನ್ನು(money machine) ಮಾಡಲು ಕಾಯುತ್ತಾರೆ. ಇದು ಏಕೆಂದರೆ ನೀವು ಗಳಿಸಿದ ಹಣದಿಂದ ವಸ್ತುಗಳನ್ನು ಖರೀದಿಸಿದ ನಂತರ ಆ ಹಣವು ನಿಮ್ಮ ಹತ್ತಿರ ಇರುವುದಿಲ್ಲ. ಅದೇ ನೀವು ಹಣದ ಯಂತ್ರಗಳನ್ನು ಮಾಡಿದರೆ ಅದರಿಂದ ಬೇಕಾದ ವಸ್ತುಗಳನ್ನು ಖರೀದಿಸಬಹುದು. ಇದು ತುಂಬ ಸರಳ ಆದರೆ ಪ್ರಬಲ ಪರಿಕಲ್ಪನೆಯಾಗಿದ್ದು(powerful concept) ನಿಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಆಗಿದ್ದರೆ ಈ ಹಣದ ಯಂತ್ರಗಳು ಎಂದರೇನು?
ಹಣದ ಯಂತ್ರಗಳೆಂದರೆ ಅಸೆಟ್(asset) ಆಗಿದೆ. ನೀವು ಕಷ್ಟಪಟ್ಟು ಗಳಿಸಿದ ಹಣದಿಂದ ಅಸೆಟ್ ಅನ್ನು ಖರೀದಿಸಬೇಕು ಹೊರತು ಲಿಯಬಿಲಿಟಿ ಅಲ್ಲ. ಇದರಿಂದ ನೀವು ನಿಮ್ಮ ಆಸೆಗಳನ್ನು ಈಡೇರಿಸಿಕೊಳ್ಳಬಹುದು. ಅಸೆಟ್ ನಿಮ್ಮ ಜೇಬಿನಲ್ಲಿ ಹಣ ಹಾಕುತ್ತದೆ. ಲಿಯಬಿಲಿಟಿ ನಿಮ್ಮ ಜೇಬಿನಿಂದ ಹಣವನ್ನು ಹೊರತೆಗೆಯುತ್ತದೆ. ಇದರ ಬಗ್ಗೆ ವಿವರವಾಗಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. ಶ್ರೀಮಂತರು ಅವರು ಕಷ್ಟಪಟ್ಟು ಗಳಿಸಿದ ಹಣದಿಂದ ವಸ್ತುಗಳನ್ನು ಖರೀದಿಸುವುದಿಲ್ಲ. ಬದಲಿಗೆ ಅಸೆಟ್ನಿಂದ ಬರುವ ಲಾಭದಿಂದ ಅವರ ಎಲ್ಲ ಆಸೆಗಳನ್ನು ಈಡೇರಿಸಿಕೊಳ್ಳುತ್ತಾರೆ.
ಇದನ್ನು ಓದಿ: ಷೇರು ಮಾರುಕಟ್ಟೆಯ ಮೇಲೆ ಸಂಪೂರ್ಣ ವಿವರಎಲ್ಲಿಯಾದರೂ ಹೂಡಿಕೆ ಮಾಡುವ ಮೊದಲು ನಿಮ್ಮ ಅತ್ಯಮೂಲ್ಯ assect ಆದ ಸಮಯವನ್ನು ಎಲ್ಲಿ ಹೂಡಿಕೆ ಮಾಡುತ್ತಿದ್ದೀರಾ ಎಂದು ಯೋಚಿಸಿದ್ದೀರಾ. ಇದು ಏಕೆಂದರೆ "time is more important than money", ಇದನ್ನು ಅನೇಕರು ತಿಳಿದಿದ್ದಾರೆ, ಅದರೆ ಅರ್ಥ ಮಾಡಿಕೊಂಡಿಲ್ಲ. ಪ್ರಾರಂಭದಲ್ಲಿ ಎಲ್ಲರ ಹತ್ತಿರ ಹೂಡಿಕೆ ಮಾಡಲು ಸಾಕಷ್ಟು ಹಣ ಇರುವುದಿಲ್ಲ. ಆದರೆ ಆ ಸಮಯದಲ್ಲಿ ನಮ್ಮ ಹತ್ತಿರ ಸಮಯವಿರುತ್ತದೆ. ನೀವು ನಿಮ್ಮ ಸಮಯವನ್ನು ವ್ಯರ್ಥ ಮಾಡುವ ಬದಲು ಕಲಿಯಲು, ಅಭ್ಯಾಸಕ್ಕೆ, ಮತ್ತು ಅನ್ವಯ ಮಾಡಲು ಮಾತ್ರ ಬಳಸಬೇಕು.
ನೀವು ಈಗಾಗಲೇ ಬುದ್ಧಿವಂತರಿರುವ ಕಾರಣ ನಿಮ್ಮ ಅತ್ಯಮೂಲ್ಯವಾದ ಸಮಯವನ್ನು ಈ ಲೇಖನವನ್ನು ಓದಲು ನೀಡುತ್ತಿದ್ದೀರಾ ಮತ್ತು ಮಾಹಿತಿ ತಾಣದಲ್ಲಿ ಕಾಣುವ ಅನೇಕ ಮಾಹಿತಿಯುಕ್ತ ಲೇಖನದಿಂದ ನೀವು ಅಧಿಕ ಕಲಿಯುತ್ತಿದ್ದೀರಾ. ಈಗ ನೀವು ಕಲಿತಿದ್ದನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಾರಂಭಿಸಿ. ನೀವು ಶ್ರೀಮಂತರಲ್ಲದಿದ್ದರೆ ಇದಕ್ಕೆ ಕಾರಣ ನಿಮ್ಮ ಹತ್ತಿರ ಹಣವಿಲ್ಲವೆಂದಲ್ಲ, ಬದಲಿಗೆ ಇದಕ್ಕೆ ಕಾರಣ ನೀವು ಸಮಯವನ್ನು ಕಳಪೆಯಾಗಿ(poorly) ಹೂಡಿಕೆ ಮಾಡುತ್ತಿದ್ದೀರ ಎಂಬುದಾಗಿದೆ.
ಇದನ್ನು ಓದಿ: ಸಮಯ ನಿರ್ವಹಣೆಗೆ ಹತ್ತು ಸಲಹೆಗಳುಹಣವು ಕಾರ್ಯವನ್ನು ವೇಗಗೊಳಿಸುತ್ತದೆ. ನೀವು ಅತ್ಯಮೂಲ್ಯವಾದನ್ನು ನಿರ್ಮಿಸಲು ಹಣದ ಅವಶ್ಯಕತೆ ಇದೆ ಎನ್ನುವಂತಿಲ್ಲ. ಆದರೆ ಹಣದಿಂದ ಅದನ್ನು ನೀವು ಬೇಗನೆ ಸಾಧಿಸಬಹುದು. ನೀವು ಹಣವನ್ನು ಬಳಸುವಾಗ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಇದು ಬಾಣಸಿಗನ(chef) ಕೈಯಲ್ಲಿರುವ ಚಾಕುವಿನ ರೀತಿಯಾಗಿದೆ.
ಈ ಚಾಕು ಬಾಣಸಿಗನ ಬಳಿ ಇದ್ದರೆ ಅದರಿಂದ ಅನುಕೂಲಗಳು ಇರುತ್ತದೆ. ಅದರಿಂದ ಏನೇ ಮಾಡಿದರೂ ಪರಿಣಾಮಕಾರಿಯಾಗಿರುತ್ತದೆ. ಅದೇ ಈ ಚಾಕು ಅದನ್ನು ಬಳಸದಿರಲು ಬಾರದ ವ್ಯಕ್ತಿಯ ಕೈಗೆ ಸಿಕ್ಕರೆ ಅವನು ಕೆಲಸವನ್ನು ಸರಿಪಡಿಸಬಹುದು, ಆದರೆ ಅಧಿಕ ನಷ್ಟ ಮಾಡುತ್ತಾನೆ. ಹೀಗಾಗಿ ಹಣವನ್ನು tool ರೀತಿ ಬಳಸಿ. ಹಣದ ಉದ್ದೇಶ ನಿಮ್ಮ ಬದುಕನ್ನು ಅಧಿಕ ಪರಿಣಾಮಕಾರಿ, ಉತ್ಪಾದಕ, ಸುಲಭ ಮತ್ತು ವೇಗಗೊಳಿಸುವುದಾಗಿದೆ. ಇದನ್ನು ನೀವು ಅನುಕೂಲಕರ ರೀತಿಯಲ್ಲಿ ಬಳಸಬೇಕು ಹೊರತು ವ್ಯರ್ಥ ಮಾಡಲು ಅಲ್ಲ.
ಇದನ್ನು ಓದಿ: ಗಣಿತವನ್ನು ವೇಗವಾಗಿ ಕಲಿಯುವುದು ಹೇಗೆ?ನೀವು ಬೇಗನೆ ಶ್ರೀಮಂತರಾಗಲು ಬಯಸಿದರೆ ನಿಮ್ಮ ಆದಾಯದ ಅಧಿಕ ಭಾಗವನ್ನು ಖರ್ಚು ಮಾಡುವ ಬದಲು ಹೂಡಿಕೆ ಮಾಡಬೇಕಾಗಿದೆ. ಕೆಲವರು ತಮ್ಮ ಜೀವನದಲ್ಲಿ ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸುತ್ತಾರೆ. ಅವರುಗಳು ತಮ್ಮ ಹಿಂದಿನ ಬದುಕಿನಲ್ಲಿ ಬಡವರ ರೀತಿಯ ಜೀವನ ಶೈಲಿಯಲ್ಲಿ ಜೀವನ ನಡೆಸುತ್ತಿರುತ್ತಾರೆ ಮತ್ತು ಇನ್ನು ಮುಂದೆ ಅವರಿಗೆ ಆ ರೀತಿ ಜೀವನ ನಡೆಸಲು ಅವಶ್ಯಕತೆಯಿಲ್ಲವೆಂದು ತಿಳಿದಿರುತ್ತಾರೆ. ನೀವು ನಿಮ್ಮ ಆದಾಯದ 50 ರಿಂದ 80 ರಷ್ಟನ್ನು ಹೂಡಿಕೆ ಮಾಡಬಹುದೆಂದರೆ ಮಾಡಬೇಡಿ. ಏಕೆಂದರೆ ಇದುವೇ ನಿಮಗೆ ಅನುಕೂಲವನ್ನು ನೀಡುತ್ತದೆ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸುವ ಮಾರ್ಗವಾಗಿದೆ.
ನೀವು ನಿಮ್ಮ ಈಗಿನ ಆರ್ಥಿಕ ಪರಿಸ್ಥಿತಿಯ ಮೇಲೆ ತೃಪ್ತಿ ಇಲ್ಲದಿದ್ದರೆ, ಇದಕ್ಕೆ ಉಪಾಯ ತುಂಬ ಸರಳವಿದೆ. ನಿಮಗೆ ಮೌಲ್ಯಯುತವೆನ್ನುವುದನ್ನು ಮಾಡಿ. ನೀವು ಮಾರುಕಟ್ಟೆ ಮೌಲ್ಯ ನೀಡುವ ಕೆಲಸವನ್ನು ಮಾಡಿದರೆ, ಮಾರುಕಟ್ಟೆ ನಿಮ್ಮ ಕೆಲಸಕ್ಕೆ ಅಷ್ಟೇ ಮೌಲ್ಯವನ್ನು ನೀಡುತ್ತದೆ. ನೀವು ಇದನ್ನು 2 ರೀತಿಯಲ್ಲಿ ಮಾಡಬಹುದು. ಮೊದಲನೇಯದಾಗಿ ನೀವು ಮಾಡುತ್ತಿರುವ ಕೆಲಸವನ್ನು ಇನ್ನಷ್ಟು ಎಫಿಷಿಯನ್ಸಿಯಿಂದ ಮಾಡಿ. ಎರಡನೆಯದಾಗಿ ಇನ್ನಷ್ಟು ಮೌಲ್ಯಯುತವಾದ ಕೆಲಸಗಳನ್ನು ಮಾಡಲು ಪ್ರೋತ್ಸಾಹಿಸಲು ಹೊಸ ಕೌಶಲ್ಯಗಳನ್ನು ಕಲಿಯಿರಿ.
ವಾರೆನ್ ಬಫೆಟ್ "the more you learn the more you will earn" ಎಂದು ಹೇಳುತ್ತಾರೆ. ಅಂದರೆ ನೀವು ಅಧಿಕ ಕಲಿತಷ್ಟು ಅಧಿಕ ಗಳಿಸುತ್ತೀರಾ. ಹೀಗಾಗಿ ನೀವು ಹಣದ ಹಿಂದೆ ಓಡಬೇಡಿ. ಅದನ್ನು 99.99% ಜನರು ತಮ್ಮ ಜೀವನದಲ್ಲಿ ಈಗಾಗಲೇ ಮಾಡುತ್ತಿದ್ದಾರೆ. ಬದಲಿಗೆ ನೀವು ಹಣದ ಮ್ಯಾಗ್ನೆಟ್(money magnet) ಆಗಿ. ಇದರಿಂದ ನೀವು ಹಣದ ಹಿಂದೆ ಓಡುವ ಬದಲು ಹಣವು ನಿಮ್ಮ ಹತ್ತಿರ ಬರುತ್ತದೆ.
ಇದನ್ನು ಓದಿ: ಷೇರು ಮಾರುಕಟ್ಟೆ ಹೇಗೆ ಕಾರ್ಯನಿರ್ವಹಿಸುತ್ತದೆ?ಹಣವೂ ತಮ್ಮ ಜೀವನದ ಎಲ್ಲ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂದು ಅನೇಕರು ಯೋಚಿಸುತ್ತಾರೆ. ಹಣವು ನಮ್ಮ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂಬುದು ಸತ್ಯವಾಗಿದೆ. ಆದರೆ ನಮ್ಮ ಪ್ರತಿಯೊಂದು ಸಮಸ್ಯೆಯನ್ನು ನಿವಾರಿಸುವುದಿಲ್ಲ. ಹಣವು ಅನೇಕ ಲಾಕ್ ಅನ್ನು ತೆರೆಯುವ ಯೂನಿವರ್ಸಲ್ ಕೀ ಈ ರೀತಿ ಆಗಿದೆ. ಉದಾಹರಣೆಗೆ ನಿಮ್ಮ ಹತ್ತಿರ ಮನೆಯಿಲ್ಲದಿದ್ದರೆ ಹಣವು ಇದನ್ನು ಪರಿಹರಿಸುತ್ತದೆ. ನೀವು ಸ್ಟಾರ್ಟ್ಅಪ್ ಮಾಡಲು ಬಯಸಿದರೆ ಹಣವು ನಿಮಗೆ ತುಂಬಾ ಸಹಕಾರಿಯಾಗಿದೆ. ಇದು ಏಕೆಂದರೆ ಇವೆಲ್ಲವೂ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಾಗಿವೆ. ಹಣವು ನಿಮ್ಮ ಜೀವನದ ಎಲ್ಲ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂದು ಯೋಚಿಸುವುದು ಮೂರ್ಖತನವಾಗಿದೆ.
ನಾವು ಬಡವರಾಗಿದ್ದಾಗ ನಮಗೆ ಕೇವಲ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಮಾತ್ರ ಕಾಣುತ್ತವೆ. ಆದರೆ ನೀವು ಮುಂದೆ ಸಾಕಷ್ಟು ಗಳಿಸಿದ ನಂತರ ಹಣದಿಂದ ನಿವಾರಿಸಲಾಗದ ಅಧಿಕ ಸಮಸ್ಯೆಗಳು ಇವೆ ಎಂದು ತಿಳಿಯುತ್ತದೆ. ಇದು ಕೇವಲ ನಿಜವಾಗಿಯೂ ಬುದ್ಧಿವಂತ ಇರುವ ಜನರಿಗೆ ಮಾತ್ರ ತಿಳಿದಿದೆ. ಹಣವು ನಿಮ್ಮ ಜೀವನದ 80 ರಿಂದ 90ರಷ್ಟು ಸಮಸ್ಯೆಗಳನ್ನು ನಿವಾರಿಸುತ್ತದೆ. ಆದರೆ ಕೆಲವು ಸಮಸ್ಯೆಗಳನ್ನು ನೀವೇ ಪರಿಹರಿಸಿಕೊಳ್ಳಬೇಕು. ಇದರಿಂದಲೇ ನೀವು ನಿಮ್ಮ ಜೀವನದಲ್ಲಿ ಒಂದು ಪರಿಣಾಮಕಾರಿ ನಿರ್ಧಾರ ಮಾಡಲು ಸಾಧ್ಯವಾಗುತ್ತದೆ.
ಜನರು ತಮ್ಮ ಹಣವನ್ನು ಕಳೆದುಕೊಂಡ ನಂತರ ಅವರು ಏನು ಮಾಡುತ್ತಿದ್ದಾರೆ ಎಂದು ತಿಳಿಯುವುದಿಲ್ಲ. ಹೀಗಾಗಿ ನೀವು ಈ ರೀತಿಯಾಗಿ ಆಗಬೇಡಿ ಮತ್ತು ಅವರು ಮಾಡಿರುವ ತಪ್ಪುಗಳನ್ನು ರಿಪೀಟ್ ಮಾಡಬೇಡಿ. ನೀವು ಕಲೆಯ(art) ಮೇಲೆ ಭಾವೋದ್ರಿಕ್ತ(passinate) ಆಗಿದ್ದರೆ ಕಲೆಯಲ್ಲಿ ಹೂಡಿಕೆ ಮಾಡಿ. ವ್ಯಾಪಾರದಲ್ಲಿ ಫ್ಯಾಸಿನೇಟ್ ಆಗಿದ್ದರೆ ವ್ಯಾಪಾರದಲ್ಲಿ ಹೂಡಿಕೆ ಮಾಡಿ. ನೀವು ಟೆಕ್ ಮೇಲೆ ಸೂಪರ್ ಫ್ಯಾಸಿನೇಟ್ ಆಗಿದ್ದರೆ ಟೆಕ್ ನಲ್ಲಿ ಹೂಡಿಕೆ ಮಾಡಿ.
ನಿಮಗೆ ಯಾವುದರ ಮೇಲೆ ಅಧಿಕ ಜ್ಞಾನವಿದೆ ಎಂದು ಯೋಚಿಸಿ ಮತ್ತು ನಿನಗೆ ಆಸಕ್ತಿಕರ ವಿಷಯದ ಮೇಲೆ ಮಾತ್ರ ಹೂಡಿಕೆ ಮಾಡಲು ಪ್ರಯತ್ನಿಸಿ. ಇದು ಏಕೆಂದರೆ ಸ್ವಲ್ಪ ಹಣ ಬಂದ ನಂತರ ಜನರು ಅವರು ಅರ್ಥಮಾಡಿಕೊಳ್ಳದ ವಸ್ತುಗಳಲ್ಲಿ ಹೂಡಿಕೆ ಮಾಡುತ್ತಾರೆ. ಮೂಕ ಹೂಡಿಕೆಗಳನ್ನು ಮಾಡಲು ಪ್ರಾರಂಭಿಸುತ್ತಾರೆ. ಎಲ್ಲಿ ಅಧಿಕ ಹೂಡಿಕೆ ಆಗುತ್ತಿದೆಯೋ, ಅಲ್ಲೇ ಹೂಡಿಕೆ ಮಾಡುತ್ತಾರೆ. ಈ ರೀತಿಯ ಜನರೇ ಮುಂದೆ ದುಃಖ ಪಡುತ್ತಾರೆ.
ಇದನ್ನು ಓದಿ: ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಗೇಮ್ ಪ್ಲಾನ್ಅನೇಕ ಮಧ್ಯಮ ವರ್ಗದವರು ಮತ್ತು ಬಡವರು ಮಾಡುವ ಸಾಮಾನ್ಯ ತಪ್ಪೆಂದರೆ ಅವರು ತಮ್ಮ ಹಣವನ್ನು ಮಾತ್ರ ಬಳಸುತ್ತಾರೆ. ಯಾವುದೇ ಕಾರು, ಹೊಸ ವಾಚ್, ರಜೆಯ ಟ್ರಿಪ್ಗೆ ಸಾಲ ತೆಗೆದುಕೊಳ್ಳುವುದು ಮೂರ್ಖತನವಿರಬಹುದು. ಆದರೆ ಚೆನ್ನಾಗಿ ಲೆಕ್ಕ ಹಾಕಿ ನಿರ್ವಹಿಸಿದ ಸಾಲ ತೆಗೆದುಕೊಂಡಿದ್ದು, ಅದರಿಂದ ನಿಮ್ಮ ಆದಾಯ ಏರಿದರೆ, ಆ ಸಾಲ ನಿಮಗೆ ಲಾಭಕರವಾಗಿದೆ. ಆದರೆ ನಿಮಗೆ ಅದನ್ನು ಹಿಂತಿರುಗಿಸಲು ಸುಲಭವಾಗಿರಬೇಕು.
ಉದಾಹರಣೆಗೆ ನೀವು ರಿಯಲ್ ಎಸ್ಟೇಟ್ನಲ್ಲಿ ಒಂದು ಮನೆ ಮಾಡಿ ಅದನ್ನು ಚೆನ್ನಾಗಿ ಮೆಂಟೇನ್ ಮಾಡಲು ಸಾಲ ತೆಗೆದುಕೊಂಡರೆ, ಅದರಿಂದ ಅಧಿಕ ಬಾಡಿಗೆ ಪಡೆಯಬಹುದು. ನೀವು ಅಂದುಕೊಂಡಂತೆ ಆಗದಿದ್ದರೂ ಆ ಸಾಲ ತೀರಿಸಬಹುದೆಂಬ ನಂಬಿಕೆಯಿದ್ದರೆ ಮಾತ್ರ ತೆಗೆದುಕೊಳ್ಳಿ. ಈ ರೀತಿ ಚೆನ್ನಾಗಿ ಲೆಕ್ಕ ಹಾಕಿ ನಿರ್ವಹಿಸಿದ ಸಾಲ ಹಣದ ಕೌಶಲ್ಯವಾಗಿದ್ದು, ನೀವು ಇದನ್ನು ಕಲಿಯುವುದು ಮುಖ್ಯವಾಗಿದೆ.
ಇದನ್ನು ಓದಿ: ಯಶಸ್ಸು ಕಾಣಲು ಚಾಣಕ್ಯರ ನಾಲ್ಕು ನೀತಿಗಳುಶ್ರೀಮಂತರಾಗಲು ತುಂಬ ಕಷ್ಟಪಡಬೇಕಾಗುತ್ತದೆ ಎಂದು ನೀವು ಕೇಳಿರುತ್ತೀರ. ತುಂಬಾ ಪ್ಲಾನ್ ಮಾಡಬೇಕು, ತುಂಬಾ ಸುಸ್ತಾಗುತ್ತದೆ, ತುಂಬಾ ತ್ಯಾಗ(sacrifice) ಮಾಡಬೇಕು ಮತ್ತು ಇದು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ಇದರಿಂದ ಅನೇಕರು ಸುಸ್ತಾಗಿ ಬಿಟ್ಟುಬಿಡುತ್ತಾರೆ. ಮೊದಲ ಹಂತದಲ್ಲಿ ಇದು ಸತ್ಯವಾಗಿದೆ. ಆದರೆ ಮಾರ್ಕ್ ಕ್ಯೂಬನ್ "i would rather be tired than broke" ಎಂದು ಹೇಳುತ್ತಾರೆ. ಅಂದರೆ ನಾನು ಬಡವನಾಗಿರುವ ಬದಲು ಸುಸ್ತಾಗಿರಲು ಬಯಸುತ್ತೇನೆ ಎಂಬುದಾಗಿದೆ.
ನೀವು ಸುಸ್ತಾಗಿರಲು ಬಯಸುತ್ತೀರೋ ಅಥವಾ ಬಡವರಾಗಿರುವ ಬಯಸುತ್ತೀರೋ ಎಂಬುದು ನಿಮ್ಮ ಆಯ್ಕೆ ಆಗಿದೆ. ಆದರೆ ಯಾವುದೇ ವ್ಯಕ್ತಿ ತನ್ನ ಸೋಮಾರಿತನವನ್ನು(lazyness) ಕಡಿಮೆ ಮಾಡಿದರೆ ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸಬಹುದು. ತುಂಬಾ ಜನಗಳಿಗೆ ಸೋಮಾರಿಯಾಗಿರುವುದು ಕಠಿಣ ಪರಿಶ್ರಮದ ವಿರುದ್ಧ ಎಂದು ಅನಿಸುತ್ತದೆ. ಆದರೆ ಇದು ಪೂರ್ತಿಯಾಗಿ ಸತ್ಯವಲ್ಲ. ಇದು ಸತ್ಯವಾಗಿದ್ದರೆ ಇಂದು ಜಗತ್ತಿನ ಶ್ರೀಮಂತ ವ್ಯಕ್ತಿ ಕಲ್ಲಿದ್ದಲನ್ನು ಹೊರ ತೆಗೆಯುವರಾಗಿರುತ್ತಿದ್ದರು.
ಸೋಮಾರಿಯಾಗಿರುವುದು ನಿಮ್ಮ ಮನಸ್ಥಿತಿಯಿಂದ ಆಗಿರುತ್ತದೆ. ಇದರಿಂದ ನೀವು ನಿಮಗೆ ಸರಿ ಏನಿಸುವುದನ್ನು ಆರಿಸುವ ಬದಲು ನಿಮಗೆ ಸುಲಭವೆನಿಸುವುದನ್ನು ಆರಿಸಿಕೊಳ್ಳುತ್ತೀರಾ. ಆದರೆ ನೀವು ನಿಮಗೆ ಸರಿಯೆನಿಸುವುದನ್ನು ಆಯ್ಕೆ ಮಾಡಿ, ಅದಕ್ಕೆ ತ್ಯಾಗ ಮಾಡಿದರೆ ಭವಿಷ್ಯದಲ್ಲಿ ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸುತ್ತೀರಾ.
ಇದನ್ನು ಓದಿ: ಷೇರು ಮಾರುಕಟ್ಟೆಯಿಂದ ಉತ್ತಮ ರಿಟರ್ನ್ಸ್ ಪಡೆಯುವುದು ಹೇಗೆ?ನಿಮ್ಮ ಹತ್ತಿರ ಎಷ್ಟು ಬೇಗನೆ ರಿಟೈರಮೆಂಟ್ ಫಂಡ್ ಆಗುತ್ತದೆಯೋ, ಅಷ್ಟು ಬೇಗನೆ ನೀವು ರಿಟೈರ್ ಆಗಬಹುದು. ನೀವು 40ರಲ್ಲಿ ರಿಟೈರ್ ಆಗಲು ಬಯಸುತ್ತಿರೋ, ಇಲ್ಲ 60ರಲ್ಲಿ ರಿಟೈರ್ ಆಗಲು ಬಯಸುತ್ತೀರೋ ಎಂಬುದು ನಿಮ್ಮ ಆಯ್ಕೆ ಆಗಿದೆ. ನಿಮ್ಮ ರಿಟೈರ್ ಮೆಂಟ್ ಮೇಲೆ ನಿರ್ಧರಿಸಿ, ನಿಮ್ಮ ಯೋಜನೆ ಬೇರೆ ಬೇರೆ ಇರುತ್ತದೆ. ಆದರೆ ನೀವು ಒಂದು ರಿಟೈರ್ಮೆಂಟ್ ಫಂಡ್ ಮಾಡಲೇಬೇಕು ಎಂದು ನೆನಪಿಡಿ.
ನೀವು ಕೆಲವು ರಿಟೈರ್ಮೆಂಟ್ ಪ್ಲಾನ್ನಲ್ಲಿ ಹೂಡಿಕೆ ಮಾಡುವುದರಿಂದ ತೆರಿಗೆ ಪ್ರಯೋಜನಗಳು ಸಿಗುತ್ತದೆ ಮತ್ತು ನಿಮ್ಮ ರಿಟೈರ್ಮೆಂಟ್ಗಾಗಿ ಹೂಡಿಕೆ ಮಾಡುವುದು ತಪ್ಪು ಆಯ್ಕೆ ಆಗಿಲ್ಲ. ಏಕೆಂದರೆ ಕೊನೆಯಲ್ಲಿ ನೀವು ಈ ಎಲ್ಲ ಹಣವನ್ನು ಕ್ಯಾಶ್ ಔಟ್ ಮಾಡಬಹುದು ಮತ್ತು ಈ ರೀತಿಯ ಹೂಡಿಕೆ ದೀರ್ಘಾವಧಿಯಲ್ಲಿ ಕಾಂಪೌಂಡಿಂಗ್ ಇನ್ಟ್ರೆಸ್ಟ್ ನೀಡುತ್ತದೆ.
ಹೀಗಾಗಿ ನೀವು ಎಷ್ಟು ಬೇಗನೆ ಪ್ರಾರಂಭಿಸುತ್ತೀರೋ ಅಷ್ಟೂ ಮುಂದೆ ಲಾಭದಾಯಕ ಆಗುತ್ತದೆ. ರಿಟೈರ್ಮೆಂಟ್ ಫಂಡ್ ಇರುವುದರಿಂದ ನೀವು ನಿವೃತ್ತರಾದ ಮೇಲೆ ಯಾರ ಮೇಲೂ ಅವಲಂಬಿತವಾಗಿರಬೇಕಿಲ್ಲ. ನಿಮ್ಮ ಆರಂಭಿಕ ವಯಸ್ಸಿನಲ್ಲಿ ತೆಗೆದುಕೊಂಡ ನಿರ್ಧಾರದಿಂದ ನಿಮಗೆ ಲಾಭ ಸಿಗುತ್ತಿರುತ್ತದೆ.
ಇದನ್ನು ಓದಿ: ನಿಷ್ಕ್ರಿಯ ಆದಾಯದ ಮೂಲಗಳು ಯಾವುವು?ಕೆಲವರು ಒಂದು ಸಮಯದಲ್ಲಿ ಅಧಿಕ ಹಣ ಗಳಿಸಿರುವವರಾಗಿದ್ದರು, ಸಮಯ ಕಳೆದಂತೆ ತಮ್ಮ ಎಲ್ಲ ಹಣವನ್ನೂ ಕಳೆದುಕೊಳ್ಳುತ್ತಾರೆ ಮತ್ತು ಎಲ್ಲಿಂದ ಅವರು ಪ್ರಾರಂಭಿಸುತ್ತಾರೋ, ಅಲ್ಲೇ ಬಂದು ನಿಲ್ಲುತ್ತಾರೆ. ಇಂದಿನ ಜಗತ್ತಿನಲ್ಲಿ ಕೆಲವರಿಗೆ ಅವರು ಎಷ್ಟು ಗಳಿಸುತ್ತಾರೆ ಎಂದು ಹೇಳುವುದು ಮುಖ್ಯವಾಗಿದೆ. ಇದರಿಂದ ಅವರು ಎಷ್ಟು ಬೆಳೆದಿದ್ದಾರೆ ಎಂದು ತಿಳಿಯುತ್ತದೆ. ನಮ್ಮ ಆರ್ಥಿಕ ಸ್ತಿತಿ ನಾವೆಷ್ಟು ಬೆಳೆದಿದ್ದೇವೆ ಎಂಬುದನ್ನು ತಿಳಿಸುವುದು ಸತ್ಯವಾಗಿದೆ.
ಹಣವು ಮ್ಯಾಗ್ನೆಟ್ ರೀತಿಯಾಗಿದೆ. ಜನರು ಒಮ್ಮೆಲೆ ಗೌರವ ನೀಡಲು ಪ್ರಾರಂಭಿಸುತ್ತಾರೆ ಮತ್ತು ಈ ಗಮನ ಹೊಸದಾಗಿ ಶ್ರೀಮಂತರಾದವರಿಗೆ ಇಷ್ಟವಾಗುತ್ತದೆ. ನಿಮ್ಮ ಕೆಲವು ಸ್ನೇಹಿತರು ಇಲ್ಲ ಕುಟುಂಬದವರನ್ನು ಬಿಟ್ಟು, ಇತರರು ನಿಮ್ಮಿಂದ ಏನಾದರೂ ಲಾಭವಾಗಲೆಂದು ಸಂಬಂಧ ಬೆಳೆಸುತ್ತಾರೆ. ಈ ರೀತಿ ತುಂಬ ಜನ ಇರುತ್ತಾರೆ ಮತ್ತು ಈ ರೀತಿಯ ಜನಗಳೇ ನಿಮ್ಮ ಕೆಟ್ಟ ಸಮಯದಲ್ಲಿ ನಿಮ್ಮ ಸುತ್ತಮುತ್ತಲು ಇರುವುದಿಲ್ಲ.
ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.
Explore all our Posts by categories.
See all comments...