How to Invest in 20s | 20ರ ವಯಸ್ಸಿನಿಂದ ಹೂಡಿಕೆ ಮಾಡುವುದು ಹೇಗೆ?
Info Mind 2260
Watch Video
ಉದ್ಯಮಿ, ಲೇಖಕ, ಸಂಪತ್ತು ತರಬೇತುದಾರದ ಟಿ ಹಾರ್ವ್ ಎಕರ್(t harv eker) ಈ ರೀತಿ ಹೇಳುತ್ತಾರೆ.
"Give me your 5 minutes and I can predictive or financial future for rest of your life. you will be rich or not".
"ನೀವು ನಿಮ್ಮ ಐದು ನಿಮಿಷವನ್ನು ನನಗೆ ನೀಡಿ. ನಾನು ಊಹಿಸಿ, ನಿಮ್ಮ ಆರ್ಥಿಕ ಭವಿಷ್ಯದ ಬಗ್ಗೆ ತಿಳಿಸುವೆನು. ನೀವು ಶ್ರೀಮಂತನಾಗುತ್ತಿರೋ ಇಲ್ಲವೋ" ಎಂಬುದನ್ನು ತಿಳಿಸುತ್ತೇನೆ.
ಅವರು ಈ ಮಾತನ್ನು ಅಷ್ಟು ನಂಬಿಕೆಯಿಂದ ಏಕೆ ಹೇಳುತ್ತಿದ್ದಾರೆ ಎಂದರೆ, ಎಷ್ಟೋ ವರ್ಷಗಳ ಕಾಲ ಅವರು ಮಿಲಿಯನೇರ್ ಮತ್ತು ಬಿಲಿಯನೇರ್ ಅವರ ಯಶಸ್ಸಿನ ಗುಟ್ಟು, ಮನಸ್ಥಿತಿ ಮತ್ತು ಬದುಕಿನ ಶೈಲಿಯ ಬಗ್ಗೆ ತಿಳಿದಿದ್ದಾರೆ ಮತ್ತು ಅದನ್ನು "Secrets of Millionaire Mind" ಪುಸ್ತಕದಲ್ಲಿ ತಿಳಿಸಿದ್ದಾರೆ. ಇದು ಜಗತ್ತಿನ ಅತ್ಯುತ್ತಮ ಹಣ ನಿರ್ವಹಣೆ ಮತ್ತು ವೈಯಕ್ತಿಕ ಹಣಕಾಸಿನ ಪುಸ್ತಕದಲ್ಲಿ ಒಂದಾಗಿದೆ. ಏಕೆಂದರೆ ಲೇಖಕರು ಇದರಲ್ಲಿ ನಮಗೆ ಹಣದ ಬ್ಲೂಪ್ರಿಂಟ್ ಮತ್ತು 17 ವೆಲ್ತ್ ಫೈಲ್ಸ್ ಬಗ್ಗೆ ತಿಳಿಸಿದ್ದಾರೆ. ಇದರಿಂದ ನಾವು ಕೂಡ ಶ್ರೀಮಂತರ ರೀತಿಯ ಮನಸ್ಥಿತಿ ಮತ್ತು ಸೈಕಾಲಜಿ ಇಟ್ಟುಕೊಂಡು ಮುಂದುವರೆಯಬಹುದು. ಈ ಲೇಖನದಲ್ಲಿ ನಾವು ಹಣದ ಬ್ಲೂಪ್ರಿಂಟ್ ಮತ್ತು 17 ವೆಲ್ತ್ ಫೈಲ್ಸ್ ಬಗ್ಗೆ ತಿಳಿಸಲಿದ್ದೇವೆ.
ಈ ಲೇಖನವನ್ನು ನಾವು TFAR ನಿಂದ ಪ್ರಾರಂಭಿಸುತ್ತಿದ್ದೇವೆ. ಇದರಲ್ಲಿ T ಎಂದರೆ thoughts, F ಎಂದರೆ feelings, A ಎಂದರೆ actions, R ಎಂದರೆ results ಎಂದರ್ಥ. ಅಂದರೆ ನಮ್ಮ thoughts, ನಮ್ಮ feelingಗಳನ್ನು ಹುಟ್ಟು ಹಾಕುತ್ತವೆ ಮತ್ತು feeling ನಮ್ಮ actionಗಳನ್ನು ಹುಟ್ಟುಹಾಕುತ್ತವೆ ಮತ್ತು action ನಮ್ಮ end resultಗಳನ್ನು ನಿರ್ಧಾರ ಮಾಡುತ್ತವೆ. ಈಗ ನಾವು ನಮ್ಮ thought ಮತ್ತು feelings ಹೇಗೆ ನಮ್ಮ action ಮತ್ತು end results ಮೇಲೆ ಪರಿಣಾಮ ಬೀರುತ್ತದೆ ಎಂದು ನೋಡೋಣ.
ನೀವು ಹಣವನ್ನು ಕೇವಲ ಕಷ್ಟದ ಸಮಯಕ್ಕೆ ಬೇಕಾಗಬಹುದು ಎಂದು ಉಳಿಸುತ್ತಿದ್ದರೆ, ಅದಕಷ್ಟೇ ಬೇಕಿರುವ ಕ್ರಮವನ್ನು ತೆಗೆದುಕೊಳ್ಳುತ್ತೀರಾ ಮತ್ತು ಅಷ್ಟೇ ಗಳಿಸುತ್ತೀರಾ, ಉಳಿಸುತ್ತೀರಾ. ಇದರಲ್ಲಿ ನಿಮಗೆ ಭಯವಿದೆ ಮತ್ತು ಕೊನೆಯಲ್ಲಿ ಇದರ ಫಲಿತಾಂಶ ಕೂಡ ಆ ಕಷ್ಟದ ಸಮಯವೇ ಆಗಿದೆ. ಅದೇ ನೀವು ಶ್ರೀಮಂತರಾಗಲು ಮತ್ತು ಸಂಪತ್ತು ಸೃಷ್ಟಿಸುವ ಯೋಚನೆಯಲ್ಲಿ ಕ್ರಮವನ್ನು ತೆಗೆದುಕೊಂಡರೆ ನೀವು ಚಿಕ್ಕದಾಗಿ ಯೋಚಿಸುವುದಿಲ್ಲ, ಬದಲಿಗೆ ನಿಮ್ಮ ಕ್ರಮವೂ ತುಂಬಾ ದೊಡ್ಡದಿರುತ್ತದೆ ಮತ್ತು ಅಷ್ಟೇ ಹಣವನ್ನು ನೀವು ಗಳಿಸುತ್ತೀರಾ. ಇದರ ಫಲಿತಾಂಶದಲ್ಲಿ ನಿಮಗೆ ಆರ್ಥಿಕ ಸ್ವತಂತ್ರ ದೊರೆಯುತ್ತದೆ. ಶ್ರೀಮಂತರು ಅವರಿಗೆ ಬೇಕಾಗಿರುವುದರ ಮೇಲೆ ಮಾತ್ರ ಗಮನಹರಿಸುತ್ತಾರೆ. ಅದೇ ಬಡವರು ಜೀವನದಲ್ಲಿ ಆಗಬಾರದೆಂಬ ವಿಷಯಗಳ ಮೇಲೆ ಗಮನ ಹರಿಸುತ್ತಾರೆ. ಎರಡು ಯೋಚನೆಗಳು ನಮ್ಮ ಹಣದ ಬ್ಲೂಪ್ರಿಂಟ್ಗೆ ಪ್ರಭಾವಿತವಾಗಿದೆ. ಹಣದ ಬ್ಲೂಪ್ರಿಂಟ್ ಎಂದರೆ ನೀವು ನೆಡುವ ಸಸ್ಯದ ರೀತಿ ಆಗಿದೆ. ಇದರಲ್ಲಿ ಬರುವ ಒಳ್ಳೆಯ ಅಥವಾ ಕೆಟ್ಟ ಹಣ್ಣುಗಳ ಫಲಿತಾಂಶವಾಗಿದೆ.
ಲೇಖಕರ ಪ್ರಕಾರ ನಮ್ಮ ಆರ್ಥಿಕ ಮನಸ್ಥಿತಿ ಮತ್ತು ಹಣದ ಬ್ಲೂಪ್ರಿಂಟ್ ಈ ಮೂರು ಪ್ರದೇಶಗಳಿಂದ ಪ್ರಭಾವಿತವಾಗಿರುತ್ತದೆ(influence). ಅದರಲ್ಲಿ ಮೊದಲನೆಯದ್ದು,
ಅಂದರೆ ಹಣ ಮತ್ತು ಶ್ರೀಮಂತರ ಬಗ್ಗೆ ನೀವು ನಿಮ್ಮ ಕುಟುಂಬ ಮತ್ತು ಸ್ನೇಹಿತರಿಂದ ತಿಳಿದುಕೊಳ್ಳುವುದು ನಿಮ್ಮ ಮನಸ್ಥಿತಿಯನ್ನು ಮಾಡುತ್ತದೆ. ಉದಾಹರಣೆಗೆ ಬಡವರು ಅವರ ಮಕ್ಕಳಿಗೆ "ಅಧಿಕ ಹಣವು ಎಲ್ಲಾ ಸಮಸ್ಯೆಗೆ ಮೂಲವಾಗಿದೆ, ಯಾರು ಕೂಡ ಕಡಿಮೆ ಸಮಯದಲ್ಲಿ ತಪ್ಪಾದ ಕೆಲಸ ಮಾಡದೆ ಹೆಚ್ಚು ಹಣ ಗಳಿಸಲು ಸಾಧ್ಯವಿಲ್ಲ. ಶ್ರೀಮಂತರು ಕೇವಲ ಆಸೆ ಬುರುಕರು ಮತ್ತು ಸ್ವಾರ್ಥಿಗಳಾಗಿರುತ್ತಾರೆ" ಎಂದು ಹೇಳುತ್ತಾರೆ. ಇದು ಆ ಮಕ್ಕಳ ತಲೆಯಲ್ಲಿ ಹಾಗೆ ಕೂರುತ್ತದೆ. ಹಾಗಂತ ನಾವು ಇಲ್ಲಿ ಬಡ ಪೋಷಕರು ಕೆಟ್ಟವರು ಎಂದು ಹೇಳುತ್ತಿಲ್ಲ. ಅವರಿಗೂ ಒಂದು ಸಮಯದಲ್ಲಿ ಅವರ ಅಕ್ಕ ಪಕ್ಕದವರು ಈ ರೀತಿಯ ಯೋಚನೆಗಳನ್ನು ತಿಳಿಸಿದ್ದರಿಂದ, ಅವರು ಅವರ ಮಕ್ಕಳಿಗೂ ಆ ಮಾತನ್ನೇ ತಿಳಿಸುತ್ತಾರೆ. ಅದೇ ಶ್ರೀಮಂತ ಪೋಷಕರು ಬದುಕು ಮತ್ತು ಹಣದ ಮೇಲೆ ಬೇರೆಯ ರೀತಿಯಲ್ಲಿ ಅರ್ಥ ಮಾಡಿಸುತ್ತಾರೆ. ನಿಮ್ಮ ಒಳಗಿನ ಪ್ರಪಂಚ, ನಿಮ್ಮ ಒಳಗೆ ಇರುವ ಯೋಚನೆ ಮತ್ತು ಹವ್ಯಾಸದ ಫಲಿತಾಂಶವಾಗಿದೆ.
ಇದನ್ನು ಓದಿ: Rich Dad Poor Dadನ ಮುಖ್ಯ ಐದು ಕಲಿಕೆಗಳುನಾವು ಚಿಕ್ಕ ವಯಸ್ಸಿನಿಂದಲೂ ನಮ್ಮ ಅಕ್ಕ ಪಕ್ಕದವರಿಗೆ, ಅವರ ಹಣವನ್ನು ಹೇಗೆ ಖರ್ಚು ಮಾಡುತ್ತಾರೆ?, ಅವರು ಬದುಕಿನ ಶೈಲಿ ಹೇಗೆ ಇದೆ? ಎಂದು ಕೇಳುವುದು, ನಮ್ಮ ಹಣವನ್ನು ನೋಡುವ ರೀತಿ ಮತ್ತು ಬದುಕಿನ ಶೈಲಿಯನ್ನು ಸ್ಥಿತಿ(condition) ಮಾಡುತ್ತದೆ. ಯಾರಾದರೂ ತಮ್ಮ ಬಡ ಸ್ಥಿತಿಯನ್ನು ಬದಲಿಸಲು ಬಯಸಿದರೆ, ಅವರು ತಮ್ಮ ಯೋಚನೆ ಮತ್ತು ಮನಸ್ಥಿತಿಯನ್ನು ಬದಲಿಸಿಕೊಳ್ಳುವ ಮೂಲಕ ಸಾಧಿಸಬಹುದು. "money see, money do" ಎಂಬ ಗಾದೆಯೇ ಇದೆ.
ಇದು ಯಾವುದೇ ನಿರ್ದಿಷ್ಟ ಧನಾತ್ಮಕ ಅಥವಾ ನಕಾರಾತ್ಮಕ ಘಟನೆ ಆಗಿರಬಹುದು. ಉದಾಹರಣೆಗೆ ನಿಮ್ಮ ಕುಟುಂಬದ ಕೆಟ್ಟ ಆರ್ಥಿಕ ದಿನಗಳು, ಬಡತನ ಮತ್ತು ಕಷ್ಟದ ಜೀವನ ನಡೆಸುತ್ತಿರುವುದು ಇವೆಲ್ಲವನ್ನು ನೋಡಿ ನಿಮಗೆ ಹಣದ ಮೌಲ್ಯದ ಬಗ್ಗೆ ತಿಳಿಯುತ್ತದೆ. ನೀವು "ನಮ್ಮ ಕುಟುಂಬ ಈ ರೀತಿಯ ಪರಿಸ್ಥಿತಿಯಲ್ಲಿ ಮ್ಮತ್ತೊಮ್ಮೆ ಬಾರದಷ್ಟು ಹಣವನ್ನು ಗಳಿಸುತ್ತೇನೆ" ಎಂದು ಯೋಚಿಸುತ್ತೀರಾ. ಆದರೂ ಇಂದು ಎಲ್ಲರೂ ಅಧಿಕ ಹಣವನ್ನು ಗಳಿಸಲು ಬಯಸುತ್ತಾರೆ. ಏಕೆಂದರೆ ಹಣವು ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ಆದರೆ ಸ್ವಯಂ ಮಿಲಿನಿಯರ್ ಈಗ ನಾವು ತಿಳಿಸುವ 17 ವೆಲ್ತ್ ಫೈಲ್ಸ್ ಬಗ್ಗೆ ತಿಳಿದಿದ್ದರೆ ಮಾತ್ರ ಆಗುತ್ತಾರೆ. ಏಕೆಂದರೆ ಇವೆಲ್ಲ ಶ್ರೀಮಂತರು ಮತ್ತು ಬಡವರು ಹಣವನ್ನು ನೋಡುವ ರೀತಿಯಲ್ಲಿರುವ ವ್ಯತ್ಯಾಸದ ಬಗ್ಗೆ ತಿಳಿಸುತ್ತದೆ.
ಇದನ್ನು ಓದಿ: ಷೇರು ಮಾರುಕಟ್ಟೆಯ ಮೇಲೆ ಸಂಪೂರ್ಣ ವಿವರಶ್ರೀಮಂತರು ಅವರ ಬದುಕನ್ನು ಅವರೇ ಸೃಷ್ಟಿಸಿ ನಿಯಂತ್ರಿಸುವುದರಲ್ಲಿ ನಂಬಿರುತ್ತಾರೆ. ಅದೇ ಬಡವರು ಬದುಕು ಅವರನ್ನು ಕರೆದುಕೊಂಡು ಹೋಗುವ ರೀತಿಯಲ್ಲಿ ಜೀವಿಸುತ್ತಾರೆ.
ಶ್ರೀಮಂತರು ಹಣದ ಆಟವನ್ನು ಗೆಲ್ಲಲು ಆಡುತ್ತಾರೆ. ಅದೇ ಬಡವರು ಹಣದ ಆಟವನ್ನು ಸೋಲದಿರುವ ಭಯದಲ್ಲಿ ಆಡುತ್ತಾರೆ. ಅಂದರೆ ಶ್ರೀಮಂತರು ಅಧಿಕ ಹಣವನ್ನು ಗಳಿಸುವ ಬಗ್ಗೆ ಗಮನ ಹರಿಸುತ್ತಾರೆ. ಅದೇ ಬಡವರು ಕೇವಲ ಹಣವನ್ನು ಉಳಿಸುವ ಮತ್ತು ಯಾವುದೇ ಅಪಾಯವನ್ನು ತೆಗೆದುಕೊಳ್ಳುವುದಿಲ್ಲ.
ಶ್ರೀಮಂತರು ಶ್ರೀಮಂತರಾಗೆ ಇರಲು ಒಪ್ಪಿಕೊಂಡಿರುತ್ತಾರೆ. ಅದೇ ಬಡವರು ಕೇವಲ ಶ್ರೀಮಂತರಾಗಲು ಬಯಸುತ್ತಾರೆ. ಅಂದರೆ ಶ್ರೀಮಂತರು "ಏನೇ ಆದರೂ ನಾನು ಶ್ರೀಮಂತನಾಗೆ ಇರುವೆ" ಎಂಬ ನಿರ್ಧಾರ ತೆಗೆದುಕೊಂಡಿರುತ್ತಾರೆ. ಹೀಗಾಗಿ ಅವರ ಗೆಳೆಯರ ಜೊತೆ ಪಾರ್ಟಿಗಳಿಗೆ ಹೋಗುವ ಬದಲು ದಿನರಾತ್ರಿ ತಮ್ಮ ವ್ಯಾಪಾರದ(business) ಮೇಲೆ ಗಮನ ಹರಿಸುತ್ತಾರೆ ಮತ್ತು ಅವರನ್ನು ಶ್ರೀಮಂತರಾಗೆ ಇರುವಂತೆ ಮಾಡುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ. ಅದೇ ಬಡವರು ಕೇವಲ ಶ್ರೀಮಂತರಾಗಲು ಬಯಸುತ್ತಾರೆ. ಆದರೆ ಅದಕ್ಕಾಗಿ ಯಾವುದೇ ರೀತಿಯ ಪ್ರಯತ್ನವನ್ನು ಮಾಡುವುದಿಲ್ಲ. ಅವರು ಶ್ರೀಮಂತರ ರೀತಿ ಬದುಕಲು ಬಯಸುತ್ತಾರೆ, ಆದರೆ ಆ ರೀತಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ.
ಇದನ್ನು ಓದಿ: ಷೇರು ಮಾರುಕಟ್ಟೆ ಹೇಗೆ ಕಾರ್ಯನಿರ್ವಹಿಸುತ್ತದೆ?ಶ್ರೀಮಂತರು ದೊಡ್ಡದು ಮತ್ತು ದೂರದ ಯೋಚನೆ ಹೊಂದಿದ್ದು, ಅವರ ಆರಾಮ ವಲಯದಿಂದ ಹೊರ ಇರುತ್ತಾರೆ. ಅದೇ ಕಳಪೆ ಮನಸ್ಥಿತಿ(poor mentality) ಇರುವವರು ಚಿಕ್ಕದನ್ನು ಯೋಚಿಸುತ್ತಾರೆ. ಹೀಗಾಗಿ ಅವರ ಯೋಚನೆಗಳು ಸೀಮಿತವಾಗಿದ್ದು, ಅವರ ಆರಾಮ ವಲಯದಲ್ಲೇ ಜೀವಿಸುತ್ತಿರುತ್ತಾರೆ. ನಿಮ್ಮ ಗುರಿಯು ಆರಾಮ ವಲಯದಲ್ಲೇ ಇರುವುದಾಗಿದ್ದರೆ ನೀವು ಶ್ರೀಮಂತರಾಗುವ ಸಾಧ್ಯತೆ ಕಡಿಮೆ ಇದೆ. ಆದರೆ ನಿಮ್ಮ ಗುರಿ ಶ್ರೀಮಂತರಾಗುವುದಾಗಿದ್ದರೆ ನೀವು ಮುಂದೆ ಒಂದು ಆರಾಮದಾಯಕ ಜೀವನವನ್ನು ನಡೆಸಬಹುದು. ನೀವು ಸುಲಭವಾದ ಕೆಲಸಗಳನ್ನು ಮಾಡಲು ಬಯಸಿದರೆ ಜೀವನವು ಕಠಿಣವಾಗಿರುತ್ತದೆ. ಅದೇ ನೀವು ಇಂದು ಕಠಿಣ ಕೆಲಸವನ್ನು ಮಾಡಿದ್ದಾರೆ, ನಿಮ್ಮ ಜೀವನ ಮುಂದೆ ಸುಲಭಗೊಳ್ಳುತ್ತದೆ.
ಶ್ರೀಮಂತರು ಅವಕಾಶ ಮತ್ತು ಪರಿಹಾರಗಳ ಮೇಲೆ ಗಮನ ಹರಿಸುತ್ತಾರೆ, ಹೊರತು ಬಡವರ ರೀತಿ ಕಷ್ಟದ ಮೇಲೆ ಅಲ್ಲ.
ಶ್ರೀಮಂತರು ಇತರ ಶ್ರೀಮಂತ ವ್ಯಕ್ತಿಗಳನ್ನು ಅಚ್ಚುಮೆಚ್ಚು(admire) ಮತ್ತು ಇಷ್ಟಪಡುತ್ತಾರೆ. ಅದೇ ಬಡವರು ಶ್ರೀಮಂತರ ಮೇಲೆ ನಕಾರಾತ್ಮಕ ಯೋಚನೆಗಳನ್ನು ಇಟ್ಟುಕೊಂಡಿರುತ್ತಾರೆ. ಹೀಗಾಗಿಯೇ "ಶ್ರೀಮಂತರು ಕೇವಲ ಹಣದ ಗುಲಾಮರಾಗಿರುತ್ತಾರೆ. ಅವರು ಕೆಟ್ಟ ಕೆಲಸವನ್ನು ಮಾಡಿ ಹಣ ಗಳಿಸುತ್ತಾರೆ. ಹಣವೇ ಎಲ್ಲ ಸಮಸ್ಯೆಯ ಮೂಲವಾಗಿದೆ" ಎಂದು ಹೇಳುವ ಜನರು ನಿಮಗೆ ಸಿಗುತ್ತಾರೆ.
ಶ್ರೀಮಂತರು ಮತ್ತೊಬ್ಬ ಶ್ರೀಮಂತ ಮತ್ತು ಸಕರಾತ್ಮಕ ಜನರ ಜೊತೆ ಬೆರೆಯುತ್ತಾರೆ. ಅವರ ಬದುಕಿನಲ್ಲಿ ಯಾವುದಾದರು ಗುರಿಯನ್ನು ಸಾಧಿಸುವುದು ಇರುತ್ತದೆ. ಇದರಿಂದ ಅವರು ಅವರ ಜ್ಞಾನದ ಜೊತೆಗೆ ಅವರನ್ನು ಬೆಳೆಸಿಕೊಳ್ಳಬಹುದು. ಅದೇ ಬಡವರು ನಕಾರಾತ್ಮಕ ಮತ್ತು ಯಶಸ್ವಿಯಾಗದ ಜನಗಳ ಜೊತೆ ಬೆರೆಯುತ್ತಾರೆ. ಏಕೆಂದರೆ ಅವರ ಯೋಚನೆಗಳು, ಆ ವ್ಯಕ್ತಿಯ ಯೋಚನೆಯ ರೀತಿಯೇ ಇರುತ್ತದೆ.
ಇದನ್ನು ಓದಿ: ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಗೇಮ್ ಪ್ಲಾನ್ಶ್ರೀಮಂತರು ತಮ್ಮನ್ನು ಪ್ರಚಾರ(promote) ಮಾಡುವುದರಲ್ಲಿ ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ಈಗಾಗಿ ಅವರು ಮಾರ್ಕೆಟಿಂಗ್ ಮತ್ತು ಮಾರಾಟದಲ್ಲಿ(sales) ಚೆನ್ನಾಗಿರುತ್ತಾರೆ. ಅದೇ ಬಡವರು ಅವರನ್ನು ಪ್ರಚಾರ ಮಾಡಿಕೊಳ್ಳುವುದು, ಮಾರ್ಕೆಟಿಂಗ್ ಮತ್ತು ಮಾರಾಟವನ್ನು ಕೆಟ್ಟ ದೃಷ್ಟಿಕೋನದಲ್ಲಿ ನೋಡುತ್ತಾರೆ. ಹೀಗಾಗಿ ಅವರಿಗೆ ಯಾರಾದರೂ ಒಂದು ಹೊಸ ವಸ್ತುವಿನ ಬಗ್ಗೆ ತಿಳಿಸಿದ್ದಾರೆ. ಅದನ್ನು ನಕಾರಾತ್ಮಕ ದೃಷ್ಟಿಯಲ್ಲಿ ನೋಡುತ್ತಾರೆ. ಅವನು ಕೇವಲ ಹಣವನ್ನು ಬಯಸುತ್ತಾನೆ ಎಂದು ಯೋಚಿಸುತ್ತಾರೆ. ಬದಲಿಗೆ ಮುಂದಿರುವವನು ಮೌಲ್ಯ ನೀಡುವ ಮೂಲಕ ಮೌಲ್ಯ ಕೇಳುತ್ತಿದ್ದಾನೆ ಮತ್ತು ಅವನು ಅವನ ಸೇವೆಯ(service) ಬಗ್ಗೆ ನಂಬಿಕೆ ಹೊಂದಿದ್ದಾನೆ.
ಶ್ರೀಮಂತರೂ ಅವರ ಸಮಸ್ಯೆಗಿಂತ ಅವರ ಮೇಲೆ ನಂಬಿಕೆ ಇಟ್ಟಿರುತ್ತಾರೆ. ಹೀಗಾಗಿ ಅವರು ಎಲ್ಲ ಸಮಸ್ಯೆಗಳನ್ನು ಚಿಕ್ಕದೆಂದು ಭಾವಿಸಿ ಪರಿಹರಿಸುತ್ತಾರೆ. ಅದೇ ಬಡವರು ಸಮಸ್ಯೆಗಳನ್ನು ಅವರಿಗಿಂತ ದೊಡ್ಡದೆಂದು ಭಾವಿಸುತ್ತಾರೆ. ಹೀಗಾಗಿಯೇ ಆ ಸಮಸ್ಯೆಯ ಭಯದಿಂದ ಅವರು ನಿಶಕ್ತರು ಎಂದು ಭಾವಿಸುತ್ತಾರೆ.
ಶ್ರೀಮಂತರು ಅವರಿಗೆ ಸಿಗುವ ಎಲ್ಲದಕ್ಕೂ ಅರ್ಹರು ಆಗಿದ್ದೇನೆ ಎಂದು ಯೋಚಿಸುತ್ತಾರೆ. ಅದು ಯಾವುದೇ ರೀತಿಯ ಅಭಿನಂದನೆ, ವ್ಯಾಪಾರದಲ್ಲಿನ ಲಾಭ ಅಥವಾ ಗೌರವಾಗಿರಬಹುದು. ಅದೇ ಬಡವರು ಕೆಟ್ಟ ರಿಸೀವರ್ಗಳಾಗಿರುತ್ತಾರೆ. ಅವರು ದೊಡ್ಡದು ಸಿಗುವುದಕ್ಕೆ ಅರ್ಹರು ಇಲ್ಲವೆಂದುಕೊಳ್ಳುತ್ತಾರೆ. ಯಾರಾದರೂ ಇವರನ್ನು ಹೊಗಳಿದರೆ ಆ ಅಭಿನಂದನೆಯನ್ನು ಹೇಗೆ ಪ್ರತಿಕ್ರಯಿಸುವುದು ಹೇಗೆ ಎಂದು ಇವರಿಗೆ ತಿಳಿದೇ ಇರುವುದಿಲ್ಲ.
ಇದನ್ನು ಓದಿ: ಷೇರು ಮಾರುಕಟ್ಟೆಯಿಂದ ಉತ್ತಮ ರಿಟರ್ನ್ಸ್ ಪಡೆಯುವುದು ಹೇಗೆ?ಶ್ರೀಮಂತರು ಫಲಿತಾಂಶಗಳ ಮೇಲೆ ಕೆಲಸವನ್ನು ಆಯ್ಕೆ ಮಾಡುತ್ತಾರೆ. ಅದೇ ಬಡವರು ಅವರ ಸಮಯದ ಮೇಲೆ ಕೆಲಸವನ್ನು ನಿರ್ಧರಿಸುತ್ತಾರೆ.
ಬಡವರು "ನಾವು ಎಲ್ಲವನ್ನು ಗಳಿಸಲು ಸಾಧ್ಯವಿಲ್ಲ, ನಾವು ಎಲ್ಲವನ್ನು ಒಮ್ಮೆಲೆ ನಿರ್ವಹಿಸಲು ಸಾಧ್ಯವಿಲ್ಲ, ನಾವು ಒಂದು ನಮ್ಮ ಕೆಲಸದ ಮೇಲೆ ಗಮನ ಹರಿಸಬಹುದು ಇಲ್ಲ ಕುಟುಂಬದ ಮೇಲೆ" ಎಂದು ಯೋಚಿಸುತ್ತಾರೆ. ಅದೇ ಶ್ರೀಮಂತರು ವಿಭಿನ್ನವಾದದ್ದನ್ನು ಪ್ರಯತ್ನಿಸಿ ಮತ್ತು ನಿರ್ವಹಿಸುತ್ತಾರೆ. ಅಂದರೆ ಅವರು ಅವರ ಕುಂಟುಬ ಮತ್ತು ವೃತ್ತಿಪರ ಬದುಕನ್ನು ನಿರ್ವಹಿಸುವುದರಲ್ಲಿ ತಜ್ಞರಿರುತ್ತಾರೆ ಮತ್ತು ವಿಭಿನ್ನವಾದ ಆಯ್ಕೆಗಳನ್ನು ಪ್ರಯತ್ನಿಸುವುದರಿಂದ ಭಯಪಡುವುದಿಲ್ಲ.
ಶ್ರೀಮಂತರು ಅವರ ನಿವ್ವಳದ ಮೇಲೆ ಗಮನ ಹರಿಸುತ್ತಾರೆ. ಅಂದರೆ ಅವರ ಒಟ್ಟಾರೆ ಅಸೆಟ್, ಉಳಿತಾಯ, ಹೂಡಿಕೆಗಳು ಸೇರಿ ನಿವ್ವಳ ಎಷ್ಟಿದೆ ಎಂದು ನೋಡುತ್ತಾರೆ. ಅದೇ ಬಡವರು ಮತ್ತು ಮಾಧ್ಯಮ ವರ್ಗದವರು ಅವರ ಸಂಬಳದ ಮೇಲೆ ಗಮನ ಹರಿಸುತ್ತಾರೆ.
ಶ್ರೀಮಂತರು ಅವರ ಹಣವನ್ನು ಒಳ್ಳೆಯ ರೀತಿಯಲ್ಲಿ ನಿರ್ವಹಿಸುವುದನ್ನು ತಿಳಿದಿರುತ್ತಾರೆ. ಅವರು ಇವುಗಳನ್ನು ಆರ್ಥಿಕ ಪುಸ್ತಕ ಮತ್ತು ಇಂಟರ್ನೆಟ್‌ನಿಂದ ಕಲಿಯುತ್ತಾರೆ. ಅದೇ ಬಡವರು ಹಣವನ್ನು ಖರ್ಚು ಮತ್ತು ವ್ಯರ್ಥ ಮಾಡಲು ಚೆನ್ನಾಗಿರುತ್ತಾರೆ. ಅವರು ಅವರ ಅಕ್ಕಪಕ್ಕದ ಜನರು, ಪ್ರಸಿದ್ಧಿ ವ್ಯಕ್ತಿ ಮತ್ತು ಟಿವಿಯನ್ನು ನೋಡಿ ಕಲಿಯುತ್ತಾರೆ.
ಇದನ್ನು ಓದಿ: ನಿಷ್ಕ್ರಿಯ ಆದಾಯದ ಮೂಲಗಳು ಯಾವುವು?ಶ್ರೀಮಂತರು ಅವರ ಹಣವು ಕಷ್ಟಪಟ್ಟು ಇನ್ನಷ್ಟು ಹಣ ಗಳಿಸುವಂತೆ ಮಾಡುವ ಒಂದು ವ್ಯವಸ್ಥೆಯನ್ನು ಮಾಡುತ್ತಾರೆ. ಅದೇ ಬಡವರು ಹಣವನ್ನು ಗಳಿಸಲು ಕಷ್ಟಪಡುತ್ತಾರೆ.
ಶ್ರೀಮಂತರು ಭಯವಿಲ್ಲದೆ ಕೆಲಸವನ್ನು ಮಾಡುತ್ತಾರೆ. ಆಗಂತ ಅವರಿಗೆ ಭಯವಿಲ್ಲವೆಂದು ಹೇಳುತ್ತಿಲ್ಲ, ಅವರಿಗೂ ಯಾವುದಾದರು ಕ್ರಮ ಇಲ್ಲ ಅಪಾಯವನ್ನು ತೆಗೆದುಕೊಳ್ಳಲು ಭಯವಿರುತ್ತದೆ. ಆದರೆ ಅವರು ಆ ಭಯವನ್ನು ಅವರ ಮೇಲೆ ಆಕ್ರಮಿಸಲು ಬಿಡುವುದಿಲ್ಲ ಮತ್ತು ತಮ್ಮ ಶ್ರೀಮಂತರಾಗುವ ಪಯಣದಲ್ಲಿ ಅಡ್ಡಗಲ್ಲಾಗಿ ನೋಡುವುದಿಲ್ಲ. ಅದೇ ಬಡವರು ಭಯದ ಕಾರಣದಿಂದಾಗಿ ಯಾವುದೇ ರೀತಿಯ ಕ್ರಮವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ಮತ್ತು ಅವರಿಗೆ ಈ ಭಯವೇ ಅವರ ಆಸೆ, ಯಶಸ್ಸಿಗಿಂತ ದೊಡ್ಡದಾಗಿ ಕಾಣುತ್ತದೆ.
ಶ್ರೀಮಂತರು ಏನಾದರೂ ಹೊಸದನ್ನು ಕಲಿಯುತ್ತಲೇ ಇರುತ್ತಾರೆ ಮತ್ತು ಬೆಳೆಯುತ್ತಾರೆ. ಅದೇ ಕಳಪೆ ಮನಸ್ಥಿತಿ ಇರುವ ಜನಗಳು ಅವರಿಗೆ ಎಲ್ಲವೂ ತಿಳಿದಿದೆ ಎಂದು ಭಾವಿಸುತ್ತಾರೆ. ಯಾವ ವ್ಯಕ್ತಿ ನಮಗೆ ಎಲ್ಲವೂ ತಿಳಿದಿದೆ ಎಂದು ಭಾವಿಸುತ್ತಾನೋ, ಆತ ಜೀವನದಲ್ಲಿ ಯಶಸ್ವಿಯಾಗುವುದು ಅಸಾಧ್ಯವಾಗಿದೆ. ಏಕೆಂದರೆ ಅವನು ಹೊಸದನ್ನು ಹುಡುಕಿ ಕಲಿಯುವುದನ್ನು ನಿಲ್ಲಿಸಿದ್ದಾನೆ ಮತ್ತು ತನ್ನ ಸೀಮಿತ ವಸ್ತುಗಳ ಮೇಲೆ ಬದುಕುತ್ತಿದ್ದಾನೆ.
ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿಂದ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.
Explore all our Posts by categories.
See all comments...