Website designed by @coders.knowledge.

Website designed by @coders.knowledge.

7 Important Money Lessons | ಪ್ರಮುಖ 7 ಹಣದ ಮೇಲಿನ ಪಾಠಗಳು

 0

 Add

Please login to add to playlist

Watch Video

ಪ್ರತಿಯೊಬ್ಬರು 10 ರಿಂದ 15 ವರ್ಷಗಳಿಗೆ ಹೂಡಿಕೆ ಮಾಡಿ ಎನ್ನುತ್ತಾರೆ. ಈ ರೀತಿ ಎಷ್ಟೋ ವರ್ಷ ಹೂಡಿಕೆ ಮಾಡಿ ನೆಗೆಟಿವ್ ರಿಟರ್ನ್ ನೋಡಿದಾಗ, ಪ್ರತಿಯೊಬ್ಬರಿಗೂ ಆ ಹೂಡಿಕೆಯ ಹಣದ ನೆನಪು ಬರುತ್ತದೆ. ಇದರಲ್ಲಿ ಗೆಲ್ಲುವುದು ಬದುಕಿನ ತುಂಬಾ ಮುಖ್ಯವಾದ ಗುರಿಯಾಗಿದೆ. ಹಣದ ಮೇಲೆ ಪ್ರತಿ ಪುಸ್ತಕ ತಿಳಿಸುವ 7 ಸಾಮಾನ್ಯ ವಿಷಯಗಳ ಬಗ್ಗೆ ಈ ಲೇಖನದಲ್ಲಿ ನಾವು ತಿಳಿಸಲಿದ್ದೇವೆ.

ಇದನ್ನು ಓದಿ: ಆರ್ಥಿಕವಾಗಿ ಸ್ವತಂತ್ರಗೊಳಿಸುವ 14 ಸ್ವತ್ತುಗಳು

1. ಎಷ್ಟು ಗಳಿಸುತ್ತೀರೋ ಅದಕ್ಕಿಂತ ಕಡಿಮೆ ಖರ್ಚು ಮಾಡಿ.

ತುಂಬಾ ಜನ ನಾವು ಎಷ್ಟು ಗಳಿಸುತ್ತೀವೋ ಅದಕ್ಕಿಂತ ಅಧಿಕ ಖರ್ಚು ಮಾಡಲು ಹೇಗೆ ಸಾಧ್ಯ? ಎಂದು ಕೇಳಬಹುದು. ಇದು ಕ್ರೆಡಿಟ್(credit) ಕೊಡುವ ಲೋಕದಲ್ಲಿ ಸಾಧ್ಯವಿದೆ. ಕ್ರೆಡಿಟ್ ಕಾರ್ಡ್, ಸಾಲ ನಿಮ್ಮ ಹತ್ತಿರ ಈಗ ಇಲ್ಲದ ಹಣವನ್ನು ಖರ್ಚು ಮಾಡುವಂತೆ ಮಾಡುತ್ತದೆ. ಶ್ರೀಮಂತರಾಗುತ್ತಿರುವವರು, ಶ್ರೀಮಂತರಾಗಿರುವವರು ಎಷ್ಟು ಗಳಿಸುತ್ತಿದ್ದರೆ, ಅವರ ಬೆಲೆ(status) ಎಷ್ಟಿದೆ, ಯಾವ ವಸ್ತುವಿಗೆ ಎಷ್ಟು ಮೌಲ್ಯವಿರಬೇಕು ಎಂದು ತಿಳಿದಿರುತ್ತಾರೆ. ಒಂದು ವೇಳೆ ಅದನ್ನು ಒದಗಿಸಿಕೊಳ್ಳಲು(afford) ಸಾಧ್ಯವಾಗಿಲ್ಲವೆಂದರೆ, ಅವರು ಅದನ್ನು ಉಳಿಸಿ, ಹೂಡಿಕೆ ಮಾಡಿ, ಅದನ್ನು ಒದಗಿಸಿಕೊಳ್ಳಬಹುದಾದ ಸನ್ನಿವೇಶಕ್ಕೆ ತಲುಪುತ್ತಾರೆ.

2. ಒಂದು ಬಜೆಟ್ಟನ್ನು ರಚಿಸಿ.

what makes a good budget in kannada
making a budget

ಬಜೆಟ್(budget) ಮಾಡುವುದನ್ನು ಎಲ್ಲಾ ಪುಸ್ತಕಗಳು ಸಾಮಾನ್ಯವಾಗಿ ತಿಳಿಸುತ್ತವೆ. ನಿಮ್ಮ ಹತ್ತಿರ ಒಂದು ಬಜೆಟ್ ಇರುವ ತನಕ ನೀವು ಯಾವ ವಸ್ತುವಿನ ಮೇಲೆ ಎಷ್ಟು ಖರ್ಚು ಮಾಡುತ್ತಿದ್ದೀರಾ? ಮತ್ತು ಏಕೆ ಮಾಡುತ್ತಿದ್ದೀರಾ? ಎಂಬುದು ತಿಳಿಯುವುದಿಲ್ಲ. ಒಂದು ಸರಳವಾದ ಬಜೆಟ್ ನಿಯಮವನ್ನು(budget rule) ನೀವು ಹುಡುಕುತ್ತಿದ್ದರೆ 50/30/20 ನಿಯಮ ನಿಮಗೆ ಸೂಕ್ತವಾಗಿದೆ. ಇದರಲ್ಲಿ ನಿಮಗೆ ಬರುವ ಸಂಬಳದ 50% ನಿಮ್ಮ ಅಗತ್ಯತೆಗಳು(needs), ಅಂದರೆ ಮನೆ ಬಾಡಿಗೆ, ಇಎಂಐ, ಆಹಾರದ ಖರ್ಚಿಗೆ ಬರುತ್ತವೆ. 30% ನಿಮ್ಮ ಆಸೆಗಳಿಗೆ ಹೋಗುತ್ತವೆ, ಅಂದರೆ ನೀವು ರಜೆಗೆ(vacation) ಹೋಗುವುದು, ಬಟ್ಟೆ ತೆಗೆದುಕೊಳ್ಳುವುದು, ಕ್ಲಬ್ಗೆ ಹೋಗುವುದು. ಒಂದು ವೇಳೆ ಇವುಗಳನ್ನು ನೀವು ಒದಗಿಸಿಕೊಳ್ಳಲು ಸಾಧ್ಯವಾಗಿಲ್ಲವೆಂದರೆ ಮೊದಲನೇ ಪಾಯಿಂಟ್ಗೆ ಹೋಗಿ. ಒಂದು ವೇಳೆ ಸಾಧ್ಯವಾದರೆ ಅದು ಈ 30% ನಲ್ಲೇ ಬರುತ್ತದೆ.

ಇನ್ನು ಉಳಿದ 20% ಅನ್ನು ನಿಮ್ಮ ಭವಿಷ್ಯಕ್ಕಾಗಿ ಹೂಡಿಕೆ ಮಾಡಿ. ನಿಮಗೆ ಇದರಿಂದ ನಿಯಮಿತ ರಿಟರ್ನ್ ಸಿಗುತ್ತದೆ. ನಿಮ್ಮ ಮನೆ ಸಾಲ, ವಾಹನ, ಮದುವೆ, ಮಕ್ಕಳ ವಿದ್ಯಾಭ್ಯಾಸ, ಇಲ್ಲ ನಿವೃತ್ತಿಗೆ(retirement), ನೀವು ಬೇಗನೆ ಹೂಡಿಕೆ ಮಾಡಲು ಪ್ರಾರಂಭಿಸುವುದು ಮುಖ್ಯವಾಗಿದೆ. ನೀವು ಪ್ರತಿಯೊಂದು ಘಟನೆಯ ಒಂದು ಬಜೆಟ್ ಯೋಜನೆ ಮಾಡಿರಿ.

ಇದನ್ನು ಓದಿ: How to Invest in 20s

3. ಪವರ್ ಆಫ್ ಕಂಪೌಂಡಿಂಗ್.

what is the power of compounding in kannada
power of compounding

ನಿಮಗೆ ಒಬ್ಬರು ಬಂದು 5 ಕೋಟಿ ಕೊಡುವೆನು, ಇಲ್ಲ ಮೊದಲ ದಿನದಿಂದ 30 ದಿನಗಳಿಗೆ ಪ್ರತಿ ದಿನ 1 ರೂಪಾಯಿ ಕೊಡುವೆನು. ಅದು ಪ್ರತಿದಿನ ದುಪ್ಪಟ್ಟು(double) ಆಗುತ್ತಿರುತ್ತದೆ, ಅಂದರೆ ಮೊದಲ ದಿನ 1 ರೂಪಾಯಿ, ಎರಡನೇ ದಿನ 2 ರೂಪಾಯಿ, ಮೂರನೇ ದಿನ 4 ರೂಪಾಯಿ, ನಾಲ್ಕನೇ ದಿನ 8 ರೂಪಾಯಿ ಆಗುತ್ತಿರುತ್ತದೆ. ಇವೆರಡರಲ್ಲಿ ನೀವು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಾ.

ಒಬ್ಬ ಒಂದು ಕ್ಷಣದಲ್ಲಿ 5 ಕೋಟಿಯನ್ನು ತೆಗೆದುಕೊಳ್ಳುವೇ ಎನ್ನಬಹುದು. ಆದರೆ ನೀವು 1 ರೂಪಾಯಿಯಿಂದ ಪ್ರಾರಂಭಿಸಿರುವುದು, ತಿಂಗಳ ಕೊನೆಯಲಿ 55 ಕೋಟಿ ರೂಪಾಯಿ ಆಗಿರುತ್ತದೆ. ಇದುವೇ "ಕಾಂಪೌಂಡಿನ ಶಕ್ತಿ" ಆಗಿದೆ. ಅಂದರೆ ನಿಮಗೆ ನಿಯಮಿತವಾಗಿ ರಿಟರ್ನ್ಸ್ ಸಿಗುತ್ತಿದ್ದರೆ, ನಿಮ್ಮ ತಳ ಮೊತ್ತಕ್ಕೆ(base amount) ಆ ರಿಟರ್ನ್ ಸೇರಿಕೊಳ್ಳುತ್ತದೆ ಮತ್ತು ಹೀಗೆ ಸೇರಿಕೋಳ್ಳುತ್ತಾ, ನಿಮ್ಮ ಆ ಚಿಕ್ಕ ಮೊತ್ತ ನೀವು ಯೋಚಿಸುವುದಕ್ಕಿಂತ ತುಂಬಾ ದೊಡ್ಡದಾಗುತ್ತದೆ. ಇದನ್ನು ಎಲ್ಲಾ ಪುಸ್ತಕಗಳು "ದೀರ್ಘಾವಧಿ ಹೂಡಿಕೆ" ಮಾಡಿ ಎಂದು ಹೇಳಿ ಪರೋಕ್ಷವಾಗಿ(indirect) ತಿಳಿಸುತ್ತವೆ.

ಪ್ರತಿ ವರ್ಷ ನಿಮಗೆ ಸರಾಸರಿ 10 ರಿಂದ 15% ನಿಯಮಿತವಾಗಿ ರಿಟರ್ನ್ ದೊರೆತರೆ. ನೀವು ಎಷ್ಟು ವರ್ಷಗಳಿಗೆ ಹೂಡಿಕೆ ಮಾಡುತ್ತೀರಾ ಎಂಬುದು ಎಷ್ಟು ಶ್ರೀಮಂತರಾಗುತ್ತೀರಾ ಎಂಬುದನ್ನು ತಿಳಿಸುತ್ತದೆ. ಇದುವೇ ಕಾಂಪೌಂಡಿಂಗ್ನ ಶಕ್ತಿಯಾಗಿದೆ, ಇದನ್ನು ಜಗತ್ತಿನ 8ನೇ ಅದ್ಭುತ ಎನ್ನಲಾಗುತ್ತದೆ ಮತ್ತು ನೀವು ಇದನ್ನು ನಿರ್ಲಕ್ಷಿಸಬಾರದು. ಹೀಗಾಗಿ ನಿಮಗೆ ನಾವು ಬೇಗನೆ ಹೂಡಿಕೆ(early investing) ಮಾಡಲು ತಿಳಿಸುತ್ತೇವೆ. ನೀವು 100 ಅಥವಾ 500 ರೂಪಾಯಿಯಿಂದ ಹೂಡಿಕೆ ಪ್ರಾರಂಭಿಸುವುದು ಮುಖ್ಯವಾಗಿಲ್ಲ, ಬದಲಿಗೆ ನೀವು ಎಷ್ಟು ಸಮಯದವರೆಗೆ ಹೂಡಿಕೆ ಮಾಡುತ್ತೀರಾ ಎಂಬುದು ಮುಖ್ಯವಾಗಿದೆ.

ಇದನ್ನು ಓದಿ: "Secrets of the Millionaire Mind" ಪುಸ್ತಕದ ಸಾರಾಂಶ

4. asset ನಿಂದ ಹಣ ಬರುತ್ತದೆ ಹೊರತು liability ಯಿಂದಲ್ಲ.

what is an asset and liabilities in kannada
asset and liabilities

ಯಾವುದೇ ವಸ್ತು ನಿಮಗೆ ಹಣವನ್ನು ಗಳಿಸಿಕೊಟ್ಟರೆ ಅದು ಅಸೆಟ್ ಆಗಿದೆ. ಅದೇ ಯಾವುದೇ ವಸ್ತುವಿನಿಂದ ನೀವು ಹಣವನ್ನು ಕಳೆದುಕೊಂಡರೆ ಅಥವಾ ಖರ್ಚಾದರೆ ಅದು ಲಿಯಾಬಿಲಿಟಿ ಆಗಿದೆ. ಉದಾಹರಣೆಗೆ, ಕಾರು ಅಸೆಟ್ ಅಥವಾ ಲಿಯಾಬಿಲಿಟಿನಾ? ಅನೇಕರು ಇದನ್ನು ಅಸೆಟ್ ಎನ್ನಬಹುದು. ಏಕೆಂದರೆ ಇದನ್ನು ಅವರ ಹಣದಿಂದ ಖರೀದಿಸಿರುತ್ತಾರೆ. ಆದರೆ ಕಾರು ಲಿಯಾಬಿಲಿಟಿ ಆಗಿದೆ. ಏಕೆಂದರೆ ನೀವು ಕಾರು ಖರೀದಿಸಿ ಶೋರೂಮ್ನಿಂದ ಬಂದ ತಕ್ಷಣ ಅದರ ಬೆಲೆ 20 ರಿಂದ 30 ರಷ್ಟು ಕುಗ್ಗುತ್ತದೆ. ಪ್ರತಿ ವರ್ಷ ಅದರ ಬೆಲೆ ಕುಗ್ಗುತ್ತಿರುತ್ತದೆ. ಅದರ ನಿರ್ವಹಣೆಗೆ(maintaince) ಖರ್ಚಾಗುತ್ತದೆ. ನೀವು ಅದನ್ನು ಮಾರಲು ಹೋದಾಗಲು ನೀವು ಖರೀದಿಸಿದ್ದಕ್ಕಿಂತ ತುಂಬಾ ಕಡಿಮೆ ಹಣ ದೊರೆಯುತ್ತದೆ.

ಇನ್ನೊಂದು ಉದಾಹರಣೆ ತೆಗೆದುಕೊಳ್ಳೋಣ, ನೀವು ನಿಮ್ಮ ಒಂದು ಮನೆಯನ್ನು ಬಾಡಿಗೆಗೆ ನೀಡುತ್ತೀರಾ ಎಂದುಕೊಳ್ಳಿ, ಇದು ಅಸೆಟ್ ಅಥವಾ ಲಿಯಾಬಿಲಿಟಿನಾ? ನೀವು ಇದನ್ನು ಲಿಯಾಬಿಲಿಟಿ ಎನ್ನಬಹುದು, ಏಕೆಂದರೆ ನೀವು ಇದನ್ನು ನಿರ್ವಹಣೆ ಮಾಡಬೇಕಾಗುತ್ತದೆ. ಆದರೆ ಇದು ಅಸೆಟ್ ಆಗಿದೆ, ಏಕೆಂದರೆ ಅದು ನಿಮಗೆ ಕೂತಲ್ಲೇ ಹಣವನ್ನು ತಂದು ಕೊಡುತ್ತಿದೆ. ನಿಮಗೆ ಬಾಡಿಗೆಯು ಬರುತ್ತಿದ್ದು, ಆ ಭೂಮಿಯ ಬೆಲೆ ಹೆಚ್ಚುತ್ತಿರುತ್ತದೆ. ಅಂದರೆ ನೀವು ಮನೆಯನ್ನು ಮಾರಲು ಹೋದಾಗ ನೀವು ಖರೀದಿಸಿದ್ದಕ್ಕಿಂತ ತುಂಬಾ ಹಣ ಸಿಗುತ್ತದೆ. ಅದರ ಜೊತೆಗೆ ಅದರ ಬಾಡಿಗೆ ಕೂಡ ಸಿಗುತ್ತದೆ.

ನೀವು ಬಂಗಾರವನ್ನು( gold) ಖರೀದಿಸುತ್ತೀರಾ ಎಂದುಕೊಳ್ಳಿ, ಬಂಗಾರವನ್ನು ನೀವು ಅಸೆಟ್ ಏನ್ನಬಹುದು. ಏಕೆಂದರೆ ಬಂಗಾರದ ಬೆಲೆ ಹೆಚ್ಚುತ್ತಿರುತ್ತದೆ. ಆದರೆ ಒಂದು ವೇಳೆ ಬಂಗಾರದ ಬೆಲೆ ನೀವು ಮಾರುವಾಗ ವ್ಯರ್ಥ ವೆಚ್ಚ(wastage cost) ಕಟ್ಟುವಷ್ಟು ಹೆಚ್ಚಲಿಲ್ಲವೆಂದರೆ ಅದು ಅಷ್ಟು ಉಪಯುಕ್ತವಾಗಿಲ್ಲ. ನೀವು ಬಂಗಾರದ ಬದಲು ಆಭರಣಗಳನ್ನು(jewellery) ಖರೀದಿಸಿದರೆ ಅದು ಲಿಯಾಬಿಲಿಟಿ ಆಗಿದೆ. ಏಕೆಂದರೆ ನೀವು ಮಾಡುವ ಶುಲ್ಕವನ್ನು(making charges) ನೀಡಿದ್ದೀರಾ. ನಿಮ್ಮ ಆ ಬಂಗಾರ ಶುದ್ಧ(pure) ಕೂಡ ಆಗಿರುವುದಿಲ್ಲ, ಏಕೆಂದರೆ ಅದರಲ್ಲಿ ತಾಮ್ರವನ್ನು ಹಾಕಿರುತ್ತಾರೆ. ನೀವು ಅದನ್ನು ಮಾರಲು ಹೋದಾಗ ನೀವು ಅಂದುಕೊಂಡಷ್ಟು ಬೆಲೆಗೆ ಅದು ಸಿಗುವುದಿಲ್ಲ. ಒಂದು ವೇಳೆ ನೀವು ಬಂಗಾರದ ನಾಣ್ಯ ಅಥವಾ ಡಿಜಿಟಲ್ ಚಿನ್ನವನ್ನು(digital gold) ಖರೀದಿಸಿದರೆ ಅದು ಅಸೆಟ್ ಆಗಿದೆ. ಏಕೆಂದರೆ ಅದು ನಿಧಾನವಾಗಿ ಹೆಚ್ಚುತಿರುತ್ತದೆ ಮತ್ತು ನಿಮಗೆ ಹಣವನ್ನು ನೀಡುತ್ತದೆ.

ಶ್ರೀಮಂತರು ಅಸೆಟ್ ಮತ್ತು ಲಿಯಾಬಿಲಿಟಿಯಲ್ಲಿರುವ ವ್ಯತ್ಯಾಸದ ಬಗ್ಗೆ ಯಾವಾಗಲೂ ತಿಳಿದುಕೊಂಡಿರುತ್ತಾರೆ ಮತ್ತು ಅವರು ಅವರ ಬಜೆಟ್ ನಿಂದ ಯಾವುದೇ ಹೂಡಿಕೆ ಮಾಡಿದರು ಕೇವಲ ಅಸೆಟ್ ರಚಿಸಲು ತಿಳಿದಿರುತ್ತಾರೆ.

ಇದನ್ನು ಓದಿ: ಶ್ರೀಮಂತರಿಗೆ ತಿಳಿದಿರುವ ಮತ್ತು ಬಡವರಿಗೆ ತಿಳಿದಿರದ ಹಣದ 5 ನಿಯಮಗಳು

5. ದೀರ್ಘಕಾಲದವರೆಗೆ ಹೂಡಿಕೆ ಮಾಡಿ.

what is long term investing in kannada
long term investing

ಇದು "power of compounding" ಪರಿಕಲ್ಪನೆಯಾಗಿದೆ. ಕಾಂಪೌಂಡಿಂಗ್ ಕಾನ್ಸೆಪ್ಟನ್ನು ಅರ್ಥ ಮಾಡಿಕೊಳ್ಳುವುದು ಸುಲಭವಾಗಿದೆ, ಆದರೆ ಅದನ್ನು ಅನ್ವಯಿಸುವುದು ಕಷ್ಟವಾಗಿದೆ. ಇದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿಸಲು ಒಂದು ಸುಂದರವಾದ ಕಥೆ ಇದೆ.

ಬಿಲ್ ಗೇಟ್ಸ್(bill gates) ಮತ್ತು ವಾರೆನ್ ಬಫ್ಫೆಟ್(warren buffet) ಆತ್ಮೀಯ ಗೆಳೆಯರಾಗಿದ್ದಾರೆ. ಒಮ್ಮೆ ಬಿಲ್ಗೆಟ್ಸ್ ವಾರೆನ್ ಬಫ್ಫೆಟ್ಗೆ, "ವಾರೆನ್, ನಿನ್ನ ಹೂಡಿಕೆಯ ನಿಯಮ ತುಂಬಾ ಸರಳವಾಗಿದೆ. ಅದೆಂದರೆ ಒಳ್ಳೆಯ ಬೆಲೆಯಲ್ಲಿ ಸ್ಟಾಕ್ ಅನ್ನು ಖರೀದಿಸಿ, ಒಂದು ವೇಳೆ ಕಂಪನಿ, ನಿರ್ವಹಣೆ, ಮಾರ್ಕೆಟ್ ಬೆಲೆ, ಉದ್ಯಮ ಚೆನ್ನಾಗಿದ್ದರೆ ಎಲ್ಲಿಯವರೆಗೆ ಅದನ್ನು ಇಡಿದ್ದಿಟುಕೊಂಡಿರಲು ಸಾಧ್ಯವೋ ಅದನ್ನು ಇಡಿದ್ದಿಟುಕೊಂಡಿರಿ. ನೀವು ಈ ಸರಳ ವಿಧಾನವನ್ನು ಬಳಸಿ ಶ್ರೀಮಂತರಾಗಿದ್ದೀರಾ, ಆದರೆ ಉಳಿದವರು ಏಕೆ ಶ್ರೀಮಂತರಾಗಿಲ್ಲ" ಎಂದು ಕೇಳುತ್ತಾರೆ. ಆಗ ವಾರೆನ್ ಬಫ್ಫೆಟ್, "ಬಿಲ್, ಯಾರು ಕೂಡ ನಿಧಾನವಾಗಿ ಶ್ರೀಮಂತರಾಗಲು ಬಯಸಿಲ್ಲ" ಎಂದು ಹೇಳುತ್ತಾರೆ.

ಪ್ರತಿಯೊಬ್ಬ ವ್ಯಕ್ತಿಯು ರಾತ್ರೋರಾತ್ರಿಯಲ್ಲಿ ಶ್ರೀಮಂತನಾಗಲು ಬಯಸುತ್ತಾನೆ. ಇದನ್ನು ಶ್ರೀಮಂತರು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದರೆ ಅಂದರೆ, "staying invested for long period, is the surest way of creating wealth". ಏಕೆಂದರೆ ಕಾಂಪೌಂಡಿಂಗ್ ಸಹಾಯ ಮಾಡುತ್ತದೆ, ನಿಧಾನವಾಗಿ ಅದು ತನ್ನ ಶಕ್ತಿಯನ್ನು ತೋರಿಸುತ್ತದೆ. ಇದರ ಮೇಲೆ ಪ್ರತಿಯೊಂದು ಹೂಡಿಕೆಯ ಪುಸ್ತಕಗಳು ಗಮನ ಹರಿಸುತ್ತವೆ. ಹೀಗಾಗಿ ಹೂಡಿಕೆ ಮಾಡಲು ಬಯಸಿದರೆ ದೀರ್ಘಾವಧಿಯ ಗುರಿ ಇಟ್ಟುಕೊಳ್ಳಿ.

6. ಬಹು ಆದಾಯದ ಮೂಲ ಇರಲಿ.

what can be multiple sources of income in kannada
multiple income sources

2012 ರಂದು ನಿಮ್ಮ ಸಂಬಳ 100 ರೂಪಾಯಿ ಆಗಿದ್ದರೆ, 2022 ಹೊತ್ತಿಗೆ ಅದು 130 ರೂಪಾಯಿ ಆಗಿರುತ್ತದೆ. ಭಾರತದಲ್ಲಿ ಸಂಬಳ ಈ ರೀತಿಯಲ್ಲಿ ಬೆಳೆದಿದೆ. ಆದರೆ 2012 ರಂದು 100 ರೂಪಾಯಿಗೆ ಸಿಗುತ್ತಿದ್ದ ವಸ್ತುವು 2022 ರಂದು 170 ರೂಪಾಯಿಗೆ ಸಿಗುತ್ತಿದೆ, ಅಂದರೆ ನಿಮ್ಮ ಸಂಬಳ ಹಣದುಬ್ಬರವನ್ನು(inflation) ಸೋಲಿಸಲು ಸಾಧ್ಯವಾಗಿಲ್ಲ. ಅಂದರೆ ವಸ್ತುಗಳ ದರ ಹೆಚ್ಚಿದಷ್ಟು ನಿಮ್ಮ ಸಂಬಳ ಹೆಚ್ಚಲಿಲ್ಲ. ಹೀಗಾಗಿ ನಿಮ್ಮ ಹತ್ತಿರ ಎರಡು ಆಯ್ಕೆ ಇದೆ.

1. Increase your income.

ಆದರೆ ಅದು ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಇದು ನವೂ ಯಾವ ಕಂಪನಿಯಲ್ಲಿ ಇದ್ದೇವೇ, ಎಂಬುದರ ಮೇಲೆ ನಿರ್ಧಾರವಾಗುತ್ತದೆ.

2. Create multiple income sources.

ನೀವು ಸ್ಮಾರ್ಟಾಗಿ ಅಸೆಟ್ ರಚಿಸುವ ರೀತಿ ನಿಮ್ಮ ಹಣವನ್ನು ಹೂಡಿಕೆ ಮಾಡಿದರೆ ನೀವು ಬಹು ಆದಾಯದ ಮೂಲ ಮಾಡಿದಂತಾಗಿದೆ. ಉದಾಹರಣೆಗೆ ನೀವು ಸ್ಟಾಕ್ ಖರೀದಿಸಿದರೆ ಅದು ಒಂದು ಆದಾಯದ ಮೂಲವಾಗಿದೆ. ನೀವು ಅದನ್ನು ಮಾರಿದಾಗ ನಿಮಗೆ ಅದು ಆದಾಯದ ಮೂಲದ ರೀತಿ ಬರುತ್ತದೆ. ಅದೇ ಸ್ಟಾಕ್ಗಳಲ್ಲಿ ನೀವು ಡಿವಿಡೆಂಟ್ ನೀಡುವ ಸ್ಟಾಕ್ ಖರೀದಿಸಿದರು. ನಿಮಗೆ ಆ ಸ್ಟಾಕ್ಗಳನ್ನು ಮಾರುವ ಅವಶ್ಯಕತೆಯೂ ಇರುವುದಿಲ್ಲ.

ರಿಯಲ್ ಎಸ್ಟೇಟ್(real estate), ಇದರಲ್ಲಿ ನೀವು ಬಾಡಿಗೆಗೆ ಆಸ್ತಿಯನ್ನು ನೀಡಿದರೆ, ಇದು ಕೂಡ ಆದಾಯದ ಮೂಲವಾಗಿದೆ. ಇದೇ ರೀತಿ ಬೌದ್ಧಿಕ ಆಸ್ತಿ(intellectual property ), ಅಡ್ಡ ವ್ಯಾಪಾರ ಇವೆಲ್ಲವೂ ಆದಾಯದ ಮೂಲವಾಗಿದೆ. ಇವೆಲ್ಲವೂ ನಿಮ್ಮ ಕೆಲಸದ(job) ಹಣಕ್ಕೆ ಹೊರತುಪಡಿಸಿ, ನಿಯಮಿತ ಆದಾಯವನ್ನು ನೀಡುತ್ತದೆ. ಅನೇಕರು ಇದನ್ನು ಕಾನೂನುಬದ್ಧವಾಗಿದ್ದೇಯೇ ಎಂದು ಕೇಳಿದರೆ, ಭಾರತದ ಸಂವಿಧಾನ ನಿಮಗೆ ಬಹು ಆದಾಯದ ಮೂಲವನ್ನು ಮಾಡಲು ಅವಕಾಶ ಕೊಟ್ಟಿದೆ. ಎಲ್ಲಾ ಕಂಪನಿಯ ಕೆಲವು ನಿಯಮಗಳು ಇರುತ್ತವೆ, ನೀವು ಅದರಲ್ಲೇ ಇರಬೇಕು ಎನ್ನುತ್ತದೆ. ಅಂದರೆ ನೀವು ಒಂದು ಐಟಿ ಕಂಪನಿಯಲ್ಲಿ ಕೆಲಸ ಮಾಡಿ, ಇನ್ನೊಂದು ಐಟಿ ಕಂಪನಿಯ ಜೊತೆ ಫ್ರೀಲ್ಯಾನ್ಸಿಂಗ್ ಕೆಲಸ ಮಾಡುತ್ತಿದರೆ ಅದು ತಪ್ಪಾಗಿದೆ. ಏಕೆಂದರೆ ನೀವು ಆ ಕಂಪನಿಯ ಮಾಹಿತಿಯನ್ನು ಸಾಗಿಸುತ್ತಿರಬಹುದು. ಅದೇ ನೀವು ಒಂದು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಾ ಮ್ಯೂಸಿಕ್ನಿಂದ ಒಂದು ಅಡ್ಡ ಕೆಲಸವನ್ನು ಉತ್ಪಾದಿಸುತ್ತಿದರೆ, ಅದು ಸಂಘರ್ಷವನ್ನು ಸೃಷ್ಟಿಸುವುದಿಲ್ಲ ಮತ್ತು ನೀವು ಕಾನೂನಿನಲ್ಲೇ ಇರುತ್ತೀರಾ.

ಇದನ್ನು ಓದಿ: ಸಂಪತ್ತು, ಆರೋಗ್ಯ ಮತ್ತು ಯಶಸ್ಸಿಗೆ 6 ಬೆಳಗಿನ ಅಭ್ಯಾಸಗಳು

7. ಹಣದ ಮೇಲಿನ ನಿಮ್ಮ ನಡವಳಿಕೆ ಬಾಲ್ಯದಿಂದಲೂ ಹೊಂದಿಸಲ್ಪಟ್ಟಿದೆ.

ಪ್ರತಿಯೊಬ್ಬರಿಗೂ ಅವರ ಸಮಸ್ಯೆಯ ಮೂಲ "ಹಣ" ಎನಿಸುತ್ತದೆ, ಆದರೆ ಅದು ಸತ್ಯವಲ್ಲ. ಏಕೆಂದರೆ ನಿಮ್ಮ ಹತ್ತಿರ ಹಣ ಇಲ್ಲದಾಗ ಎರಡು ವಸ್ತು ಆಗುತ್ತದೆ. ಒಂದು ನೀವು ಜೀವನಪೂರ್ತಿ ಹಣದ ಹಿಂದೆ ಓಡುತ್ತೀರಾ ಮತ್ತು ಹಣವನ್ನು ನಿಮ್ಮ ಉದ್ದೇಶವನ್ನಾಗಿ ಮಾಡಿಕೊಳ್ಳುತ್ತೀರಾ. ಇಲ್ಲ ಹಣವನ್ನು ಮೀರಿ ಯೋಚಿಸುವಷ್ಟು ಅದನ್ನು ದ್ವೇಷಿಸುತ್ತೀರಾ ಮತ್ತು ಹಣವು ನಿಮ್ಮ ಬದುಕಿನಲ್ಲಿ ಪ್ರಭಾವ ಮಾಡದೇ ಇರುವ ರೀತಿ ನೋಡುತ್ತೀರಾ. ನೀವು ಹಣದ ಗುಲಾಮನಾಗುವುದಿಲ್ಲ, ಇವೆರಡು ಆಯ್ಕೆಯಲ್ಲಿ ಒಬ್ಬರು ಒಂದನ್ನು ಹೇಗೆ ಆಯ್ಕೆ ಮಾಡುತ್ತಾರೋ ಎಂದು ತಿಳಿದಿಲ್ಲ.

ಇದರ ಅರ್ಥ ನಾವು ಹಣದ ಹಿಂದೆ ಹೋಗಬಾರದು ಎಂದು ಹೇಳುತ್ತಿಲ್ಲ, ನಾವು ಹಣದ ಗುಲಾಮನಾಗಬಾರದು. ಯಾವುದೇ ಸ್ಟಾಕ್ ಇಲ್ಲ ಮ್ಯೂಚುಯಲ್ ಫಂಡ್ನಲ್ಲಿ 10 ರಿಂದ 15 ವರ್ಷಗಳಿಗೆ ಹಣವನ್ನು ಹಾಕಿ ಎಂದು ಹೇಳುವುದು ಸುಲಭವಾಗಿದೆ. ಆದರೆ ಅದು ನೆಗೆಟಿವ್ ರಿಟರ್ನ್ ನೀಡಿದಾಗ, ನಿಮ್ಮ ಹತ್ತಿರ ಹಣವಿಲ್ಲದ ದಿನಗಳು ನೆನಪಿಗೆ ಬರುತ್ತದೆ. ನಿಮಗೆ ಆಗ ಲೇಖನದಲ್ಲಿ ತಿಳಿಸಿರುವುದು ನೆನಪಿಗೆ ಬರುವುದಿಲ್ಲ. ಬದಲಿಗೆ ನಿಮ್ಮ ಜೀವನದ ಸನ್ನಿವೇಶಗಳು ನೆನಪಿಗೆ ಬರುತ್ತದೆ ಮತ್ತು ಇದರಿಂದ ಗೆಲ್ಲುವುದೇ ಬದುಕಿನ ಮೂಲಭೂತ ಗುರಿಯಾಗಿದೆ.

ಬದುಕಲು ಮತ್ತು ಜಗತ್ತನ್ನು ಮುಂದುವರೆಸಲು ಹಣವು ತುಂಬಾ ಮುಖ್ಯವಾಗಿದೆ. ಆದರೆ ಹಣದ ಹಿಂದೆ ಓಡುವುದು ಸರಿಯಲ್ಲ. ಹಣವಿರುವುದು ತುಂಬಾ ಮುಖ್ಯವಾಗಿದೆ, ಆದರೆ ಹಣದ ಹಿಂದೆ ಓಡುವುದು ನಿಮ್ಮ ಬದುಕಿನಿಂದ ದೂರ ತೆಗೆದುಕೊಂಡು ಹೋಗುತ್ತದೆ. ಆದರೆ ಈ ಮಾತನ್ನು ಅರ್ಥ ಮಾಡಿಕೊಳ್ಳಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಹಣದ ಜೊತೆ ಒಂದು ಸಂಬಂಧ ಇಟ್ಟುಕೊಳ್ಳಿ, ಅದು ಕೆಳಗೆ ಹೋದಾಗ ಮತ್ತೊಮ್ಮೆ ಮೇಲೋಗುತ್ತದೆ ಎಂದು ನೆನಪಿಡಿ. ಅದು ಕೆಳಗೆ ಹೋದರು ನಿಮಗೆ ಭಯವಾಗದಂತಹ ಒಂದು ಪ್ರಯೋಗವನ್ನು ಮಾಡಿ. ಬದಲಿಗೆ ಆ ಭಯದಿಂದ ನೀವೇನಾದರೂ ಹೊಸದನ್ನು ಕಲಿಯಿರಿ ಮತ್ತು ನಿಧಾನವಾದರೂ ಚಿಕ್ಕ ವಯಸ್ಸಿನಿಂದಲೂ ನೀವು ಹಣದ ಜೊತೆ ಇಟ್ಟಿರುವ ಸಂಬಂಧವನ್ನು ಬದಲಿಸಲು ಪ್ರಯತ್ನಿಸಿ. ಇದುವೇ ಎಲ್ಲಾ ಪುಸ್ತಕಗಳು ತಿಳಿಸುವ ಮುಖ್ಯ ಪಾಠವಾಗಿದೆ.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

No Comments