Watch Video
ನಾವು ನಮ್ಮ ಸ್ಮಾರ್ಟ್‌ಪೋನನ್ನು ದಿನವಿಡಿ ಬಳಸುತ್ತೇನೆ. ನಾವು ನಮ್ಮ ಸ್ಮಾರ್ಟ್‌ಪೋನಿನ ಡಿಸೈನ್, ಕ್ಯಾಮೆರಾ ಮತ್ತು ಪ್ರೊಸೆಸಿಂಗ್ ಪ್ರಗತಿಯಲ್ಲಿ ತುಂಬಾ ದೂರ ಸಾಗಿದ್ದೇವೆ. ಆದರೆ ಬ್ಯಾಟರಿ ತಂತ್ರಜ್ಞಾನದ ವಿಷಯದಲ್ಲಿ ನಾವು ಹೆಚ್ಚಿನ ಪ್ರಗತಿಯನ್ನು ಕಂಡಿಲ್ಲ. ನಿಮ್ಮ ಸ್ಮಾರ್ಟ್‌ಪೋನ್ ಬ್ಯಾಟರಿ ಸಾಮರ್ಥ್ಯವನ್ನು ಹೆಚ್ಚಿಸಲು ಕೆಲವು ತಂತ್ರಗಳನ್ನು ಇಲ್ಲಿ ತಿಳಿಸುತ್ತಿದ್ದೇವೆ. ಇದು ನಿಮ್ಮ ಬ್ಯಾಟರಿ ಸಾಮರ್ಥ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಸ್ಮಾರ್ಟ್‌ಫೋನ್ ಕೀಬೋರ್ಡ್‌ನಲ್ಲಿ ಟೈಪ್ ಮಾಡುವಾಗ ನಾವು ವೈಬ್ರೇಟ್ ಆಗುವುದನ್ನು ನೋಡಿರುತ್ತೇವೆ. ಆದರೆ ಆ ವೈಬ್ರೇಷನ್ ಉತ್ಪಾದಿಸಲು ಉತ್ತಮ ಪ್ರಮಾಣದ ಬ್ಯಾಟರಿ ಶಕ್ತಿಯನ್ನು ಹೀರಿಕೊಳ್ಳುತ್ತದೆ. ಏಕೆಂದರೆ, ನಾವು ಇಡೀ ದಿನ ಟೈಪ್ ಮಾಡಲು ಸಾಕಷ್ಟು ಸಮಯವನ್ನು ಕಳೆಯುತ್ತೇವೆ.
ಸ್ಮಾರ್ಟ್‌ಪೋನಿನಲ್ಲಿ ವೈಬ್ರೇಷನ್ ಉತ್ಪಾದಿಸಲು ಒಂದು ಚಿಕ್ಕ ಮೋಟಾರ್ ಸಾಧನವಿರುತ್ತದೆ. ಅದು ತಿರುಗಿದಾಗ ಫೋನ್ ವೈಬ್ರೇಟ್ ಆಗುತ್ತದೆ. ಹೀಗಾಗಿ ನಿಮ್ಮ ಫೋನ್ ವೈಬ್ರೇಶನ್ ಆಫ್ ಮಾಡಿ.
ಇದನ್ನು ಓದಿ: ಷೇರು ಮಾರುಕಟ್ಟೆಯ ಮೇಲೆ ಸಂಪೂರ್ಣ ವಿವರನಿಮ್ಮ ಸ್ಮಾರ್ಟ್‌ಫೋನ್ LED ಸ್ಕ್ರೀನ್ ಹೊಂದಿದ್ದರೆ, ನೀವು ಕಪ್ಪು ಬಣ್ಣದ ವಾಲ್ ಪೇಪರ್‌ಗಳನ್ನು ಅನ್ವಯಿಸುವುದು ಉತ್ತಮ. ಇದು ನಿಮ್ಮ ಬ್ಯಾಟರಿಯ ಬಾಳಿಕೆ ಉಳಿಸಲು ಸಹಾಯ ಮಾಡುತ್ತದೆ. ಏಕೆಂದರೆ, LED ಸ್ಕ್ರೀನ್‌ಗಳಲ್ಲಿ ಡಿಸ್ ಪ್ಲೇ ಮಾಡಲು ಪಿಕ್ಸೆಲ್ ಬ್ಯಾಟರಿ ಶಕ್ತಿಯನ್ನು ತೆಗೆದುಕೊಳ್ಳುತ್ತವೆ. ಇನ್ನು ಕಪ್ಪು ಬಣ್ಣವನ್ನು ತೋರಿಸಲು ಬ್ಯಾಟರಿ ಶಕ್ತಿಯ ಅಗತ್ಯ ಇರುವುದಿಲ್ಲ. ಹೀಗಾಗಿ ನಿಮ್ಮ ಸ್ಮಾರ್ಟ್‌ಫೋನ್ ವಾಲ್ ಪೇಪರ್ ಕಪ್ಪು ಬಣ್ಣದಾಗಿದ್ದರೆ, ನಿಮ್ಮ ಬ್ಯಾಟರಿ ಶಕ್ತಿಯ ಉಳಿತಾಯವಾಗುತ್ತದೆ.
ನಿಮ್ಮ ಸ್ಮಾರ್ಟ್‌ಫೋನ್ನಲ್ಲಿರುವ ಹೆಚ್ಚಿನ ಆ್ಯಪ್ ನಿಮ್ಮ ಲೊಕೇಶನ್ ಅನ್ನು ನಿರಂತರವಾಗಿ ಟ್ರ್ಯಾಕ್ ಮಾಡುತ್ತದೆ. ನಿಮ್ಮ ಲೊಕೇಶನ್ ಟ್ರ್ಯಾಕಿಂಗ್ ಅಗತ್ಯವಿಲ್ಲದಿದ್ದರೂ ದಿನವಿಡಿ ಅದನ್ನು ಹಾಗೆ ಇಟ್ಟುಕೊಳ್ಳುವುದರಿಂದ ನಿಮ್ಮ ಸ್ಮಾರ್ಟ್‌ಫೋನಿನ ಬ್ಯಾಟರಿಯ ಸಾಮರ್ಥ್ಯ ಕಡಿಮೆಯಾಗುತ್ತದೆ. ನೀವು ಸ್ಮಾರ್ಟ್‌ಫೋನಿನಲ್ಲಿ ವೀಡಿಯೋಗಳನ್ನು ನೋಡುತ್ತಿರುವಾಗ, ಈಮೇಲ್ ಅಥವಾ ಇತರ ಆ್ಯಪ್ ಗಳಲ್ಲಿ ಮೆಸೇಜ್ ಕಳುಹಿಸುತ್ತಿರುವಾಗ, ಈ ಲೊಕೇಶನ್ ಸರ್ವಿಸ್‌ನ ಅಗತ್ಯ ಇರುವುದಿಲ್ಲ. ಆ ಸಮಯದಲ್ಲಿ ಲೊಕೇಶನ್ ಸರ್ವಿಸ್ ಆಫ್ ಮಾಡಿ.
ಇದನ್ನು ಓದಿ: ಫೇಸ್‌ಬುಕ್ ಬಳಸುವಾಗ ಈ ತಪ್ಪುಗಳನ್ನು ಮಾಡಲೇಬೇಡಿಅಪ್ಲಿಕೇಷನ್ ಅಪ್ಡೇಟ್ ಮಾಡುವುದು ತೊಡಕಿನ ಕೆಲಸವೆಂದು ತೋರುತ್ತದೆ. ಆದರೆ ಇದು ಒಟ್ಟಾರೆ ಸ್ಮಾರ್ಟ್‌ಫೋನ್ ಕಾರ್ಯಕ್ಷಮತೆ ಮತ್ತು ಬ್ಯಾಟರಿ ಅವಧಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸ್ಮಾರ್ಟ್‌ಫೋನ್ ಬ್ಯಾಟರಿ ಮತ್ತು ಮೆಮೋರಿಯನ್ನು ಸುಧಾರಿಸಲು ಡೆವಲಪರ್ ಆ್ಯಪ್ ಅಪ್ಡೇಟ್ ನೀಡುತ್ತಾರೆ. ಹೀಗಾಗಿ ನಿಮ್ಮ ಸ್ಮಾರ್ಟ್‌ಫೋನ್ ಆ್ಯಪ್ ಗಳು ಅಪ್ಡೇಟ್ ಆಗಿದೆಯೇ ನೋಡಿ.
ಇದು ದೈನಂದಿನ ಪರಿಹಾರವಲ್ಲ, ಆದರೆ ಬ್ಯಾಟರಿ ಬಾಳಿಕೆಯನ್ನು ಕಡಿತಗೊಳಿಸಲು ನಿಮಗೆ ಸಹಾಯ ಮಾಡುತ್ತದೆ. ಏರ್ ಪ್ಲೇನ್ ಮೋಡ್ ಆನ್ ಮಾಡುವುದರಿಂದ ನೀವು ಹೊರಗಿನ ಪ್ರಪಂಚದಿಂದ ಕಡಿತಗೊಳ್ಳುತ್ತೀರಿ. ಆದರೆ ಇದು ವೀಡಿಯೋ, ಮ್ಯೂಸಿಕ್ ಪ್ಲೇಯರ್ ಅಥವಾ ಯಾವುದೇ ಸಂಪರ್ಕ ಅಗತ್ಯವಿಲ್ಲದ ಗೇಮ್‌ಗಳಿಗಾಗಿ ನಿಮ್ಮ ಸ್ಮಾರ್ಟ್‌ಪೋನ್ ಹೆಚ್ಚು ಕಾಲ ಉಳಿಯಲು ಅನುವುಮಾಡಿಕೊಡುತ್ತದೆ. ನಿಮ್ಮ ಸ್ಮಾರ್ಟ್‌ಪೋನ್ ಆಂಟೆನಾಗಳು ಹತ್ತಿರದಲ್ಲಿ ಲಭ್ಯವಿರುವ ನೆಟ್‌ವರ್ಕ್‌ಗೆ ನೋಂದಾಯಿಸಲು ನಿಮ್ಮ ಬ್ಯಾಟರಿ ಶಕ್ತಿಯನ್ನು ಹೀರುತ್ತದೆ. ಇದು ಕಳಪೆ ನೆಟ್‌ವರ್ಕ್ ವಲಯದಲ್ಲಿ ಹೆಚ್ಚಿರುತ್ತದೆ. ಅಂತಹ ಜಾಗದಲ್ಲಿ ನೀವು ಏರ್ ಪ್ಲೇನ್ ಮೋಡ್ ಆನ್ ಮಾಡುವುದು ಒಳ್ಳೆಯದು.
ಇದನ್ನು ಓದಿ: ಕೂದಲು ಉದುರುವುದನ್ನು ತಡೆಯಲು ಮನೆಮದ್ದುಗಳುಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ನಿಮ್ಮ ಸ್ಮಾರ್ಟ್‌ಪೋನ್ ಡಿಸ್ ಪ್ಲೇಯಲ್ಲಿ ಟನ್ನುಗಳಷ್ಟು ವಿಜೆಟ್ ಗಳನ್ನು ಹಾಕಲು ಅನುವು ಮಾಡುತ್ತದೆ. ಎಲ್ಲವನ್ನೂ ನಿಮ್ಮ ಸ್ಕ್ರೀನ್ ಮೇಲೆ ಇಟ್ಟುಕೊಳ್ಳುವುದು ಒಳ್ಳೆಯದೇ, ಆದರೆ ಇದು ನಿಮ್ಮ ಸ್ಮಾರ್ಟ್‌ಪೋನ್ ಬ್ಯಾಟರಿಗೆ ಹಾನಿಯನ್ನುಂಟು ಮಾಡುತ್ತದೆ. ದಿನವಿಡಿ ಅಗತ್ಯವಿಲ್ಲದ ಮಾಹಿತಿಗಳನ್ನು ನೀಡಲು ಇರಿಸಲಾಗಿರುವ ವಿಜೆಟ್ ಗಳನ್ನು ತೆಗೆದುಹಾಕಿ. ಒಂದು ವೇಳೆ ನಿಮಗೆ ಆ ಮಾಹಿತಿ ಬೇಕಿದರೆ ಇಂಟರ್ನೆಟ್‌ನಲ್ಲಿ ಸರ್ಚ್ ಮಾಡಿ.
ಜಿಮೇಲ್, ಟ್ವಿಟ್ಟರ್, ಕ್ಯಾಲೆಂಡರ್ ಫೇಸ್‌ಬುಕ್‌ನಂತಹ ಅಪ್ಲಿಕೇಶನ್‌ಗಳು ಇತ್ತೀಚಿನ ಮಾಹಿತಿಯನ್ನು ನೀಡಲು ನಿರಂತರವಾಗಿ ತಮ್ಮನ್ನು ರಿಫ್ರೆಶ್ ಮಾಡಿಕೊಳ್ಳುತ್ತವೆ. ಪ್ರಮುಖ ಮಾಹಿತಿಯನ್ನು ಕಳೆದುಕೊಳ್ಳಲು ನಿಮಗೆ ಸಾಧ್ಯವಾಗದಿದ್ದರೆ ಇದು ಅಗತ್ಯವೆನ್ನಬಹುದು, ಆದರೆ ಇದು ಬ್ಯಾಟರಿ ಜೀವಿತಾವಧಿಯನ್ನು ಸಹ ಕಳೆಯುತ್ತದೆ. ಹೀಗಾಗಿ ನೀವು ಸೆಟ್ಟಿಗ್ನಲ್ಲಿ ಅಕೌಂಟ್ಸ್ ಹೋಗಿ, ಆಟೋ ಸಿಂಕ್ ಆಫ್ ಮಾಡಿ.
ಇದನ್ನು ಓದಿ: ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಗೇಮ್ ಪ್ಲಾನ್ನೀವು ಜಿಪಿಎಸ್, ಬ್ಲೂಟೂತ್, ವೈಫೈ ಮತ್ತು ಮೊಬೈಲ್ ಡಾಟಾ ಬಳಸುತ್ತಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ. ನೀವು ಮೊಬೈಲ್ ಡಾಟಾ ಬಳಸುತ್ತಿದ್ದರೆ ವೈಫೈಯನ್ನು ಆಫ್ ಮಾಡಿ. ಎರಡನ್ನು ಒಟ್ಟಿಗೆ ಆನ್ ಮಾಡಬೇಡಿ. ಇದರಿಂದ ನಿಮ್ಮ ಬ್ಯಾಟರಿಯ ಶಕ್ತಿ ಬೇಗನೆ ಖಾಲಿಯಾಗುತ್ತದೆ.
ಈ ಲೇಖನವನ್ನು ಶೇರ್ ಮಾಡಿ ಸಹಕಾರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಾಕ ತಿಳಿಸಿ.
Explore all our Posts by categories.
See all comments...
8971691252 • February 4th,2023
ತುಂಬಾ ಒಳ್ಳೆಯ ಮಾಹಿತಿ