Website designed by @coders.knowledge.

Website designed by @coders.knowledge.

Steps Before Investing in Stock Market | ಹೂಡಿಕೆ ಮುನ್ನ ತೆಗೆದುಕೊಳ್ಳಬೇಕಾದ ಸ್ಟೆಪ್ಗಳು

Watch Video

ಕೆಲವರು ಜೀವ ವಿಮೆ(life insurance) ತೆಗೆದುಕೋ ಎನ್ನುತ್ತಾರೆ, ಕೆಲವರು ರಿಯಲ್ ಎಸ್ಟೇಟ್ನಲ್ಲಿ(real estate) ಹೂಡಿಕೆ ಮಾಡು ಎನ್ನುತ್ತಾರೆ. ಕೆಲವರು ಮ್ಯೂಚುಯಲ್ ಫಂಡ್(mutual fund) ಸರಿ ಇದೆ ಎನ್ನುತ್ತಾರೆ, ಇನ್ನೂ ಕೆಲವರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಹೇಳುತ್ತಾರೆ. ಆಗಿದ್ದರೆ ಇವುಗಳಲ್ಲಿ ಯಾವುದರಲ್ಲಿ ಹೂಡಿಕೆ ಮಾಡಬೇಕು. ವೈಯಕ್ತಿಕ ಹಣಕಾಸಿಗೆ(personal finance) ಇರುವ ಹಂತಗಳು ಯಾವುವು? ಇದರ ಬಗ್ಗೆ ಈ ಲೇಖನದಲ್ಲಿ ತಿಳಿಸಲಿದ್ದೇವೆ.

1. Passion

why is passion important in life in kannada
passion

ನೀವು ನಿಮ್ಮಗೆ ಆಸಕ್ತಿಕರ ಇರುವುದನ್ನು ಅನುಸರಿಸಿದರೆ, ಅದನ್ನು ನಿಮ್ಮ ನಿವೃತ್ತಿಯ ತನಕ ಮತ್ತು ಅದರ ನಂತರವೂ ಮುಂದುವರೆಸಬಹುದು. ಏಕೆಂದರೆ ನಿಮಗೆ ಇಷ್ಟವಿರುವ ಆಸಕ್ತಿಕರ ವಿಷಯವು ಪ್ರಾರಂಭದಲ್ಲಿ ಕೈಯಿಡಿಯದಿದ್ದರೂ ದೀರ್ಘಾವಧಿಯಲ್ಲಿ ಸಹಕರಿಸುತ್ತಾರೆ. ಆಗಿದ್ದಾರೆ ಪ್ರಾರಂಭದಲ್ಲಿ ನಾವು ಎಸ್ಐಪಿ(sip), ಮ್ಯೂಚುಯಲ್ ಫಂಡ್, ಷೇರು ಮಾರುಕಟ್ಟೆ(share market), ಪಿಂಚಣಿ ನಿಧಿ(pension fund) ಯಾವುದರಲ್ಲಿ ಹೂಡಿಕೆ ಮಾಡಬೇಕು. ಇಂದು ಆರ್ಥಿಕ ಯೋಜನೆಯನ್ನು(planning) ಕಷ್ಟಕರವಾಗಿ(tricky) ತೋರಿಸುತ್ತಿದ್ದಾರೆ. ಆದರೆ ಆರ್ಥಿಕ ಯೋಜನೆ ತುಂಬಾ ಸುಲಭವಾಗಿದೆ. ನೀವು ಹೂಡಿಕೆಗೂ ಮೊದಲು ಇರುವ ಹಂತಗಳನ್ನು ಫಾಲೋ ಮಾಡಿದರೆ ಒಳ್ಳೆಯ ಆರ್ಥಿಕ ಯೋಜನೆಯನ್ನು ಮಾಡಬಹುದು.

ಇದನ್ನು ಓದಿ: ಬ್ಯಾಬಿಲೋನ್ನ ಶ್ರೀಮಂತ ವ್ಯಕ್ತಿ ಪುಸ್ತಕದ ಸಾರಾಂಶ

2. Steps before investing

1. Life Insurance

what is the role of life insurance in kannada
life insurance

ನೀವು ಹೂಡಿಕೆ ಮಾಡುವ ಬದಲು ನಿಮ್ಮನ್ನು ರಕ್ಷಿಸಿಕೊಳ್ಳುವ(protect) ಬಗ್ಗೆ ಯೋಚಿಸಬೇಕು. ಏಕೆಂದರೆ ನಿಮ್ಮ ಸಂಬಳದಿಂದ 5,000 ರೂ ಉಳಿಸಿ ಮ್ಯೂಚುಯಲ್ ಫಂಡ್ನಲ್ಲಿ ಹೂಡಿಕೆ ಮಾಡುತ್ತೀರಾ. ಆದರೆ ನೀವು ಯಾವುದೇ ರೀತಿಯ ಆರೋಗ್ಯ ತುರ್ತುವಿಗೆ ತಯಾರಿರುವುದಿಲ್ಲ. ಹೀಗಾಗಿ ಜೀವ ವಿಮೆ ತೆಗೆದುಕೊಳ್ಳುವುದು ಆರ್ಥಿಕ ಯೋಜನೆಯ ಮೊದಲ ಹಂತವಾಗಿದೆ. ಜೀವ ವಿಮೆಯನ್ನು ಕುಟುಂಬದ ಗಳಿಸುತ್ತಿರುವ ಸದಸ್ಯ ಖಂಡಿತವಾಗಿಯೂ ಮಾಡಿಸಲೇಬೇಕು. ಇದರಿಂದ ನಿಮ್ಮ ಕುಟುಂಬಕ್ಕೆ ಆರ್ಥಿಕ ಸಮಸ್ಯೆ ಬರುವುದಿಲ್ಲ.

2. Health Insurance

ಜೀವ ವಿಮೆ ರೀತಿಯೇ ಆರೋಗ್ಯ ವಿಮೆ ಕೂಡ ಮುಖ್ಯವಾಗಿದೆ. ಏಕೆಂದರೆ ನಮ್ಮ ಆರೋಗ್ಯ ಯಾವಾಗಲಾದರೂ ಕೆಡಬಹುದು. ಆಸ್ಪತ್ರೆಗೆ ಹೋದರೆ ಲಕ್ಷದಷ್ಟು ಬಿಲ್ ಬರಬಹುದು. ಅನೇಕರು ವಿಮೆಯನ್ನು ಖರೀದಿಸಲು ಹೋದಾಗ ಉಲಿಪ್(ulip) ಪ್ಲಾನ್ ಆರಿಸಿಕೊಳ್ಳುತ್ತಾರೆ. ಆದರೆ ಹೂಡಿಕೆ(investment) ಮತ್ತು ವಿಮೆಯನ್ನು ಮಿಶ್ರಣ ಮಾಡಬೇಡಿ. ಪೂರ್ತಿ ಅವಧಿ ವಿಮೆಯನ್ನು(term insurance) ತೆಗೆದುಕೊಳ್ಳಿ.

3. Emergency fund

what is the meaning of emergency fund in kannada
emergency fund

ಕೋವಿಡ್ ಸಮಯದಲ್ಲಿ ಸ್ವಯಂ ಉದ್ಯೋಗಿ(self employee) ಇರುವವರು ಅಂಗಡಿಯನ್ನು ಮುಚ್ಚಬೇಕಾಯಿತು, ನಿಮ್ಮನ್ನು ಉದ್ಯೋಗದಿಂದ(job) ಯಾವಾಗಲಾದರೂ ಹೊರಹಾಕಬಹುದು. ಹೀಗಾಗಿ ಮನೆಯ 3 ರಿಂದ 6 ತಿಂಗಳ ಖರ್ಚು ನಿಮ್ಮ ಉಳಿತಾಯ ಖಾತೆಯಲ್ಲಿ(saving account) ಇರುವುದು ಮುಖ್ಯವಾಗಿದೆ. ಇದು ನಿಮ್ಮ ತುರ್ತು ನಿಧಿಯಾಗಿದೆ. ಇದರಿಂದ ತುರ್ತು ಸಮಯದಲ್ಲಿ ರಿಟರ್ನ್ ಸಿಗುವ ಕಡೆಯಿಂದ ಹಣವನ್ನು ತೆಗೆಯುವ ಅವಶ್ಯಕತೆ ಇರುವುದಿಲ್ಲ. ಒಂದು ಪ್ರತ್ಯೇಕ ಉಳಿತಾಯ ಖಾತೆ ಇಲ್ಲ ಎಫ್ಡಿಯಲ್ಲಿ(fd) ಈ ಹಣವನ್ನು ಇರಿಸಿ.

4. Retirement planning

what is best for retirement fund in kannada
retirement planning

ಚಿಕ್ಕ ವಯಸ್ಸಿನಲ್ಲಿ(young age) ನಿವೃತ್ತಿಯಾಗುವ ಬಗ್ಗೆ ಯಾರು ಯೋಚಿಸುವುದಿಲ್ಲ. ಆದರೆ ನಿವೃತ್ತಿಯ ಯೋಜನೆ ಮಾಡುವುದು ತುಂಬಾನೇ ಮುಖ್ಯವಾಗಿದೆ. ನೀವು ನಿವೃತ್ತಿ ಯೋಜನೆಯನ್ನು ಎನ್‌ಪಿಎಸ್(nps), ಭವಿಷ್ಯ ನಿಧಿ(provident fund), ಮ್ಯೂಚುಯಲ್ ಫಂಡ್ ಅಥವಾ ಎಫ್ಡಿಯಿಂದಲೂ ಪ್ರಾರಂಭಿಸಬಹುದು. ನೀವು ಎನ್‌ಪಿಎಸ್ನಲ್ಲಿ ಹೂಡಿಕೆ ಮಾಡಿದರೆ 60 ಕ್ಕಿಂತ ಮುಂಚೆ ಅದನ್ನು ತೆಗೆಯಲು ಸಾಧ್ಯವಿಲ್ಲ. ಭವಿಷ್ಯ ನಿಧಿಯಲ್ಲಿ 15 ವರ್ಷ ಮತ್ತು elss ಮ್ಯೂಚುಯಲ್ ಫಂಡ್ನಲ್ಲಿ 3 ವರ್ಷದವರೆಗೆ ಹೂಡಿಕೆ ಮಾಡಿರುವುದನ್ನು ತೆಗೆಯಲು ಸಾಧ್ಯವಿಲ್ಲ.

5. Goal planning

ನಿವೃತ್ತಿಯ ಯೋಜನೆಯ ನಂತರ ನೀವು 5 ರಿಂದ 10 ವರ್ಷದಲ್ಲಿ ಬರುವ ವಿಷಯ, ಉದಾಹರಣೆಗೆ ಮಕ್ಕಳ ವಿದ್ಯಾಭ್ಯಾಸ, ಮದುವೆಗೆ ಯೋಜನೆ ಮಾಡಬೇಕು. ಇದನ್ನು ನಾವು ಗುರಿ ಯೋಜನೆ ಎನ್ನುತ್ತೇವೆ. ಇದಕ್ಕಾಗಿ ನೀವು ಮ್ಯೂಚುಯಲ್ ಫಂಡ್ ಅಥವಾ ಸಾರ್ವಭೌಮ ಚಿನ್ನದ ಬಾಂಡ್‌ಗಳಲ್ಲಿ(sovereign gold bonds) ಹೂಡಿಕೆ ಮಾಡಬಹುದು. ನೀವು ಬೇಕಾದರೆ ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಬಹುದು.

6. Flexible goals

ನೀವು ಪ್ರವಾಸ ಮಾಡಲು ಬಯಸುತ್ತೀರಾ, 5 ಬಿಎಚ್ಕೆ(bhk) ಮನೆ ಖರೀದಿಸಲು ಬಯಸುತ್ತೀರಾ. ಈ ರೀತಿಯಾ ಹೊಂದಿಕೊಳ್ಳುವಂತಹ ಗುರಿಗಳನ್ನು ಹೊಂದಿಕೊಳ್ಳುವ ಗುರಿಗಳು ಎನ್ನುತ್ತೇವೆ. ಈ ರೀತಿಯ ಗುರಿಗಾಗಿ ನೀವು ಆಕ್ರಮಣಕಾರಿ ಹಂತಗಳನ್ನು(aggressive steps) ತೆಗೆದುಕೊಳ್ಳಬಹುದು. ಆದರೆ ಇದು ನಿಮ್ಮ ಅಪಾಯ(risk) ಮತ್ತು ಸಾಲದ(loan) ಮೇಲೆ ನಿಂತಿದೆ. ಇಲ್ಲಿ ಬೇಕಾದರೆ ನಿಮ್ಮ ಅಪಾಯದ ಮೇಲೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ.

ನೀವು ಮೂರನೇ ಹಂತ ತುರ್ತು ನಿಧಿಯಾ ನಂತರ ನಿವೃತ್ತಿಯ ಯೋಜನೆಗೆ ಹೋಗುತ್ತೀರಾ. ಆದರೆ ಇದಕ್ಕೆ ಮೊದಲು ನೀವು ನಿಮ್ಮ ಎಲ್ಲಾ ಸಾಲವನ್ನು ತೀರಿಸುವ ಬಗ್ಗೆ ಯೋಚಿಸಿ. ನಿಮ್ಮ ವಿದ್ಯಾಭ್ಯಾಸ ಮತ್ತು ಮನೆಯ ಸಾಲವಿದ್ದರೆ ಪರವಾಗಿಲ್ಲ. ಕ್ರೆಡಿಟ್ ಕಾರ್ಡ್ ರೀತಿಯ ದುಬಾರಿ ಸಾಲಗಳನ್ನು ಎಷ್ಟು ಬೇಗನೆ ತೀರಿಸಲು ಸಾಧ್ಯವೋ ಮಾಡಿಬಿಡಿ. ನೀವು ವಿಮೆ, ತುರ್ತು, ಸಾಲದ ಪಾವತಿಯ ನಂತರ ಹೂಡಿಕೆಯ ಬಗ್ಗೆ ಯೋಚಿಸಿ.

ಇದನ್ನು ಓದಿ: ETF ಹೂಡಿಕೆ ತಂತ್ರ

3. Stock market tips

ನೀವು ಅನೇಕರಿಂದ ಷೇರು ಮಾರುಕಟ್ಟೆಯಾ ಸಲಹೆ ಕೇಳುತ್ತೀರಾ? ಕೆಲವರು ಬೇಗನೆ ಹಣ ಗಳಿಸಲು ಸಲಹೆ ನೀಡುತ್ತಾರೆ. ಆದರೆ ಹೂಡಿಕೆ ಒಂದು ದೀರ್ಘವಾದಿ ಪಯಣವಾಗಿದ್ದು ನೀವು ದುಡಿಯುವ ಹಣದ ಸ್ವಲ್ಪ ಭಾಗವನ್ನು ಅದಕ್ಕೆ ಹಾಕುತ್ತಿರುತ್ತೀರಾ. ಆ ರೀತಿ ಹಣ ಗಳಿಸುವ ಸಲಹೆ ಇರುತ್ತಿದ್ದರೆ, ಇಂದು ಅನೇಕರು ಕಷ್ಟಪಟ್ಟು ಕೆಲಸ ಮಾಡುವ ಅವಶ್ಯಕತೆ ಇರುತ್ತಿರಲಿಲ್ಲ. ಹೀಗಾಗಿ ಈ ರೀತಿಯಾ ಸಲಹೆ ನೀಡುವವರಿಂದ ದೂರವಿರಿ.

4. Financial step for youngsters

financial planning for youngsters in kananda
finance youngsters

ವಿದ್ಯಾಭ್ಯಾಸದಲ್ಲಿ ತೊಡಗಿರುವ ಇಲ್ಲ ಮುಗಿಸಿರುವ ವಿದ್ಯಾರ್ಥಿಗಳು ನಾವು ಹಿಂದೆ ತಿಳಿಸಿದ್ದ ಹೂಡಿಕೆಯ 6 ಹಂತಗಳನ್ನು ಅನುಸರಿಸುವ ಅವಶ್ಯಕತೆ ಇಲ್ಲ. ವಿದ್ಯಾರ್ಥಿಗಳು ಅಧಿಕ ಆದಾಯ ಮಾಡುವಷ್ಟು ಸಮರ್ಥನಾಗಬೇಕು. ಯಾರದಾದರೂ ಸಂಬಳ 40,000ರೂ ಇದ್ದರೆ 1 ಲಕ್ಷ ಮಾಡುವ ಬಗ್ಗೆ ಯೋಚಿಸಬೇಕು. ಇದರಿಂದ ನೀವು ಅಧಿಕ ಹೂಡಿಕೆ ಮಾಡಬಹುದು. ಅನೇಕ ವಿದ್ಯಾರ್ಥಿಗಳು ಅವರಿಗೆ ಸಿಗುವ ಪಾಕೆಟ್ ಹಣವನ್ನು(pocket money) ಆಪ್ಷನ್ಸ್ನಲ್ಲಿ(options) ಹಾಕಿ ಹಣವನ್ನು ಕಳೆದುಕೊಳ್ಳುತ್ತಾರೆ ಮತ್ತು ತಮ್ಮ ಅಭಿವೃದ್ಧಿಯ(career) ಮೇಲೆ ಅವರಿಗೆ ಸಮಯವೇ ಸಿಗದಂತಾಗುತ್ತದೆ.

ವಿದ್ಯಾರ್ಥಿಗಳು ಷೇರು ಮಾರುಕಟ್ಟೆಯನ್ನು ನೋಡುತ್ತಿರಬೇಕು. ಇದರಿಂದ ನೀವು ಉಳಿಸಿದ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದಾಗ ವಿವಿಧ ಉದ್ಯಮಗಳ(industry) ಬಗ್ಗೆ ಜ್ಞಾನ ಸಿಗುತ್ತದೆ. ಆದರೆ ವಿದ್ಯಾರ್ಥಿಗಳು ಟ್ರೇಡಿಗ್(trading) ಮಾಡಬಾರದು. ಷೇರು ಮಾರುಕಟ್ಟೆಯ ಮೂಲಭೂತ ಅಂಶಗಳ(fundamentals) ಬಗ್ಗೆ ತಿಳಿಯಲು ಪ್ರಯತ್ನಿಸಬೇಕು.

ಇದನ್ನು ಓದಿ: ಥಿಂಕ್ ಮತ್ತು ಗ್ರೋ ರಿಚ್ ಪುಸ್ತಕದ ಸಾರಾಂಶ

5. Which mutual fund to choose?

how to choose a good mutual fund in kannada
mutual fund

ನೀವು ನಿಧಿ ವ್ಯವಸ್ಥಾಪಕನ(fund manager) ಜ್ಞಾನವನ್ನು ನೋಡಿ ಮ್ಯೂಚುಯಲ್ ಫಂಡ್ನಲ್ಲಿ ಹೂಡಿಕೆ ಮಾಡುತ್ತೀರಾ. ಹೀಗಾಗಿ ನಿಧಿ ವ್ಯವಸ್ಥಾಪಕ ನಿಮ್ಮ ಹಣವನ್ನು ಆತನಿಗೆ ತಿಳಿದ ರೀತಿಯಲ್ಲಿ ನಿರ್ವಹಿಸುವ ಫಂಡ್ ಅನ್ನು ಆರಿಸಿಕೊಳ್ಳಿ. ನಿಮ್ಮ ರೀತಿಯಲ್ಲಿ ಹೂಡಿಕೆ ಮಾಡಬೇಕಿದ್ದರೆ ಸ್ಟಾಕ್ನಲ್ಲಿ ನೇರವಾಗಿ ಹೂಡಿಕೆ ಮಾಡಿ.

ಹಣವನ್ನು ಉಳಿಸಿ ಇಕ್ವಿಟಿ(equity) ಬಯಸುವವರು ಲಾರ್ಜ್ ಕ್ಯಾಪ್ ಇಕ್ವಿಟಿ ಮ್ಯೂಚುವಲ್ ಫಂಡ್(large cap equity mutual fund) ಖರೀದಿಸಬಹುದು. ಲಾರ್ಜ್ ಕ್ಯಾಪ್ನಲ್ಲಿ ಭಾರತದ ಟಾಪ್ 100 ಕಂಪನಿ ಇರುತ್ತವೆ. ಹೀಗಾಗಿ ಇವುಗಳಲ್ಲಿ ಅಪಾಯ ಕಡಿಮೆ ಇರುತ್ತದೆ. ನೀವು ಪೂರ್ತಿಯಾಗಿ ನಿಧಿ ವ್ಯವಸ್ಥಾಪಕ ನಿಮ್ಮ ಹಣವನ್ನು ನಿರ್ವಹಣೆ ಮಾಡಲು ಬಿಟ್ಟರೆ ಫ್ಲೆಕ್ಸಿ ಕ್ಯಾಪ್ ಮ್ಯೂಚುಯಲ್ ಫಂಡ್(flexi cap mutual fund) ಸೂಕ್ತವಾಗಿದೆ. ಆದರೆ ಇದರಲ್ಲಿ ಲಾರ್ಜ್ ಕ್ಯಾಪ್ಗಿಂತ ಸ್ವಲ್ಪ ಅಪಾಯ ಇರುತ್ತದೆ. ಆರಂಭಿಗ ಹೂಡಿಕೆದಾರರು ಲಾರ್ಜ್ ಕ್ಯಾಪ್ನಿಂದ ಪ್ರಾರಂಭಿಸಿ. ಸಂಬಳ(salaried) ಪಡೆಯುವವರು ಎರಡರಲ್ಲೂ ಹೂಡಿಕೆ ಮಾಡಬಹುದು.

ಇದನ್ನು ಓದಿ: "The Education of a Value Investor" ಪುಸ್ತಕದ ಸಾರಾಂಶ

6. Intraday trading and investing

ಟ್ರೇಡಿಗ್ನಿಂದ ಹಣವನ್ನು ಗಳಿಸುವವರು ಇರಬಹುದು, ಆದರೆ ತುಂಬಾ ಕಡಿಮೆ ಜನಗಳು ಇದ್ದಾರೆ. ಚಾರ್ಟು(chart) ನೋಡಿ ತಿಂಗಳು 5% ರಿಟರ್ನ್ಸ್ ತೆಗೆಯಲು ಸಾಧ್ಯವಾಗುತ್ತಿದ್ದರೆ ಮುಖೇಶ್ ಅಂಬಾನಿಯವರು ಜಿಯೋ(jio) ಪ್ರಾರಂಭಿಸುತ್ತಿರಲಿಲ್ಲ, ಎಲೋನ್ ಮಸ್ಕ್(elon musk) ಮಂಗಳ ಗ್ರಹಕ್ಕೆ ಹೋಗುವ ಯೋಜನೆ ಮಾಡುತ್ತಿರಲಿಲ್ಲ, ರತನ್ ಟಾಟಾ(ratan tata) ಅವರು ಉಕ್ಕಿನ ಸ್ಥಾವರ(steel plant) ಮತ್ತು ಕಾರು ಮಾಡುತ್ತಿರಲಿಲ್ಲ. ಇವರಿಗೆ ಅಧಿಕ ರಿಟರ್ನ್ಸ್ ಸಿಗುವ ಯೋಜನೆ ಬಗ್ಗೆ ತಿಳಿದಿದ್ದರೆ ಉತ್ತಮ ತಾಂತ್ರಿಕ ವಿಶ್ಲೇಷಕರನ್ನು(technical analyst) ಮಜೂರಿ ಮಾಡಿಕೊಳ್ಳುತ್ತಿದ್ದರು. ಉತ್ತಮ ಸಾಫ್ಟ್ವೇರ್ ಮಾಡಿ ಹಣವನ್ನು ಗಳಿಸುತ್ತಿದ್ದರು.

7. Stocks reality

ನೀವು ಮೊದಲಿಗೆ ಸ್ಟಾಕ್ ಖರೀದಿಸುತ್ತಿದ್ದರೆ ಮೊದಲ 1 - 2 ವರ್ಷ ಅಧಿಕ ರಿಟರ್ನ್ಸ್ ಬರುವುದಿಲ್ಲವೆಂದು ಅರ್ಥ ಮಾಡಿಕೊಳ್ಳಿ. ಇದನ್ನು ಪೂರ್ಣ ಸಮಯವಾಗಿ(full time) ನೋಡಬೇಡಿ. ಷೇರು ಮಾರುಕಟ್ಟೆ ನಿಮ್ಮ ಉಳಿತಾಯವನ್ನು(savings) ಬೆಳೆಸಲು ಇರುವ ಒಂದು ಮಾರ್ಗವಾಗಿದೆ ಹೊರತು ನಿಮ್ಮ ಆದಾಯವನ್ನು ಹೆಚ್ಚಿಸಲು ಅಲ್ಲ. ಯುವಕರು ಮಾರುಕಟ್ಟೆಯಲ್ಲಿ ಹಣ ಗಳಿಸಲು ಬರುತ್ತಾರೆ. ಆದರೆ ನಂತರ ಮಾರುಕಟ್ಟೆಯಲ್ಲಿ ನಾಯಕನಾಗುವುದನ್ನೇ(hero) ಉದ್ದೇಶ ಮಾಡಿಕೊಳ್ಳುತ್ತಾರೆ. ಇದರಿಂದ ನಾವು ಇತರರ ಮುಂದೆ ನಾಯಕನಾಗಲು ದೊಡ್ಡ ಕಂಪನಿಗಳನ್ನು ಬಿಟ್ಟು ಗುಪ್ತ ಸ್ಟಾಕ್ಗಳನ್ನು(hidden stock) ಹುಡುಕಲು ಪ್ರಾರಂಭಿಸುತ್ತೇವೆ.

ನೀವು ಏನನ್ನು ಬಳಸುತ್ತೀರೋ(consume), ಅದರಲ್ಲಿ ಹೂಡಿಕೆ ಮಾಡುವುದು ಸೂಕ್ತವಾಗಿದೆ. ಅಂದರೆ ನೀವು ಡಾಬರ್ ರೆಡ್ ಟೂತ್ಪೇಸ್ಟ್(dabur red toothpaste) ಬಳಸುತ್ತಿದರೆ ಅದರಲ್ಲಿ ಹೂಡಿಕೆ ಮಾಡಿ. ಏಕೆಂದರೆ ಆ ಪೇಸ್ಟ್ ಅನ್ನು ಏಕೆ ಬಳಸುತ್ತಿರುವಿರಿ ಎಂಬುದು ನಿಮಗೆ ತಿಳಿದಿರುತ್ತದೆ. ನೀವು ಯಾವ ವ್ಯಾಪ್ತಿಯಲ್ಲಿ ಜ್ಞಾನ ಪಡೆದಿದ್ದೀರೋ ಅದರಲ್ಲಿ ಹೂಡಿಕೆ ಮಾಡಿ. ಅದು ಬಿಟ್ಟು ನಿಮಗೆ ಗೊತ್ತಿರದ ವ್ಯಾಪ್ತಿಯಲ್ಲಿ ಹೂಡಿಕೆ ಮಾಡಬೇಡಿ. ನೀವು ಜೀವನದಲ್ಲಿ ಶ್ರೀಮಂತರಾಗಲು 5 ರಿಂದ 6 ಸ್ಟಾಕ್ ಸಾಕು ಮತ್ತು ಇತರರು ಹೇಗೆ ಹಣವನ್ನು ಗಳಿಸುತ್ತಿದ್ದಾರೆ ಎಂಬುದರ ಬಗ್ಗೆ ಯೋಚಿಸುತ್ತಿರಬೇಡಿ.

ಇದನ್ನು ಓದಿ: ಹಣವನ್ನು ನಿರ್ವಹಿಸಲು ಜಪಾನಿಯರ ರಹಸ್ಯ

8. Technical vs Fundamentals

what is better fundamental or technical analysis in kannada
technical vs fundamentals

ಯಾರಿಗೂ ಮಾರುಕಟ್ಟೆ ಎಲ್ಲಿಗೆ ಹೋಗುತ್ತದೆ ಎಂಬುದು ತಿಳಿದಿರುವುದಿಲ್ಲ. ಹೀಗಾಗಿ ನಾವೆಲ್ಲರೂ ವೈವಿಧ್ಯಗೊಳಿಸುತ್ತೇವೆ(diversify). ಒಂದು ವೇಳೆ ಮಾರುಕಟ್ಟೆ ಎಲ್ಲಿಗೆ ಹೋಗುತ್ತದೆ ಎಂಬುದು ತಿಳಿದಿದ್ದರೆ ನಮ್ಮ ಎಲ್ಲಾ ಹಣವನ್ನು ಹೂಡಿಕೆ ಮಾಡುತ್ತಿದ್ದೇವು. ಹೀಗಾಗಿ ತಾಂತ್ರಿಕ ವಿಶ್ಲೇಷಣೆಯಿಂದ(technical analysis) ನೀವು ಡೇಟಾ ವಿಶ್ಲೇಷಣೆ(data analysis) ಮಾಡಿ ನಿಮ್ಮ ಗಳಿಕೆಯ ಅವಕಾಶವನ್ನು ಹೆಚ್ಚಿಸಿಕೊಳ್ಳುತ್ತೀರಾ.

ನೀವು 20 ಸ್ಟಾಕ್ನ ಬಾಸ್ಕೆಟ್ ಮಾಡಿ, ಅದರಲ್ಲಿ 3 ರಿಂದ 4 ಸ್ಟಾಕ್ ಒಳ್ಳೆಯ ರಿಟರ್ನ್ ನೀಡಿದರು ನಿಮ್ಮ ಗುರಿಯನ್ನು ತಲುಪಬಹುದು. ಹಾಗಂತ 20 ಸ್ಟಾಕ್ಗಳಿಗಾಗಿ ಯಾವುದವುದೋ ಆರಿಸಿಕೊಳ್ಳಬೇಡಿ. ಒಳ್ಳೆಯ ಸ್ಟಾಕ್ ಇರುವ ಪೋರ್ಟ್ಫೋಲಿಯೋ ರಚಿಸಿ. ನೀವು ಕಂಪನಿಯ ಷೇರು ಖರೀದಿಸುವಾಗ ಪ್ರವರ್ತಕ ಹಿಡುವಳಿಕೆಯನ್ನು(promoter holding) ನೋಡಿ. ಆತನ ಉದ್ಯಮದ ಮೇಲಿನ ಆಸಕ್ತಿ ನಿಮಗೆ ಕಾಣಿಸಬೇಕು.

ಇದನ್ನು ಓದಿ: ಆರಂಭಿಕ ಆರ್ಥಿಕ ಸ್ವತಂತ್ರಕ್ಕಾಗಿ 5 ನಿಯಮಗಳು

9. Quick returns

ಭಾರತದಲ್ಲಿ ಸೂಚ್ಯಂಕ ನಿಧಿಗಳು(index funds) ದೀರ್ಘವಧಿಯಲ್ಲಿ 14% ರಿಟರ್ನ್ಸ್ ನೀಡಿದೆ. ನೀವು ಈ ಇಂಡೆಕ್ಸ್ನಲ್ಲಿ ಕೆಲವು ಕಳಪೆ ಕಂಪನಿಗಳನ್ನು ತೆಗೆದಿದ್ದಾರೆ ನಿಮ್ಮ ರಿಟರ್ನ್ಸ್ 17% ತನಕ ಇರುತ್ತಿತ್ತು. ಹೀಗಾಗಿ ತ್ವರಿತ ವಾಪಸಾತಿ ಬಿಟ್ಟು ಈ ರೀತಿಯ ವಿಶ್ಲೇಷಣೆ ಮೇಲೆ ಗಮನ ಹರಿಸಿ.

10. Right time to sell the stock

what time is best to sell stocks in kannada
sell stock

ನಿಮಗೆ ಯಾವಾಗ ಅವಶ್ಯಕತೆ ಇದೆಯೋ ಆಗ ಸ್ಟಾಕ್ ಅನ್ನು ಮಾರಿಬಿಡಿ. ಮಕ್ಕಳ ಮದುವೆ, ತುರ್ತು ಆರೋಗ್ಯ ಪರಿಸ್ಥಿತಿ, ಮನೆ ಖರೀದಿಸುವಂತಹ ಕಾರಣಗಳಿಗೆ ನೀವು ಸ್ಟಾಕ್ ಮಾರಿ. ಐಷಾರಾಮಿ(luxurious) ವಸ್ತುಗಳನ್ನು ಖರೀದಿಸಲು ಸ್ಟಾಕ್ ಅನ್ನು ಮಾರಬೇಡಿ. ನೀವು ಒಂದು ಕಾರಣದ ಮೇಲೆ ಒಂದು ಕಂಪನಿಯಲ್ಲಿ ಹೂಡಿಕೆ ಮಾಡುರುತ್ತೀರಾ. ಒಂದು ವೇಳೆ ಆ ಕಾರಣ ತಪ್ಪಾದರೆ, ನೀವು ಆ ಕಂಪನಿಯ ಸ್ಟಾಕ್ ಅನ್ನು ಮಾರಬಹುದು.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

No Comments