Watch Video
ಉತ್ತಮ ಅಧ್ಯಯನ ಅಭ್ಯಾಸವು ನಿಮ್ಮ ಒತ್ತಡವನ್ನು ಕಡಿಮೆ ಮಾಡಲು ಮತ್ತು ಆತ್ಮವಿಶ್ವಾಸದಿಂದ ಪರೀಕ್ಷೆಗಳನ್ನು ಎದುರಿಸಲು ಸಾಧ್ಯವಾಗಿಸುತ್ತದೆ. ಅಧ್ಯಯನದ ಅಭ್ಯಾಸ ಮಾಡುವುದು ಮೊದಲಿಗೆ ಕಠಿಣವೆನಿಸಿದರೂ ಶೀಘ್ರದಲ್ಲೇ ಅದು ನಿಮ್ಮ ದಿನಚರಿಯಾಗುತ್ತದೆ. ನಾವು ಅನೇಕ ಓದುವ ಸಲಹೆಗಳನ್ನು ತಿಳಿಸಿದ್ದೇವೆ.
ಅವುಗಳಲ್ಲಿ ಕೆಲವು ಉತ್ತಮ ಸಲಹೆಗಳು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ನಾವು ಇಲ್ಲಿ ತಿಳಿಸುವ ನಾಲ್ಕು ಸಲಹೆಗಳು ನೀವು ಎಷ್ಟೇ ಸೋಮಾರಿಯಾಗಿದ್ದರು ಓದುವ ಹವ್ಯಾಸ ಮಾಡಿಸುತ್ತದೆ.
ಇದನ್ನು ಓದಿ: ಬೆಳಗಿನ ಅಧ್ಯಯನವು ಪರಿಣಾಮಕಾರಿಯಾಗಲು ಐದು ಕಾರಣಗಳು.ಇದರ ಅರ್ಥ ನೀವು ನಿಮ್ಮ ಶಾಲೆ ಅಥವಾ ಕಾಲೇಜಿನಲ್ಲಿ ಮಾಡಿಸುವ ಪಾಠವನ್ನು ದಿನ ಓದುತ್ತೀರಿ. ಇದನ್ನು ನೀವು ನಿಮ್ಮ ಶಾಲಾ ಅಥವಾ ಕಾಲೇಜು ಪ್ರಾರಂಭವಾದಾಗಿನಿಂದ ಮಾಡಿದರೆ ಚೆಂದ. ಇದರಲ್ಲಿ ನೀವು ಯಾವುದೇ ವಿಷಯದ ಒಂದು ಪಾಠವನ್ನು ತೆಗೆದುಕೊಳ್ಳಿ, ಅದನ್ನು ಓದಿ. ಕೇವಲ ಓದಿ ಅಷ್ಟೇ.
ನಿಮಗೆ ಪ್ರತಿದಿನ ಅದನ್ನೇ ಓದಲು ಸಾಧ್ಯವಾಗಿಲ್ಲವೆಂದರೆ, 2-3ದಿನಗಳಿಗೊಮ್ಮೆ ಆ ಪಾಠವನ್ನು ಓದಿ. ಹೀಗೆ ನಿಮ್ಮ ಎಲ್ಲಾ ವಿಷಯದ ಎಲ್ಲ ಪಾಠಗಳನ್ನು ಒಂದು ವಾರದಲ್ಲಿ ಮುಗಿಸುವ ಹಾಗೆ ಒಂದು ಗುರಿ ಇಟ್ಟುಕೊಳ್ಳಿ.
ಇದನ್ನು ಓದಿ: ಗಣಿತವನ್ನು ವೇಗವಾಗಿ ಕಲಿಯುವುದು ಹೇಗೆ?ಹೆಸರಿನಂತೆಯೇ ಇದರಲ್ಲಿ ನೀವು ಓದಬೇಕಾದ ಪುಟವನ್ನು ದಿನವಿಡೀ ತೆಗೆದು ನೋಡುತ್ತೀರಿ. ನಮ್ಮ ಮೆದುಳು ದೃಶ್ಯ ಕಲಿಕೆಯನ್ನು ಬೇಗನೆ ನೆನಪಿನಲ್ಲಿಟ್ಟುಕೊಳ್ಳುತ್ತದೆ. ನಾವು ಕೂಡ ಈ ದೃಶ್ಯ ಕಲಿಕೆಯನ್ನು ನಮ್ಮ ಇತ್ತೀಚಿನ ಪರೀಕ್ಷೆಯಲ್ಲಿ ಬಳಸಿದ್ದೇವೆ. ಅದರ ಅಭಿಪ್ರಾಯದಂತೆ, ದೃಶ್ಯ ಕಲಿಕೆ(Visual Learning) ನಿಮ್ಮ ಎಲ್ಲ ಪಾಠಗಳನ್ನು ಕಲಿಯಲು ಸೂಕ್ತವಲ್ಲ. ಆದರೆ ಕೆಲವೊಂದು ಮುಖ್ಯ ಪ್ರಶ್ನೆಗಳ ಉತ್ತರ ನೆನಪಿನಲ್ಲಿರಲು ಉತ್ತಮವಾಗಿದೆ.
ಇದನ್ನು ಓದಿ: ಷೇರು ಮಾರುಕಟ್ಟೆ ಹೇಗೆ ಕಾರ್ಯನಿರ್ವಹಿಸುತ್ತದೆ?ಇದು ನಿಮ್ಮ ಎಲ್ಲ ಪಾಠಗಳನ್ನು ಕಲಿಯಲು ಸೂಕ್ತವಾಗಿದೆ. ನೀವು ಇದರಲ್ಲಿ ನಿಮ್ಮ ಪಾಠಗಳನ್ನು ರೆಕಾರ್ಡ್ ಮಾಡಬೇಕು. ಅದನ್ನು ಕೇಳುತ್ತಿರಬೇಕು. ಇದರಲ್ಲಿ ನಿಮಗೆ ನಿಮ್ಮ ರೆಕಾರ್ಡಿಂಗ್(recording) ಇಷ್ಟವಾಗಬೇಕು ಅಷ್ಟೇ.
ಇದನ್ನು ನೀವು ನಿಮ್ಮ ಶಾಲಾ ಅಥವಾ ಕಾಲೇಜು ಪ್ರಾರಂಭವಾದಾಗಿನಿಂದ ಮಾಡಿದರೆ ಚೆಂದ. ಪರೀಕ್ಷೆಗೆ ಒಂದು ತಿಂಗಳು, ಒಂದು ವಾರ ಇಲ್ಲ ಒಂದು ದಿನವಿದ್ದಾಗ ಇದನ್ನು ಬಳಸುವುದು ಅಷ್ಟು ಸೂಕ್ತವಲ್ಲ.
ಇದನ್ನು ಓದಿ: ಯಶಸ್ಸು ಕಾಣಲು ಚಾಣಕ್ಯರ ನಾಲ್ಕು ನೀತಿಗಳುಇದು ಶಾಲೆಗೆ ಎಷ್ಟು ಉತ್ತಮವೆಂದು ಗೊತ್ತಿಲ್ಲ. ಆದರೆ ಕಾಲೇಜಿನ ವಿದ್ಯಾರ್ಥಿಗಳಿಗೆ ಉತ್ತಮವಾಗಿದೆ. ಹಳೆಯ ಪ್ರಶ್ನೆಪತ್ರಿಕೆಗಳನ್ನು(old question papers) ಉತ್ತರಿಸುವುದರಿಂದ ನಿಮಗೆ ಪರೀಕ್ಷೆಯಲ್ಲಿ ಕೇಳುವ ಪ್ರಶ್ನೆಗಳ ಬಗ್ಗೆ ಒಂದು ಐಡಿಯಾ ಬರುತ್ತದೆ. ನೀವು ಎರಡು ವಾರಕ್ಕೆ ಒಂದು ಪ್ರಶ್ನೆ ಪತ್ರಿಕೆಯನ್ನಾದರೂ ಉತ್ತರಿಸಲು ಪ್ರಯತ್ನಿಸಿ.
ಹಾಗಿದ್ದರೆ ಸ್ನೇಹಿತರೇ, ನಿಮಗೆ ಓದುವ ಸಲಹೆ ಬಗ್ಗೆ ತಿಳಿದಿದೆ. ನೀವು ನಾವು ಇಲ್ಲಿ ತಿಳಿಸಿದ ನಾಲ್ಕು ಸಲಹೆ ಪಾಲಿಸಿದರೆ ನಿಮ್ಮನ್ನು ಪರೀಕ್ಷೆಯಲ್ಲಿ ಸೋಲಿಸಲು ಯಾರಿಗೂ ಸಾಧ್ಯವಿಲ್ಲ. ಆದರೆ ಇವುಗಳನ್ನೆಲ್ಲ ಮಾಡಲು ನೀವು ಸ್ವಲ್ಪ ಆಸಕ್ತಿ ತೋರಿಸಲೇಬೇಕು.
ಈ ಲೇಖನವನ್ನು ಶೇರ್ ಮಾಡಿ ಸಹಕಾರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಾಕ ತಿಳಿಸಿ.
Explore all our Posts by categories.
Info Mind 5787
Info Mind 9846
Info Mind 2633
See all comments...
Brundha • January 25th,2022
I like this website to increase my intrest on study . thankyou very much for giving tips to increase my reading skills .