Watch Video
ನಾವು ಇಂದು ಅಮೆರಿಕದ ಲೇಖಕ ರಾಬರ್ಟ್ ಗ್ರೀನೆ(robert greene) ಅವರು ಬರೆದಿರುವ "the 48 laws of power" ಪುಸ್ತಕದ ಸಾರಾಂಶ ತಿಳಿಸಲಿದ್ದೇವೆ. ಇದರಲ್ಲಿ ಇರುವ 48 ನಿಯಮಗಳು ನಾವು ನಮ್ಮ ಶಕ್ತಿಯನ್ನು(power) ಹೇಗೆ ಬಳಸಬೇಕೆಂದು ತಿಳಿಸುತ್ತವೆ. ನಿಮ್ಮ ವ್ಯಾಪಾರದ ಸಂಭಾವ್ಯವನ್ನು(potential) ಶಕ್ತಿಯು ಹೇಗೆ ಪರಿಣಾಮಕಾರಿ ಮಾಡುತ್ತದೆ ಎಂಬುದನ್ನು ಲೇಖಕರು ತಿಳಿಸುತ್ತಾರೆ. ಈ ಪುಸ್ತಕವೂ ಕಾರ್ಪೊರೇಟ್ ನಾಯಕರು(corporate leaders) ಮತ್ತು ವ್ಯಾಪಾರ ಜಗತ್ತಿನಲ್ಲಿ ತುಂಬಾ ಪ್ರಸಿದ್ಧವಾಗಿದೆ. ಇದರಲ್ಲಿ ತಿಳಿಸುವ ಕೆಲವು ನಿಯಮಗಳನ್ನು ನೀವು ಒಪ್ಪದೆ ಇರಬಹುದು. ಆದರೂ ನಾವು ಈ ಪುಸ್ತಕದಲ್ಲಿ ತಿಳಿಸಿದಂತೆ ಅವುಗಳನ್ನು ತಿಳಿಸಲಿದ್ದೇವೆ.
ವ್ಯಾಪಾರ, ಕೆಲಸ, ಸಂಘಟನೆ(organization) ಎಲ್ಲೇ ಅದರೂ ನಿಮಗಿಂತ ದೊಡ್ಡ ಸ್ಥಾನದಲ್ಲಿ ಇರುವವರು ಉನ್ನತರಾಗಿರುತ್ತಾರೆ(superior). ನೀವು ಅವರ ಕೆಳಗೆ ಕೆಲಸ ಮಾಡುತ್ತಿರುವಿರಿ ಎಂಬುದನ್ನು ನೆನಪಿಡಿ ಮತ್ತು ಅದನ್ನು ಅವರಿಗೂ ನೆನಪಿಸಿ. ನಿಮ್ಮ ಪ್ರತಿಭೆ(talents) ಮತ್ತು ಕೌಶಲ್ಯವನ್ನು(skills) ತೋರಿಸುವುದು ಮುಖ್ಯ. ಆದರೆ ಅದಕ್ಕಾಗಿ ನಿಮ್ಮ ಉನ್ನತ ಅಧಿಕಾರಿ ಅಸುರಕ್ಷಿತ ಅಂದುಕೊಳ್ಳುವಂತೆ ಮಾಡಬೇಡಿ. ನೀವು ಅವರಿಗಿಂತ ಕಡಿಮೆ ಉತ್ತಮವಿದ್ದೀರಾ ಎಂದು ತೋರಿಸುವ ಮೂಲಕ ನೀವು ನಿಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತೀರಾ. ನೀವು ಅವರ ಪಾತ್ರ(role) ಮತ್ತು ಶಕ್ತಿಯ ಬಗ್ಗೆ ಅನುಮಾನ(doubt) ನೀಡಿದರೆ ನಿಮಗೆ ನಷ್ಟವಾಗುತ್ತದೆ ಮತ್ತು ನೀವು ಹಿಂದುಳಿಯುತ್ತೀರಾ.
ಇದನ್ನು ಓದಿ: ಬ್ಯಾಬಿಲೋನ್ನ ಶ್ರೀಮಂತ ವ್ಯಕ್ತಿ ಪುಸ್ತಕದ ಸಾರಾಂಶಲೇಖಕರು ನಿಮ್ಮ ಆತ್ಮೀಯ ಗೆಳೆಯರನ್ನು(close friends) ಅಧಿಕ ನಂಬಬೇಡಿ ಎಂದು ಹೇಳುತ್ತಾರೆ. ಇದು ಏಕೆಂದರೆ ನಿಮ್ಮ ಗೆಳೆಯನಿಗೆ ಹೊಟ್ಟೆಹುರಿಯಾಗುತ್ತದೆ ಮತ್ತು ನಿಮ್ಮನ್ನು ಸಿಲುಕಿಸಲು ಸರಿಯಾದ ಅವಕಾಶಕ್ಕೆ ಅವರು ಕಾಯುತ್ತಿರುತ್ತಾರೆ. ನಿಮ್ಮ ಹಳೆಯ ಶತ್ರುಗಳು ನಿಮ್ಮ ಆತ್ಮೀಯ ಗೆಳೆಯರಿಗಿಂತ ಉಪಯುಕ್ತವಾಗಿದ್ದಾರೆ. ಏಕೆಂದರೆ ಅವರಿಗೆ ಅಧಿಕ ಸಾಬೀತುಪಡಿಸಬೇಕಾಗಿರುತ್ತದೆ. ಅವರು ನಿಮ್ಮ ನಂಬಿಕೆ ಮತ್ತು ಗೌರವವನ್ನು ಗಳಿಸಲು ಅಧಿಕ ಕಷ್ಟ ಪಡುತ್ತಾರೆ. ಇದರಿಂದಲೇ ಅವರು ಒಳ್ಳೆಯ ಸಹೋದ್ಯೋಗಿ(colleague) ಮತ್ತು ಉದ್ಯೋಗಿ(employee) ಆಗುತ್ತಾರೆ. ನಾವು ನಮ್ಮ ಶತ್ರುಗಳಿಗಿಂತ ಅಧಿಕ ಆತ್ಮೀಯ ಗೆಳೆಯರಿಗೆ ಹೆದರಬೇಕು ಎಂದು ಲೇಖಕರು ಹೇಳುತ್ತಾರೆ.
ಜನಗಳಿಗೆ ನಮ್ಮ ಉದ್ದೇಶಗಳ ಬಗ್ಗೆ ತಿಳಿಸಬಾರದೆಂದು 3 ನೇ ನಿಯಮ ತಿಳಿಸುತ್ತದೆ. ನಿಮ್ಮ ಕ್ರಮ(actions) ಅವುಗಳನ್ನು ತೋರಿಸಬಹುದು. ಆದರೂ ಅದರ ಬಗ್ಗೆ ನೀವೇ ತಿಳಿಸಬೇಡಿ. ನೀವು ಜನಗಳಿಗೆ ಬೇರೆ ಮಾರ್ಗದಲ್ಲಿ ಹೋಗುತ್ತಿರುವಿರಾ ಎಂಬ ಸುಳ್ಳು ಸುದ್ದಿಯನ್ನು ತಿಳಿಸಬಹುದು. ಇದರಿಂದ ಅವರು ಅದರಲ್ಲೇ ಇರುತ್ತಾರೆ. ಅವರಿಗೆ ನಿಮ್ಮ ಉದ್ದೇಶಗಳ ಬಗ್ಗೆ ತಿಳಿಯುವಷ್ಟರಲ್ಲಿ ತುಂಬಾ ತಡವಾಗಿರುತ್ತದೆ ಮತ್ತು ಅವರು ಏನನ್ನು ಮಾಡಲು ಸಾಧ್ಯವಾಗುವುದಿಲ್ಲ.
ಇದನ್ನು ಓದಿ: 99.6% ಏಕೆ ಎಂದಿಗೂ ಶ್ರೀಮಂತರಾಗುವುದಿಲ್ಲಎಷ್ಟು ಬೇಕೋ ಅದಕ್ಕಿಂತ ಅಧಿಕ ಮಾತನಾಡಬೇಡಿ, ಸಾಧ್ಯವಾದರೆ ಕಡಿಮೆ ಮಾತನಾಡಿ. ಅಧಿಕ ಮಾತನಾಡಿ ನೀವು ನಿಮ್ಮ ಮೇಲಿನ ಟೀಕೆ(criticism) ಮತ್ತು ವಿಚಾರಣೆಯನ್ನು(interrogation) ತರುತ್ತೀರಾ ಮತ್ತು ಮಾತನಾಡಬಾರದ ವಿಷಯವನ್ನು ಮಾತನಾಡುತ್ತೀರಾ.
"powerful people say less, they keep things vague and open ended"
ಶಕ್ತಿಯುತ ಜನಗಳು ಕಡಿಮೆ ಮಾತನಾಡುತ್ತಾರೆ. ಅವರು ವಸ್ತುಗಳನ್ನು ಅಸ್ಪಷ್ಟವಾಗಿ ಇಡುತ್ತಾರೆ.
ಖ್ಯಾತಿಯು ಒಬ್ಬ ವ್ಯಕ್ತಿಯನ್ನು ಬೆಳೆಸಬಹುದು ಇಲ್ಲ ಮುಳುಗಿಸಬಹುದು. ಮನುಷ್ಯನ ಶಕ್ತಿಯು ಆತನ ಖ್ಯಾತಿಯ ಮೇಲೆ ನಿಂತಿದೆ. ನೀವು ಅಧಿಕ ಪ್ರಸಿದ್ಧವಿದ್ದರೆ ಅಧಿಕ ಗಟ್ಟಿ ಇರುತ್ತೀರಾ, ಇಲ್ಲದಿದ್ದರೆ ಜನಗಳ ಬಲೆಗೆ ಬೀಳುತ್ತೀರಾ ಮತ್ತು ನಿಮ್ಮ ಮೇಲೆ ದಾಳಿ ಮಾಡಲು ಆಯ್ಕೆಯನ್ನು ನೀಡುತ್ತೀರಾ. ನೀವು ಯಾವುದೇ ಸಮಸ್ಯೆಯ ಬಗ್ಗೆ ಗುರುತಿಸಿದರೆ ಅದು ನಿಮಗೆ ಪರಿಣಾಮ ಬೀರುವ ಮೊದಲೇ ಅದನ್ನು ಪತ್ತೆ ಮಾಡಿ. ನಿಮ್ಮ ಶತ್ರುಗಳ ದೌರ್ಬಲ್ಯಗಳ(weakness) ಬಗ್ಗೆ ತಿಳಿದುಕೊಂಡು ಅವರ ಖ್ಯಾತಿಯನ್ನು ನಾಶ ಮಾಡಿ.
ಇದನ್ನು ಓದಿ: ಪೂರ್ ಚಾರ್ಲಿಸ್ ಆಲಮನಕ್ ಪುಸ್ತಕದ ಸಾರಾಂಶನಿಮ್ಮ ಖ್ಯಾತಿಯು ಎಷ್ಟು ಮುಖ್ಯವೋ, ಜನರು ನಿಮ್ಮನ್ನು ಹೇಗೆ ನೋಡುತ್ತಾರೆ ಎಂಬುದು ಅಷ್ಟೇ ಮುಖ್ಯವಾಗಿದೆ. ನೀವು ಎಲ್ಲರೊಂದಿಗೆ ಬೇರೆತು ಇರಬಾರದು ಎಂದು ಲೇಖಕರು ಹೇಳುತ್ತಾರೆ. ನಿಮ್ಮನ್ನು ಯಾವ ರೀತಿ ತೋರಿಸುತ್ತೀರಾ ಮತ್ತು ಜನರ ಗಮನಕ್ಕೆ(attention) ಹೇಗೆ ಬರುತ್ತೀರಾ ಎಂಬುದು ನಿಮ್ಮ ಮೇಲೆ ನಿಂತಿದೆ. ಅದಕ್ಕಾಗಿ ಏನಾದರೂ ದೊಡ್ಡದನ್ನು ಮಾಡಬೇಕಿದ್ದರೆ ಮಾಡಿ. ನಿಮ್ಮ ಕೆಲವು ವಿಷಯಗಳು ರಹಸ್ಯವಾಗಿ ಇರಲಿ.
ನೀವು ಇತರರಿಂದ ಕೆಲಸ ಮಾಡಿಸಬಹುದು. ಏಕೆಂದರೆ ಜನಗಳ ಹತ್ತಿರ ಜ್ಞಾನ(knowledge), ಪ್ರತಿಭೆ(talent), ಬುದ್ಧಿವಂತಿಕೆ(wisdom) ಮತ್ತು ಕೌಶಲ್ಯಗಳು(skill) ಇರುತ್ತವೆ. ನಾವು ಇತರ ಜನರಿಂದ ಸಂಪೂರ್ಣ ಅನುಕೂಲ ತೆಗೆದುಕೊಳ್ಳಬೇಕೆಂದು ಲೇಖಕರು ಹೇಳುತ್ತಾರೆ. ಇತರರು ಮಾಡುವ ಕೆಲಸವನ್ನು ನಾವು ಮಾಡಬಾರದು. ಇತರರಿಂದ ಕೆಲಸ ಮಾಡಿಸಿ ನೀವು ನಿಮ್ಮ ಸಮಯವನ್ನು ಉಳಿಸುತ್ತೀರಿ ಮತ್ತು ಅಧಿಕ ಸಮರ್ಥ(efficient) ಕೂಡ ಆಗುತ್ತೀರಾ. ಆದರೆ ನೀವು ಆ ಕೆಲಸದ ಕ್ರೆಡಿಟ್ ತೆಗೆದುಕೊಳ್ಳಲು ಮರೆಯದಿರಿ.
ಇದನ್ನು ಓದಿ: ಥಿಂಕ್ ಮತ್ತು ಗ್ರೋ ರಿಚ್ ಪುಸ್ತಕದ ಸಾರಾಂಶಇತರರಿಂದ ಕೆಲಸ ಮಾಡಿಸಿ ಅದರ ನಿಯಂತ್ರಣವನ್ನು ನೀವು ತೆಗೆದುಕೊಳ್ಳಿ. ನೀವು ಜನಗಳ ಹತ್ತಿರ ಹೋಗಬೇಡಿ, ಬದಲಿಗೆ ಜನಗಳು ನಿಮ್ಮ ಹತ್ತಿರ ಬರುವಂತೆ ಮಾಡಿ. ನೀವು ನಿಮ್ಮ ಪ್ರಭಾವ(influence) ಮತ್ತು ಶಕ್ತಿಯನ್ನು ಬಳಸಿಕೊಂಡು ಸನ್ನಿವೇಶವನ್ನು ನಿಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು.
ನಿಮಗೆ ವಾದದಿಂದ ಸಿಕ್ಕ ಗೆಲವು ಶೂನ್ಯಕ್ಕೆ ಸಮವಾಗಿದೆ. ನೀವು ಇತರರನ್ನು ಮನವರಿಕೆ(convince) ಮಾಡಲು ನಿಮ್ಮ ಮಾತಿನ ಬದಲಾಗಿ ಕ್ರಮದ ಮೇಲೆ ಗಮನಹರಿಸಬೇಕು. ವಾದ ಮಾಡುವುದು ನಮ್ಮ ಶಕ್ತಿಯನ್ನು ತೋರಿಸಲು ಇರುವ ಸರಿಯಾದ ಮಾರ್ಗವಲ್ಲ. ನೀವು ಕೇವಲ ನಿಮ್ಮ ಕೆಲಸದಿಂದ ಇತರರನ್ನು ಪ್ರಭಾವಿತಗೊಳಿಸಬೇಕು.
ನೀವು ಸಂತೋಷ(happy) ಮತ್ತು ಅದೃಷ್ಟವಂತ(fortunate) ಜನಗಳಿಂದ ಸುತ್ತುವರೆದಿರಿ ಎಂದು ಲೇಖಕರು ಹೇಳುತ್ತಾರೆ. ಇದರಿಂದಲೇ ನೀವು ನಿಮ್ಮ ಸಂತೋಷ ಮತ್ತು ಯಶಸ್ಸನ್ನು ಪೋಷಿಸುತ್ತೀರಾ(cultivate). ನೀವು ಶೋಚನೀಯ(miserable) ಜನಗಳಿಂದ ಸುತ್ತುವರೆದಿದ್ದರೆ ಅವರ ದುಃಖವನ್ನು ನೀವು ತೆಗೆದುಕೊಳ್ಳಬಹುದು. ಇತರರ ಸಮಸ್ಯೆಯಲ್ಲಿ ನಿಮ್ಮನ್ನು ಎಳೆದುಕೊಳ್ಳುವುದು ಸುಲಭವಾಗಿದೆ. ಹೀಗಾಗಿ ಅದನ್ನು ನಿರ್ಲಕ್ಷಿಸುವುದೇ ಉತ್ತಮವಾಗಿದೆ.
ಇದನ್ನು ಓದಿ: ಜನರು ಇಲ್ಲ ಎನ್ನದಂತ ಆಫರ್ ನೀಡುವುದು ಹೇಗೆ?ಜನಗಳಲ್ಲಿ ನಿಮ್ಮ ಅವಲಂಬನೆಯನ್ನು ನಿರ್ವಹಿಸುವ ಮೂಲಕವೇ ನೀವು ಶಕ್ತಿಯುತ ಮತ್ತು ಸ್ವತಂತ್ರವನ್ನು ಸಾಧಿಸಬಹುದು. ಇತರರಿಗೆ ನಿಮ್ಮ ಸಹಾಯದ ಅವಶ್ಯಕತೆ ಇಲ್ಲದಿದ್ದರೆ ಅವರು ಸ್ವಯಂ ಆಗಿ ತುಂಬಾ ಶಕ್ತಿಶಾಲಿಯಾಗುತ್ತಾರೆ. ನಿಮ್ಮ ಜೊತೆ ಇರುವವರಿಗೆ ಎಲ್ಲವನ್ನು ಕಲಿಸಬೇಡಿ ಮತ್ತು ಎಲ್ಲಾದಕ್ಕೂ ಕರೆಯಬೇಡಿ.
ಒಮ್ಮೆ ಪ್ರಾಮಾಣಿಕವಾಗಿ ಮಾಡುವ ಕೆಲಸ ಅನೇಕ ಅಪ್ರಾಮಾಣಿಕ(dishonest) ಕೆಲಸಗಳನ್ನು ಮರೆಮಾಡುತ್ತದೆ. ತೆರೆದ ಹೃದಯದಿಂದ ನೀವು ಅನೇಕರನ್ನು ಒಪ್ಪಿಸಬಹುದು. ಅಂದರೆ ನೀವು ಹಲವು ಬಾರಿ ಅಪ್ರಾಮಾಣಿಕನಾಗುತ್ತೀರಾ. ಆದರೂ ಒಮ್ಮೆ ಪ್ರಾಮಾಣಿಕನಾದರೆ ನೀವು ಜನಗಳ ಪ್ರಾಮಾಣಿಕತೆಯನ್ನು ಗಳಿಸಬಹುದು.
ಸಹಾಯ ಕೇಳುವ ಅವಶ್ಯಕತೆ ನಿಮಗೆ ಎಂದಾದರೂ ಬಂದೇ ಬಂದಿರುತ್ತದೆ. ನೀವು ಆ ರೀತಿ ಸಹಾಯ ಕೇಳುವಾಗ ನೀವು ಮಾಡಿದ ಒಳ್ಳೆಯ ಕೆಲಸಗಳ ಪ್ರಯೋಜನವನ್ನು ತೆಗೆದುಕೊಳ್ಳಬೇಡಿ. ಬದಲಿಗೆ ಇತರ ವ್ಯಕ್ತಿಗೂ ಪ್ರಯೋಜನ ಕಾಣುವ ವಿಷಯವನ್ನು ತಿಳಿಸಿ. ಇದರಿಂದ ಜನರು ಸಹಾಯ ಮಾಡಲು ಒಪ್ಪುತ್ತಾರೆ.
ಇದನ್ನು ಓದಿ: 21 ಸಣ್ಣ ಅಭ್ಯಾಸದಿಂದ ವಾರದಲ್ಲಿ 21+ ಗಂಟೆಗಳನ್ನು ಉಳಿಸಿನೀವು ನಿಮ್ಮ ವೈರಿಗಳ ಬಗ್ಗೆ ತಿಳಿದುಕೊಂಡಿರಬೇಕು. ನಿಮಗೆ ಅವರ ಶಕ್ತಿ(strength) ಮತ್ತು ದೌರ್ಬಲ್ಯದ(weakness) ಬಗ್ಗೆ ತಿಳಿದಿರಬೇಕು. ಇದಕ್ಕಾಗಿ ನೀವು ಪತ್ತೇದಾರಿ(spy) ರೀತಿ ಆಗಿ. ಜನರಿಂದ ಮಾಹಿತಿಗಳನ್ನು ಕಳೆ ಹಾಕುವುದನ್ನು ಕಲಿಯಿರಿ. ಜನರಿಗೆ ಸರಿಯಾದ ಪ್ರೆಶ್ನೆ, ಸರಿಯಾದ ಸಮಯದಲ್ಲಿ ಕೇಳುವುದನ್ನು ಕಲಿಯಿರಿ. ನೀವು ಇತರರಿಗೆ ನಿಮ್ಮ ಬಗ್ಗೆ ತಿಳಿಸಲು ಬಯಸಿಲ್ಲದಿದ್ದರೆ ದಾರಿ ತಪ್ಪುಸುವ ರೀತಿ ಮಾತನಾಡಿ. ಸಾಮಾಜಿಕ ಸಂವಹನವನ್ನು(social interaction) ಪತ್ತೇದಾರಿ ಮಾಡುವ ಅವಕಾಶದ ರೀತಿ ಬಳಸಿಕೊಳ್ಳಿ.
ನೀವು ನಿಮ್ಮ ವೈರಿ ಪೂರ್ತಿಯಾಗಿ ಸರ್ವನಾಶ ಆಗಿರುವುದನ್ನು ಖಚಿತ ಮಾಡಿಕೊಳ್ಳಿ. ಇಲ್ಲದಿದ್ದರೆ ಅವರು ಮತ್ತೊಮ್ಮೆ ಎದ್ದು ಸೇಡು ತೀರಿಸಿಕೊಳ್ಳಬಹುದು(revenge). ನೀವು ಈ ರೀತಿಯ ಸೇಡಿನಿಂದ ಉಳಿದುಕೊಳ್ಳಬೇಕು. ನೀವೂ ಓಮ್ಮೆ ನಿಮ್ಮ ವೈರಿಯನ್ನು ಸೋಲಿಸಿದರೆ ಆತನು ಮತ್ತೆ ಏಳದಂತೆ ಮಾಡಿ.
ಇದನ್ನು ಓದಿ: ಬದುಕಿನಲ್ಲಿ ನಿಶ್ಚಲತೆಯನ್ನು ಸಾಧಿಸುವುದು ಹೇಗೆ?ನಿಗೂಢತೆಯ(mysterious) ಬಗ್ಗೆ ಅನೇಕ ಮಾತನಾಡಬಹುದು. ನೀವು ಇತರರಿಗೆ ಅಧಿಕ ಕಾಣುವುದು ಇಲ್ಲ, ನಿಮ್ಮ ಬಗ್ಗೆ ಅಧಿಕ ಮಾತನಾಡುತ್ತಿದರೆ, ನೀವು ಸಾಮಾನ್ಯರಾಗುತ್ತೀರಾ. ಯಾರಾದರೂ ಸುಲಭವಾಗಿ ನಿಮ್ಮ ಹತ್ತಿರ ತಲುಪಬಹುದು. ಸಮಾಜದಿಂದ ದೂರವಿರಿ, ಆಗ ಸಮಾಜ ನಿಮ್ಮ ಮೇಲೆ ಕುತೂಹಲಕಾರಿಯಾಗುತ್ತದೆ(curious) ಮತ್ತು ಮುಂದೆ ಏನು ಮಾಡಲಿದ್ದೀರಿ ಎಂಬುದರ ಬಗ್ಗೆ ಯೋಚಿಸುತ್ತದೆ.
ಮನುಷ್ಯನಿಗೆ ಇತರ ಕೆಲಸದಲ್ಲಿ ತೊಡಗುವ ಆಸೆ ಇರುತ್ತದೆ. ನಿಮ್ಮ ಊಹಿಸುವಿಕೆ ನಿಮ್ಮನ್ನು ನಿಯಂತ್ರಣ ಮಾಡಬಹುದೆಂದು ತಿಳಿಸುತ್ತದೆ. ನಾವು ಮನುಷ್ಯರು ಭವಿಷ್ಯದ ವಿಷಯವನ್ನು ಊಹಿಸುತ್ತೇವೆ(predict). ಆದರೆ ನೀವು ಇತರರು ನಿಮ್ಮ ಭವಿಷ್ಯದ ಬಗ್ಗೆ ಊಹಿಸಲು ಸಾಧ್ಯವಾಗದಂತೆ ಮಾಡಿದರೆ ಅವರು ಆಶ್ಚರ್ಯಗೊಳ್ಳುತ್ತಾರೆ. ಇತರರಿಗೆ ನಿಮ್ಮ ಯೋಜನೆಗಳ ಬಗ್ಗೆ ತಿಳಿದಿಲ್ಲದಿದ್ದರೆ ಅವರು ಗಾಬರಿಯಾಗಿ ಇರುತ್ತಾರೆ.
ಇದನ್ನು ಓದಿ: One Up On Wall Street ಪುಸ್ತಕದ ಸಾರಾಂಶ Part- 1ನಿಮ್ಮ ಸುತ್ತಲೂ ಪ್ರತ್ಯೇಕಿಸುವಿಕೆ ರೀತಿಯ ಕೋಟೆ ಮಾಡಿಕೊಳ್ಳುವುದು ಸುರಕ್ಷಿತ ಅನುಭವ ನೀಡುತ್ತದೆ. ಆದರೆ ನೀವು ಈ ರೀತಿ ತೋರಿಸಿಕೊಳ್ಳುವುದು(portrait) ಅಪಾಯಕಾರಿಯಾಗಿದೆ. ಇದು ನಿಮ್ಮ ಹತ್ತಿರ ಮಾಹಿತಿ ಕಡಿಮೆ ಇದೆ ಎನ್ನುವಂತೆ ತೋರಿಸುತ್ತದೆ. ಇದು ಇತರರು ನಿಮ್ಮ ಮೇಲೆ ದಾಳಿ ಮಾಡಲು ಒಂದು ದಾರಿ ನೀಡಿದಂತಾಗಿದೆ. ನೀವು ನಿಮ್ಮ ಜನಗಳಿಂದ ಸುತ್ತುವರೆದಿರಿ. ಇದರಿಂದ ನಿಮ್ಮ ಮತ್ತು ನಿಮ್ಮ ಶತ್ರುವಿನ ಮುಂದೆ ಹಲವಾರು ಜನರು ಇರುತ್ತಾರೆ.
ನೀವು ನಿಮ್ಮೊಂದಿಗೆ ಕೆಲಸ ಮಾಡುವವರ ಬಗ್ಗೆ ತಿಳಿದುಕೊಳ್ಳುವುದು ತುಂಬಾನೇ ಮುಖ್ಯವಾಗಿದೆ. ಇದು ನಿಮಗೆ ಶಕ್ತಿಯನ್ನು ನೀಡುತ್ತದೆ. ಪ್ರತಿಯೊಬ್ಬರು ವಿಭಿನ್ನವಾಗಿರುತ್ತಾರೆ ಮತ್ತು ನೀವು ಎಲ್ಲರ ಮೇಲೆ ಒಂದೇ ತಂತ್ರವನ್ನು(strategy) ಬಳಸಲು ಸಾಧ್ಯವಿಲ್ಲ. ಮೋಸವಾದ ನಂತರ ಸೇಡು ತೀರಿಸಿಕೊಳ್ಳಲು ಬಯಸುವ ಜನಗಳಿಂದ ದೂರವಿರಿ ಎಂದು ಲೇಖಕರು ಹೇಳುತ್ತಾರೆ. ನೀವು ಯಾವುದೇ ಕ್ರಮ ತೆಗೆದುಕೊಳ್ಳುವ ಮೊದಲು ಯಾರೊಂದಿಗೆ ಹೋರಾಡುತ್ತಿರುವಿರಿ ಎಂಬುದನ್ನು ತಿಳಿದುಕೊಳ್ಳಿ.
ನಿಮ್ಮ ಸ್ವತಂತ್ರವನ್ನು ಶಕ್ತಿಯ ರೀತಿ ನೋಡಬೇಕೆ ಹೊರತು ದೌರ್ಬಲ್ಯವಾಗಲ್ಲ. ಯಾರೊಂದಿಗೂ ಬದ್ಧನಾಗಬೇಡಿ(commit). ಯಾವಾಗಲೂ ನಿಮ್ಮ ಮತ್ತು ನಿಮ್ಮ ಗುರಿಗಾಗಿ ನಿಂತಿರಿ. ಸ್ವತಂತ್ರವಾಗಿ ಇರುವುದರಿಂದ ನೀವು ಶಕ್ತಿಯುತವಾಗಿ ಇರುತ್ತೀರ. ಜನರು ನಿಮ್ಮ ಹತ್ತಿರ ಬರುತ್ತಾರೆ, ಜಗಳವಾಡಲು ಬಯಸುತ್ತಾರೆ.
ನಾವೆಲ್ಲರೂ ಬುದ್ಧಿವಂತ ಅನುಭವ ಮಾಡಿಕೊಳ್ಳಲು ಬಯಸುತ್ತೇವೆ. ನೀವು ಮೂರ್ಖನಾಗಿ(stupid) ಹೇಳಿದ ಇಲ್ಲ ಮಾಡಿದ ವಿಷಯಕ್ಕಿಂತ ಕೆಟ್ಟ ಅನುಭವ ಬೇರೊಂದಿಲ್ಲ. ನೀವು ತೆಗೆದುಕೊಳ್ಳುವ ನಿರ್ಧಾರವನ್ನು ಬುದ್ಧಿವಂತಿಕೆಯಿಂದ ಆರಿಸಿಕೊಳ್ಳಿ ಎಂದು ಲೇಖಕರು ಹೇಳುತ್ತಾರೆ. ನಿಮ್ಮ ವೈರಿಯ ಬಗ್ಗೆ ಯೋಚಿಸಿ ಮತ್ತು ಅವರು ನಿಮಗಿಂತ ಚುರುಕಾಗಿದ್ದಾರೆ(smarter) ಎಂಬುದನ್ನು ಸಾಬೀತುಪಡಿಸಿ. ಇದರಿಂದ ಅವರಿಗೆ ಆತ್ಮವಿಶ್ವಾಸ(confidence) ಬರುತ್ತದೆ ಮತ್ತು ಅವರು ನಿಮ್ಮ ಮೇಲೆ ಶಂಕಿತವಿರುವುದಿಲ್ಲ(suspect).
ಇದನ್ನು ಓದಿ: ಹಣವನ್ನು ನಿರ್ವಹಿಸಲು ಜಪಾನಿಯರ ರಹಸ್ಯನೀವು ದುರ್ಬಲ ಭಾಗದ ಕಡೆ ಇದ್ದರೆ ಹೊಡೆದಾಟ(fighting) ಮಾಡಲು ಯಾವಾಗಲೂ ಮೋಹಿತರಾಗಿರುತ್ತೀರಾ(tempt). ಈ ರೀತಿಯ ಸಮಯದಲ್ಲಿ ಶರಣಾಗತಿಯಾಗಲು(surrender) ಲೇಖಕರು ಹೇಳುತ್ತಾರೆ. ಇದರಿಂದ ನೀವು ಸರಿಯಾಗಲು ಸಮಯ ನೀಡುತ್ತೀರಾ. ಇದರಿಂದ ನಿಮ್ಮ ಶತ್ರುವಿನ ಶಕ್ತಿ ಕುಗ್ಗುತ್ತದೆ ಮತ್ತು ಅವರು ಕಳೆದ ಸಮಯವನ್ನು ನೆನೆಪಿಸಿಕೊಂಡು ಕೆರಳುತ್ತಾರೆ(irritate). ಅವರು ಎದ್ದು ನಿಮ್ಮನ್ನು ತುಳಿಯುವ ಮೊದಲು ನೀವೇ ಎದ್ದು ದೂರ ಹೋಗಿ. ಈ ಆಟವನ್ನು ಅನೇಕರು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ.
ನಿಮಗೆ ಹಣ ಇರುವ ಗಣಿ(mine) ಸಿಕ್ಕು ಇನ್ನಷ್ಟು ಒಳಗೆ ಗಣಿಗಾರಿಕೆ ಮಾಡುತ್ತಿದ್ದರೆ ಇನ್ನಷ್ಟು ಹಣ ಸಿಗುತ್ತದೆ. ಅದೇ ನೀವು ಕಡಿಮೆ ಹಣ ಇರುವ ಅನೇಕ ಗಣಿಗಳಿಗೆ ಹೋದರೆ ಸ್ವಲ್ಪ ಹಣ ಸಿಗುತ್ತದೆ. ನಿಮಗೆ ಶಕ್ತಿಯ ಯಾವುದಾದರು ಮೂಲ ತಿಳಿದರೆ ಅದನ್ನು ಬಿಟ್ಟು ಕೊಡಬೇಡಿ, ಅದರ ಹಿಂದೆ ಓಡಿ.
ಎಲ್ಲವೂ ಶಕ್ತಿ ಮತ್ತು ರಾಜಕೀಯ ಕೌಶಲ್ಯದ ಮೇಲೆ ನಿಂತಿದೆ. ನೀವು ಪರೋಕ್ಷ ಕಲೆಯಲ್ಲಿ(art of indirection) ನಿಪುಣನಾಗಬೇಕು. ಇದನ್ನು ನೀವು ನಿಪುಣನಾದರೆ ಶಕ್ತಿಯು ಸಿಗುವುದರಲ್ಲಿ ಅನುಮಾನವಿಲ್ಲ.
ಇದನ್ನು ಓದಿ: ಆರಂಭಿಕ ಆರ್ಥಿಕ ಸ್ವತಂತ್ರಕ್ಕಾಗಿ 5 ನಿಯಮಗಳುಸಮಾಜ ನಿಮ್ಮ ಮೇಲೆ ಕೆಲವು ನಿರೀಕ್ಷೆಗಳನ್ನು(expectations) ಹಾಕಲು ಬಯಸುತ್ತದೆ. ಆದರೆ ನೀವು ಇದನ್ನು ಸ್ವೀಕರಿಸುವ ಅವಶ್ಯಕತೆ ಇಲ್ಲ. ಏಕೆಂದರೆ ನಿಮ್ಮ ಹತ್ತಿರ ಮರುಸೃಷ್ಟಿಸಿಕೊಳ್ಳುವಷ್ಟು ಶಕ್ತಿ ಇದೆ. ನೀವು ಏನು ಬೇಕೆಂದುಕೊಂಡಿದ್ದೀರೋ ಅದುವೇ ಆಗುತ್ತೀರಾ. ಬೇರೆಯವರು ಬಂದು ನಿಮ್ಮ ಜೀವನದಲ್ಲಿ ಏನು ಮಾಡಬೇಕೆಂಬ ಹಕ್ಕನ್ನು ನೀಡಬೇಡಿ. ನೀವು ಗಮನದ(attention) ಬೇಡಿಕೆ ಮಾಡುವ ಗಟ್ಟಿ ಮತ್ತು ಶಕ್ತಿಯುತ ವ್ಯಕ್ತಿಯಾಗಿರಬೇಕು.
ನೀವು ಒಬ್ಬ ಗೌರವಯುತ(respected) ಮತ್ತು ಒಳ್ಳೆಯ ನಡತೆ(well behaved) ಇರುವ ನಾಗರಿಕನಾಗಿ ಕಾಣಿಸಿಕೊಳ್ಳಬೇಕು. ನೀವು ಭ್ರಷ್ಟಾಚಾರದಲ್ಲಿ ತೊಡಗಿರುವಿರ ಎಂಬುದನ್ನು ತೋರಿಸಬೇಡಿ. ನಿಮ್ಮ ಈ ತೋರಿಕೆ ಮುಖ್ಯವಾಗಿದೆ. ನೀವು ನಿಮ್ಮ ಹೆಸರು ಮತ್ತು ಖ್ಯಾತಿಯನ್ನು(reputation) ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಬೇಕು. ಇತರರು ಅವರ ಕೆಟ್ಟ ಕೆಲಸದ ಬೈಗುಳ ತೆಗೆದುಕೊಳ್ಳಲಿ, ಆದರೆ ನೀವು ಎಲ್ಲರ ಮುಂದೆ ಕೆಟ್ಟವರಾಗಬೇಡಿ.
ಪ್ರತಿಯೊಬ್ಬರೂ ಅವರಿಗಿಂತ ದೊಡ್ಡದಿರುವ ವಿಷಯಗಳ ಜೊತೆ ಒಂದಾಗಲು ಬಯಸುತ್ತಾರೆ. ಜನರು ಒಂದು ವ್ಯಕ್ತಿ ಇಲ್ಲ ವಸ್ತುವನ್ನು ಫಾಲೋ ಮಾಡಲು ಯಾವಾಗಲೂ ಹುಡುಕುತ್ತಿರುತ್ತಾರೆ. ಆ ರೀತಿಯ ಜನಗಳನ್ನು ಗಳಿಸಲು ಅಧಿಕ ಭರವಸೆ ಮತ್ತು ನಂಬಿಕೆ ನೀಡುವ ವ್ಯಕ್ತಿಯಾಗಿರಿ. ಜನರು ನಿಮ್ಮನ್ನು ಫಾಲೋ ಮಾಡಲು ಹೊಸದಾದ ವಿಷಯಗಳನ್ನು ನೀಡುತ್ತಿರಿ. ನಿಮ್ಮ ಈ ಅನುಸರಿಸುವಿಕೆ ಮತ್ತು ನಂಬಿಕೆ(belief) ವ್ಯವಸ್ಥೆ ಅಧಿಕ ಶಕ್ತಿಯನ್ನು ನೀಡುತ್ತದೆ.
ಈ ನಿಯಮದಲ್ಲಿ ಯಾವಾಗಲೂ ಉದ್ದೇಶಪೂರ್ವಕ(intent) ಮತ್ತು ಆತ್ಮವಿಶ್ವಾಸದಿಂದ ಇರಲು ತಿಳಿಸಿದ್ದಾರೆ. ನೀವು ಅಸುರಕ್ಷಿತವಿದ್ದರೆ(unsecure) ಏನನ್ನು ಪ್ರಾರಂಭಿಸಬೇಡಿ. ಯಾವುದೇ ಅನುಮಾನ ನಿಮಗೆ ಫಲಿತಾಂಶವನ್ನು ನೀಡಲು ಸಾಧ್ಯವಿಲ್ಲ. ದಿಟ್ಟತನ(boldness) ನಿಮಗೆ ಅಧಿಕ ಶಕ್ತಿಯನ್ನು ನೀಡುತ್ತದೆ.
ಇದನ್ನು ಓದಿ: ಯಾರನ್ನಾದರೂ ತಕ್ಷಣವೇ ಓದುವುದು ಹೇಗೆ?ಯಾವುದೇ ಕ್ರಮದ ಪ್ರಾರಂಭದಿಂದ ಕೊನೆಯವರೆಗೆ ಯೋಜನೆ ಮಾಡಿ. ನಿಮ್ಮ ಗುರಿಯ ಬಗ್ಗೆ ಮೊದಲೇ ತಿಳಿದಿರಿ. ಇದರಿಂದ ನಿಮಗೆ ಬರಲಿರುವ ಸಮಸ್ಯೆಗಳ ಬಗ್ಗೆ ಅರಿವಾಗುತ್ತದೆ(realize). ಯೋಜನೆ(planning) ಮಾಡುವುದರಿಂದ ನೀವು ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಲು ತಯಾರಿರುತ್ತೀರಾ. ಯಾವುದೇ ವಿಷಯದಲ್ಲಿ ತಯಾರಿಯಿಲ್ಲದೆ ನುಗ್ಗಬೇಡಿ. ಯಾವಾಗಲೂ ಗುರಿ ಬಗ್ಗೆ ತಿಳಿದುಕೊಳ್ಳಿ ಮತ್ತು ಮುಂದಿನದನ್ನು ಯೋಚಿಸಿ.
ನೀವು ಮಾಡುತ್ತಿರುವ ಕೆಲಸವು ಎಷ್ಟೇ ಕಷ್ಟವಾಗಿದ್ದರು, ಅದರ ಫಲಿತಾಂಶವನ್ನು ಸುಲಭವಾಗಿ ಮುಗಿಸಿದಂತೆ ತೋರಿಸಿ. ಇದು ನೀವು ಸ್ವಲ್ಪ ಪರಿಶ್ರಮ ಹಾಕಿ ಏನನ್ನೆಲ್ಲಾ ಸಾಧಿಸಬಹುದೆಂಬುದು ನಿಮ್ಮ ಶಕ್ತಿಯನ್ನು ಹೆಚ್ಚಿಸುತ್ತದೆ. ಯಾರಾದರೂ ನೀವು ಅದನ್ನು ಹೇಗೆ ಮಾಡಿದಿರಿ ಎಂದು ಕೇಳಿದರೆ ಅದರ ಬಗ್ಗೆ ತಿಳಿಸಬೇಡಿ. ನಿಮ್ಮ ಆ ರಹಸ್ಯದ ಬಗ್ಗೆ ತಿಳಿಸಲೇಬೇಡಿ. ಜನರಿಗೆ ನಿಮ್ಮ ಫಲಿತಾಂಶದಿಂದ ಪ್ರಭಾವಿತರಾಗಲು ಬಿಡಿ.
ಜನರ ಜೊತೆ ಮಾತನಾಡುವಾಗ ಅವರ ಹತ್ತಿರ ಇನ್ನಷ್ಟು ಆಯ್ಕೆ ಇದೆ ಎಂಬುವ ಅನುಭವ ನೀಡಿ. ಅವರ ಕೈಯಲ್ಲಿ ನಿಯಂತ್ರಣವಿದೆ ಎಂಬುವಂತೆ ಮಾಡಿ. ಆದರೆ ನೀವೇ ನಿಯಮ ಮಾಡುತ್ತಿರುತ್ತೀರಿ. ನೀವು ಒಂದು ಆಯ್ಕೆಯನ್ನು ಎರಡು ಫಲಿತಾಂಶದಲ್ಲಿ ನೀಡಿದರು ನಿಮಗೆ ಉಪಯುಕ್ತವಾಗುತ್ತದೆ. ಏಕೆಂದರೆ ನಿಮ್ಮ ಶತ್ರುವಿಗೆ ಅದು ಆತನ ಆಯ್ಕೆ ಎನಿಸುತ್ತದೆ, ಇದುವೇ ನೀವು ಅಧಿಕಾರ(rule) ಮಾಡಲು ಕಾರಣವಾಗುತ್ತದೆ. ನೀವು ಅವರಿಗೆ 2 ಕೆಟ್ಟ ವಿಷಯಗಳಲ್ಲಿ ಒಂದನ್ನು ಆರಿಸಿಕೊಳ್ಳಲು ಆಯ್ಕೆ ನೀಡಿದ್ದೀರಾ ಎಂದು ಭಾವಿಸಿ.
ಇದನ್ನು ಓದಿ: ಆರ್ಥಿಕವಾಗಿ ಸ್ವತಂತ್ರಗೊಳಿಸುವ 14 ಸ್ವತ್ತುಗಳುಸತ್ಯವು ಅಧಿಕ ಆಕರ್ಷಿತವಾಗಿರುವುದಿಲ್ಲ. ಹೀಗಾಗಿ ಅನೇಕ ಬಾರಿ ಸತ್ಯವನ್ನು ನಿರ್ಲಕ್ಷಿಸುವುದು ಉತ್ತಮವಾಗಿದೆ. ಜನರಿಗೆ ಸತ್ಯವನ್ನು ಹೇಳುವುದು ಕೋಪ(anger) ಮತ್ತು ಸಂಕಟಕ್ಕೆ(distress) ಕಾರಣವಾಗಬಹುದು. ಹೀಗಾಗಿ ಒಂದು ಸುಳ್ಳು ಸತ್ಯವನ್ನು ಹೇಳುವುದು ಉತ್ತಮವಾಗಿದೆ. ಈ ರೀತಿಯಾಗಿ ಜನರ ಕಲ್ಪನೆಯಲ್ಲಿ ಆಟವಾಡುವುದನ್ನು ಕಲಿಯಿರಿ. ಅವರು ಏನನ್ನು ಕೇಳಲು ಬಯಸುತ್ತಾರೋ ಅದನ್ನೇ ಹೇಳಿ.
ಪ್ರತಿಯೊಬ್ಬರ ದೌರ್ಬಲ್ಯ(weakness) ಇರುತ್ತದೆ ಯಾವುದೇ ದೌರ್ಬಲ್ಯ ಇಲ್ಲದಿರುವುದು ಅಸಾಧ್ಯವಾಗಿದೆ. ಒಬ್ಬ ಶತ್ರುವನ್ನು ನಾಶ ಮಾಡಲು ಆತನ ದೌರ್ಬಲ್ಯ ಏನು ಎಂಬುದನ್ನು ತಿಳಿದುಕೊಳ್ಳುವುದಾಗಿದೆ. ನೀವು ಯಾರಾದರ ದೌರ್ಬಲ್ಯವನ್ನು ಕಂಡುಕೊಂಡರೆ, ಅದನ್ನು ನಿಮ್ಮ ಪರವಾಗಿ ಮತ್ತು ಅನುಕೂಲಕ್ಕಾಗಿ ಬಳಸಿಕೊಳ್ಳಿ.
"treat others how you want to be treated before", ಎಂಬ ಉಲ್ಲೇಖವಿದೆ. ಆದರೆ ಲೇಖಕರು ಇದಕ್ಕೂ ಮುಂದೆ ಹೋಗಿದರೆ ಅವರು, "you need to act exactly how you want to be treated", ಎನ್ನುತ್ತಾರೆ. ಅಂದರೆ ನೀವು ಯಾವ ರೀತಿ ನಡೆಸಿಕೊಳ್ಳಲು ಬಯಸುತ್ತೀರೋ ಆ ರೀತಿಯಾಗಿ ವರ್ತಿಸಿ(act). ನೀವು ಶಕ್ತಿಯುತ ಮತ್ತು ಆತ್ಮವಿಶ್ವಾಸದಿಂದ ಕೆಲಸ ಮಾಡಿದರೆ ಜನರು ನಿಮಗೆ ಗೌರವ(respect) ನೀಡುತ್ತಾರೆ. ಅದೇ ನೀವು ಅಸ್ಥಿರ(nervous) ಮತ್ತು ನಿಶಬ್ದವಾಗಿ ಕೆಲಸ ಮಾಡಿದರೆ ಜನರು ನಿಮಗೆ ಬೆಲೆಯನ್ನು ನೀಡುವುದಿಲ್ಲ. ನಿಮ್ಮ ಕೆಲಸದ ಗೌರವವನ್ನು ತೆಗೆದುಕೊಳ್ಳಿ.
ಇದನ್ನು ಓದಿ: "Secrets of the Millionaire Mind" ಪುಸ್ತಕದ ಸಾರಾಂಶಸಮಯವೇ ಎಲ್ಲಾ. ನೀವು ಯಾವಾಗಲೂ ತಾಳ್ಮೆಯಿಂದ(patience) ಇರಿ ಹೊರತು ಅವಸರದಲ್ಲಿ(rush) ಇರಬೇಡಿ. ಅವಸರದಲ್ಲಿ ಇರುವುದು ನೀವು ನಿಯಂತ್ರಣವನ್ನು ಕಳೆದುಕೊಂಡು ನಿಮ್ಮನ್ನು ನಿಮ್ಮ ಸಮಯವನ್ನು ನಿಯಂತ್ರಣ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ತಿಳಿಸುತ್ತದೆ. ಸರಿಯಾದ ಕ್ಷಣದ ಪತ್ತೇದಾರಿಯಾಗಿ(detective). ಸರಿ ಸಮಯ ಬರೋವರಿಗೂ ನಿಶಬ್ದವಾಗಿರಿ ಮತ್ತು ಸರಿ ಸಮಯ ಬಂದಾಗ ದಾಳಿ ಮಾಡಿ.
ನಿಮ್ಮ ಮುಂದೆ ಬರುವ ಯಾವುದೇ ರೀತಿಯ ಸಮಸ್ಯೆಯನ್ನು(problems) ನಿರ್ಲಕ್ಷಿಸಿ. ಅವು ನಿಮ್ಮ ಗಮನಕ್ಕಾಗಿ(attention) ಹಸಿದಿರುತ್ತವೆ. ಅದೇ ನೀವು ಆ ಸಮಸ್ಯೆಗಳ ಮೇಲೆ ಗಮನ ಹರಿಸಿದರೆ, ಅವು ಇನ್ನಷ್ಟು ದೊಡ್ಡದಾಗುತ್ತವೆ. ಇದೇ ರೀತಿಯಾಗಿ ನಿಮ್ಮ ಶತ್ರುವಿನ ಬಗ್ಗೆ ಯೋಚಿಸಿ. ಅವರ ಮೇಲೆ ಗಮನ ಹರಿಸಿ ಅವರ ಶಕ್ತಿಯನ್ನು ಹೆಚ್ಚಿಸುವ ಬದಲು ಅವರನ್ನು ನಿರ್ಲಕ್ಷಿಸಿ. ಅವರು ನಿಮ್ಮ ಗಮನಕ್ಕಾಗಿ ಹಸಿದಿರಲಿ. ಇದನ್ನು ನೀವು ಬೇಕಾಗಿರುವುದನ್ನು ಪಡೆಯಲು ಬಯಸಿರುವ ಎಲ್ಲಾ ವಸ್ತುಗಳಿಗೂ ಮಾಡಿ. ಜನಗಳಿಗೆ ಎಂದಿಗೂ ನೀವು ಹೊಂದಿರದನ್ನು ಗಳಿಸಲು ಬಯಸಿದ್ದೀರಾ ಎಂಬುದನ್ನು ತೋರಿಸಬೇಡಿ. ಇದರಿಂದ ನೀವು ಅಧಿಕ ಶಕ್ತಿಯುತ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತೀರಾ.
ಕೊನೆಯ ನಿಯಮದಲ್ಲಿ ನಿಮ್ಮ ತೋರಿಕೆ(apperence) ಎಲ್ಲಾ ಎಂದು ತಿಳಿಸಿದ್ದೇವು. ನಿಮ್ಮ ಸುತ್ತಮುತ್ತಲಿನ ಪರಿಸರವು ಕಾಲ್ಪನಿಕ(imaginary), ದೊಡ್ಡ ಹೇಳಿಕೆಗಳು(grand statements) ಮತ್ತು ದೊಡ್ಡ ಸಂಕೇತದಿಂದ(big gesture) ತುಂಬಿರಬೇಕು. ಜನಗಳಿಗೆ ದೊಡ್ಡ ದೊಡ್ಡದ್ದನ್ನು ತಿಳಿಸಿ ಆಕರ್ಷಿತಗೊಳಿಸಿ. ಈ ತಂತ್ರವೂ ನಿಮ್ಮ ನಿಜವಾದ ಗುರಿಯಿಂದ ಗಮನವನ್ನು ಹೊರತೆರೆಯಲು ಸಹಾಯ ಮಾಡುತ್ತದೆ.
ಇದನ್ನು ಓದಿ: ಯಶಸ್ವಿಯಾಗಲು ಸ್ವಯಂ ಶಿಸ್ತಿನ 4 ಅಭ್ಯಾಸಗಳುನೀವು ಕೇವಲ ನಿಮ್ಮ ಐಡಿಯಾಗಳನ್ನೇ ತಿಳಿಸುತ್ತಿದ್ದರೆ ಜನರು ನೀವು ಕೇವಲ ಅವರ ಗಮನವನ್ನು ಪಡೆಯಲು ಮತ್ತು ಅವರನ್ನು ಕೆಳಗಿಳಿಸಲು ಆ ರೀತಿ ಮಾಡುತ್ತಿದ್ದೀರಾ ಎಂದು ಭಾವಿಸುತ್ತಾರೆ. ಜನಸಮೂಹದ(crowd) ಒಳಗೆ ನೀವು ಮಿಶ್ರಣವಾಗುವುದು ಉತ್ತಮವಾಗಿದೆ. ಎಲ್ಲರ ಯೋಚನೆ ಮತ್ತು ಐಡಿಯಾವನ್ನು ತಿಳಿದುಕೊಳ್ಳಿ. ನಿಮ್ಮ ನಿಜವಾದ ಪಾತ್ರವನ್ನು(character) ಯಾರಿಗೂ ತೋರಿಸಬೇಡಿ.
ಯಾವಾಗಲೂ ಶಾಂತವಾಗಿರುವುದನ್ನು ಕಲಿಯಿರಿ. ಕೋಪ(anger) ಮತ್ತು ಭಾವನೆಯನ್ನು(emotion) ತೋರಿಸುವುದರಿಂದ ಬೇಕಾಗಿರುವ ಫಲಿತಾಂಶ ಸಿಗುವುದಿಲ್ಲ. ನಿಮ್ಮ ಶತ್ರು ಕೋಪ ಮಾಡಿಕೊಂಡರು ನೀವು ಶಾಂತವಾಗಿ ಮುಂದುವರೆದರೆ ನಿಮ್ಮ ಹತ್ತಿರ ಅಧಿಕ ಶಕ್ತಿ ಇರುತ್ತದೆ.
ಯಾವುದೇ ಮೌಲ್ಯ ಇರುವ ವಸ್ತುವಿಗೆ ಪಾವತಿಸಲೇಬೇಕು. ಯಾವುದೂ ಉಚಿತವಿದೆಯೋ ಅದಕ್ಕೆ ಮೌಲ್ಯ ಕಡಿಮೆ ಇರುತ್ತದೆ. ಉಚಿತ ನೀಡುವ ಯಾವುದೇ ವಸ್ತುವಿನಲ್ಲಿ ಏನಾದರೂ ಕೆಲಸ ಅಡಗಿರುತ್ತದೆ. ನೀವು ಪ್ರತಿಯೊಂದು ವಸ್ತುವಿನ ಬೆಲೆಯನ್ನು ಕಟ್ಟಿದರೆ ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಯಾವುದೇ ರೀತಿಯ ಮೋಸದಿಂದ ಉಳಿದುಕೊಳ್ಳುತ್ತೀರಾ. ನಿಮಗೆ ಉಚಿತವಾಗಿ ಸಿಗುವ ವಸ್ತುವಿನ ಪೂರ್ತಿ ಬೆಲೆಯನ್ನು ನೀವು ಕಟ್ಟಬೇಕು. ಇದು ನಿಮ್ಮ ತಾಕತ್ತನ್ನು ತಿಳಿಸುತ್ತದೆ.
ಶ್ರೀಮಂತ ತಂದೆ ತಾಯಿ ಇರುವುದು ಕಠಿಣವಿರಬಹುದು, ನೀವು ಅವರ ಮೇಲೆ ಅವಲಂಬಿತರಾಗಬೇಡಿ. ನೀವು ನಿಮ್ಮದೇ ಆದ ಗುರಿಯನ್ನು ಸಾಧಿಸಬೇಕು ಮತ್ತು ಸ್ವಂತ ಗುರುತನ್ನು(identity) ಸೃಷ್ಟಿ ಮಾಡಿಕೊಳ್ಳಬೇಕು. ನೀವು ಇದನ್ನು ಮಾಡಿದರೆ ನಿಮ್ಮ ತಾಕತ್ತು 10 ಪಟ್ಟು ಹೆಚ್ಚುತ್ತದೆ.
ಇದನ್ನು ಓದಿ: ಈ 12 ತತ್ವಗಳನ್ನು ಕಲಿಯಲು ಜನರು ಜೀವಿತಾವಧಿಯನ್ನು ತೆಗೆದುಕೊಳ್ಳುತ್ತಾರೆಶಕ್ತಿಯುತ, ಗಟ್ಟಿ ಮತ್ತು ಸೊಕ್ಕಿನ(arrogant) ವ್ಯಕ್ತಿಯು ಅನೇಕ ಸಂಕಟ(distress) ಮತ್ತು ನಾಟಕದ(drama) ಜೊತೆ ಹೋರಾಡುತ್ತಿರುತ್ತಾನೆ. ಈ ರೀತಿಯ ಜನಗಳಿಂದ ಪ್ರಭಾವಿತರಾಗುವುದು ಹಾನಿಕರವಾಗಿದೆ. ನೀವು ಈ ರೀತಿಯ ಜನರಿಂದ ದೂರ ಇರುವುದೇ ಉತ್ತಮವಾಗಿದೆ.
ಒತ್ತಾಯ(coercion) ಮತ್ತು ಮರಳು ಮಾಡುವುದರಲ್ಲಿ(seduction) ವ್ಯತ್ಯಾಸವಿದೆ. ಒತ್ತಾಯ ನಿಮ್ಮ ವಿರುದ್ಧವಾಗಿ ಕೆಲಸ ಮಾಡುತ್ತದೆ ಮತ್ತು ಮರಳು ಮಾಡುವುದು ಇತರರು ಮೋಸ ಹೋಗುವಂತೆ ಮಾಡುತ್ತದೆ. ನೀವು ಇತರರಿಗೆ ಮರಳು ಮಾಡಿದರೆ ಅವರು ನಿಮಗೆ ನಿಷ್ಠಾವಂತರಾಗಿ ಇರುತ್ತಾರೆ. ಮರಳು ಮಾಡಲು ಆ ವ್ಯಕ್ತಿಯ ದೌರ್ಬಲ್ಯದ ಬಗ್ಗೆ ತಿಳಿದುಕೊಳ್ಳುವುದಾಗಿದೆ. ಪ್ರತಿಯೊಬ್ಬರು ವಿಭಿನ್ನವಾಗಿರುತ್ತಾರೆ ಮತ್ತು ನೀವು ಇಬ್ಬರು ವ್ಯಕ್ತಿಗಳನ್ನು ಒಂದೇ ರೀತಿಯಲ್ಲಿ ಮರಳು ಮಾಡಲು ಸಾಧ್ಯವಿಲ್ಲ. ಅವರಿಗೆ ಏನು ಪ್ರಮುಖ ಮತ್ತು ಯಾವುದಕ್ಕೆ ಹೆದರುತ್ತಾರೆ ಎಂಬುದನ್ನು ತಿಳಿದುಕೊಳ್ಳಿ. ಒತ್ತಾಯ ಮಾಡುವುದು ಕೇವಲ ನಿಮ್ಮ ವೈರಿಗಳನ್ನು ಹುಟ್ಟಿಸುತ್ತಿದೆ.
ಕನ್ನಡಿ ಪರಿಣಾಮವನ್ನು(mirror effect) ಮೋಸ ಮಾಡಲು ಬಳಸಿಕೊಳ್ಳಿ. ಕನ್ನಡಿ ಪರಿಣಾಮವೆಂದರೆ, ನಿಮ್ಮ ಶತ್ರುವಿಗೆ ಅವರದೇ ವಾಸ್ತವ(reality) ತೋರಿಸುವುದಾಗಿದೆ. ನೀವು ನಿಮ್ಮ ವೈರಿಯ ರೀತಿ ಕೆಲಸ ಮಾಡಿದರೆ ಅವರು ಗೊಂದಲರಾಗುತ್ತಾರೆ(confuse) ಮತ್ತು ನಿಮ್ಮ ಉದ್ದೇಶಗಳನ್ನು(intensions) ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಇನ್ನೊಂದು ಕಡೆ ಈ ಕನ್ನಡಿ ಪರಿಣಾಮವನ್ನು ನಿಮ್ಮ ಶತ್ರುವನ್ನು ಅವಮಾನ(humiliation) ಮಾಡಲು ಸಹಾಯ ಮಾಡುತ್ತದೆ. ಇದರಿಂದ ಅವರು ಅವರ ಮತ್ತು ಅವರ ಕ್ರಮದ ಬಗ್ಗೆ ಗಮನ ಹರಿಸಬಹುದು. ಇದರಿಂದ ನೀವು ಅವರ ರೀತಿಯೇ ಮೌಲ್ಯಯುತ ಎಂದು ತಿಳಿಸುತ್ತೀರಾ ಮತ್ತು ಅವರು ಇದಕ್ಕೆ ಪ್ರಭಾವಿತರಾಗುತ್ತಾರೆ.
ಇದನ್ನು ಓದಿ: ಸಂಪತ್ತು, ಆರೋಗ್ಯ ಮತ್ತು ಯಶಸ್ಸಿಗೆ 6 ಬೆಳಗಿನ ಅಭ್ಯಾಸಗಳುಯಾವುದೇ ರೀತಿಯ ಸುಧಾರಣೆಗೆ ಬದಲಾಗುವುದು ಮುಖ್ಯವಾಗಿದೆ. ಆದರೆ ನಾವು ಮನುಷ್ಯರು ಅಭ್ಯಾಸ(habit) ಮತ್ತು ದಿನಚರಿಯಿಂದ(routine) ಯಶಸ್ಸನ್ನು ಪಡೆಯುತ್ತೇವೆ. ಅಧಿಕ ಬದಲಾಗುವುದು ಜನರಿಗೆ ಇಷ್ಟವಾಗದಿರಬಹುದು. ನೀವು ಈಗ ಹೊಸದಾಗಿ ಪ್ರಾರಂಭಿಸಿದರೆ ಇದರಿಂದ ಆಗುವ ಬದಲಾವಣೆಗಳಿಂದ ಉಳಿದುಕೊಳ್ಳಿ. ಮೊದಲಿಗೆ ಈ ಬದಲಾವಣೆಗೆ ಗೌರವ ನೀಡಿ ಮತ್ತು ಅದನ್ನು ನಿಧಾನವಾಗಿ ಅನ್ವಯಿಸಿಕೊಳ್ಳಿ. ಇದರಿಂದ ಜನರು ನಿಮಗೆ ಅಧಿಕ ಗೌರವ ನೀಡುತ್ತಾರೆ.
ಅನೇಕರು ಪರಿಪೂರ್ಣತೆಗಾಗಿ(perfection) ಕೆಲಸ ಮಾಡುತ್ತಿದ್ದೇವೆ ಎಂದು ಭಾವಿಸುತ್ತಾರೆ. ಆದರೆ ಅವರು ಅಲ್ಲಿಯವರೆಗೆ ತಲುಪುವುದಿಲ್ಲ. ನೀವು ಪರಿಪೂರ್ಣವಾಗಿ ತೋರಿಸಿಕೊಳ್ಳುತ್ತಿದ್ದರೆ ಅಪಾಯದಲ್ಲಿ ಸಿಲುಕಿಕೊಳ್ಳುತ್ತಿದ್ದೀರಾ. ಅಸೂಹೆ(envy) ಒಂದು ಸಾಮಾನ್ಯ ಲಕ್ಷಣವಾಗಿದ್ದು(common trait) ಜನರು ಅಪಾಯಕಾರಿ ಮಾರ್ಗದಲ್ಲಿ ನಡೆಯುವಂತೆ ಮಾಡುತ್ತದೆ. ನೀವು ಪರಿಪೂರ್ಣವಾಗಿ ಕಾಣಿಸಿಕೊಂಡರೆ ಜನರ ಹೊಟ್ಟೆಕಿಚ್ಚಿನ ಜೊತೆ ಹೋರಾಡಬೇಕು. ಅದೇ ನೀವು ನಿಮ್ಮ ದೌರ್ಬಲ್ಯವನ್ನು ತೋರಿಸಿದರೆ, ಜನರು ನಿಮ್ಮ ಹತ್ತಿರ ಸುಲಭವಾಗಿ ಬರುತ್ತಾರೆ. ಪರಿಪೂರ್ಣತೆ ಎನ್ನುವುದು ದೇವರು ಮತ್ತು ಸತ್ತಿರುವ ವ್ಯಕ್ತಿಗೆ ಸೂಕ್ತವಾಗಿದೆ.
ಪ್ರತಿಯೊಬ್ಬರೂ ಅಲ್ಪ ಯಶಸ್ಸನ್ನು ಇಷ್ಟಪಡುತ್ತಾರೆ. ಆದರೆ ಈ ಸಮಯದಲ್ಲಿ ಒಂದು ಹೆಜ್ಜೆ ಮುಂದಿರುವುದು ಮುಖ್ಯವಾಗಿದೆ. ನಿಮ್ಮ ಕೊನೆಯ ಗುರಿಯ(end goal) ಬಗ್ಗೆ ತಿಳಿದಿರುವುದು ತುಂಬಾನೇ ಮುಖ್ಯವಾಗಿದೆ ಎಂದು ಈ ಹಿಂದೆ ನಾವು ತಿಳಿಸಿದ್ದೇವು. ನೀವು ಒಮ್ಮೆ ಆ ಗುರಿ ತಲುಪಿದ ನಂತರ ನಿಂತುಬಿಡಿ. ನೀವು ವಸ್ತುವನ್ನು ಅಧಿಕ ಮುಂದೆ ತೆಗೆದುಕೊಂಡು ಹೋದರೆ ಅನೇಕ ವೈರಿಗಳು ಸೃಷ್ಟಿಯಾಗುತ್ತಾರೆ. ಅವರು ನಿಮ್ಮ ಯಶಸ್ಸಿಗೆ ಅಡ್ಡಿಯಾಗುತ್ತಾರೆ. ತಂತ್ರ(strategy) ಮತ್ತು ಯೋಜನೆಗೆ(planning) ಯಾವುದೇ ಬದಲಿ(substitute) ಇಲ್ಲ. ಒಂದು ಗುರಿಯನ್ನು ರಚಿಸಿ, ಅದನ್ನು ತಲುಪಿದ ನಂತರ ನಿಂತುಬಿಡಿ.
ಯಾವುದು ಒಂದೇ ರೀತಿಯಲ್ಲಿ ಇರುವುದಿಲ್ಲ ಮತ್ತು ಬದಲಾಗುತ್ತಿರುತ್ತದೆ. ಹೀಗಾಗಿ ನೀವು ನಿಮ್ಮ ಯೋಜನೆ ಬಗ್ಗೆ ತಿಳಿಸಬಾರದು. ನಿಮ್ಮ ಯೋಜನೆಗಳನ್ನು ತಿಳಿಸುವುದರಿಂದ ನೀವು ದುರ್ಬಲ ಆಗುತ್ತೀರಾ ಮತ್ತು ನಿಮ್ಮ ವೈರಿಗೆ ನಿಮ್ಮ ಮೇಲೆ ಹೇಗೆ ದಾಳಿ ಮಾಡಬೇಕೆಂದು ತಿಳಿಯುತ್ತದೆ. ನೀವು ಆರಾಮಾಗಿ(uncool) ಇದ್ದು ಯಾವುದೇ ಫಲಿತಾಂಶಕ್ಕೆ ಪ್ರತಿಕ್ರಿಯಿಸುವವರಾಗಿರಬೇಕು. ನೀವು ಸ್ಥಿರತೆಯ(stability) ಮೇಲೆ ನಿಲ್ಲಬೇಡಿ, ಏಕೆಂದರೆ ಯಾವುದು ಸ್ಥಿರವಿಲ್ಲ. ನೀವು ಆರಾಮಾದಾಯಕವಾಗಿರಿ(comfortable), ಆದರೆ ಅಧಿಕ ಆರಾಮಾದಾಯಕವಾಗಿರುವುದು ನಿಮ್ಮನ್ನು ದುರ್ಬಲ ಮಾಡುತ್ತದೆ.
(1) ನಿಮ್ಮ ಕಾಣಿಸಿಕೊಳ್ಳುವಿಕೆ ಖ್ಯಾತಿಯಾಗಿದೆ. (2) ಜನಗಳ ಬಗ್ಗೆ ಎಷ್ಟು ತಿಳಿಯಲು ಸಾಧ್ಯವೊ ತಿಳಿದುಕೊಳ್ಳಿ. ಅವರ ದೌರ್ಬಲ್ಯವನ್ನು ನಿಮಗಾಗಿ ಬಳಸಿಕೊಳ್ಳಿ. (3) ನೀವು ಜನರಿಂದ ಗೌರವ ಮತ್ತು ಬೇಡಿಕೆ ಬಯಸಿದರೆ ಅಧಿಕ ಜ್ಞಾನ ಹಂಚಬೇಡಿ. ನಿಗೂಢತೆಯ(mystery) ಶಕ್ತಿಯನ್ನು ಬಳಸಿ ಎಲ್ಲವನ್ನು ತಿಳಿಸಬೇಡಿ. (4) ಯಾವಾಗಲೂ ಒಂದು ಯೋಜನೆ ಮಾಡಿ ಕೊನೆಯ ಗುರಿಯ ಬಗ್ಗೆ ತಿಳಿದುಕೊಳ್ಳಿ. ನೀವು ತಯಾರಿಲ್ಲದಿದ್ದರೆ ಯಾವುದನ್ನು ಪ್ರಾರಂಭಿಸಬೇಡಿ. (5) ಅಧಿಕ ಪರಿಪೂರ್ಣವಾಗಿ ತೋರಿಸಿಕೊಳ್ಳಬೇಡಿ. ಸಾಮಾನ್ಯ ಮನುಷ್ಯನಾಗಿರಿ. (6) ವೈರಿಗಳು ಹತ್ತಿರ ಇರಲಿ ಮತ್ತು ಅವರ ಬಗ್ಗೆ ಪೂರ್ತಿಯಾಗಿ ತಿಳಿದುಕೊಂಡಿರಿ. ಅಧಿಕ ದುರಾಸೆ(greedy) ಬೇಡ ಮತ್ತು ಯೋಜನೆಗೆ ಅಂಟಿಕೊಂಡಿರಿ.
ಈ 48 ನಿಯಮವನ್ನು ನೀವು ನಿಮ್ಮ ಬದುಕು, ಉದ್ಯೋಗ, ಕಾರ್ಪೊರೇಟ್ ಮತ್ತು ವ್ಯಾಪಾರದಲ್ಲಿ ಬಳಸುವಿರಾ ಎಂದು ನಂಬುತ್ತೇನೆ.
ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.
Explore all our Posts by categories.
Info Mind 7307
Info Mind 1002
Info Mind 1235
See all comments...