ಇವತ್ತು ನಾವು ನೋಡುವ ಸಿನಿಮಾ 2018ರಲ್ಲಿ ರಿಲೀಸ್ ಆದ ದಿ ಫಾರ್ಮ್. ಈ ಕಥೆಯ ಪ್ರಾರಂಭದಲ್ಲಿ ಅಲೆಕ್ಸ್ ಮತ್ತು ನೋರಾ ಕಾರಿನಲ್ಲಿ ಹೋಗುತ್ತಿರುತ್ತಾರೆ. ನೋರಾ, "ಇನ್ನು ಎಷ್ಟು ದೂರ ಇದೆ. ಎಷ್ಟು ಹೊತ್ತಿನಿಂದ ಹೋಗುತ್ತಿದ್ದೀವಿ" ಎಂದು ಕೇಳಿದ್ದಕ್ಕೆ, "ಇನ್ನೆರಡು ಗಂಟೆಯಲ್ಲಿ ಮನೆಯಲ್ಲಿ ಇರುತ್ತೇವೆ" ಎಂದು ಹೇಳಿದ್ದಕ್ಕೆ. "ಸರಿಯಾದ ರಸ್ತೆಯಲ್ಲಿ ಹೋಗುತ್ತಿದ್ದೀಯ" ಎಂದು ಕೇಳಿ, "ಎಲ್ಲರೂ ನಿಲ್ಲಿಸು ನಾನು ಬಾತ್ ರೂಂಗೆ ಹೋಗಬೇಕು" ಎಂದು ಅಲೆಕ್ಸಿಗೆ ನೋರಾ ಹೇಳುತ್ತಾಳೆ. ಹೋಗುವ ಜಾಗದಲ್ಲಿ ಒಂದು ಹೋಟೆಲ್ ಇರುತ್ತದೆ. ಅಲೆಕ್ಸ್ ಅಲ್ಲಿ ಗಾಡಿ ನಿಲ್ಲಿಸಿ ಹೋಟೆಲ್ ಒಳಗೆ ಹೋಗಿ ನೋಡುತ್ತಾರೆ. ಅಲ್ಲಿ ಯಾರೂ ಇರುವುದಿಲ್ಲ. ಸರಿಯೆಂದು ನೋರಾ ಹೋಟೆಲ್ ಹಿಂದೆ ಬಾತ್ ರೂಮ್ ಗೆ ಹೋಗುತ್ತಾಳೆ. ಅಲ್ಲಿ ಸುಮಾರು ಜನರ ಫೋನ್, ಪರ್ಸ್ ಬಿದ್ದಿರುತ್ತೆ. ಅದನ್ನ ನೋಡಿ ಅವಳಿಗೆ ಶಾಕ್ ಆಗುತ್ತದೆ. ಜೊತೆಗೆ ಅಲ್ಲಿ ಅಸ್ತಿಪಂಜರ ಕೂಡ ಇದೆ. ಅದನ್ನು ಅವಳು ನೋಡುವುದಿಲ್ಲ. ಅವರು ಅಲ್ಲಿಂದ ಕಾರಿನಲ್ಲಿ ಕೂತು ಹೊರಡುತ್ತಾರೆ. ಅವರ ಮುಂದಿನ ನಿಲ್ದಾಣವನ್ನು ಬಸ್‌ನಲ್ಲಿ ಮಾಡಿದ ಹೋಟೆಲ್‌ನಲ್ಲಿ ನಿಲ್ಲಿಸುತ್ತಾರೆ. ಅಲ್ಲಿ ಜನ ಇರುತ್ತಾರೆ. ಅವರಲ್ಲಿ ಏನು ಬೇಕೋ ತಿಂದು ಹೊರಗಡೆ ಬರಬೇಕಾದರೆ ನೋರನ ಕೈಹಿಡಿದು "ಇಲ್ಲಿರಬೇಡ, ಈ ಏರಿಯಾದಲ್ಲಿ ಇರೋದು ನಿನಗೆ ತುಂಬ ಅಪಾಯಕಾರಿಯಾಗಿದೆ" ಅಂತ ಒಬ್ಬ ವ್ಯಕ್ತಿ ಹೇಳುತ್ತಾನೆ. ಇವರಿಗೆ ಅವನು ಸೈಕೋ ಎಂದು ಅನಿಸುತ್ತಾನೆ.
ಹೀಗಾಗಿ ಅವನು ಹೇಳೋ ಮಾತನ್ನು ಇವರು ಮುಖ್ಯ ಎಂದು ತಗೋಳೋದಿಲ್ಲ. ಮುಂದೆ ಹೋಗುತ್ತಾ ಪೆಟ್ರೋಲ್ ಬಂಕ್ ನಲ್ಲಿ ಗಾಡಿಯನ್ನು ನಿಲ್ಲಿಸಿ, "ತುಂಬಾ ಲೇಟಾಯ್ತು, ರಾತ್ರಿ ಆದ್ರೆ ಉಳಿಯೋಕೆ ಮುಂದೆ ಯಾವುದಾದರೂ ಹೋಟೆಲ್ ಸಿಗುತ್ತಾ" ಎಂದು ಕೇಳಿದ್ದಕ್ಕೆ, "ನೇರವಾಗಿ ಹೋದರೆ ಎಡಗಡೆ ಬಲಗಡೆ ಅಂತ ಎರಡು ರಸ್ತೆ ಬರುತ್ತೆ, ಬಲಗಡೆ ರಸ್ತೆಯಲ್ಲಿ 4 ರಿಂದ 5 ಕಿಲೋಮೀಟರ್ ಹೋದರೆ 20 ನಿಮಿಷದಲ್ಲೇ ಸೂಪರ್ ಆದ ಹೋಟೆಲ್ ಸಿಗುತ್ತದೆ. ನೀವು ಧಾರಾಳವಾಗಿ ಅಲ್ಲಿ ಉಳಿದುಕೊಳ್ಳಬಹುದು. ಎಲ್ಲವೂ ಕಡಿಮೆ ಮೊತ್ತದಲ್ಲಿ ಸಿಗುತ್ತದೆ" ಅಂತ ಆ ಪೆಟ್ರೋಲ್ ಬಂಕ್ ಮಾಲೀಕ ಹೇಳುತ್ತಾನೆ.
ಆ ಹೋಟೆಲ್ ಹುಡುಕಿಕೊಂಡು ಬಲಗಡೆಗೆ ತಿರುಗಿ ಅವರು ಹೋಗುತ್ತಾರೆ. ಅಲ್ಲಿ ಕಾರುಗಳೆಲ್ಲ ನಿಂತಿರೋದನ್ನು ನೋಡಿ, "ಪರವಾಗಿಲ್ಲ ಈ ರೀತಿಯ ಹೋಟಲ್ಗಳು ಇದೆಯಾ" ಎಂದು ಹೇಳುತ್ತಾರೆ. ಅಲ್ಲಿ ಜನರು ತಿಂದುಬಿಟ್ಟ ಪ್ಲೇಟ್ ಇರುತ್ತವೆ. ಅದನ್ನ ನೋಡಿ ಅಲೆಕ್ಸ್ "ಯಾವುದೋ ಕಸ್ಟಮರ್ ಬಂದು ತಿಂದು ಹೋಗಿರುತ್ತಾರೆ. ಇಷ್ಟು ಕಾರು ನಿಂತಿದೆಯಲ್ಲ ಭಯ ಪಡಬೇಡ" ಎಂದು ಹೇಳಿ ಇಬ್ಬರು ಮನೆಯೊಳಗೆ ಹೋಗುತ್ತಾರೆ.
ಅಲ್ಲಿ ಒಳಗೆ ಒಬ್ಬ ವಿಚಿತ್ರ ವ್ಯಕ್ತಿ ಇರುತ್ತಾನೆ. ಅವನು "ಇಲ್ಲಿ ರಿಸೆಪ್ಷನಿಸ್ಟ್ ಯಾರೂ ಇಲ್ಲ. ಈ ಹೋಟೆಲ್‌ನ ಮಾಲೀಕ ನಾನೇ, ಏನು ರೂಂ ಬೇಕಾ? ಬನ್ನಿ!" ಎಂದು ಕರೆದುಕೊಂಡು ಹೋಗುತ್ತಾನೆ. ಅಲ್ಲಿ, "ರೆಸ್ಟ್ ಮಾಡಿ ನಿಮಗೆ ಬೇರೆ ರೂಮ್ ಕೊಡುತ್ತೇನೆ" ಎಂದು ಹೇಳುತ್ತ ಹೋಗುತ್ತಾನೆ. ಕ್ಯಾಮೆರಾದಲ್ಲಿ ಅವರಿಗೆ ಕಾಣದ ದೃಶ್ಯವನ್ನು ನಮಗೆ ತೋರಿಸುತ್ತಾರೆ. ಹಾಸಿಗೆ ಮೇಲೆ ತುಂಬ ರಕ್ತದ ಕಲೆಗಳು ಇರುತ್ತವೆ. ಅದನ್ನು ನೋಡದೆ ಅವರು ಅದರ ಮೇಲೆ ಮಲಗಿರುತ್ತಾರೆ. ಅವರು ರಾತ್ರಿ ಬ್ರಶ್ ಮಾಡಿ ಮಲಗುತ್ತಾರೆ. ನಮಗೆ ಕ್ಯಾಮೆರಾದಲ್ಲಿ ಒಂದು ದೃಶ್ಯ ತೋರಿಸಲಾಗುತ್ತದೆ. ಅಲ್ಲಿ ಹಾಸಿಗೆ ಕೆಳಗೆ ಒಬ್ಬ ವ್ಯಕ್ತಿ ಮಲಗಿರುತ್ತಾನೆ. ಅವರಿಗೆ ಅವನು ಕಾಣಿಸುವುದಿಲ್ಲ. ಅವರು ನಿದ್ದೆ ಮಾಡಿದ ತಕ್ಷಣ ಆ ವ್ಯಕ್ತಿ ಮೆಲ್ಲಗೆ ಎದ್ದು ಅವರನ್ನು ಗುರಾಯಿಸುತ್ತಿರುತ್ತಾನೆ. ಅಲ್ಲಿಗೆ ಅ ದೃಶ್ಯ ಮುಗಿಯುತ್ತದೆ.
ಅದರ ನಂತರದ ದೃಶ್ಯದಲ್ಲಿ ನೋರಾ ಒಂದು ಗೂಡಿನಲ್ಲಿ ಇರುತ್ತಾಳೆ. ಪ್ರಾಣಿಗಳ ರೀತಿ ಅವಳನ್ನು ಗೂಡಿನಲ್ಲಿ ಇಟ್ಟಿರುತ್ತಾರೆ. ಅವಳು ಕೂಗುತ್ತಾಳೆ, ಕಿರುಚುತ್ತಾಳೆ ಅವಳಿಗೆ ಏನು ಆಗುತ್ತಿದೆ ಎಂದು ಗೊತ್ತೇ ಆಗುವುದಿಲ್ಲ. ಅಲ್ಲಿ ಮೇಕೆ ಮತ್ತು ದನದ ಮಾಸ್ಕ್ ಹಾಕಿಕೊಂಡ ಜನರೂ ಇದ್ದರು. ಅದರಲ್ಲಿ ಒಬ್ಬ ಬಂದು ನೀರನ್ನು ಹಾಕುತ್ತಾನೆ. ಅಲ್ಲಿಗೆ ಆ ದೃಶ್ಯ ಮುಗಿಯುತ್ತದೆ.
ಮುಂದಿನ ದೃಶ್ಯದಲ್ಲಿ ದನ ಕುರಿಗಳನ್ನು ಗರ್ಭಿಣಿ ಮಾಡುವ ರೀತಿಯಲ್ಲಿ ಅವಳನ್ನು ಕೂರಿಸಿಕೊಂಡು, ಅವಳನ್ನು ಗರ್ಭಿಣಿ ಮಾಡೋಕೆ ಅವರು ತಯಾರು ಮಾಡುತ್ತಿರುತ್ತಾರೆ. ಕಾಲನ್ನು ಅಗಲ ಮಾಡೋ ರೀತಿ ಅವಳನ್ನು ಇಟ್ಟಿದ್ದಾರೆ. ಮನುಷ್ಯರು ಹಂದಿಯನ್ನು ನೋಡುವಂತೆ ಇವರು ಅವಳನ್ನು ನೋಡುತ್ತಿರುತ್ತಾರೆ. ನಂತರ ಅವಳಿಗೆ ಇಂಜೆಕ್ಷನ್ ಮಾಡಿ ಅವಳ ಗೂಡಿಗೆ ಕರೆದುಕೊಂಡು ಹೋಗುತ್ತಾರೆ. ಅವಳನ್ನು ಕರೆದುಕೊಂಡು ಹೋಗುವಾಗ ಆ ಊರಿನ ಜನಗಳು ದನ, ಕುರಿಯ ರೀತಿಯ ಮಾಸ್ಕ್ ಹಾಕಿಕೊಂಡಿರುತ್ತಾರೆ. ಯಾರೂ ಮಾತನಾಡುವುದಿಲ್ಲ, ಅವರವರ ಕೆಲಸವನ್ನು ಮಾಡುತ್ತಿರುತ್ತಾರೆ. ಇದನ್ನೆಲ್ಲ ನೋಡಿದ ನೋರಾಳಿಗೆ ಇಲ್ಲಿ ಏನು ನಡೆಯುತ್ತಿದೆ ಎಂದು ಅರ್ಥವಾಗುವುದಿಲ್ಲ. ಇಲ್ಲಿರುವವರು ಮನುಷ್ಯರು ಕುರಿಗಳನ್ನು ಕಡಿದು ಅಂಗಡಿಯಲ್ಲಿ ಮಾರುವ ರೀತಿಯೇ, ಮನುಷ್ಯರಿಗೆ ಮಾಡುತ್ತಿರುತ್ತಾರೆ. ಇವಳನ್ನು ಕೋಣೆಯಲ್ಲಿ ಕೂಡು ಹಾಕಿ ಚಿತ್ರಹಿಂಸೆ ಕೊಡುತ್ತಿರುತ್ತಾರೆ. ಅಲ್ಲಿಗೆ ಆ ದೃಶ್ಯ ಮುಗಿಯುತ್ತದೆ.
ಈ ಕಡೆ ಹೀರೋನಿಗೆ ಏನಾಯ್ತು ಎಂದು ನಾವು ಯೋಚಿಸಬೇಕಾದರೆ. ಎಲ್ಲರ ಜೊತೆ ಇವನನ್ನು ಗೂಡಿನಲ್ಲಿ ಕಟ್ಟಿ ಹಾಕಿರುತ್ತಾರೆ. ಇದೆಲ್ಲ ನಡೆಯುತ್ತಿರುವುದು ಮಾಂಸಕ್ಕಾಗಿ. ಹೀರೋನ ಬಾಯಿಯನ್ನು ಕಟ್ಟಿ ಹಾಕಿರುತ್ತಾರೆ. ಆಗ ಇಬ್ಬರೂ ಬಂದು ಹಂದಿಯನ್ನು ತೆಗೆದುಕೊಂಡು ಹೋಗುವ ರೀತಿಯಲ್ಲಿ ಇವನನ್ನು ಮಾಂಸಕ್ಕಾಗಿ ತೆಗೆದುಕೊಂಡು ಹೋಗುತ್ತಾರೆ. ಅಲ್ಲಿ ಜನರ ತಲೆಯನ್ನು ಒಂದೇ ಹೊಡೆತಕ್ಕೆ ಎರಡು ಹೋಳು ಮಾಡಿ ಸಾಯಿಸುತ್ತಿರುತ್ತಾರೆ. ಆಗ ಅಲ್ಲಿ ಹೀರೋ ಹತ್ತಿರ ಬಂದು ಅವನ ತಲೆಗೆ ಒಡೆಯುತ್ತಾರೆ. ಅಲ್ಲಿ ಅವನು ಪ್ರಜ್ಞೆ ತಪ್ಪಿ ಬೀಳುತ್ತಾನೆ. ಅಲ್ಲಿಗೆ ಆ ದೃಶ್ಯ ಮುಗಿಯುತ್ತದೆ.
ಇನ್ನೊಂದು ದೃಶ್ಯದಲ್ಲಿ ತುಂಬಾ ಜನರನ್ನು ಕೊಂದು ಕಸದ ರೀತಿ ಮೂರು ಜನ ಎಳೆದುಕೊಂಡು ಹೋಗುತ್ತಿರುತ್ತಾರೆ. ಅವರು ಹಾಕಿಕೊಂಡಿರುವ ವಾಚ್, ಪರ್ಸ್, ಮೊಬೈಲ್ ಎಲ್ಲವನ್ನೂ ತೆಗೆದು, ಅವರನ್ನು ಚೆನ್ನಾಗಿ ತೊಳೆದು, ಅವರಿಗೆ ಬೇಕಾದ ಮಾಂಸವನ್ನು ತಗೊಂಡು ಪ್ಯಾಕ್ ಮಾಡಿ ಮಾರುತ್ತಿರುತ್ತಾರೆ. ಅದರಲ್ಲಿ ಒಬ್ಬ ಸ್ವಲ್ಪಾನೂ ಆರೈಕೆ ಮಾಡದೆ ತನ್ನ ಮಾಂಸವನ್ನು ಗ್ರಾಮದ ಮಧ್ಯದಲ್ಲಿ ತೆಗೆದುಕೊಂಡು ಹೋಗುತ್ತಿರುತ್ತಾನೆ. ಅಲ್ಲಿಗೆ ಆ ದೃಶ್ಯ ಮುಗಿಯುತ್ತದೆ.
ಇನ್ನೊಂದು ದೃಶ್ಯದಲ್ಲಿ ಕೆಂಪುಬಣ್ಣದ ಗಾಡಿ ಇರುತ್ತದೆ. ಅದರಲ್ಲಿ ಯಾರನ್ನೋ ಕೊಯ್ದು ತಂದಿರುತ್ತಾರೆ. ಆ ಫಾರ್ಮ್ನಲ್ಲಿ ಹೀರೊನನ್ನು ಕರೆದುಕೊಂಡು ಹೋಗಿ ಕೂಡು ಹಾಕುತ್ತಾರೆ. ಆ ಹೋಟೆಲ್‌ನ ಮಾಲೀಕ, "ಆಹಾರವನ್ನು ಬೇಗನೆ ತಯಾರಿಸಬೇಕು. ಹಬ್ಬಕ್ಕೆ ಎಂಬತ್ತು ಜನರಿಂದ ಆದೇಶವಾಗಿದೆ. ಆ ಕಾರಣದಿಂದ ಮನುಷ್ಯರ ಮಾಂಸವನ್ನು ಬೇಗನೆ ತಯಾರು ಮಾಡಬೇಕು. ಗ್ರಾಹಕರ ತೃಪ್ತಿಯೇ ನಮಗೆ ಬಹಳ ಮುಖ್ಯ" ಎಂದು ಗಂಭೀರವಾಗಿ ಹೇಳುತ್ತಾನೆ. ಎಂಬತ್ತು ಜನರಿಗೆ ಊಟ, ಅದು ಮನುಷ್ಯರ ಮಾಂಸ!!
ಇವನು ಅಂದುಕೊಳ್ಳುವ ರೀತಿ ಕೆಲಸ ವೇಗವಾಗಿ ನಡೆಯುತ್ತಿಲ್ಲ. ಹೀಗಾಗಿ ಮನುಷ್ಯರನ್ನು ಕೊಯುವ ಅಂಗಡಿಗೆ ಹೋಗಿ ಇವನು ಬೈಯುತ್ತಾನೆ. ಎಂಬತ್ತು ಜನರಿಗೆ ಊಟ ಬೇಕು ಎಂದವನು, ಈಗ ಇನ್ನೂ ಇಪ್ಪತ್ತು ಜನರಿಗೆ ಬೇಕು ಎನ್ನುತ್ತಾನೆ. ಹೀಗಾಗಿ ನೂರು ಜನರಿಗೆ ಊಟ ಬೇಕಾಗಿದೆ. ಅದೇ ಸಮಯಕ್ಕೆ ಇವನ ಕಚೇರಿಗೆ ಒಂದು ಕರೆ ಬರುತ್ತದೆ. ಆ ಕಡೆ ಆ ಗ್ರಾಹಕ ಮಾತಾಡುತ್ತಿರುತ್ತಾನೆ. ಆ ಗ್ರಾಹಕ, "ಹಬ್ಬಕ್ಕೆ ನೂರು ಜನರಿಗೆ ಆಹಾರ ಸರಿಯಾದ ಸಮಯಕ್ಕೆ ಬರುತ್ತದೆಯೇ" ಎಂದು ಇವನಿಗೆ ಕೇಳಿದಾಗ, "ಖಂಡಿತವಾಗಿ ಬರುತ್ತೆ" ಎಂದು ಇವನ್ನು ಹೇಳುತ್ತಾನೆ. ಆಗ ಏನಾದರು ವಿಶೇಷವಾದದ್ದು ಸಿಗುತ್ತಾ ಎಂದು ಈತ ಹಾಲ್ ಒಳಗೆ ನೋಡುತ್ತಾನೆ.
ಆ ಫಾರ್ಮ್ ದನದ, ಕುರಿಯದ್ದಾಗಿರಲಿಲ್ಲ, ಅದು ಮನುಷ್ಯರ ಫಾರ್ಮ್ ಆಗಿತ್ತು. ಅದರಲ್ಲಿ ಸುಮಾರು ಹೆಣ್ಣುಮಕ್ಕಳನ್ನು ಗರ್ಭಿಣಿ ಮಾಡಿ. ಅವರ ಮಗುವನ್ನು ಕಡಿದು ಮಾಂಸ ಮಾಡಿ ಮಾರಿ. ಅವರ ಹಾಲನ್ನು ಕರೆದು ಈ ಗುಂಪು ಮಾಡುತ್ತಿರುತ್ತದೆ. ಹಾಲನ್ನು ಕರಿಯೋಕ್ಕೆ ಒಂದು ಯಂತ್ರವಿರುತ್ತದೆ. ಈ ಯಂತ್ರದ ಸಹಾಯದಿಂದ ಇವರು ಹಾಲನ್ನು ಕರೆಯುತ್ತಿದ್ದರು. ಅಲ್ಲಿ ಒಬ್ಬ ಒಂದು ಮಗುವನ್ನು ಎತ್ತಿಕೊಂಡು ಅದರ ತೂಕ ನೋಡಿ, ಕೋಳಿ ಕುರಿಗಳಿಗೆ ಮಾಡುವಂತೆ ಆತ ಆ ಮಗುವನ್ನು ಎತ್ತಿ ನೆಲಕ್ಕೆ ಬಡಿಯುತ್ತಾನೆ. ಆ ಮಗು ಸತ್ತು ಹೋಗುತ್ತದೆ. ಆ ಸತ್ತ ಮಗುವನ್ನು ಮಾಂಸಕ್ಕಾಗಿ ತೆಗೆದುಕೊಂಡು ಹೋಗುತ್ತಾರೆ.
ನಂತರ "ಕರೆದಿರುವ ಎಲ್ಲ ಹಾಲನ್ನು ತನ್ನಿ, ಗ್ರಾಹಕರಿಗೆ ವಿಶೇಷ ಆಫರ್ ಕೊಡಬೇಕೆಂದು" ಒಬ್ಬ ಹೇಳಿ ಹೋಗುತ್ತಾನೆ. ಅದನ್ನು ಹೇಳಿದವನು ಬೇರೆ ಯಾರೂ ಅಲ್ಲ ಪೆಟ್ರೋಲ್ ಬಂಕ್ ನಲ್ಲಿ ದಾರಿ ತಿಳಿಸಿದವನು. ಆತ ಅಲೆಕ್ಸ್ ಮತ್ತು ನೋರಾಗೆ ಈ ರಸ್ತೆಯಲ್ಲಿ ಹೋದರೆ ಒಳ್ಳೆಯ ಹೋಟೆಲ್ ಇದೆಯೆಂದು ತಿಳಿಸಿದವನು. ಆತ ಅಲ್ಲಿದ್ದ ಹಾಲನ್ನು ಕುಡಿದು, ತ್ಯಾಜ್ಯ(waste) ಮಾಡಿದ್ದಕ್ಕೆ ಒಬ್ಬಳು ಬೈದಾಗ ಅವಳಿಗೆ ರಾಡ್ನಿಂದ ಹೊಡೆದು ಸಾಯಿಸುತ್ತಾನೆ.
ಇದೇ ಜಾಗಕ್ಕೆ ಇನ್ನೊಬ್ಬ ಮಾಸ್ಕ್ ಹಾಕಿಕೊಂಡು ಬರುತ್ತಾನೆ. ಆ ಹೆಂಗಸು ಸತ್ತಿರುವುದನ್ನು ನೋಡಿ ಅವನ ಬಾಸ್‌ಗೆ ಫೋನ್ ಮಾಡುತ್ತಾನೆ. ಅದನ್ನು ನೋಡಲು ಅ ಬಾಸ್ ಬರುತ್ತಾನೆ. ಅಲ್ಲಿ ನೋಡಿದರೆ ತುಂಬಾ ಆರೋಗ್ಯಕರವಾಗಿ, ತುಂಬ ಹಾಲು ನೀಡುತ್ತಿದ್ದ ಹೆಂಗಸನ್ನು ಆ ಹುಚ್ಚ ಕೊಂದಿರುತ್ತಾನೆ. ಅವನಿಗೆ ಶಿಕ್ಷೆ ಕೊಡಲು ಬಾಸ್ ರೆಡಿಯಾಗುವಾಗ ಈ ಕಡೆ ಹೀರೋಯಿನ್ನ ಕೋಣೆಯ ಪಕ್ಕದಲ್ಲೇ ಇನ್ನೊಬ್ಬಳನ್ನು ಬಂಧಿಸಿರುತ್ತಾರೆ. ಅವಳು "ನಾನು ಇಲ್ಲಿಂದ ತಪ್ಪಿಸಿಕೊಳ್ಳಬೇಕು. ನಿನ್ನನ್ನು ಕರೆದುಕೊಂಡು ಹೋಗುವೆ" ಎಂದು ನೋರಾಗೆ ಹೇಳುತ್ತಾಳೆ. ಈ ಕಡೆ ಬಾಸ್ ಹೆಂಗಸನ್ನು ಕೊಂದವರನ್ನು ಹುಡುಕುತ್ತಿರುತ್ತಾನೆ. ಅವನು ಸಿಕ್ಕಿದಾಗ ಆತ "ನಾನು ಬೇಕಂತ ಮಾಡಿಲ್ಲ. ನನಗೆ ಹೊಡೆಯಬೇಡಿ" ಎಂದು ಕೇಳಿಕೊಳ್ಳುತ್ತಾನೆ. ಅದಕ್ಕೆ ಆ ಬಾಸ್,"ನಾವು ಇವರನ್ನು ಮಾರಿ ಜೀವನ ನಡೆಸುತ್ತಿದ್ದೇವೆ. ನೀನು ಹೋಗಿ ಇವರನ್ನು ಕೊಲ್ಲುತ್ತೀಯಾ" ಎಂದು ಹೇಳುತ್ತಾನೆ.
ಈ ಕಡೆ ನೂರು ಜನರಿಗೆ ಊಟ. ಊಟವನ್ನು ಪ್ರಾಣಿಗಳಿಗೆ ಬಡಿಸುವಂತೆ ಬಡಿಸಲಾಗುತ್ತಿತ್ತು. ಗಲೀಜಾದ ತಟ್ಟೆಯಲ್ಲಿ ಅವರು ಊಟವನ್ನೂ ಹಾಕುತ್ತಿದ್ದರು. ಅದನ್ನು ಜೈಲಿನಲ್ಲಿರುವವರು ತಿನ್ನಬೇಕಿತ್ತು.
ಆ ಹುಚ್ಚ ಒಂದು ಉಂಡೆಯಷ್ಟು ಊಟವನ್ನು ಕೆಳಗೆ ಹಾಕಿ ಅಲ್ಲಿಂದ ಓಡಿಹೋಗುತ್ತಾನೆ. ಫಾರ್ಮ್ನಲ್ಲಿ ಒಂದು ಹೆಂಗಸು ಹಾಲು ನೀಡುತ್ತಿಲ್ಲ, ಹೀಗಾಗಿ ಅವಳನ್ನು ಕೊಂದು ಮಾಂಸಕ್ಕೆ ರೆಡಿ ಮಾಡು. ನೂರು ಜನರ ಮಾಂಸಕ್ಕೆ ಕಡಿಮೆಯಾಗುತ್ತಿದೆಯೆಂದು ಗುಂಪಿಗೆ ಹೇಳಿದ್ದಕ್ಕೆ, ಆ ಗುಂಪು ಅಲ್ಲಿಗೆ ಹೋಗಿ ಅವಳ ಕುತ್ತಿಗೆಯನ್ನು ಚುಚ್ಚಿ. ಬರುವ ರಕ್ತವನ್ನು ಒಂದು ಕಪ್‌ನಲ್ಲಿ ಹಿಡಿಯುತ್ತಾರೆ. ನಂತರ ಅವಳನ್ನು ನೇತಾಕಿ ಹೊಟ್ಟೆಯಲ್ಲಿದ್ದ ಕರುಳನ್ನೆಲ್ಲ ಕಿತ್ತು ಬಿಸಾಕಿ, ಮಾಂಸವನ್ನು ಮಾತ್ರ ಕತ್ತರಿಸಿ ಒಂದು ಪಾತ್ರೆಯಲ್ಲಿ ಹಾಕಿ. ಮಾಂಸದ ಬೇಡಿಕೆ ಇದ್ದ ಜಾಗಕ್ಕೆ ತೆಗೆದುಕೊಂಡು ಹೋಗುತ್ತಾರೆ. ಅಲ್ಲಿಗೆ ಆ ದೃಶ್ಯ ಮುಗಿಯುತ್ತದೆ.
ಇನ್ನೊಂದು ದೃಶ್ಯದಲ್ಲಿ ಹೀರೋಯಿನ್ ನ ಕೋಣೆಯನ್ನು ಯಾರೋ ತಟ್ಟಿ ತೆಗೆಯುವಂತೆ ಕಾಣುತ್ತಿರುತ್ತದೆ. ಅದು ಯಾರು ಅಂತ ನೋಡಿದರೆ ಹೀರೋ. ಹೀರೋ ಆತನ ಗೂಡಿನಿಂದ ತಪ್ಪಿಸಿಕೊಂಡಿರುತ್ತಾನೆ. ಹೀರೋಯಿನ್ ನ ಕಾಪಾಡೋಕೆ ಇಲ್ಲಿಗೆ ಬಂದಿರುತ್ತಾನೆ. ಇಬ್ಬರೂ ಅಲ್ಲಿಂದ ತಪ್ಪಿಸಿಕೊಳ್ಳುತ್ತಾರೆ.
ಅವರು ಪಕ್ಕದಲ್ಲಿದ್ದ ಕಟ್ಟಡದ ಹತ್ತಿರ ಹೋಗಿ ಅಲ್ಲಿದ್ದ ಮೋರೆಯೊಳಗೆ ಬಚ್ಚಿಕೊಳ್ಳುತ್ತಾರೆ. ತುಂಬಾ ಹೊತ್ತು ಅಲ್ಲಿರುವುದಕ್ಕೆ ಸಾಧ್ಯವಿಲ್ಲವೆಂದು ತಿಳಿದು ಓಡಲು ಪ್ರಾರಂಭಿಸುತ್ತಾರೆ. ಲಾರಿ ಅಥವಾ ಬಸ್ ಸಿಕ್ಕರೆ ಅದನ್ನು ತೆಗೆದುಕೊಂಡು ಹೋಗಬಹುದು ಎಂದು ಕಾಯುತ್ತಿರುವಾಗ, ಅವರಿಗೆ ಅಲ್ಲಿ ಒಂದು ಲಾರಿ ಸಿಗುತ್ತದೆ. ಆದರೆ ಆ ಲಾರಿ ಸ್ಟಾರ್ಟ್ ಆಗುವುದಿಲ್ಲ. ಆಗ ಅಲ್ಲಿ ಒಬ್ಬ ಬರುತ್ತಾನೆ. ಆತನಿಗೆ ಹೆದರಿ ಇವರಿಬ್ಬರು ಬಚ್ಚಿಕೊಳ್ಳುತ್ತಾರೆ. ನಂತರ ಇವರು ಕಾಡಿನೊಳಗೆ ಹೋಗುತ್ತಾರೆ. ಅಲ್ಲಿ ಚರ್ಚ್ ರೀತಿಯ ಕಟ್ಟಡ ವಿರುತ್ತದೆ. ಆ ಚರ್ಚ್‌ನಲ್ಲಿ ಯೇಸುವಿನ ತಲೆಗೆ ಮೇಕೆಯ ಮಾಸ್ಕ್ ಹಾಕಿರುತ್ತಾರೆ. ಆ ಸಮಯದಲ್ಲೇ ಆ ಚರ್ಚ್ ಒಳಗೆ ಯಾವುದೇ ವ್ಯಕ್ತಿ ಬರುವಂತೆ ಕಾಣುತ್ತದೆ. ಹೀಗಾಗಿ ಇವರು ಹಿಂದೆ ಹೋಗಿ ಬಚ್ಚಿಕೊಳ್ಳುತ್ತಾರೆ. ಆ ಬಂದ ವ್ಯಕ್ತಿ ಮತ್ತೆ ಹೊರಡುವಾಗ ಹಿಂದೆಯಿಂದ ಬಂದ ಧ್ವನಿಯಿಂದ ನಡೆಯುವದನ್ನು ನಿಲ್ಲಿಸುತ್ತಾನೆ. ಚರ್ಚ್‌ನಲ್ಲಿ ಇದ್ದ ಒಂದು ಗಂಟೆಯನ್ನು ಬಡೆದು, ಎಲ್ಲರನ್ನೂ ಅಲರ್ಟ್ ಮಾಡುತ್ತಾನೆ. ಹೀಗೆ ಅಲೆಕ್ಸ್ ಮತ್ತು ನೋರಾ ಓಡುವಾಗ ಅಲ್ಲಿದ್ದ ಬಲೆಯಲ್ಲಿ ಅಲೆಕ್ಸ್ ಸಿಕ್ಕಿಕೊಳ್ಳುತ್ತಾನೆ. ಎಷ್ಟೇ ಎಳೆದರೂ ಆತನ ಕಾಲು ಬರುವುದೇ ಇಲ್ಲ. ಕೊನೆಯದಾಗಿ ಅಲ್ಲಿ ನೋರಾ, "ನನ್ನನ್ನು ಕ್ಷಮಿಸು" ಎಂದು ಅಲ್ಲಿಂದ ಓಡಿ ಹೋಗುತ್ತಾಳೆ. ಅಲ್ಲಿದ್ದವರು ದೊಡ್ಡ ಕಲ್ಲನ್ನು ತೆಗೆದು ಅವನ ತಲೆಯನ್ನು ಚಾಚುತ್ತಾರೆ. ಇದರಿಂದ ಕಥೆಯ ನಾಯಕ ಸತ್ತು ಹೋದ ಉಳಿದದ್ದು ಹೀರೋಯಿನ್ ಮಾತ್ರ.
ನೋರಾ ಮನುಷ್ಯರನ್ನು ಕಡೆಯುವ ಜಾಗಕ್ಕೆ ಬರುತ್ತಾಳೆ. ಅಲ್ಲಿ ಗೂಡಿನಲ್ಲಿ ಒಬ್ಬನಿಗೆ, "ನಾನು ತಪ್ಪಿಸಿಕೊಳ್ಳಬೇಕು. ಏನಾದರೂ ಉಪಾಯವಿದೆಯೇ" ಎಂದು ಕೇಳಿದಾಗ. ಆತ ಹಿಂದೆ ಒಂದು ಬಸ್ ಇದೆ. ನೀನು ಆ ಬಸ್‌ನ ಬೀಗ ತೆಗೆದುಕೊಂಡರೆ ಅದನ್ನು ಓಡಿಸಿಕೊಂಡು ಇಲ್ಲಿಂದ ಪಾರಾಗಬಹುದು" ಎನ್ನುತ್ತಾನೆ. ಆತನ ಮಾತನ್ನು ಕೇಳಿ ನೋರಾ ಬಸ್ಸನ್ನು ಹುಡುಕಿಕೊಂಡು ಆ ಗ್ರಾಮದ ಜನರಿಗೆ ಕಾಣದ ರೀತಿ ಬಚ್ಚಿಕೊಂಡು ಹೋಗುತ್ತಾಳೆ. ಅಲ್ಲೊಬ್ಬ ಕಾರನ್ನು ರಿಪೇರ್ ಮಾಡುತ್ತಿರುತ್ತಾನೆ. ಇವಳು ಆತನಿಗೆ ಸುತ್ತಿಗೆಯಿಂದ ಒಡೆದು ಕಾರಿನ ಬೀಗ ತೆಗೆದುಕೊಂಡು, ಕಾರನ್ನು ಓಡಿಸಿಕೊಂಡು ಸ್ವಲ್ಪ ದೂರ ಹೋಗುತ್ತಾಳೆ. ಅಲ್ಲಿ ಕಾರಿನ ಪೆಟ್ರೋಲ್ ಖಾಲಿಯಾಗುತ್ತಿರುತ್ತದೆ.
ಇವಳು ನಾನು ಕಾರಿನಲ್ಲಿ ಇದ್ದರೆ ಖಂಡಿತ ಸಿಕ್ಕಿಹಾಕಿಕೊಳ್ಳುವೆ ಎಂದು ತಿಳಿದು ಕಾರಿನಿಂದ ಜಂಪ್ ಮಾಡಿ ಓಡುತ್ತಿರುತ್ತಾಳೆ. ಅವಳು ಅವಳ ಪಕ್ಕದ ಕೋಣೆಯಲ್ಲಿದ್ದ ಒಬ್ಬಳನ್ನು ಕಾಪಾಡಲು ಅಲ್ಲಿಗೆ ಹೋಗುತ್ತಾಳೆ. ಅವಳನ್ನು ಕರೆದುಕೊಂಡು ಬಸ್‌ನ ಹತ್ತಿರ ಹೋದಾಗ ಬಸ್‌ನಲ್ಲಿ ಬೀಗ ಇರುವುದಿಲ್ಲ. ಹೀಗಾಗಿ ಅವಳು ಮನೆಯೊಳಗೆ ಹೋಗಿ ಬಸ್‌ನ ಬೀಗ ತೆಗೆದುಕೊಂಡು ಬರುತ್ತಾಳೆ. ಬಸ್ ಸ್ಟಾರ್ಟ್ ಮಾಡಿ ಹೋಗಬಹುದು ಎಂದು ಯೋಚಿಸುತ್ತಿರುವಾಗ ಅವಳ ಜೊತೆ ಬಂದಿದ್ದ ಹೆಂಗಸು ಏನನ್ನೂ ಮಾತನಾಡದೆ ಆಘಾತದಲ್ಲಿ ನಿಂತಿರುತ್ತಾಳೆ. ಏನು ಅಂತ ನೋಡಿದರೆ ಆ ಗ್ರಾಮದಲ್ಲಿದ್ದ ಹತ್ತು ಜನ ಇಲ್ಲಿ ರೆಡಿಯಾಗಿ ಕೂತಿದ್ದಾರೆ. ಅಲ್ಲಿಗೆ ಆ ದೃಶ್ಯ ಮುಗಿಯುತ್ತದೆ.
ಇನ್ನೊಂದು ದೃಶ್ಯದಲ್ಲಿ ಕೋಳಿಗಳನ್ನು ಗ್ರಿಲ್ ಮಾಡಿ ಇಟ್ಟಿರುವಂತೆ ಇವರನ್ನು ಒಂದು ಎಲೆಯ ಮೇಲೆ ಇಟ್ಟು ಎಲ್ಲರೂ ತಿನ್ನಲು ರೆಡಿಯಾಗಿರುತ್ತಾರೆ. ಹೀಗೆ ಈ ಕಥೆ ಮುಕ್ತಾಯಗೊಳ್ಳುತ್ತದೆ.
ನಿಮಗೆ ಈ ಸಿನಿಮಾದ ಕತೆ ಹೇಗೆನಿಸಿತು ಕೆಳಗೆ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.
Explore all our Posts by categories.
See all comments...
sushma • December 2nd,2022
ಭಯಂಕರ, ವಿಚಿತ್ರ ಹಾಗೂ ಅದ್ಭುತವಾದ ಚಲನಚಿತ್ರ. ಕಥೆಯ climax ಅಷ್ಟು ರುಚಿಸಲಿಲ್ಲ. ಇದೇ ರೀತಿ ಇನ್ನೂ ಕೆಲವು ಚಲನಚಿತ್ರಗಳನ್ನು ಕನ್ನಡದಲ್ಲಿ ವಿವರಿಸಿ.