Watch Video
ಒಂದು ಸಂದರ್ಶನದಲ್ಲಿ(interview) ಹುಡುಗಿಯರಿಗೆ "ನೀವು ಯಾವ ಅಶ್ಲೀಲ ವರ್ಗದ(porn category) ವೀಡಿಯೋಗಳನ್ನು ನೋಡಲು ಬಯಸುತ್ತೀರಾ" ಎಂದು ಕೇಳಿದಾಗ ಅವರು,
ಒಂದು ಅಧ್ಯಯನದಲ್ಲಿ 91% ಪುರುಷರು ಮತ್ತು 60% ಮಹಿಳೆಯರು ಅಶ್ಲೀಲ ವೀಡಿಯೋಗಳಿಗೆ ವ್ಯಸನಿಯಾಗಿದ್ದರೆ(addict) ಎಂದು ತಿಳಿದುಬಂದಿದೆ ಮತ್ತು ಈ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಇಂದು ಈ ವಿಷಯವು ತುರ್ತು ಪರಿಸ್ಥಿತಿಯಾಗಿದೆ(emergency). ಏಕೆಂದರೆ ಇಂದು ಅಶ್ಲೀಲ ವೀಡಿಯೋ ಅತ್ಯಾಚಾರ(rape) ವೀಡಿಯೋಗಳಾಗಿ ಪರಿವರ್ತನೆಗೊಂಡಿವೆ.
"weired the porn, greater the fun"
ಇಂದು ಎಷ್ಟು ವಿಚಿತ್ರ ಅಶ್ಲೀಲ ವೀಡಿಯೋ ಇರುವುದೋ ಅಷ್ಟು ಮಜಾ ಇರುವಂತಾಗಿದೆ. ಕೊಲ್ಕತ್ತಾದ ಅತ್ಯಾಚಾರದ ಪ್ರಕರಣ ನಿಮಗೆ ನೆನಪಿರಬೇಕು. ಇದು ಇಡೀ ದೇಶವನ್ನೇ ಅಲ್ಲುಗಾಡಿಸಿತು. ಅತ್ಯಾಚಾರವಾದ ಒಂದು ವಾರ ಗೂಗಲ್ನಲ್ಲಿ(google), "kolkata rape girl porn", "kolkata rape video" ರೀತಿಯಲ್ಲಿ ಹುಡುಕಾಟ(search) ಆಗುತ್ತಿದ್ದವು ಮತ್ತು ಈ ಪ್ರವೃತ್ತಿ(trend) ಬೆಳೆಯುತ್ತಿತ್ತು. ಇದನ್ನು ಕೋಟಿಗಟ್ಟಲೆ ಜನರು ಹುಡುಕಾಟ ಮಾಡುತ್ತಿದ್ದರು. ಹೀಗಾಗಿ ಈ ವಿಷಯದ ಮಹತ್ವದ ಬಗ್ಗೆ ತಿಳಿಯಿರಿ. ಅಶ್ಲೀಲ ವೀಡಿಯೋಗಳನ್ನು ನೋಡುವ ಅಭ್ಯಾಸವು ಇಂದು ಜನಗಳನ್ನು ಟೊಳ್ಳು ಮಾಡುತ್ತಿದೆ. ಇದನ್ನು ಆದಷ್ಟು ಬೇಗನೆ ನಿಯಂತ್ರಿಸದಿದ್ದಲ್ಲಿ ನಮ್ಮ ಮುಂದಿನ ಪೀಳಿಗೆ(generation) ಕೂಡ ಇದಕ್ಕೆ ಗುರಿಯಾಗುತ್ತದೆ. ನೀವು ಮುಂದಿನ ಪೀಳಿಗೆಯನ್ನು ಬೆಳೆಸಲು ಸಾಧ್ಯವಾಗದಿರಬಹುದು! ನಾವು ಈ ರೀತಿ ಏಕೆ ಹೇಳುತ್ತಿದ್ದೇವೆ ಎಂಬುದು ನಿಮಗೆ ಬೇಗನೆ ಅರ್ಥವಾಗುತ್ತದೆ.
ಅಶ್ಲೀಲ ವೀಡಿಯೋಗಳ ಚಟವೂ(addiction) ದೇಶದಲ್ಲಿ ತುಂಬಾ ವೇಗವಾಗಿ ಹರಡುತ್ತಿದೆ. ಭಾರತದಲ್ಲಿ ಶೇಕಡಾ 30 ರಿಂದ 70 ರಷ್ಟು ಅಶ್ಲೀಲ ವಿಷಯಗಳನ್ನೇ(pornography content) ಬ್ರೌಸ್ ಮಾಡುತ್ತಿದ್ದಾರೆ. 2018 ರಂದು ಅಶ್ಲೀಲ ವೀಡಿಯೋಗಳ ಸೇವನೆಯಲ್ಲಿ(consumption) ಭಾರತ 3 ನೇ ಸ್ಥಾನದಲ್ಲಿತ್ತು, ಅದರಲ್ಲಿ 30 ರಷ್ಟು ಮಹಿಳೆಯರು ಆಗಿದ್ದರು. ಅದು 2024 ರಂದು 60 ರಷ್ಟು ಏರಿದೆ. ಇದನ್ನು ನೋಡಿ ಅಶ್ಲೀಲ ವೀಡಿಯೋ ನೋಡುವುದನ್ನು ಕಡಿಮೆ ಮಾಡಲು ಸರ್ಕಾರ ನಿಶಬ್ದವಾಗಿ ಕೆಲವು ಕ್ರಮಗಳನ್ನು ತೆಗೆದುಕೊಂಡಿತು.
2019 ರಂದು ಭಾರತದಲ್ಲಿ ಅಶ್ಲೀಲ ವೀಡಿಯೋ ನಿಷೇಧವಾದರೂ(ban), ಅದರ ನೋಡುಗರು 95 ರಷ್ಟು ಹೆಚ್ಚಿದೆ. ಇದರಿಂದ ನಿಷೇಧ ಮಾಡಿದ ನಂತರವೂ ಸಮಸ್ಯೆ ಬಗೆಹರಿಯುತ್ತಿಲ್ಲ ಎಂಬುದು ತಿಳಿಯುತ್ತದೆ. ಇಂದು ಅಶ್ಲೀಲ ವೀಡಿಯೋಗಳನ್ನು ನೋಡುವ ರೀತಿ ಬದಲಾಗಿದೆ. ಇಂದು ಅನೇಕ ಅಶ್ಲೀಲ ವೀಡಿಯೋ ವೆಬ್ಸೈಟ್ಗಳು ನಿಷೇದವಾಗಿವೆ. ಆದರೆ ಇವುಗಳನ್ನು ಒಂದು ಕ್ಲಿಕ್ನಲ್ಲಿ ಪ್ರವೇಶ(access) ಮಾಡಬಹುದು. ಇಂದು ವಯಸ್ಕ ವಿಷಯಗಳು(adult content) ಇನ್ಸ್ಟಾಗ್ರಾಮ್, ಟ್ವಿಟರ್, ರೆಡ್ಡಿಟ್, ಡಿಸ್ಕರ್ಡ್ ಮತ್ತು ಟೆಲಿಗ್ರಾಂ ರೀತಿಯ ವೇದಿಕೆಯಲ್ಲಿ ಪರಿಚಲನೆ(circulate) ಆಗುತ್ತಿವೆ. ನೀವು ಇನ್ಸ್ಟಾಗ್ರಾಮ್(instagram) ಬಳಸುತ್ತಿದರೆ ಈಗಾಗಲೇ ಇವುಗಳನ್ನು ನೋಡಿರುತ್ತೀರಾ. ಟ್ವಿಟರ್ನಲ್ಲಿ(x formerly twitter) ಒಂದು ಸರ್ಚ್ ಮಾಡಿ ಶೋಧಿಸದ(unfiltered) ವಯಸ್ಕ ವಿಷಯಗಳು ನೋಡಲು ಸಿಗುತ್ತಿದೆ. ಟೆಲಿಗ್ರಾಂ(telegram) ಚಾನಲ್ಗಳಲ್ಲಿ ಅನಿಯಮಿತ(unlimited) ಅಶ್ಲೀಲ ವೀಡಿಯೋ ಸರಬರಾಜು ಆಗುತ್ತಿದೆ. ರೆಡ್ಡಿಟ್ನಲ್ಲಿ(reddit) ಪ್ರತಿಯೊಬ್ಬರ ಆಸೆಯನ್ನು ಪೂರೈಸಲು ಸಾವಿರಕ್ಕೂ ಅಶ್ಲೀಲ ವೀಡಿಯೋಗಳ ವರ್ಗಗಳಿವೆ.
ವಯಸ್ಕ ವಿಷಯಗಳ ಮುಖ್ಯವಾಹಿನಿಯಾದ ವೆಬ್ಸೈಟ್ ಕಡಿಮೆ ಪ್ರವೇಶ ಆಗುತ್ತಿರುವುದರಿಂದ ಈ ಸಾಮಾಜಿಕ ಮಾಧ್ಯಮಗಳು(social media) ಈ ಖಾಲಿ ಜಾಗವನ್ನು ತುಂಬುತ್ತಿವೆ. ಹದಿಹರೆಯದ ವಯಸ್ಸಿನಲ್ಲಿ(teen age) ಈ ಅಶ್ಲೀಲ ವೀಡಿಯೋಗಳ ವ್ಯಸನದಿಂದಾಗಿ, ಸಾಮಾಜಿಕ ಸಂವಹನ(social interaction), ಭಾವನಾತ್ಮಕ ಕೌಶಲ್ಯ(emotional skills) ಮತ್ತು ಅರಿವಿನ ಕೌಶಲ್ಯಗಳಲ್ಲಿ(cognitive skills) ನಕಾರಾತ್ಮಕ ಪರಿಣಾಮ ಕಾಣುತ್ತಿದೆ. 2023 ರ ಒಂದು ಅಧ್ಯಯನವು ಭಾರತದಲ್ಲಿ ಸರಾಸರಿ 13 ವರ್ಷದಿಂದಲೇ ಮಕ್ಕಳು ಅಶ್ಲೀಲ ವೀಡಿಯೋಗಳನ್ನು ನೋಡಲು ಪ್ರಾರಂಭಿಸುತ್ತಾರೆ ಎಂದು ತಿಳಿಸಿದೆ. ಶೇಕಡಾ 50 ರಷ್ಟು ಹದಿಹರೆಯದ ವಯಸ್ಸಿನವರು ತಪ್ಪಿನಿಂದ(mistake) ಅಶ್ಲೀಲ ವೀಡಿಯೋಗಳನ್ನು ನೋಡಲು ಪ್ರಾರಂಭಿಸಿದೆವು ಎಂದು ಒಪ್ಪಿಕೊಂಡಿದ್ದಾರೆ.
10 ವರ್ಷದ ಹಿಂದೆ ಭಾರತದಲ್ಲಿ ಮೃದು ಅಶ್ಲೀಲ(soft porn) ವೀಡಿಯೊಗಳನ್ನು ಹಂಚಿಕೊಳ್ಳಲು ಅಂಗಡಿಗಳು ಇರುತ್ತಿದ್ದವು. ಈ ವೀಡಿಯೋಗಳನ್ನು ಬ್ಲೂಟೂತ್ನಿಂದ(bluetooth) ಕಳುಹಿಸಲಾಗುತ್ತಿತ್ತು. ಅನೇಕರು ವಯಸ್ಕರು ಪತ್ರಿಕೆ(adult magazine) ಮೇಲೆ ಅವಲಂಬಿತರಾಗಿದ್ದರು. ನಂತರ ಪೆನ್ ಡ್ರೈವ್(pendrive), ಸಿಡಿಗಳು(CD) ಬಂದವು. ಇದರಲ್ಲಿ ಡೌನ್ಲೋಡೆಡ್ ಕಂಟೆಂಟ್ ಇರುತ್ತಿದ್ದವು. ಇವುಗಳನ್ನು ಸುಲಭವಾಗಿ ಗೆಳೆಯರ ಸರ್ಕಲ್ನಲ್ಲಿ ಸಾಗಿಸಬಹುದಿತ್ತು. ಆದರೆ ಇಂದು 5000 ರೂನ ಸ್ಮಾರ್ಟ್ ಫೋನ್ ಮತ್ತು 50 ರೂನ ಇಂಟರ್ನೆಟ್, ಇಡೀ ಜಗತ್ತಿನ ಅಶ್ಲೀಲ ವೀಡಿಯೋಗಳು ನಿಮ್ಮ ಸ್ಕ್ರೀನ್(screen) ಮೇಲೆ ಇರುತ್ತದೆ. ಈ ರೀತಿಯಲ್ಲಿ ಒಂದು ವೈರಸ್ ಹರಡಿದಾಗ(spread) ಪ್ರತಿಯೊಬ್ಬರು ಅದರ ಸಂಪರ್ಕಕ್ಕೆ ಬರುತ್ತಾರೆ. "ಅಶ್ಲೀಲ ವೀಡಿಯೋ ನೋಡುವುದು ಸಾಮಾನ್ಯವಾಗಿದೆ, ಇದರಲ್ಲಿ ಏನು ಸಮಸ್ಯೆ ಇದೆ" ಎಂದು ನೀವು ಕೇಳಿದರೆ, ಅದರ ನಿಜವಾದ ಸಮಸ್ಯೆಯ ಬಗ್ಗೆ ತಿಳಿಸುವೆವು.
ಅಂತರ್ಜಾಲದಲ್ಲಿ(internet) 23 ನೇ ವಯಸ್ಸಿನ ಒಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಅವನು ಆತನ ಸಂಗತಿಯ ಜೊತೆ ಸಮಯ ಕಳೆಯುತ್ತಿದ್ದನು. ಆ ಸಮಯದಲ್ಲಿ ಅವನು ಶಿಶ್ನವು(penis) ಗಟ್ಟಿಯಾಗುತ್ತಿರಲಿಲ್ಲ. ಅವನು ಅಧಿಕ ಪ್ರಯತ್ನ ಪಟ್ಟ ನಂತರವು ನಿಗುರಲಿಲ್ಲ(erection). ಹೀಗಾಗಿ ಅವನಿಗೆ ಮದ್ಯದಲ್ಲೇ ನಿಲ್ಲಿಸಬೇಕಾಯಿತು. ಅವನು ನಾಚಿಕೆಯಿಂದ ಮುಖವನ್ನು ತೋರಿಸಲಿಲ್ಲ. ಇದೇ ರೀತಿ 2 - 3 ಬಾರಿ ಆಯಿತು. ಆತ ನಂತರ ಔಷದಿ ಅಂಗಡಿಯಿಂದ ಇದಕ್ಕಾಗಿ ಮಾತ್ರೆ ತೆಗೆದುಕೊಂಡು ಭಾರೀ ಪ್ರಮಾಣದಲ್ಲಿ ನುಂಗಿದ. ಇದರಿಂದ ಆತನ ಶಿಶ್ನವು ಗಟ್ಟಿಯಾಯಿತು. ಆದರೆ ವೀರ್ಯವು(semen) ಕೆಲವೇ ನಿಮಿಷಗಳಲ್ಲಿ ಹೊರ ಬಂತು. ಇದರ ನಂತರ ಆತನಿಗೆ ತಲೆನೋವು ಪ್ರಾರಂಭವಾಯಿತು. ಆತ ಒತ್ತಡದಿಂದ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಬೇಕಾಯಿತು. ಅಲ್ಲಿ ಡಾಕ್ಟರ್ ಆತನ ಮೆದುಳು ಅಶ್ಲೀಲ ವೀಡಿಯೋಗಳಿಗೆ ಕೂಡಿಕೊಂಡಿದೆ ಎನ್ನುತ್ತಾರೆ. ಅಂದರೆ ಅವನಿಗೆ porn masturbation orgasm(PMO), ರೀತಿಯ ಅಭ್ಯಾಸವಿಲ್ಲದೆ ಶಿಶ್ನವು ಗಟ್ಟಿಯಾಗುವುದಿಲ್ಲ.
ಅವನು ಲೈಂಗಿಕ ಆಸಕ್ತಿಯನ್ನು ಪಡೆಯಲು ನಿಜವಾದ ಮಹಿಳೆಯ ಬದಲು ಡಿಜಿಟಲ್ ಪೋರ್ನ್(digital porn) ಅವಶ್ಯಕತೆ ಇರುವ ರೀತಿ ತರಬೇತಿ ನೀಡಿದ್ದಾನೆ. ಅದು ಇಲ್ಲದೇ ಅವನು ಕಾರ್ಯರೂಪಕ್ಕೆ ತರಲು ಸಾಧ್ಯವಿಲ್ಲ. ಅವನು ಹಲವು ವರ್ಷಗಳಿಂದ ಅಶ್ಲೀಲ ವೀಡಿಯೋ ನೋಡುವುದರಿಂದ ಈ ರೀತಿ ಆಯಿತು. ಅವನು 8 ವರ್ಷಗಳಿಂದ ಅಶ್ಲೀಲ ವೀಡಿಯೋ ನೋಡಿಕೊಂಡು ಹಸ್ತಮೈಥುನ(masturbation) ಮಾಡುತ್ತಿದ್ದನು. ಇದರಿಂದ ಅವನ ಪೂರ್ತಿ ಜೀವನ ನಾಶವಾಯಿತು. ಅವನು ಬೇಕೆಂದರು ಇದನ್ನು ಬಿಡಲು ಸಾಧ್ಯವಾಗುತ್ತಿರಲಿಲ್ಲ. ಇದೇ ರೀತಿ ಮುಂದುವರೆದರೆ ಮುಂದೆ ಅವನಿಗೆ ಮಕ್ಕಳನ್ನು ಹುಟ್ಟಿಸಲು ಸಾಧ್ಯವಿಲ್ಲ ಎಂದು ತಿಳಿಯುತ್ತದೆ. ಏಕೆಂದರೆ ಅಶ್ಲೀಲ ವಿಷಯಗಳು ಗಂಡಸರ ಸಂತಾನೋತ್ಪತ್ತಿ ಹಾರ್ಮೋನ್ ಮಟ್ಟ(reproductive hormone level) ಮತ್ತು ವೀರ್ಯದ ಗುಣಮಟ್ಟದ(semen quality) ಮೇಲೆ ನಕಾರಾತ್ಮಕವಾಗಿ ಪ್ರಭಾವ ಬೀರುತ್ತದೆ. "ಅಶ್ಲೀಲ ವೀಡಿಯೊಗಳ ವ್ಯಸನದಿಂದ ಲೈಂಗಿಕ ಸಂಬಂಧಕ್ಕೆ(sexual relationship) ಪ್ರಭಾವ ಬೀರುತ್ತಿದೆ. ಅವಾಸ್ತವಿಕ ನಿರೀಕ್ಷೆಗಳು ಬರುತ್ತದೆ ಮತ್ತು ಬದುಕಿನ ಆತ್ಮೀಯತೆ(intimacy) ಕಡಿಮೆಗೊಳ್ಳುತ್ತದೆ" ಎಂದು ಡಾಕ್ಟರ್ ಸಮೀರ್ ಪರಿಖ್(samir parikh) ಅವರು ಹೇಳಿದ್ದಾರೆ.
ಈ ರೀತಿಯ ಸಮಸ್ಯೆಯಿಂದ ಸಾವಿರಾರು ಜನರು ಬಳಲುತ್ತಿದ್ದಾರೆ ಮತ್ತು ಯಾರಿಗೂ ಹೇಳಲು ಸಾಧ್ಯವಾಗುತ್ತಿಲ್ಲ. ಅಶ್ಲೀಲ ವೀಡಿಯೊಗಳ ವ್ಯಸನದಿಂದ ಸ್ವಯಂ ಆರೋಗ್ಯದ(self health) ಮೇಲಿನ ಪರಿಣಾಮ ಒಂದಾದರೆ, ಇದರಿಂದ ನೀವು ಇನ್ನೊಬ್ಬರಿಗೆ ನೋವು ಮಾಡುತ್ತಿರಬಹುದು. ಒಬ್ಬ ವ್ಯಕ್ತಿ ಗುದ ಸಂಭೋಗ(anal sex) ಮಾಡುವಾಗ ತನ್ನ ಹೆಂಡತಿಗೆ ನೋವು ಮಾಡಿದ. ಇದರ ಬಗ್ಗೆ ಆತನಿಗೆ ತಿಳಿಯಲೇ ಇಲ್ಲ. ಏಕೆಂದರೆ ಆತ ಇದನ್ನು ಅಶ್ಲೀಲ ವೀಡಿಯೋದಲ್ಲಿ ನೋಡಿದ ಮತ್ತು ಸಾಮಾನ್ಯ ಎಂದುಕೊಂಡಿದ.
ಒಂದು ಅಧ್ಯಯನದಲ್ಲಿ ಸಂಶೋಧಕರು 7,430 ಅಶ್ಲೀಲ ವೀಡಿಯೋಗಳನ್ನು ವಿಶ್ಲೇಷಣೆ ಮಾಡಿದರು. ಅದರಲ್ಲಿ ಶೇಕಡಾ 97 ರಷ್ಟು ವೀಡಿಯೋಗಳಲ್ಲಿ ಮಹಿಳೆಯರ ಜೊತೆಗೆ ಆಕ್ರಮಣಕಾರಿ(aggressive) ಮತ್ತು ನಿಂದನೀಯ ನಡವಳಿಕೆಯನ್ನು(abusive behavior) ತೋರಿಸಲಾಗಿದೆ. ಈ ರೀತಿಯ ವಿಷಯಗಳನ್ನು ನೋಡಿ, ನಿಮ್ಮ ಉಪಪ್ರಜ್ಞೆ ಮನಸ್ಸಿನಲ್ಲಿ(subconscious mind) ಯಾವ ರೀತಿ ಪ್ರಭಾವ ಬೀರಬಹುದು ಎಂಬುದನ್ನು ಯೋಚಿಸಿ. ನೀವು ಸಮಾಜಕ್ಕೆ ಹಾನಿಕಾರಕವಿರುವುದನ್ನು ಸಾಮಾನ್ಯ ಎಂದುಕೊಳ್ಳುತ್ತೀರಾ.
ಅಶ್ಲೀಲ ವೀಡಿಯೋ ಲೈಂಗಿಕ ಕಳ್ಳಸಾಗಣೆಗೆ ಒಂದು ಪ್ರಮುಖ ಕಾರಣವಾಗಿದೆ. ಅಮೇರಿಕಾದ ಕಾಣೆಯಾದ ಮತ್ತು ಶೋಷಿತ ಮಕ್ಕಳ ರಾಷ್ಟ್ರೀಯ ಕೇಂದ್ರದ(national centre for missing and exploited children) ವರದಿಯ ಪ್ರಕಾರ ಅಶ್ಲೀಲ ಉದ್ಯಮದಲ್ಲಿ 80ಕ್ಕೂ ಹೆಚ್ಚು ಮಹಿಳೆಯರನ್ನು ಲೈಂಗಿಕ ಕಳ್ಳಸಾಗಣೆಯಿಂದ ಕರೆ ತರಲಾಗುತ್ತಿದೆ. ಅವರಿಗೆ ದೈಹಿಕವಾಗಿ ಹಿಂಸೆ ನೀಡಲಾಗುತ್ತದೆ, ಶೋಷಣೆ(exploitation) ಮಾಡಲಾಗುತ್ತದೆ, ನಂತರ ಅಶ್ಲೀಲ ವೀಡಿಯೋಗಳ ಚಿತ್ರೀಕರಣ ಮಾಡಿಸಿಕೊಳ್ಳಲಾಗುತ್ತದೆ. ಹೀಗಾಗಿ ಅಶ್ಲೀಲ ವೀಡಿಯೋಗಳನ್ನು ಪ್ರಚಾರ(promote) ಮಾಡುವುದು ಲೈಂಗಿಕ ಕಳ್ಳಸಾಗಣೆಗೆ ಸಹಕರಿಸುವಂತಿದೆ. ಆಗಿದ್ದರೆ ಈ ರೀತಿ ಏಕೆ ಆಗುತ್ತದೆ? ಇದಕ್ಕೆ ಎರಡು ಮುಖ್ಯ ಕಾರಣಗಳು ಇವೆ.
ನಮ್ಮ ದೇಹಕ್ಕೆ ತಿನ್ನುವುದು, ಕುಡಿಯುವುದು ಮತ್ತು ಮಲಗುವ ರೀತಿಯೇ, ಲೈಂಗಿಕ ಆಸೆ ಇರುವುದು ಸಹಜವಾಗಿದೆ ಮತ್ತು ಅಶ್ಲೀಲ ವೀಡಿಯೋಗಳು ಈ ಆಸೆಯನ್ನು ಗುರಿ ಮಾಡುತ್ತವೆ. ಅಶ್ಲೀಲ ವೀಡಿಯೋಗಳು ಎಂದಿಗೂ ಆ ವಿಷಯ ನಿಮ್ಮ ಬದುಕುನಲ್ಲಿ ಯಾವ ರೀತಿ ನಕಾರಾತ್ಮಕ ಪ್ರಭಾವ ಮಾಡುತ್ತದೆ ಎಂಬುದನ್ನು ತಿಳಿಸುವುದಿಲ್ಲ. ಯಾವ ವಿಷಯವನ್ನು ಹೆಚ್ಚು ನಿಗ್ರಹಿಸುತ್ತಾರೋ ಅದು ಅಷ್ಟು ಬೇಗನೆ ಹೊರಬರುತ್ತದೆ ಎಂಬುದು ನಿಮಗೆ ತಿಳಿದಿರುತ್ತದೆ.
ನಮ್ಮ ಮೆದುಳು ಒಂದು ಪ್ರತಿಫಲ ವ್ಯವಸ್ಥೆಯ(reward system) ಮೇಲೆ ಕೆಲಸ ಮಾಡುತ್ತದೆ. ನಮಗೆ ಇಷ್ಟವಿರುವ ಕೆಲಸವನ್ನು ಮಾಡಿದಾಗ ಡೋಪಮೈನ್(dopamine) ಬಿಡುಗಡೆಯಾಗುತ್ತದೆ. ಇದರಿಂದ ನಾವು ಖುಷಿ ಅನುಭವ ಪಡೆಯುತ್ತೇವೆ. ಆದರೆ ಅತಿಯಾಗಿ ಅಶ್ಲೀಲ ವೀಡಿಯೋ ನೋಡುವುದರಿಂದ ಪ್ರತಿಫಲ ವ್ಯವಸ್ಥೆಯು ಅತಿಯಾಗಿ ಪ್ರಚೋದನೆಗೊಳ್ಳುತ್ತದೆ. ಇದರಿಂದ ಆತಂಕ(anxiety), ಪ್ರೇರಣೆಯ ಕೊರತೆ(lack of motivation), ಖಿನ್ನತೆಯ(depression) ರೀತಿಯ ಸಮಸ್ಯೆ ಕಾಣಸಿಗುತ್ತದೆ. ಅಶ್ಲೀಲ ವೀಡಿಯೋಗಳನ್ನು ಅತಿಯಾಗಿ ನೋಡುವುದು ನಮ್ಮ ಮೆದುಳಿನ ಪ್ರತಿಫಲ ವ್ಯವಸ್ಥೆಯ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ.
ನಮಗೆ ತಾರ್ಕಿಕ ಚಿಂತನೆ(logical thinking), ತರ್ಕಬದ್ಧ ನಿರ್ಧಾರ ತೆಗೆದುಕೊಳ್ಳಲು(rational decision making) ಮತ್ತು ಸ್ವಯಂ ನಿಯಂತ್ರಣಕ್ಕೆ(self control) ಜವಾಬ್ದಾರಿಯುತವಾದ ಮೆದುಳಿನ ಮುಂಭಾಗದ ಕಾರ್ಟೆಕ್ಸ್(prefrontal cortex) ಭಾಗವು ದುರ್ಬಲಗೊಳ್ಳುತ್ತದೆ. ಇದರಿಂದ ನಾವು ಪ್ರೇರೇಪಿತರಾಗಿ ದೀರ್ಘವಾದಿ ಗುರಿಗಳ ಮೇಲೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಒತ್ತಡ(stress), ಆತಂಕ(anxiety) ಮತ್ತು ಭಾವನಾತ್ಮಕ ಸಂಘರ್ಷಗಳಿಂದ(emotional conflicts) ಪರಿಹಾರಕ್ಕಾಗಿ ಜನರು ಅಶ್ಲೀಲ ವೀಡಿಯೋಗಳನ್ನು ನೋಡುತ್ತಾರೆ.
ಹೈ ಸ್ಕೂಲ್, ಕಾಲೇಜು ಮತ್ತು ಆರಂಭಿಕ ವೃತ್ತಿಜೀವನದಲ್ಲಿ ಹದಿಹರೆಯದವರು(teenager) ಅನೇಕ ಭಾವನಾತ್ಮಕ ಸಂಘರ್ಷಗಳನ್ನು ಎದುರಿಸುತ್ತಾರೆ. ಇವುಗಳನ್ನು ಪರಿಹರಿಸಲು ಸಾಧ್ಯವಾಗದೆ ತಕ್ಷಣದ ತೃಪ್ತಿಗಾಗಿ(gratification) ಅಶ್ಲೀಲ ವೀಡಿಯೋಗಳ ಕಡೆಗೆ ಹೋಗುತ್ತಾರೆ. ಭಾವನಾತ್ಮಕ ಸಂಘರ್ಷಗಳ ಮೇಲೆ ಗಮನ ಹರಿಸದಿರುವುದು ದೀರ್ಘವಧಿಯಲ್ಲಿ ಅಪಾಯಕಾರಿಯಾಗಿದೆ. ಒಂದು ಅಧ್ಯಯನದ ಪ್ರಕಾರ ಯಾರು ಅಶ್ಲೀಲ ವೀಡಿಯೋವನ್ನು ಒಂದು ತಪ್ಪಿಸಿಕೊಳ್ಳುವ ಮಾಧ್ಯಮವಾಗಿ(escape medium) ನೋಡುತ್ತಾರೋ ಅವರು ಮುಂದೆ ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯದ ಸಮಸ್ಯೆಯ ಜೊತೆ ಹೋರಾಡುತ್ತಾರೆ ಎಂದು ತಿಳಿದು ಬಂದಿದೆ.
ಖಿನ್ನತೆ ಮತ್ತು ಆತಂಕ ಇಂದು ಜಗತ್ತಿನ ಪ್ರಮುಖ ಆರೋಗ್ಯ ಸ್ಥಿತಿಯಲ್ಲಿ ಒಂದಾಗಿದೆ ಮತ್ತು ಅಶ್ಲೀಲ ವೀಡಿಯೋ ಇದಕ್ಕೆ ಮಧುಮೇಹದಲ್ಲಿ(diabities) ಸಕ್ಕರೆ ತಿನ್ನಿಸಿದಂತಾಗಿದೆ. ಇದನ್ನು ತಿನ್ನುವಾಗ ನಿಮಗೆ ಚೆನ್ನಾಗೆನಿಸುತ್ತದೆ, ಆದರೆ ಇದು ನಿಮ್ಮನ್ನು ಸಾವಿಗೆ ಹತ್ತಿರ ತೆಗೆದುಕೊಂಡು ಹೋಗುತ್ತಿರುತ್ತದೆ.
ಭಾರತದಲ್ಲಿ ಲೈಂಗಿಕತೆಯನ್ನು ನಿಷೇಧಿತ ವಿಷಯದ ರೀತಿ ನೋಡಲಾಗುತ್ತದೆ. ಇದರ ಬಗ್ಗೆ ತೆರೆದು ಯಾರು ಮಾತನಾಡುವುದಿಲ್ಲ. ಇಂದು ಅಜ್ಞಾನದ(ignorance) ಕಾರಣ ಜನಗಳು ತಮ್ಮ ಕುತೂಹಲವನ್ನು ಪೂರ್ತಿ ಮಾಡಿಕೊಳ್ಳಲು ಅಶ್ಲೀಲ ವೀಡಿಯೋಗಳ ಕಡೆಗೆ ಹೋಗುತ್ತಾರೆ. ಲೈಂಗಿಕ ಮತ್ತು ವರ್ತನೆಯ ವಿಜ್ಞಾನ ತಜ್ಞರ(sexual and behavioural science experts) ಪ್ರಕಾರ ಲೈಂಗಿಕತೆ ಎಂಬುದು ಹದಿಹರೆಯದವರಲ್ಲಿ ಇರುವ ಅತ್ಯಂತ ಕುತೂಹಲಕಾರಿ ವಿಷಯವಾಗಿದೆ.
"sex is the topic about which teenagers have the most curiosity."
ಸರಿಯಾದ ಲೈಂಗಿಕ ಶಿಕ್ಷಣ ಇರದ ಕಾರಣ ಈ ಕುತೂಹಲವು ಅವರನ್ನು ಅಶ್ಲೀಲ ವೀಡಿಯೋ ವೆಬ್ಸೈಟ್ಗಳಿಗೆ ತೆಗೆದುಕೊಂಡು ಹೋಗುತ್ತದೆ. ಅತಿಯಾದ ಅಶ್ಲೀಲ ವೀಡಿಯೋ ನೋಡುವುದರಿಂದ ಮುಂಭಾಗದ ಕಾರ್ಟೆಕ್ಸ್ ಭಾಗದ ಸಾಮರ್ಥ್ಯ ಕಡಿಮೆಗೊಳ್ಳುತ್ತದೆ. ಈ ಸ್ಥಿತಿಯನ್ನು ಹೈಪೋಫ್ರಂಟಾಲಿಟಿ(hypofrontality) ಎಂದು ಕರೆಯುತ್ತಾರೆ. ಇದರಿಂದ ನಿರ್ಧಾರ ತೆಗೆದುಕೊಳ್ಳುವುದು ಮತ್ತು ಆವೇಗ ನಿಯಂತ್ರಣದಲ್ಲಿ ಕೆಟ್ಟ ಪ್ರಭಾವ ಬೀರುತ್ತದೆ.
ಜನರು ಇವುಗಳಲ್ಲಿ ಎಷ್ಟು ಮುಳುಗುತ್ತಾರೆಂದರೆ ಅವರಿಗೆ ನಿಜವಾದ ಬದುಕಿನಲ್ಲಿ ಅನೈತಿಕ ಮತ್ತು ಕಾನೂನುಬಾಹಿರ ಕ್ರಮಗಳನ್ನು ತೆಗೆದುಕೊಳ್ಳಲು ನಾಚಿಕೆಯಾಗುವುದಿಲ್ಲ. ಈ ಪರಿಸ್ಥಿತಿಯು ನಮ್ಮ ಸಮಾಜಕ್ಕೆ ಅಪಾಯಕಾರಿಯಾಗಿದೆ. ಈಗ ಇವುಗಳ ಪರಿಹಾರಗಳ ಬಗ್ಗೆ ತಿಳಿದುಕೊಳ್ಳೋಣ.
ಇದರ ಪರಿಹಾರಕ್ಕೆ ನಾವು ಅಂತರ್ಜಾಲವನ್ನು(internet) ಬಳಸುವುದನ್ನು ನಿಲ್ಲಿಸಬೇಕೇ? ಇದು ಪ್ರಾಯೋಗಿಕವಾಗಿಲ್ಲ. ಅಶ್ಲೀಲ ಒಂದು ರೂಢಿಯ ಸಮಸ್ಯೆಯಾಗಿದ್ದು(habitual problem), ನಾವು ನಮ್ಮ ಹವ್ಯಾಸವನ್ನು ಬದಲಿಸಿಕೊಳ್ಳಬೇಕು.
ಮೊದಲಿಗೆ ನಾವು ಈ ಸಮಸ್ಯೆಯನ್ನು ಸ್ವೀಕರಿಸಿಕೊಳ್ಳಬೇಕು(accept). ಯಾವುದೇ ರೀತಿಯ ವ್ಯಸನದಿಂದ ಹೊರಬರಲು ಸ್ವೀಕರಣೆ ಮೊದಲ ಹಂತವಾಗಿದೆ. ಅಂದರೆ, "ನಾನು ಪೋರ್ನ್ ಅಡಿಕ್ಟ್(i am porn addict)" ಆಗಿದ್ದೇನೆ ಎಂಬುದನ್ನು ಸ್ವೀಕರಿಸಬೇಕು. ನಂತರ ಇದರ ಪ್ರಚೋದಕಗಳನ್ನು(trigger) ಗುರುತಿಸಬೇಕು. ಯಾವಾಗ ಮತ್ತು ಏಕೆ ನಮಗೆ ಅಶ್ಲೀಲ ವೀಡಿಯೋ ನೋಡಲು ಪ್ರಚೋದನೆಯಾ ಅನುಭವವಾಗುತ್ತದೆ ಎಂಬುದನ್ನು ತಿಳಿಯಬೇಕು. ನಾವು ಬೇಸರ(bore), ಒತ್ತಡ(stress), ಅಥವಾ ಒಂಟಿತನ(lonely) ರೀತಿಯ ಕಾರಣಗಳ ಬಗ್ಗೆ ತಿಳಿದುಕೊಂಡು ಪರ್ಯಾಯ ಚಟುವಟಿಕೆಗಳ(alternative activities) ಕಡೆ ಗಮನ ಹರಿಸಬಹುದು.
ನೀವು ಬೇಸರದಲ್ಲಿದ್ದರೆ ಯಾವುದಾದರೂ ಹವ್ಯಾಸದ ಮೇಲೆ ಗಮನ ಹರಿಸಿ. ಒತ್ತಡದಲ್ಲಿದ್ದರೆ ಧ್ಯಾನ(meditation) ಇಲ್ಲ ವ್ಯಾಯಾಮ(exercise) ಮಾಡಿ. ಒಂಟಿತನ ಅನುಭವಿಸುತ್ತಿದ್ದರೆ ಸ್ನೇಹಿತರು ಮತ್ತು ಕುಟುಂಬದ ಜೊತೆ ಸಮಯ ಕಳೆಯಿರಿ. ನಿಮ್ಮನ್ನು ಕಾರ್ಯನಿರತರಾಗಿರಿಸಿ(busy). ಉತ್ಪಾದಕ(productive) ವಿಷಯಗಳಲ್ಲಿ ಕಾರ್ಯನಿರತರಾಗಿವುದರಿಂದ ನಿಮಗೆ ಇತರ ವಿಷಯಗಳ ಬಗ್ಗೆ ಯೋಚಿಸಲು ಸಮಯವೇ ಇರುವುದಿಲ್ಲ.
ಒಂದು ಹೊಸ ಕೌಶಲ್ಯ(skill) ಕಲಿಯಿರಿ, ಪುಸ್ತಕಗಳನ್ನು ಓದಿ, ಹೊರಾಂಗಣ ಚಟುವಟಿಕೆಗಳನ್ನು ಮಾಡಿ. ಇದರಿಂದ ನಿಮ್ಮ ಮನಸಸ್ಸು ಉತ್ತೇಜಗೊಳ್ಳುತ್ತದೆ ಮತ್ತು ನಿಮಗೆ ತೃಪ್ತಿ(satisfaction) ಕೂಡ ದೊರೆಯುತ್ತದೆ.
ಬೆಂಬಲ ವ್ಯವಸ್ಥೆ(support system) ಮಾಡುವುದು ತುಂಬಾನೇ ಪ್ರಮುಖವಾಗಿದೆ. ನಿಮ್ಮ ಸ್ನೇಹಿತರ ವಲಯದಲ್ಲಿ ಅಶ್ಲೀಲ ವೀಡಿಯೋವಿರದ(porn free) ಪರಿಸರವನ್ನು ಸೃಷ್ಟಿ ಮಾಡಿ. ಇದರಿಂದ ಅವರ ಭಾವನಾತ್ಮಕ ಬೆಂಬಲ ನಿಮ್ಮ ಪಯಣದಲ್ಲಿ ಅಧಿಕ ಸಹಾಯ ಮಾಡುತ್ತದೆ. ನಿಮ್ಮ ಗುರಿಗಳನ್ನು ಇಟ್ಟುಕೊಳ್ಳಿ. ನಿಮ್ಮ ದೀರ್ಘಾವಧಿ, ಅಲ್ಪಾವಧಿ ಗುರಿಗಳ ಬಗ್ಗೆ ತಿಳಿದು ಅವುಗಳ ಮೇಲೆ ಗಮನ ಹರಿಸಿ. ಇದರಿಂದ ನಿಮಗೆ ಒಂದು ಮಾರ್ಗ ದೊರೆತು ಪ್ರೇರಿತ ಭಾವನೆಯಲ್ಲಿ ಇರುತ್ತೀರ. ನಿಮ್ಮ ಮೆದುಳಿಂದ ಲೈಂಗಿಕತೆಯನ್ನು ತ್ಯಜಿಸಿ(desexualize). ಅಶ್ಲೀಲ ರೀತಿಯ ವಿಷಯಗಳಿಂದ ದೂರವಿರಿ ಮತ್ತು "ಲೈಂಗಿಕತೆ ಜೀವನದ ಒಂದು ಭಾಗವಾಗಿದೆ ಹೊರತು ಜೀವನವಲ್ಲ" ಎಂಬುದನ್ನು ನಂಬಿರಿ.
"sex is a part of life, not the whole life."
ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.
Explore all our Posts by categories.
See all comments...