Website designed by @coders.knowledge.

Website designed by @coders.knowledge.

The Intelligent Investor Book Summary | ಇಂಟೆಲಿಜೆಂಟ್ ಇನ್ವೆಸ್ಟರ್ ಪುಸ್ತಕದ ವಿಶ್ಲೇಷಣೆ

Watch Video

ಪ್ರತಿಯೊಬ್ಬ ಹೂಡಿಕೆದಾರ ಪುಸ್ತಕಗಳನ್ನು ಓದುವುದು ಬಹಳ ಮುಖ್ಯವಾಗಿದೆ. ಏಕೆಂದರೆ ನೀವು ಇತರರ ತಪ್ಪುಗಳಿಂದ ಕಲಿಯುತ್ತೀರಿ ಮತ್ತು ಇತರರ ಬುದ್ಧಿವಂತಿಕೆಯಿಂದ ಸುಧಾರಿಸುತ್ತೀರಿ(improve). ದಿ ಇಂಟೆಲಿಜೆಂಟ್ ಇನ್ವೆಸ್ಟರ್(the intelligent investor), ಈ ಪುಸ್ತಕವನ್ನು 1934 ರಂದು ಬರೆಯಲಾಗಿತು.

ಈ ಪುಸ್ತಕವನ್ನು ಬರೆದವರು ಹೂಡಿಕೆಯ ಜಗತ್ತಿನಲ್ಲಿ ತುಂಬಾ ವಿಶೇಷವಾಗಿದ್ದಾರೆ. ಅವರ ಹೆಸರೇ ಬೆಂಜಮಿನ್ ಗ್ರಹಾಂ(benjamin graham). ಇವರು ಹೂಡಿಕೆಯ ಮಾಂತ್ರಿಕರಾದ ವಾರೆನ್ ಬಫೆಟ್(warren buffett) ಗುರು ಸಹ ಆಗಿದ್ದಾರೆ. ವಾರೆನ್ ಬಫೆಟ್ ಅವರ ಸಂಪೂರ್ಣ ಹೂಡಿಕೆಯ ಜ್ಞಾನವನ್ನು ಬೆಂಜಮಿನ್ ಗ್ರಹಾಂನಿಂದಲೇ ಪಡೆದರು.

benjamin graham in the intelligent investor in kannada
benjamin graham

ಈ ಪುಸ್ತಕವನ್ನು 1934 ರಂದು ಬರೆಯಲಾಗಿದ್ದರೂ, ಇದು ಇಂದಿಗೂ ಬಹಳ ಸಂಬಂಧಿಸಿದೆ. 1934 ರಿಂದ 2022ರ ವರೆಗೂ, ಷೇರು ಮಾರುಕಟ್ಟೆಯಲ್ಲಿ ಅನೇಕ ಅಪ್ ಡೌನ್ ಆಗಿದೆ. ದಿ ಇಂಟೆಲಿಜೆಂಟ್ ಇನ್ವೆಸ್ಟರ್, ಈ ಎಲ್ಲ ಅಪ್ ಡೌನ್ ನೋಡಿದೆ ಮತ್ತು ಇವುಗಳಿಗೆ ತುಂಬಾನೇ ಹತ್ತಿರವಿದೆ. ಹೀಗಾಗಿ ನಾವು ಈ ಪುಸ್ತಕದ ವಿಶ್ಲೇಷಣೆ(analysis) ಮಾಡುತ್ತಿದ್ದೇವೆ.

ಈ ಪುಸ್ತಕವನ್ನು ಬರೆದಿರುವ ರೀತಿಯೇ ಅತ್ಯುತ್ತಮ ವಿಷಯವಾಗಿದೆ. ಈ ಪುಸ್ತಕದಲ್ಲಿ ಹೂಡಿಕೆಯನ್ನು ಹೇಗೆ ಪ್ರಾರಂಭಿಸಬೇಕೆಂಬುದನ್ನು ಸರಳವಾಗಿ ತಿಳಿಸಲಾಗಿದೆ. ಯಾವ ರೀತಿ ಷೇರು ಮಾರುಕಟ್ಟೆಯನ್ನು ನೋಡಬೇಕು? ಕಂಪನಿ ಮತ್ತು ಅದರ ಪ್ರೈಸ್ ಅನ್ನು ಹೇಗೆ ಅನಲೈಸ್ ಮಾಡಬೇಕು? ಎಂಬುದನ್ನು ತಿಳಿಸಲಾಗಿದೆ. ತುಂಬಾ ತೊಡಕಿನಿಂದ(complication) ಬರೆದಿರುವ ಅನೇಕ ಹೂಡಿಕೆಯ ಪುಸ್ತಕಗಳಿಗಿಂತ ದಿ ಇಂಟೆಲಿಜೆಂಟ್ ಇನ್ವೆಸ್ಟರ್ ವಿಭಿನ್ನವಾಗಿದೆ.

ಇದನ್ನು ಓದಿ: ಷೇರು ಮಾರುಕಟ್ಟೆಯ ಮೇಲೆ ಸಂಪೂರ್ಣ ವಿವರ

1. ಮೌಲ್ಯ ಹೂಡಿಕೆ.

value investing in the intelligent investor in kannada
value investing

ಮೌಲ್ಯ ಹೂಡಿಕೆ, ಹೂಡಿಕೆಯ ಒಂದು ರೀತಿ ಆಗಿದೆ. ಇದರ ಅರ್ಥ, ನೀವು ಯಾವುದೇ ಕಂಪನಿಯ ಷೇರನ್ನು ವಿಶ್ಲೇಷಣೆ ಮಾಡಿ, ಅರ್ಥಮಾಡಿಕೊಂಡು ಅದರ ಸ್ವಾಭಾವಿಕ ಮೌಲ್ಯ(intrinsic value) ಗಿಂತ ಕಡಿಮೆ ಬೆಲೆಯಲ್ಲಿ ತೆಗೆದುಕೊಂಡು, ಅದಕ್ಕೆ ಸುರಕ್ಷತೆಯ ಅಂಚು(margin of safety) ಹಾಕಿರುತ್ತೀರಾ.

ಇದು ನಿಮಗೆ ಅರ್ಥವಾಗಿಲ್ಲವೆಂದು ತಿಳಿಯುತ್ತದೆ. ಹೀಗಾಗಿ ಇದರಲ್ಲಿ ಇರುವ ಕೆಲವು ಮುಖ್ಯ ಪದಗಳ ಬಗ್ಗೆ ಮೊದಲು ತಿಳಿಯೋಣ.

ಇದನ್ನು ಓದಿ: ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಗೇಮ್ ಪ್ಲಾನ್

2. ಸ್ವಾಭಾವಿಕ ಮೌಲ್ಯ.

intrinsic value in the intelligent investor in kannada
intrinsic value

ಒಂದು ಸ್ಟಾಕ್ 200ರೂಗೆ ಟ್ರೆಡಿಗ್ ಆಗುತ್ತಿರುತ್ತದೆ. ಅದು ಆ ಕಂಪನಿಯ ಮೌಲ್ಯ ಆಗಿರುವುದಿಲ್ಲ. ಷೇರು ಮಾರುಕಟ್ಟೆಯಲ್ಲಿ ಬೆಲೆ(price) ದಿನವಿಡೀ ಪ್ರತಿ ನಿಮಿಷ, ಪ್ರತಿ ಸೆಕೆಂಡ್ ಬದಲಾಗುತ್ತಿರುತ್ತದೆ. ಆದರೆ ಕಂಪನಿಯ ಮೌಲ್ಯ ಪ್ರತಿ ನಿಮಿಷ, ಪ್ರತಿ ಸೆಕೆಂಡ್ ಬದಲಾಗುತ್ತದೆಯೇ? ಉತ್ತರ ಇಲ್ಲ. ಆ ಮೌಲ್ಯವನ್ನೇ ನಾವು ಸ್ವಾಭಾವಿಕ ಮೌಲ್ಯ ಎಂದು ಕರೆಯುತ್ತೇವೆ.

ಒಂದು ಮೊಬೈಲ್ ಫೋನ್ ಕಂಪನಿ ತೆಗೆದುಕೊಳ್ಳಿ. ಆಗಿದ್ದರೆ ಅದರ ಬೆಲೆ ಏನು? ಅದರ ರೆವೆನ್ಯೂ ಏನು? ಅದರ ಪ್ರಾಫಿಟ್ ಎಷ್ಟು? ಕಂಪನಿಯಲ್ಲಿ ಎಷ್ಟು ಡಿವಿಡೆಂಡ್(dividend) ಜನರೇಟ್ ಆಗುತ್ತಿದೆ? ಅದರ ಲಾಂಗ್ ಟರ್ಮ್ ಪೊಟೆನ್ಶಿಯಲ್ ಹೇಗಿದೆ? ಅದರ ಕಾಂಪಿಟೇಟಿವ್ ಅಡ್ವಾಂಟೇಜ್ ಏನು? ಇವೆಲ್ಲದರ ಬಗ್ಗೆ ನೀವು ಯೋಚಿಸಿದಾಗ ನಿಮಗೆ ಆ ಕಂಪನಿಯ ಮೌಲ್ಯದ ಬಗ್ಗೆ ತಿಳಿಯುತ್ತದೆ. ಅದನ್ನೇ ನಾವು ಸ್ವಾಭಾವಿಕ ಮೌಲ್ಯ ಎಂದು ಕರೆಯುತ್ತೇವೆ. ಕಂಪನಿಯ ನಿಜವಾದ ಫ್ಯಾಕ್ಟರ್, ನಿಜವಾದ ಗಳಿಕೆಯಿಂದ(earnings) ಇದನ್ನು ಅಳೆಯಲಾಗುತ್ತದೆ ಹೊರತು ಕಂಪನಿಯ ಶೇರ್ ಬೆಲೆಯಿಂದಲ್ಲ.

Note: ನೀವು ಶೇರ್‌ ಬೆಲೆ(share price) ಕಡಿಮೆ ಅಥವಾ ಬಹಳ ಇರುವುದನ್ನು ನೋಡಿ ಶೇರ್ ಖರೀದಿಸಬಾರದು. ಬದಲಿಗೆ ನಾವು ಅದರ ಮೌಲ್ಯದ ಬಗ್ಗೆ ತಿಳಿಯಬೇಕು. ಒಂದು ವೇಳೆ ಅದರ ಮೌಲ್ಯಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿದ್ದರೆ, ಅದನ್ನು ನಾವು ಖರೀದಿಸಬೇಕು.

ನೀವು ಒಂದು ಷೇರನ್ನು ಖರೀದಿಸಲು ಬಯಸಿದರೆ ಅದರ ಸ್ವಾಭಾವಿಕ ಮೌಲ್ಯಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬೇಕು.

ಇದನ್ನು ಓದಿ: ಷೇರು ಮಾರುಕಟ್ಟೆ ಹೇಗೆ ಕಾರ್ಯನಿರ್ವಹಿಸುತ್ತದೆ?

3. ಸುರಕ್ಷತೆಯ ಅಂಚು.

margin of safety in the intelligent investor in kannada
margin of safety

ನೀವು ಕಂಡುಕೊಳ್ಳುವ ಸ್ವಾಭಾವಿಕ ಮೌಲ್ಯ 100% ಆಗಿರುವುದಿಲ್ಲ. ಕಂಪನಿ ವರ್ಷಕ್ಕೆ 10ರೂ ಗಳಿಸುತ್ತಿದೆ, ಹೀಗಾಗಿ ಅದರ ಸ್ವಾಭಾವಿಕ ಮೌಲ್ಯ 100 ರೂ ಇರಬೇಕು ಎಂದು ನೀವು ಹೇಳಬಹುದು. ಯಾರಿಗೆ ಗೊತ್ತು, ಅದರ ಮೌಲ್ಯ 200 ಅಥವಾ 50 ಆಗಿರಬಹುದು. ಹೀಗಾಗಿ ನೀವು ನಿಮ್ಮ ಕ್ಯಾಲ್ಕುಲೇಷನ್ ಅಲ್ಲಿ ಕೆಲವು ಸೇಫ್ಟಿಯನ್ನು ಹಾಕಬೇಕು ಅದನ್ನೇ ಸುರಕ್ಷತೆಯ ಅಂಚು(margin of safety) ಎನ್ನಲಾಗುತ್ತದೆ.

Note: ಕಂಪನಿಯ ಸ್ವಾಭಾವಿಕ ಮೌಲ್ಯಗಿಂತ ಕಡಿಮೆ ಬೆಲೆಯೊಂದಿಗೆ ಸಾಕಷ್ಟು(sufficient) ಸುರಕ್ಷತೆಯ ಅಂಚಿನ ಜೊತೆಗೆ ಕಂಪನಿಯ ಶೇರು ಖರೀದಿಸುವುದನ್ನು ಮೌಲ್ಯ ಹೂಡಿಕೆ ಎನ್ನಲಾಗುತ್ತದೆ.

Question 1: ನಮ್ಮ ಸ್ನೇಹಿತ 10,000 ಹೂಡಿಕೆ ಮಾಡಿ ಕೆಲವೇ ದಿನದಲ್ಲಿ 15,000 ಸಾವಿರ ಗಳಿಸಿದ. ಅಂದರೆ 5,000 ರೂ ಲಾಭ ಮಾಡಿಕೊಂಡ. ಆಗಿದ್ದರೆ ಅವನು ಹೂಡಿಕೆ ಮಾಡಿರುವುದು ಮತ್ತು ಮೌಲ್ಯ ಹೂಡಿಕೆಗೆ ಇರುವ ವ್ಯತ್ಯಾಸವೇನು? ಮತ್ತು ನಾವು ಅದನ್ನು ಮಾಡದೆ, ಮೌಲ್ಯ ಹೂಡಿಕೆಯನ್ನು ಏಕೆ ಮಾಡಬೇಕು?

trading in the intelligent investor in kannada
trading

ಈ ಜಗತ್ತಿನಲ್ಲಿ ಯಾವುದೂ ಕೂಡ ಸರಿ ಅಥವಾ ತಪ್ಪು ಎಂಬುದಿಲ್ಲ. ಹೂಡಿಕೆಯಲ್ಲಿ ಒಬ್ಬ ಟ್ರೇಡರ್ ಕೂಡ ಹಣವನ್ನು ಗಳಿಸುತ್ತಾನೆ ಅಥವಾ ಕಳೆದುಕೊಳ್ಳುತ್ತಾನೆ. ಕೆಲವರು ಗ್ರೊಥ್ ಇನ್ವೆಸ್ಟಿಂಗ್ ಮಾಡುತ್ತಾರೆ, ಕೆಲವರು ಫಾರ್ಮುಲಾ ಇನ್ವೆಸ್ಟಿಂಗ್ ಮಾಡುತ್ತಾರೆ, ಕೆಲವರು ROC ಅಥವಾ PE ಮೇಲೆ ನಿಂತಿರುವ ಮ್ಯಾಜಿಕ್ ಫಾರ್ಮುಲಾ ಇನ್ವೆಸ್ಟಿಂಗ್ ಮಾಡುತ್ತಾರೆ, ಕೆಲವರು ಆವೇಗ(momentum) ಇನ್ವೆಸ್ಟಿಂಗ್ ಮಾಡುತ್ತಾರೆ. ಆದರೆ ಮೌಲ್ಯ ಹೂಡಿಕೆ ಊಹಾಪೋಹಕ್ಕಿಂತ(speculation) ವಿಭಿನ್ನವಾಗಿದೆ.

ಇದನ್ನು ಓದಿ: ಯಶಸ್ಸು ಕಾಣಲು ಚಾಣಕ್ಯರ ನಾಲ್ಕು ನೀತಿಗಳು

4. ಊಹಾಪೋಹ ಎಂದರೇನು?

ಐಫೋನ್ ಹೊಸ ಫೋನ್ ಲಾಂಚ್ ಮಾಡುತ್ತಿದೆ. ಹೀಗಾಗಿ ಅದರ ಶೇರ್ ಬೆಲೆ ಹೆಚ್ಚಾಗಬಹುದು. ಹೀಗಾಗಿ ನಾನು ಅದನ್ನು ಖರೀದಿಸುತ್ತೇನೆ. ಇಲ್ಲ, ಈ ಕಂಪನಿಯ ನ್ಯೂಸ್ ಬರುತ್ತಿದೆ. ಹೀಗಾಗಿ ಅದರ ಷೇರು ಖರೀದಿಸುವೇ ಅಥವಾ ಮಾರುವೇ. ಇವೆಲ್ಲವೂ ಊಹಾಪೋಹ ಆಗಿದೆ. ಮೌಲ್ಯ ಹೂಡಿಕೆ ದೀರ್ಘಾವಧಿ ಆಧಾರಿತವಾಗಿದೆ(long term based). ಕಂಪನಿಯ ದೀರ್ಘಾವಧಿ ಬೆಳವಣಿಗೆಯ ಮೇಲೆ ನಿಂತಿದೆ.

Note: ಊಹಾಪೋಹ ಮತ್ತು ಟ್ರೇಡಿಗ್ 99ರಷ್ಟು ಹೂಡಿಕೆದಾರರಿಗೆ ಸೂಕ್ತವಲ್ಲ. ಏಕೆಂದರೆ ತುಂಬಾ ಪ್ರೊಫೆಷನಲ್ ಟ್ರೇಡರ್ಸ್ ನಿಮ್ಮ ವಿರುದ್ಧವಾಗಿ ಕೂತಿರುತ್ತಾರೆ.

5. ಮೌಲ್ಯ ಹೂಡಿಕೆಯ 3 ಮೂಲ ತತ್ವಗಳು.

1. ಕಂಪನಿಯ ಅಲ್ಪಾವಧಿ(short term) ಬೆಳವಣಿಗೆಯ ಮೇಲೆ ನೀವು ನಿರ್ಧರಿಸಬೇಡಿ. ಕಂಪನಿಯ ಬೆಲೆ ಎಷ್ಟೇ ಮೇಲೆ ಹೋಗಲಿ ಅಥವಾ ಕೆಳಗೆ ಬರಲಿ. ನೀವು ಕಂಪನಿಯ ದೀರ್ಘಾವಧಿಯ ಬೆಳವಣಿಗೆಯನ್ನು ನೋಡಬೇಕು. ಷೇರು ಮಾರುಕಟ್ಟೆಯಲ್ಲಿ ಕೆಲವು ಕಂಪನಿಯು ಹೆಚ್ಚಿನ ಮೌಲ್ಯದ್ದಾಗಿರುತ್ತದೆ, ಆದರೆ ಅದರ ಸ್ಟಾಕ್ ಕಡಿಮೆ ಬೆಲೆಗೆ ಸಿಗುತ್ತದೆ. ಹೀಗಾಗಿ ಕಂಪನಿಯ ಬೆಳವಣಿಗೆ ಮಾರುಕಟ್ಟೆ ಬೆಲೆಯಿಂದ(market price) ಸ್ವತಂತ್ರವಾಗಿರುತ್ತದೆ.

2. ವೈವಿಧ್ಯತೆ. ಮೌಲ್ಯ ಹೂಡಿಕೆಯ ಎರಡನೇ ತತ್ವ ಎಂದರೆ ನಿಮ್ಮ ಶೇರ್‌ಗಳನ್ನು ವೈವಿಧ್ಯಮಯ(diversify) ಮಾಡುವುದು. ನಾವು ಯಾವಾಗಲು ತಪ್ಪು ಮಾಡುವ ಚಾನ್ಸ್ ಇರಬಹುದು. ಹೀಗಾಗಿ ನೀವು ಕೇವಲ ಒಂದೇ ಕಂಪನಿಯ ಷೇರು ಖರೀದಿಸುವ ಬದಲು ಅನೇಕ ಕಂಪನಿಯಲ್ಲಿ ಖರೀದಿಸಬೇಕು.

3. ಇನ್ನು ಮೂರನೇಯದ್ದು, ನೀವು ರಾತ್ರೋರಾತ್ರಿಯ ರಿಟರ್ನ್‌ ಅನ್ನು ನೋಡಬಾರದು. ಉದಾಹರಣೆಗೆ, ನಾನು ಇದರಲ್ಲಿ ಇಷ್ಟು ಹಣ ಹಾಕಿದೆ ಎರಡು ವಾರದಲ್ಲಿ ಇಷ್ಟಗುತ್ತದೆ. ಈ ರೀತಿ ಮಾಡಬೇಡಿ. ನಿಮ್ಮ ಗಮನ(focus) ಯಾವಾಗಲೂ ದೀರ್ಘಾವಧಿಯ ಮೇಲೆ ಇರಲಿ. ನೀವು ಹೂಡಿಕೆ ಮಾಡುವಾಗ ಈ 3 ಮೂಲ ತತ್ವಗಳನ್ನು(basic principle) ಅನುಸರಿಸಿ.

ಇದನ್ನು ಓದಿ: ಗಣಿತವನ್ನು ವೇಗವಾಗಿ ಕಲಿಯುವುದು ಹೇಗೆ?

Question 2: ಕಂಪನಿಯ ಸ್ವಾಭಾವಿಕ ಮೌಲ್ಯ ಬೇಗನೆ ಬದಲಾಗುವುದಿಲ್ಲ. ಆದರೆ ಕಂಪನಿಯ ಶೇರ್‌ ಬೆಲೆ ಏಕೆ ಬದಲಾಗುತ್ತಿರುತ್ತದೆ. ಇದಕ್ಕೆ ಕಾರಣವೇನು?

mr market in the intelligent investor in kannada
mr.market

ದಿ ಇಂಟೆಲಿಜೆಂಟ್ ಇನ್ವೆಸ್ಟರ್ ಪುಸ್ತಕದಲ್ಲಿ ಬೆಂಜಮಿನ್ ಗ್ರಹಾಂ ಈ ಪ್ರಶ್ನೆಗೆ ಆಸಕ್ತಿಕರ ರೀತಿಯಲ್ಲಿ ಉತ್ತರಿಸಿದ್ದಾರೆ. ಅವರು ಷೇರು ಮಾರುಕಟ್ಟೆಯನ್ನು "ಮಿಸ್ಟರ್ ಮಾರ್ಕೆಟ್" ಎಂದೂ ಕರೆಯುತ್ತಾರೆ. ಮಿ.ಮಾರ್ಕೆಟ್‌(mr.market) ಒಬ್ಬ ವ್ಯಕ್ತಿ ಅಂತ ನೀವು ಅಂದುಕೊಳ್ಳಿ.

ನೀವು ಆ ವ್ಯಕ್ತಿ ಹತ್ತಿರ ಬೆಳಿಗ್ಗೆ ಹೋಗುತ್ತೀರಾ ಮತ್ತು ಇಂದು ನಿಮ್ಮ ಮನಸ್ಥಿತಿ(mood) ಹೇಗಿದೆ ಎಂದು ಕೇಳುತ್ತೀರಾ. ಆಗ ಮಿ.ಮಾರ್ಕೆಟ್ ಈ ಕಂಪನಿ ಚೆನ್ನಾಗಿಲ್ಲ ಎಂದು ಹೇಳುತ್ತಾರೆ. ಒಂದು ವೇಳೆ ಅವರ ಮನಸ್ಥಿತಿ ಚೆನ್ನಾಗಿದ್ದರೆ, ಅವರು ಒಳ್ಳೆಯ ಬೆಲೆಗೆ ನಿಮಗೆ ಕಂಪನಿಯನ್ನು ನೀಡುತ್ತಾರೆ.

ಬೆಂಜಮಿನ್ ಗ್ರಹಾಂ ಇದರ ಮೇಲೆ ಒಂದು ಒಳ್ಳೆಯ ಹೇಳಿಕೆ(statement) ನೀಡಿದ್ದಾರೆ. ಯಾವುದೇ ಸಮಯದಲ್ಲಿ, ಬಹುತೇಕ ಎಲ್ಲ ಸ್ಟಾಕ್‌ಗಳು ತುಂಬಾ ದುಬಾರಿ ಆಗಿರುತ್ತದೆ ಅಥವಾ ಅಗ್ಗವಾಗಿರುತ್ತದೆ. ಇದೆಲ್ಲಾ ಆಗಲು ಮಿ.ಮಾರ್ಕೆಟ್ ಕಾರಣರಾಗಿದ್ದಾರೆ.

ಮಿಸ್ಟರ್ ಮಾರ್ಕೆಟ್‌ನಲ್ಲಿ ನಮ್ಮ ನಿಮ್ಮ ತರ ಅನೇಕ ಜನರಿರುತ್ತಾರೆ. ಅವರು ದಿನವೂ ಮಾರ್ಕೆಟ್‌ಗೆ ಬರುತ್ತಾರೆ ಮತ್ತು ಒಂದು ಬೆಲೆಗೆ ಕಂಪನಿಯ ಮೇಲೆ ಬೆಟ್ಟಿಂಗ್ ಮಾಡುತ್ತಾರೆ. ಈ ರೀತಿ ಎಲ್ಲರ ಮನಸ್ಥಿತಿ ಮೇಲೆ ಶೇರ್ ಬೆಲೆಯು ಅಪ್ ಡೌನ್ ಆಗುತ್ತಿರುತ್ತದೆ. ಇದನ್ನು ತುಂಬಾ ಸುಲಭವಾಗಿ ಅರ್ಥಮಾಡಿಕೊಳ್ಳಲು ಬೆಂಜಮಿನ್ ಗ್ರಹಾಂ ಮಾರ್ಕೆಟ್ ಅನ್ನು ಮಿಸ್ಟರ್ ಮಾರ್ಕೆಟ್ ಎಂದು ಕರೆದರು.

ಆಗಿದ್ದರೆ ದಿ ಇಂಟೆಲಿಜೆಂಟ್ ಇನ್ವೆಸ್ಟರ್ ಏನು ಮಾಡುತ್ತಾನೆ? ಇಂಟೆಲಿಜೆಂಟ್ ಇನ್ವೆಸ್ಟರ್ ಕಂಪನಿಯ ಸ್ವಾಭಾವಿಕ ಮೌಲ್ಯ ನೋಡುತ್ತಾನೆ. ಆದರೆ ಮಾರ್ಕೆಟ್‌ನಲ್ಲಿ ಇಂದು ಕಂಪನಿಯನ್ನು ತುಂಬಾ ಕೆಟ್ಟದಾಗಿ treat ಮಾಡಲಾಗುತ್ತಿದೆ. ಇಂದು ಅದರ ಶೇರ್ ಚೌಕಾಸಿ ಬೆಲೆಗೆ ಸಿಗುತ್ತಿದೆ. ಹೀಗಾಗಿ ಅದನ್ನು ಖರೀದಿಸುತ್ತಾನೆ.

ಈಗಲೇ ಖರೀದಿಸಿ

ಈ ಲೇಖನ ನಿಮಗೆ ಅರ್ಥವಾಗಿಲ್ಲವೆಂದರೆ ಮತ್ತೊಮ್ಮೆ ಓದಿ. ಈ ಲೇಖನವನ್ನು ಶೇರ್ ಮಾಡಿ ಸಹಕಾರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

commenters

Manu • March 18th,2022

Tq for information