Watch Video
ನಾವು ಎಷ್ಟೇ ಗಳಿಸಿದರು ಹಣವನ್ನು ಉಳಿಸಲು ಸಾಧ್ಯವಾಗುತ್ತಿಲ್ಲ ಎಂದು ಅನೇಕರು ದೂರು ನೀಡುತ್ತಾರೆ. ಇದರ ಮೇಲಿನ ಉತ್ತರ ತಿಳಿದುಕೊಳ್ಳಲು ನೀವು 2,500 ವರ್ಷ ಹಿಂದೆ ಇದ್ದ ಶ್ರೀಮಂತನಗರ ಬೇಬಿಲೋನ್ಗೆ(babylon) ಹೋಗಬೇಕು. ಬೇಬಿಲೋನ್ ಆ ಸಮಯದ ಶ್ರೀಮಂತ ನಗರವಾಗಿತ್ತು ಮತ್ತು ಅಲ್ಲಿನ ಶ್ರೀಮಂತ ವ್ಯಕ್ತಿ ಅರ್ಕದ್(arkad) ಆಗಿದ್ದನು. ಅವನು ತನ್ನ ಖರ್ಚು(expenses), ಐಷಾರಾಮಿ ಜೀವನ(luxury life) ಮತ್ತು ದಾನ(charity) ನೀಡಿದ ನಂತರವೂ ಆತನ ಆದಾಯ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇತ್ತು.
ಒಮ್ಮೆ ಆತನ ಬಾಲ್ಯ ಸ್ನೇಹಿತರು ಬಂದು, "ಅರ್ಕದ್ ನೀನು ನಿಜವಾಗಿ ಅದೃಷ್ಟವಂತನಾಗಿದ್ದೀಯ(lucky). ನಿನ್ನ ಹತ್ತಿರ ಇಂದು ಇಷ್ಟೊಂದು ಹಣವಿದೆ. ಆದರೆ ನಾವು ಕಷ್ಟದಲ್ಲಿ 2 ಹೊತ್ತಿನ ಊಟ ಮಾಡುತ್ತಿದ್ದೇವೆ. ನೀನು ಒಳ್ಳೆಯ ಆಹಾರವನ್ನು ತಿನ್ನುತ್ತಿರುವೆ, ಒಳ್ಳೆಯ ಕೆಲಸದಲ್ಲಿ ಇರುವೆ, ದುಬಾರಿ ಬಟ್ಟೆಗಳನ್ನು ಧರಿಸುತ್ತಿರುವೆ. ಆದರೂ ನಿನ್ನ ಆದಾಯ ಕಡಿಮೆಯಾಗುತ್ತಿಲ್ಲ. ಆದರೆ ನಾವು ಒಳ್ಳೆಯ ವಿಷಯದ ಬಗ್ಗೆ ಯೋಚಿಸಲು ಸಾಧ್ಯವಾಗುತ್ತಿಲ್ಲ. ಒಂದು ಸಮಯದಲ್ಲಿ ನಾವು ಒಂದೇ ರೀತಿ ಇದ್ದೆವು. ಒಂದೇ ಶಾಲೆಗೆ ಹೋಗುತ್ತಿದ್ದೆವು, ಒಂದೇ ಆಟವನ್ನು ಆಡುತ್ತಿದ್ದೆವು. ಆಗ ನೀನು ನಮಗಿಂತ ಉತ್ತಮ ಇರಲಿಲ್ಲ ಮತ್ತು ನಿನ್ನಲ್ಲಿ ಯಾವುದೇ ರೀತಿಯ ಹೆಚ್ಚುವರಿ ಪ್ರತಿಭೆ(extra talent) ಇರಲಿಲ್ಲ. ನಾವು ಒಂದೇ ರೀತಿಯಲ್ಲಿ ಕಷ್ಟಪಟ್ಟೆವು. ಆಗಿದ್ದರೆ ನೀನು ಇಷ್ಟು ಶ್ರೀಮಂತನಾಗಲು ಏನು ಮಾಡಿದೆ ಎಂಬುದನ್ನು ತಿಳಿಸು. ಅರ್ಕದ್ ನೀನು ಶ್ರೀಮಂತನಾದ ರಹಸ್ಯದ(secrect) ಬಗ್ಗೆ ತಿಳಿಸು" ಎಂದು ಕೇಳಿದರು.
ಅರ್ಕದ್ ಇಷ್ಟು ಶ್ರೀಮಂತನಾಗಿದ್ದರೂ ವಿನಮ್ರ(humble) ವ್ಯಕ್ತಿಯಾಗಿದ. ಹೀಗಾಗಿ ಆತನ ಗೆಳೆಯರಿಗೆ ಹಣದ 5 ರಹಸ್ಯದ ಬಗ್ಗೆ ತಿಳಿಸಿದ್ದನು. ಅದನ್ನು ಆತ ಕೆಲವು ವರ್ಷಗಳ ಹಿಂದೆ ಒಬ್ಬ ಶ್ರೀಮಂತ ವ್ಯಕ್ತಿಯಿಂದ ತಿಳಿದುಕೊಂಡಿದ್ದನು. ಅದನ್ನು ಆತ ಇಂದಿಗೂ ಫಾಲೋ ಮಾಡಿಕೊಂಡು ಬರುತ್ತಿದ್ದಾನೆ.
ಇದನ್ನು ಓದಿ: 99.6% ಏಕೆ ಎಂದಿಗೂ ಶ್ರೀಮಂತರಾಗುವುದಿಲ್ಲನೀವು ನಿಮಗೆ ಸಿಗುವ ಸಂಬಳವನ್ನು ನಿಮಗಾಗಿ ಖರ್ಚು ಮಾಡಿಕೊಳ್ಳುತ್ತೇವೆ ಎಂದು ಹೇಳಬಹುದು. ಆದರೆ ನಿಮಗಾಗಿ ಉಳಿಸುವುದೆಂದರೆ ಪೂರ್ತಿ ಹಣವನ್ನು ಖರ್ಚು ಮಾಡುವುದೆಂದಲ್ಲ. ಇಲ್ಲಿ "pay yourself first" ಎಂದರೆ ನಿಮ್ಮ ಸಂಬಳದ 10% ಅನ್ನು ಉಳಿಸುವುದಾಗಿದೆ. ಪ್ರತಿ ತಿಂಗಳು ಸಂಬಳ ಬಂದ ನಂತರ ನಾವು ಬಟ್ಟೆಗಳನ್ನು ಖರೀದಿಸುತ್ತೇವೆ, ಬಿಲ್ಗಳನ್ನು ಪಾವತಿಸುತ್ತೇವೆ, ರೆಸ್ಟೋರೆಂಟ್ಗಳಿಗೆ ಹೋಗುತ್ತೇವೆ. ಅಂದರೆ ನಾವು ಗಳಿಸಿರುವುದನ್ನು ನಮಗೆ ಬಿಟ್ಟು ಎಲ್ಲರಿಗೂ ಹಂಚುತ್ತೇವೆ. ಅರ್ಕದ್ಗೆ ಒಬ್ಬ ವ್ಯಕ್ತಿ 10,000 ರೂ ಗಳಿಸಲಿ ಇಲ್ಲ 10 ಲಕ್ಷ ರೂ ಅದರ 10% ಉಳಿಸಬೇಕು ಎಂಬುದು ತಿಳಿದಿತು ಮತ್ತು ಇದನ್ನು ಆತ ಗಳಿಸಲು ಪ್ರಾರಂಭಿಸಿದ ನಂತರವೇ ಪ್ರಾರಂಭಿಸಬೇಕು ಎಂಬುದನ್ನು ತಿಳಿದಿದ್ದನು. ಇದನ್ನು ಎಷ್ಟು ಬೇಗನೆ ಪ್ರಾರಂಭಿಸುತ್ತೀರೋ ಅಷ್ಟು ಒಳ್ಳೆಯದಾಗಿದೆ.
ನೀವು ಉಳಿಸಿರುವ ಹಣವನ್ನು ಸರಿಯಾದ ಅಸೆಟ್ನಲ್ಲಿ ಹೂಡಿಕೆ ಮಾಡಿ, ಆ ಒಂದು ಭಾಗದ ಹಣದಿಂದ ಇನ್ನೂ ಅಧಿಕ ರಿಟರ್ನ್ಸ್ ಪಡೆಯಬಹುದು. ಅದು ಎಷ್ಟೆಂದರೆ ನೀವು ಅದನ್ನು ಎಷ್ಟೇ ಖರ್ಚು ಮಾಡಿದರೂ, ನಿಮ್ಮ ಖಾತೆಯಿಂದ(account) ಹಣವು ಖಾಲಿಯಾಗುವುದಿಲ್ಲ. ಆದರೆ ಅನೇಕರು ಈ 10% ಉಳಿಸುವುದು ಕಠಿಣ ಎಂದು ಹೇಳುತ್ತಾರೆ. ಇದಕ್ಕೆ 2 ನೇ ತತ್ವದಲ್ಲಿ(principle) ಅರ್ಕದ್ ಉತ್ತರ ನೀಡಿದ್ದಾನೆ, ಅದುವೇ,
ಇದನ್ನು ಓದಿ: ಥಿಂಕ್ ಮತ್ತು ಗ್ರೋ ರಿಚ್ ಪುಸ್ತಕದ ಸಾರಾಂಶನನ್ನ ಒಬ್ಬ ಸ್ನೇಹಿತ ಪ್ರತಿ 6 ತಿಂಗಳಿಗೊಮ್ಮೆ ಕಾರನ್ನು ಬದಲಿಸುತ್ತಾನೆ. ಇದರಿಂದ ಆತ ಇತ್ತೀಚಿನ ತಂತ್ರಜ್ಞಾನ(latest technology) ಬಳಸುತ್ತಿದ್ದೇನೆ ಎಂದು ಭಾವಿಸುತ್ತಿದ್ದ. ಆದರೆ ಸಾಲದ ಇಎಂಐ(emi) ಆತನಿಗೆ ದಿನವೂ ಕಾಡುತ್ತಿತ್ತು. ನಾವು ನಮ್ಮ ಅಗತ್ಯತೆ(needs) ಮತ್ತು ಬಯಕೆಯ(wants) ಮೇಲಿನ ವ್ಯತ್ಯಾಸದ ಬಗ್ಗೆ ತಿಳಿದುಕೊಳ್ಳಬೇಕು. ಅನೇಕರು ಪಾರ್ಕಿನ್ಸನ್ ನಿಯಮಕ್ಕೆ(parkinson's law) ಗುರಿಯಾಗಿರುತ್ತಾರೆ. ಅಂದರೆ ನಮ್ಮ ಸಂಬಳದ(salary) ಅನುಗುಣವಾಗಿ ಖರ್ಚುಗಳು(expenses) ಸರಿಹೊಂದಬೇಕು. ನೀವು ನಿಮ್ಮ ಖರ್ಚು ಮತ್ತು ಜೀವನಶೈಲಿಯ(lifestyle) ಬಗ್ಗೆ ಯೋಚಿಸಲು ಪ್ರಾರಂಭಿಸಿದರೆ ಪೂರ್ತಿಯಾಗಿ ಕಡಿಮೆ ಮಾಡಬಹುದಾದ ಖರ್ಚುಗಳ ಬಗ್ಗೆ ತಿಳಿಯುವಿರಿ.
ನಮ್ಮ ಸಂಬಳ 20,000 ರೂ ಇದ್ದಾಗ ಮನೆಯು ಸುಲಭವಾಗಿ ನಡೆಯುತ್ತಿರುತ್ತದೆ ಮತ್ತು ಸಂಬಳ 50,000 ರೂ ಆದಾಗ ಉಳಿತಾಯ(saving) ಮಾಡುವೆನು ಎಂದು ಯೋಚಿಸುತ್ತೇವೆ. ಆದರೆ ನಮ್ಮ ಸಂಬಳ 50,000 ರೂ ಅದರೂ ನಾವು ಉಳಿತಾಯ ಮಾಡುವುದಿಲ್ಲ. ಇದು ಏಕೆಂದರೆ ನಮ್ಮ ಸಂಬಳ ಹೆಚ್ಚುವ ರೀತಿಯೇ ಖರ್ಚುಗಳು ಕೂಡ ಹೆಚ್ಚುತ್ತದೆ. ಹೀಗಾಗಿ ಹಣವನ್ನು ನಿರ್ವಹಣೆ ಮಾಡಲು ಇರುವ ಒಂದು ಮಾರ್ಗವೆಂದರೆ ಪ್ರತಿ ತಿಂಗಳು ಬಜೆಟ್(budget) ಮಾಡುವುದಾಗಿದೆ. ಇದರಿಂದ ನೀವು ನಿಮ್ಮ ಅಗತ್ಯತೆ ಮತ್ತು ಬಯಕೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು.
ಇದನ್ನು ಓದಿ: ಅನುಭವಿ ಹೂಡಿಕೆದಾರನ ಹೂಡಿಕೆಯ ಪಾಠಗಳುನಿಮ್ಮ ಆದಾಯದ 10% ಅನ್ನು ಉಳಿಸುವುದು ಕೇವಲ ಪ್ರಾರಂಭವಾಗಿದೆ. ಕೇವಲ ಉಳಿಸಿ ಯಾರು ಶ್ರೀಮಂತರಾಗಲು ಸಾಧ್ಯವಿಲ್ಲ. ನೀವು ನಿಮ್ಮ ಉಳಿತಾಯದಿಂದ ಕೆಲಸ ಮಾಡಿಸಬೇಕು, ಅಂದರೆ ಅದನ್ನು ಹೂಡಿಕೆ ಮಾಡಬೇಕು. "ನೀವು ಒಂದು ಬಂಗಾರದ ನಾಣ್ಯ(gold coin) ಉಳಿಸಿದರೆ ಅದನ್ನು ನಿಮ್ಮ ಗುಲಾಮನಾಗಿ ಮಾಡಿಕೊಳ್ಳಿ. ಅದು ನಿಮಗಾಗಿ ಕೆಲಸ ಮಾಡಿ ಇನ್ನಷ್ಟು ಬಂಗಾರದ ನಾಣ್ಯಗಳನ್ನು ತಂದು ಕೊಡಲಿ. ಅದಕ್ಕೆ ಮತ್ತೆ ನೀವು ಕೆಲಸ ನೀಡಿ. ಅವು ನಿಮಗೆ ಇನ್ನಷ್ಟು ನಾಣ್ಯಗಳನ್ನು ನೀಡುತ್ತದೆ" ಎಂದು ಅರ್ಕದ್ ಹೇಳುತ್ತಾನೆ.
ಅಂದರೆ ನೀವು ಉಳಿತಾಯವನ್ನು ಹೂಡಿಕೆ ಮಾಡಿ ಮತ್ತು ಆ ಹೂಡಿಕೆಯಿಂದ ಬರುವ ಲಾಭವನ್ನು ಹೂಡಿಕೆ ಮಾಡಿ. ನೀವು ಹೂಡಿಕೆಯಲ್ಲಿ ಎಷ್ಟು ಚೆನ್ನಾಗಿ ಇರುತ್ತೀರೋ ಅಷ್ಟು ಬೇಗ ನಿಮ್ಮ ಆದಾಯವು ಹೆಚ್ಚುತ್ತದೆ. ಇದರಿಂದ ಕೆಲವು ವರ್ಷಗಳ ನಂತರ ನಿಮ್ಮ ಹತ್ತಿರ ಅನೇಕ ಹೂಡಿಕೆಗಳು(investments) ಇರುತ್ತವೆ ಮತ್ತು ಅಧಿಕ ಹಣವು ಬರುತ್ತಿರುತ್ತದೆ.
ಇದನ್ನು ಓದಿ: "100 to 1 in the Stock Market" ಪುಸ್ತಕದ ಸಾರಾಂಶಬೇಬಿಲೋನ್ ತನ್ನ ನಗರವನ್ನು ದೊಡ್ಡ ದೊಡ್ಡ ಗೋಡೆಗಳಿಂದ(wall) ಮುಚ್ಚಿದರಿಂದ ಎಷ್ಟೋ ವರ್ಷಗಳು ಶ್ರೀಮಂತ ನಗರವಾಗಿತ್ತು. ಹೀಗಾಗಿ ಹೂಡಿಕೆಯ ಮೊದಲನೇ ಮತ್ತು ಪ್ರಮುಖ ನಿಯಮವೆಂದರೆ ನಿಮ್ಮ ತತ್ವದ ಮೊತ್ತದ(principle amount) ಸುರಕ್ಷತೆಯಾಗಿದೆ. ನೀವು ಹೂಡಿಕೆ ಮಾಡಿರುವ ಹಣವೇ ನಷ್ಟದಲ್ಲಿ ಇದ್ದರೆ ಅಧಿಕ ಹಣ ಗಳಿಸುವ ಆಸೆ ಇಟ್ಟುಕೊಳ್ಳಬೇಡಿ. ಏಕೆಂದರೆ, high risk, high profit ನಲ್ಲಿ high loss ಕೂಡ ಆಗುತ್ತದೆ. ಹೀಗಾಗಿ ಅತಿಯಾದ ಆತ್ಮವಿಶ್ವಾಸದಲ್ಲಿ(overconfidence) ನಿಮ್ಮ ಹಣವೂ ಮುಳುಗುವ ಸಾಧ್ಯತೆ ಇರುವ ಕಡೆ ಹೂಡಿಕೆ ಮಾಡಬೇಡಿ. ನಿಮ್ಮ ಉಳಿತಾಯ ನಿಮ್ಮ ನಿಧಿಯಾಗಿದೆ(trasure). ಅದನ್ನು ನೀವು ಎಲ್ಲಾ ರೀತಿಯ ನಷ್ಟದಿಂದ ಉಳಿಸಬೇಕು.
ವಾರೆನ್ ಬಫೆಟ್(warren buffet)ಅವರು ಹೂಡಿಕೆಯ ಮೊದಲನೇ ನಿಯಮವನ್ನು(1st rule) ತಿಳಿಸಿದ್ದಾರೆ, ಅದುವೇ, "never lose money" ಮತ್ತು ಅರ್ಕದ್ ಕೂಡ ತನ್ನ ಸ್ನೇಹಿತರಿಗೆ ಅದನ್ನೇ ತಿಳಿಸುತ್ತಾನೆ. ಅಂದರೆ ನಿಮ್ಮ ತತ್ವದ ಮೊತ್ತವೂ ಸುರಕ್ಷಿತ ಇರುವ ಕಡೆ ಹೂಡಿಕೆ ಮಾಡಿ.
ಇದನ್ನು ಓದಿ: ಹಣವನ್ನು ನಿರ್ವಹಿಸಲು ಜಪಾನಿಯರ ರಹಸ್ಯಯಾರ ಹತ್ತಿರ ಅಧಿಕ ಬುದ್ಧಿವಂತಿಕೆ(wisdom) ಇರುವುದೋ ಆತ ಅಧಿಕ ಹಣವನ್ನು ಗಳಿಸುತ್ತಾನೆ. ಹೀಗಾಗಿ ಮಾಹಿತಿಯನ್ನು(information) ಬುದ್ಧಿವಂತಿಕೆಯಾಗಿ ಪರಿವರ್ತಿಸಿ. ಕೆಲವು ವರ್ಷಗಳ ನಂತರ ಅರ್ಕದ್ಗೆ ವಯಸ್ಸಾದಂತೆ ಆತ ತನ್ನ ಮಗ ನೌಸಿರ್(nausir) ಅನ್ನು ಕರೆದು, "ನಾನು ಸತ್ತ ನಂತರ ನಿನಗೆ ನನ್ನ ಆಸ್ತಿ ಬೇಕೆಂದರೆ, ನೀನು ಇದಕ್ಕೆ ಸಮರ್ಥನಾಗಿದ್ದೀಯ ಎಂಬುದನ್ನು ಸಾಬೀತುಪಡಿಸು ಎಂದನು. ಆತ ತನ್ನ ಮಗನಿಗೆ ಚಿನ್ನ ತುಂಬಿದ ಬ್ಯಾಗ್ ಮತ್ತು ಚಿನ್ನದ 5 ನಿಯಮವಿರುವ(5 laws of gold) ಪತ್ರವನ್ನು ನೀಡಿದ.
ಆತನ ಮಗ ನೆನೆವ(neneva) ಎನ್ನುವ ನಗರಕ್ಕೆ ಹೋಗಿ ಹಣ ಗಳಿಸಲು ಪ್ರಾರಂಭಿಸಿದ. ಅಲ್ಲಿ ಆತನಿಗೆ ಇಬ್ಬರು ವ್ಯಕ್ತಿಗಳು ಸಿಕ್ಕರು. ಅವರು, "ನೆನೆವದ ಒಬ್ಬ ವ್ಯಕ್ತಿಯ ಕಡೆ ಒಂದು ಕುದುರೆ ಇದೆ. ಅದು ಎಂದಿಗೂ ಸೋಲುವುದಿಲ್ಲ ಎಂದರು. ಅದರ ಮೇಲೆ ನೀನು ಹೂಡಿಕೆ ಮಾಡಿದರೆ, ಅಧಿಕ ಲಾಭ ಗಳಿಸುತ್ತೀಯಾ" ಎಂದರು. ನೌಸಿರ್ ಆ ಕುದುರೆಗಳ ಮೇಲೆ ಹಣವನ್ನು ಹಾಕಿದ, ಆದರೆ ನಷ್ಟವನ್ನು ತೆಗೆದುಕೊಂಡ. ಆತನಿಗೆ ನಂತರ ಇಬ್ಬರು ವ್ಯಕ್ತಿಗಳು ಕುದುರೆಯ ಮಾಲೀಕ ಜೊತೆಯಾಗಿ ಹೊಸ ಮತ್ತು ಶ್ರೀಮಂತ ವ್ಯಕ್ತಿಗಳನ್ನು ಕದಿಯುತ್ತಿದ್ದರು ಎಂದು ತಿಳಿಯಿತು.
ಇದರ ನಂತರ ಇನ್ನೊಬ್ಬ ವ್ಯಕ್ತಿ, "ಒಂದು ಅಂಗಡಿಯ ಮಾಲೀಕ ಸತ್ತು ಹೋಗಿದ್ದಾನೆ. ಆತನ ಅಂಗಡಿ ಕಡಿಮೆ ಬೆಲೆಗೆ ಸಿಗುತ್ತಿದೆ. ಅದನ್ನು ನೀನು ಖರೀದಿಸಿದರೆ ಅಧಿಕ ಲಾಭ ಪಡೆಯುತ್ತೀಯ" ಎಂದನು. ನೌಸಿರ್ ಆ ಅಂಗಡಿಯನ್ನು ಖರೀದಿಸಿದ. ಆದರೆ ಅಂಗಡಿಯನ್ನು ನಡೆಸುವ ಅನುಭವವಿಲ್ಲದ(experience) ಕಾರಣ ಆತ ನಷ್ಟವನ್ನು ಅನುಭವಿಸಿದ ಮತ್ತು ಅವನ ಹತ್ತಿರ ಸ್ವಲ್ಪ ಹಣವು ಉಳಿಯಲಿಲ್ಲ. ಇದರ ನಂತರ ಆತ ಆ ಪತ್ರವನ್ನು ನೋಡಿದ, ಅದರಲ್ಲಿ ಚಿನ್ನದ 5 ನಿಯಮವಿತ್ತು, ಅದರಲ್ಲಿ,
(1) ಗಳಿಕೆಯ ಹತ್ತನೇ ಒಂದು ಭಾಗವನ್ನು ಭವಿಷ್ಯಕ್ಕಾಗಿ ಉಳಿಸು, (2) ತನ್ನ ಉಳಿತಾಯಕ್ಕೆ ಬುದ್ಧಿವಂತಿಕೆಯಿಂದ ಕೆಲಸ ನೀಡು, (3) ಕೇವಲ ಬುದ್ದಿವಂತ ವ್ಯಕ್ತಿಯಿಂದ ಹೂಡಿಕೆಯ ಸಲಹೆ ತೆಗೆದುಕೊ, (4) ಒಂದು ವ್ಯಾಪಾರದ ಜ್ಞಾನವಿಲ್ಲದಿದ್ದರೆ ಅದರಲ್ಲಿ ಹೂಡಿಕೆ ಮಾಡಬೇಡ, (5) ಅಧಿಕ ಗಳಿಸಲು ಅಧಿಕ ಅಪಾಯಕಾರಿ ಹೂಡಿಕೆ ಮಾಡಬೇಡ ಎಂದಿತು.
ನೌಸಿರ್ ಈ ಪತ್ರವನ್ನು ಮುಂಚೆಯೇ ಓದಿದ್ದರೆ ಹಣವನ್ನು ಕಳೆದುಕೊಳ್ಳುತ್ತಿರಲಿಲ್ಲ ಎಂದು ಯೋಚಿಸಿದ. ಆದರೆ ಆ ಪತ್ರವನ್ನು ಓದಿದ ನಂತರ ಕಷ್ಟಪಟ್ಟು ದುಡಿಯಲು ಪ್ರಾರಂಭಿಸಿದ. ಮೊದಲಿಗೆ ಅವನು ಕೆಲವು ತಾಮ್ರದ(copper) ನಾಣ್ಯಗಳನ್ನು ಉಳಿಸಲು ಪ್ರಾರಂಭಿಸಿದ. ಆತ ತನ್ನ ಖರ್ಚುಗಳನ್ನು ಕಡಿಮೆಗೊಳಿಸಿದ.
ಒಮ್ಮೆ ಒಬ್ಬ ವ್ಯಕ್ತಿ ಆತನಿಗೆ ಹೂಡಿಕೆ ಪ್ರಸ್ತಾಪ(investment proposal) ನೀಡಿದನು. ಆಗ ನೌಸಿರ್, "ನಾನು ನನ್ನ ಹಣವನ್ನು ಈಗಾಗಲೇ ಕಳೆದುಕೊಂಡಿದ್ದೇನೆ ಮತ್ತು ಇನ್ನಷ್ಟು ಹಣವನ್ನು ಕಳೆದುಕೊಳ್ಳಲು ಬಯಸುವುದಿಲ್ಲ" ಎಂದು ಹೇಳಿದನು. ಆಗ ಆ ವ್ಯಕ್ತಿ ಆತನ ಯೋಜನೆಯ(plan) ಬಗ್ಗೆ ತಿಳಿಸುತ್ತಾನೆ ಆತ, "ಕೋಟೆಯ ಗೋಡೆ ಆದಷ್ಟು ನಿರ್ಮಾಣವಾಗಿದೆ. ಸ್ವಲ್ಪ ದಿನದ ನಂತರ ರಾಜನಿಗೆ ಕೋಟೆಯ ಬಾಗಿಲಿಗೆ ಕಂಚಿನ(bronze) ಅಗತ್ಯವಿದೆ. ನಾವು ಇತರೆ ನಗರಗಳಿಂದ ಕಂಚನ್ನು ತಂದು ಕೂಡಿಡುತ್ತೇವೆ ಮತ್ತು ರಾಜನಿಗೆ ಒಳ್ಳೆಯ ಬೆಲೆಯಲ್ಲಿ ಮಾರುವೇವು. ಒಂದು ವೇಳೆ ರಾಜ ನಮ್ಮಿಂದ ಖರೀದಿಸದಿದ್ದರೂ, ನಾವು ಆ ಕಂಚನ್ನು ಮಾರುಕಟ್ಟೆಯಲ್ಲಿ ಮಾರಿ ಲಾಭವನ್ನು ಗಳಿಸಬಹುದು" ಎಂದನು.
ನೌಸಿರ್ 3 ನೇ ನಿಯಮದ ಬಗ್ಗೆ ಯೋಚಿಸಿ ಹಣವನ್ನು ನೀಡಿದ ಮತ್ತು ಅವನು ಯೋಚಿಸಿದ ರೀತಿಯೇ ಆಯಿತು. ಆ ವ್ಯಾಪಾರದಲ್ಲಿ ಅವನಿಗೆ ಸಾಕಷ್ಟು ಲಾಭ ದೊರೆಯಿತು. ನೌಸಿರ್ ಈ ರೀತಿಯ ಯೋಜನೆ ಮಾಡಿ ಹೂಡಿಕೆ ಮಾಡಿ ಸಾಕಷ್ಟು ಹಣವನ್ನು ಗಳಿಸಿದನು. ಸ್ವಲ್ಪ ವರ್ಷದ ನಂತರ ಅವನು ಅರ್ಕದ್ ಹತ್ತಿರ ಬಂದು ಎಲ್ಲವನ್ನು ತಿಳಿಸಲು ಪ್ರಾರಂಭಿಸಿದ. ಆತ, "ಅಪ್ಪ, ನಾನು ನಿಮಗೆ ಚಿನ್ನದಿಂದ ತುಂಬಿದ ಚೀಲವನ್ನು ನೀಡುವೆನು, ಅದನ್ನು ನೀವು ನನಗೆ ಕೊಟ್ಟಿರುವಿರಿ ಮತ್ತು ಆ ಪತ್ರವನ್ನು ನೀಡಿದಕ್ಕಾಗಿ ಇನ್ನೂ 2 ಚೀಲ ಚಿನ್ನವನ್ನು ನೀಡುವೆನು. ಏಕೆಂದರೆ, ಆ ಬುದ್ದಿವಂತಿಕೆಯ ಸಹಾಯವಿಲ್ಲದೆ ಹಣವನ್ನು ಗಳಿಸಲು ಸಾಧ್ಯವಿಲ್ಲ" ಎಂದು ಹೇಳಿದನು. ಅರ್ಕದ್ ಆತನ ಮಗನನ್ನು ಅಪ್ಪಿಕೊಂಡು, "ನೀನು ಈಗ ನನ್ನ ಆಸ್ತಿಗೆ ಹಕ್ಕುದಾರನಾಗಿದ್ದೀಯಾ" ಎಂದನು. ಈ ರೀತಿಯಾಗಿ ಅರ್ಕದ್ ಆತನ ಗೆಳೆಯರು ಮತ್ತು ಮಗನಿಗೆ ಹಣದ ತತ್ವದ ಬಗ್ಗೆ ತಿಳಿಸಿದನು.
ಸ್ವಲ್ಪ ವರ್ಷಗಳ ನಂತರ ಬೇಬಿಲೋನ್ ರಾಜ ಚಿಂತೆಯಲ್ಲಿ ಇದ್ದರು ಮತ್ತು ಮಂತ್ರಿಗೆ, "ನಗರದಲ್ಲಿ ಇಷ್ಟೊಂದು ಜನರು ಏಕೆ ಬಡವರಾಗಿದ್ದಾರೆ. ನಮ್ಮ ನಗರದಲ್ಲಿ ಹಣದ ಕೊರತೆ ಇಲ್ಲ. ಆದರೂ ಜನಗಳ ಹತ್ತಿರ ಹಣವು ಏಕೆ ಉಳಿಯುವುದಿಲ್ಲ" ಎಂದು ಕೇಳಿದರು. ಆಗ ಮಂತ್ರಿ, "ರಾಜ ಜನರಿಗೆ ಹಣದ ಬಗ್ಗೆ ಕಡಿಮೆ ತಿಳಿದಿದೆ. ನಾವು ಅದರ ಬಗ್ಗೆ ತಿಳಿಸಲು ಅರ್ಕದ್ ಅನ್ನು ಕರೆಯಬಹುದೆ" ಎಂದು ಕೇಳಿದರು. ಅರ್ಕದ್ಗೆ ಇದರ ಬಗ್ಗೆ ಕೇಳಿದಾಗ ಆತ ಒಪ್ಪಿಗೆ ನೀಡಿದನು ಮತ್ತು ಅನೇಕ ಜನರನ್ನು ಒಂದು ಸಭಾಂಗಣದ(hall) ಒಳಗೆ ಕರೆಸಿಕೊಂಡರು. ಅರ್ಕದ್ ಆತನ ಅನುಭವದ ಮೇಲೆ ಹಣದ ಸಮಸ್ಯೆಯಿಂದ ಹೊರಬರಲು 5 ತತ್ವದ ಬಗ್ಗೆ ತಿಳಿಸಿದನು.
(1) ನಿಮ್ಮ ಹಣದ ಚೀಲವನ್ನು ದಪ್ಪ ಮಾಡಿ. 10 ನಾಣ್ಯಗಳಲ್ಲಿ 9 ನಾಣ್ಯಗಳನ್ನು ಮಾತ್ರ ಖರ್ಚು ಮಾಡಿ. (2) ನಿಮ್ಮ ಅನಗತ್ಯ ಖರ್ಚುಗಳನ್ನು ನಿಲ್ಲಿಸಿ ಮತ್ತು ಅದರಿಂದ ಉಳಿದುಕೊಳ್ಳಿ. (3) ಹಣವನ್ನು ಕೆಲಸಕ್ಕೆ ಇರಿಸಿ. ನೀವು ಗಳಿಸಲು ಪ್ರಾರಂಭಿಸಿದ್ದೀರಾ, ಖರ್ಚುಗಳನ್ನು ಕಡಿಮೆ ಮಾಡಿದ್ದೀರಾ, ಈಗ ಹೂಡಿಕೆ ಮಾಡಲು ಪ್ರಾರಂಭಿಸಿ. (4) ನಿಮ್ಮ ಹಣವನ್ನು ನಷ್ಟದಿಂದ ಉಳಿಸಿ, ಹೂಡಿಕೆ ಮಾಡುವುದೆಂದರೆ ಎಲ್ಲಿ ಬೇಕೋ ಅಲ್ಲಿ ಹಣವನ್ನು ಹಾಕುವುದಲ್ಲ. ಪೂರ್ತಿ ಅನ್ವೇಷಣೆ(research) ಮಾಡಿದ ನಂತರವೇ ಹೂಡಿಕೆ ಮಾಡಿ. (5) ನಿಮ್ಮ ಗಳಿಸುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ. ಏಕೆಂದರೆ ನೀವು ಅಧಿಕ ಗಳಿಸಿದಷ್ಟು, ಅಧಿಕ ಹೂಡಿಕೆ ಮಾಡಬಹುದು.
ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.
Explore all our Posts by categories.
Info Mind 7253
Info Mind 1185
See all comments...