Website designed by @coders.knowledge.

Website designed by @coders.knowledge.

Think and Grow Rich Book Summary | ಥಿಂಕ್ ಮತ್ತು ಗ್ರೋ ರಿಚ್ ಪುಸ್ತಕದ ಸಾರಾಂಶ

Watch Video

"ಥಿಂಕ್ ಅಂಡ್ ಗ್ರೋ ರಿಚ್"(think and grow rich) ಪುಸ್ತಕವನ್ನು ನೆಪೋಲಿಯನ್ ಹಿಲ್(napolean hill) ಅವರು ಬರೆದಿದ್ದಾರೆ. ಇವರು ಅಮೆರಿಕದ ಲೇಖಕರಾಗಿದ್ದು ಯಶಸ್ಸಿನ ಬಗ್ಗೆ ಬರೆದಿರುವ ಅನೇಕ ಮಹಾ ಲೇಖಕರಲ್ಲಿ ಒಬ್ಬರಾಗಿದ್ದಾರೆ. ಥಿಂಕ್ ಅಂಡ್ ಗ್ರೋ ರಿಚ್ ಎಲ್ಲಾ ಸಮಯದ ಅತಿ ಹೆಚ್ಚು ಮಾರಾಟವಾದ ಪುಸ್ತಕವಾಗಿದ್ದು, ಇದರಲ್ಲಿ ಲೇಖಕರು ತಮ್ಮ ಹಣದ ವೈಯಕ್ತಿಕ ಆಸೆಯನ್ನು ತೀರಿಸಿಕೊಳ್ಳಲು ಮೆದುಳು(brain) ಮತ್ತು ವಿಚಾರದ(thought) ಮಾನಸಿಕ(psychological) ಶಕ್ತಿಯು ಹೇಗೆ ಸಹಕರಿಸುತ್ತದೆ ಎಂಬುದನ್ನು ತಿಳಿಸಿದ್ದಾರೆ. ಈ ಪುಸ್ತಕದ ಟೈಟಲ್ ರೀತಿ ನೀವು ಯೋಚಿಸಿ ಶ್ರೀಮಂತರಾಗುವುದಿಲ್ಲ. ಬದಲಿಗೆ ಯೋಚಿಸಿ ಬದುಕಿನಲ್ಲಿ ಯಶಸ್ಸನ್ನು ಗಳಿಸಬಹುದು. ಲೇಖನದಲ್ಲಿ ಮುಳುಗುವ ಮೊದಲು ವೆಬ್ಸೈಟ್ಗೆ ರಿಜಿಸ್ಟರ್ ಆಗಿ ಲೇಖನವನ್ನು ಲೈಕ್ ನೀಡಿ ಸಹಕರಿಸಿ.

"you are the master of your fate the captain of your soul"

ಅಂದರೆ ನೀವು ನಿಮ್ಮ ಹಣೆಬರಹದ ಮಾಸ್ಟರ್ ಮತ್ತು ತಮ್ಮ ಆತ್ಮದ ನಾಯಕನಾಗಿದ್ದೀರಾ. ಥಿಂಕ್ ಅಂಡ್ ಗ್ರೋ ರಿಚ್ ಮನಸ್ಥಿತಿ(state of mind) ಆಗಿದೆ. ಇದು ನಿಮ್ಮ ದೊಡ್ಡ ಆಸೆಗಳನ್ನು ಈಡೇರಿಸಿಕೊಳ್ಳಲು ವಿಚಾರದ ಶಕ್ತಿಯನ್ನು ತಿಳಿಸುತ್ತದೆ. ಇದು ನಿಮ್ಮ ನಿರ್ದಿಷ್ಟ ಉದ್ದೇಶವನ್ನು(definite purpose) ವಾಸ್ತವವಾಗಿ ಬದಲಿಸಲು ಸಹಾಯ ಮಾಡುತ್ತದೆ. ಲೇಖಕರು ನಿಮ್ಮ ಆಸೆ(desire), ಐಡಿಯಾ, ಯೋಜನೆ(plan) ಮತ್ತು ದೊಡ್ಡ ಕ್ರಮವು(massive action) ಯಶಸ್ಸು ನೀಡಲು ಸಾಧ್ಯವೆನ್ನುತ್ತಾರೆ. ನೀವು ಎಲ್ಲಿ ಇದ್ದೀರಾ? ಎಲ್ಲಿಗೆ ಹೋಗಲು ಬಯಸಿದ್ದೀರಾ? ಇದಕ್ಕಾಗಿ ಲೇಖಕರು ಸೋಲೊಪ್ಪಿಕೊಳ್ಳಬೇಡಿ, ಬಿಟ್ಟು ಕೊಡಬೇಡಿ, ಸಹಾಯ ಕೇಳಿ, ಹೊಸ ಸಂಪರ್ಕ(connection) ಮಾಡಿ, ಬೇರೆ ರೀತಿಯ ಮಾರ್ಗವನ್ನು ಬಳಸಿ, ಕೌಶಲ್ಯಗಳನ್ನು ಸುಧಾರಿಸಿಕೊಳ್ಳಿ ಎನ್ನುತ್ತಾರೆ. ನಿಮ್ಮ ಗುರಿಯನ್ನು ಸಾಧಿಸಲು ಸಹಾಯ ಮಾಡುವ ಜನರನ್ನು ಹುಡುಕಿ.

ಇದನ್ನು ಓದಿ: 21 ಸಣ್ಣ ಅಭ್ಯಾಸದಿಂದ ವಾರದಲ್ಲಿ 21+ ಗಂಟೆಗಳನ್ನು ಉಳಿಸಿ

1. Desire

what is desire quotes from think and grow rich in kannada
desire

ನಿಮ್ಮ ಅತಿ ದೊಡ್ಡ ಆಸೆ ಯಾವುದು? ಶಕ್ತಿಯುತ ಆಸೆಗಳು ಗುರಿಯ ಕಡೆಗೆ ಹೋಗಲು ಎರಡು ರೀತಿಯ ಪ್ರೇರಣೆ ನೀಡುತ್ತದೆ.

1. Pull motivation

ಇದರಲ್ಲಿ ನಿಮ್ಮ ಗುರಿಯ ಫಲಿತಾಂಶ ನಿಮ್ಮನ್ನು ಅದಕ್ಕಾಗಿ ಎಳೆಯುತ್ತದೆ(pull).

2. Push motivation

ಇದರಲ್ಲಿ ನೀವು ಯಾವುದೇ ರೀತಿಯ ಕ್ರಮವನ್ನು ತೆಗೆದುಕೊಳ್ಳದಿದ್ದಾಗ ಬರುವ ನಕಾರಾತ್ಮಕ ಪರಿಣಾಮಗಳು ನಿಮ್ಮ ಗುರಿಯನ್ನು ಸಾಧಿಸಲು ತಳ್ಳುತ್ತದೆ(push).

ಲೇಖಕರು ಆಸೆಯ 5 ಪ್ರಮುಖ ಪ್ರದೇಶಗಳ ಬಗ್ಗೆ ತಿಳಿಸುತ್ತಾರೆ ಅವೆಂದರೆ,

  • • Career
  • • Leading
  • • Money
  • • Failure
  • • Other's desire

1. Career

ನನಗೆ ಏನು ಸಿಗುತ್ತದೆ? ನಾನು ಹೇಗೆ ಬೆಳೆಯಲಿ? ಇದಕ್ಕಾಗಿ ಟೈಟಲ್, ಸಂಬಳ(salary), ಪ್ರಯೋಜನಗಳನ್ನು(benefits) ಪಕ್ಕದಲ್ಲಿಟ್ಟು ಬೆಳವಣಿಗೆಯ ಅವಕಾಶಗಳ(growth opportunities) ಕಡೆಗೆ ಗಮನ ಹರಿಸಬೇಕು.

2. Leading

ನೀವು ಮುನ್ನಡೆಸುವ ಮುಂಚೆ ಒಬ್ಬ ನಾಯಕನನ್ನು ಫಾಲೋ ಮಾಡಿ, ಅವರಿಂದ ಕಲಿಯುತ್ತಿರಬೇಕು. ಆ ಕ್ಷೇತ್ರದಲ್ಲಿ ಏತ್ತರದಲ್ಲಿ ಇರುವ ವ್ಯಕ್ತಿಯಿಂದ ನೀವು ಕಲಿಯುತ್ತಿದರೆ ತುಂಬಾನೇ ಪರಿಣಾಮಕಾರಿಯಾಗಿದೆ.

3. Money

ಲೇಖಕರು ಹಣ ಆಧಾರಿತ ಆಸೆಗಳಿಗಾಗಿ ಕೆಲವು ಹಂತಗಳನ್ನು ತಿಳಿಸುತ್ತಾರೆ.

1. Amount of money/type of job

ಅಂದರೆ ಎಷ್ಟು ಹಣ ಬೇಕು ಮತ್ತು ಯಾವ ರೀತಿಯ ಉದ್ಯೋಗ(job) ಬೇಕು ಎಂಬುದನ್ನು ತಿಳಿದುಕೊಳ್ಳಿ.

2. Intend to give money to desire

ನೀವು ಆಸೆ ಪಡುತ್ತಿರುವ ಹಣಕ್ಕೆ ರಿಟರ್ನ್ ಆಗಿ ಏನು ನೀಡಬಹುದು?

3. Definite date

ನೀವು ಆಸೆ ಪಟ್ಟಿರುವ ಹಣವನ್ನು ಪಡೆಯಲು ಒಂದು ನಿರ್ದಿಷ್ಟ ದಿನಾಂಕವನ್ನು ಆರಿಸಿಕೊಳ್ಳಿ.

4. Definite plan

ನೀವು ಆಸೆಯನ್ನು ಪ್ರಾರಂಭಿಸಿ ಮುಗಿಸಲು ಒಂದು ನಿರ್ದಿಷ್ಟ ಯೋಜನೆಯನ್ನು ಮಾಡಿ.

4. Failure

ಯಾವುದೇ ರೀತಿಯಲ್ಲಿ ಭಾವನಾತ್ಮಕವಾಗದೆ(emotional) ನಿಮ್ಮ ವೈಫಲ್ಯದಿಂದ ಕಲಿತ ಪಾಠವನ್ನು ತಿಳಿದುಕೊಳ್ಳಿ ಮತ್ತು ಆ ರೀತಿ ಏಕೆ ಆಯಿತು ಎಂಬುದನ್ನು ಅನ್ವೇಷಣೆ(discover) ಮಾಡಿ. ನಿಮ್ಮ ದೊಡ್ಡ ಗುರಿಯನ್ನು ತಲುಪಲು ವೈಫಲ್ಯ ಒಂದು ಅವಕಾಶವಾಗಿದೆ ಎಂದು ತಿಳಿದುಕೊಳ್ಳಿ.

5. Other's desire

ನೀವು ಉದ್ಯೋಗಿ(employee) ಅಥವಾ ಸ್ವತಂತ್ರೋದ್ಯೋಗಿ(freelancer) ಆಗಿದ್ದರೆ ನಿಮ್ಮ ಕಂಪನಿಯ ಮಾಲೀಕರಿಗೆ ಸಹಾಯ ಮಾಡಿ ತಮ್ಮ ಕನಸಿನ ಗುರಿಯನ್ನು ಸಾಧಿಸಬಹುದು. ಇದು ನಿಮ್ಮ ಗುರಿಗೆ ಹೋಲಿಕೆಯಾದರೆ ನಿಮ್ಮ ಗುರಿಯನ್ನು ಮುಂದುವರೆಸಬಹುದು(advance). ಏಕೆಂದರೆ ನಿಮಗೆ ಆಸಕ್ತಿ ಇರುವ ಪ್ರದೇಶದಲ್ಲಿ ಇನ್ನಷ್ಟು ಚೆನ್ನಾಗಾಗುತ್ತೀರಾ.

ಇದನ್ನು ಓದಿ: ಬದುಕಿನಲ್ಲಿ ನಿಶ್ಚಲತೆಯನ್ನು ಸಾಧಿಸುವುದು ಹೇಗೆ?

2. Faith - visualisation and believe in attainment of desire

what is the definition of faith in think and grow rich in kannada
faith

ಅನೇಕ ಬಾರಿ ನಿಮ್ಮ ಯಶಸ್ಸು ಅಥವಾ ವೈಫಲ್ಯ ನಿಮ್ಮ ಸ್ವಯಂ ನಂಬಿಕೆಯ(self belief) ಮೇಲೆ ನಿಂತಿದೆ. ಹೀಗಾಗಿ ಮನಸ್ಸಿನಲ್ಲಿರುವ ಸಕಾರಾತ್ಮಕ ನಿರೀಕ್ಷೆಗಳು ಯಶಸ್ಸನ್ನು ಪಡೆಯಲು ಮುಖ್ಯವಾಗಿದೆ. ಉಪಪ್ರಜ್ಞೆ ಮನಸ್ಸಿಗೆ(subconsious mind) ಪದೇ ಪದೇ ಮಾಹಿತಿಯನ್ನು ನೀಡುವುದರಿಂದ ನಂಬಿಕೆ ಬರುತ್ತದೆ. ಹೀಗಾಗಿ ಸಕಾರಾತ್ಮಕ ಭಾವನೆಗಳನ್ನು ಪ್ರೋತ್ಸಾಹಿಸಿ ಮತ್ತು ನಕಾರಾತ್ಮಕ ಭಾವನೆಗಳಾದ ಅನುಮಾನ(doubt), ನಿರಾಕರಣೆ(denial), ಭಯವನ್ನು(fear) ತೆಗೆದು ಹಾಕಿದರೆ ನಂಬಿಕೆ ಒಂದು ಶಸ್ತ್ರದ ರೀತಿ ಕೆಲಸ ಮಾಡುತ್ತದೆ. ಇದು ವೈಫಲ್ಯಕ್ಕೆ ಪ್ರತಿವಿಷವಾಗಿದೆ(antidote). ನೀವು ನಿಮ್ಮ ಮೇಲೆ ವಿಶ್ವಾಸ ಹೊಂದಿದ್ದರೆ ಜನರು ನಿಮ್ಮ ಮೇಲೆ ವಿಶ್ವಾಸವನ್ನು ಹೊಂದುವರು. ಉದ್ಯೋಗದಲ್ಲಿ ಸಕಾರಾತ್ಮಕ ಪ್ರಭಾವ ನೀಡುವ ಆತ್ಮವಿಶ್ವಾಸವಿರುವ(confident) ಜನಗಳನ್ನು ಹುಡುಕಲಾಗುತ್ತದೆ.

ನಿಮ್ಮಲ್ಲಿ ನಂಬಿಕೆಯನ್ನು ಹೆಚ್ಚಿಸಲು ಲೇಖಕರು ಒಂದು ಮಾರ್ಗವನ್ನು ತಿಳಿಸುತ್ತಾರೆ. ಇದಕ್ಕಾಗಿ ನೀವು ನಿಮ್ಮ ಹೆಸರನ್ನು ಒಂದು ಹೇಳಿಕೆಯೊಂದಿಗೆ(statement) ಬರೆಯಿರಿ. ಇದನ್ನು ನೀವು ಪ್ರತಿದಿನ ಪುನರಾವರ್ತಿಸುತ್ತಿರಬೇಕು. ಇದರಿಂದ ಉಪಪ್ರಜ್ಞೆಯಿಂದ(subconsciously) ನೀವು ನಿಮ್ಮ ಯೋಚನೆ ಮತ್ತು ಕ್ರಮವನ್ನು ಪ್ರಭಾವ ಮಾಡಬಹುದು.

ನಿಮ್ಮ ಉದ್ದೇಶವನ್ನು ಸಾಧಿಸಲು ನಿಮ್ಮ ಹತ್ತಿರ ಸಾಮರ್ಥ್ಯವಿದೆ. ನೀವು ಕ್ರಮವನ್ನು ತೆಗೆದುಕೊಳ್ಳಲು ವಾಗ್ದಾನ(promise) ಮಾಡುತ್ತೀರಾ. ನಿಮ್ಮ ಯೋಚನೆ ವಾಸ್ತವವಾಗಿ ಬದಲಾಗುತ್ತದೆ ಎಂದು ನಂಬಿರುತ್ತೀರಾ. ನೀವು ನಿಮ್ಮ ಯೋಚನೆಯನ್ನು ವಾಸ್ತವವಾಗಿ ಬದಲಾಯಿಸಲು ಸಮಯವನ್ನು ನೀಡುವುದಾಗಿ ವಾಗ್ದಾನ ಮಾಡುತ್ತೀರಾ.

ನೀವು ಆತ್ಮವಿಶ್ವಾಸದ(self confidence) ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಂಡಿದ್ದೀರಾ ಮತ್ತು ದಿನದಲ್ಲಿ 10 ನಿಮಿಷ ಇದರ ಮೇಲೆ ಕೆಲಸ ಮಾಡಲು ಪ್ರತಿಜ್ಞೆ ಮಾಡುತ್ತೀರಾ. ನೀವು ನಿಮ್ಮ ಗುರಿಯ ತನಕ ತಲುಪಲು ಎಂದಿಗೂ ನಿಲ್ಲುವುದಿಲ್ಲ. ನೀವು ಇತರರಿಗೆ ಸಹಾಯ ಮಾಡಿದರೆ ಇತರರು ಸಹಾಯ ಮಾಡುತ್ತಾರೆ.

ನೀವು ತಲುಪಬೇಕೆಂದಿರುವ ಜಾಗದಲ್ಲಿ ಈಗಾಗಲೇ ತಲುಪಿದ ಜನರನ್ನು ಹುಡುಕಿ. ವೃತ್ತಿ(career) ಮತ್ತು ಹಣದಲ್ಲಿ ನಿಮಗೆ ಪ್ರಭಾವ ಮಾಡುವವರ ಹೆಸರನ್ನು ಹೇಳಿ. ನಿಮ್ಮ ನಂಬಿಕೆಯನ್ನು ಗಟ್ಟಿ ಮಾಡಲು ಆ ಅನುಭವಗಳನ್ನು ನೆನಪಿನಲಿಟ್ಟುಕೊಂಡಿರಿ ಮತ್ತು ನಿಮ್ಮ ಆಸೆಯನ್ನು ಸಾಧಿಸುವುದು ಸಾಧ್ಯವೆಂದು ನಂಬಿಕೆ ಇಡಿ.

ಇದನ್ನು ಓದಿ: ಬದುಕನ್ನು ಬದಲಾಹಿಸುವ 12 ನಿಯಮಗಳು[BRAIN RULES]

3. Auto suggestion - the medium for influencing the subconscious

ಸ್ವಯಂ ಸಲಹೆ ನಮ್ಮ ಆಸೆಯ ವಿಷಯದೊಂದಿಗೆ ಉಪಪ್ರಜ್ಞೆ ಮನಸ್ಸಿನ ಜೊತೆಗೆ ನೇರವಾಗಿ ಸಂವಹನ ಮಾಡುತ್ತದೆ. ನಮ್ಮ ಉಪಪ್ರಜ್ಞೆ ಮನಸ್ಸಿನ ತನಕ ತಲುಪುವ ಭೌತಿಕವಾದ(materialistic) ವಸ್ತುಗಳು, ನಮ್ಮ ನಿರ್ಧಾರ(decision), ಭಾವನೆ(feeling) ಮತ್ತು ಕ್ರಮಗಳನ್ನು ನಿಯಂತ್ರಣ ಮಾಡುತ್ತದೆ. ನಮ್ಮ ಜಾಗೃತ ಮನಸ್ಸಿನಲ್ಲಿ(conscious mind) ವಿಚಾರವನ್ನು ಪ್ರತಿದಿನ ಪುನರವರ್ತನೆ ಮಾಡುವುದರಿಂದ ನಾವು ಇವೆಲ್ಲದರ ನಿಯಂತ್ರಣವನ್ನು ಮರಳಿ ಪಡೆದುಕೊಳ್ಳಬಹುದು.

4. Specialised knowledge - personal experience and observation

how do you get specialized knowledge in kannada
specialized knowledge

ನಿಮ್ಮ ಆಸೆಯನ್ನು ಆರ್ಥಿಕ(monetary), ವೃತ್ತಿ ಅಥವಾ ಯಾವುದೇ ರೀತಿಯ ಯಶಸ್ಸಾಗಿ ಪರಿವರ್ತಿಸಲು ನಿಮ್ಮ ಹತ್ತಿರ ಸೇವೆ, ವಸ್ತು ಮತ್ತು ವೃತ್ತಿಯ(profession) ವಿಶೇಷ ಜ್ಞಾನ ಇರಬೇಕು. ಇದನ್ನು ಒಂದು ದೊಡ್ಡ ಅದೃಷ್ಟವನ್ನು(big fortune) ಸೃಷ್ಟಿಸಲು ಬಳಸಬಹುದು.

ಈ ವಿಶೇಷ ಜ್ಞಾನವು ಮುಂಚೆಯೇ ನಿಮ್ಮ ಸ್ವಾಧೀನದಲ್ಲಿ ಇರಬಾರದು. ಖರೀದಿ ಮತ್ತು ಬಾಡಿಗೆಯ(purchase and renting) ಜ್ಞಾನದಿಂದ ನೀವು ಇದನ್ನು ಸಾಧಿಸಬೇಕು. ಕೋರ್ಸ್‌, ಸೆಮಿನಾರ್, ಪುಸ್ತಕದ ಸಾರಾಂಶ, ಉದ್ಯಮ ಸಮ್ಮೇಳನ ಇವೆಲ್ಲವೂ ನಮಗೆ ಬೇಕಿರುವ ವಿಶೇಷ ಜ್ಞಾನವನ್ನು ಪಡೆಯಲು ಸಹಕರಿಸುತ್ತವೆ.

ಇದಕ್ಕೆ ಇನ್ನೊಂದು ಮಾರ್ಗವೆಂದರೆ ಜ್ಞಾನವಿರುವ ಜನರೊಂದಿಗೆ ಕೆಲಸ ಮಾಡುವುದು, ಅಂದರೆ ಜ್ಞಾನವನ್ನು ಬಾಡಿಗೆ ಪಡೆಯುವುದು. ಒಬ್ಬ ಮಹತ್ವಾಕಾಂಕ್ಷೆಯ ವ್ಯಕ್ತಿಗೆ ತನ್ನ ಕ್ಷೇತ್ರದಲ್ಲಿ ಬೆಳೆಯಲು ಜೀವನಪೂರ್ತಿ ಕಲಿಯುತ್ತಿರುವುದು ಮುಖ್ಯವಾಗಿದೆ.

ಇದನ್ನು ಓದಿ: 21 ದಿನಗಳಲ್ಲಿ ಎಲ್ಲರನ್ನು ಹಿಂದೆ ತನ್ನಿ(monk mode)

5. Imagination - the workshop of the mind

what is the imagination chapter in think and grow rich in kannada
imagination

ಐಡಿಯಾ ವಸ್ತುವಾಗಿದೆ, ಅವುಗಳನ್ನು ಕಲ್ಪನೆಯ(imagination) ಮೂಲಕ ರೂಪವನ್ನು ನೀಡಲಾಗುತ್ತದೆ. ಮನುಷ್ಯ ತನ್ನ ಕಲ್ಪನೆಯಿಂದ ಏನನ್ನಾದರೂ ಸೃಷ್ಟಿ ಮಾಡಬಹುದು. ಲೇಖಕರು 2 ರೀತಿಯ ಕಲ್ಪನೆಯ ಬಗ್ಗೆ ತಿಳಿಸುತ್ತಾರೆ.

1. Synthetic imagination

ಇದು ನಿಮ್ಮ ಹಳೆಯ ಪರಿಕಲ್ಪನೆ, ಐಡಿಯಾ ಅಥವಾ ಯೋಜನೆಯನ್ನು ಹೊಸ ಸಂಯೋಜನೆಯಲ್ಲಿ ವ್ಯವಸ್ಥೆ ಮಾಡುತ್ತವೆ.

2. Creative imagination

ಇದರಲ್ಲಿ ವ್ಯಕ್ತಿಗೆ ಎಂದಿಗೂ ಖಾಲಿಯಾಗದ ಜ್ಞಾನದಿಂದ ಕಲ್ಪನೆ ಬರುತ್ತದೆ. ನೀವು ನಿಮ್ಮ ಕಲ್ಪನೆಯನ್ನು ಉತ್ತಮವಾಗಿ ಬಳಸಲು ನಿಮ್ಮ ದೊಡ್ಡ ಗುರಿಯನ್ನು ಸಾಧಿಸಲು ಐಡಿಯಾಗಳ ಪಟ್ಟಿ ಮಾಡಿ. ಇದು ನಿಮಗೆ ಸ್ಫೂರ್ತಿ ನೀಡುವುದಲ್ಲದೆ, ನಿಮ್ಮ ಪ್ರತಿಭೆಯನ್ನು(talent) ಚೆನ್ನಾಗಿ ಬಳಸಿಕೊಳ್ಳಲು ಸಹಕರಿಸುತ್ತದೆ.

ಇದನ್ನು ಓದಿ: 30 ದಿನದಲ್ಲಿ ನಿಮ್ಮ ಜೀವನವನ್ನು ಬದಲಿಸಿಕೊಳ್ಳುವುದು ಹೇಗೆ?

6. Organised planning - the crystallization of desire into action

ನಿಮ್ಮ ಯಶಸ್ಸಿನ ಬಗ್ಗೆ ಯೋಚಿಸುವುದು ಉತ್ತರವಲ್ಲ. ಒಂದೊಂದು ಸಾಧನೆ ಆಸೆ ಪಟ್ಟಿರುವುದರ ಮೇಲೆ ಸಂಘಟಿತ ಯೋಜನೆ(organized plan) ಮಾಡಿ ಕೆಲಸ ಮಾಡುವುದಾಗಿದೆ. ಯಾವುದೇ ಯೋಜನೆ ಪರಿಪೂರ್ಣವಾಗಿಲ್ಲ. ನೀವು ನಿಮ್ಮ ಯೋಜನೆಯನ್ನು ಕಾರ್ಯಗತಗೊಳಿಸುವಾಗ ತಾತ್ಕಾಲಿಕ ಸೋಲನ್ನು ನೋಡುತ್ತೀರಾ. ಇದು ನಿಮ್ಮ ಯೋಜನೆ ಸರಿ ಇಲ್ಲ ಎಂದು ತೋರಿಸಲು ಇದೆ ಎಂದು ನಂಬಿ ಅದನ್ನು ಒಪ್ಪಿಕೊಳ್ಳಿ, ಮತ್ತೊಮ್ಮೆ ಯೋಜನೆ ಮಾಡಿ. ನಿಮ್ಮ ಹಳೆಯ ವೈಫಲ್ಯದಿಂದ ಕಲಿತ ಪಾಠದಿಂದ ನಿಮ್ಮ ಗುರಿಯನ್ನು ಹಿಂಬಾಲಿಸಿ. ನಿಮ್ಮ ಗುರಿಯ ತನಕ ತಲುಪುವವರೆಗೆ ಸೋಲಬೇಡಿ. ಏಕೆಂದರೆ ಈ ರೀತಿ ಸೋಲುವವರಿಗೆ ತಮ್ಮ ದೀರ್ಘವಧಿಯ ಯೋಜನೆಯನ್ನು ಪೂರ್ತಿಯಾಗಿ ನೋಡಲು ಸಾಧ್ಯವಾಗುವುದಿಲ್ಲ.

ಇದನ್ನು ಓದಿ: ಯಶಸ್ವಿಯಾಗಲು ಸ್ವಯಂ ಶಿಸ್ತಿನ 4 ಅಭ್ಯಾಸಗಳು

7. Decision - the mastery of procrastination

ಯಶಸ್ವಿ ಜನರು ಕೂಡಲೇ ಮತ್ತು ನಿಶ್ಚಿತ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಮತ್ತು ತಮ್ಮ ಮನಸ್ಸನ್ನು ಅದಕ್ಕೆ ಕೊಂಡೊಯ್ಯುತ್ತಾರೆ. ಅವರಿಗೆ ಏನು ಬೇಕೆಂದು ತಿಳಿದಿರುತ್ತದೆ ಮತ್ತು ಅದನ್ನು ಪಡೆದುಕೊಳ್ಳುತ್ತಾರೆ. ನಿರ್ಧಾರದ ಖಚಿತತೆಗೆ ಧೈರ್ಯ(courage) ಬೇಕಾಗಿದೆ. ನಿರ್ಧಾರದ ವಿರುದ್ಧ ವಿಳಂಬ ಪ್ರವೃತ್ತಿ(procrastination) ಆಗಿದೆ. ಇದನ್ನು ಪ್ರತಿಯೊಬ್ಬ ವ್ಯಕ್ತಿಯು ವಶಪಡಿಸಿಕೊಳ್ಳಬೇಕು.

ಇದನ್ನು ಓದಿ: ಈ 12 ತತ್ವಗಳನ್ನು ಕಲಿಯಲು ಜನರು ಜೀವಿತಾವಧಿಯನ್ನು ತೆಗೆದುಕೊಳ್ಳುತ್ತಾರೆ

8. Persistence - the sustainated effort necessary to induce faith

what is the power of persistence in kannada
persistence

ಹಠದ ಕೊರತೆ ವೈಫಲ್ಯಕ್ಕೆ ಮುಖ್ಯ ಕಾರಣವಾಗಿದೆ. ಆದರೆ ಇದು ಪೂರ್ತಿಯಾಗಿ ನಿಮ್ಮ ಆಸೆಯ ಮೇಲೆ ನಿಂತಿದೆ. ದುರ್ಬಲ ಬಯಕೆ(weak desire) ದುರ್ಬಲ ಫಲಿತಾಂಶವನ್ನು ತರುತ್ತವೆ. ಹಠದ ಅಡಿಪಾಯ ಇಚ್ಛೆಯ ಶಕ್ತಿಯಾಗಿದ್ದು(power of will) ಬೇರೆ ರೀತಿಯ ಕಾರಣಗಳಿಂದ ಪ್ರಭಾವವಾಗುತ್ತದೆ. ಉದಾಹರಣೆಗೆ ಉದ್ದೇಶದ ಖಚಿತತೆ, ಸ್ವಾವಲಂಬನೆ, ಯೋಜನೆಯ ಖಚಿತತೆ, ನಿಖರವಾದ ಜ್ಞಾನ, ಸಹಕಾರ, ಹವ್ಯಾಸ. ನೀವು ಇವುಗಳಲ್ಲಿ ಯಾವುದರ ಕೊರತೆಯಿಂದ ಹಠದಿಂದ ದೂರವಿರುವಿರಿ ಎಂಬುದನ್ನು ತಿಳಿಯಬೇಕು.

ಹಟದ ಕೊರತೆ ಕೆಲವು ರೋಗಲಕ್ಷಣಗಳನ್ನು(symtoms) ಬೆಳೆಸುತ್ತದೆ. ಅವೆಂದರೆ ವಿಳಂಬ ಪ್ರವೃತ್ತಿ(procrastination), ಆಸಕ್ತಿಯ ಕೊರತೆ(lack of interest), ತಪ್ಪು ನಿರ್ಧಾರ(indecision), ಸ್ವಯಂ ತೃಪ್ತಿ(self satisfaction), ಉದಾಸೀನತೆ(indifference), ವಿನ್ಯಾಸದ ದೌರ್ಬಲ್ಯ(weakness of desire), ತೊರೆಯುವ ಇಚ್ಛೆ(willingness to quit), ಸಂಘಟಿತ ಯೋಜನೆಯ ಕೊರತೆ(lack of organized planning), ಶಾರ್ಟ್ ಕಟ್ಗಾಗಿ ಹುಡುಕುವುದು, ಟೀಕೆಯ ಭಯ(fear of criticism) ಆಗಿದೆ.

ಹಾಗಿದ್ದರೆ ಒಬ್ಬರು ತನ್ನ ಹಠವನ್ನು ಹೇಗೆ ಬೆಳೆಸಿಕೊಳ್ಳಬಹುದು. ಇದಕ್ಕಾಗಿ ಲೇಖಕರು 4 ಹಂತಗಳನ್ನು ಸೂಚಿಸುತ್ತಾರೆ, ಅವೆಂದರೆ,

1. Develop a definite purpose

ಒಂದು ಬಯಕೆ(burning desire) ಇರುವ ನಿರ್ದಿಷ್ಟ ಉದ್ದೇಶವನ್ನು ಸೃಷ್ಟಿ ಮಾಡಿಕೊಳ್ಳಿ.

2. Build a definite plan

ನಿಮ್ಮ ಕ್ರಮಗಳನ್ನು ವ್ಯಕ್ತಪಡಿಸಲು ಒಂದು ನಿರ್ದಿಷ್ಟ ಯೋಜನೆಯನ್ನು ಮಾಡಿ.

3. Keep out all negative

ನಿಮಗೆ ನಕಾರಾತ್ಮಕ ಇಲ್ಲ ಯಾವುದೇ ರೀತಿಯ ವಿಷಯಗಳು ಪ್ರಭಾವ ಬೀರಿದರೆ ಅವುಗಳಿಂದ ದೂರವಿರಿ.

4. Stay accountable to people who will encourage

ನಿಮ್ಮ ಯೋಜನೆಗೆ ಸಹಕರಿಸುವ ಜನಗಳ ಜೊತೆ ಜವಾಬ್ದಾರಿಯುತವಾಗಿರಿ(accountable).

ಇದನ್ನು ಓದಿ: ನಿಮ್ಮನ್ನು ಚುರುಕಾಗಿಸಲು 13 ದಿನನಿತ್ಯದ ಅಭ್ಯಾಸಗಳು

9. Power of the mastermind - the driving force

ನಿಮ್ಮ ಹತ್ತಿರ ನಿಮ್ಮ ಯೋಜನೆಗೆ ಅನುಗುಣವಾಗಿ ಕೆಲಸ ಮಾಡುವ ಜನರ ಗುಂಪು ಇದ್ದರೆ, ನೀವು ಸೂತ್ರಧಾರ ಆಗುತ್ತೀರಾ. ನಿಮ್ಮ ಯಶಸ್ಸನ್ನು ಸಾಧಿಸಲು ನಿಮ್ಮ ಗುಂಪಿನಲ್ಲಿ ಯಾರು ಸಹಾಯ ಮಾಡುತ್ತಾರೆ, ಇಲ್ಲ 30 ದಿನಗಳೊಳಗೆ ಯಾರನ್ನು ಇದಕ್ಕೆ ಸಮರ್ಥ ಮಾಡುವಿರಾ? ಸೂತ್ರಧಾರನ ಶಕ್ತಿಯಿಲ್ಲದೆ ಯಾರೂ ಕೂಡ ದೊಡ್ಡ ಶಕ್ತಿ ಮತ್ತು ಯಶಸ್ಸನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ. ನಿಶ್ಚಿತ ಯೋಜನೆಗಳ ಜೊತೆಗೆ ಜ್ಞಾನವನ್ನು ಯೋಜನೆಯಾಗಿ ಮಾಡಿ ನಂತರ ಆ ಯೋಜನೆಯನ್ನು ಕ್ರಮವಾಗಿ ಅನುವಾದಿಸುವುದು ಸೂತ್ರದಾರನ ಕೆಲಸವಾಗಿದೆ.

ಇದನ್ನು ಓದಿ: ಸಂಪತ್ತು, ಆರೋಗ್ಯ ಮತ್ತು ಯಶಸ್ಸಿಗೆ 6 ಬೆಳಗಿನ ಅಭ್ಯಾಸಗಳು

10. Subconscious mind - the connecting link

how can i use my subconscious mind for wealth in kannada
subconscious mind

ಮನುಷ್ಯನ ಸೀಮಿತ ಮನಸ್ಸು(finite mind) ಮತ್ತು ಅನಂತ ಬುದ್ಧಿವಂತಿಕೆಯಾ(infinite intelligence) ಆಧಾರವೇ ಉಪಪ್ರಜ್ಞೆ ಮನಸ್ಸಾಗಿದೆ. ಇದು ನಿಮ್ಮ ಆಸೆಯನ್ನು ಭೌತಿಕ(physical) ಅಥವಾ ಆರ್ಥಿಕ(monetary) ಸಮಾನವಾಗಿ ಬದಲಿಸಲು ಒಂದು ಮೀಡಿಯಂ ಆಗಿ ಕೆಲಸ ಮಾಡುತ್ತದೆ. ನೀವು ನಿರ್ಲಕ್ಷಿಸುವುದು ನಿಮ್ಮ ಯೋಚನೆಯಲ್ಲೂ ಆ ರೀತಿಯೇ ಊಡಿಸುತ್ತದೆ(feed). ನಿಮ್ಮ ಉಪಪ್ರಜ್ಞೆ ಮನಸ್ಸಿನ ಮೇಲೆ ನಿಯಂತ್ರಣವನ್ನು ಪಡೆದುಕೊಳ್ಳಲು 7 ಪ್ರಮುಖ ಸಕಾರತ್ಮಕ ಭಾವನೆಗಳ(emotion) ಕಡೆಗೆ ಗಮನ ಹರಿಸಿ. ಅವೆಂದರೆ, ಆಸೆ(desire), ವಿಶ್ವಾಸ(faith), ಪ್ರೀತಿ(love), ಲೈಂಗಿಕತೆ(sex), ಉತ್ಸಾಹ(enthusiam), ಪ್ರಣಯ(romance), ನಂಬಿಕೆ(hope).

ನಿಮ್ಮ ಉಪಪ್ರಜ್ಞೆ ಮನಸ್ಸಿನ ಎಲ್ಲಾ ರೀತಿಯ ರಚನಾತ್ಮಕ ನೆರವಿನ(constructive aid) ಬದಲಾವಣೆಯನ್ನು ನಿಮ್ಮ ಜಾಗೃತ ಮನಸ್ಸಿನಲ್ಲಿ(conscious mind) ಇರುವ ಒಂದು ನಕಾರಾತ್ಮಕ ಭಾವನೆ ತೊಂದರೆ ಮಾಡುತ್ತದೆ. 7 ಪ್ರಮುಖ ನಕಾರಾತ್ಮಕ ಭಾವನೆಗಳನ್ನು ನಿರ್ಲಕ್ಷಿಸಿ, ಅವೆಂದರೆ ಗಾಬರಿ(fear), ಅಸೂಹೆ(jealousy), ಸೇಡು(revenge), ದುರಾಸೆ(greed), ದ್ವೇಷ(hatred), ಮೂಡನಂಬಿಕೆ(superstition), ಕೋಪ(anger). ಇದರಿಂದ ಕೊನೆಯಲ್ಲಿ ನಿಮ್ಮ ಮನಸ್ಸು ಪೂರ್ತಿಯಾಗಿ ಸಕಾರತ್ಮಕ ಭಾವನೆಗಳಿಂದ ಪ್ರಾಬಲ್ಯವಾಗುತ್ತದೆ. ಇದರಿಂದ ನಕಾರಾತ್ಮಕ ಭಾವನೆಗಳು ಒಳಗೆ ಹೋಗಲು ಸಾಧ್ಯವಾಗುವುದಿಲ್ಲ.

ಇದನ್ನು ಓದಿ: ನೀವು ಎಂದಿಗೂ ಶ್ರೀಮಂತರಾಗದಿರಲು 7 ಕಾರಣಗಳು

11. The brain - a broadcasting and receiving station for thought

ಮನುಷ್ಯನ ಮೆದುಳು ಯೋಚನೆಯ ಕಂಪನವನ್ನು(vibration) ಪ್ರಸಾರ ಮತ್ತು ಸ್ವೀಕರಿಸುವ ಸ್ಟೇಷನ್ ಆಗಿದೆ. ಉಪಪ್ರಜ್ಞೆ ಮನಸ್ಸು ಸ್ವೀಕರಿಸುವ ಸ್ಟೇಷನ್(sending station) ಆಗಿದೆ. ಇದರಿಂದ ಯೋಚನೆಯ ಕಂಪನ ಪ್ರಸಾರವಾಗುತ್ತದೆ(broadcast).

ಸೃಜನಶೀಲ ಕಲ್ಪನೆ(creative imagination) ಒಂದು ಸ್ವೀಕರಿಸುವ ಗುಂಪಾಗಿದ್ದು ಅದು ಕಂಪನವನ್ನು ಆಯ್ಕೆ ಮಾಡುತ್ತದೆ. ಹೆಚ್ಚಿನ ದರದ ಕಂಪನ(high rate vibration) ಬಂದರೆ ಮನಸ್ಸು ಅದನ್ನು ಅಧಿಕ ಸ್ವೀಕರಿಸುತ್ತದೆ. ಈ ರೀತಿಯ ಹೆಚ್ಚಿನ ದರದ ಕಂಪನ ಒಂದು ಮೆದುಳಿನಿಂದ ಇನ್ನೊಂದಕ್ಕೆ ಹೋಗುತ್ತದೆ.

ಇದನ್ನು ಓದಿ: ಕಡಿಮೆ ಮಾತನಾಡುವ ಜನರ 5 ಗುಣಗಳು

12. The sixth sense - the door to the temple of wisdom

what is the sixth sense in think and grow rich in kannada
sixth sense

ಆರನೇಯ ಇಂದ್ರಿಯವನ್ನು ಕೇವಲ ಧ್ಯಾನದಿಂದಲೇ(meditation) ಸಾಧಿಸಬಹುದು. ನೀವು ಒಮ್ಮೆ ಆರನೇಯ ಇಂದ್ರಿಯದಲ್ಲಿ ಮಾಸ್ಟರ್ ಅದರೆ ನಿಮಗೆ ಮುಂದೆ ಬರುವ ಅಪಾಯದ ಸಂಕೇತದ ಬಗ್ಗೆ ತಿಳಿಯುತ್ತದೆ. ಇದರಿಂದ ನಿಮಗೆ ಹತ್ತಿರದಲ್ಲೇ ಬರುವ ಅವಕಾಶಗಳ ಬಗ್ಗೆ ತಿಳಿಯುತ್ತದೆ.

ನಿಮ್ಮ ಮನಸ್ಸಿನಲ್ಲಿ ಅನುಮಾನ(doudt) ಮತ್ತು ಭಯ(fear) ಇದ್ದಾಗ ಆರನೇಯ ಇಂದ್ರಿಯ ಎಂದಿಗೂ ಕೆಲಸ ಮಾಡುವುದಿಲ್ಲ. ಇವೆಲ್ಲ ಒಂದೊಂದಕ್ಕೆ ಸಂಬಂಧಿಸಿದೆ. ಅನುಮಾನದಿಂದ ಗಾಬರಿಯಾಗುತ್ತದೆ. 6 ಗಾಬರಿಗಳೆಂದರೆ ಬಡತನ(poverty), ಟೀಕೆ(criticism), ಅನಾರೋಗ್ಯ(ill health), ಪ್ರೀತಿಯನ್ನು ಕಳೆದುಕೊಳ್ಳುವುದು(lose of love), ಇಳಿವಯಸ್ಸು(old age), ಸಾವು(death). ಅದೇ ನಕಾರಾತ್ಮಕ ಪ್ರಭಾವಕ್ಕೆ ಒಳಗಾಗುವುದು 7 ನೇ ಶತ್ರುವಾಗಿದೆ.

ಈ ಶತ್ರುವಿನಿಂದ ದೂರವಿರಲು ನೀವು ನಿಮಗೆ ಸಕಾರಾತ್ಮಕ ಯೋಚನೆ ತರುವ ಜನರ ಜೊತೆ ಇರಿ. ನಿಮ್ಮ ಯೋಚನೆಯ ಮೇಲೆ ನಿಯಂತ್ರಣ ಸಾಧಿಸಲು ಮನೋಬಲ(will power) ಶಕ್ತಿಯನ್ನು ಬಳಸಿ ಮತ್ತು ತಮ್ಮ ಉಪಪ್ರಜ್ಞೆ ಮನಸ್ಸನ್ನು ಪ್ರಭಾವ ಮಾಡಿ.

ಗಾಬರಿ ಒಂದು ಮನಸ್ಸಿನ ಸ್ಥಿತಿಯಾಗಿದ್ದು ನಿಯಂತ್ರಣ ಮತ್ತು ನಿರ್ದೇಶನದ ಮೇಲೆ ಅವಲಂಬಿತವಾಗಿದೆ. ಈ ಜ್ಞಾನವನ್ನು ನಿಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳಿ.

ಈ ಪುಸ್ತಕವು ಬಲವಾದ ಬಯಕೆ ಮತ್ತು ನಿರ್ದಿಷ್ಟ ಉದ್ದೇಶವನ್ನು ವಾಸ್ತವವಾಗಿ ಬದಲಾಯಿಸಲು ಯೋಚನೆಯ ಶಕ್ತಿಯ ಬಗ್ಗೆ ತಿಳಿಸುತ್ತದೆ.

"faith is the glue that holds it all together"

"achievement starts with a strong desire"

ನಂತರ ಯೋಜನೆ ಮಾಡಿ ಕಲ್ಪನೆಯಿಂದ ವಾಸ್ತವವಾಗಿ ಬದಲಾಗುತ್ತದೆ.

"successful people reach decisions promptly and definitely"

"lack of persistence is the causes of failure"

"you need the help of a mastermind"

"fear is just a state of mind"

ಇದು ನಿಯಂತ್ರಣ ಮತ್ತು ನಿರ್ದೇಶನದ ಮೇಲೆ ಅವಲಂಬಿತವಾಗಿದೆ.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

No Comments