Website designed by @coders.knowledge.

Website designed by @coders.knowledge.

Top 10 Camouflage Animals | ಜಗತ್ತಿನ ಟಾಪ್ 10 ಮರೆಮಾಚುವ ಪ್ರಾಣಿಗಳು

top 10 camouflage animals in kannada

ಈ ಪ್ರಪಂಚದಲ್ಲಿ ಎಷ್ಟೋ ಲಕ್ಷಾಂತರ ಜೀವ ಜಂತುಗಳಿವೆ. ಆ ಜೀವಿಗಳಲ್ಲಿ ಕೆಲವು ಜೀವಿಗಳನ್ನು ನಾವು ನೋಡಬಹುದು ಆದರೆ ಈ ಸುಂದರವಾದ ಪ್ರಪಂಚದಲ್ಲಿ ಕಣ್ಣಿಗೆ ಕಾಣದ ಕೆಲವು ಜೀವಿಗಳು ಕೂಡ ಇವೆ. ಇಲ್ಲಿ ಕಣ್ಣಿಗೆ ಕಾಣದ ಜೀವಿಗಳೆಂದರೆ ಸೂಕ್ಷ್ಮಾಣು ಜೀವಿಗಳಲ್ಲ. ಈ ಜೀವಿಗಳು ನಮ್ಮ ಸುತ್ತಮುತ್ತಲೇ ಇರುತ್ತವೆ. ಆದರೆ ಅವುಗಳನ್ನು ಗುರುತಿಸಲು ನಮಗೆ ಆಗುವುದಿಲ್ಲ. ಇವತ್ತು ನಾವು ಈ ಲೇಖನದಲ್ಲಿ ಅಂಥಹ ಜೀವಿಗಳನ್ನು ನೋಡೋಣ. ಅಷ್ಟೇ ಅಲ್ಲದೆ ಆ ಜೀವಿಗಳ ಬಗ್ಗೆ ಮತ್ತು ಅವುಗಳಲ್ಲಿ ಇರುವ ಪವರ್‌ಗಳ ಬಗ್ಗೆ ತಿಳಿದರೆ ನೀವು ನಿಜವಾಗಿಯೂ ಅಚ್ಚರಿ ಆಗುತ್ತೀರಾ.

ಇದನ್ನು ಓದಿ: 10 ಅತ್ಯಂತ ಶಕ್ತಿಯುತ ಔಷಧೀಯ ಸಸ್ಯಗಳು

1. ಎಲೆ ಕೀಟಗಳು.

green leaf insects camouflage in kannada
green leaf insect

ಇಲ್ಲಿಯವರೆಗೆ ಪ್ರಪಂಚದಲ್ಲಿ ನೀವು ಎಷ್ಟೋ ಕೀಟಗಳನ್ನು ನೋಡಿರುತ್ತೀರಾ. ಆದರೆ ಈಗ ನಾವು ಹೇಳುವ ಈ ಕೀಟಗಳನ್ನು ಯಾವತ್ತು ನೋಡಿರಲ್ಲ. ಈ ಕೀಟ ನೋಡಲು ಮರದ ಎಲೆಗಳ ಹಾಗೆ ಇದೆ. ಹೀಗಾಗಿ ಈ ಕೀಟಗಳು ನಿಮ್ಮ ಕಣ್ಣ ಮುಂದೆ ಇದ್ದರೂ ನಿಮಗೆ ಗುರುತಿಸಲು ಆಗುವುದಿಲ್ಲ.

ನಿಜ ಹೇಳಬೇಕೆಂದರೆ ಈ ಎಲೆ ಕೀಟಗಳು(leaf insects) ಹಲ್ಲಿಗಳಂಥ ಜೀವಿಗಳಿಗೆ ಇಷ್ಟವಾದ ಆಹಾರವಾಗಿದೆ. ಹಾಗಾಗಿ ಪ್ರಕೃತಿ ಇದಕ್ಕೆ ಸಣ್ಣ ಸಣ್ಣ ಜಂತುಗಳಿಂದ ತಪ್ಪಿಸಿಕೊಳ್ಳಲು ಆಕಾರ ಕೊಟ್ಟಿದೆ.

ಈ ಕೀಟಗಳ ಮುಂದೆ ಏನಾದರೂ ಹೋದರೆ ಇದು ಅಲುಗಾಡದೆ ಪ್ರತಿಮೆಯ(statue) ತರ ನಿಂತುಬಿಡುತ್ತದೆ. ಆಗ ಅದು ಮರಗಳ ಎಲೆ ಜೊತೆ ಹೊಂದಿಕೊಂಡತೆ ಕಾಣುತ್ತದೆ. ಹೀಗಿದ್ದಾಗ ಜಂತುಗಳಲ್ಲ, ಅದನ್ನು ಮನುಷ್ಯರು ಕೂಡ ಗುರುತಿಸಲು ಆಗುವುದಿಲ್ಲ. ಈ ರೀತಿ ಇವುಗಳು ಇತರ ಜೀವಿಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತವೆ.

ಇದನ್ನು ಓದಿ: ಕಪ್ಪು ವಲಯಗಳನ್ನು ಶಾಶ್ವತವಾಗಿ ತೊಡೆದು ಹಾಕಲು 17 ಪರಿಹಾರಗಳು

2. ಓಕ್ಲೀಫ್ ಚಿಟ್ಟೆ.

dead leaf butterfly camouflage in kannada
oakleaf butterfly

ಚಿಟ್ಟೆಗಳು ಕೀಟಗಳಲ್ಲಿ ಅತ್ಯಂತ ಸುಂದರವಾದ ಜೀವಿಯಾಗಿದೆ. ಇಲ್ಲಿಯವರೆಗೆ ನೀವು ಎಷ್ಟೋ ಅಂದವಾದ ಚಿಟ್ಟೆಗಳನ್ನು ನೋಡಿರುತ್ತೀರಾ. ಈಗ ನಿಮಗೆ ಈ ಚಿಟ್ಟೆಗಳು ಕಾಣಿಸುತ್ತಿದೆಯೇ ಅಥವಾ ಇಲ್ಲವೋ ಗೊತ್ತಿಲ್ಲ. ಆದರೆ ನಾನು ಚಿಕ್ಕವನಿದ್ದಾಗ ತುಂಬಾ ಕಾಣಿಸುತ್ತಿದ್ದವು. ಆದರೆ ಈಗ ಅಲ್ಲಲ್ಲಿ ಕಾಣಿಸುತ್ತವೆ. ಓಕ್ಲೀಫ್ ಚಿಟ್ಟೆ(oakleaf butterfly) ನೋಡಿದ್ರೆ ನೀವು ಖಂಡಿತವಾಗಿಯೂ ಅಚ್ಚರಿಗೊಳ್ಳುತ್ತೀರಾ. ಏಕೆಂದರೆ ಈ ಚಿಟ್ಟೆಯನ್ನು ನೋಡಿದಾಗ ಇದು ನಿಜವಾದ ಚಿಟ್ಟೆಯೇ ಅಥವಾ ಅಥವಾ ಒಣಗಿದ ಎಲೆ ಎಂದು ಅನುಮಾನ(doubt) ಬರುತ್ತದೆ.

ಮೊದಲನೇ ಸಲ ನೀವು ಈ ಚಿಟ್ಟೆಯನ್ನು ನೋಡಿದರೆ ಅದು ಒಣಗಿದ ಮರದ ಎಲೆ ಎಂದು ನೀವು ಅಂದುಕೊಳ್ಳುತ್ತೀರಿ. ಅಷ್ಟೇ ಅಲ್ಲ ಈ ಚಿಟ್ಟೆ ಪ್ರಪಂಚದಲ್ಲಿ ಬಹಳ ಅಪರೂಪವಾದ ಜಾತಿಗೆ ಸೇರಿದೆ. ಈ ಚಿಟ್ಟೆಗಳನ್ನು ಹುಡುಕುವುದು ಸಮುದ್ರದ ನೀರಿನ ಲೆಕ್ಕವಿಡುವುದಕ್ಕೆ ಸಮವಾಗಿದೆ. ಏಕೆಂದರೆ ಕಾಡಿನಲ್ಲಿ ಇರುವ ಎಲ್ಲಾ ಒಣಗಿದ ಎಲೆಗಳನ್ನು ಹಿಡಿದುಕೊಂಡು ನೋಡಬೇಕಾಗುತ್ತದೆ ಅಥವಾ ಅದು ಹಾರುತ್ತಿರುವಾಗ ಕಂಡುಹಿಡಿಯಬಹುದು. ಸಾಮಾನ್ಯವಾಗಿ ಕಂಡು ಹಿಡಿಯಲು ಸಾಧ್ಯವೇ ಇಲ್ಲ.

ಈ ಚಿಟ್ಟೆಗಳು ಹೊರಗಿನಿಂದ ಒಣಗಿದ ಎಲೆ ರೀತಿ ಕಂಡರೂ ಒಳಗೆ ಸುಂದರವಾದ ಬಣ್ಣ ಬಣ್ಣದ ರೆಕ್ಕೆಗಳನ್ನು ಹೊಂದಿರುತ್ತವೆ. ಇಂತಹ ಒಣಗಿದ ಎಲೆಯ ಬಣ್ಣದಿಂದ ಇದು ಮರಗಳ ಜೊತೆ ಸೇರಿ ಬಿಡುತ್ತವೆ. ಆದ್ದರಿಂದಲೇ ಕೆಲವೇ ಕೆಲವು ಅದೃಷ್ಟವಂತರು ಮಾತ್ರ ಈ ಚಿಟ್ಟೆಗಳನ್ನು ನೋಡಬಹುದು. ಇದು ಉಷ್ಣವಲಯದ ಕಾಡುಗಳಲ್ಲಿ(tropical forest) ಭಾರತದಿಂದ ಜಪಾನ್‌ವರೆಗೂ ಕಂಡುಬರುತ್ತದೆ. ಒಂದು ವೇಳೆ ನೀವು ಈ ಚಿಟ್ಟೆಯನ್ನು ನೋಡಿದ್ದರೆ ಕಮೆಂಟ್ ಮಾಡಿ ತಿಳಿಸಿ.

ಇದನ್ನು ಓದಿ: ಕೂದಲು ಉದುರುವುದನ್ನು ತಡೆಯಲು ಮನೆಮದ್ದುಗಳು

3. ಮೊಸ್ಸಿ ಎಲೆ ಬಾಲದ ಗೆಕ್ಕೊ.

mossy leaf tailed gecko camouflage in kannada
mossy leaf tailed gecko

ಅಮೆಜಾನ್ ಕಾಡಿನಲ್ಲಿ ಲೆಕ್ಕವಿಲ್ಲದಷ್ಟು ಜೀವ ಜಂತುಗಳಿವೆ. ಆದರೆ ನೀವು ಇಲ್ಲಿ ನೋಡುತ್ತಿರುವ ಈ ಹಲ್ಲಿ(mossy leaf tailed gecko) ಈ ಸೃಷ್ಟಿಯಲ್ಲಿಯೇ ವಿಚಿತ್ರವಾದ ಜೀವಿ. ಪ್ರಕೃತಿ ಇದಕ್ಕೆ ಬಚ್ಚಿಟ್ಟುಕೊಳ್ಳಲು ಒಂದು ಅದ್ಭುತವಾದ ಶಕ್ತಿಯನ್ನು ನೀಡಿದೆ. ಆದ್ದರಿಂದ ಇದನ್ನು ಕಂಡು ಹಿಡಿಯುವುದು ಮನುಷ್ಯರಿಂದ ಸಾಧ್ಯವಾಗದ್ದು.

ಅಮೆಜಾನ್ ಕಾಡಿನಲ್ಲಿರುವ(amazon forest) ಪಕ್ಷಿಗಳಿಗೂ ಸಹ ಈ ಹಲ್ಲಿಗಳನ್ನು ಕಂಡುಹಿಡಿಯಲು ಸಾಧ್ಯವಿಲ್ಲ. 20 ಸೆ.ಮೀ.ಗಳಷ್ಟು ಉದ್ದವಾಗಿರುವ ಈ ಹಲ್ಲಿ ಕಾಣಲು ಮರದ ಕೊಂಬೆಯ ಹಾಗೆ ಇರುತ್ತದೆ. ಅಷ್ಟೇ ಅಲ್ಲ ಇದರ ಶರೀರದ ಆಕಾರ ಕೂಡ ಹೇಗಿರುತ್ತದೆಯೆಂದರೆ, ನೀವದನ್ನು ಮುಟ್ಟಿದರೂ ಕೂಡ ಒಂದು ಮರದ ಕೊಂಬೆಯನ್ನು ಮುಟ್ಟಿದ ಹಾಗೆ ಇರುತ್ತದೆ.

ಹಾಗಾಗಿ ಕಾಡಿನಲ್ಲಿ ಸಣ್ಣ ಸಣ್ಣ ಹುಳುಗಳು ಈ ಹಲ್ಲಿ ಪಕ್ಕದಲ್ಲಿದ್ದರೂ ಕಂಡುಹಿಡಿಯುವುದಿಲ್ಲ. ಅಷ್ಟೇ ಅಲ್ಲದೆ, ಈ ಹಲ್ಲಿಗಳಿಗೆ ಸುಲಭವಾಗಿ ಆಹಾರವಾಗಿ ಬಿಡುತ್ತವೆ. ಇಂತಹ ಶರೀರವಿರುವ ಈ ಅಲ್ಲಿಗೆ ಬೇಟೆಯಾಡುವ ಜಾಗದಿಂದ ಅಲುಗಾಡವ ಅವಶ್ಯಕತೆಯೇ ಇಲ್ಲ. ಚಿಕ್ಕ ಚಿಕ್ಕ ಹುಳುಗಳು ಈ ಹಲ್ಲಿಗಳು ಇರುವ ಜಾಗಕ್ಕೆ ತಮ್ಮಷ್ಟಕ್ಕೆ ಬಂದು ಬಲಿಯಾಗುತ್ತವೆ.

ಇದನ್ನು ಓದಿ: ಎತ್ತರವನ್ನು ಹೆಚ್ಚಿಸಲು 18 ಅತ್ಯುತ್ತಮ ಆಹಾರಗಳು

4. ಲೆಪ್ಟೊಸೆಫಾಲಸ್.

leptocephalus camouflage in kannada
leptocephalus

ನೀರಿನಲ್ಲಿ ವಾಸಿಸುವ ಮೀನುಗಳು ಒಂದೊಂದು ರೀತಿಯ ಬಣ್ಣಗಳಲ್ಲಿ ಇರುತ್ತವೆ. ಆದರೆ ಈ ಮೀನುಗಳ ಲಾರ್ವಾಗಳನ್ನು ಲೆಪ್ಟೊಸೆಫಾಲಸ್(leptocephalus) ಎಂದೂ ಕರೆಯುತ್ತಾರೆ. ಈ ಲಾರ್ವಾಗಳು(larvae) ಯಾವುದೇ ಬಣ್ಣವಿಲ್ಲದ ಪಾರದರ್ಶಕವಾಗಿರುತ್ತದೆ.

ಮಾಮೂಲಿಯಾಗಿ ಈ ಮೀನು ಇಟ್ಟ ಮೊಟ್ಟೆಗಳಲ್ಲಿ ಅರ್ಧಕ್ಕಿಂತ ಅನೇಕ ಮೊಟ್ಟೆಗಳನ್ನು ಬೇರೆ ಮೀನುಗಳ ತಿಂದುಬಿಡುತ್ತವೆ. ಕೇವಲ ಕೆಲವು ಮೊಟ್ಟೆಗಳು ಮಾತ್ರವೇ ಮರಿಗಳಾಗಿ ಬದಲಾಗುತ್ತವೆ. ಅದಕ್ಕಾಗಿಯೇ ಮೀನುಗಳ ಮೊಟ್ಟೆಗಳು ಮರಿಗಳಾದ ನಂತರ, ಆ ಮರಿಗಳು ಶತ್ರು ಜೀವಿಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪಾರದರ್ಶಕವಾಗಿ(transparent) ಬದಲಾಗುತ್ತವೆ.

ಈ ಮೀನಿನ ಮರಿಗಳು ಕೇವಲ ಕೆಲವು ದಿನಗಳವರೆಗೆ ಬಣ್ಣವಿಲ್ಲದೆ ಪಾರದರ್ಶಕವಾಗಿ ಇರುತ್ತವೆ. ಯಾವಾಗ ಅವು ತಿರುಗಿ ಜೀವಿಸಬಲ್ಲ ಸಾಮರ್ಥ್ಯವನ್ನು ಹೆಚ್ಚಿಸಿ ಕೊಳ್ಳುತ್ತವೆಯೋ ಆಗ ಅವು ಸಾಮಾನ್ಯ ಮೀನುಗಳಾಗಿ ಬದಲಾಗುತ್ತವೆ. ಆಗಿನಿಂದ ಅವು ಸಾಮಾನ್ಯ ಮೀನಿನ ರೀತಿ ಕಾಣುತ್ತವೆ.

ಇದನ್ನು ಓದಿ: ಕಳೆದುಹೋದ ಪ್ರಾಚೀನ ಭಾರತದ ಐದು ತಂತ್ರಜ್ಞಾನಗಳು

5. ಆಕ್ಟೋಪಸ್.

octopus camouflage in kannada
octopus

ಸಮುದ್ರದಲ್ಲಿ ಸಿಗುವ ಪ್ರಮಾದಕರವಾದ ಜೀವಿಗಳಲ್ಲಿ ಆಕ್ಟೋಪಸ್(octopus) ಕೂಡ ಒಂದಾಗಿದೆ. ಆಕ್ಟೋಪಸ್ ಜಾತಿಯಲ್ಲಿ ಇರೋ ಪ್ರತ್ಯೇಕತೆ ಏನೆಂದರೆ ಅವು ಎಲ್ಲಿದೆಯೆಂದು ಕಂಡುಹಿಡಿಯುವುದು ಬಹಳ ಕಷ್ಟ. ಸಾಮಾನ್ಯವಾಗಿ ಆಕ್ಟೋಪಸ್ ಗಳು ಅನೇಕ ಬಣ್ಣಗಳಲ್ಲಿ ಇರುತ್ತವೆ.

ಆದರೆ ಯಾವಾಗ ಅದು ಪ್ರಮಾದವಿದೆ ಎಂದು ಗುರುತಿಸುತ್ತೇವೆಯೋ, ಆಗ ಅವು ಎಲ್ಲಿ ವಾಸಿಸುತ್ತವೋ ಆ ಪರಿಸರದ ಪ್ರಾಂತ್ಯದ ಬಣ್ಣಕ್ಕೆ ಬದಲಾಗಿ ಬಿಡುತ್ತವೆ. ಅವುಗಳ ಶರೀರದ ಕೆಳಗೆ ವರ್ಣಶಕ್ತಿ(chromato force) ಎಂಬ ಬಣ್ಣವನ್ನು ಬದಲಿಸುವ ಜೀವಕೋಶ(cell) ಇರುತ್ತದೆ.

ಇದರಿಂದ ಸುತ್ತಲು ಇರುವ ಪರಿಸರದ ಬಣ್ಣಗಳಿಗೆ ಇವು ಬದಲಾಗುತ್ತವೆ. ಅಷ್ಟೇ ಅಲ್ಲದೆ ಯಾವಾಗ ಆಕ್ಟೋಪಸ್ಗೆ ಭಯ ಆಗುತ್ತದೆಯೋ, ಆಗ ಅದು ಬಿಳಿ ಬಣ್ಣಕ್ಕೆ ಬದಲಾಗುತ್ತದೆ. ಒಂದು ವೇಳೆ ಸಿಟ್ಟು ಬಂದರೆ ಕೆಂಪು ಬಣ್ಣಕ್ಕೆ ಬದಲಾಗುತ್ತವೆ. ಆಕ್ಟೋಪಸ್ ಗಳು ಕನಸುಗಳನ್ನು ಕಾಣುತ್ತವೆ. ಏಕೆಂದರೆ ಅಕ್ಟೋಪಸ್ ಗಳು ನಿದ್ದೆ ಮಾಡುವ ಸಮಯದಲ್ಲೂ ಕೂಡ ಬಣ್ಣಗಳನ್ನು ಬದಲಾಯಿಸಿಕೊಳ್ಳುತ್ತವೆ.

ಇದನ್ನು ಓದಿ: ಜಗತ್ತಿನ 20 ತೂಕ ಸ್ನೇಹಿ ಆಹಾರಗಳು

6. ಪಿಗ್ಮಿ ಸಮುದ್ರ ಕುದುರೆ.

pigmy seahorse camouflage in kannada
pigmy seahorse

ಇಷ್ಟು ದೊಡ್ಡ ಸಮುದ್ರಗಳಲ್ಲಿ ಚಿಕ್ಕಚಿಕ್ಕ ಜೀವಿಗಳು ಬದುಕುವುದು ಬಹಳ ಕಷ್ಟ. ಏಕೆಂದರೆ ಸಮುದ್ರದಲ್ಲಿ ವಾಸಿಸುವ ದೊಡ್ಡ ದೊಡ್ಡ ಜೀವಿಗಳು ಚಿಕ್ಕಚಿಕ್ಕ ಜೀವಿಗಳನ್ನು ಸಾಯಿಸಿ ತಿಂದು ಬಿಡುತ್ತವೆ. ಆದರೆ ಸಮುದ್ರದಲ್ಲಿ ಸಿಗುವ ಅನೇಕ ಚಿಕ್ಕ ಜೀವಿಗಳಲ್ಲಿ ಪಿಗ್ಮಿ(pigmy seahorse) ಕೂಡ ಒಂದಾಗಿದೆ.

ಇದು ಕೇವಲ 2 ಸೆ.ಮೀಗಳು ಮಾತ್ರ ಇರುತ್ತದೆ. ಈ ಜೀವಿ ಶರೀರದಲ್ಲಿ ಒಂದು ವಿಚಿತ್ರವಾದ ಸಾಮರ್ಥ್ಯವಿದೆ. ಅದೆಂದರೆ ಪರಿಸ್ಥಿತಿಗೆ ಮತ್ತು ಪರಿಸರಕ್ಕೆ ಅನುಗುಣವಾಗಿ ಬಣ್ಣವನ್ನು ಮತ್ತು ಆಕಾರವನ್ನು ಬದಲಾಯಿಸಿಕೊಳ್ಳುತ್ತವೆ. ಇವು ಹೆಚ್ಚಾಗಿ ಜಪಾನ್, ಇಂಡೋನೇಷಿಯಾ, ಹಾಗೆಯೇ ಉತ್ತರ ಆಸ್ಟ್ರೇಲಿಯಾದ ಸಮುದ್ರಗಳಲ್ಲಿ ಕಂಡುಬರುತ್ತದೆ.

ಪ್ರಮಾದ ಬಂದಾಗ ಇವು ಬಚ್ಚಿಟ್ಟುಕೊಂಡರೆ ಯಾವ ಜೀವಿಯೂ ಸಹ ಇವುಗಳನ್ನು ಕಂಡು ಹಿಡಿಯಲು ಸಾಧ್ಯವಿಲ್ಲ. ಅಷ್ಟೇ ಅಲ್ಲದೆ ಇದು ತನ್ನ ಜೀವನ ಪೂರ್ತಿ ಸಸ್ಯಗಳ ಮೇಲೆ ಆಧಾರವಾಗಿ ಬದುಕುತ್ತವೆ. ಅಂದರೆ ಸಮುದ್ರಗಳಲ್ಲಿರುವ ಸಸ್ಯಗಳ ಮೇಲೆ ಬಚ್ಚಿಟ್ಟುಕೊಳ್ಳುತ್ತದೆ. ಸಾಮಾನ್ಯವಾಗಿ ಇದು ಕೆಂಪು ಮತ್ತು ಬೂದು ಬಣ್ಣಗಳಿಗೆ ಬದಲಾಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಆದರೆ 2014ರಲ್ಲಿ ನಡೆದ ಒಂದು ಅಧ್ಯಯನದ ಪ್ರಕಾರ, ಈ ಚಿಕ್ಕ ಜೀವಿ ತನ್ನ ಶರೀರವನ್ನು ಅನೇಕ ಬಣ್ಣಗಳಿಗೆ ಬದಲಾಯಿಸಿಕೊಳ್ಳಬಹುದು ಎಂದು ತಿಳಿದುಕೊಂಡಿದೆ. ಈ ಜೀವಿ ನಿಜವಾಗ್ಲು ಅದ್ಭುತವಾದದ್ದು ಅಲ್ಲವೇ!

ಇದನ್ನು ಓದಿ: ಭಾರತದ ಮೇಲೆ ಎಂಟು ಅದ್ಭುತ ಸಂಗತಿಗಳು

7. ಮೊಸ್ಸಿ ಕಪ್ಪೆ.

mossy frog camouflage in kannada
mossy frog

ಸ್ನೇಹಿತರೇ, ನಿಮಗೆ ಪಾಚಿ ಬಗ್ಗೆ ಗೊತ್ತೇ ಇರುತ್ತೆ. ಈ ಮೊಸ್ಸಿ ಕಪ್ಪೆ(mossy frog) ಶರೀರ ಕೂಡ ಪಾಚಿಯ ರೀತಿ ಇರುತ್ತದೆ. ಒಂದು ವೇಳೆ ನೀವು ಈ ಕಪ್ಪೆಯನ್ನು ಮೊದಲನೇ ಸಲ ನೋಡಿದರೆ ಖಂಡಿತವಾಗಿ ಒಂದು ಕಲ್ಲಿನ ಮೇಲೆ ಪಾಚಿ ಇದೆಯೆಂದು ಅಂದುಕೊಳ್ಳುತ್ತೀರಾ. ಈ ಕಪ್ಪೆ ತನ್ನ ಶರೀರದ ಬಣ್ಣವನ್ನು ಸುತ್ತಮುತ್ತಲು ಇರುವ ಯಾವುದೇ ಬಣ್ಣ ಕಾದರು ಬದಲಾಯಿಸಿಕೊಳ್ಳಬಲ್ಲದು. ಇದಕ್ಕಿರುವ ಈ ಪ್ರತಿಭೆಯಿಂದ(talent) ಜಗತ್ತಿನಲ್ಲಿರುವ ಇತರ ಕಪ್ಪೆಗಳು ಇವುಗಳಿಗಿಂತ ಪ್ರತ್ಯೇಕವಾಗಿ ಇರುತ್ತವೆ.

8. ಡೆಕೋರೇಟರ್ ಏಡಿ.

decorator crab camouflage in kannada
decorator crab

ಈ ಏಡಿ ಇಂಡೋನೇಷಿಯಾ, ಥೈಲ್ಯಾಂಡ್, ಮಾಲ್ಡೀವ್ಸ್ ಮತ್ತು ಫಿಲಿಪೀನ್ಸ್ ಸಮುದ್ರಗಳಲ್ಲಿ ಕಾಣಸಿಗುತ್ತದೆ. ಈ ಏಡಿ(decorator crab) ಉಳಿದ ಸಮುದ್ರ ಜೀವಿಗಳಿಗೆ ಬಹಳ ಇಷ್ಟವಾದ ಆಹಾರವಾಗಿದೆ.

ಈ ಏಡಿಯ ದೇಹದ ಮೇಲಿರುವ ಕೂದಲಿನ ಬಣ್ಣದಿಂದಾಗಿ ಇದು ಬಹಳ ಪ್ರತ್ಯೇಕವಾಗಿ ಇರುತ್ತದೆ. ಏನಾದರೂ ಪ್ರಮಾದ ಬಂದರೆ ತಕ್ಷಣ ಅದು ಸುತ್ತಮುತ್ತಲೂ ಇರುವ ಪರಿಸರದ ಬಣ್ಣಕ್ಕೆ ಬದಲಾಗುತ್ತದೆ. ಅದಕ್ಕಾಗಿಯೇ ಈ ಏಡಿಗಳನ್ನು ಹುಡುಕೋದು ಮತ್ತು ಕಂಡುಹಿಡಿಯುವುದು ಎಂದರೆ ಬಹಳ ಕಷ್ಟಕರವಾದ ಕೆಲಸವಾಗಿದೆ.

ಇದನ್ನು ಓದಿ: ಕರ್ನಾಟಕದ ಮೇಲೆ ಎಂಟು ಆಸಕ್ತಿದಾಯಕ ಸಂಗತಿಗಳು

9. ಪಿಂಕ್ ವಿಂಗ್ಡ್ ಸ್ಟಿಕ್.

pink winged stick camouflage in kannada
pink winged stick

ಈ ಹುಳು, ಅದಕ್ಕೆ ಪ್ರಮಾದವಿದೆ ಎಂದು ಗೊತ್ತಾದರೆ ಸಾಕು, ಮಾಯವಾಗಿ ಬಿಡುತ್ತದೆ. ಹೇಗೆ ಅಂದರೆ ಪ್ರಮಾದ ಬಂದಾಗ ತಕ್ಷಣವಿದು ತನ್ನ ಶರೀರವನ್ನು ಒಣಗಿದ ಕಡ್ಡಿಯ ಹಾಗೆ ಮಾಡಿಕೊಳ್ಳುತ್ತದೆ. ಅದಕ್ಕಾಗಿಯೇ ಇದಕ್ಕೆ ಪಿಂಕ್ ವಿಂಗ್ಡ್ ಸ್ಟಿಕ್(pink winged stick) ಎಂಬ ಹೆಸರು ಬಂದಿದೆ. ಇದು 4 ರಿಂದ 6 ಇಂಚುಗಳವರೆಗೆ ಬೆಳೆಯುತ್ತದೆ. ಇದು ಆಸ್ಟ್ರೇಲಿಯದ ಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ. ವೆಬ್‌ಸೈಟ್‌ಗೆ ರಿಜಿಸ್ಟರರಾಗಿ ಲಾಗಿನ್ ಮಾಡಿ ಪಾಯಿಂಟ್ಸ್ ಗಳಿಸುವ ಮೂಲಕ ಹಣವನ್ನು ಗಳಿಸಿ.

Mahithi Thana

More by this author

Similar category

Explore all our Posts by categories.

No Comments