Website designed by @coders.knowledge.

Website designed by @coders.knowledge.

21 Days Challenge to Monk Mode | 21 ದಿನಗಳಲ್ಲಿ ಎಲ್ಲರನ್ನು ಹಿಂದೆ ತನ್ನಿ

 0

 Add

Please login to add to playlist

Watch Video

ಮೊಂಕ್ ಮೋಡ್(monk mode) ಪ್ರಕಾರ ಒಬ್ಬ ವ್ಯಕ್ತಿಯ ಜೀವನದಿಂದ ಉದ್ದೇಶ, ಗಮನ ಮತ್ತು ಶಿಸ್ತನ್ನು ತೆಗೆದರೆ ಆಗ ದೀರ್ಘಾವಧಿಗೆ ಅವನ ಹತ್ತಿರ ದುಃಖ ಮಾತ್ರ ಉಳಿಯುತ್ತದೆ. ಅದು ಒಂದು ಅರ್ಥವಿಲ್ಲದ ಬದುಕು ಮತ್ತು ಅಧಿಕ ನೋವಿನಿಂದ ಕೂಡಿರುತ್ತದೆ. ಏಕೆಂದರೆ ಈ 3 ವಿಷಯದಿಂದಲೇ ನೀವು ನಿಮ್ಮ ಬದುಕನ್ನು ನಿಯಂತ್ರಿಸಬಹುದು. ಒಂದು ವೇಳೆ ಇವುಗಳನ್ನು ತೆಗೆದು ಹಾಕಿದರೆ, ನಿಮ್ಮ ಬದುಕಿನ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುತ್ತೀರಾ. ಆಗ ನೀವು ಕೆಟ್ಟ ಹವ್ಯಾಸಗಳಿಗೆ ಬೇಗನೆ ವ್ಯಸನಿಯಾಗುತ್ತೀರಾ ಮತ್ತು ನಿಮ್ಮನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಆರೋಗ್ಯ ಕೆಡುವುದನ್ನು ನೋಡುತ್ತೀರಾ, ನಿಮ್ಮ ಕನಸು ಮರಳಿನ ರೀತಿ ಕೈಯಿಂದ ಜಾರಿ ಹೋಗುತ್ತಿರುವುದನ್ನು ನೋಡುತ್ತೀರಾ, ಆದರೆ ಏನು ಮಾಡಲು ಸಾಧ್ಯವಾಗುವುದಿಲ್ಲ.

ಸತ್ಯವೇನೆಂದರೆ 95% ನಷ್ಟು ಜನರು ತಮ್ಮ ಜೀವನವನ್ನು ಈ ರೀತಿಯೇ ಬದುಕುತ್ತಿದ್ದಾರೆ, ಅದು ಕೆಟ್ಟ ದಾರಿಗೆ ಕರೆದುಕೊಂಡು ಹೋಗುತ್ತದೆ. ನಾವು ಇಂದು ಒಳ್ಳೆಯ ದಾರಿಗೆ ತರುವ ಒಂದು ತಂತ್ರವನ್ನು ತಿಳಿಸಿದರೆ ಹೇಗಿರುತ್ತದೆ. ಅದು ಎಲ್ಲಾ ಗಮನ ಭಂಗ(distraction) ಮಾಡುವವವುಗಳನ್ನು ಕಡಿತಗೊಳಿಸುತ್ತದೆ. ಜಗತ್ತಿನ ಕಿರಿಕಿರಿಯನ್ನು ನಿಮ್ಮಿಂದ ದೂರ ಮಾಡುತ್ತದೆ, ಆಗ ಉಳಿಯುವುದೇ ನೀವು, ನಿಮ್ಮ ಉದ್ದೇಶ, ಗಮನ ಮತ್ತು ಶಿಸ್ತು, ಆ ತಂತ್ರದ ಹೆಸರೇ ಸನ್ಯಾಸಿ ಮೋಡ್(monk mode).

ಇದರಲ್ಲಿ ನಿಮ್ಮ ಬದುಕಿನಲ್ಲಿ ನೀವು ನಿಶ್ಚಿತ ಮಾಡಿದ ಸಮಯದವರೆಗೆ ನಿಮ್ಮನ್ನು ಪೂರ್ತಿಯಾಗಿ ನಿಮ್ಮ ಗುರಿ, ಸುಧಾರಣೆ, ಬದುಕಿನ ಉದ್ದೇಶಕ್ಕಾಗಿ ನೀಡುತ್ತೀರಾ. ನೀವು ಸ್ವಲ್ಪ ಸಮಯದವರೆಗೆ ಹೊರಗಿನ ಜಗತ್ತು, ಸಮಯ ವ್ಯರ್ಥ ಮಾಡುವ ಜನರು ಮತ್ತು ಎಲ್ಲಾ ರೀತಿಯ ವ್ಯಾಕುಲತೆಯಿಂದ ದೂರವಿರುತ್ತೀರಾ. ಅಂದರೆ ನಿಮ್ಮ ಗುರಿ ಮತ್ತು ಬದುಕಿನ ಉದ್ದೇಶಕ್ಕೆ ಅಡ್ಡವಿರುವ ಎಲ್ಲಾ ವಿಷಯಗಳಿಂದ ನೀವು ದೂರವಿರುತ್ತೀರಾ. ನಿಮ್ಮ ಬದುಕಿನಿಂದ ಡೋಪಮೈನ್(dopamine) ಬಿಡುಗಡೆ ಮಾಡುವ ಚಟುವಟಿಕೆಗಳನ್ನು ತೆಗೆದು ಹಾಕಬೇಕು ಮತ್ತು ಶಿಸ್ತನ್ನು ನೀಡುವುದನ್ನು ಮಾತ್ರ ಫಾಲೋ ಮಾಡಬೇಕು. ನಿಮ್ಮ ಬದುಕಿನ ಪ್ರತಿ ಕ್ಷಣವನ್ನು ಮಾನಸಿಕ, ದೈಹಿಕ ಮತ್ತು ಆಧ್ಯಾತ್ಮಿಕ ಆರೋಗ್ಯಕ್ಕೆ ಬಳಸಬೇಕು.

ನೀವು ಇದು ಅತಿ ಆಯ್ತು ಎನ್ನಬಹುದು. ಇದು ಖಂಡಿತವಾಗಿಯೂ ಅತಿಯಾಗಿದೆ. ನೀವು ಇದನ್ನು ದೀರ್ಘವದಿಗೆ ಫಾಲೋ ಮಾಡಲು ಕಠಿಣವಿರಬಹುದು. ನಿಮಗೆ ಇದನ್ನು ಮಾಡುವ ಅವಶ್ಯಕತೆಯೂ ಇಲ್ಲ. ಏಕೆಂದರೆ ನಿಮ್ಮ ಮೊಂಕ್ ಮೋಡ್ 21 ದಿನ, 3 ತಿಂಗಳು, 6 ತಿಂಗಳು ಇಲ್ಲ ಅತಿಯೆಂದರೆ 1 ವರ್ಷ ಇರಬಹುದು. ಇದನ್ನು ನೀವು ನಿಮ್ಮ ಗುರಿ ಮತ್ತು ಸಮಯದ ಮೇಲೆ ಎಷ್ಟರವರೆಗೆ ಫಾಲೋ ಮಾಡುತ್ತೀರಾ ಎಂಬುದು ನಿಮ್ಮ ಮೇಲೆ ಬಿಟ್ಟಿದೆ. ಪ್ರಾರಂಭದಲ್ಲಿ ನೀವು ಇದನ್ನು 21 ದಿನಗಳಿಗೆ ಪ್ರಯತ್ನಿಸಿ, 21 ದಿನದ ನಂತರ ನಿಮಗೆ ಇದರಿಂದ ಅದ್ಭುತ ಫಲಿತಾಂಶ ಮತ್ತು ಶಿಸ್ತಿನ ಅನುಭವ ಬಂದರೆ ನೀವು ಇದನ್ನು ಮುಂದುವರೆಸಬಹುದು. ಇದನ್ನು ಪ್ರಾರಂಭಿಸಲು ನೀವೊಂದು ಶಿಷ್ಟಾಚಾರವನ್ನು(protocol) ಮಾಡಬೇಕು. ನಿಮ್ಮ ಮೊಂಕ್ ಮೋಡ್ ಅನ್ನು ಕನಸಿನ ಜೀವನ(dream life) ಮತ್ತು ದುಃಸ್ವಪ್ನ ಜೀವನದ(nightmare life) ನಡುವಿನ ವ್ಯತ್ಯಾಸದ ಬಗ್ಗೆ ತಿಳಿದು, ಅವಶ್ಯಕತೆಗೆ ತಕ್ಕಂತೆ ವಿನ್ಯಾಸ ಮಾಡಬೇಕು.

ಇದನ್ನು ಓದಿ: "No Excuses - Power of Self Decipline" ಪುಸ್ತಕದ ಸಾರಾಂಶ

1. Dream life vs nightmare life

nightmare vs dream life in kannada
dream life vs nightmare life

Dream life

ಒಂದು ವೇಳೆ ನಿಮ್ಮ ಬದುಕನ್ನು ಬದಲಿಸುವ ಬಗ್ಗೆ ಯೋಚಿಸಿದರೆ ನೀವು ತುಂಬಾ ನಿರ್ದಿಷ್ಟವಾಗಿ ಯೋಚಿಸಬೇಕು. "ನೀವು ಏನನ್ನು ಬಯಸುತ್ತೀರಾ?", "ಈ ಬದುಕಿನ ಶೈಲಿಯನ್ನು ಬಿಟ್ಟು ಯಾವ ಬದುಕಿನ ಶೈಲಿಯ ಬಗ್ಗೆ ಯೋಚಿಸುತ್ತಿದ್ದೀರಾ?", "ನಿಮ್ಮ ಕನಸಿನ ಬದುಕು ಹೇಗಿದೆ?", ಅಂದರೆ ನೀವು ಅಂದುಕೊಂಡ ಎಲ್ಲವನ್ನು ಪಡೆದರೆ ನಿಮಗೆ ಹೇಗೆ ಅನಿಸುತ್ತದೆ. "ನೀವು ಯಾವ ರೀತಿ ಅನುಭವಿಸುತ್ತಿದ್ದೀರಾ?", "ನಿಮ್ಮ ಬದುಕು ಹೇಗಿರುತ್ತದೆ?", ನೀವು ಇದರಲ್ಲಿ ವಾಸ್ತವಿಕ ಮತ್ತು ಪ್ರಾಯೋಗಿಕವಾಗಿಯೂ ಯೋಚಿಸಬೇಕು. ನೀವು ಆ ಗುರಿಯನ್ನು ಸಾಧಿಸುವ ಬಗ್ಗೆ ಸ್ಪಷ್ಟವಾಗಿ ಯೋಚಿಸಿ.

ಇದನ್ನು ಮಾಡಲು ಇರುವ ಒಂದು ಉತ್ತಮ ತಂತ್ರವೆಂದರೆ, ನಿಮ್ಮ ಒಂದು ಪ್ರತಿಕೃತಿಯನ್ನು(idol) ಕಲ್ಪಿಸಿಕೊಳ್ಳಿ. ಒಂದು ಪೇಪರ್ನಲ್ಲಿ ಆ ದಿನದ ಪೂರ್ತಿ ವೇಳಾಪಟ್ಟಿಯನ್ನು ಬರೆಯಿರಿ. ನೀವು ಯಾವಾಗ ಮಲಗಿದಿರಿ, ಯಾವ ಕೆಲಸ ಮಾಡಿದಿರಿ, ಎಂತಹ ಜನರನ್ನು ಭೇಟಿಯಾಗುತ್ತೀರಾ, ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣವಿದೆ?, ನಿಮ್ಮ ಆರೋಗ್ಯ ಹೇಗಿದೆ? ನೀವು ಭಾವನಾತ್ಮಕವಾಗಿ ಹೇಗೆ ಅನುಭವಿಸುತ್ತಿದ್ದೀರಾ. ಇವು ನಿಮಗೆ ಗೆಲ್ಲಲು ಪ್ರೇರಣೆ ಮಾಡುತ್ತದೆ ಮತ್ತು ಗೆಲುವಿನ ತೃಪ್ತಿಯನ್ನು(satisfaction of winning) ನೀಡುತ್ತದೆ.

Nightmare life

ಇದರಲ್ಲಿ ನೀವು ಏನೆಲ್ಲಾ ಯೋಚಿಸಿದಿರೋ ಅದರ ವಿರುದ್ಧವಾಗಿ ಯೋಚಿಸಿ. ನೀವು ಈಗ ಹೇಗೆ ಬದುಕುತ್ತಿದ್ದೀರೋ, ಆ ರೀತಿಯೇ ಬದುಕುತ್ತಿರುತ್ತೀರಾ, ಯಾವುದೇ ದೊಡ್ಡ ಬದಲಾವಣೆಯನ್ನು ತರುವುದಿಲ್ಲ, ಆಗಿದ್ದರೆ ಸ್ವಲ್ಪ ಸಮಯದ ನಂತರ ನಿಮ್ಮ ಬದುಕು ಯಾವ ರೀತಿ ಇರುತ್ತದೆ. ಒಂದು ವೇಳೆ ನೀವು ಯೋಚಿಸಿದ ರೀತಿ ಆಗಿಲ್ಲದೆ ಮತ್ತು ನೀವು ಇಷ್ಟಪಡದ ಜೀವನವನ್ನು ಜೀವಿಸುತ್ತಿದ್ದಾರೆ ಇದುವೇ ನಿಮ್ಮ ನೈಟ್ಮೇರ್ ಲೈಫ್ ಆಗಿದೆ.

ನೀವು ಸೋಮಾರಿ, ಪ್ರತಿದಿನ ಜಂಕ್ ಆಹಾರವನ್ನು ತಿನ್ನುವುದು, ವ್ಯಾಯಾಮ ಮಾಡದಿರುವುದರಿಂದ ಸ್ವಲ್ಪ ವರ್ಷದ ನಂತರ ಎಷ್ಟು ಅನಾರೋಗ್ಯಕರ ಮತ್ತು ದಪ್ಪ ಆಗುತ್ತೀರಾ ಎಂದು ಯೋಚಿಸಿ. ನೀವು ಸಾಮಾಜಿಕ ಮಾಧ್ಯಮ(social media) ಮತ್ತು ಕೆಟ್ಟ ವಸ್ತುಗಳಿಗೆ ವ್ಯಸನಿಯಾಗಿದ್ದಾರೆ, ನಿಮ್ಮ ಮನಸ್ಸು ಮತ್ತು ಆಧ್ಯಾತ್ಮಿಕ ಆರೋಗ್ಯ ಇನ್ನು 5 ವರ್ಷದ ನಂತರ ಹೇಗಿರುತ್ತದೆ ಎಂದು ಯೋಚಿಸಿ. ನಿಮ್ಮ ಬದುಕು ಒಂದು ನೈಟ್ಮೇರ್ ಆಗಿರುತ್ತದೆ. ಹೀಗಾಗಿ ಇದರ ಬಗ್ಗೆ ನೀವು ಯೋಚಿಸುವುದು ತುಂಬಾ ಮುಖ್ಯವಾಗಿದೆ. ಇದರಿಂದ ನೀವು ಈಗಿನ ಸರಾಸರಿ ಬದುಕಿಗೆ ಹೆದರಿ ಬದಲಿಸಲು ಪ್ರಯತ್ನಿಸುತ್ತೀರಾ.

ಯಶಸ್ಸಿನ ಬಗ್ಗೆ ಯೋಚಿಸಿ ನೀವು ಪ್ರೇರಣೆಯ ಅನುಭವ ಮಾಡಿಕೊಳ್ಳುವಷ್ಟು, ಅದರಲ್ಲಿ ಸೋಲುವ ಯೋಚನೆ ಅದಕ್ಕಿಂತ ಗಟ್ಟಿ ಮತ್ತು ಶಕ್ತಿಶಾಲಿಯಾದ ಪ್ರೇರಣೆಯನ್ನು ನೀಡುತ್ತದೆ. ಈ ಎರಡು ಬದುಕಿನ ಬಗ್ಗೆ ತಿಳಿದ ನಂತರ ನೀವು ಇಂದಿನಿಂದ ನಿಮ್ಮ ನೈಟ್ಮೇರ್ ಬದುಕನ್ನು ತಪ್ಪಿಸಿ, ಕನಸಿನ ಬದುಕಿಗೆ ಹತ್ತಿರ ಹೋಗುವಂತೆ ಮಾಡಬೇಕು. ಇದಕ್ಕೆ ಮೊಂಕ್ ಮೋಡ್ ಸಹಕರಿಸುತ್ತದೆ. ಇದರಿಂದ ನೀವು ನಿಮ್ಮ ಕನಸಿನ ಬದುಕನ್ನು ಅನ್ನು ಸಾಧಿಸಲು ನಿಮ್ಮಲ್ಲಿ ಗಟ್ಟಿಯಾದ ಸ್ವಯಂ ಶಿಸ್ತನ್ನು ಬೆಳೆಸುತ್ತದೆ.

"self discipline is about leaning into resistance, taking actions in spite of how you feel, leaving life by design, not by default. But most importantly its acting in accordance with your thoughts, not your feelings" ಎಂದು ಬ್ರಿಯನ್ ಟ್ರೇಸಿ(brian tracy) ಅವರು ಹೇಳುತ್ತಾರೆ.

ಸ್ವಯಂ ಶಿಸ್ತಿನ ಅರ್ಥವೇ ಪ್ರತಿರೋಧ(resistence) ಮೋಡ್ಗೆ ಹೋಗುವುದಾಗಿದೆ. ನೀವು ಯಾವ ರೀತಿಯಲ್ಲಾದರೂ ಅನುಭವಿಸಿ, ನಿಮಗೆ ಸರಿಯೆನ್ನಿಸುವ, ಬದುಕನ್ನು ವಿನ್ಯಾಸ ಮಾಡಿದ ರೀತಿಯಲ್ಲಿ ಬದುಕುವ ಮತ್ತು ನಿಮ್ಮ ಭಾವನೆಗಳ ಬದಲು ಆಲೋಚನೆಗಳ ಮೇಲೆ ಕ್ರಮವನ್ನು ತೆಗೆದುಕೊಳ್ಳುವುದಾಗಿದೆ. ಹೀಗೆ ನೀವು ಮೊಂಕ್ ಮೋಡ್ಗೆ ಹೋಗಿ. ಇದಕ್ಕೆ ಏನೇನು ಮಾಡಬೇಕೆಂದು ನೋಡೋಣ.

ಇದನ್ನು ಓದಿ: unstoppable ಆಗಲು ಇರುವ 5 ​​ಪಾಠಗಳು

2. Monk mode protocol

what are the pillers of monk mode in kannada
monk mode protocol

ಮೊಂಕ್ ಮೋಡ್ನಲ್ಲಿ ಏನೇನು ಮಾಡಬಾರದು ಎಂಬುದನ್ನು ನೀವು ತಿಳಿದುಕೊಂಡಿರಿ. ಅದರಲ್ಲಿ ಏನು ಮಾಡಬೇಕೆಂದು ಈಗ ತಿಳಿಯೋಣ. ಮೊಂಕ್ ಮೋಡ್ನಲ್ಲಿ ನೀವು ಮೂರು ಇನ್ನೊಬ್ಬನಿಗೆ ವರ್ಗಾವಣೆ ಮಾಡಲಾಗದ(non-negotiable) ವಸ್ತುಗಳ ಪಟ್ಟಿ ಮಾಡಬೇಕು. ನೀವು ಇವುಗಳನ್ನು ಪ್ರತಿದಿನ ಫಾಲೋ ಮಾಡಲೇಬೇಕು, ನಿಮ್ಮ ಜೀವನದಲ್ಲಿ ಏನೇ ಆದರೂ ಈ ಮೂರು ವಸ್ತುಗಳನ್ನು ಮಾಡಲೇಬೇಕು.

ಅದರಲ್ಲಿ ಮೊದಲನೆಯದ್ದು 30 ನಿಮಿಷಗಳ ಧ್ಯಾನ, ಎರಡನೆಯದ್ದು ವ್ಯಾಯಾಮ, ಅದು ಯಾವುದೇ ರೀತಿಯ ವ್ಯಾಯಾಮವಾಗಿರಬಹುದು. ನಿಮ್ಮ ದೇಹವನ್ನು ಯಾವುದಾದರೂ ಒಂದು ಒತ್ತಡಕ್ಕೆ ಸಿಲುಕಿಸಬೇಕು. ಇನ್ನು ಮೂರನೇಯದ್ದು ಕಟ್ಟುನಿಟ್ಟಾದ ಆರೋಗ್ಯಕರ ಆಹಾರ ಪದ್ಧತಿಯನ್ನು(strict healthy diet) ಫಾಲೋ ಮಾಡಬೇಕು. ಇದನ್ನು ಏಕೆ ಮಾಡಬೇಕು ಎಂದು ನೀವು ಕೇಳಬಹುದು. ಇದು ಏಕೆಂದರೆ ಈ ಮೂರು ವಸ್ತು ನಿಮ್ಮ ದೇಹ ಮತ್ತು ಮನಸ್ಸಿಗೆ ಇಂಧನದ(fuel) ರೀತಿಯಾಗಿ ಕಾರ್ಯನಿರ್ವಹಿಸುತ್ತದೆ. ಇದರಿಂದ ನಿಮ್ಮ ಮೌಂಟ್ ಮೋಡ್ನಲ್ಲಿ ಉತ್ತಮವಾದದನ್ನು ನೀಡಲು ಸಾಧ್ಯವಾಗುತ್ತದೆ.

ನೀವು ಬೇಕಾದರೆ ಈ ಪಟ್ಟಿಯಲ್ಲಿ ಇನ್ನಷ್ಟು ವಿಷಯಗಳನ್ನು ಸೇರಿಸಬಹುದು. ಉದಾಹರಣೆಗೆ 8 ಗಂಟೆಯ ನಿದ್ದೆ, ಓದುವುದು ಇತ್ಯಾದಿ. ಇವೆಲ್ಲವನ್ನು ಮಾಡಿದ ನಂತರ ನಿಮ್ಮ ಮೊಂಕ್ ಮೋಡ್ ವೇಳಾಪಟ್ಟಿ ಈ ರೀತಿಯಾಗಿ ಕಾಣುತ್ತದೆ. ಬೆಳಗ್ಗೆ ಎದ್ದೇಳುವುದು, ಒಂದು ಲೋಟ ನೀರು ಕುಡಿಯುವುದು, 20 ನಿಮಿಷದ ಧ್ಯಾನ ಮಾಡುವುದು, ಒಂದು ಬೆಳಗಿನ ವಾಕಿಂಗ್ ಹೋಗುವುದು, ಸೂರ್ಯನ ಬೆಳಕನ್ನು ಪಡೆಯುವುದು, ನಿಮ್ಮ ದೇಹಕ್ಕೆ ವ್ಯಾಯಾಮ ನೀಡುವುದು, ನಂತರ ನಿಮ್ಮ ಕೆಲಸದಲ್ಲಿ ತೊಡಗುವುದು.

ದಿನದಲ್ಲಿ ಕನಿಷ್ಠ ಎರಡು 4-4 ಗಂಟೆ ಭಾಗ ಮಾಡಿ ಆಳವಾಗಿ ಕೆಲಸದಲ್ಲಿ(deep work session) ತೊಡಗಿ. ಅದರಲ್ಲಿ ನಿಮ್ಮ ಎಲ್ಲಾ ಕೆಲಸಗಳನ್ನು ಮುಗಿಸಿ. ಮಧ್ಯ 15 ನಿಮಿಷಗಳ ವಿರಾಮ ತೆಗೆದುಕೊಳ್ಳುತ್ತೀರಿ. ಆದರೆ ಸಾಮಾಜಿಕ ಮಾಧ್ಯಮವನ್ನು(social media) ಬಳಸಬೇಡಿ. ನೀವು ವಿದ್ಯಾರ್ಥಿ ಅಥವಾ ಉದ್ಯೋಗಿ ಆಗಿದ್ದರು, ಎಲ್ಲಾ ವ್ಯಾಕುಲತೆಯನ್ನು ನಿರ್ಲಕ್ಷಿಸಿ, ಪೂರ್ತಿಯಾಗಿ ಕೆಲಸದ ಮೇಲೆ ಗಮನ ಹರಿಸಿ. ಅನೇಕರ ಹತ್ತಿರ ಬೇಡದ ವಿಷಯವನ್ನು ಮಾತನಾಡಬೇಡಿ. ನಿಮ್ಮ ಕೆಲಸದ ಮೇಲೆ ಗಮನ ಹರಿಸುತ್ತೀರಿ, ಒಂದು ಆರೋಗ್ಯಕರ ಆಹಾರ ಪದ್ಧತಿಯನ್ನು(diet) ಫಾಲೋ ಮಾಡಿ, ದಿನದಲ್ಲಿ ಕನಿಷ್ಠ 3 ಲೀಟರ್ನಷ್ಟು ನೀರನ್ನು ಕುಡಿಯಿರಿ ಮತ್ತು ಕೊನೆಯದಾಗಿ ಮಲಗುವ ಮೊದಲು ಒಂದು ಪುಸ್ತಕದ ಕೆಲವು ಪುಟಗಳನ್ನು ಓದಿ. ಮುಂದಿನ ದಿನ ಮತ್ತೊಮ್ಮೆ ಎದ್ದು ಇದನ್ನೇ ಪುನರವರ್ತಿಸಿ. ಇದರಿಂದ ನೀವು ಎಷ್ಟು ಬದಲಾಗುವಿರಿ ಎಂದರೆ ನಿಮ್ಮ ಅಕ್ಕಪಕ್ಕ ಇರುವವರೆಲ್ಲ ನೀನು ತುಂಬಾ ಬದಲಾಗಿರುವೆ ಎನ್ನುತ್ತಾರೆ. ನೀವು ಒಂದು ಉದ್ದೇಶವನ್ನು(purpose) ಇಟ್ಟುಕೊಳ್ಳುವುದು ತುಂಬಾ ಮುಖ್ಯವಾಗಿದೆ. ಉದ್ದೇಶವಿಲ್ಲದೆ ಮೊಂಕ್ ಮೋಡ್ಗೆ ಬೆಲೆ ಇರುವುದಿಲ್ಲ.

ಇದನ್ನು ಓದಿ: How to Change Your Life in 30 Days

3. Propose driven life

what are the principles of purpose driven life in kannada
purpose driven life

ಮೊಂಕ್ ಮೋಡ್ನ ಅಂತಿಮ ಗುರಿ, ನಿಮಗೆ ಒಂದು ಉದ್ದೇಶ ಚಾಲಿತ(purpose driven) ಬದುಕನ್ನು ನೀಡುವುದಾಗಿದೆ. ಇಲ್ಲಿಯವರೆಗೆ ನೀವು ನಿಮ್ಮ ಬದುಕಿನಲ್ಲಿ ಇತರರ ಮಾತಿನಿಂದ ಪ್ರಭಾವಿತರಾಗಿ ಮಾಡುತ್ತಿದ್ದೀರಿ. ಸಾಮಾಜಿಕ ಮಧ್ಯಮ, ಸಮಾಜವನ್ನು ನೋಡಿ ಮಾಡುತ್ತಿದ್ದೀರಿ, ಇಲ್ಲ ನಿಮ್ಮ ಹವ್ಯಾಸ ಮತ್ತು ಚಟದಿಂದ ಮಾಡುತ್ತಿದ್ದೀರಿ, ನಿಜವೆಂದರೆ ನಿಮ್ಮ ಬದುಕು ನಿಮ್ಮದಾಗಿರಲಿಲ್ಲ.

ಒಂದು ನಿಜವಾದ ಉದ್ದೇಶದಲ್ಲಿ ನೀವು ನಿಮ್ಮ ಬದುಕಿನ ಎಲ್ಲಾ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರ. ನೀವು ಸಂತೋಷ ಮತ್ತು ಯಶಸ್ವಿಯಾದ ಬದುಕನ್ನು ಜೀವಿಸಲು ಜಗತ್ತನ್ನೇ ಬದಲಿಸುವ ಒಂದು ಉದ್ದೇಶದ ಅಗತ್ಯವಿಲ್ಲ. ನೀವು ನಿಮ್ಮ ಪ್ರಸ್ತುತ ಪರಿಸ್ಥಿತಿಯನ್ನು ನೋಡಬೇಕು ಮತ್ತು ಅದನ್ನು ಬದಲಿಸಲು ಒಂದು ಬಲವಾದ ಕಾರಣವನ್ನು ಹುಡುಕಬೇಕು. ಇದಕ್ಕೆ ಸಂಬಂಧಿಸಿದಂತೆ ನೀವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಾ. ಇದುವೇ ನಿಮ್ಮ ಉದ್ದೇಶವಾಗುತ್ತದೆ.

ಉದಾಹರಣೆಗೆ, ನಿಮಗೆ ಈಗ ಓದಲು ಕಠಿಣವೆನ್ನಿಸುತ್ತಿದರೆ, ನಿಮ್ಮ ಉದ್ದೇಶ ಓದುವಿನಲಿ ಉತ್ತಮವಾಗುವುದಾಗಿದೆ. ನಿಮ್ಮ ಆರೋಗ್ಯ ಕೆಟ್ಟಿದ್ದರೆ, ನಿಮ್ಮ ಆರೋಗ್ಯವನ್ನು ಸುಧಾರಿಸುವುದು ನಿಮ್ಮ ಉದ್ದೇಶವಾಗುತ್ತದೆ. ಒಂದು ವೇಳೆ ನಿಮ್ಮ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದಿದ್ದರೆ, ನಿಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವುದು ನಿಮ್ಮ ಉದ್ದೇಶವಾಗುತ್ತದೆ. ಉಳಿತಾಯ ಮತ್ತು ಹೂಡಿಕೆ ಬಗ್ಗೆ ಕಲಿತುಕೊಳ್ಳಿ, ಇದರಿಂದ ನಿಮಗೆ ಹಣದ ವಿಷಯದಲ್ಲಿ ತೊಂದರೆ ಬರುವುದಿಲ್ಲ.

ನೀವು ಎದ್ದಾಗ, ಮಲಗಿದಾಗ, ಕೂತಾಗ ಯಾವಾಗಲೂ ನಿಮ್ಮ ಉದ್ದೇಶದ ಬಗ್ಗೆಯೇ ಯೋಚಿಸಬೇಕು ಮತ್ತು ನಿಮ್ಮ ಮೊಂಕ್ ಮೋಡ್ ಸಮಯದಲ್ಲಿ ಅದರಲ್ಲಿನ ಒಂದು ವಿಷಯದ ಮೇಲೆ ಕೆಲಸವನ್ನು ಮಾಡಿ. ಆಗ ನೀವು 95% ಜನಗಳಿಗಿಂತ ಮುಂದೆ ಹೋಗುತ್ತೀರಾ. ಮೊಂಕ್ ಮೋಡ್ ಯಾವುದೇ ವ್ಯಕ್ತಿಯ ಬದುಕನ್ನು 21 ದಿನ, 3 ತಿಂಗಳು, 6 ತಿಂಗಳು, ಇಲ್ಲ ಒಂದು ವರ್ಷದಲ್ಲಿ ಬದಲಿಸುತ್ತದೆ ಎಂದು ನಂಬಿರುತ್ತೇವೆ.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

No Comments