Watch Video
ಅರಬ್ ಭಾಷೆಯಲ್ಲಿ ಒಂದು ಹಳೆಯ ಉಲ್ಲೇಖವಿದೆ, "ಮನುಷ್ಯ ಸಮಯಕ್ಕೆ ಹೆದರುತ್ತಾನೆ ಮತ್ತು ಸಮಯ ಪಿರಮಿಡ್‌ಗೆ ಹೆದರುತ್ತದೆ". 4000ಕ್ಕೂ ಹೆಚ್ಚು ವರ್ಷ ಕಳೆದಿದೆ ಆದರೂ ಗೀಜಾದ ಗ್ರೇಟ್ ಪಿರಮಿಡ್ ಸಮಯಕ್ಕೆ ಸಾಟಿ ಒಡೆದು ಹಾಗೇ ನಿಂತಿದೆ. ಇಷ್ಟು ವರ್ಷಗಳಲ್ಲಿ ಸಮಯವು ಇದಕ್ಕೆ ಏನೂ ಮಾಡಲು ಸಾಧ್ಯವಾಗಲಿಲ್ಲ. ಜಗತ್ತಿನ ಪ್ರಾಚೀನ 7 ಅದ್ಬುತಗಳಲ್ಲಿ ಗೀಜಾದ ಪಿರಮಿಡ್ ಮಾತ್ರ ಉಳಿದಿದೆ. ಉಳಿದ 6 ಅದ್ಭುತಗಳು ಸಮಯದೊಂದಿಗೆ ಎಲ್ಲಿ ಮಾಯವಾದವು ಗೊತ್ತಿಲ್ಲ! ನಮ್ಮ ಆಧುನಿಕ ತಂತ್ರಜ್ಞಾನದ ಮೇಲೆ ನಮಗೆ ಜಂಬ ಬಂದರೆ, ಒಮ್ಮೆ ಗೀಜಾ(giza)ದ ಪಿರಮಿಡನ್ನು ನೋಡಲೇಬೇಕು. ನಾವು ಗೀಜಾದ ಪಿರಮಿಡ್ ರೀತಿ 4000 ವರ್ಷ ಯಾವುದೇ ಮೆಂಟೆನೆನ್ಸ್ ಇಲ್ಲದೇ ಇರುವಂಥ ಏನನ್ನಾದರೂ ಕಟ್ಟಿಸಿದೀವಾ? ಖಂಡಿತ ಇಲ್ಲ. ಜಗತ್ತಿನ ವಿವಿಧ ಸ್ಥಳಗಳಲ್ಲಿ ಅನೇಕ ಪಿರಮಿಡ್‌ಗಳು ಇವೆ. ಆದರೆ ಗೀಜಾದಲ್ಲಿರುವ ಪಿರಮಿಡ್ ರಹಸ್ಯ(mysteries)ಗಳಿಂದ ಕೂಡಿದೆ. ಇದರ ರಹಸ್ಯಗಳು ವಿಜ್ಞಾನಿಗಳನ್ನು ಚಕಿತಗೊಳಿಸಿದೆ.
ಈಜಿಪ್ಟ್‌ನ ಗೀಜಾದ ಕೈರೋ ನಗರದಲ್ಲಿ ಮೂರು ಪಿರಮಿಡ್‌ಗಳ ಸಮೂಹ ಇದೆ. ಅವುಗಳಲ್ಲಿ ಒಂದಾಗಿದೆ ಗ್ರೇಟ್ ಪಿರಮಿಡ್. ಗ್ರೇಟ್ ಪಿರಮಿಡ್ ಅಲ್ಲಿ ಇರುವ ಎಲ್ಲಾ ಪಿರಮಿಡ್‌ಗಿಂತ ದೊಡ್ಡದಾಗಿದೆ ಮತ್ತು ಹಳೆಯದಾಗಿದೆ. ಈ ಪಿರಮಿಡ್‌ಗಳ ಜೊತೆಗೆ ಇಲ್ಲಿ ಗ್ರೇಟ್ ಸ್ಪಿಂಕ್ಸ್ ಆಫ್ ಗೀಜಾ ಇದೆ. ಇದು ಒಂದು ಪೌರಾಣಿಕ ಜೀವಿ(mythical creature)ಯಾಗಿದೆ. ಇದರ ಮುಖ ಮನುಷ್ಯನದಾಗಿದ್ದಾರೆ, ದೇಹ ಸಿಂಹದಾಗಿದೆ. ಇದು ಈ ಮೂರು ಪಿರಮಿಡ್‌ಗಳನ್ನು ರಕ್ಷಣೆ ಮಾಡುತ್ತಿರುವಂತೆ ಕಾಣುತ್ತದೆ. ವಿಜ್ಞಾನಿಗಳಿಗೆ ಚಕಿತಗೊಳಿಸುವ ಪಿರಮಿಡ್‌ಗಳ ರಹಸ್ಯಗಳೇನು ಎಂಬುದನ್ನು ನೋಡೋಣ.
ಈ ತ್ರಿಕೋನವನ್ನು ನೋಡಿ. ಇದು ಪಿರಮಿಡ್‌ನ ಆಕಾರದಂತೆ ಇದೆ. ಇದರ ಒಂದು ಭಾಗ ಪೌರಾಣಿಕ ಜೀವಿಯಿಂದ ದಾಟುತ್ತದೆ. ನಾವು ಪಿರಮಿಡ್‌ನ ಒಂದು ಭಾಗವನ್ನು ತೆಗೆದು ಅದರ ಗೆರೆಯ ಮೇಲೆ ಸರಿಸಿದರೆ, ಆ ಭಾಗದ ಗೆರೆ ಪೌರಾಣಿಕ ಜೀವಿಯ ತಲೆತನಕ ಹೋಗುತ್ತದೆ. ಪಿರಮಿಡ್‌ನ ಮಧ್ಯದಿಂದ ಒಂದು ವೃತ್ತ ಎಳೆದರೆ ಅದು ಕೂಡ ಈ ಪೌರಾಣಿಕ ಜೀವಿಯ ತಲೆಯಿಂದ ಹಾದುಹೋಗುತ್ತದೆ.
ಇದನ್ನು ಓದಿ: ಕರ್ನಾಟಕದ ಇತಿಹಾಸಗ್ರೇಟ್ ಪಿರಮಿಡ್ಡನ್ನು ಆಕಾಶದಲ್ಲಿನ ನಕ್ಷತ್ರಗಳ ಚಲನೆಯನ್ನು ನೋಡಿ ಮಾಡಲಾಗಿದೆ. ಗ್ರೇಟ್ ಪಿರಮಿಡ್ಡನ್ನು ಮೇಲಿನಿಂದ ನೋಡಿದರೆ ಇದು ಆಕಾಶದಲ್ಲಿ ಕಾಣುವ ನಕ್ಷತ್ರಗಳನ್ನು ಪ್ರತಿನಿಧಿಸುತ್ತದೆ. ಗ್ರೇಟ್ ಪಿರಮಿಡ್ ಅನ್ನು 2 ಪರಿಪೂರ್ಣ ಅಕ್ಷದಲ್ಲಿ ಮಾಡಲಾಗಿದೆ. ನೀವು ಜಗತ್ತಿನ ನಕ್ಷೆ(map) ತೆಗೆದು ಅದರಲ್ಲಿ ಜಗತ್ತಿನ ಮಧ್ಯ ಯಾವುದೇ ಎಂದು ಹುಡುಕಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಅದರ ಮಧ್ಯ ಗೀಜಾದ ಪಿರಮಿಡ್ ಆಗಿದೆ. ಇದು ಯೋಚಿಸುವ ವಿಷಯವಾಗಿದೆ ಏಕೆಂದರೆ ನಮಗೆ ಕೆಲವು ವರ್ಷಗಳ ಹಿಂದೆಯಷ್ಟೆ ಭೂಮಿ ದುಂಡಾಗಿದೆ ಎಂದು ತಿಳಿದಿದೆ. ಅದಕ್ಕೂ ಮುಂಚೆ ಭೂಮಿ ನೇರವಾಗಿದೆ ಎಂದು ನಂಬಲಾಗುತ್ತಿತ್ತು. ಆಗಿದ್ದರೆ 4000 ವರ್ಷಗಳ ಹಿಂದಿನ ಜನರಿಗೆ ಭೂಮಿಯ ಮಧ್ಯದ ಭಾಗದ ಬಗ್ಗೆ ಹೇಗೆ ತಿಳಿಯಿತು. ಅವರ ತಂತ್ರಜ್ಞಾನ ತುಂಬಾ ಮುಂದುವರೆದಿತ್ತಾ ಅಥವಾ ಇದರ ಹಿಂದೆ ಯಾವುದಾದರೂ ಅನ್ಯಗ್ರಹ ಜೀವಿಯ(alian) ಕೈವಾಡವಿದೆಯೇ! ಗ್ರೇಟ್ ಪಿರಮಿಡ್‌ನ ರಹಸ್ಯಗಳು ಇಲ್ಲಿಗೇ ಮುಗಿಯುವುದಿಲ್ಲ.
ಇದನ್ನು ಓದಿ: ಜಪಾನ್ ಜಗತ್ತಿಗಿಂತ ವರ್ಷಗಳಷ್ಟು ಏಕೆ ಮುಂದಿದೆ?ಪಿರಮಿಡ್ಡನ್ನು ನಾಲ್ಕು ದಿಕ್ಕುಗಳನ್ನು ತೋರಿಸುವಂತೆ ಮಾಡಲಾಗಿದೆ. ಇದರ ಒಂದು ಭಾಗ ಉತ್ತರದ ಧ್ರುವದ(pole) ಕಡೆ ಇದೆ. ಇದರಲ್ಲಿ ಕೆಲವು ಕಿಲೋಮೀಟರ್ ದೋಷವಿದೆ(error). ಅದು 4000 ವರ್ಷಗಳಲ್ಲಿ ಭೂಮಿಯಲ್ಲಿ ಆದ ಪ್ಲೇಟ್ ಟೆಕ್ಟೋನಿಕ್ಸ್ ಬದಲಾವಣೆಯಿಂದಾಗಿದೆ. ಅಷ್ಟಕ್ಕೂ ಆ ಜನಗಳಿಗೆ ದಿಕ್ಕುಗಳ ಬಗ್ಗೆ ಅಷ್ಟು ಸರಿಯಾಗಿ ಹೇಗೆ ಗೊತ್ತಿತ್ತು? ಜೂನ್ 21, ವರ್ಷದ ಅತಿ ದೊಡ್ಡ ದಿನವಾಗಿದೆ. ಆ ದಿನ ರಾತ್ರಿ ಸ್ವಲ್ಪ ಹೊತ್ತು ಇರುತ್ತದೆ. ಜೂನ್ 21 ರಂದು ಸೂರ್ಯ ಇಲ್ಲಿ ಈ ರೀತಿ ಅಸ್ತವಾಗುವಂತೆ ಕಾಣುತ್ತಾನೆ. ಇದು ಒಂದು ರೀತಿ ಸೂರ್ಯ(sun) ಆ ಪೌರಾಣಿಕ ಜೀವಿಯ ಹಿಂದೆ ಕಾಣೆಯಾಗುವಂತೆ ಕಾಣುತ್ತದೆ.
1989ರಲ್ಲಿ ಒಂದು ತೇರಿಯನ್ನು ಪ್ರಕಾಶಿಸಲಾಯಿತು. ಅದರ ಹೆಸರು ಓರಿಯಾನ್ ಕೊರ್ಲೇಶನ್ ತೇರಿ. ಆಕಾಶದಲ್ಲಿ ಓರಿಯಾನ್ ಎಂಬ ಬೆಲ್ಟ್ ಇದೆ. ಅದರಲ್ಲಿ ಮೂರು ನಕ್ಷತ್ರಗಳಿವೆ. ಅದರ ಹೆಸರು ಅಲ್ನಿಟಾಕ್(alnitak), ಅಲ್ನಿಲಮ್(alnilam) ಮತ್ತು ಮಿಂಟಕಾ(mintaka). ಗೀಜಾದ ಮೂರು ಪಿರಮಿಡ್ ಓರಿಯಾನ್ ಬೆಲ್ಟ್ ನಲ್ಲಿರುವ ಈ ಮೂರು ನಕ್ಷತ್ರಗಳ ಜೊತೆ ಒಗ್ಗೂಡುತ್ತವೆ. ಪಿರಮಿಡ್‌ಗಳನ್ನು ಈ ರೀತಿ ಏಕೆ ಮಾಡಲಾಗಿದೆ ಎಂಬುದು ದೊಡ್ಡ ರಹಸ್ಯವಾಗಿದೆ. ಪ್ರಾಚೀನ ಜನರು ಒಸಿರಿಸ್(osiris) ಎಂಬ ದೇವರನ್ನು ಪೂಜಿಸುತ್ತಿದ್ದರು. ಅವರ ಪ್ರಕಾರ ಒಸಿರಿಸ್ ಜನ್ಮ ಮತ್ತು ಮೃತ್ಯುವಿನ ದೇವನಾಗಿದ್ದ. ಆತ ಯಾರಾದರೂ ಸತ್ತ ನಂತರ ಅವರ ಆತ್ಮಕ್ಕೆ ಇನ್ನೊಂದು ಹೊಸ ಜನ್ಮ ನೀಡುತ್ತಿದ್ದನು. ಪ್ರಾಚೀನ ಜನರ ಪ್ರಕಾರ ಓರಿಯಾನ್ ಬೆಲ್ಟ್ ನಲ್ಲಿರುವ ಈ ನಕ್ಷತ್ರಗಳು ಒಸಿರಿಸ್ ನ ಮನೆಯಾಗಿದೆ.
ಜಗತ್ತಿನಲ್ಲಿ ಕಾಣುವ ಎಲ್ಲಾ ಪಿರಮಿಡ್‌ಗಳನ್ನು ಒಂದೇ ಸಮಯದಲ್ಲಿ ಮಾಡಲಾಗಿದೆ. ಆ ಸಮಯದಲ್ಲಿ ಅವರ ಹತ್ತಿರ ಪ್ರಯಾಣಿಸಲು ಯಾವುದೇ ಸಾಧನವಿರಲ್ಲಿಲ್ಲ ಅಥವಾ ಭೂಮಿಯ ಬೇರೆ ಭಾಗದಲ್ಲಿ ಇರುವ ಜನರೊಂದಿಗೆ ಮಾತನಾಡುವ ತಂತ್ರಜ್ಞಾನವು ಇರಲಿಲ್ಲ. ಆದರೂ ಭೂಮಿಯ ವಿವಿಧೆಡೆ ಒಂದೇ ಆಕಾರದಲ್ಲಿ ಮಾಡಿದ ಅನೇಕ ಪಿರಮಿಡ್‌ಗಳು ಇವೆ. ಇದನ್ನು ನೋಡಿದರೆ 4000 ವರ್ಷಗಳ ಹಿಂದೆ ಅವರ ತಂತ್ರಜ್ಞಾನ ತುಂಬಾ ಮುಂದುವರೆದಿತ್ತು, ಇಲ್ಲ ಅವರಿಗೆ ಅನ್ಯಗ್ರಹ ಜೀವಿಗಳ ಸಹಾಯ ಸಿಕ್ಕಿದೆ ಎಂದು ಅನಿಸುತ್ತದೆ. ಇತಿಹಾಸಕಾರರಿಂದ 4000 ವರ್ಷಗಳ ಹಿಂದಿನ ಯಾವುದೋ ರಹಸ್ಯ ಮರೆಯಾಗಿದೆ.
ಇದನ್ನು ಓದಿ: ಪುರಾತನ ಕಾಲದ ಕಠಿಣ ಶಿಕ್ಷೆಗಳುವಿಜ್ಞಾನಿಗಳಿಗೆ ಪಿರಮಿಡ್ಗಳನ್ನು ಏಕೆ ಮಾಡಲಾಗಿದೆ ಎಂಬುದು ತಿಳಿದಿಲ್ಲ. ಇದು ಪ್ರಾಚೀನ ರಾಜರ ಮನೆಯೇ ಅಥವಾ ಆಹಾರವನ್ನು ಸಂರಕ್ಷಿಸಲು ಮಾಡಲಾಗಿತ್ತೆ ಅಥವಾ ಆ ಸಮಯದಲ್ಲಿ ಯಾವುದೇ ವಿಜ್ಞಾನ ಪ್ರಯೋಗದ ಭಾಗವಾಗಿತ್ತೆ ಅಥವಾ ಇದು ವಿದ್ಯುತ್ ಕೇಂದ್ರ(power house) ಆಗಿತ್ತೆ. ಈ ರೀತಿ ಅನೇಕ ಪ್ರಶ್ನೆಗಳಿವೆ ಆದರೆ ಸರಿಯಾದ ಉತ್ತರ ಇನ್ನೂ ತಿಳಿದಿಲ್ಲ. ಒಂದು ನಂಬಿಕೆಯಂತೆ ಪ್ರಾಚೀನ ಜನರು ಶವಗಳನ್ನು ಸುಡುತ್ತಿರಲಿಲ್ಲ. ಅವರು ಸತ್ತ ಶರೀರಕ್ಕೆ ಒಂದು ಲೇಪವನ್ನು ಹಚ್ಚಿ, ಮಮ್ಮಿ ಮಾಡಿ ಬಾಕ್ಸ್‌ನಲ್ಲಿ ಹಾಕುತ್ತಿದ್ದರು. ಆ ಲೇಪದಿಂದ ಅವರು ಸಾವಿರಾರು ವರ್ಷ ಸುರಕ್ಷಿತವಾಗಿರುತ್ತಿದ್ದರು. ಪ್ರಾಚೀನ ಜನರು ಮನುಷ್ಯ ಸತ್ತ ನಂತರವೂ ಜೀವ ಇರುತ್ತದೆ ಎಂದು ನಂಬುತ್ತಿದ್ದರು. ಹೀಗಾಗಿ ಅವರು ಆ ಮೃತ ದೇಹದ ಜೊತೆ ತಿನ್ನಲು ಆಹಾರ, ಬಟ್ಟೆ, ಆಭರಣ, ಪಾತ್ರೆ, ಆಯುಧ, ಪ್ರಾಣಿ ಈ ರೀತಿ ಜೀವಿಸಲು ಬೇಕಾದ ಎಲ್ಲವನ್ನು ಇಡುತ್ತಿದ್ದರು.
ಪಿರಮಿಡ್ಗಳನ್ನು ಪ್ರಾಚೀನ ರಾಜರ ಶವಸಂಸ್ಕಾರ ಎಂದು ಹೇಳಲಾಗುತ್ತದೆ. ಗ್ರೇಟ್ ಪಿರಮಿಡ್ ಗೀಜಾದ ರಾಜ ಕೂಪು(khufu)ನ ಮೃತದೇಹ ಇರುವ ಜಾಗ ಎಂದು ಹೇಳಲಾಗುತ್ತದೆ. ಪಿರಮಿಡ್‌ಗಳನ್ನು ಶವಸಂಸ್ಕಾರ ಮಾಡಲು ಮಾಡಿದ್ದರು ಎಂದುಕೊಳ್ಳೋಣ. ಆಗಿದ್ದರೆ ಇಲ್ಲಿಯವರೆಗೆ ಹುಡುಕಿದ ಪಿರಮಿಡ್‌ನಲ್ಲಿ ಯಾವುದೇ ಮಮ್ಮಿ(mummy) ಯಾಕೆ ಸಿಗಲಿಲ್ಲ. ಇದರಿಂದ ಪಿರಮಿಡ್ ಶವಸಂಸ್ಕಾರ ಮಾಡಲು ನಿರ್ಮಿಸಿಲ್ಲ ಎಂದು ತಿಳಿಯುತ್ತದೆ.
ಇದನ್ನು ಓದಿ: ಡೈನಾಸೋರ್ಗಳ ನಾಶದಿಂದ ಮನುಷ್ಯನ ಅಸ್ತಿತ್ವದ ತನಕಪಿರಮಿಡ್ಗಳನ್ನು ಏಕೆ ಮಾಡಲಾಗಿತು ಎಂಬುದು ಎಷ್ಟು ರಹಸ್ಯವಾಗಿದೆಯೋ ಅದೇ ರೀತಿ ಪಿರಮಿಡ್‌ಗಳನ್ನು ಹೇಗೆ ಮಾಡಲಾಯಿತು ಎಂಬುದು ರಹಸ್ಯವಾಗಿದೆ. ಚಕ್ರದ ಆವಿಷ್ಕಾರ ಆಗಿರದ ಕಾಲದಲ್ಲಿ ಪಿರಮಿಡ್ಡನ್ನು ಮಾಡಲಾಗಿದೆ ಮತ್ತು ಬಂಡೆಗಳನ್ನು ಬೇರ್ಪಡಿಸುವಂತಹ ಒಂದು ವಸ್ತುವು ಆ ಸಮಯದಲ್ಲಿ ಇರಲಿಲ್ಲ. ಪ್ರಾಚೀನ ಜನರು ಆಯುಧವಿಲ್ಲದೆ ಬಂಡೆಗಳನ್ನು ಹೇಗೆ ಕತ್ತರಿಸುತ್ತಿದ್ದರು. ಅವರು ಚಕ್ರಗಳಿಲ್ಲದೆ ಆ ಬಂಡೆಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೇಗೆ ತಲುಪಿಸುತ್ತಿದ್ದರು. ಗ್ರೇಟ್ ಪಿರಮಿಡ್‌ನ(great pyramid) ಭಾರ 75 ಲಕ್ಷ ಟನ್ ನಷ್ಟಿದೆ. ಇಂದಿನ ಆಧುನಿಕ ಕಟ್ಟಡ ಬುರ್ಜ್ ಖಲೀಫಾ(burj khalifa) 5 ಲಕ್ಷ ಟನ್ ನಷ್ಟಿದೆ. ಆಗಿದ್ದರೆ ಗ್ರೇಟ್ ಪಿರಮಿಡ್ ಎಷ್ಟು ಭಾರವಿದೆ ಎಂದು ನೀವು ಯೋಚಿಸಿ. ಐಫೆಲ್ ಟವರ್(eiffel tower) ಮಾಡುವ ಮೊದಲು ಗ್ರೇಟ್ ಪಿರಮಿಡ್ ಜಗತ್ತಿನಲ್ಲಿ ಮಾನವ ಮಾಡಿದ ಅತಿ ಎತ್ತರದ ನಿರ್ಮಾಣವಾಗಿತ್ತು. ಈ ಪಿರಮಿಡ್ 450 ಅಡಿ ಎತ್ತರವಿದೆ ಮತ್ತು 13 ಎಕರೆ ಪ್ರದೇಶದಲ್ಲಿ ವಿಸ್ತರಿಸಿದೆ. ಇದರ ಪ್ರದೇಶ 16 ಫುಟ್ಬಾಲ್ ಸ್ಟೇಡಿಯಂ ಜಾಗದಷ್ಟು ವಿಸ್ತರಿಸಿದೆ.
ಇದರಲ್ಲಿ 23 ಲಕ್ಷಕ್ಕೂ ಅಧಿಕ ಬಂಡೆಗಳನ್ನು ಬಳಸಲಾಗಿದೆ. ಅವುಗಳ ತೂಕ 2,700 ಕೆಜಿಯಿಂದಿಡಿದು 80,000 ಕೆಜಿ ತನಕವಿದೆ. ಇಷ್ಟು ಭಾರವಾದ ಬಂಡೆಗಳನ್ನು ಯಾವುದೇ ಕ್ರೇನ್(crane) ಬಳಸದೆ ಇಷ್ಟು ಮೇಲೆ ಹೇಗೆ ಸಾಗಿಸಲಾಯಿತು ಎಂಬುದು ಪ್ರಶ್ನೆಯಾಗಿದೆ. ಗ್ರೇಟ್ ಪಿರಮಿಡ್‌ನ ನಿರ್ಮಾಣ 20 ವರ್ಷಗಳಲ್ಲಿ ಮುಗಿದಿತ್ತು ಮತ್ತು ಆ ಕಲ್ಲುಗಳನ್ನು ಬೆಟ್ಟಗಳನ್ನು ಕೊರೆದು, ಕಟ್ಟಿಗೆ ಮತ್ತು ಹಗ್ಗಗಳಿಂದ ಎಳೆದು ತರಲಾಯಿತು ಎಂದು ನಂಬಲಾಗಿದೆ. ಒಂದು ವೇಳೆ ಅವರು ಈ ರೀತಿ ಪಿರಮಿಡ್‍ನ ನಿರ್ಮಾಣ ಮಾಡಿದ್ದಾರೆ. ಅವರಿಗೆ ಆ ಕಲ್ಲನ್ನು ಕೊರೆದು, ಪಿರಮಿಡ್ ಇರುವ ಜಾಗಕ್ಕೆ ತಂದು, ಅಷ್ಟು ಮೇಲೆ ತೆಗೆದುಕೊಂಡು ಹೋಗಿ ಕೂರಿಸಲು ಕೇವಲ 30 ಸೆಕೆಂಡ್ ಸಿಗುತ್ತದೆ. ಪಿರಮಿಡ್‍ನಲ್ಲಿ ಬಳಸಿದ ಕಲ್ಲುಗಳನ್ನು 800 ಕಿಲೋಮೀಟರ್‌ಗಳಷ್ಟು ದೂರದಿಂದ ತರಲಾಯಿತು ಎಂದು ನಂಬಲಾಗಿದೆ. ಯಾವುದೇ ಆಧುನಿಕ ತಂತ್ರಜ್ಞಾನದ ಸಹಾಯವಿಲ್ಲದೆ ಇದನ್ನು ಮಾಡುವುದು ಅಸಾಧ್ಯವೆನಿಸುತ್ತದೆ.
ಇದನ್ನು ಓದಿ: ಎತ್ತರವನ್ನು ಹೆಚ್ಚಿಸಲು 18 ಅತ್ಯುತ್ತಮ ಆಹಾರಗಳುಪಿರಮಿಡ್ನ ಬಾಗಿದ ತ್ರಿಕೋನ ಗೋಡೆಗಳು ನೆಲದಿಂದ ಎಷ್ಟು 52° ಕೋನ(angle)ದಲ್ಲಿದೆ. ಇದರಲ್ಲಿನ ಕೋಣೆಗಳನ್ನು ಯಾರು ಹೋಗಲು ಸಾಧ್ಯವಾಗದಂತೆ ನಿರ್ಮಿಸಲಾಗಿದೆ. ಪಿರಮಿಡ್‌ನಲ್ಲಿ ತುಂಬಾ ಕಡೆ ಗುಹೆಗಳಿವೆ. ಆ ಗುಹೆಗಳನ್ನು ಏಕೆ ಮಾಡಲಾಗಿದೆಯೆಂದು ಯಾರಿಗೂ ತಿಳಿದಿಲ್ಲ. ಮೊದಲಿಗೆ ಇವುಗಳನ್ನು ವಾತಾಯನ(ventilation)ಗೆ ಮಾಡಲಾಗಿದೆ ಎಂದು ನಂಬಲಾಗಿತು. ಆದರೆ ಈ ಗುಹೆಯೊಳಗೆ ರೊಬೋಟ್ಗಳನ್ನು ಕಳುಹಿಸಿದಾಗ ಗುಹೆಗಳು ಮುಚ್ಚಿರುವುದು ಕಂಡಿತು. ಹೀಗಾಗಿ ಇದರಲ್ಲಿನ ಗುಹೆಗಳನ್ನು ವೆಂಟಿಲೇಶನ್ ಗಲ್ಲದೆ ಯಾವುದೇ ಇತರ ವಿಷಯಕ್ಕೆ ಮಾಡಲಾಗಿದೆ.
ಗ್ರೇಟ್ ಪಿರಮಿಡ್‌ನಲ್ಲಿ ಇಲ್ಲಿಯ ತನಕ ಕೇವಲ 3 ಕೋಣೆಗಳನ್ನು(chamber) ಕಂಡುಹಿಡಿಯಲಾಗಿದೆ. ಇದರ ಅರ್ಥ ಇದರಲ್ಲಿ ಕೇವಲ 3 ಕೋಣೆ ಇದೆಯಂತಲ್ಲ. ಇದರಲ್ಲಿ ಇನ್ನೂ ಅನೇಕ ಕೋಣೆಗಳಿವೆ. ಆದರೆ ನಾವು ಮಾತ್ರ ಇದರ 3 ಕೋಣೆಗಳನ್ನು ಕಂಡುಹಿಡಿದಿದ್ದೇವೆ. ಅದರಲ್ಲಿ ಕೆಳಗೆ ಇರುವುದೇ ಬೇಸ್ ಚೇಂಬರ್, ಮಧ್ಯದಲ್ಲಿರುವುದು ಕ್ವೀನ್ ಚೇಂಬರ್ ಮತ್ತು ಮೇಲಿರುವುದು ಕಿಂಗ್ಸ್ ಚೇಂಬರ್. ಗ್ರೇಟ್ ಪಿರಮಿಡ್‌ನ ಉತ್ತರ ಮತ್ತು ದಕ್ಷಿಣದ ಗೋಡೆಗಳಲ್ಲಿ ಚಿಕ್ಕ ಶಾಫ್ಟ್ ಗಳನ್ನು ಮಾಡಲಾಗಿದೆ. ಅದರಲ್ಲಿ ದಕ್ಷಿಣದ ಶಾಫ್ಟ್ ಓರಿಯಾನ್ ಬೆಲ್ಟ್ ಕಡೆಗೆ ಇದ್ದರೆ, ಉತ್ತರದ ಶಾಫ್ಟ್ ಅದರ ಆಕಾಶದ ನಕ್ಷ ತ್ರದ ಕಡೆ ಇದೆ. 2011ರಂದು ಕ್ವೀನ್ ಚೇಂಬರ್ನಲ್ಲಿ ಒಂದು ರಿಮೋಟ್ ಕ್ಯಾಮೆರಾವನ್ನು ಕಳುಹಿಸಲಾಯಿತು. ಅದು ಮುಂದಿನ ಹಾದಿ ಮುಚ್ಚಿರುವುದನ್ನು ಗಮನಿಸಿತು. ಆದರೆ ಮುಂದಿರುವ ಗೋಡೆಯ ಮೇಲೆ ಒಂದು ಮೆಟಲ್‌ನ ಪಿನ್ ಇತ್ತು. ವಿಜ್ಞಾನಿಗಳಿಗೆ ಇದರ ಹಿಂದೆ ಇನ್ನೊಂದು ಕೋಣೆ ಇದೆ ಎಂದು ಅನಿಸಿತ್ತು. ಅವರು ಆ ಗೋಡೆಯ ಮೇಲೆ ಚಿಕ್ಕ ರಂಧ್ರ ಮಾಡಿ, ಚಿಕ್ಕ ರೋಬೊಟನ್ನು ಕಳುಹಿಸಿದರು. ಆ ರೋಬೋಟಿನಲ್ಲಿರುವ ಕ್ಯಾಮೆರಾ ಒಂದು ಫೋಟೋ ತೆಗೆದಿತ್ತು, ಅದನ್ನು ನೀವು ಈಗ ನೋಡುತ್ತಿದ್ದೀರಾ. ಆದರೆ ಇದರ ನಂತರ ಆ ಕ್ಯಾಮೆರಾ ಕೆಲಸ ಮಾಡಲು ನಿಲ್ಲಿಸಿತು ಮತ್ತು ಮುಂದಿನ ಪರಿಶೋಧನೆ(exploration) ಅಲ್ಲಿಗೇ ನಿಂತಿತು. ಅಂದಿನಿಂದ ಇಂದಿನವರೆಗೆ ಅಲ್ಲಿನ ಸರ್ಕಾರ ಮುಂದಿನ ಪರಿಶೋಧನೆಗೆ ಅನುಮತಿ ನೀಡುತ್ತಿಲ್ಲ. ಅಲ್ಲಿನ ಸರ್ಕಾರ ಪಿರಮಿಡ್‌ನ ಎಲ್ಲ ರಹಸ್ಯ ತಿಳಿದರೆ ಪ್ರವಾಸಿಗರು ಕಡಿಮೆ ಆಗಬಹುದು ಎಂದು ನಂಬಿದ್ದಾರೆ. ಆದರೆ ಗ್ರೇಟ್ ಪಿರಮಿಡ್‌ನ ಅನೇಕ ರಹಸ್ಯಗಳು ನಮ್ಮಿಂದ ಇನ್ನೂ ಮರೆಯಾಗಿವೆ. ಮುಂದಿನ ಪರಿಶೋಧನೆಯಲ್ಲಿ ನಮಗೆ ಅವುಗಳ ಬಗ್ಗೆ ತಿಳಿಯಬಹುದು.
ಗ್ರೇಟ್ ಪಿರಮಿಡ್ ಭೂಕಂಪನ ನಿರೋಧವಾಗಿದೆ ಅಂದರೆ ಇದು ದೊಡ್ಡ ಭೂಕಂಪದ ಕಂಪನಗಳನ್ನು ತಡೆದುಕೊಳ್ಳಬಹುದು ಮತ್ತು ಇದು 4000 ವರ್ಷಗಳಿಂದ ಭೂಕಂಪದ ಕಂಪನಗಳನ್ನು ತಡೆಯುತ್ತಲೇ ಬಂದಿದೆ. ಇಂತಹ ಶಾಕ್ ಪ್ರೂಫ್ ತಂತ್ರಜ್ಞಾನ ಅದು 4000 ವರ್ಷಗಳ ಹಿಂದೆ, ಅಸಂಭವವೆನ್ನಿಸುತ್ತದೆ. ಭೂಕಂಪವಷ್ಟೇ ಅಲ್ಲದೆ ಇದರ ಬಂಡೆಗಳನ್ನು ಶಾಖ ವಿಸ್ತರಣೆ(heat expansion)ಯನ್ನು ತಡೆಯುವಂತೆ ಇರಿಸಲಾಗಿದೆ. ಇವುಗಳ ಕಲ್ಲಿನ ಜಾಯಿಂಟ್ನಲ್ಲಿ ಒಂಫು ಬ್ಲೇಡ್ ಕೂಡ ತೂರಿಸಲು ಸಾಧ್ಯವಿಲ್ಲ.
ಇದನ್ನು ಓದಿ: ಕಳೆದುಹೋದ ಪ್ರಾಚೀನ ಭಾರತದ ಐದು ತಂತ್ರಜ್ಞಾನಗಳುಗ್ರೇಟ್ ಪಿರಮಿಡ್ ಮಾತ್ರ ರಹಸ್ಯಗಳಿಂದ ಕೂಡಿಲ್ಲ. ಅದರ ಮುಂದೆ ಇರುವ ಪೌರಾಣಿಕ ಜೀವಿ ಗ್ರೇಟ್ ಸ್ಪಿಂಕ್ಸ್ ಆಫ್ ಗೀಜಾ ಕೂಡ ರಹಸ್ಯಗಳನ್ನು ಹೊಂದಿದೆ. ಇತಿಹಾಸದ ಯಾವುದಾದರೂ ದೊಡ್ಡ ಮೂರ್ತಿ ಇದೆಯೆಂದರೆ ಅದು ಇದುವೆ. ಇದು 74 ಮೀ ಉದ್ದ ಮತ್ತು 20 ಮೀ ನಷ್ಟು ಎತ್ತರವಿದೆ. ಇದನ್ನು ಪಿರಮಿಡ್ ರೀತಿ ಕಲ್ಲುಗಳನ್ನು ಇರಿಸಿ ಮಾಡಿಲ್ಲ, ಇದನ್ನು ಒಂದೇ ಕಲ್ಲನ್ನು ಕೊರೆದು ಮಾಡಲಾಗಿದೆ. ಪಿರಮಿಡ್ ಮರುಭೂಮಿಯಲ್ಲಿ ಇರುವುದರಿಂದ ಈ ಪೌರಾಣಿಕ ಜೀವಿ ಸಾವಿರಾರು ವರ್ಷಗಳಿಂದ ಮರಳಿನಲ್ಲಿ ಅಡಗಿತ್ತು. ನೆಲದ ಮೇಲೆ ಅದರ ತಲೆ ಮಾತ್ರ ಕಾಣಿಸುತ್ತಿತ್ತು. 1900ರಲ್ಲಿ ಇದರ ಸುತ್ತಲಿನ ಮರಳನ್ನು ತೆಗೆಯಲಾಯಿತು ಮತ್ತು ಇದರ ನಿಜವಾದ ರೂಪ ಜಗತ್ತಿಗೆ ತಿಳಿಯಿತು. ಈ ಮೂರ್ತಿಯನ್ನು ನವೀಕರಿಸುವಾಗ(renovate) ಅಲ್ಲಿನ ಕೆಲಸಗಾರರು ಆಕಸ್ಮಿಕವಾಗಿ ಇದರ ಕೆಳಗೆ ಗುಹೆಗಳನ್ನು ಕಂಡುಹಿಡಿದರು. ಅದು ಅದರ ಕೆಳಗೆ ಹೋಗುತ್ತಿತ್ತು. ಈ ಮೂರ್ತಿಯನ್ನು ಮಾಡಿದಾಗ ಅದು ಈ(fig-1) ರೀತಿ ಕಾಣುತ್ತಿತ್ತು. ಆದರೆ ಸಾವಿರಾರು ವರ್ಷಗಳಿಂದ ಆದ ಬದಲಾವಣೆಯಿಂದ ಅದು ಈ (fig-2) ರೀತಿಯಾಗಿದೆ.
ಗ್ರೇಟ್ ಪಿರಮಿಡ್‌ನ ಒಳಗೆ ಒಂದು ನೈಸರ್ಗಿಕ ಎಸಿ ಇದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಇದರ ಒಳಗೆ ವರ್ಷಪೂರ್ತಿ ತಾಪಮಾನ 20° ಇರುತ್ತದೆ. ಗೀಜಾದ ಪಿರಮಿಡ್ ಅತ್ಯಂತ ಬಿಸಿಲಿರುವ ಮರುಭೂಮಿಯಲ್ಲಿ ಮಾಡಲಾಗಿದೆ. ಆದರೂ ಇದರ ಒಳಗಿನ ತಾಪಮಾನ ಐಡಿಯಲ್ ಆಗಿರುತ್ತದೆ. ಹನ್ನೆರಡನೇ ಶತಮಾನದ ಅಂತ್ಯದಲ್ಲಿ ಈಜಿಪ್ಟಿನ ಒಬ್ಬ ಸುಲ್ತಾನ ಗೀಜಾದ ಪಿರಮಿಡ್‌ಗಳನ್ನು ಹೊಡೆಯಲು ಹೋದ. ಆ ಪಿರಮಿಡನ್ನು ಹೊಡೆಯುವವರು 8 ತಿಂಗಳಲ್ಲಿ ಇಷ್ಟು(fig) ಹಾನಿ ಮಾಡಿದ್ದರು. ಅವರು ಒಂದು ದಿನದಲ್ಲಿ ಕೇವಲ 1 ಅಥವಾ 2 ಕಲ್ಲುಗಳನ್ನು ಮಾತ್ರ ತೆಗೆಯಲು ಸಾಧ್ಯವಾಗುತ್ತಿತ್ತು. 8 ತಿಂಗಳ ನಂತರ ಆ ಸುಲ್ತಾನ ಸೋತು ತನ್ನ ಮಾತನ್ನು ಹಿಂಪಡೆದ. ಅವನು ಹಾನಿ ಮಾಡಿದ ಪಿರಮಿಡ್ ಗ್ರೇಟ್ ಪಿರಮಿಡ್‌ನ ಪಕ್ಕದಲ್ಲಿದೆ.
ಪಿರಮಿಡನ್ನು ವಿದ್ಯುತ್ ಉತ್ಪಾದಿಸಲು ಮಾಡಲಾಗಿತ್ತು ಎಂದು ನಂಬಲಾಗಿದೆ. ಆಧುನಿಕ ತೇರಿಯ ಪ್ರಕಾರ ಇದು ಪವರ್ ಪ್ಲಾಂಟ್ ಹೊರತು ಶವ ಸಂಸ್ಕಾರವಲ್ಲ. ಇದರಿಂದ ಬರುವ ವಿದ್ಯುತ್ ಶಕ್ತಿಯನ್ನು ಇಡೀ ಜಗತ್ತಿನಲ್ಲಿ ಬಳಸಲಾಗುತ್ತಿತ್ತು ಎಂದು ನಂಬಲಾಗಿದೆ. ಈಜಿಪ್ಟಿನಲ್ಲಿ ಡೆನ್ಡೆರಾ ಲೈಟ್ ಕಾಂಪ್ಲೆಕ್ಸ್ ಎಂಬ ಒಂದು ರಹಸ್ಯ ಮಂದಿರವಿದೆ. ಈ ಮಂದಿರದಲ್ಲಿ ಅನೇಕ ರಹಸ್ಯಮಯ ಕಲೆಗಳಿವೆ. ಅವುಗಳಲ್ಲಿ ಒಂದಾಗಿದೆ ಈ ಕಲೆ, ಇದನ್ನು ಡೆನ್ಡೆರಾ ಲೈಟ್ ಎಂದು ಕರೆಯಲಾಗುತ್ತದೆ. ಈ ಕಲೆ ಆಧುನಿಕ ಬಲ್ಪ ರೀತಿ ಕಾಣುತ್ತದೆ. ಒಂದು ವೇಳೆ ಇದು ಬಲ್ಬ್ ಆಗಿದ್ದರೆ ಪ್ರಾಚೀನ ಈಜಿಪ್ಟಿನಲ್ಲಿ ವಿದ್ಯುತ್ ಇರುವುದು ಸತ್ಯವಾಗುತ್ತದೆ.
ಎರಿಕ್ ವಾನ್ ಡೆನಿಕನ್ ಎಂಬುವರು ಒಂದು ಪುಸ್ತಕ ಬರೆದಿದ್ದರು. ಅದರ ಹೆಸರು ಚಾರಿಯಟ್ಸ್ ಆಫ್ ದಿ ಗಾಡ್ಸ್ ಅದರ ಪ್ರಕಾರ ಪಿರಮಿಡ್ಗಳನ್ನು ಯಾವುದೋ ಅನ್ಯಗ್ರಹ ಜೀವಿಗಳ ಮಾಡಿದ್ದಾರೆ ಹೊರತು ಮನುಷ್ಯರಲ್ಲ. ಅನ್ಯಗ್ರಹ ಜೀವಿಗಳು ತಮ್ಮ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಪರ್ಫೆಕ್ಟ್ ಜಿಯೋಗ್ರಫಿ ಮತ್ತು ಜಿಯೋಮೆಟ್ರಿ ನೋಡಿ, ಈ ಪಿರಮಿಡ್‌ಗಳನ್ನು ನಿರ್ಮಿಸಿದ್ದರು ಎಂದು ಹೇಳುತ್ತದೆ. ಈ ಭಾರವಾದ ಪಿರಮಿಡ್‌ಗಳು ಅನ್ಯಗ್ರಹ ಜೀವಿಗಳಿಗೆ ಪ್ರಯೋಗಶಾಲೆಯಾಗಿತ್ತು ಎಂದು ನಂಬಲಾಗಿದೆ.
ಪಿರಮಿಡ್ ಮೇಲೆ ಈ ರೀತಿಯ ಅನೇಕ ತೇರಿಗಳಿವೆ. ಆದರೆ ಯಾವ ತೇರಿ ಸತ್ಯವೆಂದು ಯಾರಿಗೂ ತಿಳಿದಿಲ್ಲ.
ಈ ಲೇಖನದ ಮೇಲೆ ಕಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ.
Explore all our Posts by categories.
Info Mind 6189
Info Mind 3094
See all comments...
sushma • December 15th,2022
Super wonderful information.