Amazing facts about India | ಭಾರತದ ಮೇಲೆ ಎಂಟು ಅದ್ಭುತ ಸಂಗತಿಗಳು
Info Mind 4915
Watch Video
ಒಬ್ಬ ಮನುಷ್ಯನಿಗೆ ತುಂಬಾ ಮುಖ್ಯ ನಿದ್ದೆ. ಇಗೀನ ಸಮಾಜದಲ್ಲಿ ಮನುಷ್ಯ ಒತ್ತಡಕ್ಕೆ ಈಡಾಗುತ್ತಿದ್ದಾನೆ. ಹೀಗಾಗಿ ಅವನಿಗೆ ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಾವು ಇಂದು ನಿದ್ದೆ ಮಾಡದಿದ್ದರೆ ಆಗುವ ಪರಿಣಾಮದ ಬಗ್ಗೆ ಹೇಳುತ್ತಿದ್ದೇವೆ.
2010ರ ರಿಪೋರ್ಟ್ ಪ್ರಕಾರ ಒಬ್ಬ ಮನುಷ್ಯ 266 ಗಂಟೆ ಎಚ್ಚರವಿರಬಹುದು. ಅದು 11 ದಿನಕ್ಕೆ ಸಮವಾಗಿದೆ. ಈ ನಿದ್ದೆಯ ಪರೀಕ್ಷೆ 1964ರಲ್ಲಿ ಕ್ಯಾಲಿಫೋರ್ನಿಯಾದ, ಶಾಲೆಯ ಹುಡುಗ ರಂಡಿ ಗಾರ್ಡನರ್ ಮೇಲೆ ನಡೆಸಲಾಯಿತು. ಆತ 264 ಗಂಟೆ ಎಚ್ಚರವಿದ.
ಒಬ್ಬ ವ್ಯಕ್ತಿ ರಾತ್ರಿ ಒತ್ತಡದಲ್ಲಿದ್ದು ನಿದ್ದೆ ಬರಲಿಲ್ಲವೆಂದರೆ ಅಥವಾ ಸುಮ್ಮನೆ ತುಂಬಾ ದಿನ ರಾತ್ರಿ ಎಚ್ಚರವಿದ್ದರೆ, ಅವನು ಸತ್ತುಹೋಗಬಹುದು. ನಿದ್ದೆ ಕಡಿಮೆ ಮಾಡುವುದರಿಂದ ಕೊರ್ಟಿಸೋಲ್(cortisol) ಎಂಬ ಹಾರ್ಮೋನ್ ಹೆಚ್ಚುತ್ತದೆ. ಈ ಕೊರ್ಟಿಸೋಲ್ ಎಂಬ ಹಾರ್ಮೋನ್ ಸುಸ್ತು ನೀಡುವ ಹಾರ್ಮೋನ್ ಆಗಿದೆ.
ಇದನ್ನು ಓದಿ: ಸಮಯ ಸಾಲುತ್ತಿಲ್ಲವೆಂದರೆ 8*3 ಮಾರ್ಗ ಬಳಸಿಒಬ್ಬ ವ್ಯಕ್ತಿ 48 ಗಂಟೆ ಎಚ್ಚರವಿದ್ದರೆ ಅವನ ಸ್ರೆಸ್ ಲೆವೆಲ್(strees level) ಹೆಚ್ಚುತ್ತದೆ. ಸ್ಟಡೀಸ್ ಪ್ರಕಾರ ಒಬ್ಬ ವ್ಯಕ್ತಿ 48 ಗಂಟೆ ಎಚ್ಚರವಿದ್ದರೆ ಅವನ ವೈಟ್ ಬ್ಲೆಡ್ ಸೆಲ್ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೇ, ಮೂತ್ರದಲ್ಲಿ ನೈಟ್ರೋಜನ್ ಲೇವೆಲ್ ಹೆಚ್ಚಿ, ದೇಹ ತುಂಬಾ ಸ್ಟ್ರೆಸಿನಲ್ಲಿ ಇದೆ ಎಂದು ತಿಳಿಸುತ್ತದೆ.
ಒಂದು ವಾರ ಒಬ್ಬ ವ್ಯಕ್ತಿ ನಿದ್ದೆ ಮಾಡಿಲ್ಲವೆಂದರೆ ಅವನ ನಿರೋಧಕ ವ್ಯವಸ್ಥೆಯ ದುರ್ಬಲಗೊಳ್ಳುತ್ತದೆ. ತೂಕ ಹೆಚ್ಚುತ್ತದೆ. ಇಷ್ಟೇ ಅಲ್ಲದೆ, ಕ್ಯಾನ್ಸರ್, ಡಯಾಬಿಟಿಸ್ ಬರುವ ಸಾಧ್ಯತೆ ಹೆಚ್ಚಾಗುತ್ತದೆ.
ಇದನ್ನು ಓದಿ: ಯಶಸ್ಸು ಕಾಣಲು ಚಾಣಕ್ಯರ ನಾಲ್ಕು ನೀತಿಗಳುಒಬ್ಬ ವ್ಯಕ್ತಿ ಕೇವಲ ಮೂರು ಗಂಟೆ ನಿದ್ದೆ ಮಾಡಿದರೆ ಅವನಿಗೆ ತುಂಬಾ ಕಿರಿಕಿರಿಯಾಗುತ್ತದೆ. ಗಾಡಿ ಓಡಿಸುವಾಗ ಆಕ್ಸಿಡೆಂಟ್ ಆಗುವ ಸಂಭಾವ ಹೆಚ್ಚಿರುತ್ತದೆ, ಮೆಮೊರಿ ಲಾಸ್ ಆಗುವ ಸಾಧ್ಯತೇ ಹೆಚ್ಚಿರುತ್ತದೆ.
ಒಬ್ಬ ವ್ಯಕ್ತಿ ದಿನ ಏಳರಿಂದ ಎಂಟು ಗಂಟೆ ಮಲಗಬೇಕು. ಹಾಗಂತ ಒಬ್ಬ ವ್ಯಕ್ತಿ ದಿನ ಏಳು ಗಂಟೆಗಿಂತ ಕಡಿಮೆ ಮಲಗಿದರೆ ಅವನು ಸಾಯುವುದಿಲ್ಲ. ಆದರೆ, ಆ ವ್ಯಕ್ತಿಗೆ ಹೃದಯ ಸಂಬಂಧಿತ ಕಾಯಿಲೆ ಬರುವ ಸಾಧ್ಯತೆ ಹೆಚ್ಚಾಗುತ್ತದೆ.
ಸ್ನೇಹಿತರೇ, ಈ ಲೇಖನದ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್‌ನಲ್ಲಿ ತಿಳಿಸಿ ಮತ್ತು ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ.
Explore all our Posts by categories.
See all comments...