Website designed by @coders.knowledge.

Website designed by @coders.knowledge.

What Makes us Successful? | ಯಾವುದು ನಮ್ಮನ್ನು ಯಶಸ್ವಿಯನ್ನಾಗಿ ಮಾಡುತ್ತದೆ?

 0

 Add

Please login to add to playlist

Watch Video

ಈ ಕೆಳಗಿನ ಫೋಟೋ ಯಾವುದೋ ಸಾಮಾನ್ಯ ಫೋಟೋವಲ್ಲ. ಇದು ಅನೇಕ ಭಾರತೀಯರು ಕನಸು ಕಾಣುವ ಫೋಟೋವಾಗಿದೆ. ಇದರಲ್ಲಿ ಹೆಮ್ಮೆಯ ಪೋಷಕರು ಅವರ ಎರಡು ಹೆಣ್ಣು ಮಕ್ಕಳು ಮತ್ತು ಎರಡು ಗಂಡು ಮಕ್ಕಳ ಜೊತೆ ಇದ್ದಾರೆ ಮತ್ತು ಈ ನಾಲ್ವರು ಯುಪಿಎಸ್‌ಸಿಯನ್ನು(upsc) ತೆರವು ಮಾಡಿದ್ದಾರೆ. ಇವರೆಲ್ಲರೂ ಒಂದು ಐಎಎಸ್ ಇಲ್ಲ ಐಪಿಎಸ್ ಆಗಿದ್ದಾರೆ. ನಾವು ಇವರ ಯಶಸ್ಸಿನ ಗುಟ್ಟಿನ ಬಗ್ಗೆ ತಿಳಿಯಲು ಬಯಸುತ್ತೇವೆ. ಆದರೆ ಇದೇ ರೀತಿಯಲ್ಲಿ ನಡೆದ ಇನ್ನೊಂದು ಕುಟುಂಬವಿದೆ.

divya mittal ips family in kannada
divya mittal

ಈ ಮೂವರು ಅಣ್ಣ-ತಂಗಿಯರು ಮೊದಲಿಗೆ ಐಐಟಿಗೆ ಹೋದರು, ನಂತರ ಐಐಎಂ ಮತ್ತು ಇದರಲ್ಲಿ ದಿವ್ಯ ಮಿತ್ತಲ್(divya mittal) ಐಎಎಸ್ ಆದರೂ ದಿವ್ಯ ಮಿತ್ತಲ್ ಅವರ ಎರಡು ಮಕ್ಕಳಿದ್ದರೂ, ಹೀಗಾಗಿ ಅವರೇ ಅವರ ಕುಟುಂಬದಲ್ಲಿ ಮೂವರು ಯಶಸ್ವಿಯಾಗಲು ಏನು ಕಾರಣವೆಂದು ಹುಡುಕಲು ಪ್ರಾರಂಭಿಸಿದರು. ಅವರು ಇದನ್ನು ವಿವರಿಸಲು 13 ಟ್ವೀಟ್ಗಳನ್ನು ಮಾಡಿದರು. ಅದರಲ್ಲಿ ಅವರು "ಪೋಷಕರು ಅವರ ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು?" ಎಂದು ತಿಳಿಸಿದ್ದಾರೆ. ಅದರಿಂದ ಅವರ ಮಕ್ಕಳು ಸಾಧಿಸಬಹುದು.

ಈ 13 ಟ್ವೀಟ್ಗಳು ತುಂಬಾ ಪ್ರಸಿದ್ಧವಾಯಿತು. ದಿವ್ಯ ಅವರು ಈ ರೀತಿ ಹೇಳಿದರು, "ಮಕ್ಕಳಿಗೆ ಅವರು ಏನು ಬೇಕಾದರೂ ಸಾಧಿಸಬಹುದು, ಅವರು ಅದನ್ನು ನಂಬುವಷ್ಟು ಭಾರಿ ಈ ವಾಕ್ಯವನ್ನು ಅವರಿಗೆ ತಿಳಿಸಿ. ಇದೇ ಅವರ ನಿರ್ದಿಷ್ಟ ಸ್ಥಾನವಾಗುತ್ತದೆ(destiny). ಅನೇಕರು ಈ ಟ್ವೀಟ್ ನೋಡಿ ಅವರ ಮಕ್ಕಳಿಗೆ "ನೀನು ಉತ್ತಮ, ಪ್ರತಿಭಾವಂತ, ಎಲ್ಲವನ್ನು ತಿಳಿದಿದ್ದೀಯಾ" ಎಂದು ಹೇಳಲು ಪ್ರಾರಂಭಿಸಿದರು. ಆದರೆ ಮೈಂಡ್ಸೆಟ್ ಪುಸ್ತಕದ ಲೇಖಕರಾದ ಕರೋಲ್ ಡ್ವೆಕ್(coral dweck) "ನಾವು ಮಕ್ಕಳಿಗೆ ಆ ರೀತಿ ಹೇಳಬಾರದು, ಏಕೆಂದರೆ ಅವರಿಗೆ ಸಾಧಿಸಲು ಸಾಧ್ಯವಾಗುವುದಿಲ್ಲ" ಎಂದು ಹೇಳಿದ್ದಾರೆ. ಅವರು ಇದನ್ನು ಸುಮ್ಮನೆ ಹೇಳಿಲ್ಲ. ಅವರು ಸ್ವತಹ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಓದಿ, ಟೀಚರ್ ಆಗಿ ಕೆಲಸ ಮಾಡಿದ್ದಾರೆ ಮತ್ತು ಇದನ್ನು ಎಷ್ಟೋ ವರ್ಷಗಳ ಅಧ್ಯಯನದ ನಂತರ ತಿಳಿಸಿದ್ದಾರೆ. ಹಾಗಿದ್ದರೆ ನಮ್ಮನ್ನು

ಇದನ್ನು ಓದಿ: ಯಶಸ್ವಿಯಾಗಲು ಸ್ವಯಂ ಶಿಸ್ತಿನ 4 ಅಭ್ಯಾಸಗಳು

1. ಯಾವುದು ಯಶಸ್ವಿಯಾನಾಗಿ ಮಾಡುತ್ತದೆ.

what really defines a success in kannada
success definition

ಇದನ್ನು ಅರ್ಥ ಮಾಡಿಕೊಳ್ಳಲು ನಾವು ಒಂದು ಉದಾಹರಣೆ ತೆಗೆದುಕೊಳ್ಳೋಣ. ನೀವು ನಿಮಗೆ ಮುಖ್ಯ ಮತ್ತು ಇಷ್ಟಪಡುವ ಕ್ಲಾಸ್ ಕೇಳಲು ಹೋಗುತ್ತೀರಾ ಎಂದುಕೊಳ್ಳಿ. ಕ್ಲಾಸ್ ಟೀಚರ್ ನಿಮ್ಮ ಹತ್ತಿರ ಬಂದು ಮಧ್ಯಾವಧಿ ಪರೀಕ್ಷೆಯ(mid term exam) ಅಂಕದ ಬಗ್ಗೆ ತಿಳಿಸುತ್ತಾರೆ. ಅದರಲ್ಲಿ ನಿಮಗೆ c+ ದೊರೆತಿದೆ. ನಿಮಗೆ ತುಂಬಾ ದುಃಖವಾಗುತ್ತದೆ. ನೀವು ಕಾಲೇಜಿನಿಂದ ಹೊರ ಬರುತ್ತೀರಾ ಮತ್ತು ನಿಮ್ಮ ಬೈಕ್ ಪಾರ್ಕಿಂಗ್ ಜೋನ್ನಲ್ಲಿ ಇಲ್ಲದಿರುವುದನ್ನು ನೋಡುತ್ತೀರಾ. ಇದರಿಂದ ನಿಮ್ಮ ಬೈಕ್ ಅನ್ನು ಪೊಲೀಸ್ ತೆಗೆದುಕೊಂಡು ಹೋದರು ಮತ್ತು ನೀವು ಚಾಲೆನ್(challen) ಕಟ್ಟಬೇಕಾಗಿದೆ. ನೀವು ಇಂದು ನಿಮಗೆ ಆಗಿರುವ ಪರಿಸ್ಥಿತಿಯ ಬಗ್ಗೆ ತಿಳಿಸಲು ನಿಮ್ಮ ಆತ್ಮೀಯ ಸ್ನೇಹಿತನಿಗೆ ಕರೆ ಮಾಡುತ್ತೀರಾ ಮತ್ತು ಅವನು "ನಾನು ಇಂದು ನಿರತನಾಗಿದ್ದೇನೆ. ನಿನ್ನ ಹತ್ತಿರ ನಂತರ ಮಾತನಾಡುವೆನು" ಎಂದು ಹೇಳುತ್ತಾನೆ.

ಲೇಖಕರು ಈ ರೀತಿಯ ಪ್ರೆಶ್ನೆಯನ್ನು ಅನೇಕ ವಿದ್ಯಾರ್ಥಿಗಳಿಗೆ ಕೇಳಿದರು. ಅದರಲ್ಲಿ ಅನೇಕ ವಿದ್ಯಾರ್ಥಿಗಳು ಅವರಿಗೆ ಆ ರೀತಿ ಆದರೆ "ಅವರನ್ನು ವೈಫಲ್ಯರಾದವರು" ಎಂದು ಭಾವಿಸಿಕೊಳ್ಳುತ್ತಾರೆ. ಅವರು "ಅವರ ಬದುಕೆ ನಾಶವಾಯಿತು" ಎಂದು ಭಾವಿಸುತ್ತಾರೆ. "ದೇವರು ಕರುಣೆ ತೋರಿಸುತ್ತಿಲ್ಲವೆಂದು" ಹೇಳುತ್ತಾರೆ. ಇಲ್ಲ ಅವರ ಜೀವನದಲ್ಲಿ ಒಂದು ದೊಡ್ಡ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸುತ್ತಾರೆ ಮತ್ತು ಈ ರೀತಿಯ ಯೋಚನೆ ಇರುವ ಎಲ್ಲರೂ ಸ್ಥಿರವಾದ ಮನಸ್ಥಿತಿಯನ್ನು(fixed mindset) ಹೊಂದಿರುತ್ತಾರೆ.

ನಿಮಗೆ ನಿಮ್ಮ ಇಷ್ಟವಾದ ವಿಷಯದಲ್ಲಿ c+ ಸಿಕ್ಕಿತ್ತು, ಇದರ ಅರ್ಥ ನೀವು ಫೇಲ್ ಆಗಿದ್ದೀರವೆಂದಲ್ಲ ಮತ್ತು ಇದು ಮಧ್ಯಾವಧಿ ಪರೀಕ್ಷೆ ಆಗಿತ್ತು, ಹೊರತು ಕೊನೆಯ ಪರೀಕ್ಷೆಯಲ್ಲ. ನಿಮ್ಮ ಬೈಕ್ಗೆ ಚಾಲೆನ್ ಕಟ್ಟಬೇಕು ಹೊರತು, ಯಾರೋ ಕದ್ದುಕೊಂಡು ಹೋಗಿಲ್ಲ. ನಿಮ್ಮ ಗೆಳೆಯ ಆ ದಿನ ನಿಜವಾಗಿಯೂ ನಿರತವಿರಬಹುದು. ಈ ರೀತಿಯ ಮನಸ್ಥಿತಿಯನ್ನು ಅನ್ನು ಸ್ಥಿರವಾದ ಮನಸ್ಥಿತಿ ಎನ್ನಲಾಗುತ್ತದೆ. ಇಂತಹವರಿಗೆ ಅವರ ಪೋಷಕರು ಚಿಕ್ಕ ವಯಸ್ಸಿನಿಂದಲೂ "ನೀನು ಅತ್ಯುತ್ತಮ, ಏನು ಬೇಕಾದರೂ ಸಾಧಿಸಬಹುದು" ಎಂದಿರುತ್ತಾರೆ. ಇದನ್ನು ಸಾಬೀತುಪಡಿಸಲು ಲೇಖಕರು ಒಂದು ಅಧ್ಯಯನ ಮಾಡಿದರು.

ಅವರು ವಿದ್ಯಾರ್ಥಿಗಳನ್ನು ಕರೆದು ಒಗಟನ್ನು(puzzle) ಪರಿಹರಿಸಲು ತಿಳಿಸಲಾಯಿತು. ಪ್ರತಿಯೊಂದು ಹಂತದಲ್ಲೂ ಒಗಟಿನ ಕಠಿಣತೆಯನ್ನು ಹೆಚ್ಚಿಸಲಾಗುತ್ತಿತ್ತು. ಅನೇಕ ಮಕ್ಕಳು ಈ ಕಠಿಣತೆಯನ್ನು ನೋಡಿ "ಮಜಾ ಈಗ ಬರುತ್ತದೆ" ಎಂದು ಹೇಳಲು ಪ್ರಾರಂಭಿಸಿದರು ಮತ್ತು ಉಳಿದವರು ಎದ್ದು "ನೀವು ನಮಗೆ ಏನಾದರೂ ಹೊಸದನ್ನು ಕಳಿಸುತ್ತೀರಾ ಎಂದುಕೊಂಡಿದ್ದೆವು" ಎಂದು ಹೇಳಿ ಒಗಟಿನಿಂದ ನಿರ್ಗಮನ ಮಾಡಿದರು. ಆಶ್ಚರ್ಯದ ಸಂಗತಿ ಏನೆಂದರೆ ಈ ರೀತಿ ನಿರ್ಗಮನ ಮಾಡಿದವರಲ್ಲಿ ಕ್ಲಾಸ್ನ ಟಾಪರ್ ಕೂಡ ಇದ್ದರು. ಅಂದರೆ ಯಶಸ್ಸನ್ನು ವ್ಯಾಖ್ಯಾನಿಸಲು ಇನ್ನೊಂದು ಕಾರಣವಿದೆ. ಅದುವೇ ಬೆಳವಣಿಗೆ ಮನಸ್ಸು(growth mindset).

ಬೆಳವಣಿಗೆ ಮನಸ್ಸು ಎಂದರೆ ನಾವು ಯಾವುದರಲ್ಲಿ ಚೆನ್ನಾಗಿಲ್ಲವೆಂದು ತಿಳಿದಿರುತ್ತೇವೆ ಮತ್ತು ನಾವು ಕಷ್ಟಪಟ್ಟರೆ ಅದರಲ್ಲೂ ಚೆನ್ನಾಗಾಗಬಹುದು. ಅದು ಬಿಟ್ಟು ನಾವು ಮೊದಲಿನಿಂದಲೂ ಪ್ರತಿಭಾವಂತರು ಎಂದು ಯೋಚಿಸುವುದಿಲ್ಲ. ಭಗವಂತ ಚಿಕ್ಕ ವಯಸ್ಸಿನಿಂದಲೂ ಎಲ್ಲರನ್ನು ಬುದ್ಧಿವಂತ ಮಾಡಿದ್ದಾನೆ ಎಂದು ಯೋಚಿಸುವುದಿಲ್ಲ. ಯಾರೆಲ್ಲ ಈ ರೀತಿ ಯೋಚಿಸುತ್ತಾರೊ ಅವರು ಸ್ಥಿರವಾದ ಮನಸ್ಥಿತಿ ಇರುವವರಾಗಿದ್ದಾರೆ. ನಮ್ಮ ಮತ್ತು ಇತರರ ಬೆಳವಣಿಗೆ ಮನಸ್ಸನ್ನು ಅಭಿವೃದ್ಧಿ ಮಾಡಲು ಬಯಸಿದರೆ ನಾವು ಅವರು ಪ್ರತಿಭಾವಂತರು ಇಲ್ಲವೆಂದು ತಿಳಿಸಬೇಕು. ನೀವು "you are not smart enough yet" ಎಂದು ಹೇಳಬೇಕು. ಅವರು ಇದರಲ್ಲಿ ಇಂದು ಸ್ಮಾರ್ಟ್ ಇಲ್ಲದೆ ಇರಬಹುದು, ಆದರೆ ಕಷ್ಟಪಟ್ಟರೆ ಯಾವುದೇ ವಿಷಯದಲ್ಲೂ ಅತ್ಯುತ್ತಮ ಆಗಬಹುದು.

ಇದನ್ನು ಓದಿ: ನಿಮಗೆ ಗಮನ ಹರಿಸಲು ಏಕೆ ಸಾಧ್ಯವಾಗುತ್ತಿಲ್ಲ

2. Choose your goal carefully.

why are goals important for success in kannada
hiroo onoda

ಜಪಾನಿನ ಎರಡನ್ನೇ ನುಟಿಲೆಂಟ್ ಹಿರೂ ಒನೊಡಾ(hiroo onoda) ಮತ್ತು ಅವರ ಜನಗಳಿಗೆ 1944ರಂದು ಫಿಲಿಪೈನ್ಸ್ನಲ್ಲಿರುವ ಲುಬಾಂಗ್ ದ್ವೀಪಕ್ಕೆ(lubang island) ಹೋಗಿ, ಅಲ್ಲಿ ಅಮೆರಿಕದ ಸೈನಿಕರು ಬಂದಾಗ ಅವರ ಜೊತೆ ಹೋರಾಡಿ ನಿಧಾನಗತಿ ಮಾಡಿ, ಆದರೆ ಎಂದಿಗೂ ಶರಣಾಗತಿ(surrender) ಆಗಬೇಡಿ ಎಂದು ತಿಳಿಸಲಾಯಿತು. ಅಮೆರಿಕದ ಸೈನ್ಯವು ಅಲ್ಲಿಗೆ ಬಂದಾಗ ಒನೊಡಾ ಅವರ ಎಲ್ಲ ಜನಗಳನ್ನು ಕೊಂದರು. ಕೇವಲ ಮೂರು ಜನ ಮಾತ್ರ ಉಳಿದಿದ್ದರು, ಅವರು ದ್ವೀಪದ ಒಳಗೆ ಹೋಗಿ ಮರೆಮಾಚಿಕೊಂಡು "ಗೊರಿಲ್ಲ ವಾರ್" ಫೇಸ್ ಪ್ರಾರಂಭಿಸಿದರು. 1945ರಂದು ಅಮೆರಿಕ ಜಪಾನ್ ಮೇಲೆ ಎರಡು ಅಣುಬಾಂಬ್(atomic bomb) ಹಾಕಿತು. ಆದರೆ ಅನೇಕ ಜಪಾನ್ ಸೈನಿಕರು ದ್ವೀಪಗಳಲ್ಲಿ ಹೋರಾಟ ನಡೆಸುತ್ತಿದ್ದರು ಮತ್ತು ಅವರಿಗೆಲ್ಲ ವಿಶ್ವ ಯುದ್ಧ 2 ಮುಗಿದಿರುವ ಬಗ್ಗೆ ತಿಳಿದಿರಲಿಲ್ಲ. ಈಗಾಗಿ ಅಮೆರಿಕ ಮತ್ತು ಜಪಾನ್ ಸರ್ಕಾರ ವಿಮಾನದ ಮೂಲಕ ಈ ದ್ವೀಪಗಳಲ್ಲಿ ಪತ್ರಗಳನ್ನು ಹಾಕಲು ಪ್ರಾರಂಭಿಸಿದರು. ಈ ಪತ್ರಗಳಲ್ಲಿ "ಯುದ್ಧ ಮುಗಿದಿದೆ, ನೀವು ನಿಮ್ಮ ಮನೆಗಳಿಗೆ ಹೋಗಬಹುದು" ಎಂದು ತಿಳಿಸಲಾಗಿತು.

ಆದರೆ ಒನೊಡಾ ಅವರಿಗೆ ಇದು ಅಮೆರಿಕದವರ ಆಟವೆನಿಸಿತು ಮತ್ತು ಮುಂದಿನ ಐದು ವರ್ಷ ಈ ರೀತಿಯೇ ನಡೆಯಿತು. ವಿಮಾನ ಬರುವುದು ಪತ್ರಗಳನ್ನು ಹಾಕಿ ಇವರಿಗೆ ಅಲ್ಲಿಂದ ಹೋಗಲು ವಿನಂತಿ(request) ಮಾಡಲಾಗುತ್ತಿತ್ತು. ಆದರೆ ಪ್ರತಿ ಬಾರಿ ಒನೊಡಾ ಅವರಿಗೆ ಇದು ಅಮೆರಿಕದವರ ಆಟವೆಂದೆನಿಸುತ್ತಿತು. ಐದು ವರ್ಷದ ನಂತರ ಈ ಪತ್ರಗಳನ್ನು ಹಾಕುವುದನ್ನು ನಿಲ್ಲಿಸಲಾಯಿತು. ಆದರೆ ಒನೊಡಾ ಮತ್ತು ಅವರ ಸಹಪಾಠಿಗಳು ಸೋಲಲಿಲ್ಲ. ಆ ದ್ವೀಪಗಳಲ್ಲಿ ರೈತರ ಮೇಲೆ ಗುಂಡಿನ ದಾಳಿ ಮಾಡುತ್ತಿದ್ದರು. ಅವರ ಬೆಳೆಗಳನ್ನು ಸುಡುತ್ತಿದ್ದರು ಮತ್ತು ಕಾಡಿನಲ್ಲಿ ಎಳನೀರನ್ನು ಕುಡಿಯುತ್ತಿದ್ದರು. ಒನೊಡಾ ಅವರ ಸಹಪಾಠಿಗಳನ್ನು ಅಲ್ಲಿನ ಸ್ಥಳೀಯ ಪೊಲೀಸ್ ಕೊಂದರು. ಏಕೆಂದರೆ ಅವನು ರೈತರ ಬೆಳೆಯನ್ನು ನಾಶ ಮಾಡುತ್ತಿದ್ದನು. ಒನೊಡಾ ಪೂರ್ತಿ 27 ವರ್ಷಗಳ ಕಾಲ ಅವನ ಕಮಾಂಡರ್ ಅಲ್ಲಿಗೆ ಬರುವವರೆಗೂ ಸೋಲಲಿಲ್ಲ. ಹೀಗಾಗಿ ಅವನ ಎಲ್ಲ ಜೀವನವು ಈ ಸುಳ್ಳಿನ ಯುದ್ಧದಲ್ಲೇ ಹೋಯಿತು.

ಇದರ ಪಾಠ ಏನೆಂದರೆ, ನಾವು ಕೂಡ ಸುಳ್ಳಿನ ಯುದ್ಧದಲ್ಲಿ ನಮ್ಮ ಜೀವನವನ್ನು ಕಳೆಯುತ್ತೇವೆ. ಹೀಗಾಗಿ ನಾವು ಬದುಕಿನಲ್ಲಿ ಒಂದು ಗುರಿಯನ್ನು ಸಾಧಿಸಲು ಬಯಸಿದ್ದು, ಅದನ್ನು ಸಾಧಿಸಲು ನಮ್ಮ ಬದುಕಿನ ಪ್ರಮುಖ ಭಾಗವನ್ನು ತ್ಯಾಗ ಮಾಡಬೇಕೆಂದರೆ ನಾವು ಆರಿಸಿಕೊಳ್ಳುವ ಗುರಿಯು ನಿಜವಾಗಿರಬೇಕು. ಇಲ್ಲದಿದ್ದರೆ ನಾವು ಕೂಡ ಒನೊಡಾ ರೀತಿ 27 ವರ್ಷಗಳ ಕಾಲ ನಮಗೆ ಬೇಕಾಗಿರಾದ ಯುದ್ಧವನ್ನು ಮಾಡಬಹುದು.

ಇದನ್ನು ಓದಿ: ರಾಬರ್ಟ್‌ ಕಿಯೋಸಾಕಿ ಅವರ ಎಲ್ಲಾ ಪುಸ್ತಕದ Summary

3. Do something principle.

how do i motivate myself to take action in kannada
do something

"the subtle art of not giving a fuck"ನ ಲೇಖಕರಾದ ಮಾರ್ಕ್ ಮಾರ್ಸನ್(mark marson) ಅವರು ಶಾಲೆಯಲ್ಲಿದ್ದಾಗ ಅವರ ಗಣಿತ ಶಿಕ್ಷಕರು ಅವರಿಗೆ ಒಂದು ಸೀಕ್ರೆಟ್ ತಿಳಿಸಿದರಂತೆ, ಆ ಸೀಕ್ರೆಟ್ ಏನೆಂದರೆ, ನೀವು ಯಾವುದೇ ಪ್ರೆಶ್ನೆಯನ್ನು ನೋಡುತ್ತಿದ್ದು, ಅದರ ಸಮೀಕರಣ(equation) ನಿಮಗೆ ಗೊತ್ತಿಲ್ಲದಿದ್ದರೆ, ಅದನ್ನು ಕೇವಲ ನೋಡುವ ಬದಲು ಒಮ್ಮೆ ನಿಮ್ಮ ಪುಸ್ತಕದಲ್ಲಿ ಬರೆಯಿರಿ. ಅನೇಕರು ಇದನ್ನು ಅಗ್ಗದ(cheap) ಐಡಿಯಾ ಎನ್ನಬಹುದು. ಆದರೆ ಮಾರ್ಕ್ ಇದು ಕೆಲಸ ಮಾಡುತ್ತದೆ ಎಂದು ತಿಳಿಸಿದ್ದಾರೆ. ಇದೇನೆಂದರೆ ಸಮಸ್ಯೆಯನ್ನು ಬರೆಯುವುದರಿಂದಲೇ ಉತ್ತರ ಸಿಗುತ್ತದೆ ಅಥವಾ ಪ್ರೆಶ್ನೆ ಅಷ್ಟು ಕಠಿಣವೆನಿಸುವುದಿಲ್ಲ.

ಮಾರ್ಕ್ ಅವರು ಇದನ್ನು ಅವರ ಜೀವನದಲ್ಲೂ ಬಳಸಿದ್ದಾರೆ. ಅವರು ನಾಚಿಕೆ ಸ್ವಭಾವವನ್ನು ಹೊಂದಿದ್ದರು. ಹೀಗಾಗಿ ಯಾವುದೇ ಪಾರ್ಟಿಗೆ ಹೋದಾಗ ಮಾತನಾಡುವುದಿಲ್ಲದಿದ್ದರೆ ಅವರು, "ನಾನು ಒಂದು ಹೆಜ್ಜೆ ಆ ವ್ಯಕ್ತಿ ಹತ್ತಿರ ಹೋಗುವೆ" ಎಂದು ಯೋಚಿಸುತ್ತಿದ್ದರು. ಆ ವ್ಯಕ್ತಿ ಹತ್ತಿರ ಬಂದ ತಕ್ಷಣ ಅವರು, "ಈ ವ್ಯಕ್ತಿಗೆ ಈ ವಾಕ್ಯವನ್ನು ಕೇಳುವೆ" ಎಂದು ಯೋಚಿಸುತ್ತಿದ್ದರು. ಅವರು "ಹಾಯ್, ನಿಮ್ಮ ಹೆಸರೇನು?" ಎಂದು ಕೇಳಿದರು. ಈ ರೀತಿ ಅವರಿಗೆ ಅನೇಕ ಗೆಳೆಯರು ಸಿಕ್ಕರು. ಈ ಉದಾಹರಣೆಯ ಅರ್ಥವೇನೆಂದರೆ "do something" ಎಂಬುದಾಗಿದೆ. ಏನು ಆಗುತ್ತಿಲ್ಲವೆಂದು ಏನಾದರೂ ಮಾಡಿ, ಆದರೆ ಕ್ರಮವನ್ನು(action) ತೆಗೆದುಕೊಳ್ಳಿ. ತುಂಬಾ ಜನ ಮೊದಲು ಮೋಟಿವೇಟ್ ಆಗುವೆ ನಂತರ ಯಾವುದೇ ರೀತಿಯಾ ಕ್ರಮವನ್ನು ತೆಗೆದುಕೊಳ್ಳುವೆ ಎಂದು ಯೋಚಿಸುತ್ತಾರೆ. ಆದರೆ ವಾಸ್ತವವಾಗಿ ಇದು ಉಲ್ಟಾ ಇದೆ. ಮೋಟಿವೇಶನ್ ಇಂದ ಆಕ್ಷನ್ ಇರುವುದಿಲ್ಲ, ಆಕ್ಷನ್ ತೆಗೆದುಕೊಳ್ಳುವುದರಿಂದ ಮೋಟಿವೇಶನ್ ಇರುತ್ತದೆ. ಹೀಗಾಗಿ "do something".

ಇದನ್ನು ಓದಿ: "Good Vibes Good Life" ಪುಸ್ತಕದ ವಿವರಣೆ

4. You are not special.

are we special in kannada
not special

ನಾವು ಇವುಗಳಲ್ಲಿ ಎರಡನ್ನು ಯೋಚಿಸುತ್ತಿರುತ್ತೇವೆ. ಒಂದು "ನಾನು ಉತ್ತಮ(best) ಉಳಿದವರೆಲ್ಲ, ಮೂರ್ಖರು(idiots). ಎಲ್ಲರೂ ನನ್ನನ್ನು ಒಳ್ಳೆಯ ರೀತಿಯಲ್ಲಿ ಟ್ರೀಟ್ ಮಾಡಬೇಕು". ಇಲ್ಲ "ನಾನು ದೊಡ್ಡ ಮೂರ್ಖ, ತುಂಬಾ ದುಃಖದಲ್ಲಿ ಇದ್ದೇನೆ. ಇತರರು ಖುಷಿಯಲ್ಲಿ ಇದ್ದಾರೆ. ಹೀಗಾಗಿ ಇತರರು ನನ್ನನ್ನು ಖುಷಿಯಲ್ಲಿ ಟ್ರೀಟ್ ಮಾಡಬೇಕು" ಎಂದು ಯೋಚಿಸುತ್ತೇವೆ. ಎರಡು ಯೋಚನೆಗಳು ಕೇಳಲು ವಿಭಿನ್ನವೆನಿಸುತ್ತದೆ. ಆದರೆ ಇದರಲ್ಲಿ ಒಬ್ಬ ವ್ಯಕ್ತಿ ಉತ್ತಮ ಎಂದು ಯೋಚಿಸುತ್ತಿದ್ದಾರೆ, ಮತ್ತೊಬ್ಬ ಕೆಟ್ಟವನ್ನು ಎಂದು ಯೋಚಿಸುತ್ತಿದ್ದಾನೆ. ಆದರೆ ಇಬ್ಬರ ನಡವಳಿಕೆ ಸರಿಸಾಮವಾಗಿದೆ. ಇಬ್ಬರು ಸ್ವಯಂ ಹೀರಲ್ಪಟಿದ್ದಾರೆ(self absorbed). ಅಂದರೆ ಅವರು ಅವರ ಬಗ್ಗೆಯೇ ಯೋಚಿಸುತ್ತಿದ್ದಾರೆ. ಅವರಿಬ್ಬರೂ ಅವರ ಸ್ಥಿತಿಯಂತೆ ಪೂರ್ತಿ ಜಗತ್ತು ಬದಲಾಗಬೇಕು ಎಂದು ಬಯಸುತ್ತಾರೆ. ಇದರ ಅರ್ಥ ಏನೆಂದರೆ ನಾವು ವಿಶೇಷವಲ್ಲ(special). ನಾವು ವಿಶೇಷ ಎಂದು ದೊಡ್ಡ ದೊಡ್ಡ ಮೋಟಿವೇಷನಲ್ ವೀಡಿಯೋದಲ್ಲಿ ಕೇಳಿರಬಹುದು.

ನೀವು ಕೇವಲ ಎಂಟು ನಿಮಿಷ ರಾಕೆಟ್ನಲ್ಲಿ ಕೂತು ಭೂಮಿಯ ಗುರುತ್ವಕರ್ಷಣೆಯಿಂದ ಹೊರ ಹೋಗಿ, ದೂರದಿಂದ ಭೂಮಿಯನ್ನು ನೋಡುತ್ತೀರಾ ಎಂದು ಭಾವಿಸಿ. ಈ ಪಾಯಿಂಟ್ನಲ್ಲಿ ನಾವು ತೆಗೆದುಕೊಂಡ ಕ್ರಮಗಳು ಮುಖ್ಯ ಆಗುವುದೇ ಇಲ್ಲ. ಈ ಭೂಮಿಯಿಂದ ಹೊರಗೆ ಯಾವುದು ಮುಖ್ಯವಾಗುವುದಿಲ್ಲ. ಯಾರು ಉತ್ತಮ ಕ್ರಿಕೆಟರ್, ಉತ್ತಮ ನಟ, ಯಾರು ಶ್ರೀಮಂತ ವ್ಯಕ್ತಿ, ಯಾರು ಐಐಟಿಯ ಟಾಪರ್ ಆಗಿರಲಿ, ಎಷ್ಟು ದೊಡ್ಡ ಅನಂತ(infinite) ಬ್ರಹ್ಮಾಂಡದಲ್ಲಿ ನಾವು ತೆಗೆದುಕೊಳ್ಳುವ ದೊಡ್ಡ ದೊಡ್ಡ ಕ್ರಮವು ಕೂಡ ಚಿಕ್ಕದೇ ಆಗಿದೆ. ಆಗಿದ್ದರೆ ನಾವು ವಿಶೇಷ ಅಲ್ಲವೆಂದರೆ ಮತ್ತೇನು ಎಂದು ಭಯಪಡಬಹುದು. ನೀವು ಈ ಯೋಚನೆಯಿಂದ ಭಯಪಡುವ ಅವಶ್ಯಕತೆ ಇಲ್ಲ. ಈ ಜಗತ್ತಿನಲ್ಲಿ ನಾನು ಸೇರಿ ಯಾರು ಕೂಡ ವಿಶೇಷವಲ್ಲ. ಈಗಾಗಿ ನಾವು ವಿಶೇಷವಾಗಿ ಕಾಣಲು ತೆಗೆದುಕೊಳ್ಳುತ್ತಿರುವ ಒತ್ತಡವನ್ನು(stress) ರಿಲೀಸ್ ಮಾಡಬಹುದು.

ಇದನ್ನು ಓದಿ: "Atomic Habits" ಪುಸ್ತಕದ ವಿವರಣೆ

5. Understand dunning- Kruger effect.

what is the meaning of kruger effect in kannada
kruger effect

ಈ ಪರಿಣಾಮದ ಪ್ರಕಾರ ಈ ಮೂರ್ಖನ್ನು "ನನಗೆ ಎಲ್ಲ ತಿಳಿದಿದೆ" ಎಂದು ಯೋಚಿಸುತ್ತಾರೆ. ಆದರೆ ಬುದ್ದಿವಂತ ಜನರು "ಅವರನ್ನು ಮೂರ್ಖರೆಂದುಕೊಳ್ಳುತ್ತಾರೆ. ಅವರಿಗೆ ಅಧಿಕ ವಿಷಯಗಳ ಬಗ್ಗೆ ತಿಳಿದಿಲ್ಲವೆಂದೆನಿಸುತ್ತದೆ. ಶಾಲೆಯಲ್ಲಿ ಓದುವುದರಲ್ಲಿ ಚೆನ್ನಾಗಿರೋ ವಿದ್ಯಾರ್ಥಿಗಳು, ಅವರಿಗೆ ಚೆನ್ನಾಗಿ ಓದಲು ಬರುವುದಿಲ್ಲವೆಂದುಕೊಳ್ಳುತ್ತಾರೆ. ಸ್ವಲ್ಪ ಅಧಿಕ ತೂಕ ಇರುವವರು, "ನಾನು ಅಷ್ಟು ದಪ್ಪ ಇಲ್ಲವೆಂದು" ಯೋಚಿಸುತ್ತಾರೆ. ಆದರೆ ಪ್ರಶ್ನೆ ಏನೆಂದರೆ, ಈ ರೀತಿ ಏಕೆ ಆಗುತ್ತದೆ ಈ ಪರಿಕಲ್ಪನೆಯನ್ನು(concept) ಅರ್ಥ ಮಾಡಿಕೊಳ್ಳಲು ನಾವು ಈ ಚತುರ್ಭುಜವನ್ನು(quadrant) ಅರ್ಥ ಮಾಡಿಕೊಳ್ಳಬೇಕು. ಇದರಲ್ಲಿ ನಾಲ್ಕು ಭಾಗವಿದೆ, ಅದರಲ್ಲಿ ಮೊದಲನೆಯದ್ದು known knows, ಅಂದರೆ ನಮಗೆ ತಿಳಿದಿರುವ ಮತ್ತು ಮಾಡಬಹುದಾದ ವಿಷಯವಾಗಿದೆ. ಎರಡನೆಯದ್ದು known unknowns, ಅಂದರೆ ನಮಗೆ ತಿಳಿದಿರುವ ಮತ್ತು ಮಾಡಲಾಗದ ವಿಷಯಗಳಾಗಿವೆ. ಮೂರನೇಯದ್ದು unknown knowns, ಅಂದರೆ ಒಂದು ವಿಷಯವನ್ನು ನಾವು ಎಷ್ಟು ಅಭ್ಯಾಸ ಮಾಡಿದ್ದೇವೆಂದರೆ, ನಮಗೆ ಅದು ಈಗ ಮರೆತೆ ಹೋಗಿದೆ. ಉದಾಹರಣೆಗೆ ನೀವು ಬೂಟ್ಗಳನ್ನು ಹೇಗೆ ಧರಿಸುತ್ತಿದೆ ಎಂಬುದನ್ನು ಮರೆತಿರಬಹುದು. ಇವು ನಮಗೆ ಒಂದು ಸ್ವಯಂಚಾಲಿತ ಪ್ರಕ್ರಿಯೆಯಾಗಿದೆ. ಇನ್ನು ನಾಲ್ಕನೇದಾಗಿ unknown unknowns, ಅಂದರೆ ನಮಗೆ ಗೊತ್ತಿಲ್ಲ ಎಂದು ಗೊತ್ತಿರದ ವಿಷಯಗಳು. ಉದಾಹರಣೆಗೆ ಎರಡನೇ ತರಗತಿಯ ವಿದ್ಯಾರ್ಥಿಗೆ ಇಂಜಿನಿಯರಿಂಗ್ನಲ್ಲಿ ಫೋರ್ ಇಯರ್ಸ್ ಸೀರೀಸ್ ಇದೆ ಎಂದು ತಿಳಿದಿರುವುದಿಲ್ಲ.

ಯಾರು ಮೂರ್ಖರಾಗಿರುತ್ತಾರೋ, ಅವರ ಜ್ಞಾನವೂ ಕೇವಲ ಎರಡು ಕ್ವಾಡ್ರೆಂಟಲ್ಲಿ ಇರುತ್ತದೆ. ಅದೆಂದರೆ ಮೊದಲ ಮತ್ತು ನಾಲ್ಕನೇ ಕ್ವಾದ್ರಂಟ್ ಅಂದರೆ, ಅವರಿಗೆ ಗೊತ್ತಿರುವ ವಿಷಯದ ಬಗ್ಗೆ ಗೊತ್ತಿದೆ ಮತ್ತು ಗೊತ್ತಿಲ್ಲ ಎಂದು ಗೊತ್ತಿರುವ ವಿಷಯಗಳಿವೆ. ಇದನ್ನು ಸರಳವಾಗಿ ಅರ್ಥ ಮಾಡಿಸುತ್ತೇವೆ. ಇದಕ್ಕೆ ನಾವು ಕ್ರಿಕೆಟ್ ಉದಾಹರಣೆ ತೆಗೆದುಕೊಳ್ಳೋಣ. ನಿಮಗೆ ಹೊಸದಾಗಿ ಕ್ರಿಕೆಟ್ ಫೀಲ್ಡ್ ನೋಡಿದಾಗ ಆತ ಬಾಲ್ ಎಸೆಯುತ್ತಾನೆ ಈತ ಬ್ಯಾಟ್ನಿಂದ ಹೊಡೆಯುತ್ತಾನೆ ಎಂದು ನೋಡುತ್ತೀರಾ. ಇದನ್ನು ನಾವು known known ಕ್ವಾದ್ರಂಟ್ನಲ್ಲಿ ಹಾಕೋಣ. ನಿಮಗೆ ಈಗ ಕ್ರಿಕೆಟ್ ಮೇಲಿನ ವಿವರದ ಬಗ್ಗೆ ತಿಳಿದಿಲ್ಲ. ಇದನ್ನು ನಾವು unknown unknown ನಲ್ಲಿ ಹಾಕಬಹುದು.

ಈಗ ನಿಮಗೆ defensive shot, drive, flick, cut, pull and hook out, sweep out, reverse sweep ಏನೆಂದು ತಿಳಿದಿಲ್ಲ. ಈಗ ನೀವು ಕ್ರಿಕೆಟ್ ಕಲಿಯಲು ಪ್ರಾರಂಭಿಸಿದ್ದೀರಾ ಎಂದು ಕಲ್ಪನೆ ಮಾಡಿಕೊಳ್ಳಿ. ನೀವು ಕ್ರಿಕೆಟ್ ಅನ್ನು ಕಲಿತಂತೆ known known ಕ್ವಾದ್ರಂಟ್ ಜೊತೆಗೆ known unknown ಕ್ವಾದ್ರಂಟ್ ನಲ್ಲೂ ಬರುತ್ತೀರಾ ಎಂದು ನಿಮಗೆ ತಿಳಿಯುತ್ತದೆ.

ನಿಮ್ಮ ಒಂದು ವರ್ಷದ ಕ್ರಿಕೆಟ್ ಅಭ್ಯಾಸದ ನಂತರ ನೀವು ಕಲಿತದ್ದು ಮೂರನೇ ಕ್ವಾದ್ರಂಟ್ನಲ್ಲೂ ಶಿಫ್ಟ್ ಆಗುತ್ತದೆ. ಅಂದರೆ unknown known, ಅಂದರೆ square drive, complex shot ನಿಮಗೆ ಹವ್ಯಾಸವಾಗುತ್ತದೆ. ಇವುಗಳ ಬಗ್ಗೆ ನೀವು ಕಾನ್ಶಿಯಸ್ಸಾಗಿ ಜಾಗೃತವಾಗಿ(conscious) ಯೋಚಿಸುವುದಿಲ್ಲ. ಈ ಸಮಯದಲ್ಲಿ ನೀವು unknown unknown ಕ್ವಾದ್ರಂಟ್ಗೂ ಬರುತ್ತೀರಾ. ಏಕೆಂದರೆ ಕ್ರಿಕೆಟ್ನಲ್ಲಿ ನಾವಿನ್ನು ಕಲಿಯಬೇಕಾದ ಅನೇಕ ವಿಷಯಗಳು ಇದೆ ಎಂದು ನಿಮಗೆ ತಿಳಿಯುತ್ತದೆ. ನೀವು ಕ್ರಿಕೆಟಿನ ಇತರೆ ತಜ್ಞರ(expert) ಜೊತೆ ಮಾತನಾಡಲು ಪ್ರಾರಂಭಿಸುತ್ತೀರಾ. ಅವರಿಗೆ ಇದರಲ್ಲಿ ಇನ್ನು ಏನೇನು ಇರುತ್ತದೆ ಎಂದು ಕೇಳುತ್ತೀರಾ ಮತ್ತು ಯಾವ ರೀತಿ complex shot ಮಾಡಬಹುದೆಂದು ಕೇಳುತ್ತೀರಾ.

ಎರಡು ಸನ್ನಿವೇಶದಲ್ಲಿ(scenario) ನಾವು ಕ್ವಾದ್ರಂಟ್ ಇಟ್ಟರೆ, ಒಬ್ಬ ಮೂರ್ಖ ವ್ಯಕ್ತಿ ಆತನನ್ನು ಏಕೆ ಬುದ್ಧಿವಂತನೆಂದು ಕೊಳ್ಳುತ್ತಾನೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಏಕೆಂದರೆ ಆತನ ಜ್ಞಾನವು ಕ್ವಾದ್ರಂಟ್ 1 ಮತ್ತು ಕ್ವಾದ್ರಂಟ್ 4ಗೆ ಮಾತ್ರ ಸೀಮಿತವಾಗಿದೆ. ಅದೇ ಬುದ್ದಿವಂತ ವ್ಯಕ್ತಿಯ ಜ್ಞಾನವು, ನಾಲ್ಕು ಕ್ವಾಡ್ರೆಂಟ್ನಲ್ಲಿ ಇರುತ್ತದೆ ಮತ್ತು ಇನ್ನೂ ಕಲಿಯಲು ಅಧಿಕವಿದೆ ಎಂದು ಅವನಿಗೆ ತಿಳಿಯುತ್ತದೆ.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿಂದ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana
Display Ads

Robert Kiyosaki all Books Summary

ರಾಬರ್ಟ್‌ ಕಿಯೋಸಾಕಿ ಅವರು ಬರೆದಿರುವ Rich dad poor dad ಮತ್ತು ಇತರ ಪುಸ್ತಕಗಳ ಬಗ್ಗೆ ಮಾಹಿತಿಯನ್ನು ತಿಳಿಯಲು ಈಗಲೇ ಲೇಖನವನ್ನು ಓದಿ.

More by this author

Display Ads

Robert Kiyosaki all Books Summary

ರಾಬರ್ಟ್‌ ಕಿಯೋಸಾಕಿ ಅವರು ಬರೆದಿರುವ Rich dad poor dad ಮತ್ತು ಇತರ ಪುಸ್ತಕಗಳ ಬಗ್ಗೆ ಮಾಹಿತಿಯನ್ನು ತಿಳಿಯಲು ಈಗಲೇ ಲೇಖನವನ್ನು ಓದಿ.

Similar category

Explore all our Posts by categories.

No Comments