Watch Video
ಇಂದಿನ ಜಗತ್ತಿನಲ್ಲಿ ಗಮನಹರಿಸುವುದು ಒಂದು ರೀತಿಯಲ್ಲಿ ಸೂಪರ್ ಪವರ್ ಆಗಿದೆ. ಒಂದು ಕಾರ್ಯದ(task) ಮೇಲೆ ಗಂಟೆಗಟ್ಟಲೆ ಗಮನಹರಿಸುವ ವ್ಯಕ್ತಿಗಳನ್ನು ನೀವು ಅಪರೂಪವಾಗಿ ನೋಡಿರಬಹುದು. ಒಬ್ಬ ವ್ಯಕ್ತಿ ಪೂರ್ತಿಯಾಗಿ ಒಂದು ಕೆಲಸದ ಮೇಲೆ ಗಮನ ಹರಿಸಿದರೆ, ಇತರರಿಗಿಂತ ಅವನು ಅನೇಕ ಕೆಲಸಗಳನ್ನು ಬೇಗನೆ ಮುಗಿಸಬಹುದು. ಉತ್ತಮವಾದ ಏಕಾಗ್ರತೆಯಿಂದ ನೀವು ಅನೇಕ ಸ್ಥಳಗಳಲ್ಲಿ ಲಾಭ ಪಡೆಯಬಹುದು. ಅದು ಶಾಲೆ, ಓದು, ಕೆಲಸ ಇಲ್ಲ ಯಾವುದೇ ಹವ್ಯಾಸವಾಗಿರಬಹುದು.
ನೀವು ಗಮನ ಹರಿಸಲು ಸಾಧ್ಯವಾದರೆ, ನೀವು ಅಂದುಕೊಂಡ ಫಲಿತಾಂಶವನ್ನು ಪಡೆಯುತ್ತೀರಾ. ಇಂದು ನಾವು ನಿಮಗೆ ಗಮನಹರಿಸಲು ಏಕೆ ಸಾಧ್ಯವಾಗುತ್ತಿಲ್ಲ ಮತ್ತು ಅದನ್ನು ಸರಿಪಡಿಸುವುದು ಹೇಗೆ ಎಂಬುದನ್ನು ತಿಳಿಸಲಿದ್ದೇವೆ. ಈ ವೀಡಿಯೋವನ್ನು ನೋಡುತ್ತಾ ನಿಮಗೆ ವಿಳಂಬವೆನ್ನಿಸುವ ಭಾವನೆ ಬರಬಹುದು. ಆದರೆ ಇದು ನಿಮಗೆ ಮೌಲ್ಯವನ್ನು ನೀಡುತ್ತದೆ. ಹೀಗಾಗಿ ಒಂದು ಪುಸ್ತಕದಲ್ಲಿ ಇಂದು ನಾವು ತಿಳಿಸುವ ವಿಷಯಗಳನ್ನು ಬರೆದುಕೊಳ್ಳಿ. ಇದು ನಿಮ್ಮ ವಿಳಂಬವೆನ್ನಿಸುವ ಭಾವನೆಯನ್ನು ಕಡಿಮೆಗೊಳಿಸಬಹುದು.
ಇದನ್ನು ಓದಿ: ರಾಬರ್ಟ್ ಕಿಯೋಸಾಕಿ ಅವರ ಎಲ್ಲಾ ಪುಸ್ತಕದ Summaryನಾವು ಎರಡು ರೀತಿಯಲ್ಲಿ ಗಮನಹರಿಸಬಹುದು ಅವೆಂದರೆ ಚದುರಿದ ಗಮನ(scattered focus) ಮತ್ತು ನಿರ್ದೇಶಿಸಿದ ಗಮನ(directed focus). ಇದರಲ್ಲಿ ಸ್ಕ್ಯಾಟರ್ಡ್ ಫೋಕಸ್ ಎಂದರೆ ಹೆಚ್ಚು ವಿತರಿಸಿರುವ(highly distribute) ಗಮನವಾಗಿದೆ. ಇದರಲ್ಲಿ ನೀವು ಬಹುಕಾರ್ಯ(multitask) ಮಾಡುತ್ತಿರುತ್ತೀರಿ. ಅಂದರೆ ಅನೇಕ ಕೆಲಸಗಳನ್ನು ಒಂದೇ ಸಮಯದಲ್ಲಿ ಮಾಡುತ್ತಿರುತ್ತೀರಾ. ಉದಾಹರಣೆಗೆ ನೀವು ಮನೆಯಲ್ಲಿ ನೆಲವನ್ನು ಒರೆಸುತ್ತಾ, ಪೋನಲ್ಲಿ ಮಾತಾಡುತ್ತಾ, ಅಡುಗೆ ಮಾಡುತ್ತಿರಾ ಅಥವಾ ಒಂದೇ ಕೆಲಸವನ್ನು ಮಾಡುತ್ತಾ ಇತರ ವಿಷಯಗಳ ಬಗ್ಗೆ ಯೋಚಿಸುತ್ತಿದ್ದರು ಅದು ಸ್ಕ್ಯಾಟರ್ಡ್ ಫೋಕಸ್ ಆಗಿದೆ. ಇದನ್ನೇ ಅನೇಕರು ಮಾಡುತ್ತಿರುವುದಾಗಿದೆ.
ಅವರು ಅವರ ಗಮನವನ್ನು ಅನೇಕ ವಿವಿಧ ವಿಷಯಗಳ ಮೇಲೆ ಹರಿಸುತ್ತಾರೆ. ಈ ರೀತಿಯ ಗಮನ ಹರಿಸುವುದರಲ್ಲಿರುವ ಸಮಸ್ಯೆ ಏನೆಂದರೆ, ನಿಮ್ಮ ಮೆದುಳು ಬಹು ವಸ್ತುಗಳ ಮೇಲೆ ಸ್ವಿಚ್ ಮಾಡಲು ಕೆಟ್ಟದಾಗಿರುತ್ತದೆ. ನೀವು ಒಂದು ಕಾರ್ಯದಿಂದ ಇನ್ನೊಂದು ಕಾರ್ಯಕ್ಕೆ ಸ್ವಿಚ್ ಮಾಡಿದಾಗ ಅದು ತತ್ಕ್ಷಣದ(instantaneous) ಆಗಿರುವುದಿಲ್ಲ. ಬದಲಿಗೆ ನಿಮ್ಮ ಮೆದುಳು ನೀವು ಕೆಲಸ ಮಾಡುತ್ತಿರುವ ವಿಷಯವನ್ನು ಲೋಡ್ ಮಾಡಬೇಕು. ನೀವು ನಿರಂತರವಾಗಿ ನಿಮ್ಮ ಗಮನವನ್ನು ಒಂದು ಕಾರ್ಯದಿಂದ ಇನ್ನೊಂದು ಕಾರ್ಯಕ್ಕೆ ಬದಲಿಸುತ್ತಿದ್ದರೆ, ನೀವು ನಿಮ್ಮ ಮೆದುಳಿಗೆ ಒತ್ತಡ ನೀಡಿದಂತಾಗಿದೆ. ಇದರಿಂದ ನೀವು ಕೊನೆಯಲ್ಲಿ ಅಧಿಕ ಮಾನಸಿಕ ಶಕ್ತಿಯನ್ನು ಕಳೆದು ಕೊಳ್ಳುತ್ತೀರಾ ಮತ್ತು ಅಧಿಕ ಕೆಲಸ ಮಾಡಲು ಸಾಧ್ಯವೂ ಆಗುವುದಿಲ್ಲ.
ಇನ್ನು ಡೈರೆಕ್ಟೆಡ್ ಫೋಕಸ್ನಲ್ಲಿ ನೀವು ಒಂದೇ ಕ್ರಮದ ಮೇಲೆ ಗಮನ ಹರಿಸುತ್ತೀರಾ ಮತ್ತು ಇತರ ಎಲ್ಲ ವಿಷಯಗಳನ್ನು ನಿರ್ಲಕ್ಷಿಸುತ್ತೀರಾ. ನಿಮ್ಮ ಗುರಿಯನ್ನು ತಲುಪಲು ಈ ರೀತಿಯಲ್ಲಿ ಗಮನ ಹರಿಸುವುದು ಮುಖ್ಯವಾಗಿದ್ದು, ಬದುಕಿನಲ್ಲಿ ಸಾಧಿಸಿದ ಅನೇಕ ವ್ಯಕ್ತಿಗಳು ಈ ರೀತಿಯಲ್ಲಿ ಗಮನ ಹರಿಸುತ್ತಾರೆ. ಅವರು ಒಂದೇ ವಿಷಯದ ಮೇಲೆ ಲೇಸರ್ ಕಿರಣದ(laser beam) ರೀತಿ ಗಮನ ಹರಿಸುತ್ತಾರೆ. ಅವರು ಇದನ್ನು ಗರಿಷ್ಠ ಮಟ್ಟದಲ್ಲಿ ಪಾಲಿಸುತ್ತಾರೆ. ಆಗಿದ್ದರೆ ಸ್ಕ್ಯಾಟರ್ಡ್ ಫೋಕಸನ್ನು ತಪ್ಪಿಸುವುದು ಹೇಗೆ? ಇದು ತುಂಬಾ ಸರಳವಾಗಿದೆ.
ಇದನ್ನು ಓದಿ: "Atomic Habits" ಪುಸ್ತಕದ ವಿವರಣೆನೀವು ನಿಮಗೆ ವ್ಯಾಕುಲತೆ(distraction) ನೀಡುವ ವಸ್ತುಗಳನ್ನು ತೆರೆಯಬೇಕು. ಉದಾಹರಣೆಗೆ ನಿಮಗೆ ಒಂದು ಸಮಯದಲ್ಲಿ 5 ಘಟಕಗಳಷ್ಟು(units) ಫೋಕಸ್ ಇದೆ ಎಂದು ಯೋಚಿಸಿ. ಅಂದರೆ ನೀವು ಒಂದೇ ಸಮಯದಲ್ಲಿ 5 ಯೂನಿಟ್‌ಗಳನ್ನು ನಿಮಗೆ ಬೇಕಾದ ರೀತಿಯಲ್ಲಿ ಬಳಸಬಹುದು. ಒಂದು ವೇಳೆ ನೀವು ಓದುತ್ತಿದ್ದರೆ ಈ 5 ಯೂನಿಟ್ ನಿಮ್ಮ ಈ ಪುಸ್ತಕದ ಮೇಲೆ ಗಮನಹರಿಸುತ್ತದೆ. ಈಗ ನಿಮ್ಮ ಅಮ್ಮ ನಿಮ್ಮ ಕೋಣೆಗೆ ಬಂದು "ಊಟ 46 ನಿಮಿಷದಲ್ಲಿ ಆಗಲಿದೆ" ಎಂದು ಹೇಳುತ್ತಾರೆ ಅಂದುಕೊಳ್ಳಿ. ನೀವು ಈ ಸಮಯದಲ್ಲಿ ಸೂಪರ್ ಕೇಂದ್ರೀಕೃತವಾಗಿದ್ದರು(concentrated) ಆಗಿದ್ದರು, ನಿಮ್ಮ ಪ್ರಭಾವ ಕೇವಲ ಹತ್ತು ಸೆಕೆಂಡ್‌ಗಳಿಗೆ ಮಾತ್ರ ಇರುತ್ತದೆ. ಈಗ ನಿಮ್ಮ ಗಮನ ಭಾಗವಾಗಿರುತ್ತದೆ. ನಿಮ್ಮ ತಲೆಯು ಊಟದ ಬಗ್ಗೆ ಯೋಚಿಸುತ್ತದೆ ಮತ್ತು ನಿಮ್ಮ ಗಮನ ಮುಂಚಿನಷ್ಟು ಚೆನ್ನಾಗಿರುವುದಿಲ್ಲ. ಗಮನದ ಒಂದು ಯೂನಿಟ್ ಈ ಊಟದ ಮೇಲೆ ಗಮನ ಹರಿಸಿತು ಮತ್ತು ಓದಿನ ಅಧಿವೇಶನವನ್ನು(session) ದೂರ ಮಾಡಿತು. ಈಗ ನೀವು ನಿಮ್ಮ ಓದಿನ ಮೇಲೆ ಪೂರ್ತಿಯಾಗಿ ಗಮನಹರಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಮತ್ತು ಇದರಲ್ಲಿ ನಿಮ್ಮ ಮಾನಸಿಕ ಶಕ್ತಿಯನ್ನು ಕಳೆದುಕೊಳ್ಳುತ್ತೀರಾ.
ನಿಮ್ಮ ಫೋನ್‍ನಂಥಹ ಚಿಕ್ಕ ವಸ್ತುವೂ ನಿಮ್ಮ ಗಮನ ಹರಿಸಲು ತಪ್ಪಿಸಲು ಇರುವ ಯಂತ್ರವಾಗಿದೆ. ಇದು ರಿಂಗ್ ಆಗುತ್ತದೆ, ವೈಬ್ರೇಟ್ ಆಗುತ್ತದೆ ಮತ್ತು ನಿಮಗೆ ಹೊಸ ಅಧಿಸೂಚನೆ(notification) ಬಂದಾಗ ಶಬ್ದ ಮಾಡುತ್ತದೆ. ನಿಮ್ಮ ಏಕಾಗ್ರತೆಯನ್ನು ಮುರಿಯಲು ಆ ಶಬ್ದವೇ ಸಾಕು. ಆದರೆ ನಿಮ್ಮ ಪೋನ್ ನಿಶಬ್ದವಿದ್ದರು, ನೀವು ಕೆಲವೊಮ್ಮೆ ಬೇಸರವಾದಾಗ ಅದನ್ನು ನೋಡುತ್ತಿರುತ್ತೀರಾ. ಇದು ನಿಮ್ಮ ಗಮನವನ್ನು ಭಾಗ ಮಾಡುತ್ತದೆ. ಹಾಗಂತ ಇದರ ಅರ್ಥ ನೀವು ನಿಮ್ಮ ಫೋನನ್ನು ಬಿಸಾಡಬೇಕೆಂದಲ್ಲ. ನಿಮಗೆ ಏಕಾಗ್ರತೆಯಿಂದ ಕೆಲಸ ಮಾಡಬೇಕೆಂದಿದಾಗ, ನಿಮ್ಮ ಫೋನನ್ನು ಎಲ್ಲಾದರೂ ದೂರ ಇಡಿ. ಕೇವಲ ಫೋನ್ ಅಷ್ಟೇ ನಿಮ್ಮ ಗಮನವನ್ನು ಭಾಗ ಮಾಡುವುದಿಲ್ಲ, ಯಾವುದಾದರೂ ವಸ್ತುವು ನಿಮ್ಮ ಗಮನವನ್ನು ಭಾಗ ಮಾಡಬಹುದು. ಆದರೆ ಪೋನ್ ಇದಕ್ಕೆ ದೊಡ್ಡ ಕೊಡುಗೆದಾರನಾಗಿದೆ. ಹೀಗಾಗಿ ನೀವು ಈ ರೀತಿಯ ವ್ಯಾಕುಲತೆ ಬಗ್ಗೆ ಅರಿತಿರಬೇಕು.
ಇದನ್ನು ಓದಿ: ಎತ್ತರವನ್ನು ಹೆಚ್ಚಿಸುವ 8 ಅದ್ಭುತ ಆಹಾರಗಳುನಿಮ್ಮ ಗಮನವನ್ನು ಪರಿಣಾಮ(effect) ಮಾಡುತ್ತಿರುವ ಇನ್ನೊಂದು ವಿಷಯವೆಂದರೆ ಅದು ಶರೀರಶಾಸ್ತ್ರ(physiology). ಇದನ್ನು ಯಾರು ಅಷ್ಟು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆದರೆ ನೀವು ನಿಮ್ಮ ಮೆದುಳು ಸರಿಯಾಗಿ ಕಾರ್ಯ ನಿರ್ವಹಿಸಬೇಕೆಂದು ಯೋಚಿಸಿದರೆ ನಿಮ್ಮ ದೇಹದ ಬಗ್ಗೆ ಗಮನ ಹರಿಸಿ. ನೀವು ದಿನದಲ್ಲಿ 7 ಗಂಟೆಗಿಂತ ಕಡಿಮೆ ನಿದ್ದೆ ಮಾಡುತ್ತಿದ್ದರೆ ನಿಮ್ಮ ಏಕಾಗ್ರತೆ ಬಳಲುತ್ತದೆ. ಒಂದು ಅಧ್ಯಯನದ ಪ್ರಕಾರ 7 ರಿಂದ 9 ಗಂಟೆ ನಿದ್ದೆ ಮಾಡುವುದು, ನಿಮ್ಮ ಸಾಮರ್ಥ್ಯವನ್ಮು ಸುಧಾರಿಸುತ್ತದೆ. ನೀವು ಪ್ರತಿದಿನ ವ್ಯಾಯಾಮವನ್ನು ಮಾಡಬೇಕು, ಮೆದುಳಿನಲ್ಲಿ ಡೋಪಮೈನ್ ನಿಮ್ಮ ಗಮನ ಹರಿಸುವ ಸಾಮಾರ್ಥ್ಯವನ್ನು ಸುಧಾರಿಸುತ್ತದೆ.
ವ್ಯಾಯಾಮ ಎಂದ ತಕ್ಷಣ ಹೊರಗೆ ಹೋಗಿ ಮ್ಯಾರಥಾನ್ ಓಡಬೇಕೆಂದಲ್ಲ. ಕೇವಲ ನಿಮ್ಮ ಸುತ್ತಮುತ್ತಲು ನಡೆದಾಡಿದರೆ ಸಾಕು. ಹೈಡ್ರೇಷನ್ ಕೂಡ ತುಂಬ ಮುಖ್ಯವಾಗಿದೆ. ನೀವು ಬೆಳಗ್ಗೆ ಎದ್ದ ತಕ್ಷಣ ನೇರವಾಗಿ ಯೋಚಿಸಲು ಸಾಧ್ಯವಾಗುವುದಿಲ್ಲ. ಇದಕ್ಕೆ ಒಂದು ಕಾರಣವೆಂದರೆ ನೀವು 8 ಗಂಟೆಯಿಂದ ಏನನ್ನು ಕುಡಿದಿರುವುದಿಲ್ಲ. ಹೀಗಾಗಿ ನೀವು ಡಿಹೈಡ್ರೇಟ್ ಆಗಿರುತ್ತೀರ. ನಿಮ್ಮ ಆಹಾರ ಪದ್ಧತಿ(diet) ಒಂದು ದೊಡ್ಡ ಪಾತ್ರವನ್ನು ನಿಭಾಯಿಸುತ್ತದೆ. ನೀವು ಅನಾರೋಗ್ಯಕರ ಆಹಾರಗಳನ್ನು ತಿನ್ನುತ್ತಿದ್ದರೆ, ನಿಮ್ಮ ಮೆದುಳಿಗೆ ಅಪಚಾರ ಮಾಡುತ್ತಿದ್ದೀರಾ. ಸಕ್ಕರೆ ಅಂಶ ಅಧಿಕವಾಗಿರುವ ಆಹಾರಗಳು ಏಕಾಗ್ರತೆಯ ಮಟ್ಟವನ್ನು ಕಡಿಮೆಗೊಳಿಸುತ್ತದೆ. ಹೀಗಾಗಿ ಈ ಅನಾರೋಗ್ಯಕರ ಆಹಾರಗಳಿಗೆ ಪರ್ಯಾಯವನ್ನು ಹುಡುಕಿ. ನೀವು ಚೆನ್ನಾಗಿ ಗಮನಹರಿಸಲು ಬಯಸಿದರೆ ನಿಮ್ಮ ದೇಹದ ಮೇಲೆ ಕಾಳಜಿ ವಹಿಸಿ. ಆಗಿದ್ದರೆ ಗಮನವನ್ನು ನಿರ್ಮಾಣ ಮಾಡಿಕೊಳ್ಳುವುದು ಹೇಗೆ?
ಇದನ್ನು ಓದಿ: ವೀರ್ಯಗಳ ಸಂಖ್ಯೆಯನ್ನು ಸ್ವಾಭಾವಿಕವಾಗಿ ಹೆಚ್ಚಿಸಿಕೊಳ್ಳುವುದು ಹೇಗೆ?ನೀವು ಕ್ರೀಡೆಗೆ(sports) ತಯಾರಗುವಂತೆ ನಿಮ್ಮ ಗಮನವನ್ನು ತಯಾರು ಮಾಡಬಹುದು. ನೀವು ಇದನ್ನು ಅಧಿಕ ಮಾಡಿದ್ದಷ್ಟು ಅಧಿಕ ಸುಧಾರಣೆಯನ್ನು ನೋಡುತ್ತೀರಾ. ಪ್ರಾರಂಭದಲ್ಲಿ ನೀವು ಕೇವಲ ಹತ್ತು ನಿಮಿಷ ಮಾತ್ರ ಗಮನ ಹರಿಸಲು ಸಾಧ್ಯವಾಗಬಹುದು. ಆದರೆ ನೀವು ಇದನ್ನು ಪ್ರತಿದಿನ ಮಾಡುತ್ತಿದ್ದರೆ, ನಿಮ್ಮ ಏಕಾಗ್ರತೆಯೂ ಹೆಚ್ಚುತ್ತದೆ ಮತ್ತು ನೀವು ಅಧಿಕ ಸಮಯದವರೆಗೆ ಏಕಾಗ್ರತೆಯಿಂದ ಕಾರ್ಯನಿರ್ವಹಿಸಬಹುದು. ಸದ್ಯಕ್ಕೆ ನೀವು ಗಂಟೆಗಟ್ಟಲೆ ಗಮನಹರಿಸಲು ಸಾಧ್ಯವಾಗುತ್ತಿಲ್ಲವೆಂದರೆ ಪರವಾಗಿಲ್ಲ. ನೀವು ನಿಮ್ಮ ಡೈರೆಕ್ಟೆಡ್ ಪೋಕಸ್ ಅನ್ನು ಸಮಯದೊಂದಿಗೆ ತಯಾರು ಮಾಡಬಹುದು. ನಿಮ್ಮ ಗಮನವನ್ನು ಸುಧಾರಿಸಲು ಇರುವ ಒಂದು ಅತ್ಯುತ್ತಮ ಮಾರ್ಗವೆಂದರೆ ನಿಮ್ಮ ದಿನದಲ್ಲಿ ಕೆಲವು ಸಮಯವನ್ನು ಇದಕ್ಕೆ ನೀಡುವುದಾಗಿದೆ. ಮೂಲಭೂತವಾಗಿ ನಿಮ್ಮ ಏಕಾಗ್ರತೆಯನ್ನು ನಿಯಮಿತ ಅಭ್ಯಾಸವಾಗಿ(regular habit) ಮಾಡಿಕೊಳ್ಳಬೇಕು.
ತುಂಬಾ ಜನ ಗಮನಹರಿಸಲು ಒಂದು ಸರಿಯಾದ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಆದರೆ ಅದು ತಪ್ಪು ದಾರಿಯಾಗಿದೆ. ಇದರ ಬದಲು ನೀವು ಕೂತು ಬರೆಯಲು ದಿನದಲ್ಲಿ ಒಂದು ಮೀಸಲಾದ(dedicated) ಸಮಯ ಇರಬೇಕು. ನೀವು ಆ ಸಮಯವನ್ನು ಸಂರಕ್ಷಿಸಬೇಕು. ಗಮನ ಹರಿಸಲು ಇರುವ ಒಂದು ಅತ್ಯುತ್ತಮ ಸಮಯವೆಂದರೆ, ಅದು ಬೆಳಗ್ಗೆ ಎದ್ದು ಒಂದು ಗಂಟೆಯ ನಂತರದ ಸಮಯವಾಗಿದೆ. ಆ ಸಮಯದಲ್ಲಿ ನೀವು ಪೂರ್ತಿಯಾಗಿ ಎಚ್ಚರವಿರುತ್ತೀರ ಮತ್ತು ನಿಮ್ಮ ಮೆದುಳು ಇತರ ವಸ್ತುಗಳಿಂದ ತುಂಬಿರುವುದಿಲ್ಲ. ಅದಲ್ಲದೆ ಈ ಸಮಯದಲ್ಲಿ ಸಾಮಾನ್ಯವಾಗಿ ನಿಮಗೆ ತೊಂದರೆ(disturb) ಮಾಡಲು ಯಾರು ಇರುವುದಿಲ್ಲ. ಹೀಗಾಗಿ ನಿಮ್ಮ ಫೋಕಸ್ ಯುನಿಟ್ ಪೂರ್ತಿಯಾಗಿ ಒಂದೇ ವಿಷಯದ ಮೇಲೆ ಏಕಾಗ್ರತೆ ವಹಿಸಬಹುದು. ಈ ಸಮಯವನ್ನು ಎಷ್ಟೋ ಕಲಾವಿದರು, ಬರಹಗಾರರು ಮತ್ತು ತತ್ವಜ್ಞಾನಿಗಳು ಬಳಸಿಕೊಳ್ಳುತ್ತಾರೆ. ಆದರೆ ಮಧ್ಯಾಹ್ನದ ಸಮಯ ಗಮನ ಹರಿಸಲು ಸೂಕ್ತವೇ?
ಇದನ್ನು ಓದಿ: ಮನಸ್ಸು ಮತ್ತು ಭಾವನೆಗಳನ್ನು ನಿಯಂತ್ರಣ ಮಾಡುವುದು ಹೇಗೆ?ಒಂದು ವೇಳೆ ನೀವು ನಿರತವಾದ(busy) ದಿನನಲ್ಲಿ ಇದ್ದರೆ, ನಿಮ್ಮ ಗಮನ ಅನೇಕ ದಿಕ್ಕುಗಳಲ್ಲಿ ಚದುರಿರುತ್ತದೆ. ಹೀಗಾಗಿ ಬೆಳಗಿನ ಹೊತ್ತಿನಲ್ಲಿ ಗಮನಹರಿಸುವುದು ಸುಲಭವಾಗಿದೆ. ನಿಮ್ಮ ಮೆದುಳು 8 ಗಂಟೆಗೂ ಅಧಿಕ ಸಮಯ ವಿಶ್ರಾಂತಿಯಲ್ಲಿರುತ್ತದೆ. ಹೀಗಾಗಿ ಬೆಳಗ್ಗೆ ಗಮನಹರಿಸಲು ಸೂಕ್ತವಾಗಿದೆ. ಒಂದು ವೇಳೆ ನೀವು ಮಧ್ಯಾಹ್ನದ ಸಮಯದಲ್ಲಿ ಗಮನಹರಿಸಲು ಬಯಸಿದರೆ, ನಿಮಗೆ ಹೆಚ್ಚು ಡಿಮ್ಯಾಂಡ್ ಮಾಡುವ ಕೆಲಸದ ಮೇಲೆ ಗಮನಹರಿಸಿ. ಈ ಸಮಯದಲ್ಲಿ ಓದಲು ಹೋದರೆ ಅದರ ಮೇಲೆ ಪೂರ್ತಿಯಾಗಿ ಗಮನಹರಿಸಲು ಸಾಧ್ಯವಾಗುವುದಿಲ್ಲ. ಹಾಗಂತ ಈ ಸಮಯದಲ್ಲಿ ಗಮನಹರಿಸಲು ಕಷ್ಟವೆಂದು ನಾವು ಹೇಳುವುದಿಲ್ಲ. ನೀವು ಕೇವಲ ಮೆದುಳನ್ನು ಉತ್ತೇಜಿಸಬೇಕು. ಅದನ್ನು ನೀವು ಸರಿಯಾದ ವಿರಾಮವನ್ನು ತೆಗೆದುಕೊಳ್ಳುವ ಮೂಲಕ ಮಾಡಬಹುದು.
ಇದನ್ನು ಓದಿ: ಯಶಸ್ವಿ ಜನರನ್ನು ಯಶಸ್ವಿಗೊಳಿಸುವ ಐದು ಸಾಮಾನ್ಯ ಲಕ್ಷಣಗಳುಒಂದೇ ವಿಷಯದ ಮೇಲೆ ಮಾನಸಿಕವಾಗಿ ಸುಸ್ತಾಗದೆ ಅಧಿಕ ಸಮಯ ಗಮನಹರಿಸುವುದು ಕಷ್ಟವಿರಬಹುದು. ಅದು ಸ್ಕ್ಯಾಟರ್ಡ್ ಅಥವಾ ಡೈರೆಕ್ಟೆಡ್ ಫೋಕಸ್ ಆಗಿದ್ದರು ಎರಡು ಮುಗಿಯುತ್ತವೆ. ಹೀಗಾಗಿ ನಿಮ್ಮ ಮೆದುಳಿಗೆ ವಿಶ್ರಾಂತಿ ನೀಡಲು ಇವು ಮಧ್ಯ ಒಂದು ವಿರಾಮ(break) ತೆಗೆದುಕೊಳ್ಳಬೇಕು. ಆದರೆ ತುಂಬಾ ಜನ ವಿರಾಮ ತೆಗೆದುಕೊಳ್ಳುವುದು ಎಂದರೆ ಫೋನ್ ತೆಗೆದು ಇನ್ಸ್ಟಾಗ್ರಾಮ್, ಯೂಟ್ಯೂಬ್ ನೋಡುವುದಲ್ಲ. ನೀವು ಮೆದುಳಿಗೆ ವಿಶ್ರಾಂತಿ ನೀಡುವ ಸಮಯದಲ್ಲೂ ತೊಡಗಿಸಿರುತ್ತೀರಾ(engage). ಇದರಿಂದ ನಿಮ್ಮ ಮಾನಸಿಕ ಶಕ್ತಿಯು ರೀಚಾರ್ಜ್ ಆಗುವ ಬದಲು ಕಡಿಮೆಯಾಗುತ್ತಾ ಹೋಗುತ್ತದೆ.
ಹೀಗಾಗಿ ನೀವು ಇವುಗಳ ಬದಲು ನಡೆದಾಡಲು ಹೋಗಬೇಕು, ಧ್ಯಾನ ಮಾಡಬೇಕು, ಇಲ್ಲ ಒಂದು ಚಿಕ್ಕನಿದ್ರೆ(nap) ತೆಗೆದುಕೊಳ್ಳಬೇಕು. ಈ ಚಟುವಟಿಕೆಗಳು ನಿಮ್ಮ ಮಾನಸಿಕ ಶಕ್ತಿಯನ್ನು ಅನ್ಪ್ಲಗ್ ಮತ್ತು ರೀಚಾರ್ಜ್ ಮಾಡುತ್ತದೆ. ಇವುಗಳನ್ನು ಮಾಡಲು ನಿಮಗೆ ಬೇಸರವೆನಿಸಬಹುದು. ನೀವು ಬೇಸರವಾದರೂ ಪರವಾಗಿಲ್ಲ ನಿಮ್ಮ ಮೆದುಳಿಗೆ ವಿಶ್ರಾಂತಿ ಈ ರೀತಿಯಲ್ಲೇ ನೀಡಬೇಕು. ನೀವು ಸ್ಕ್ಯಾಟರ್ಡ್ ಫೋಕಸ್ ನಿಂದ ಡೈರೆಕ್ಟೆಡ್ ಫೋಕಸ್ಗೆ ಬರಲು ಮಾನಸಿಕ ವಿರಾಮವನ್ನು(mental breaks) ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಇದು ನೀವು ತ್ವರಿತವಾಗಿ ಗಮನ ಹರಿಸಲು ಬಯಸಿದರೆ ತುಂಬಾ ಉಪಯುಕ್ತವಾಗಿದೆ.
ಇದನ್ನು ಕಲ್ಪಿಸಿಕೊಳ್ಳಲು ಇನ್ನೊಂದು ರೀತಿಯೆಂದರೆ ನೀವು ಗಂಟೆಗಟ್ಟಲೆ ನಿಲ್ಲದೆ ಓಡುತ್ತಿದ್ದೀರಿ ಎಂದುಕೊಳ್ಳಿ. ಇದಾದ ನಂತರ ನೀವು ಇನ್ನೂ ಒಂದು ಗಂಟೆ ಓಡುವ ಮೊದಲು 15 ನಿಮಿಷಗಳ ಬ್ರೇಕ್ ತೆಗೆದುಕೊಳ್ಳುತ್ತೀರಿ. ನೀವು ಈ ಬ್ರೇಕ್ಗಾಗಿ 1) ಕೂತುಕೊಂಡು ವಿಶ್ರಾಂತಿ ಪಡೆಯುತ್ತೀರಾ ಅಥವಾ 2) ಹಗ್ಗದ ಮೇಲೆ ಜಂಪ್ ಮಾಡುತ್ತೀರಾ. ನೀವು ಖಂಡಿತವಾಗಿಯೂ ಮೊದಲನೇ ಆಯ್ಕೆಯನ್ನು ತೆಗೆದುಕೊಳ್ಳುತ್ತೀರಾ. ಇದು ಏಕೆಂದರೆ ನೀವು ಇನ್ನಷ್ಟು ಶ್ರಮ ವಹಿಸಲು ಬಯಸುವುದಿಲ್ಲ. ಏಕೆಂದರೆ ನೀವು ಒಂದು ಗಂಟೆ ಓಡಬೇಕಾಗಿದೆ. ಇವು ಉದಾಹರಣೆಯಲ್ಲಿ ಓಡುವುದು ಗಮನ ಹರಿಸುವುದನ್ನು ಸೂಚಿಸುತ್ತದೆ. ನೀವು ಒಂದು ಗಂಟೆಗಳಷ್ಟು ಗಮನಹರಿಸಿದಾಗ ನೀವು ಸುಸ್ತಾಗುತ್ತೀರಿ. ಹೀಗಾಗಿ ವಿಶ್ರಾಂತಿ ಸಮಯದಲ್ಲಿ ನಿಮ್ಮ ಮೆದುಳಿನ ಚಟುವಟಿಕೆಗೆ ಪ್ರಚೋದನೆ ಮಾಡುವ ಕೆಲಸವನ್ನು ಮಾಡಬೇಡಿ.
ಇದನ್ನು ಓದಿ: ಓದಿದ್ದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಹೇಗೆ?ಗಮನ ಹರಿಸಲು ಮತ್ತು ಮಾನಸಿಕ ವಿರಾಮವನ್ನು ತೆಗೆದುಕೊಳ್ಳಲು ಇರುವ ಒಂದು ಪರಿಪೂರ್ಣ ತಂತ್ರವೆಂದರೆ ಪೊಮೊಡೊರೊ ತಂತ್ರವಾಗಿದೆ. ಪೊಮೊಡೊರೊ ಎಂದರೆ ಈ ರೀತಿ ಇದೆ, ನೀವು ಗಮನ ಹರಿಸಬೇಕಾದ ಕಾರ್ಯವನ್ನು ತೆಗೆದುಕೊಳ್ಳುತ್ತೀರಾ, ಇದಾದ ನಂತರ 25 ನಿಮಿಷಗಳ ಟೈಮರ್ ಅನ್ನು ಇಡುತ್ತೀರಾ. 25 ನಿಮಿಷಗಳು ನೀವು ನಿಮ್ಮ ಕೆಲಸದ ಮೇಲೆ ಪೂರ್ತಿಯಾಗಿ ಗಮನ ಹರಿಸುತ್ತೀರಾ. ಯಾವಾಗ ಟೈಮರ್ ರಿಂಗ್ ಆಗುತ್ತದೆಯೋ, ಆಗ ನೀವು 5 ನಿಮಿಷಗಳ ಬ್ರೇಕ್ ತೆಗೆದುಕೊಂಡು ಟೈಮರನ್ನು ಮತ್ತೆ ಪ್ರಾರಂಭಿಸುತ್ತೀರಾ. ನೀವು ಈ ರೀತಿಯಲ್ಲಿ 4, 25 ನಿಮಿಷಗಳ ಅಧಿವೇಶನವನ್ನು ಮುಗಿಸಿದರೆ, ನೀವು ಒಂದು ದೀರ್ಘಾವಧಿಯ ವಿರಾಮವನ್ನು ತೆಗೆದುಕೊಳ್ಳಬಹುದು. ಈ ದೀರ್ಘಾವಧಿಯ ವಿರಾಮವು 30 ನಿಮಿಷದ್ದಾಗಿರಬಹುದು.
ಇದು ಇದೇ ರೀತಿಯೇ ಇರುವ ಅವಶ್ಯಕತೆಯಿಲ್ಲ. 25 ನಿಮಿಷಗಳ ಕೆಲಸ, 5 ನಿಮಿಷಗಳ ವಿರಾಮ, ಕೇವಲ ಶಿಫಾರಸಾಗಿದೆ. ನೀವು ನಿಮಗೆ ಎಷ್ಟು ಹೊತ್ತು ಬೇಕು ನಿಮ್ಮ ಕೆಲಸದ ಸಂಕೀರ್ಣತೆಯ(complexity) ಮೇಲೆ ಇದನ್ನು ನಿರ್ಧರಿಸಬಹುದು. ನೀವು ಬೇಕಾದರೆ 45 ನಿಮಿಷ ಕೆಲಸ ಮಾಡಿ, 15 ನಿಮಿಷಗಳ ವಿರಾಮವನ್ನು ತೆಗೆದುಕೊಳ್ಳಬಹುದು. ನೀವು ಕೆಲವು ಪ್ರಯೋಗಗಳನ್ನು ಮಾಡಿ. ನಿಮಗೆ ಉಪಯುಕ್ತವಾಗುವ ಒಂದು ವಿಧಾನವನ್ನು ಆರಿಸಿಕೊಳ್ಳಿ.
ನೀವು ಇಲ್ಲಿಯವರೆಗೆ ಲೇಖನವನ್ನು ಓದಿದರೆ ಒಳ್ಳೆಯದು. ನಿಮ್ಮ ಗಮನ ಇತರರಿಗಿಂತ ತುಂಬಾ ಅತ್ಯುತ್ತಮವಾಗಿದೆ. ಏಕೆಂದರೆ ಇದು ದೊಡ್ಡ ಲೇಖನವಾಗಿದ್ದು ನಾವು ಬೇಗನೆ ಸಾರಾಂಶ ನೀಡುತ್ತೇವೆ.
ಇದನ್ನು ಓದಿ: ಒಂದು ವಾರ ನಿದ್ದೆ ಮಾಡಿಲ್ಲವೆಂದರೆ ನಿಮಗೆ ಏನಾಗುತ್ತದೆ?1. ನಮ್ಮಲ್ಲಿ 2 ತರಹದ ಫೋಕಸ್ ಇದೆ. ಅವೆಂದರೆ ಸ್ಕ್ಯಾಟರ್ಡ್ ಮತ್ತು ಡೈರೆಕ್ಟೆಡ್ ಫೋಕಸ್. ನೀವು ಸ್ಕ್ಯಾಟರ್ಡ್ ಪೋಕಸ್ನಿಂದ ದೂರವಿದ್ದು, ಡೈರೆಕ್ಟೆಡ್ ಫೋಕಸನ್ನು ಸಾಧಿಸುವ ಬಗ್ಗೆ ಯೋಚಿಸಬೇಕು.
2. ಸ್ಕ್ಯಾಟರ್ಡ್ ಫೋಕಸ ಅನ್ನು ತಪ್ಪಿಸಲು ಇರುವ ಅತ್ಯುತ್ತಮ ಮಾರ್ಗವೆಂದರೆ ವ್ಯಾಕುಲತೆಗಳನ್ನು(distraction) ತಪ್ಪಿಸುವುದಾಗಿದೆ. ಪ್ರತಿ ಬಾರಿ ನಿಮ್ಮನ್ನು ಅಡ್ಡಿಪಡಿಸುವ ವಸ್ತುವು, ನಿಮ್ಮ ಫೋಕಸ್ ಯೂನಿಟ್ ಅನ್ನು ತೆಗೆದುಕೊಳ್ಳುತ್ತದೆ. ಇದಕ್ಕೆ ನಿಮ್ಮ ಮೆದುಳು ಪುನಃ ಸಂದರ್ಭಗಳನ್ನು(context) ರೀ ಲೋಡ್ ಮಾಡಬೇಕಾಗುತ್ತದೆ. ಇದು ಮಾನಸಿಕವಾಗಿ ಕೂಗುವಂತೆ ಮಾಡುತ್ತದೆ.
3. ನಿಮ್ಮ ದೇಹದ ಮೇಲೆ ಕಾಳಜಿ ಮಾಡಿ. ನಿಮ್ಮ ಮೆದುಳು ಸರಿಯಾಗಿ ಕಾರ್ಯನಿರ್ವಹಿಸಲು ನೀವು ಬಯಸಿದರೆ ನಿಮ್ಮ ದೇಹದ ದೈಹಿಕ ಆರೋಗ್ಯದ ಮೇಲೆ ನೀವು ಕಾಳಜಿ ಮಾಡಲೇಬೇಕು. ಅದೆಂದರೆ ಸಾಕಾಗುವಷ್ಟು ನಿದ್ದೆ ಮಾಡುವುದು, ನಿಯಮಿತವಾಗಿ(regular) ವ್ಯಾಯಾಮ ಮಾಡುವುದು, ನಿಮ್ಮನ್ನು ಹೈಡ್ರೇಟ್ ಮಾಡಿಕೊಂಡಿರುವುದು ಇತ್ಯಾದಿ.
4. ಏಕಾಗ್ರತೆಯು ಒಂದು ಕೌಶಲ್ಯವಾಗಿದೆ. ನಿಮಗೆ ಸದ್ಯಕ್ಕೆ ಗಮನಹರಿಸಲು ಸಾಧ್ಯವಾಗುತ್ತಿಲ್ಲವೆಂದರೆ ಪರವಾಗಿಲ್ಲ. ನೀವು ಏಕಾಗ್ರತೆ ಮಾಡಲು ಅಭ್ಯಾಸ ಮಾಡಬಹುದು ಮತ್ತು ಇದರಲ್ಲಿ ಉತ್ತಮವಾಗಬಹುದು.
5. ಗಮನಹರಿಸುವಿದನ್ನು ದಿನನಿತ್ಯದ ಹವ್ಯಾಸವಾಗಿ ಮಾಡಿಕೊಳ್ಳಿ. ಕೇವಲ ಪ್ರೇರಣೆಗಾಗಿ ಕಾಯಬೇಡಿ. ಗಮನಹರಿಸಲು ನಿಮ್ಮ ದಿನದಲ್ಲಿ ಸ್ವಲ್ಪ ಸಮಯ ನೀಡಿ. ಗಮನ ಹರಿಸಲು ಬೆಳಗಿನ ಸಮಯ ಸೂಕ್ತವಾಗಿದೆ. ಏಕೆಂದರೆ ಆ ಸಮಯದಲ್ಲಿ ಯಾವುದೇ ವ್ಯಾಕುಲತೆ ಇರುವುದಿಲ್ಲ. ಅದು ನಿಮ್ಮ ಮೆದುಳು ಇತರ ಯಾವುದೇ ವಸ್ತುಗಳಿಂದ ಆಕ್ರಮಿಸಿಕೊಂಡಿರುವುದಿಲ್ಲ.
6. ನಿಮ್ಮ ಮೆದುಳನ್ನು ಪ್ರಚೋದಿಸಿ. ಧ್ಯಾನ ಮಾಡಿ, ಇಲ್ಲ ನಡೆದಾಡಿ, ಇಲ್ಲ ನಿದ್ದೆ ಮಾಡುವ ಮೂಲಕ ನಿಮ್ಮ ಮೆದುಳಿಗೆ ವಿಶ್ರಾಂತಿ ನೀಡಿ ಹೊರತು ಪೋನ್ ಒತ್ತುವ ಮೂಲಕವಲ್ಲ.
7. ನಿಯಮಿತ ವಿರಾಮಗಳನ್ನು ತೆಗೆದುಕೊಳ್ಳಿ. ಗಮನಹರಿಸುವುದು ಬೇಗನೆ ಮುಗಿಯುತ್ತದೆ. ಹೀಗಾಗಿ ನಿಮ್ಮ ಮೆದುಳಿಗೆ ವಿಶ್ರಾಂತಿ ನೀಡಿ ಮತ್ತು ಇದು ದೀರ್ಘಕಾಲ ಗಮನಹರಿಸಲು ಸಹಕರಿಸುತ್ತದೆ.
8. ಪೊಮೊಡೊರೊ ತಂತ್ರವನ್ನು ಬಳಸಿ. ನೀವು ಗಮನ ಹರಿಸಲು ಮತ್ತು ನಿಯಮಿತ ವಿರಾಮವನ್ನು ತೆಗೆದುಕೊಳ್ಳಲು ಇರುವ ಪರಿಪೂರ್ಣ ತಂತ್ರವನ್ನು ಹುಡುಕುತ್ತಿದ್ದರೆ, ಪೊಮೊಡೊರೊ ತಂತ್ರವು ನಿಮಗೆ ಸೂಕ್ತವಾಗಿದೆ. ಇದನ್ನು ದಿನನಿತ್ಯದ ಹವ್ಯಾಸವನ್ನಾಗಿ ಮಾಡಿಕೊಳ್ಳಿ.
ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.
Explore all our Posts by categories.
Mahithi Thana 1221
Mahithi Thana 1339
See all comments...
sushma • December 1st,2022
ನನಗೆ ತುಂಬಾ ಉಪಯುಕ್ತವಾಗಿರುವ ಮಾಹಿತಿ ಧನ್ಯವಾದಗಳು🙏. ನೀವು ನೀಡಿರುವ ಸಲಹೆಗಳನ್ನು ಪಾಲಿಸುತ್ತೇನೆ.