Watch Video
ನಿಮ್ಮ ಚಿಕ್ಕ ವಯಸ್ಸಿನಲ್ಲಿ ಹೋಲಿಸಿಕೊಳ್ಳುವುದು(compare) ತುಂಬಾನೇ ಸಾಮಾನ್ಯವಾಗಿದೆ. ಹೀಗಾಗಿ, "ನಾನು ದುಡಿಯುತ್ತಿದ್ದರು ಆತನು ಏಕೆ ಅಷ್ಟು ಶ್ರೀಮಂತನಾಗಿದ್ದಾನೆ" ಎಂಬ ಪ್ರಶ್ನೆ ಬರುತ್ತದೆ. ಇದಕ್ಕೆ ಉತ್ತರವಿದೆ ನೀವು ಕಾಲೇಜಿನಲ್ಲಿ ಒಂದು ಗುಂಪು ಮಾಡಿಕೊಂಡು ಗೆಳೆಯರ ಜೊತೆ ಒಟ್ಟಿಗೆ ಇರುತ್ತೀರ. ಆದರೆ ಉದ್ಯೋಗ(job) ಮಾಡುವಾಗ ನೀವೆಲ್ಲ ಒಟ್ಟಿಗೆ ಇರುವುದಿಲ್ಲ, ಬೇರೆ ಬೇರೆಯಾಗಿರುತ್ತೀರಾ. ನೀವು ಎಲ್ಲರನ್ನು ಸಾಮಾಜಿಕ ಮಾಧ್ಯಮದಲ್ಲಿ ನೋಡುತ್ತಿರುತ್ತೀರಿ. ಹೀಗಾಗಿ ಅವರು ಯಾವ ಯಾವ ವೃತ್ತಿಗೆ(vocation) ಹೋಗುತ್ತಾರೆ, ಯಾವ ಬೈಕ್ ಖರೀದಿಸುತ್ತಿದ್ದಾರೆ, ಎಂಬುದು ನಿಮಗೆ ತಟ್ಟುತ್ತದೆ ಮತ್ತು ನೀವು ನಿಮ್ಮ ಜೀವನದಲ್ಲಿ ಬೇಸರವನ್ನು ಕಾಣಲು ಪ್ರಾರಂಭಿಸುತ್ತೀರಾ. ಈ ಲೇಖನದಲ್ಲಿ ನಾವು ಹಣದ ಹೋಲಿಕೆಯು ಏಕೆ ಆಗುತ್ತದೆ? ಹಣವನ್ನು ಸರಿಯಾಗಿ ನಿರ್ವಹಿಸುವುದು ಹೇಗೆ? ಮತ್ತು ನೀವು ಇದರಿಂದ ಜೀವನಪೂರ್ತಿ ಹೊರಬರುವುದು ಹೇಗೆ? ಎಂಬುದನ್ನು ತಿಳಿಸಲಿದ್ದೇವೆ.
ಇದನ್ನು ಓದಿ: 99.6% ಏಕೆ ಎಂದಿಗೂ ಶ್ರೀಮಂತರಾಗುವುದಿಲ್ಲಇದಕ್ಕೆ ಅನೇಕ ಕಾರಣಗಳಿವೆ. ಆದರೆ 3 ಮುಖ್ಯ ಕಾರಣಗಳೆಂದರೆ,
ಅಂದರೆ ಕೆಲವರು ಇರುವ ಸ್ವಭಾವ(nature) ಯಾವ ರೀತಿ ಇರುತ್ತದೆ ಎಂದರೆ ಅವರ ಹತ್ತಿರ 100 ರೂಪಾಯಿ ಇದ್ದರೆ 200 ರೂಪಾಯಿ ಇದೆ ಎನ್ನುವಂತೆ ತೋರಿಸುತ್ತಾರೆ ಮತ್ತು ಕೆಲವರು 100 ರೂಪಾಯಿ ಇದ್ದರೆ 50 ರೂಪಾಯಿ ಇರುವಂತೆ ತೋರಿಸುತ್ತಾರೆ. ಇದರಲ್ಲಿ ಸರಿ ಅಥವಾ ತಪ್ಪು ಎಂಬುದು ಇಲ್ಲ. ಅದು ಅವರಿಗೆ ಕೆಲಸ ಮಾಡುತ್ತಿರುವ ಕಾರಣ ಅವರು ಅದನ್ನು ಮಾಡುತ್ತಿರುತ್ತಾರೆ. ಅದು ಅವರು ಹಣವನ್ನು ಯಾವ ರೀತಿ ನೋಡುತ್ತಾರೆ ಎಂಬುದನ್ನು ತಿಳಿಸುತ್ತದೆ. ಹೀಗಾಗಿ ಮನುಷ್ಯನ ಸ್ವಭಾವ ತುಂಬಾನೇ ತಿಳಿಸುತ್ತದೆ.
"The scarcity of something when you begin to get it, makes you not manage it well" ಎಂಬ ಉಲ್ಲೇಖವಿದೆ.
ಅಂದರೆ ನಿಮಗೆ ಜೀವನದಲ್ಲಿ ಯಾವುದಾದರೂ ಕಡಿಮೆ ಸಿಕ್ಕು, ಒಮ್ಮೆಲೆ ಸಿಗಲು ಪ್ರಾರಂಭಿಸಿದರೆ, ನೀವು ಸ್ವಲ್ಪ ಸಮಯ ಅದನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಇದು ಹಣದ ವಿಷಯದಲ್ಲಿ 100% ಸತ್ಯವಾಗಿದೆ. ಅಂದರೆ ನಿಮ್ಮ ಜೀವನದಲ್ಲಿ ಹಣವನ್ನು ನೋಡದಿದ್ದಾಗ ನೀವು ಒಮ್ಮೆಲೇ ಹಣವನ್ನು ನೋಡಿದರೆ ನೀವು ಅದನ್ನು ಅಧಿಕ ಖರ್ಚು ಮಾಡುತ್ತೀರಾ. ಇದು ನೈಸರ್ಗಿಕ ಪ್ರಕ್ರಿಯೆ(natural process) ಆಗಿದೆ ಹೊರತು, ಮನುಷ್ಯನ ನಡವಳಿಕೆ, ಹಣವನ್ನು ಸರಿಯಾಗಿ ನಿರ್ವಹಿಸಲು ಬಂದಿಲ್ಲ ಎಂಬುದಲ್ಲ. ಇದು ನೀವು ಎಂದಿಗೂ ಹೊಂದಿದಕ್ಕೆ ಬಂದ ನೈಸರ್ಗಿಕ ಪ್ರಕ್ರಿಯೆ ಆಗಿದೆ. ಇದೇ ರೀತಿ ನಿಮಗೆ ತುಂಬಾ ಹೊಟ್ಟೆ ಹಸಿದಿದ್ದು ಅನೇಕ ದಿನ ತಿನ್ನದೆ ಕೊನೆಯಲ್ಲಿ ತಿಂದರೆ ನೀವು ಅಧಿಕ ತಿನ್ನುತ್ತೀರಾ.
ಸಾಲ(credit) ನಿಮ್ಮ ಭವಿಷ್ಯಕ್ಕೆ ಜೂಜು(betting) ಆಡುವಂತಾಗಿದೆ. ಸಾಲದಲ್ಲಿ ನಿಮಗೆ ಒಮ್ಮೆಲೆ ಹಣ ಸಿಗುತ್ತದೆ. ಅದನ್ನು ನೀವು ನಿಧಾನವಾಗಿ ಪಾವತಿಸುತ್ತೀರಾ. ಅದು ವೈಯಕ್ತಿಕ ಸಾಲ(personal loan), ಕಾರಿನ ಸಾಲ(car loan), ಮನೆಯ ಸಾಲ(home loan), ಕ್ರೆಡಿಟ್ ಕಾರ್ಡ್ ಸಾಲ, ಯಾವುದೇ ರೀತಿಯ ಸಾಲವಾಗಿದೆ. ಇದು ನಿಜವಾಗಿ ಒಂದು ಬಲೆಯಾಗಿದೆ(trap). ಇಂದು ನೀವು ಕಡಿಮೆ ಆದಾಯದೊಂದಿಗೆ ದುಬಾರಿ ಕಾರು, ದುಬಾರಿ ಫೋನ್, ಮನೆಯನ್ನು ಖರೀದಿಸಬಹುದು. ಏಕೆಂದರೆ ನೀವು ಜೀವನಪೂರ್ತಿ ಸಾಲದಲ್ಲಿ ಮುಳುಗಲು ತಯಾರಿರುತ್ತೀರ.
ಇದನ್ನು ಓದಿ: ಥಿಂಕ್ ಮತ್ತು ಗ್ರೋ ರಿಚ್ ಪುಸ್ತಕದ ಸಾರಾಂಶಈ ಹಣದ ಹೋಲಿಕೆಯಿಂದ ಹೊರ ಬರುವುದು ಹೇಗೆ? ಈ ಹಣದ ಹೋಲಿಕೆಯನ್ನು ಅರ್ಥ ಮಾಡಿಕೊಳ್ಳಲು ಒಂದು ರಸಪ್ರೆಶ್ನೆ(quiz) ಆಡೋಣ. ನಿಮಗೆ 3 ಪ್ರೆಶ್ನೆಯನ್ನು ಕೇಳುವೆನು.
ಇವರಿಬ್ಬರಲ್ಲಿ ಶ್ರೀಮಂತ ವ್ಯಕ್ತಿ ಯಾರು? ಒಬ್ಬ 20 ಲಕ್ಷದ ಕಾರನ್ನು ಓಡಿಸುತ್ತಾನೆ, ಇನ್ನೊಬ್ಬ 5 ಲಕ್ಷದ ಕಾರನ್ನು ಓಡಿಸುತ್ತಾನೆ. ನೀವು ಯಾರನ್ನು ಶ್ರೀಮಂತರೆಂದುಕೊಳ್ಳುತ್ತೀರಾ. ಅನೇಕರು 20 ವರ್ಷದ ವ್ಯಕ್ತಿಯನ್ನು ಆಯ್ಕೆ ಮಾಡಿರುತ್ತೀರಾ. ಈಗ ಮತ್ತೆ ಶ್ರೀಮಂತ ವ್ಯಕ್ತಿ ಯಾರೆಂದು ಹೇಳಿ? ಆ 20 ಲಕ್ಷ ಕಾರು ಇರುವವನು 18 ಲಕ್ಷದ ಸಾಲವನ್ನು ತೆಗೆದುಕೊಂಡಿದ್ದಾನೆ. 5 ಲಕ್ಷದ ಕಾರು ಹೊಂದಿರುವವನು ಪೂರ್ತಿ 5 ಲಕ್ಷವನ್ನು ನೀಡಿ ಕಾರನ್ನು ಖರೀದಿಸಿದ್ದಾನೆ. ಈಗ ಯಾರು ಶ್ರೀಮಂತರೆಂದು ತಿಳಿಸಿ.
ಈಗ ಇದು ಕ್ಲಿಷ್ಟಕರ(tricky) ಮತ್ತು ಆಸಕ್ತಿದಾಯಕವಾಗಿದೆ(interesting) ಅಲ್ಲವೇ! ಈಗಲೂ ನೀವು ಆ 20 ಲಕ್ಷದ ವ್ಯಕ್ತಿಯನ್ನು ಶ್ರೀಮಂತ ಎನ್ನಬಹುದು. ಏಕೆಂದರೆ 18 ಲಕ್ಷದ ಸಾಲ ತೆಗೆದುಕೊಂಡಿದನೆಂದರೆ ಅದನ್ನು ತೀರಿಸುವ ಸಾಮರ್ಥ್ಯ ಇದೆ. ಅದೇ 5 ಲಕ್ಷದ ವ್ಯಕ್ತಿ 5 ಲಕ್ಷ ನೀಡಿದರು, ಕೇವಲ 5 ಲಕ್ಷವಷ್ಟೇ ಅನಿಸಬಹುದು. ಆದರೂ ಸ್ವಲ್ಪ ಜನ ಈ 5 ಲಕ್ಷದ ವ್ಯಕ್ತಿಗೆ ಬದಲಾಗಿರಬಹುದು.
ಈಗ ಕೊನೆಯ ಪ್ರೆಶ್ನೆ, 20 ಲಕ್ಷದ ಕಾರನ್ನು ಹೊಂದಿರುವ ವ್ಯಕ್ತಿಯು 18 ಲಕ್ಷ ಸಾಲ ಹೊಂದಿದ್ದರೆ, ಉಳಿತಾಯ ಮತ್ತು ಹೂಡಿಕೆ 50 ಸಾವಿರವಿದೆ. ಅದೇ 5 ಲಕ್ಷದ ಕಾರು ಇರುವವನು 5 ಲಕ್ಷ ನೀಡಿ ಖರೀದಿಸಿ, ಉಳಿತಾಯ ಮತ್ತು ಹೂಡಿಕೆ 20 ಲಕ್ಷವಿದೆ. ಈಗ ಇಬ್ಬರಲ್ಲಿ ಶ್ರೀಮಂತರು ಯಾರೆಂದು ತಿಳಿಸಿ?
2ನೇಯವ ಶ್ರೀಮಂತ ಎಂಬ ಸ್ಪಷ್ಟತೆ(clarity) ನಿಮಗೆ ಬಂತೆ. ಕೆಲವರು ದುಬಾರಿ ಕಾರು ಇದ್ದರೆ ಶ್ರೀಮಂತ ಎನ್ನಬಹುದು. ಆದರೆ ನೀವು ಹಣದ ಜೊತೆ ಹೋಲಿಕೆ ಮಾಡಿದರೆ 5 ಲಕ್ಷದ ಕಾರು ಇರುವ ವ್ಯಕ್ತಿ ಶ್ರೀಮಂತ ವ್ಯಕ್ತಿಯಾಗಿದ್ದಾನೆ. ನಮಗೆ ಇದು ಏಕೆ ಅರ್ಥವಾಗುವುದಿಲ್ಲ ಎಂಬುದನ್ನು ತಿಳಿಯೋಣ.
ಇದು ಏಕೆಂದರೆ ಹಣದ ಹೋಲಿಕೆ ಎಂಬುದು ಒಂದು ವಸ್ತುವನ್ನು ನೋಡಿದಾಗ ಶುರುವಾಗುತ್ತದೆ. ನೀವು ನೋಡುತ್ತಿರುವ ಹಣವನ್ನು ಮಾತ್ರ ಹೋಲಿಕೆ ಮಾಡಲು ಸಾಧ್ಯ. ಇದರಿಂದ ಜೀವನದ ಒಂದು ಸುಂದರ ಪಾಠ ಹೊರಹೊಮ್ಮುತ್ತದೆ, "wealth is all the money that you cannot see" ಮತ್ತು ಇಂದಿನ ಜಗತ್ತಿನ ಸಮಸ್ಯೆಯೆಂದರೆ ನಾವು ಕಾಣಿಸುತ್ತಿರುವುದಕ್ಕೆ ಮಾತ್ರ ಗಮನಹರಿಸುತ್ತೇವೆ. ಕಾರು, ಬಟ್ಟೆ, ರಜೆ, ಮನೆ, ಬಂಗಲೆ ಎಲ್ಲವೂ ಕಾಣುತ್ತದೆ. ಬ್ಯಾಂಕ್ ಬ್ಯಾಲೆನ್ಸ್ ಕಾಣುವುದಿಲ್ಲ, ಹೂಡಿಕೆಗಳು ಕಾಣುವುದಿಲ್ಲ, ಎಸ್ಐಪಿಗಳು(sip) ಕಾಣುವುದಿಲ್ಲ, ಸಾಲಗಳು ಕೂಡ ಕಾಣುವುದಿಲ್ಲ. ಇದು ಹಣದ ಹೋಲಿಕೆಯ ಸಮಸ್ಯೆಯಾಗಿದೆ.
ನೀವು ನಿಮ್ಮೊಂದಿಗೆ ಇತರರನ್ನು ಹೋಲಿಕೆ ಮಾಡಲು ಬಯಸಿದರೆ, ನಿವ್ವಳ ಮೌಲ್ಯ(networth) ಹೋಲಿಕೆ ಸೂಕ್ತವಾಗಿದೆ. ಅಂದರೆ ಒಬ್ಬ ವ್ಯಕ್ತಿಯು ಖರೀದಿಸಿದ ವಸ್ತುಗಳ ಮೌಲ್ಯ ಏನು ಮತ್ತು ಅವರು ಸಮರ್ಥನಾಗಿರುವ(afford) ವಸ್ತುಗಳ ಮೇಲಿರುವ ಸಾಲವೆಷ್ಟು ಎಂಬುದನ್ನು ನೋಡಿ. ಇವೆರಡರ ಮಧ್ಯೆ ಬರುವ ವ್ಯತ್ಯಾಸವೆ ನಿವ್ವಳ ಮೌಲ್ಯವಾಗಿದೆ.
ಉದಾಹರಣೆಗೆ ಮೊದಲನೇ ವ್ಯಕ್ತಿ ಹತ್ತಿರ 20 ಲಕ್ಷದ ಕಾರು ಇದೆ, 18 ಲಕ್ಷದಷ್ಟು ಸಾಲ ತೆಗೆದುಕೊಂಡಿದ್ದಾನೆ ಮತ್ತು ಬ್ಯಾಂಕ್ ಬ್ಯಾಲೆನ್ಸ್ ಮತ್ತು ಹೂಡಿಕೆ 50 ಸಾವಿರವಿದೆ. ಇದು ಬಿಟ್ಟು ಅವನ ಜೀವನದಲ್ಲಿ ಇನ್ನೇನು ಇಲ್ಲ. ಹೀಗಾಗಿ ಆತನ ನಿವ್ವಳ ಮೌಲ್ಯ, 20 ಲಕ್ಷ + 50 ಸಾವಿರ - 18 ಲಕ್ಷ= 2.5 ಲಕ್ಷ.
ಅದೇ ಎರಡನೇ ವ್ಯಕ್ತಿಯ ಹತ್ತಿರ 5 ಲಕ್ಷದ ಕಾರು ಇದೆ, ಬ್ಯಾಂಕ್ ಬ್ಯಾಲೆನ್ಸ್ ಮತ್ತು ಹೂಡಿಕೆ 20 ಲಕ್ಷವಿದೆ ಮತ್ತು ಯಾವುದೇ ರೀತಿಯ ಸಾಲವಿಲ್ಲ. ಆತನ ನಿವ್ವಳ ಮೌಲ್ಯ 25 ಲಕ್ಷವಾಗಿದೆ. ಇದರಲ್ಲಿ ಕಾರಿನ ಮೌಲ್ಯ ಬೀಳಬಹುದು, ಆದರೂ ನಾವು 5 ಲಕ್ಷವನ್ನು ಸ್ಥಿರವಾಗಿ ತೆಗೆದುಕೊಂಡಿದ್ದೇವೆ. ಆದರೆ ಮೊದಲನೇ ವ್ಯಕ್ತಿಯ ಉದಾಹರಣೆಯಲ್ಲಿ ಕಾರಿನ ಮೌಲ್ಯ ತುಂಬಾ ಬೇಗನೆ ಬೀಳುತ್ತದೆ.
ಈ ರೀತಿಯ ಹೋಲಿಕೆ ಮಾಡುವುದು ಕಠಿಣವಾಗಿದೆ. ಏಕೆಂದರೆ ಕಾಣುವುದರಲ್ಲಿ ಹೋಲಿಕೆ ಮಾಡುವುದು ಸುಲಭವಾಗಿದೆ. ಕಾಣದಿರುವುದನ್ನು ಯಾವ ರೀತಿ ತಿಳಿದುಕೊಳ್ಳುವುದು. ಇದಕ್ಕಾಗಿ ನೀವು ಬೌದ್ಧಿಕ ಪ್ರೆಶ್ನೆಗಳನ್ನು(intellectual questions) ಕೇಳಲು ಪ್ರಾರಂಭಿಸಬೇಕು. ನಿಮ್ಮ ಕಾಲೇಜ್ ಗೆಳೆಯನಿಗೆ ನಿಮಗೆ ಸಿಗುವಷ್ಟು ಸಂಬಳದಷ್ಟೇ ಕೆಲಸ ದೊರೆತು, ಆದರೆ ಆತ 6 ಲಕ್ಷದ ಕಾರನ್ನು ಓಡಿಸುತ್ತಿದ್ದು, ನೀವು ಓಡಿಸುತ್ತಿಲ್ಲದಿದ್ದರೆ, ಅವರು ಆ ಕಾರನ್ನು ಹೇಗೆ ಖರೀದಿಸಿದರು? ಒಂದು ಅವರ ತಂದೆ ತಾಯಿಯ ಉಡುಗೊರೆಯಾಗಿರಬಹುದು(gift), ಇಲ್ಲ ಸಾಲ ತೆಗೆದುಕೊಂಡಿರುತ್ತಾರೆ. ಇದರ ನಂತರ ನೀವು ಅವರಿಗಿಂತ ಉತ್ತಮವಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ತಿಳಿಯಬೇಕು.
ಇದನ್ನು ಓದಿ: ಅನುಭವಿ ಹೂಡಿಕೆದಾರನ ಹೂಡಿಕೆಯ ಪಾಠಗಳುಹಣದ ಹೋಲಿಕೆಯಿಂದ ಹೊರಬರಲು ಇರುವ ಮಾರ್ಗ ನಿಮ್ಮ ನಿವ್ವಳ ಮೌಲ್ಯವನ್ನು(networth) ಹೆಚ್ಚಿಸಿಕೊಳ್ಳುವುದಾಗಿದೆ. ನೀವು ನಿಮ್ಮ ನಿವ್ವಳ ಮೌಲ್ಯದ ಮೇಲೆ ಗಮನ ಹರಿಸಿದರೆ, ಜೀವನದ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ. ನಿವ್ವಳ ಮೌಲ್ಯವೆಂದರೆ ಅಸೆಟ್ಸ್(assets) - ಲಿಯಾಬಿಲಿಟಿಸ್(liabilities). ನಿವ್ವಳ ಮೌಲ್ಯವನ್ನು ಹೆಚ್ಚಿಸಲು ಎರಡು ಮಾರ್ಗವಿದೆ. ಒಂದು ಅಸೆಟ್ಸ್ ಅನ್ನು ಹೆಚ್ಚಿಸಿಕೊಳ್ಳಿ ಇಲ್ಲ ಲಿಯಾಬಿಲಿಟಿಸ್ ಅನ್ನು ಕಡಿಮೆ ಮಾಡಿಕೊಳ್ಳಿ. ಈಗ ಇವೆರಡನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ.
ಅಸೆಟ್ಸ್ ಎಂದರೆ ನಿಮಗೆ ಹಣವನ್ನು ಗಳಿಸಿಕೊಡುವ ವಸ್ತುಗಳಾಗಿವೆ. ಅಂದರೆ ನಿಮ್ಮ ಸಂಬಳ(salary), ನಗದು(cash) ಅಸೆಟ್ ಆಗಿದೆ. ಏಕೆಂದರೆ ನಿಮ್ಮ ಉದ್ಯೋಗ ಹಣ ಉತ್ಪಾದಿಸುವ ಸಾಧನವಾಗಿದೆ. ನಿಮ್ಮ ಷೇರು ಕೂಡ ಅಸೆಟ್ ಆಗಿದೆ. ಏಕೆಂದರೆ ಅದು ಕೂಡ ಹಣವನ್ನು ಗಳಿಸಿ ಕೊಡುತ್ತಿದೆ. ಡಿಜಿಟಲ್ ಗೋಲ್ಡ್, ಬಾಡಿಗೆಗೆ ನೀಡಿದ ರಿಯಲ್ ಎಸ್ಟೇಟ್ ಆಸ್ತಿ(property) ಎಲ್ಲವೂ ಅಸೆಟ್ ಆಗಿದೆ.
ಆದರೆ ನಿಮ್ಮ ಕಾರು ಅಸೆಟ್ ಆಗಿಲ್ಲ. ಏಕೆಂದರೆ ಅದರ ಮೌಲ್ಯ ಕಡಿಮೆಯಾಗುತ್ತಾ ಬರುತ್ತದೆ. ಅದು ನಿಮಗಾಗಿ ಹಣವನ್ನು ಗಳಿಸಿಕೊಡುವುದಿಲ್ಲ, ಬದಲಿಗೆ ಹಣವನ್ನು ಕಡಿಮೆ ಮಾಡಿಸುತ್ತದೆ. ನಿಮ್ಮ ಬ್ಯಾಂಕ್ನಲ್ಲಿ ಇರುವ ಹಣ ಅಸೆಟ್ ಆಗಿಲ್ಲ. ಏಕೆಂದರೆ ಹಣದುಬ್ಬರದಿಂದ(inflation) ಅದರ ಮೌಲ್ಯವು ಕಡಿಮೆಗೊಳ್ಳುತ್ತಿದೆ. ಹೀಗಾಗಿ ಅಸೆಟ್ ಎಂದರೆ ನಿಮಗಾಗಿ ಹಣವನ್ನು ಗಳಿಸಿ ಕೊಡುವ ವಸ್ತುಗಳಾಗಿದೆ.
ಲಿಯಾಬಿಲಿಟಿ ಎಂದರೆ ನಿಮ್ಮ ಹಣವನ್ನು ಕಡಿಮೆಗೊಳಿಸುವ ವಸ್ತುಗಳಾಗಿವೆ, ಇಲ್ಲ ನಿಮ್ಮಿಂದ ಹಣವನ್ನು ತೆಗೆದುಕೊಂಡು ಹೋಗುತ್ತವೆ. ನೀವು ಒಂದು ಮನೆಯಲ್ಲಿ ವಾಸವಿದ್ದು ಅದನ್ನು ಮಾರದಿದ್ದರೆ, ಅದೊಂದು ಲಿಯಾಬಿಲಿಟಿ ಆಗಿದೆ. ಏಕೆಂದರೆ ಆ ಮನೆಯನ್ನು ನಿರ್ವಹಿಸಲು ನೀವು ಹಣವನ್ನು ಖರ್ಚು ಮಾಡುತ್ತಲೇ ಇರಬೇಕು. ನೀವು ರಿಯಲ್ ಎಸ್ಟೇಟ್ ಆಸ್ತಿ ಖರೀದಿಸಿ ಬಾಡಿಗೆಗೆ ನೀಡಿಲ್ಲವೆಂದರೆ, ಅದು ಲಿಯಾಬಿಲಿಟಿ ಆಗಿದೆ. ನಿಮ್ಮ ಕಾರು ಲಿಯಾಬಿಲಿಟಿ ಆಗಿದೆ, ನಿಮ್ಮ ಫೋನ್ ಲಿಯಾಬಿಲಿಟಿ ಆಗಿದೆ, ನಿಮ್ಮ ವಾಚ್ ಕೂಡ ಲಿಯಾಬಿಲಿಟಿ ಆಗಿದೆ. ನಿಮ್ಮ ಪ್ರವಾಸ ಒಂದು ರೀತಿಯಲ್ಲಿ ಲಿಯಾಬಲಿಟಿ ಆಗಿದೆ. ಆದರೆ ಅದನ್ನು ಅಳೆಯಲು ಬೇರೆ ಮಾರ್ಗಗಳಿವೆ. ನೀವು ಪ್ರವಾಸಕ್ಕೆ ಹೋಗಿ ಏನಾದರೂ ಹೊಸ ಅನುಭವ ಪಡೆದುಕೊಂಡರೆ ಅದು ನಿಮ್ಮ ಬದುಕಿನಲ್ಲಿ ಸಹಾಯ ಮಾಡುತ್ತದೆ, ಹೀಗಾಗಿ ಅದು ಒಂದು ರೀತಿ ಅಸೆಟ್ ಆಗುತ್ತದೆ.
ಇದೇ ರೀತಿ ನೀವು ಓದಲು ಖರ್ಚು ಮಾಡಿದರೆ ಅದು ಅಸೆಟ್ ಅಥವಾ ಲಿಯಾಬಿಲಿಟಿ ನಾ? ಅದನ್ನು ಓದಿದ ನಂತರ ನಿಮ್ಮ ಸಂಬಳ ಹೆಚ್ಚಬಹುದು, ಹೀಗಾಗಿ ಅದು ಅಸೆಟ್ ಆಗಿದೆ. ನೀವು ಯಾವುದೇ ಕೋರ್ಸ್(course) ಮಾಡಿ ಉದ್ಯೋಗ ಸಿಗದಿದ್ದರೆ ಅದು ಲಿಯಾಬಿಲಿಟಿ ಆಗಿದೆ. ಹೀಗಾಗಿ ಆ ಅಸೆಟ್ ಹೆಚ್ಚಿಸಿ ಲಿಯಾಬಿಲಿಟಿಗಳನ್ನು ಕಡಿಮೆಗೊಳಿಸಿ. ಆಗಿದ್ದರೆ,
ಇದನ್ನು ಓದಿ: 20 ರಲ್ಲಿ ತಿಳಿದಿರಬೇಕಾದ 22 ಜೀವನದ ಕಠಿಣ ಸತ್ಯಗಳುಇದು ತುಂಬಾ ಸರಳವಾಗಿದೆ, ಒಂದು ಕಡೆಯಿಂದ ಹಣ ಬರುವ ಮೂಲ ಇರಬೇಕು ಇನ್ನೊಂದು ಕಡೆ ಅದನ್ನು ಹೂಡಿಕೆ ಮಾಡುವ ಮೂಲ ಇರಬೇಕು. ಹಣದ ಮೂಲ ಸಾಮಾನ್ಯವಾಗಿ ಉದ್ಯೋಗ ಆಗಿರುತ್ತದೆ. ಒಂದು ಹಣದ ಮೂಲ ಇರುವುದು ಸರಿಯೇ, ಆದರೆ ಬಹು ಹಣದ ಮೂಲವಿರುವುದು ಉತ್ತಮವಾಗಿದೆ. ಆದರೆ ಹಣವನ್ನು ಬೆಳೆಯಲು ಬಳಸದೆ ಹಾಗೆ ಇಟ್ಟುಕೊಂಡಿದ್ದರೆ ಮೂರ್ಖತನವಾಗಿದೆ(stupidity). ನೀವು ಹಣವನ್ನು ಇನ್ನಷ್ಟು ಹಣವನ್ನು ಗಳಿಸಲು ಬಳಸಬೇಕು. ಹೀಗಾಗಿ ನಿಯಮಿತವಾಗಿ ಹೂಡಿಕೆ ಮಾಡಿ, ಎಸ್ಐಪಿ(sip) ಪ್ರಾರಂಭಿಸಿ. ಮ್ಯೂಚುಯಲ್ ಫಂಡ್ಸ್ನಲ್ಲಿ ಹೂಡಿಕೆ ಮಾಡಿ. ಅಂದರೆ ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಮ್ಯೂಚುಯಲ್ ಫಂಡ್ಗಳಲ್ಲಿ ಹೂಡಿಕೆ ಮಾಡಿ. ಸ್ಮಾಲ್ ಕ್ಯಾಪ್ ಅಧಿಕ ಅಪಾಯಕಾರಿ ಇರುತ್ತದೆ, ಮಿಡ್ ಕ್ಯಾಪ್ ಮಧ್ಯಮ ಅಪಾಯಕಾರಿ ಇರುತ್ತದೆ, ಲಾರ್ಜ್ ಕ್ಯಾಪ್ನಲ್ಲಿ ಸ್ಮಾಲ್ ಕ್ಯಾಪ್ ಮತ್ತು ಮಿಡ್ ಕ್ಯಾಪ್ ಗಿಂತ ಕಡಿಮೆ ಅಪಾಯ ಇರುತ್ತದೆ. ನೀವು ಅಧಿಕ ಅಪಾಯ ತೆಗೆದುಕೊಳ್ಳಲು ಬಯಸಿದರೆ ಸ್ಮಾಲ್ ಕ್ಯಾಪ್ನಲ್ಲಿ ಹೂಡಿಕೆ ಮಾಡಿ, ನಿಮ್ಮ ವಯಸ್ಸು, ಆದಾಯ ಮತ್ತು ಅಪಾಯದ ಹಸಿವಿನ(risk appetite) ಮೇಲೆ ಈ 3 ಮ್ಯೂಚುಯಲ್ ಫಂಡ್ಗಳಲ್ಲಿ ಹೂಡಿಕೆ ಮಾಡಿ.
ನಿಮ್ಮ ಆದಾಯದ 1% ಅನ್ನು ಸುರಕ್ಷಿತ ಅಸೆಟ್ಸನಲ್ಲಿ ಇರಿಸಿ. ಅದು ಭವಿಷ್ಯ ನಿಧಿ(provident fund), ರಾಷ್ಟ್ರೀಯ ಪಿಂಚಣಿ ಯೋಜನೆ(national pension scheme), ಇಎಲ್ಎಸ್ಎಸ್(elss), ಡೆಬ್ಟ್ ಮತ್ತು ಇಕ್ವಿಟಿ ಮ್ಯೂಚುಯಲ್ ಫಂಡ್ನ ಸಂಯೋಜನೆ, ಡಿಜಿಟಲ್ ಗೋಲ್ಡ್, ರಿಸ್ಟ್ಸ್ನಲ್ಲಿ(REIT's) ಹೂಡಿಕೆ ಮಾಡಬಹುದು.
ನೀವು ಹಣವನ್ನು ಕೇವಲ ತೆರಿಗೆಯ(taxation) ನಂತರ ಸಿಗುವ ರಿಟರ್ನ್ 6% ಇರುವ ಹಣದುಬ್ಬರವನ್ನು ಸೋಲಿಸುವ ವ್ಯವಸ್ಥೆಯಲ್ಲಿ(system) ಹಾಕಿದರೆ ನಿಮ್ಮ ಹಣ ಬೆಳೆಯುತ್ತಿದೆ ಎಂದರ್ಥ. ಸಾಮಾನ್ಯವಾಗಿ ಹಣದುಬ್ಬರ 6% ಇರುವುದಿಲ್ಲ. ನಮ್ಮ ಜೀವನಶೈಲಿ ಹಣದುಬ್ಬರ(lifestyle inflation) ನೋಡಿದರೆ ಅದು 8 ರಿಂದ 10% ಇರಬಹುದು. ಹೀಗಾಗಿ ತೆರಿಗೆಯ ನಂತರವೂ ನಿಮ್ಮ ರಿಟರ್ನ್ 10% ಗಿಂತ ಅಧಿಕ ಇರುವುದನ್ನು ನೋಡಿ ಹೂಡಿಕೆ ಮಾಡಿ.
ಲಿಯಾಬಿಲಿಟಿ ಎಷ್ಟು ಕಡಿಮೆ ಇರುತ್ತದೆಯೋ ಅಷ್ಟು ಒಳ್ಳೆಯದು. ವೈಯಕ್ತಿಕ ಸಾಲವನ್ನು(personal loan) ತಪ್ಪಿಸಿ. ಕ್ರೆಡಿಟ್ ಕಾರ್ಡ್ ಸಾಲವನ್ನು ತೆಗೆದುಕೊಳ್ಳಬೇಡಿ. ಮೌಲ್ಯವನ್ನು ಕಡಿಮೆ ಮಾಡುವ ವಸ್ತುಗಳ ಮೇಲೆ ಸಾಲವನ್ನು ತೆಗೆದುಕೊಳ್ಳಬೇಡಿ. ಅಂದರೆ ಫೋನ್, ಶೂ, ಯಂತ್ರೋಪಕರಣಗಳಿಗೆ(gadget) ಎಂದಿಗೂ ಸಾಲವನ್ನು ತೆಗೆದುಕೊಳ್ಳಬೇಡಿ.
ಕೇವಲ ನಿಮ್ಮ ಮೌಲ್ಯ ಹೆಚ್ಚಿಸುವ ವಸ್ತುಗಳಿಗೆ ಸಾಲವನ್ನು ತೆಗೆದುಕೊಳ್ಳಿ. ಉದಾಹರಣೆಗೆ ವಿದ್ಯಾಭ್ಯಾಸ(education loan), ಮನೆ ಸಾಲ(home loan). ಇದರಿಂದ ನೀವು ನಿಮ್ಮ ನಿವ್ವಳ ಮೌಲ್ಯ ಹೆಚ್ಚಿಸುತ್ತಿರುವುದನ್ನು ಗಮನಿಸುತ್ತೀರಾ. ಹಣದ ಹೋಲಿಕೆ ನಾವು ಏನೋ ತಪ್ಪು ಮಾಡುತ್ತಿದ್ದೇವೆ ಎನ್ನುವಂತೆ ಮಾಡುತ್ತದೆ. "ಕೆಲವರು ನನಗೆ ತಿಳಿಯದೆ ಇರುವುದನ್ನು ತಿಳಿದಿದ್ದರೆ, ಹೀಗಾಗಿ ನನಗಿಂತ ಅಧಿಕ ಹಣದ ಗಳಿಸುತ್ತಿದ್ದಾರೆ, ನಾನೇ ಮೂರ್ಖ" ಎಂದು ಯೋಚಿಸುವಂತೆ ಮಾಡುತ್ತದೆ.
ನಾವು ಚಿಕ್ಕವರಿದ್ದಾಗಿನಿಂದ ಇಂಗ್ಲಿಷ್ ಮೀಡಿಯಂ ಶಾಲೆಗೆ ಹೋಗುವವರು ಶ್ರೀಮಂತರು, ಟ್ಯೂಷನ್ಗೆ ಹೋಗುವವರು ಶ್ರೀಮಂತರು ಎಂದು ಭಾವಿಸುತ್ತೇವೆ. ಇದರಿಂದ ನಾವು ಎಂದಿಗೂ ಶ್ರೀಮಂತರಾಗಲು ಸಾಧ್ಯವಿಲ್ಲವೆನಿಸುತ್ತದೆ. ಆದರೆ ಹಣವು ಯಾರೊಂದಿಗೂ ಭೇದ ಭಾವ ಮಾಡುವುದಿಲ್ಲ. ಹಣವನ್ನು ಬೆಳೆಸುವುದು ಒಂದು ಕಲೆಯಾಗಿದೆ. ನಮಗೆ ಹಣವನ್ನು ಗಳಿಸಲು ಹೇಳುತ್ತಾರೆ, ಆದರೆ ಯಾರು ಅದನ್ನು ಬೆಳೆಸುವುದು ಹೇಗೆ ಎಂಬುದನ್ನು ತಿಳಿಸುವುದಿಲ್ಲ. ನಮಗೆ ಪರೀಕ್ಷೆ ನೀಡು, ಆ ಕೆಲಸ ಮಾಡು, ಜೀವನಪೂರ್ತಿ ಆ ಕೆಲಸವನ್ನೇ ಮಾಡು, ಇದರಿಂದಲೇ ಹಣವನ್ನು ಗಳಿಸುವೆ. ಆದರೆ ಹಣವನ್ನು ಗಳಿಸಿ ಹೆಚ್ಚಿಸುವುದು ಹೇಗೆ ಎಂಬುದನ್ನು ಯಾರು ತಿಳಿಸುವುದಿಲ್ಲ. ಹೀಗಾಗಿ ಇದುವೇ ದೊಡ್ಡ ಬಲೆಯಾಗಿದೆ(trap). ನೀವು ದೀರ್ಘವಾದಿ ಹೂಡಿಕೆ(long term investing) ಮತ್ತು ಉದ್ಯೋಗದಿಂದ ಬರುವ ಸಂಬಳವನ್ನು ಹೆಚ್ಚಿಸುತ್ತಿದ್ದಾರೆ, ನೀವು ಹಣವನ್ನು ದುಪ್ಪಟ್ಟು ಮಾಡಬಹುದು.
ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.
Explore all our Posts by categories.
See all comments...