Website designed by @coders.knowledge.

Website designed by @coders.knowledge.

Your Brain on Porn Book Summary | ಅಶ್ಲೀಲತೆಯ ಮೇಲೆ ನಿಮ್ಮ ಮೆದುಳು

 0

 Add

Please login to add to playlist

Watch Video

ನಾವು ಇಂದು ಗ್ಯಾರಿ ವಿಲ್ಸನ್(gary wilson) ಅವರು ಬರೆದಿರುವ "ಯುವರ್ ಬ್ರೈನ್ ಆನ್ ಪೋರ್ನ್"(your brain on porn) ಪುಸ್ತಕದ ಮೂಲಕ, ಅಂತರ್ಜಾಲದಲ್ಲಿ ಪೋರ್ನ್ ನಿಮ್ಮ ಬದುಕಿನ ಸಮಯವನ್ನು ಯಾವ ರೀತಿ ಹಾಳು ಮಾಡುತ್ತಿದೆ ಎಂಬುದನ್ನು ತಿಳಿಸಲಿದ್ದೇವೆ. ನೀವು ಈಗ ಒಬ್ಬ ವಿದ್ಯಾರ್ಥಿ, ವ್ಯಾಪಾರಿ ಇಲ್ಲ ಆಟಗಾರ ಆಗಿದರೆ ಈ ಒಂದು ಅಭ್ಯಾಸ ನಿಮ್ಮನ್ನು ನಿಮ್ಮ ಗುರಿ, ಕನಸು, ಉತ್ತಮವಾದ ಬದುಕು ಮತ್ತು ಮಾನಸಿಕ ಆರೋಗ್ಯದಿಂದ ದೂರ ತೆಗೆದುಕೊಂಡು ಹೋಗುತ್ತಿದೆ. ಹೀಗಾಗಿಯೇ ಅನೇಕರು ನಮಗೆ ಪೋರ್ನ್ ಮತ್ತು ಹಸ್ತಮೈಥುನಕ್ಕೆ(musterbation) ಸಂಬಂಧಿಸಿದ ಪ್ರಶ್ನೆಗಳನ್ನೇ ಕೇಳುತ್ತೀರಾ.

ನೀವು ನಿಮ್ಮನ್ನು ಬದಲಿಸಿಕೊಳ್ಳಲು ಬಯಸಿದ್ದೀರಾ, ಆದರೆ ನಿಮಗೆ ಪೋರ್ನ್ ಬಗ್ಗೆ ಸರಿಯಾದ ಜ್ಞಾನವಿಲ್ಲ. ಹೀಗಾಗಿ ಇವುಗಳ ಬಗ್ಗೆ ತಜ್ಞರೂ(expert) ಬರೆದ ಪುಸ್ತಕದ ಮೂಲಕ ವಿಷಯಗಳನ್ನು ತಿಳಿಯಲಿದ್ದೇವೆ. ಪೋರ್ನ್ ನಮ್ಮ ಮೆದುಳನ್ನು ಯಾವ ರೀತಿ ಬದಲಾಯಿಸುತ್ತಿದೆ ಎಂಬುದನ್ನು ತಿಳಿಯೋಣ. ಇದರ ಮೇಲೆ ತಜ್ಞರು ಅನೇಕ ವರ್ಷ ಸಂಶೋಧನೆ ಮಾಡಿ ಏನನ್ನು ಕಂಡುಕೊಂಡರು. ಇದನ್ನು ಬಿಡುವುದರಿಂದ ಆಗುವ ಪ್ರಯೋಜನಗಳು ಯಾವುವು? ಮತ್ತು ನೀವು ಕೆಲವು ಬದಲಾವಣೆ ಮೂಲಕ ಈ ಪೋರ್ನ್ ನೋಡುವುದನ್ನು ಬಿಡಬಹುದು ಎಂಬುದನ್ನು ತಿಳಿಸಲಿದ್ದೇವೆ.

ಇದನ್ನು ಓದಿ: ಬದುಕಿನಲ್ಲಿ ನಿಶ್ಚಲತೆಯನ್ನು ಸಾಧಿಸುವುದು ಹೇಗೆ?

1. Porn and your brain

does porn negatively affect the brain in kannada
porn and brain

ಕಲೆ(art) ಮತ್ತು ಸಂವಹನದ(communication) ಮೂಲಕ ಪೋರ್ನ್ ಮಾನವ ನಾಗರಿಕತೆಯಲ್ಲಿ(human civilization) ಅನೇಕ ವರ್ಷಗಳಿಂದ ಇದೆ. ಆದರೆ ಅಂತರ್ಜಾಲ ಇದನ್ನು ಸುಲಭವಾಗಿ ಪ್ರವೇಶ ಮಾಡುವಂತೆ ಮಾಡಿದೆ. ನಾವು ಪೋರ್ನ್ ವೆಬ್ಸೈಟ್ನಿಂದ ಕೆಲವೇ ಕ್ಲಿಕ್ಸ್ ದೂರವಿರುತ್ತೇವೆ. ಪೋರ್ನ್ ಚಟ(addiction) ಒಂದು ನಿಜವಾದ ವಿದ್ಯಮಾನವಾಗಿದೆ. ಇದು ನಮ್ಮ ಯೋಚನೆ, ಬದುಕು, ಆಸೆಗಳ ಮೇಲೆ ಪ್ರಭಾವವನ್ನು ಬೀರುತ್ತದೆ ಮತ್ತು ಈ ವಿದ್ಯಮಾನ ಪ್ರತಿವರ್ಷ ಅಧಿಕ ಹೆಚ್ಚುತ್ತಿದೆ. ಏಕೆಂದರೆ ಒಂದು ಅಧ್ಯಯನದಲ್ಲಿ ಇದು ಪುರುಷ ಮತ್ತು ಮಹಿಳೆಯರ ಪ್ರಾಯದ ಸಮಯದಲ್ಲಿ ಅಧಿಕ ಕಂಡಿದೆ. ಆದರೆ ಈ ಒಂದು ಹವ್ಯಾಸ ನಿಮ್ಮ ಯಾವುದೇ ವಯಸ್ಸಿನಲ್ಲಾದರೂ ನಿಮ್ಮ ಜತೆಗಾರನ ಸಂಬಂಧ, ಸಾಮಾಜಿಕ ಬದುಕು, ವೃತ್ತಿಯಲ್ಲಿ(career) ತುಂಬಾನೇ ಪ್ರಭಾವ ಮಾಡುತ್ತಿರುತ್ತದೆ ಮತ್ತು ನಮಗೂ ಇದರ ಬಗ್ಗೆ ಅನೇಕ ಬಾರಿ ತಿಳಿಯುವುದಿಲ್ಲ. ಒಂದು ವೇಳೆ ತಿಳಿದಿದ್ದರೂ ಇದಕ್ಕೆ ಗುಲಾಮ(slave) ಆಗಿರುವುದರಿಂದ ಏನನ್ನು ಮಾಡಲು ಸಾಧ್ಯವಾಗುವುದಿಲ್ಲ.

ಲೈಂಗಿಕ ಡ್ರೈವ್(sex drive) ಒಂದು ಶಕ್ತಿಯುತ ಪ್ರೇರಣೆಯ ಶಕ್ತಿ ಆಗಿದೆ. ಇದು ಮಾನವ ಜನಾಂಗ(human race) ವಿಕಸನಗೊಳ್ಳಲು ಪ್ರಮುಖವಾಗಿದೆ. ಆದರೆ ಪೋರ್ನ್ ಸಮಯದ ಜೊತೆ ಮಾನವ ಸಂಪರ್ಕವನ್ನು ಅನುತ್ಪಾದಕ(unproductive) ಮಾಡುತ್ತಿದೆ. ಇದರಿಂದ ಜನರು ನಿಜವಾದ ಸಂಗತಿಯ ಜೊತೆಗೆ ಸಂಬಂಧ ಮಾಡಿಕೊಳ್ಳುವ ಬದಲು ಸ್ಕ್ರೀನ್ ಮುಂದೆ ತಮ್ಮ ಲೈಂಗಿಕ ಆಸೆಯನ್ನು ಈಡೇರಿಸಿಕೊಳ್ಳಲು ಬಯಸುತ್ತಾರೆ. ಅವರು ಆ ರೀತಿ ಮಾಡುವುದು ಸುಲಭವೆಂದುಕೊಳ್ಳುತ್ತಾರೆ. ಇದರಿಂದ ಅಧಿಕ ಹಸ್ತಮೈಥುನ ಮಾಡುವ, ಅಧಿಕ ಪೋರ್ನ್ ನೋಡುವವರಿಗೆ ಲೈಂಗಿಕತೆಯ ಸಮಯದಲ್ಲಿ ಅಕಾಲಿಕ ಸ್ಖಲನ(premature ejaculation) ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ, ಇಲ್ಲ ಅವರ ಲೈಂಗಿಕತೆಯ ಸಮಯದಲ್ಲಿ ಸ್ಖಲನ(ejaculate) ಮಾಡಲು ಸಾಧ್ಯವಾಗುವುದಿಲ್ಲ.

ಗಂಡಸರು ಮತ್ತು ಹೆಂಗಸರು ತಮ್ಮ ಸಂಗತಿಯ ಪ್ರದರ್ಶನ ಮತ್ತು ದೇಹದ ಆಕಾರದ ಮೇಲೆ ತೃಪ್ತಿ ಇರುವುದಿಲ್ಲ. ಇಲ್ಲ ಸಲ್ಪ ಸಮಯದ ನಂತರ ತಮ್ಮ ಸಂಗತಿಯ ಮೇಲಿನ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಬದಲಿಗೆ ಪೋರ್ನ್ ನೋಡುಗರು ಅವರ ಸಂಗತಿಯನ್ನು ಪೋರ್ನ್ ಸ್ಟಾರ್(porn star) ಜೊತೆಗೆ ಹೋಲಿಕೆ ಮಾಡುತ್ತೇವೆ ಎಂದು ಹೇಳುತ್ತಾರೆ. ಒಂದು ವೇಳೆ ಅವರು ಯೋಚಿಸಿದ ರೀತಿಯ ಅನುಭವ ಸಿಕ್ಕದಿದ್ದಲ್ಲಿ ಅವರಿಗೆ ಪರಾಕಾಷ್ಠೆ(orgasm) ಮತ್ತು ಸ್ಖಲನದಲ್ಲಿ ಸಮಸ್ಯೆ ಬರುತ್ತದೆ ಮತ್ತು ಅವರು ಲೈಂಗಿಕವಾಗಿ ತೃಪ್ತಿಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಲೇಖಕರು ಪೋರ್ನ್ನ ಪ್ರಭಾವ ನಮ್ಮ ಭಾವನಾತ್ಮಕ ಯೋಗಕ್ಷೇಮಕ್ಕೆ(emotional wellbeing) ಬೆದರಿಕೆ(threat) ಆಗಿದೆ ಎಂದು ಹೇಳುತ್ತಾರೆ ಮತ್ತು ನಾವು ಇದನ್ನು ಆದಷ್ಟು ಬೇಗನೆ ಅರ್ಥ ಮಾಡಿಕೊಂಡು ಸ್ವೀಕರಿಸಬೇಕು.

ಕೆನಡಾದ ಸಂಶೋಧಕ ಸಿಮೆನ್ ಲಿಜೆನಸ್(simen lijenus) ಪೋರ್ನ್ ನೋಡುವ 20 ವಿದ್ಯಾರ್ಥಿಗಳಿಗೆ, "ಪೋರ್ನ್ ನಿಮ್ಮ ಮಾನಸಿಕ ವರ್ತನೆ ಮತ್ತು ಸ್ಥಿತಿಗೆ ಪರಿಣಾಮ ಬೀರುತ್ತಿದೆಯೇ ಎಂದು ಕೇಳಿದರು. ಅದಕ್ಕೆ ಆ ವಿದ್ಯಾರ್ಥಿಗಳು, "ಅದು ಆ ರೀತಿ ಮಾಡುತ್ತಿದೆ ಎಂದು ಅನಿಸುತ್ತಿಲ್ಲ" ಎಂದು ಹೇಳುತ್ತಾರೆ. ಆ ವಿದ್ಯಾರ್ಥಿಗಳು ಅನೇಕ ವರ್ಷಗಳಿಂದ ಪೋರ್ನ್ ಅನ್ನು ನೋಡಿಕೊಂಡು ಬಂದಿದರು. ಹೀಗಾಗಿ ಅವರಿಗೆ ಇದರ ಬಗ್ಗೆ ಕೇಳುವುದು ಮೀನಿಗೆ ನೀರಿನ ಬಗ್ಗೆ ಕೇಳಿದಂತಾಗುತ್ತದೆ.

ಜಾಮಾ ಸೈಕ್ರಾಟಿಕ್(jama cycratic) ಸಂಶೋಧನೆಯಲ್ಲಿ ಪೋರ್ನ್ ಅನ್ನು ನೋಡುವುದು ನಮಗೆ ಗ್ರೇ ಮ್ಯಾಟರ್(gray matter), ಸಾಮಾಜಿಕ ಸ್ಪಂದಿಸುವಿಕೆಯಾ ಕೊರತೆಯನ್ನು ನೀಡುತ್ತದೆ ಎಂದು ತಿಳಿಸಿದೆ. ಗ್ರೇ ಮ್ಯಾಟರ್ ನಮ್ಮ ನ್ಯೂರೋನ್ ನ ಜೀವಕೋಶದಿಂದ(cell) ಆಗಿರುತ್ತದೆ ಮತ್ತು ಇದು ನಮ್ಮ 20s ನಲ್ಲಿ ಪೂರ್ತಿಯಾಗಿ ಬೆಳೆದಿರುತ್ತದೆ. ಇದರ ಕೊರತೆಯಿಂದ ನಾವು ನೋಡುವ, ಕೇಳುವ, ಸ್ಮರಣೆ(memory), ಭಾವನೆ(emotions), ಭಾಷಣ(speech), ತೀರ್ಮಾನ ಮಾಡುವಿಕೆ(decision making) ಮತ್ತು ಸ್ವಯಂ ನಿಯಂತ್ರಣದಂತಹ(self control) ಶಕ್ತಿಯ ಕೊರತೆ ಇರುತ್ತದೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ(oxford university) ಒಂದು ಅಧ್ಯಯನದಲ್ಲಿ ಪೋರ್ನ್ಗೆ ವ್ಯಸನಿಯಾಗಿರುವವರು ಬೇರೆಯವರ ಜೊತೆ ತಮಗೂ ನಷ್ಟ ಮಾಡಿಕೊಳ್ಳುತ್ತಾರೆಂದು ತಿಳಿದುಬಂದಿದೆ. ಏಕೆಂದರೆ ಒಬ್ಬ ವ್ಯಕ್ತಿ, "ನಾನು ಕ್ರೀಡಾಪಟು(athletic), ಬುದ್ಧಿವಂತ ಮತ್ತು ಸಾಮಾಜಿಕ ವ್ಯಕ್ತಿಯಾಗಿದೆ. ನಾನು ಶಾಂತಿಯುತವಾಗಿ ನನ್ನ ಬದುಕನ್ನು ಆನಂದಿಸುತ್ತಿದೆ. ಆದರೆ 11 ನೇ ವರ್ಷದಿಂದ ಪೋರ್ನ್ ನೋಡಲು ಪ್ರಾರಂಭಿಸಿದ ನಂತರ ಖಿನ್ನತೆಗೆ ಹೋದೆ. ನನ್ನ ಮುಂದಿನ 15 ವರ್ಷ ತುಂಬಾ ಕೆಟ್ಟದಾಗಿತು. ನನಗೆ ಜನಗಳ ಜೊತೆ ಬೆರೆಯಲು ಇಲ್ಲ ಮಾತನಾಡುವ ಇಷ್ಟವಿರಲಿಲ್ಲ. ನಾನು ಪ್ರತಿಯೊಬ್ಬರನ್ನು ದ್ವೇಷಿಸಲು ಪ್ರಾರಂಭಿಸಿದೆ. ನಾನು ನನ್ನ ಕ್ರೀಡೆಯನ್ನು ಆಡುವುದನ್ನು ನಿಲ್ಲಿಸಿದೆ ಮತ್ತು ಶಾಲೆಯ ಕಿರುಪರೀಕ್ಷೆಯಲ್ಲಿ ಕಷ್ಟದಿಂದ ಉತ್ತೀರ್ಣನಾಗುತ್ತಿದೆ. ನಾನು ನನ್ನ ಮನಸ್ಸಿನಲ್ಲಿ ನನ್ನದೇ ಆದ ಒಂದು ಕಾಲ್ಪನಿಕ ಪ್ರಪಂಚವನ್ನು(imaginary world) ಮಾಡಿದ್ದೆ, ಇದಕ್ಕೆಲ್ಲ ಕಾರಣ ಪೋರ್ನ್ ಆಗಿದೆ" ಎಂದು ಹೇಳುತ್ತಾರೆ.

ಇಂದು ಅಂತರ್ಜಾಲದಿಂದ ಸುಲಭವಾಗಿ ಪೋರ್ನ್ ಅನ್ನು ಪ್ರವೇಶ ಮಾಡಲು ಸಾಧ್ಯವಾಗಿರುವುದರಿಂದ, ಅದನ್ನು ನೋಡುವ ಜನರ ಮೆದುಳಿನಲ್ಲಿ ಅತಿಯಾದ ಪ್ರಚೋದನೆ(overstimulate) ಮತ್ತು ಅಧಿಕ ಡೋಪಮೈನ್(dopamine) ಬಿಡುಗಡೆಯಾಗುವ ಕಾರಣ ಪರಾಕಾಷ್ಠೆಯಲ್ಲಿ ಸಮಸ್ಯೆ, ಮಾನಸಿಕ ಅಸ್ವಸ್ಥತೆ(mental illness), ಒತ್ತಡ(stress), ಆತಂಕ(anxiety), ಖಿನ್ನತೆ(depression), ಕಡಿಮೆ ಲೈಂಗಿಕ ತೃಪ್ತಿ(less sexual satisfaction), ಲೈಂಗಿಕ ಅಭಿರುಚಿಯಲ್ಲಿ ಬದಲಾವಣೆ(change in sexual taste), ಕಳಪೆ ಗುಣಮಟ್ಟದ ಜೀವನ(poor quality life), ಪ್ರೇರಣೆಯ ಕೊರತೆ(lack of motivation), ಕಡಿಮೆ ಆತ್ಮ ವಿಶ್ವಾಸ(low self confidence) ಮತ್ತು ಮೆದುಳಿನ ಮಂಜು(brain fog) ಅಂದರೆ ಗಮನ ಹರಿಸಲು ಸಾಧ್ಯವಾಗದಂತಹ ಸಮಸ್ಯೆಯನ್ನು ಪ್ರತಿದಿನ ಅನುಭವಿಸುತ್ತಿದ್ದಾರೆ.

ಇಂದು ಪೋರ್ನ್ ನೋಡುಗರು ತಮ್ಮ ಸಾಮಾಜಿಕ ಆತಂಕ(social anxiety), ಕಡಿಮೆ ಸ್ವಾಭಿಮಾನ(low self esteem), ಏಕಾಗ್ರತೆಯ ಸಮಸ್ಯೆ(concentration problem), ಪ್ರೇರಣೆಯ ಕೊರತೆ(lack of motivation), ಖಿನ್ನತೆಯ(depression) ರೀತಿಯ ಸಮಸ್ಯೆಯಿಂದ ಹೊರಬರಲು ಮಾತ್ರೆಯನ್ನು ನುಂಗುತ್ತಿದ್ದಾರೆ.

ಇದನ್ನು ಓದಿ: 21 ದಿನಗಳಲ್ಲಿ ಎಲ್ಲರನ್ನು ಹಿಂದೆ ತನ್ನಿ(monk mode)

2. Why people love porn and why porn is so addictive

why do human love watch porn in kannada
porn addictive

ಇದು ತುಂಬಾ ಸಾಮಾನ್ಯವಾಗಿದೆ. ಜನರು ಪೋರ್ನ್ ಅನ್ನು ಬೇಸರದ ಸಮಯದಿಂದ ಹೊರಬರಲು, ಒಂಟಿತನದಿಂದ ದೂರವಿರಲು, ಲೈಂಗಿಕ ಹತಾಶೆಗೆ ಇರುವ ಪರಿಹಾರದ ರೀತಿ ನೋಡುತ್ತಾರೆ. ಇದರಲ್ಲಿ ಪೋರ್ನ್ ನೋಡುವಾಗ ಅವರು ತಮ್ಮ ಬದುಕಿನ ಸಮಸ್ಯೆಯನ್ನು ಮರೆತುಬಿಡುತ್ತಾರೆ ಮತ್ತು ಉತ್ಸಾಹದಿಂದ ಡೋಪಮೈನ್ ಅಧಿಕ ಮಾತ್ರದಲ್ಲಿ ಬಿಡುಗಡೆಯಾಗುತ್ತದೆ. ಇದರಿಂದ ಭವ್ಯವಾದ(plasurable) ಅನುಭವವಾಗುತ್ತದೆ.

ಮೆದುಳಿನ ಜೀವಕೋಶಗಳಿಗೆ ಈ ಅನುಭವವಾಗುತ್ತದೆ ಮತ್ತು ನ್ಯೂರೋಪ್ಲಾಸ್ಟಿಸಿಟಿ(neuroplasticity) ಬದಲಾವಣೆಯಾಗಲು ಪ್ರಾರಂಭವಾಗುತ್ತದೆ. ಇದರಿಂದ ನಾವು ನಮ್ಮ ಇಂದ್ರಿಯಗಳಿಗೆ(senses) ಇನ್ನಷ್ಟು ಭವ್ಯವಾದ ಅನುಭವವನ್ನು ನೀಡಲು ಸಮಯದ ಜೊತೆಗೆ ವಿವಿಧ ರೀತಿಯ ಕೆಟಗರಿಯ ಪೋರ್ನ್ ನೋಡಲು ಪ್ರಾರಂಭಿಸುತ್ತೇವೆ. ಮೆದುಳಿಗೆ ಆ ಹಳೆಯ ಪೋರ್ನ್ ವೀಡಿಯೋದಿಂದ ಪ್ರಚೋದನೆ ಸಿಗುವುದಿಲ್ಲ. ಹೀಗಾಗಿ ತೀವ್ರ ಹಾರ್ಡ್ಕೋರ್(extream hardcore) ಇರುವ ಪೋರ್ನ್ ಅನ್ನು ನೋಡಲು ಪ್ರಾರಂಭಿಸುತ್ತಾರೆ.

ಇದನ್ನು ಓದಿ: 30 ದಿನದಲ್ಲಿ ನಿಮ್ಮ ಜೀವನವನ್ನು ಬದಲಿಸಿಕೊಳ್ಳುವುದು ಹೇಗೆ?

3. Benefits of not watching porn

not ejaculating benefits in kannada
benefits of no porn

ಒಬ್ಬ ವ್ಯಕ್ತಿ ಅಧಿಕ ಪೋರ್ನ್ ನೋಡುತ್ತಿರುವುದರಿಂದ ಅವನಿಗೆ ನಿಮಿರುವಿಕೆಯಲ್ಲಿ(erection) ಸಮಸ್ಯೆಯಾಗಲು ಪ್ರಾರಂಭವಾಯಿತು ಮತ್ತು ಈ ಸ್ಥಿತಿಯೂ ಪ್ರತಿದಿನವೂ ಕೆಟ್ಟದಾಗುತ್ತಿತು. ಇದರಿಂದ ಆತ ಖಿನ್ನತೆಗೆ ಬಂದಿದ. ಆದರೆ ಒಂದು ದಿನ ಅವನ್ನು ಹಸ್ತಮೈಥುನ ಮತ್ತು ಪೋರ್ನ್ ಅನ್ನು ಬಿಡುವ ಬಗ್ಗೆ ಯೋಚಿಸಿದ. ಈ ನಿರ್ಧಾರ ಅವನಿಗೆ ಸುಲಭವಿರಲಿಲ್ಲ. ಆದರೆ ಸ್ವಲ್ಪ ತಿಂಗಳ ನಂತರ ಅವನು ಈ ಹವ್ಯಾಸದಿಂದ ಗೆಲುವನ್ನು ಸಾಧಿಸಿದ ಮತ್ತು ಸಂಪೂರ್ಣವಾಗಿ ಗುಣಮುಖನದ. ಅತಿ ಕಡಿಮೆ ಪೋರ್ನ್ ನೋಡುವ ಇಲ್ಲ ಪೋರ್ನ್ ನೋಡದೆ ಇರುವವರು ಇತರರ ಜೊತೆ ಬೆರೆಯುವ ಸಂಭವತೆ ಹೆಚ್ಚಿರುತ್ತದೆ ಎಂದು ಲೇಖಕರು ಹೇಳುತ್ತಾರೆ ಮತ್ತು ಅವರ ಆತ್ಮಗೌರವವು(self esteem) ಕೂಡ ಒಂದು ಮಟ್ಟದಲ್ಲಿ ಚೆನ್ನಾಗಿರುತ್ತದೆ.

ಇಂಥವರು ಹಾಸ್ಯಪ್ರಜ್ಞೆ(sense of humar) ಮತ್ತು ಭಾವನಾತ್ಮಕ ಪ್ರಬುದ್ಧತೆಯಲ್ಲೂ ತುಂಬಾ ಚೆನ್ನಾಗಿರುತ್ತಾರೆ. ಇವರ ಬದುಕಿನಲ್ಲಿ ಖಿನ್ನತೆ ಅಥವಾ ಕಡಿಮೆ ಆತ್ಮವಿಶ್ವಾಸ ಹೊಂದಿರುವ ಬದಲು ಅಧಿಕ ಸಕಾರಾತ್ಮಕ ಮತ್ತು ಆಶಾವಾದಿಯಾಗಿ(optimistic) ಇರುತ್ತಾರೆ. ಸಾಮಾಜಿಕ ಆತಂಕ(social anxity) ಇರದೇ ಇರುವುದು, ಜನರ ಕಣ್ಣಿಗೆ ಕಣ್ಣಿಟ್ಟು ಮಾತನಾಡುವುದು, ಒಂದು ವಸ್ತುವಿನ ಮೇಲೆ ಗಮನ ಹರಿಸಲು, ಮನಸ್ಸು ಚುರುಕು ಇರಲು, ಹೆಂಗಸರ ಜೊತೆ ಪೂರ್ತಿಯಾಗಿ ಮಾತನಾಡಲು ಇವರಿಗೆ ಕಷ್ಟವಾಗುವುದಿಲ್ಲ. ಪೋರ್ನ್ ಬಿಡುವುದು ಅಸಾಧ್ಯವಿಲ್ಲ ಎಂದು ಲೇಖಕರು ಹೇಳುತ್ತಾರೆ. ಇದನ್ನು ಬಿಡಲು ಜಗತ್ತಿನಾದಂತ ನೋಫಪ್(nofap) ರೀತಿಯ ಅನೇಕ ಹವ್ಯಾಸ ಮತ್ತು ಅಭ್ಯಾಸದಿಂದ ಮಾಡಲಾಗುತ್ತಿದೆ.

ಇದನ್ನು ಓದಿ: ಯಶಸ್ವಿಯಾಗಲು ಸ್ವಯಂ ಶಿಸ್ತಿನ 4 ಅಭ್ಯಾಸಗಳು

4. How to quit porn

how to quit a pornography addiction in kannada
quit porn

ನೀವು ಪೋರ್ನ್ನಿಂದ ಹೊರಗೆ ಬರಲು ಲೇಖಕರು ಕೆಲವು ಹಂತ ಮತ್ತು ಸಲಹೆಗಳನ್ನು ತಿಳಿಸಿದ್ದಾರೆ. ಅದರಲ್ಲಿ ಮೊದಲನೆಯದಾಗಿ,

1. Reset your brain

ನೀವು ಒಂದು ತಿಂಗಳಿಗಾದರೂ ನಿಮ್ಮ ಮನ್ನಸ್ಸನ್ನು ಮರುಹೊಂದಿಸಿಕೊಳ್ಳಬೇಕು. ಈ ಒಂದು ತಿಂಗಳು ಲೈಂಗಿಕ ವಸ್ತುಗಳಿಂದ ದೂರವಿರಬೇಕು. ಅಂದರೆ ಪೋರ್ನ್ ಮತ್ತು ಹಸ್ತಮೈಥುನವಾಗಿದೆ. ನೀವು ಇದರಲ್ಲಿ ಸ್ಥಿರವಾಗಿ(consistent) ಇರಬೇಕು. ಏಕೆಂದರೆ ಇದು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ. ಈ ಚೇತರಿಕೆಯ ಅವಧಿಯನ್ನು ಕೆಲವರು ರಿಬೂಟಿಂಗ್(rebooting) ಎನ್ನುತ್ತಾರೆ. ಏಕೆಂದರೆ ಈ ಸಮಯದಲ್ಲಿ ನೀವು ಪೋರ್ನ್ ಹೊರತುಪಡಿಸಿ ಏನೆಂದು ತಿಳಿಯುತ್ತೀರಾ. ಇದರಿಂದ ನಿಮ್ಮ ಮನಸ್ಸು ಮುಚ್ಚಿ ಮತ್ತೊಮ್ಮೆ ಪುನರಾರಂಭವಾಗುತ್ತದೆ.

ಇದನ್ನು ಓದಿ: ಸಂಪತ್ತು, ಆರೋಗ್ಯ ಮತ್ತು ಯಶಸ್ಸಿಗೆ 6 ಬೆಳಗಿನ ಅಭ್ಯಾಸಗಳು

2. Remove all porn

ಇದಕ್ಕಾಗಿ ನೀವು ನಿಮ್ಮ ಫೋನ್, ಲ್ಯಾಪ್ಟಾಪ್ ಮತ್ತು ಗಣಕಯಂತ್ರದಲ್ಲಿರುವ(computer) ಪೋರ್ನ್ ಕಲೆಕ್ಷನ್ ಅನ್ನು ಅಳಿಸಬೇಕು. ಇದು ನಿಮ್ಮ ಬದುಕನ್ನು ಬದಲಿಸಲು ಗಂಭೀರವಾಗಿದ್ದೀರಾ ಎಂದು ಮೆದುಳಿಗೆ ತಿಳಿಸುತ್ತದೆ.

3. Move your furniture

ನೀವು ಪೋರ್ನ್ ಅನ್ನು ಖಾಸಗಿ ಜಾಗದಲ್ಲಿ ನೋಡುತ್ತಿದ್ದರೆ ನಿಮ್ಮ ಗಣಕಯಂತ್ರವನ್ನು ಪ್ರತಿಯೊಬ್ಬರು ಇರುವ ಜಾಗದಲ್ಲಿ ಇರಿಸಿ. ಅಲ್ಲಿ ನಿಮಗೆ ಪೋರ್ನ್ ನೋಡಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಫೋನ್ನಲ್ಲಿ ನೋಡುತ್ತಿದ್ದರೆ, ನಿಮಗೆ ನೋಡಲು ಸಾಧ್ಯವಾಗದಂತಹ ಜಾಗಗಳನ್ನು ಕೂರಲು ಆರಿಸಿಕೊಳ್ಳಿ.

ಇದನ್ನು ಓದಿ: ಕಡಿಮೆ ಮಾತನಾಡುವ ಜನರ 5 ಗುಣಗಳು

4. Consider a porn blocker

ಪ್ರಾರಂಭದಲ್ಲಿ ನೀವು ಪೋರ್ನ್ ಬ್ಲಾಕರ್ ಮತ್ತು ಜಾಹೀರಾತು ಬ್ಲಾಕರ್ ಅನ್ನು ಬಳಸಬಹುದು. ಇದರಿಂದ ನೀವು ಪೋರ್ನ್ ಸೈಟ್ಗಳಿಗೆ ಸುಲಭವಾಗಿ ಪ್ರವೇಶ ಮಾಡಲು ಸಾಧ್ಯವಾಗುವುದಿಲ್ಲ.

5. Consider a day counter

ಆನ್ಲೈನ್ನಲ್ಲಿ ಅನೇಕ ವೇದಿಕೆಗಳು "free day counter" ಅನ್ನು ನೀಡುತ್ತವೆ. ನೋಫಪ್(nofap) ರೀತಿಯ ವೆಬ್ಸೈಟ್ಗಳಲ್ಲಿ ನೀವು ಗ್ರಾಫ್ ರಚಿಸಬಹುದು. ಇದು ನಿಮ್ಮ ಗುರಿ ಕಡೆಗಿನ ಪ್ರಗತಿಯನ್ನು ತೋರಿಸುತ್ತದೆ. ಇದು ಸ್ವಯಂ ಆಗಿ ನವೀಕರಿಸುತ್ತಿರುತ್ತದೆ(update).

6. Keep journal

ನೀವು ಒಂದು ಪತ್ರಿಕೆಯನ್ನು ರಚಿಸಿ ಟ್ರ್ಯಾಕ್ ಮಾಡುತ್ತಿರಬಹುದು. ಇದು ಸುಲಭವಾದ ಪ್ರಕ್ರಿಯೆಯಾಗಿಲ್ಲ. ಇದರಲ್ಲಿ ಕೆಲವು ದಿನ ಸುಲಭವಿದರೆ, ಇನ್ನು ಕೆಲವು ದಿನಗಳು ಕಷ್ಟವಿರುತ್ತದೆ. ನೀವು ಒಬ್ಬರೇ ಇದ್ದಾಗ ನಿಮ್ಮ ಮೆದುಳಿನಲ್ಲಿ ಬರುವ ಯೋಚನೆ ಮತ್ತು ಒತ್ತಾಯಿಸುವಿಕೆಯನ್ನು(urges) ಬರೆದಿಟ್ಟುಕೊಳ್ಳಬಹುದು ಮತ್ತು ಎಷ್ಟು ದೊಡ್ಡ ಪ್ರಯಾಣವನ್ನು ಪ್ರಾರಂಭಿಸಿದ್ದೀರ ಎಂಬುದನ್ನು ತಿಳಿಯಬಹುದು.

ಇದನ್ನು ಓದಿ: ನೀವು ಯೋಚಿಸುವುದಕ್ಕಿಂತ ಹೆಚ್ಚು ಆಕರ್ಷಕವಿರುವ 13 ರಹಸ್ಯ ಚಿಹ್ನೆಗಳು

7. Exercise

ಒತ್ತಾಯಿಸುವಿಕೆಯನ್ನು ನಾಶ ಮಾಡಲು ದೈಹಿಕ ವ್ಯಾಯಾಮ ಉತ್ತಮವಾಗಿದೆ. ಇದರಿಂದ ನೀವು ನಿಮ್ಮ ಆತ್ಮವಿಶ್ವಾಸ ಮತ್ತು ಯುಕ್ತತೆಯನ್ನು(fitness) ಸುಧಾರಿಸಿಕೊಳ್ಳಬಹುದು. ನೀವು 40 ಕ್ಕಿಂತ ಕಡಿಮೆ ವಯಸ್ಸಿನವರಾಗಿದರೆ, ಇದು ನಿಮ್ಮ ನಿಮಿರುವಿಕೆಯಲ್ಲೂ ಸಹಾಯ ಮಾಡುತ್ತದೆ.

8. Get outside

ಪ್ರಕೃತಿ, ನಮ್ಮ ಮೆದುಳಿಗೆ ಉತ್ತಮವಾಗಿದೆ. ಇದು ನಮ್ಮ ಸೃಜನಶೀಲತೆ ಮತ್ತು ಸಮಸ್ಯೆ ಪರಿಹರಿಸುವ(problem solving) ಸಾಮರ್ಥ್ಯವನ್ನು ಮೇಲೆತ್ತುತ್ತದೆ. ಮನೆಯಲ್ಲೇ ಇರುವುದರಿಂದ ಆ ಹಿಂದಿನ ಆವರ್ತಕ್ಕೆ ಹೋಗುವ ಸಂಭವತೆ ಅಧಿಕವಿರುತ್ತದೆ. ಹೀಗಾಗಿ ಹೊರಗೆ ಹೋಗಿ ಇದರಿಂದ ನಿಮ್ಮ ಮನಸ್ಸು ಶಾಂತವಾಗಿರುತ್ತದೆ.

9. Socializing

ನೀವು ಡಿಜಿಟಲ್, ಕೃತಕ(artificial) ಸ್ನೇಹಿತರನ್ನು ಮಾಡಿಕೊಳ್ಳುವ ಬದಲು ನಿಜವಾದ ಜನರ ಜೊತೆ ಸಂಬಂಧವನ್ನು ಬೆಳೆಸಿಕೊಳ್ಳಿ. ನಿಮ್ಮ ಮತ್ತು ಇತರರ ಬಗ್ಗೆ ಅಧಿಕ ತಿಳಿದುಕೊಳ್ಳಿ. ಇತರ ವ್ಯಕ್ತಿಯನ್ನು ಲೈಂಗಿಕ ದೃಷ್ಟಿಕೋನದಿಂದ ನೋಡುವ ಬದಲು ಒಳ್ಳೆಯ ಸಂಬಂಧವನ್ನು ನಿರ್ಮಿಸಿ.

ಇದನ್ನು ಓದಿ: "Good Vibes Good Life" ಪುಸ್ತಕದ ವಿವರಣೆ

10. Meditation

ನಿಮ್ಮ ಮನಸ್ಸು ಮತ್ತು ಯೋಚನೆಗಳ ಮೇಲೆ ನಿಯಂತ್ರಣವನ್ನು ಸಾಧಿಸಲು ಧ್ಯಾನವು ಉತ್ತಮವಾಗಿದೆ. ಇದು ಒಂದೇ ನಿಮ್ಮ ಈ ಪಯಣದಲ್ಲಿ ಅಧಿಕ ಸಹಾಯ ಮಾಡುತ್ತದೆ.

11. Creative pursuits, hobbies and life purpose

ನೀವು ಅದೇ ರೀತಿಯಲ್ಲಿ ಬದುಕಿ ನಿಮ್ಮ ಬದುಕು ಬದಲಾಗುತ್ತದೆ ಎಂದು ನಂಬಬೇಡಿ. ನೀವು ಪೋರ್ನ್ ಅನ್ನು ಯಾವ ಸಮಯದಲ್ಲಿ ನೋಡುತ್ತೀರಾ ಎಂಬುದನ್ನು ತಿಳಿಯಬೇಕು ಮತ್ತು ಇದನ್ನು ಒಳ್ಳೆಯ ಸಮಯದ ಜೊತೆಗೆ ಬದಲಿಸಬೇಕು. ಇದರಿಂದ ನೀವು ಪೋರ್ನ್ ನೋಡುವುದನ್ನು ಬಿಟ್ಟು, ಸೃಜನಶೀಲ ಹವ್ಯಾಸದ ಕಡೆಗೆ ಗಮನ ಹರಿಸಬಹುದು. ನಿಮಗೆ ಖುಷಿ ಕೊಡುವ, ಪೋರ್ನ್ ಹವ್ಯಾಸದಿಂದ ಸಾಧ್ಯವಾಗಿಲ್ಲದ ಕನಸು ಮತ್ತು ಉತ್ಸಾಹವನ್ನು(passion) ಫಾಲೋ ಮಾಡಿ. ಇದರಿಂದ ನೀವು ಒಂದು ಉದ್ದೇಶಪೂರ್ವಕ ಬದುಕನ್ನು(purposful life) ಬದುಕುತ್ತೀರಿ. ನಿಮ್ಮ ಬದುಕನ್ನು ಕೃತಕ ವಸ್ತುಗಳ ಮೇಲೆ ವ್ಯರ್ಥ ಮಾಡಬೇಡಿ. ಏಕೆಂದರೆ, "you have only one life". ನಿಮ್ಮ ಕನಸನ್ನು ಪೂರ್ಣಗೊಳಿಸಿ ಬದುಕಿನ ಉದ್ದೇಶವನ್ನು ಸಾಧಿಸಿ.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

No Comments