Website designed by @coders.knowledge.

Website designed by @coders.knowledge.

14 Assets that make you Financially Free | ಆರ್ಥಿಕವಾಗಿ ಸ್ವತಂತ್ರಗೊಳಿಸುವ ಸ್ವತ್ತುಗಳು

Watch Video

"rich dad poor dad" ಪುಸ್ತಕದಲ್ಲಿ ಲೇಖಕ ರಾಬರ್ಟ್ ಕಿಯೋಸಾಕಿ(robert kiyosaki) ಇಬ್ಬರು ತಂದೆಯ ಬಗ್ಗೆ ತಿಳಿಸಿದ್ದಾರೆ. ಒಬ್ಬರು ರಿಚ್ ಡ್ಯಾಡ್ ಆಗಿದ್ದರೆ ಮತ್ತೊಬ್ಬರು ಪೂರ್ ಡ್ಯಾಡ್ ಆಗಿದ್ದರು. ರಿಚ್ ಡ್ಯಾಡ್ ಶ್ರೀಮಂತರಾಗಿದ್ದರು ಮತ್ತು ಪೂರ್ ಡ್ಯಾಡ್ ಬಡವರಾಗಿದ್ದರು. ಇವರಿಬ್ಬರಲ್ಲಿ ಅಧಿಕ ವ್ಯತ್ಯಾಸ ಇರುವುದರಿಂದ ರಿಚ್ ಡ್ಯಾಡ್ ಶ್ರೀಮಂತರಾಗಿದ್ದರು ಮತ್ತು ಪೂರ್ ಡ್ಯಾಡ್ ಬಡವರಾಗಿದ್ದರು. ಅದರ ಕಾರಣವೇನೆಂದರೆ ಪೂರ್ ಡ್ಯಾಡ್ ಯಾವಾಗಲೂ ಅವರ ಸಂಬಳದ ಮೇಲೆ ಜೀವಿಸುತ್ತಿದ್ದರು ಮತ್ತು ಸಂಬಳವನ್ನು ಹೆಚ್ಚಿಸುವ ಬಗ್ಗೆ ಗಮನಹರಿಸುತ್ತಿದ್ದರು. ಅದೇ ರಿಚ್ ಡ್ಯಾಡ್ ಶ್ರೀಮಂತರಾಗಿರಲು ಕಾರಣವೆಂದರೆ ಅವರು ಯಾವಾಗಲೂ ಅಸೆಟ್(asset) ನಿರ್ಮಿಸಲು ಯೋಚಿಸುತ್ತಿದ್ದರು. ಅವರ ಗಮನ ಯಾವಾಗಲೂ ಅಸೆಟ್ ಮಾಡುವ ಮೇಲೆ ಇರುತ್ತಿತ್ತು.

ಇದನ್ನೇ ರಾಬರ್ಟ್ ಕಿಯೋಸಾಕಿ ಅವರು ತಮ್ಮ ಬದುಕಿನಲ್ಲಿ ಅನ್ವಯಿಸಿಕೊಂಡರು. ಇದರಿಂದಲೇ ಇಂದು ಇಷ್ಟು ಶ್ರೀಮಂತರಾಗಿದ್ದಾರೆ, ಅವರು ಇಂದು ಮನೆಯಲ್ಲೇ ಕೂತು ತಮ್ಮ ಇಡೀ ಬದುಕನ್ನು ಜೀವಿಸಬಹುದು. ಇದು ಏಕೆಂದರೆ ಅವರು ಜೀವನದಲ್ಲಿ ಅಸೆಟ್ ನಿರ್ಮಿಸುವ ಮೇಲೆ ಗಮನ ಹರಿಸಿದರು ಹೊರತು ಸಂಬಳವನ್ನು ಹೆಚ್ಚಿಸುವ ಮೇಲೆ ಅಲ್ಲ.

ಅಸೆಟ್ ವ್ಯಾಖ್ಯಾನವನ್ನು ರಾಬರ್ಟ್ ಕಿಯೋಸಾಕಿ ಬೇರೆ ರೀತಿಯಲ್ಲಿ ತಿಳಿಸುತ್ತಾರೆ. ನಿಮ್ಮ ಜೇಬಿನಲ್ಲಿ ಹಣವನ್ನು ತಂದರೆ ಅದು ಅಸೆಟ್ ಆಗಿದೆ, ನಿಮ್ಮ ಜೇಬಿನಿಂದ ಹಣವು ಹೋದರೆ ಅದು ಲಿಯಾಬಲಿಟಿ(liability) ಆಗಿದೆ. ಈ ಲೇಖನದಲ್ಲಿ ನಾವು ಆ 14 ಅಸೆಟ್ ಬಗ್ಗೆ ತಿಳಿಸಲಿದ್ದೇವೆ. ಪ್ರಾರಂಭದ ಹತ್ತು ಅಸೆಟ್ ಸಾಮಾನ್ಯ ಅಸೆಟ್ ಆಗಿದೆ. ಇವುಗಳ ಬಗ್ಗೆ ಅನೇಕರು ಮಾತನಾಡುತ್ತಾರೆ ಮತ್ತು ಇವುಗಳಲ್ಲಿ ಹೂಡಿಕೆ ಮಾಡಲು ಹಣದ ಅವಶ್ಯಕತೆ ಇದೆ. ಆದರೆ ಅನೇಕರಿಗೆ ಹಣ ಹೂಡಿಕೆ ಮಾಡದೇ ಇರುವ ಅಸೆಟ್ ಬಗ್ಗೆ ತಿಳಿದಿರುವುದಿಲ್ಲ. ಅವರಿಗೆ ಈ ಲೇಖನ ಉಪಯುಕ್ತವಾಗಲಿದೆ. ಏಕೆಂದರೆ 10 ಅಸೆಟ್ ನಂತರ ತಿಳಿಸುವ ಎಲ್ಲಾ ಅಸೆಟ್ ಉಚಿತವಾಗಿದ್ದು, ನಿಮ್ಮ ಹತ್ತಿರ ಇರುತ್ತದೆ ಮತ್ತು ಶ್ರೀಮಂತರನ್ನಾಗಿ ಮಾಡುತ್ತದೆ.

ಇದನ್ನು ಓದಿ: ಷೇರು ಮಾರುಕಟ್ಟೆಯಿಂದ ಉತ್ತಮ ರಿಟರ್ನ್ಸ್ ಪಡೆಯುವುದು ಹೇಗೆ?

1. Business

is business is a asset in kannada
business

ಒಂದು ತರಗತಿಯಲ್ಲಿ ಟೀಚರ್ ಒಬ್ಬ ವಿದ್ಯಾರ್ಥಿಯನ್ನು ನಿಲ್ಲಿಸಿ, "ಅಪಾಯ(risk) ಎಂದರೆ ಏನು" ಎಂದು ಕೇಳುತ್ತಾರೆ. ಅದಕ್ಕೆ ಆತ "ಅಪಾಯವೆಂದರೆ ವ್ಯಾಪಾರ(business) ಮಾಡುವುದು" ಎನ್ನುತ್ತಾನೆ. ಅದಕ್ಕೆ ಆ ತರಗತಿಯ ಎಲ್ಲಾ ಮಕ್ಕಳು ಸರಿಯೆನ್ನುತ್ತಾರೆ. ಆದರೆ ಆ ಟೀಚರ್ ಇದಕ್ಕೆ ಒಂದು ಆಸಕ್ತಿಕರ ವಿಷಯವನ್ನು ತಿಳಿಸುತ್ತಾರೆ. ಅವರು, "ನಾನು ಈ ಪ್ರಶ್ನೆಯನ್ನು ವಾಣಿಜ್ಯೋದ್ಯಮಿಗೆ(entrepreneur) ಕೇಳಿದಾಗ, ಒಂದು ಹಣದ ಮೂಲದಿಂದ ಪೂರ್ತಿ ಜೀವನವನ್ನು ಸಾಗಿಸುವುದು ಅಪಾಯವಾಗಿದೆ ಎಂದು ಹೇಳಿದರು. ಅಂದರೆ ಒಂದು ಕೆಲಸದಲ್ಲಿ ನಿಮ್ಮ ಪೂರ್ತಿ ಜೀವನವನ್ನು ನೀಡುವುದಾಗಿದೆ. ಇದರಲ್ಲಿ ನೀವು ಎಲ್ಲಿಯವರೆಗೂ ಕೆಲಸ ಮಾಡುತ್ತಿರುತಿರೋ ಹಣವು ಬರುತ್ತಿರುತ್ತದೆ, ಕೆಲಸ ಮಾಡುವುದನ್ನು ನಿಲ್ಲಿಸಿದ್ದಾರೆ ಹಣ ಬರುವುದು ನಿಲ್ಲುತ್ತದೆ. ನಿಮ್ಮ ಆರೋಗ್ಯ ಕೆಟ್ಟರು ಹಣ ಬರುವುದು ನಿಲ್ಲುತ್ತದೆ. ಹಾಗಿದ್ದರೆ ಇದಕ್ಕಿಂತ ಅಪಾಯಕಾರಿ ಯಾವುದಿರಬಹುದು.

ತುಂಬಾ ಶಿಕ್ಷಣ ಇರದ, ಅಸಾಧಾರಣವಿಲ್ಲದ ವ್ಯಕ್ತಿಗಳು ಮನೆಯಲ್ಲೇ ಕೂತು ಅಧಿಕ ಹಣವನ್ನು ಗಳಿಸುತ್ತಾರೆ. ಇದು ಏಕೆಂದರೆ ಅವರ ಒಂದು ಅಡ್ಡ ವ್ಯಾಪಾರವಿರುತ್ತದೆ(side business). ಅದು ಅವರಿಗೆ ಯಾವಾಗಲೂ ಹಣವನ್ನು ತಂದು ಕೊಡುತ್ತಿರುತ್ತದೆ. ಹೀಗಾಗಿ ನಿಮ್ಮ ಮೊದಲ ಅಸೆಟ್ ವ್ಯಾಪಾರವನ್ನು ಪ್ರಾರಂಭಿಸುವುದಾಗಿದೆ.

2. Real estate

is buying a real estate an asset or a liability in kannada
real estate

ನಮ್ಮ ಭೂಮಿಯಲ್ಲಿರುವ ಈ ನೆಲವನ್ನು ಯಾವುದೇ ಶ್ರೀಮಂತ ವ್ಯಕ್ತಿ ಹೊಸದಾಗಿ ನಿರ್ಮಿಸಲು ಸಾಧ್ಯವಿಲ್ಲ. ಜನಸಂಖ್ಯೆ ಹೆಚ್ಚಿದಷ್ಟು ಭೂಮಿಯ ಮೌಲ್ಯವು ಹೆಚ್ಚುತ್ತದೆ. ಭೂಮಿಯು ಒಂದು ಲಿಮಿಟೆಡ್ ವಸ್ತುವಾಗಿದೆ, ಆದರೆ ಇದರ ಬೇಡಿಕೆ ಹೆಚ್ಚುತ್ತಲೇ ಇರುತ್ತದೆ. ಇದು ಭೂಮಿಯ ಮೌಲ್ಯವೂ ದೀರ್ಘವದಿಯಲ್ಲಿ ಹೇಗೆ ಬೆಳೆಯುತ್ತದೆ ಎಂದು ತಿಳಿಸುತ್ತದೆ. ಹೀಗಾಗಿ ಭೂಮಿಯ ಮೇಲೆ ಹೂಡಿಕೆ ಮಾಡುವುದು ಒಂದು ಸುರಕ್ಷಿತ(safe) ಹೂಡಿಕೆಯಾಗಿದೆ.

ಜಾನ್ ಡಿ ರಾಕ್ಫೆಲ್ಲರ್ನಂತ(john d rockefeller) ಆಯಿಲ್ ಟೈಕುನ್ ಮತ್ತು ಇತರ ಅನೇಕ ಮಿಲಿನಿಯರ್ಗಳು ಈ ರೀತಿ ಹೇಳುತ್ತಾರೆ, "ರಿಯಲ್ ಎಸ್ಟೇಟ್ನಿಂದ ಶ್ರೀಮಂತರದವರ ಸಂಖ್ಯೆ ಇತಿಹಾಸದಲ್ಲಿ ಯಾವುದೇ ಅಸೆಟ್ನಿಂದ ಸಾಧ್ಯವಾಗಿಲ್ಲ". ಹೀಗಾಗಿ ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡುವುದು ನಿಮಗೆ ಉಪಯುಕ್ತವಾಗಿದೆ. ಸ್ಟಾಕ್ನಿಂದ ಸಿಗುವಷ್ಟು ರಿಟರ್ನ್, ರಿಯಲ್ ಎಸ್ಟೇಟ್ನಿಂದ ಸಿಗದೇ ಇರಬಹುದು. ಆದರೆ ಇದು ಒಂದು ಸುರಕ್ಷಿತ ಹೂಡಿಕೆಯಾಗಿದೆ.

ಇದನ್ನು ಓದಿ: ನಿಷ್ಕ್ರಿಯ ಆದಾಯದ ಮೂಲಗಳು ಯಾವುವು?

3. Paper assets

are financial assets are paper assets in kannada
paper assets

ಸ್ಟಾಕ್, ಬಾಂಡ್ಸ್ ಮತ್ತು ಮ್ಯೂಚುಯಲ್ ಫಂಡ್ಸ್ ಪಶ್ಚಿಮ ದೇಶಗಳಲ್ಲಿ(western countries) ಸ್ಟಾಕ್ ಮಾರ್ಕೆಟ್ ತುಂಬಾ ಪ್ರಸಿದ್ಧವಾಗಿದೆ. ಏಕೆಂದರೆ ಇದರ ಒಳಗೆ ಹೋಗುವುದು ಸುಲಭ ಮತ್ತು ಹೊರಗೆ ಬರುವುದು ಸುಲಭವಾಗಿದೆ. ಇಷ್ಟು ಸುಲಭವಾಗಿರುವುದರಿಂದ ಎಷ್ಟೋ ಬಾರಿ ಜನರು ಇದರಲ್ಲಿ ತಪ್ಪನ್ನು ಮಾಡುತ್ತಾರೆ. ನೀವು ಬುದ್ಧಿವಂತಿಕೆಯಿಂದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಅಧಿಕ ಹಣವನ್ನು ಗಳಿಸಬಹುದು. ನೀವು 20 ರಿಂದ 30 ವರ್ಷದ ಹಿಂದೆ ಕೇವಲ 10 ಸಾವಿರ ರೂಪಾಯಿ ಹೂಡಿಕೆ ಮಾಡಿದ್ದಾರೆ, ಇಂದು ನಿಮಗೆ ಅದರಿಂದ 600 ಕೋಟಿ ಸಿಗುತ್ತಿತ್ತು. ಈ ರೀತಿಯ ರಿಟರ್ನ್ ನಿಮಗೆ ಎಲ್ಲೂ ಸಿಗಲು ಸಾಧ್ಯವೇ ಇಲ್ಲ.

ನೀವು 30 ವರ್ಷದ ಹಿಂದೆ 10 ಸಾವಿರ ಹೂಡಿಕೆ ಮಾಡುವುದು ಕಷ್ಟವೆಂದು ಹೇಳಬಹುದು. ಹಾಗಿದ್ದರೆ ನೀವು 1000 ರೂಪಾಯಿ ಹೂಡಿಕೆ ಮಾಡಿದ್ದರು, ನಿಮ್ಮ ಹತ್ತಿರ 60 ಕೋಟಿ ಇರುತ್ತಿತ್ತು. ಅದೇ ಕೇವಲ 100 ರೂಪಾಯಿ ಹೂಡಿಕೆ ಮಾಡಿದ್ದಾರೆ, ನಿಮ್ಮ ಹತ್ತಿರ 6 ಕೋಟಿ ಇರುತ್ತಿತ್ತು. ಈ ರೀತಿಯ ರಿಟರ್ನ್ ನಿಮಗೆ ಇತರೆ ಯಾವುದೇ ಆಸೆಟ್ನಿಂದ ಸಿಗುವುದಿಲ್ಲ. ಆದರೆ ಇದರಲ್ಲಿ ನೀವು ಯಾವ ಕಂಪನಿಯ ಮೇಲೆ ಹೂಡಿಕೆ ಮಾಡುತ್ತಿದ್ದೀರಾ ಎಂಬುದು ಪ್ರಮುಖವಾಗಿದೆ. ನೀವು ವಾರೆನ್ ಬಫೆಟ್(warren buffet) ರೀತಿಯ ಹೂಡಿಕೆದಾರರಿಂದ ಕಲಿತರೆ ಒಳ್ಳೆಯ ಕಂಪನಿಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸುತ್ತೀರಾ ಮತ್ತು ದೀರ್ಘವಧಿಯಲ್ಲಿ ಒಳ್ಳೆಯ ರಿಟರ್ನ್ ಪಡೆಯುತ್ತೀರಾ. ಎಷ್ಟೋ ಸ್ಟಾಕ್ಗಳಲ್ಲಿ ಡಿವಿಡೆಂಟ್ ಕೂಡ ಸಿಗುತ್ತದೆ.

ಇದನ್ನು ಓದಿ: ಸ್ಟಾಕ್‌ನಲ್ಲಿ ಹೂಡಿಕೆ ಮಾಡುವ ಮೊದಲು ಇವುಗಳು ತಿಳಿದಿರಲಿ

4. Commodities

ನಿಮ್ಮ ಹಣವನ್ನು ಹೂಡಿಕೆ ಮಾಡಲು ರಿಯಲ್ ಎಸ್ಟೇಟ್ ಗಿಂತ ಸುರಕ್ಷಿತ ಇರುವ ಸ್ಥಳವೆಂದರೆ ಅದು ಬಂಗಾರ ಮತ್ತು ಬೆಳ್ಳಿಯ(gold and silver) ಮೇಲೆ ಹೂಡಿಕೆ ಮಾಡುವುದಾಗಿದೆ. ನಾನು ಹುಟ್ಟುವ ಮೊದಲು ಬಂಗಾರವಿತ್ತು, ನಾನು ಸತ್ತ ನಂತರವೂ ಬಂಗಾರವಿರುತ್ತದೆ. ಬಂಗಾರವನ್ನು ಸಾವಿರಾರು ವರ್ಷದಿಂದ ಬಳಸಲಾಗುತ್ತಿದೆ. ಅನೇಕ ಹೂಡಿಕೆದಾರರು ಷೇರು ಮಾರುಕಟ್ಟೆ ಕೆಳಗೆ ಹೋದಾಗ ಬಂಗಾರ ಮತ್ತು ಬೆಳ್ಳಿಯಲ್ಲಿ ಹೂಡಿಕೆ ಮಾಡುತ್ತಾರೆ.

ನೀವು ಷೇರು ಮಾರುಕಟ್ಟೆ ಕೆಳಗೆ ಹೋದಾಗ ಬಂಗಾರ ಮತ್ತು ಬೆಳ್ಳಿಯ ಬೆಲೆ ಮೇಲೋಗುವುದನ್ನು ನೋಡಿರುತ್ತೀರಾ. ಇದು ಏಕೆಂದರೆ ಷೇರು ಮಾರುಕಟ್ಟೆಯ ಮೌಲ್ಯ ಕಡಿಮೆ ಆಗುತ್ತಿದೆ ಎಂದು ಜನರು ತಿಳಿದಾಗ ಬೆಳ್ಳಿಯಲ್ಲಿ ಹೂಡಿಕೆ ಮಾಡುತ್ತಾರೆ. ಏಕೆಂದರೆ ಅದು ತನ್ನ ಮೌಲ್ಯವನ್ನು ಕಡಿಮೆ ಮಾಡಿಕೊಳ್ಳುವುದಿಲ್ಲವೆಂದು ಅವರಿಗೆ ತಿಳಿದಿದೆ. ಇದರಿಂದಲೇ ಬಂಗಾರ ಮತ್ತು ಬೆಳ್ಳಿಯ ಬೆಲೆ ಹೆಚ್ಚುತ್ತಿರುತ್ತದೆ. ಹೀಗಾಗಿ ದೊಡ್ಡ ದೊಡ್ಡ ಹೂಡಿಕೆದಾರರು ತಮ್ಮ ಸ್ವಲ್ಪ ಹಣವನ್ನು ಬಂಗಾರ ಮತ್ತು ಬೆಳ್ಳಿಯಲ್ಲಿ ಹೂಡಿಕೆ ಮಾಡಲು ಹೇಳುತ್ತಾರೆ. ದೀರ್ಘಾವಧಿಗೆ ನೀವು ಇದರಲ್ಲಿ ಹಣ ಹಾಕಿದ್ದಾರೆ, ನಿಮಗೆ ಹಣವು ಹೆಚ್ಚುತ್ತದೆ ಮತ್ತು ಸುರಕ್ಷಿತ ಕೂಡ ಇರುತ್ತದೆ.

5. Cash

ಇದು ನಿಮಗೆ ವಿಚಿತ್ರವೆನ್ನಿಸಬಹುದು. ನಿಮ್ಮ ಹತ್ತಿರ ನಗದು(cash) ಇರುವುದು ತುಂಬಾ ಮುಖ್ಯವಾಗಿದೆ. ಆಪಲ್ನಂತ(apple) ದೊಡ್ಡ ಕಂಪನಿ ನಗದು ಇಟ್ಟುಕೊಂಡಿರುತ್ತದೆ. ಆಪಲ್ ಹತ್ತಿರ ಈಗ 200B$ ನಷ್ಟು ನಗದು ಇದೆ. ಅವರು ಈ ರೀತಿ ಏಕೆ ಮಾಡುತ್ತಾರೆ ಎಂದು ನೀವು ಯೋಚಿಸಬಹುದು. ಇದು ಏಕೆಂದರೆ ಕೆಲವೊಮ್ಮೆ ನೀವು ನಗದು ಮೂಲಕ ಡೀಲ್ ಮಾಡುವ ಅವಕಾಶಗಳು ಬರುತ್ತವೆ. ಇದರಿಂದ ನೀವು ಬೇಗನೆ ವ್ಯವಹಾರ(transaction) ಮಾಡಬಹುದು ಮತ್ತು ಈ ನಗದುವಿನಿಂದ ನಿಮಗೆ ಕಡಿಮೆ ಬೆಲೆಗೆ ವಸ್ತುಗಳು ಸಿಗುತ್ತವೆ. ಈ ರೀತಿಯಲ್ಲಿ ನಗದು ಇರುವುದರಿಂದ ಅಧಿಕ ಲಾಭವಿದೆ. ತುರ್ತು ಪರಿಸ್ಥಿತಿಯಲ್ಲಿ ನಗದು ಬಳಸಬಹುದು. ಹೀಗಾಗಿ ನಗದು ಮೌಲ್ಯವನ್ನು ಮರೆಯಬೇಡಿ.

ಇದನ್ನು ಓದಿ: ಈ ಸರಳ ತಂತ್ರದ ಮೂಲಕ ಮಾರುಕಟ್ಟೆಯನ್ನು ಸೋಲಿಸಿ

6. Equipment and accessories

ನಾನು ಒಂದು ಕಾರನ್ನು ಖರೀದಿಸಿ, ನಾನೇ ಓಡಿಸಿದರೆ ಅದು ನನಗೆ ಒಂದು ಲಿಯಾಬಲಿಟಿ(liability) ಆಗಿದೆ. ಅದನ್ನು ನಿರ್ವಹಿಸಲು ಹಣದ ಖರ್ಚಾಗುತ್ತದೆ. ಅದೇ ಕಾರನ್ನು ನಾನು ಬಾಡಿಗೆಗೆ ನೀಡಿದ್ದಾರೆ, ಆ ಕಾರು ನನಗೆ ಆದಾಯವನ್ನು ಉತ್ಪಾದಿಸಿ ಕೊಡುತ್ತದೆ. ಅದು ಆಗ ಅಸೆಟ್ ಆಗುತ್ತದೆ. ಮದುವೆ ಸಮಾರಂಭಗಳಿಗೆ ಹಲವರು ಜನರೇಟರ್ಗಳನ್ನು ಕೊಡುವುದನ್ನು ನೀವು ನೋಡಿರುತ್ತೀರಾ ಮತ್ತು ಸಮಾರಂಭದಲ್ಲಿ ಬಳಸುವ ಅನೇಕ ವಸ್ತುಗಳನ್ನು ಬಾಡಿಗೆಯ ಮೇಲೆ ತಂದಿರಲಾಗುತ್ತದೆ. ಇದೇ ರೀತಿ ನಿಮಗೆ ಆದಾಯವನ್ನು ಉತ್ಪಾದಿಸಿ ಕೊಡುವ ಉಪಕರಣಗಳನ್ನು(accessories) ನೀವು ಖರೀದಿಸಿದರೆ ಅದು ನಿಮಗೆ ಒಂದು ಅಸೆಟ್ ಆಗಿದೆ.

7. Intellectual property

is intellectual property is an fixed asset in kannada
intellectual property

ಇದರಲ್ಲಿ ನಾಲ್ಕು ಬರುತ್ತದೆ, ಅವೆಂದರೆ ಟ್ರೇಡ್ ಸೀಕ್ರೆಟ್, ಟ್ರೇಡ್ ಮಾರ್ಕ್, ಕಾಪಿರೈಟ್ಸ್ ಮತ್ತು ಪೇಟೇಟ್ಸ್. ನಾನು ಸ್ವಂತವಾಗಿ ಒಂದು ಹಾಡು ಬರೆದು ಅದರ ವೀಡಿಯೋ ಮಾಡಿದರೆ, ಅದನ್ನು ನಾನು ಕಾಪಿರೈಟ್ಗೆ ಹಾಕಬಹುದು. ನೀವು ಯೂಟ್ಯೂಬ್ ಬಳಸುತ್ತಿದ್ದರೆ ಕೆಲವೊಮ್ಮೆ ಕಾಪಿರೈಟ್ ಸಮಸ್ಯೆಯ ಬಗ್ಗೆ ತಿಳಿದೇ ಇರುತ್ತದೆ. ನೀವು ಇತರರ ಮ್ಯೂಸಿಕ್, ವೀಡಿಯೋ ಬಳಸುವುದರಿಂದ ಕಾಪಿರೈಟ್ ಸಮಸ್ಯೆಯು ಬರುತ್ತದೆ. ಕೆಲವೊಮ್ಮೆ ಅವರು ಸ್ಟ್ರೈಕ್ ನೀಡಿ ನಿಮ್ಮ ವೀಡಿಯೋವನ್ನು ಡೌನ್ ಮಾಡಬಹುದು. ಇದರಿಂದ ನಿಮ್ಮ ಆದಾಯದ ಒಂದು ಭಾಗ ಆ ವ್ಯಕ್ತಿಗೆ ಹೋಗುತ್ತದೆ. ಏಕೆಂದರೆ ಅವನು ಅದಕ್ಕೆ ಅರ್ಹನಾಗಿದ್ದಾನೆ. ನೀವು ಈ ರೀತಿಯಲ್ಲಿ ವಿಷಯ ರಚನೆ(content create) ಮಾಡುತ್ತಿದ್ದಾರೆ, ನಿಮಗೆ ಇದು ಆದಾಯವನ್ನು ಉತ್ಪಾದಿಸಿ ಕೊಡುತ್ತದೆ.

ನೀವು ಹೊಸ ತಂತ್ರಜ್ಞಾನ ಮಾಡುತ್ತಿದ್ದರೆ, ಒಂದು ಹೊಸ ಟೈಯರ್ ಆವಿಷ್ಕಾರಿಸುತ್ತಿದ್ದಾರೆ, ಅದನ್ನು ನೀವು ಪೇಟೆಂಟ್ ಮಾಡಿಸಬಹುದು. ಯಾವುದೇ ಕಂಪನಿ ಅದನ್ನು ಬಳಸಲು ನೀವು ಲೈಸೆನ್ಸ್ಸಿಂಗ್ ನೀಡಬಹುದು. ಈ ರೀತಿಯಲ್ಲಿ ತುಂಬಾ ಕಡಿಮೆ, ಆದರೆ ತಮ್ಮ ಪೇಟೆಂಟ್ನಿಂದ ಅಧಿಕ ಹಣ ಗಳಿಸುವವರು ಇದ್ದಾರೆ.

ಇದನ್ನು ಓದಿ: 10 ಹೆಚ್ಚುವರಿ ಆದಾಯದ ಐಡಿಯಾಗಳು

8. Create a brand

ವ್ಯಾಪಾರವನ್ನು ಅನೇಕರು ಮಾಡುತ್ತಾರೆ, ಆದರೆ ಅವರು ಬ್ರಾಂಡ್ ಆಗಿರುವುದಿಲ್ಲ. ನೀವು ಟಾಟಾ ಗ್ರೂಪ್(tata group) ನೋಡಿದರೆ ಟಾಟಾ ಒಂದು ದೊಡ್ಡ ಬ್ರಾಂಡ್ ಆಗಿದೆ. ಟಾಟಾ ಮನಸ್ಸು ಮಾಡಿದರೆ ಯಾವುದೇ ಫೀಲ್ಡ್ ಒಳಗೆ ನುಗ್ಗಬಹುದು. ತಮ್ಮ ಬ್ರಾಂಡ್ ವ್ಯಾಲ್ಯೂನಿಂದ ಅದರಲ್ಲಿ ಅಧಿಕ ಹಣವನ್ನು ಗಳಿಸುತ್ತಾರೆ. ಇದು ನಿಮಗೆ ಅನ್ಯಾಯವೆನ್ನಿಸಬಹುದು. ನೀವು ಬೇಕಾದರೆ ನಿಮ್ಮದೇ ಒಂದು ಲೋಗೋ ಮಾಡಿ, ವ್ಯಾಪಾರವನ್ನು ಪ್ರಾರಂಭಿಸಿ, ಜನರು ಅಷ್ಟು ಆಸಕ್ತಿ ತೋರಿಸುವುದಿಲ್ಲ. ಅದೇ ಟಾಟಾ ಗ್ರೂಪ್ನ ವಸ್ತುಗಳನ್ನು ಜನರು ಖರೀದಿಸುತ್ತಾರೆ. ಏಕೆಂದರೆ ಅದು ಒಂದು ಬ್ರಾಂಡ್ ಆಗಿದೆ. ನೀವು ಕೂಡ ಹಣವನ್ನು ಖರ್ಚು ಮಾಡಿ ಒಂದು ಬ್ರಾಂಡ್ ಮೌಲ್ಯವನ್ನು ನಿರ್ಮಾಣ ಮಾಡಬೇಕು.

ಜಾರಾ(zara) ಎಂಬ ಕಂಪನಿಯ ಮಾಲೀಕ ಜಗತ್ತಿನ ಶ್ರೀಮಂತ ವ್ಯಕ್ತಿಯಲ್ಲಿ ಒಬ್ಬರಾಗಿದ್ದಾರೆ. ಇದು ಏಕೆಂದರೆ ಅವರು ಒಂದು ಗಟ್ಟಿಯಾದ ಬ್ರಾಂಡ್ ಮಾಡಿದ್ದಾರೆ. ಬಟ್ಟೆಯನ್ನು ಮಾರುವವರು ನಿಮಗೆ ಅಧಿಕ ಮಂದಿ ಸಿಗುತ್ತಾರೆ. ಆದರೆ ಜಾರಾ ರೀತಿಯ ಬ್ರಾಂಡ್ ಮಾಡಿ, ಅವರು ಅಧಿಕ ಹಣ ಗಳಿಸಿದರು. ನೀವು ಈ ರೀತಿಯಲ್ಲೇ ಒಂದು ಬ್ರಾಂಡ್ ನಿರ್ಮಾಣ ಮಾಡಿದ್ದಾರೆ, ಅಧಿಕ ಹಣ ಗಳಿಸಬಹುದು.

9. Network

ಪ್ರಾರಂಭದಲ್ಲಿ ದಿರುಬಾಯ್ ಅಂಬಾನಿ ಸ್ವಲ್ಪ ಹಣವನ್ನು ಗಳಿಸಿದಾಗ, ಸ್ವಲ್ಪ ಹಣದೊಂದಿಗೆ ಅವರು 5 ಸ್ಟಾರ್ ಹೋಟೆಲ್ನಲ್ಲಿ ಕಾಫಿ ಕುಡಿಯಲು ಹೋಗುತ್ತಿದ್ದರು. ಈ ರೀತಿ ಏಕೆ ಮಾಡುತ್ತಿದ್ದೀರಿ ಎಂದು ಅವರಿಗೆ ಕೇಳಿದಾಗ, "ನಾನು ಇಲ್ಲಿ ಶ್ರೀಮಂತರು ಹೇಗೆ ಇರುತ್ತಾರೆ" ಎಂಬುದನ್ನು ನೋಡಲು ಬಂದಿದ್ದೇನೆ ಎಂದರು. ಸಾಮಾನ್ಯವಾಗಿ ಅವರು ಅಲ್ಲಿ ಹೋಗಿ ನೆಟ್ವರ್ಕ್ ಮಾಡಲು ಬಯಸಿದ್ದರು. ನಿಮ್ಮ ಹತ್ತಿರ ಒಂದು ಸ್ಟ್ರಾಂಗ್ ನೆಟ್ವರ್ಕ್ ಇದ್ದರೆ, ಅವರು ನಿಮ್ಮ ಜೀವನದಲ್ಲಿ ಮುಂದುವರೆಯಲು ಅಧಿಕ ಸಹಾಯ ಮಾಡುತ್ತಾರೆ.

10. Own content or website

can website be treated as an asset in kannada
website

ಮುಂಚೆ ಏನನ್ನಾದರೂ ಮಾರಲು ನಿಮಗೆ ದೊಡ್ಡ ದೊಡ್ಡ ಅಂಗಡಿಗಳ ಅವಶ್ಯಕತೆ ಇರುತ್ತಿತ್ತು. ಆದರೆ ಇಂದು ನಿಮ್ಮ ಸ್ವಂತ ವೆಬ್ಸೈಟ್ ಮಾಡಿ, ಆನ್ಲೈನಲ್ಲೇ ಅಧಿಕ ವಸ್ತುಗಳನ್ನು ಮಾರಬಹುದು. ಇದರಲ್ಲೂ ಹಣದ ಖರ್ಚು ಆಗುತ್ತದೆ, ಆದರೆ ಇದು ವ್ಯಾಪಾರವನ್ನು ಪ್ರಾರಂಭಿಸಲು ಸುಲಭವಾಗಿದೆ. ವೆಬ್ಸೈಟ್ ಮೂಲಕ ನೀವು ವ್ಯಾಪಾರವನ್ನು ಪ್ರಾರಂಭಿಸಬಹುದು, ಬ್ರಾಂಡ್ ನಿರ್ಮಾಣ ಮಾಡಬಹುದು, ಇದು ನಿಮಗೆ ಅಧಿಕ ಆದಾಯವನ್ನು ಉತ್ಪತ್ತಿ ಮಾಡಿ ಕೊಡುತ್ತದೆ. ನಿಮ್ಮ ವೆಬ್ಸೈಟ್ಗೆ ಟ್ರಾಫಿಕ್ ತಂದರೆ ಆಡ್ಸೆನ್ಸ್ ನಿಂದಲೂ(adsense) ಹಣ ಗಳಿಸಬಹುದು.

ಈಗ ತಿಳಿಸಿದ 10 ಅಸೆಟ್ ಸಾಮಾನ್ಯ ಅಸೆಟ್ ಆಗಿದೆ. ಇವುಗಳ ಬಗ್ಗೆ ನಿಮಗೆ ಅಧಿಕ ಲೇಖನಗಳಲ್ಲಿ ತಿಳಿಯುತ್ತದೆ. ಆರ್ಥಿಕ ತಜ್ಞರು ನಿಮಗೆ ಇದರ ಬಗ್ಗೆಯೇ ತಿಳಿಸುತ್ತಾರೆ. ನಾವು ಈಗ ತುಂಬಾ ಜನ ಮಾತನಾಡದ 4 ಅಸೆಟ್ ಬಗ್ಗೆ ತಿಳಿಸಲಿದ್ದೇವೆ. ನೀವು ಈ ಅಸೆಟ್ ಗಳಿಂದಲೂ ಅಧಿಕ ಹಣ ಗಳಿಸಬಹುದು.

ಎಕರೆಸ್ ಆಫ್ ಡೈಮಂಡ್ಸ್(acres of diamonds) ಎಂಬ ಪುಸ್ತಕದಲ್ಲಿ ಒಬ್ಬ ವ್ಯಕ್ತಿಗೆ ಎಕರೆಯಷ್ಟು ಡೈಮಂಡ್ಸ್ ಬೇಕಾಗಿರುತ್ತದೆ. ಇದಕ್ಕಾಗಿ ಅವನು ವಿವಿಧ ಸ್ಥಳಗಳಿಗೆ ಹೋಗುತ್ತಾನೆ. ಆದರೆ ಕಥೆಯ ಕೊನೆಯಲ್ಲಿ ಡೈಮಂಡ್ ಅವನ ಮನೆಯ ಹಿಂದೆ ಇತ್ತು ಎಂದು ತಿಳಿಯುತ್ತದೆ. ಅವನ ಮನೆಯಲ್ಲಿ ಎಲ್ಲವೂ ಇದ್ದರೂ, ಅವನು ಜಗತ್ತನ್ನು ಸುತ್ತುವುದರಲ್ಲೇ ಕಾಲ ಕಳೆದನು. ನಮಗೂ ಕೆಲವೊಮ್ಮೆ ರಿಯಲ್ ಎಸ್ಟೇಟ್ ತುಂಬಾ ಒಳ್ಳೆಯದು ಎಂದು ಅನಿಸುತ್ತದೆ. ಅದು ನಮ್ಮನ್ನು ಶ್ರೀಮಂತನಾಗಿ ಮಾಡುತ್ತದೆ, ಸ್ಟಾಕ್ ನಮ್ಮನ್ನು ಶ್ರೀಮಂತನಾಗಿ ಮಾಡುತ್ತದೆ. ನಮ್ಮ ಹತ್ತಿರ ಇಲ್ಲದ ವಸ್ತುವು ನಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ ಎಂದು ಅನಿಸುತ್ತದೆ. ಆದರೆ ಕೆಲವೊಮ್ಮೆ ನಮ್ಮ ಹತ್ತಿರ ಇರುವ ವಸ್ತುಗಳನ್ನು ಬಳಸಿಕೊಂಡು ನಾವು ಅಧಿಕ ಶ್ರೀಮಂತರಾಗಬಹುದು. ಈ 4 ಅಸೆಟ್ಗಳನ್ನು ನೀವು ಉಚಿತವಾಗಿ ಬಳಸಬಹುದು.

ಇದನ್ನು ಓದಿ: ಕಡಿಮೆ ಹಣದೊಂದಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಹೇಗೆ?

1. Time

is time an asset or a resource in kannada
time

ಜಗತ್ತಿನಲ್ಲಿ ಬೆಳೆಬಾಳುವ, ದೊಡ್ಡ ದೊಡ್ಡ ಶ್ರೀಮಂತ ವ್ಯಕ್ತಿಗಳು ಖರೀದಿಸಲಾಗದ ವಸ್ತುವೇ ಸಮಯವಾಗಿದೆ. ಒಮ್ಮೆ ನಿಮ್ಮ ಹಣ ಕಳೆದು ಹೋದರೆ ಅದನ್ನು ಮತ್ತೆ ಗಳಿಸಬಹುದು. ಆದರೆ ಒಮ್ಮೆ ಹೋದ ಸಮಯ ಯಾವತ್ತು ಮರಳಿ ಬರಲು ಸಾಧ್ಯವೇ ಇಲ್ಲ. ಗ್ಯಾರಿವಿನ್ ಚೆಕ್(garivin check) ಅವರ ಸಂದರ್ಶನದಲ್ಲಿ ಒಂದು ಮಗುವಿಗೆ, "ನೀನು ನನ್ನ ಎಲ್ಲಾ ಕಂಪನಿ, ಹಣ ತೆಗೆದುಕೋ, ಆದರೆ ನಿನ್ನ ಯವ್ವನ(youth), ನಿನ್ನ ಸಮಯವನ್ನು ನನಗೆ ನೀಡು. ನಾನು ಖುಷಿಯಿಂದ ವಿನಿಮಯ(exchange) ಮಾಡಿಕೊಳ್ಳುತ್ತೇನೆ" ಎಂದು ಹೇಳುತ್ತಾರೆ. ಇದು ಏಕೆಂದರೆ ಸಮಯಕ್ಕೆ ಅಧಿಕ ಮೌಲ್ಯವಿದೆ ಎಂದು ಅವರಿಗೆ ತಿಳಿದಿದೆ.

ವಯಸ್ಸಾದಂತೆ, ಸಮಯ ಕಳೆದಂತೆ, ನೀವು ಏನೇ ಮಾಡಿದರು ಶ್ರೀಮಂತರಾಗಲು ಸಾಧ್ಯವಿಲ್ಲ. ಹೀಗಾಗಿ ನಿಮ್ಮ ಹತ್ತಿರ ಇರುವ ಉಚಿತ ಮತ್ತು ಅತ್ಯಮೂಲ್ಯ ಅಸೆಟ್ ಎಂದರೆ ಸಮಯವಾಗಿದೆ. ವಾರೆನ್ ಬಫೆಟ್ ಈ ರೀತಿ ಹೇಳುತ್ತಾರೆ, "ಒಬ್ಬ ವ್ಯಕ್ತಿಯು ಆತನ ಮೇಲೆ ಹೂಡಿಕೆ ಮಾಡುವುದು ಒಂದು ಅತ್ಯುತ್ತಮ ಹೂಡಿಕೆಯಾಗಿದೆ. ನೀವು ಅಧಿಕ ಕಲಿತಷ್ಟು ಅಧಿಕ ಗಳಿಸುತ್ತೀರಾ".

2. Friends and family

is a friend and family an asset in kannada
friends and family

ನಾಳೆ ನಿಮಗೆ ಏನಾದರೂ ಅದರೆ ನಿಮ್ಮ ಹತ್ತಿರ ಬರುವುದು ನಿಮ್ಮ ಕುಟುಂಬ, ಗೆಳೆಯರು ಮತ್ತು ನಿಮ್ಮನ್ನು ಪ್ರೀತಿಸುವವರಾಗಿರುತ್ತಾರೆ. ಅವರು ನಿಮ್ಮ ಆರೈಕೆ ಮಾಡುತ್ತಾರೆ. ನಾಳೆ ಆರ್ಥಿಕವಾಗಿ ನಿಮಗೆ ನಷ್ಟವಾದಾಗ ಜಗತ್ತಿನಲ್ಲಿ ಯಾರು ನಿಮ್ಮ ಸಹಾಯಕ್ಕೆ ಬರುವುದಿಲ್ಲ. ಆದರೆ ನಿಮ್ಮ ಕುಟುಂಬ, ಗೆಳೆಯರು ನಿಮ್ಮ ಜೊತೆ ಇದ್ದೇ ಇರುತ್ತಾರೆ. ನೀವು ಒಂದು ಒಳ್ಳೆಯ ಸ್ನೇಹಿತರನ್ನು ಮಾಡಿಕೊಂಡರೆ, ಅವರು ನಿಮ್ಮ ಜೊತೆ ಇರುತ್ತಾರೆ. ಕುಟುಂಬ ನಿಮ್ಮ ಜೊತೆ ಯಾವಾಗಲೂ ಇದ್ದೇ ಇರುತ್ತದೆ. ಇವರೆಲ್ಲ ನಮ್ಮ ಜೊತೆ ಇದ್ದರು, ನಾವು ಇವುರುಗಳ ಮೇಲೆ ಅಷ್ಟು ಗಮನ ಹರಿಸುವುದಿಲ್ಲ. ಹೀಗಾಗಿ ನೀವು ಇವರುಗಳ ಶಕ್ತಿಯನ್ನು ಮರೆಯಬೇಡಿ. ನಿಮ್ಮ ಸಂಬಂಧ ಅವರ ಜೊತೆ ಗಟ್ಟಿಯಾಗಿರಬೇಕು.

ಇದನ್ನು ಓದಿ: ಬೇಗನೆ ಶ್ರೀಮಂತರಾಗಲು 15 ಹಣದ ನಿಯಮಗಳು

3. Skills

ಒಬ್ಬ ವ್ಯಕ್ತಿಯಿಂದ ಅವನ ಆಸ್ತಿ, ಹಣ ಎಲ್ಲವನ್ನು ತೆಗೆದುಕೊಂಡರು. ಅವನ ಕೌಶಲ್ಯವನ್ನು(skill) ತೆಗೆದುಕೊಳ್ಳಲು ಸಾಧ್ಯವಿಲ್ಲ. ಅದು ಅವನ ಹತ್ತಿರವೇ ಇರುತ್ತದೆ. ಇದರಿಂದ ಅವನು ಜಗತ್ತಿನ ಯಾವುದೇ ಮೂಲೆಗೆ ಹೋದರು, ಹಣವನ್ನು ಗಳಿಸಬಹುದು. ಆದರೆ ಅವನು ಸಮಯದ ಜೊತೆ ಸರಿಯಾದ ಕೌಶಲ್ಯವನ್ನು ಕಲಿಯುತ್ತಿರಬೇಕು. ಹೀಗಾಗಿ ನಿಮ್ಮ ಕೌಶಲ್ಯವನ್ನು ನಿರ್ಮಾಣ ಮಾಡುವ ಮೇಲೆ ಗಮನ ಹರಿಸಿ. ಇಂದು ಕೌಶಲ್ಯಯುತ ಜನರ ಕೊರತೆ ಇದೆ. ಎಲ್ಲರಲ್ಲೂ ಕಡಿಮೆ ಕೌಶಲ್ಯವಿದ್ದರೂ, ಹಣವು ಅಧಿಕ ಬೇಕಾಗಿದೆ. ಅಧಿಕ ಕೌಶಲ್ಯ ಇರುವ ಜನರು ತುಂಬಾ ಅಪರೂಪವಾಗಿದ್ದಾರೆ. ಇಂದು ಕೆಲಸದ ಕೊರತೆ ಇದೆ ಎಂದು ಹೇಳಲಾಗುತ್ತದೆ. ಆದರೆ ಸತ್ಯವಾಗಿ ಕೌಶಲ್ಯಯುತ ಜನರ ಕೊರತೆ ಇದೆ. ನೀವು ಇನ್ನೊಬ್ಬರಿಗೆ ಲಾಭ ಮಾಡಿಕೊಡುವಂತಹ ಕೌಶಲ್ಯವನ್ನು ಕಲಿತಿದ್ದಾರೆ, ಸುಲಭವಾಗಿ ಹಣವನ್ನು ಗಳಿಸಬಹುದು. ಮೊದಲಿಗೆ ಬೇರೆಯವರಿಗೆ ಕೆಲಸ ಮಾಡಿದರು, ಒಂದು ಸಮಯದ ನಂತರ ವ್ಯಾಪಾರವನ್ನು ಪ್ರಾರಂಭಿಸಬಹುದು.

4. Knowledge

ಅನೇಕ ಸರ್ಕಾರಿ ಪೇಪರ್ಗಳನ್ನು ನಾವು ನೋಡಲು ಹೋದರೆ ಅದಕ್ಕೆ ಸಮಯ ಹೋಗುತ್ತದೆ. ಅದೇ ಈ ವ್ಯವಸ್ಥೆಯ ಬಗ್ಗೆ ತಿಳಿದಿರುವ ವ್ಯಕ್ತಿಯ ಹತ್ತಿರ ಹೋಗಿ ಆ ಕೆಲಸವನ್ನು ಮಾಡಲು ಹೇಳಿದ್ದಾರೆ. ಆತ ಅದನ್ನು ಬೇಗನೆ ಮಾಡಿಕೊಡುತ್ತಾನೆ. ಇದು ಏಕೆಂದರೆ ಅವನ ಹತ್ತಿರ ಏನೇನು ಮಾಡಬೇಕೆಂದು ಜ್ಞಾನವಿರುತ್ತದೆ ಮತ್ತು ಅವನ ಸಂಪರ್ಕ ಚೆನ್ನಾಗಿರುತ್ತದೆ. ಇತರರ ಹತ್ತಿರ ಇಲ್ಲದಿರುವ ಜ್ಞಾನವು ನಿಮ್ಮ ಹತ್ತಿರ ಇದ್ದರೆ, ನೀವು ಜನರ ಸಮಯವನ್ನು ಉಳಿಸಬಹುದು. ಇದರಿಂದ ಆ ಜ್ಞಾನ ಕೂಡ ಅಧಿಕ ಹಣ ಗಳಿಸಲು ಸಹಾಯ ಮಾಡುತ್ತದೆ.

ಲಕ್ಷಗಟ್ಟಲೆ ಚಾರ್ಜ್ ಮಾಡುವ ಸಲಹೆಗಾರರು(consultant) ಅವರ ಜ್ಞಾನಕ್ಕೆ ಮಾಡುತ್ತಾರೆ. ಇದರಿಂದ ವ್ಯಾಪಾರ ಬೆಳೆಯುತ್ತದೆ. ಇಂದು ಡೇಟಾ ಸೈನ್ಸ್(data science) ಫೀಲ್ಡ್ ತುಂಬಾ ಮುಂದುವರೆಯುತ್ತಿದೆ. ಡೇಟಾ ಕೂಡ ಒಂದು ಜ್ಞಾನವಾಗಿದೆ. ಒಬ್ಬ ವ್ಯಕ್ತಿ ಎಲ್ಲಿ ತಿನ್ನುತ್ತಾನೆ? ಏನು ಮಾಡುತ್ತಾನೆ? ಎಲ್ಲಿಗೆ ಹೋಗುತ್ತಾನೆ? ಎಂಬುದು ಇರುತ್ತದೆ. ಈ ರೀತಿಯ ಡೇಟಾ ಬಳಸಿಕೊಂಡು, ಕೃತಕ ಬುದ್ಧಿಮತ್ತೆಯಿಂದ(artificial intelligence) ಅಧಿಕ ಜನರು ಬಳಸುವಂತಾಗಿದೆ. ಇದರಿಂದಲೇ ಅಧಿಕ ಹಣ ಬರುತ್ತದೆ. ನಿಮ್ಮ ಹತ್ತಿರ ಸರಿಯಾದ ಜ್ಞಾನವಿದ್ದರೆ, ಇದು ನಿಮ್ಮ ಬದುಕಿನ ಒಂದು ದೊಡ್ಡ ಅಸೆಟ್ ಆಗಿದೆ.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

No Comments