How Rich People Think Differently? | ಶ್ರೀಮಂತರು ಹೇಗೆ ವಿಭಿನ್ನವಾಗಿ ಯೋಚಿಸುತ್ತಾರೆ?

ಶ್ರೀಮಂತರು ವಿಭಿನ್ನ ರೀತಿಯಲ್ಲಿ ಯೋಚಿಸುತ್ತಾರೆ, ಹೀಗಾಗಿ ಅವರು ಶ್ರೀಮಂತರಾಗಿರುತ್ತಾರೆ. ಇದು ವಿಜ್ಞಾನದಲ್ಲೂ ಸಾಬೀತಾಗಿದೆ. ಇದನ್ನು ಸಾಬೀತುಪಡಿಸಲು ವಿಜ್ಞಾನಿಗಳು ಸಾವಿರಾರು ಜನರ ಮೆದುಳನ್ನು ಕಣ್ಣುಹಾಯಿಸಿದರು(scan) ಮತ್ತು ಶ್ರೀಮಂತ ಯೋಚನೆ ಹೊಂದಿರುವವರ ಮೆದುಳು ಜೈವಿಕವಾಗಿ(biologically) ಬದಲಾಗುತ್ತದೆ, ಇದರಿಂದಲೇ ಅವರುಗಳು ಶ್ರೀಮಂತರಾಗಿರುತ್ತಾರೆ ಎಂಬುದನ್ನು ತಿಳಿದರು.

ಅಂದರೆ ಶ್ರೀಮಂತರು ಅವರ ಮೆದುಳಿನ ರಚನೆಯನ್ನು(structure) ಬದಲಾಯಿಸುವ ಯಾವುದೋ ವಿಷಯವನ್ನು ಯೋಚಿಸುತ್ತಾರೆ. ಬಡವರ ಮೆದುಳಿನ ಮೇಲು ಈ ಕಣ್ಣುಹಾಯಿಸಿ, ಈ ಯೋಚನೆ ತುಂಬಿದಾಗ ಅವರ ಮೆದುಳಿನಲ್ಲೂ ಬದಲಾವಣೆ ಕಂಡು, ಅವರು ಶ್ರೀಮಂತರ ರೀತಿ ಯೋಚಿಸಲು ಪ್ರಾರಂಭಿಸಿದರು. ಇದಕ್ಕಾಗಿ 4 ವಿಷಯಗಳನ್ನು ಬದಲಾಯಿಸಬೇಕು ಎಂದು ವಿಜ್ಞಾನಿಗಳು ಕಂಡುಕೊಂಡರು.

ಇದನ್ನು ಓದಿ: ನಿಮಗೆ ಬೇಕಾದುದನ್ನು ಪಡೆಯುವುದು ಹೇಗೆ?

1. Always think long term

what does long-term thinking mean in kannada
long term thinking

1972 ರಂದು ಕ್ಯಾಲಿಫೋರ್ನಿಯಾದ(california) ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ(stanford university) ಒಬ್ಬ ಮನೋವಿಜ್ಞಾನಿ(psychologist) ಇದ್ದರು, ಅವರ ಹೆಸರು ವಾಲ್ಟರ್ ಮಿಷೆಲ್(walter mischel) ಆಗಿದೆ. ಅವರು 600 ಮಕ್ಕಳನ್ನು ಒಂದು ಕೋಣೆಗೆ ಕರೆದುಕೊಂಡು ಬಂದು, ಒಂದು ಮಿಠಾಯಿಯನ್ನು(marshmallow) ಇಟ್ಟು, "ನಾನು 15 ನಿಮಿಷಗಳಿಗೆ ಹೊರಗಡೆ ಹೋಗಿ ಬರುವೆ, ಒಂದು ವೇಳೆ 15 ನಿಮಿಷದಲ್ಲಿ ನೀವು ಈ ಮಿಠಾಯಿಯನ್ನು ತಿನ್ನದಿದ್ದರೆ ನಾನು ಬಂದು 2 ಮಿಠಾಯಿಯನ್ನು ನೀಡುವೇ"ಎಂದರು. ಈ ಮಕ್ಕಳು ಇದ್ದ ಕೋಣೆಯಲ್ಲಿ ಗುಪ್ತ ಕ್ಯಾಮೆರಾಗಳು(hidden camera) ಇದ್ದವು, ಇದರಿಂದ ಎಲ್ಲವೂ ರೆಕಾರ್ಡ್ ಆಗುತ್ತಿತ್ತು. ಸ್ವಲ್ಪ ಮಕ್ಕಳು 30 ಸೆಕೆಂಡಿನಲ್ಲೇ ಮಿಠಾಯಿಯನ್ನು ಮೇಲೆ ತಿಂದರು. ಕೆಲವರು ಅದನ್ನು ಕೇವಲ ನೆಕ್ಕಿದರು. ಕೆಲವರು 15 ನಿಮಿಷಗಳವರೆಗೆ ನಿಯಂತ್ರಣ ಮಾಡಿ ನಂತರ ತಡೆಯಲಾಗದೆ ತಿಂದರು. 30% ಮಕ್ಕಳು ಉಳಿದ 15 ನಿಮಿಷ ಕಾದರು.

ವಾಲ್ಟರ್ ಅವರು 40 ವರ್ಷಗಳವರೆಗೆ ಈ ಮಕ್ಕಳನ್ನು ಅನುಸರಿಸುತ್ತಿದ್ದರು(track). ಮಿಠಾಯಿ ತಿನ್ನದ ಆ 30% ಮಕ್ಕಳು ಒಳ್ಳೆಯ ಅಂಕ ತೆಗೆಯುತ್ತಿದ್ದರು, ಒಳ್ಳೆಯ ಕೆಲಸದಲ್ಲಿ ಇದ್ದರು, ಅವರ ವಿಚ್ಛೇದನ ದರ(divorse rate) ಕಡಿಮೆ ಇತ್ತು, ಅವರ ಆದಾಯ ಅಧಿಕವಿತ್ತು ಮತ್ತು ಅವರ ವ್ಯಸನ(addiction) ಕಡಿಮೆ ಇದ್ದವು. ಅದೇ ಉಳಿದ 70% ಮಕ್ಕಳು ಅಧಿಕ ಸಾಲದಲ್ಲಿ(high debt) ಮುಳುಗಿದ್ದರೂ, ಆರೋಗ್ಯ ಸಮಸ್ಯೆ ಅಧಿಕವಿತ್ತು, ಆದಾಯ ಕಡಿಮೆ ಇತ್ತು, ಅವರಲ್ಲಿ ಕೆಲವರು ಜೈಲಿಗೂ ಹೋಗಿ ಬಂದಿದ್ದರು.

ವಾಲ್ಟರ್ ಅವರು 40s ನಲ್ಲಿ ಇದ್ದ ಈ ಮಕ್ಕಳ ಮೆದುಳನ್ನು ಮತ್ತೊಮ್ಮೆ ಕಣ್ಣುಹಾಯಿಸಿದರು. ತಮ್ಮನ್ನು ನಿಯಂತ್ರಣ ಮಾಡಲು ಸಾಧ್ಯವಾಗದ ಮಕ್ಕಳ ಮೆದುಳಿನ ಸ್ವಯಂ ನಿಯಂತ್ರಣ(self control) ಭಾಗಗಳು ಇವಾಗಲು ದುರ್ಬಲವಿದ್ದವು(weak). ಅದೇ 30% ಮಕ್ಕಳ ಮೆದುಳಿನ ಸ್ವಯಂ ನಿಯಂತ್ರಣ ಭಾಗವು ಇತರರಿಗಿಂತ ಬಲವಾಗಿತ್ತು(strong). ಇದರಿಂದ ನೀವು ದೀರ್ಘಾವಧಿ ಯೋಚಿಸಿ ತಾಳ್ಮೆಯಿಂದ ಇದ್ದರೆ, ನಿಮ್ಮ ಮೆದುಳಿನಲ್ಲೂ ರೂಪಾಂತರಿಸುತ್ತದೆ(transform) ಮತ್ತು ನೀವು ಶ್ರೀಮಂತಿಕೆಯ ಕಡೆಗೆ ಹೋಗುವಿರಾ ಎಂದು ವಿಜ್ಞಾನಿಗಳು ಕಂಡುಕೊಂಡರು.

ಉದಾಹರಣೆಗೆ, ನಿಮಗೆ ಹಣದ ಅವಶ್ಯಕತೆ ಇರುತ್ತದೆ. ಆಗ ನೀವು ಬೇಗನೆ ಸಾಲ ತೆಗೆದುಕೊಳ್ಳುವೆ, ಬೇಗನೆ ಉದ್ಯೋಗ(job) ಮಾಡುವೆ, ನನಗೆ ಮುಂದಿನ ತಿಂಗಳು ಹಣ ಬೇಕು, ಹೀಗಾಗಿ ವ್ಯವಹಾರದ(business) ಬದಲು ಉದ್ಯೋಗ ಉತ್ತಮ! ಇವುಗಳನ್ನು ತ್ವರಿತ ತೃಪ್ತಿ(instant gratification) ಎನ್ನುತ್ತಾರೆ. ಅದೇ ನೀವು ಸ್ವಲ್ಪ ದಿನ ಕಾಯುವೇ, ಒಂದು ಇಂಟರ್ನೆಟ್ ವ್ಯವಹಾರ(internet business) ಪ್ರಾರಂಭಿಸುವೇ, ಕೌಶಲ್ಯ(skills) ಅಭಿವೃದ್ಧಿ ಪಡಿಸಿಕೊಳ್ಳುವೆ ಎಂದು ಯೋಚಿಸಿದರೆ ನಿಮ್ಮ ಫಲಿತಾಂಶ ಕೂಡ ಬದಲಾಗುತ್ತದೆ. ಈ ರೀತಿಯ ಯೋಚನೆಯಿಂದಾಗಿಯೇ ನೀವು ಶ್ರೀಮಂತಿಕೆ ಇಲ್ಲ ಬಡತನದ ಕಡೆಗೆ ಹೋಗುವಿರಾ.

ಜೆಫ್ ಬೆಜೋಸ್(jeff bezos) ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಅವರು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು, ಅವರು 80 ವರ್ಷದವರಾದಾಗ ಆ ನಿರ್ಧಾರದಿಂದ ಬೇಸರಗೊಳ್ಳುವವರ ಎಂಬುದನ್ನು ಯೋಚಿಸುತ್ತಾರೆ. ಇದರಿಂದಲೇ ಅವರು ಅವರ ಬಹು ಮಿಲಿಯನ್(multi million) ಉದ್ಯೋಗ ತೊರೆದು ಅಮೆಜಾನ್(amazon) ಅನ್ನು 1994 ರಲ್ಲಿ ಪ್ರಾರಂಭಿಸಿದರು.

ನಿಮ್ಮ ಮೆದುಳನ್ನು ಮರುಜೀವಗೊಳಿಸಲು(rewire) ಇರುವ ಪ್ರಾಯೋಗಿಕ ಹಂತದ ಬಗ್ಗೆ ಈಗ ನೋಡೋಣ.

1. Develop patience in yourself

ನಿಮ್ಮಲ್ಲಿ ತಾಳ್ಮೆಯನ್ನು ಬೆಳೆಸಿಕೊಳ್ಳಿ.

2. Always think long term

ನಿಮ್ಮ ವೃತ್ತಿ(career) ಮತ್ತು ವೃತ್ತಿಪರ ಬದುಕಿನಲ್ಲಿ(professional life) ದೀರ್ಘಾವಧಿ ನಿರ್ಧಾರದ ಬಗ್ಗೆ ಯೋಚಿಸಿ ಹೊರತು ಈಗಲೇ ಹಣ ಗಳಿಸುವೇ ಎಂಬುದಲ್ಲ.

ಇದನ್ನು ಓದಿ: ನಿಮ್ಮ ಸಂಬಳವನ್ನು ಟಾಪ್ 1% ನಂತೆ ನಿರ್ವಹಿಸಿ

2. Create a predictable income stream

what does predictable income mean in kannada
predictable opportunity

2019 ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದ(harvard university) ಸಂಶೋಧಕರು ಒಂದು ಮಜಾವಾದ ಪ್ರಯೋಗವನ್ನು ಮಾಡಿದ್ದರು. ಇವರು 200 ಜನರನ್ನು ಕರೆದುಕೊಂಡು ಬಂದಿದ್ದರು. ಅದರಲ್ಲಿ 100 ಜನ ಶ್ರೀಮಂತರಾಗಿದ್ದರೆ, ಉಳಿದ 100 ಜನ ಹೆಣಗಾಡುತ್ತಿರುವ(struggle) ಇಲ್ಲ ಬಡವರಾಗಿದ್ದರು. ಇವರೆಲ್ಲರನ್ನು ಹಣ ಗಳಿಸಲು ಮಾರ್ಗಗಳನ್ನು ತಿಳಿಸುವ ಒಂದು ಕೋಣೆಯೊಳಗೆ ಕಳುಹಿಸಲಾಯಿತು.

ಅದರಲ್ಲಿ ಒಂದು ಬೋರ್ಡಿನಲ್ಲಿ "looking for freelancers" ರೀತಿಯ ಪ್ರಚಾರವಿದ್ದವು(post). ಅವರ ಜನರನ್ನೇ ಬೇಕಂತ ಕೋಣೆಯ ಒಳಗೆ ಕಳುಹಿಸಿ ಅವರ ಸಮಸ್ಯೆಯ ಬಗ್ಗೆ ತಿಳಿಸಲು ಕೇಳಿಕೊಂಡರು. ಹಣ ಗಳಿಸಲು ಇರುವ ಮಾರ್ಗದ ಬಗ್ಗೆ ತಿಳಿಸುವ ಪುಸ್ತಕಗಳನ್ನು ಇಟ್ಟಿದ್ದರು. ಇದರ ನಂತರ ಇವರೆಲ್ಲರಿಗೂ ಒಂದು ಪ್ರೆಶ್ನೆಯನ್ನು ಕೇಳಲಾಯಿತು. ಅದೆಂದರೆ, "ನೀವು ಹಣ ಗಳಿಸುವ ಅವಕಾಶಗಳನ್ನು ಟಿಪ್ಪಣಿ(note) ಮಾಡಿಕೊಂಡಿರುವಿರ" ಎಂದು ಕೇಳಿದರು. ಇದರ ಫಲಿತಾಂಶ ಶಾಕಿಂಗ್ ಇತ್ತು.

70% ಗೂ ಅಧಿಕ ಶ್ರೀಮಂತರು ಕನಿಷ್ಠ 2 ಕ್ಕಿಂತ ಹೆಚ್ಚು ಅವಕಾಶಗಳನ್ನು ಕಂಡುಕೊಂಡಿದ್ದರು ಮತ್ತು ಕೇವಲ 18% ಬಡವರು ಕೇವಲ ಒಂದು ಅವಕಾಶವನ್ನು ಟಿಪ್ಪಣಿ ಮಾಡಿಕೊಂಡಿದ್ದರು. ಇವರ ಮೆದುಳನ್ನು ತಪಾಸಣೆ(scan) ಮಾಡಿದಾಗ ಶ್ರೀಮಂತರ ಮೆದುಳಿನ ಪತ್ತೆಕಾರಕ ಭಾಗವು(detector part) ಸಕ್ರಿಯವಿತ್ತು ಮತ್ತು ಹೆಣಗಾಡುತ್ತಿರುವ ಜನಗಳು ಮೆದುಳಿನ ಈ ಭಾಗ ಸಕ್ರಿಯವಿರಲಿಲ್ಲ, ಇಲ್ಲ ತುಂಬಾ ಕಡಿಮೆ ಸಕ್ರಿಯವಿತ್ತು. ಇದರ ಅರ್ಥ 85% ನಷ್ಟು ಲಕ್ಷಾಧಿಪತಿಗಳು(millionaire) ಕನಿಷ್ಠ 3 ಬಹು ಆದಾಯದ ಮೂಲಗಳನ್ನು ಹೊಂದಿರುತ್ತಾರೆ ಮತ್ತು ಹೆಣಗಾಡುತ್ತಿರುವ ಜನರು ಕೇವಲ ಒಂದೇ ಆದಾಯದ ಮೂಲವನ್ನು ಹೊಂದಿರುತ್ತಾರೆ.

ಇದಕ್ಕಾಗಿ ಮೆದುಳನ್ನು ಮರುಜೀವಗೊಳಿಸಲು ಈ ಪ್ರಾಯೋಗಿಕ ಹಂತಗಳನ್ನು ಪಾಲಿಸಿ.

1. Become an opportunity detector

ಒಬ್ಬ ಅವಕಾಶಗಳನ್ನು ಪತ್ತೆ ಹಚ್ಚುವವರಾಗಿ(detect). ಇದರ ಅರ್ಥ ಹುಚ್ಚರ ರೀತಿ ಹಣ ಗಳಿಸುವ ಮಾರ್ಗಗಳನ್ನು ಹುಡುಕುತ್ತಿರಿ ಎಂದಲ್ಲ. ಇದಕ್ಕಾಗಿ ಲಕ್ಷಾಧಿಪತಿ ಮಾದರಿಯನ್ನು(millionaire model) ಅನುಸರಿಸಿ.

2. Start one predictable income stream

ಲಕ್ಷಾಧಿಪತಿಗಳು ಹಣ ಗಳಿಸಲು ಒಂದೇ ಮೂಲದಿಂದ ಪ್ರಾರಂಭಿಸುತ್ತಾರೆ. ಆ ಹಣವು ಉದ್ಯೋಗ(job) ಅಥವಾ ಉದ್ಯಮದಿಂದ(business) ಬರಬಹುದು. ಆದರೆ ಮೊದಲಿಗೆ ಹಣ ಬರುವುದು ಮುಖ್ಯವಾಗಿದೆ.

ಒಮ್ಮೆ ಊಹಿಸಬಹುದಾದ ಆದಾಯ(predictable income) ಬಂದ ನಂತರ ಅವರು ಇನ್ನಷ್ಟು ಆದಾಯ ಅವಕಾಶಗಳನ್ನು ಕಂಡುಕೊಳ್ಳಲು ಪ್ರಾರಂಭಿಸುತ್ತಾರೆ. ಅದೆಂದರೆ ಆನ್ಲೈನ್ ವ್ಯಾಪಾರ(internet business) ಪ್ರಾರಂಭಿಸುವುದು, ಫ್ರೀಲ್ಯಾನ್ಸಿಂಗ್(freelancing) ಮಾಡುವುದು, ಸಂಸ್ಥೆಯನ್ನು(agency) ಪ್ರಾರಂಭಿಸುವುದು, ಬ್ಲಾಗಿಂಗ್(blogging) ಮಾಡುವುದು, ದಾಸ್ತಾನು(dropshipping) ಮಾಡುವುದು, ರಚನೆಕಾರ(creator) ಯಾವುದೇ ಉದ್ಯಮ ಮಾಡುತ್ತಾರೆ ಮತ್ತು ಅಲ್ಲಿಂದಲೂ ಹಣ ಗಳಿಸಲು ಪ್ರಾರಂಭಿಸುತ್ತಾರೆ ಮತ್ತು ಇಲ್ಲೂ ಒಂದು ಊಹಿಸಬಹುದಾದ ಆದಾಯದ ಮೂಲವನ್ನು ಮಾಡಿಕೊಳ್ಳುತ್ತಾರೆ, ನಂತರ ಮತ್ತೊಂದು ಉದ್ಯಮದ ಬಗ್ಗೆ ನೋಡುತ್ತಾರೆ.

ಯಾವುದೇ ಶ್ರೀಮಂತ ವ್ಯಕ್ತಿ ಒಮ್ಮೆಲೇ 10 ಕೆಲಸದ ಮೇಲೆ ಗಮನ ಹರಿಸುವುದಿಲ್ಲ. ಕೇವಲ ಒಂದೇ ವಿಷಯದಲ್ಲಿ ನಿಪುಣನಾಗಿ(master), ಏನನ್ನೋ ರಚಿಸಿ, ಅವಕಾಶಗಳನ್ನು ಹುಡುಕಿ, ಮೆದುಳನ್ನು ಸಕ್ರಿಯವಿರಿಸಿ ಮುಂದಿನ ಅವಕಾಶವನ್ನು ಊಹಿಸುವಂತೆ ಮಾಡಿ, ಮುಂದೆ ಹೋದರು.

ಈಗ ಜಗತ್ತಿನ ಅತಿ ದೊಡ್ಡ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಜೆಫ್ ಬೆಜೋಸ್ ಬಗ್ಗೆ ತಿಳಿಯೋಣ. 1990 ರಲ್ಲಿ ಇವರು ಡಿ. ಇ. ಶಾ ಹೆಡ್ಜ್ ಫಂಡಿನಲ್ಲಿ(d. e. shaw hedge fund) ಕೆಲಸ ಮಾಡುತ್ತಿದ್ದರು. ಅಲ್ಲಿ ವರ್ಷಕ್ಕೆ 2 ರಿಂದ 2.5 ಮಿಲಿಯನ್ ಡಾಲರ್ ಗಳಿಸುತ್ತಿದ್ದರು. 1994 ರಲ್ಲಿ ಇವರು ಅಮೆಜಾನ್(amazon) ಪ್ರಾರಂಭಿಸಿದರು. ಇದರಲ್ಲಿ ಪುಸ್ತಕಗಳನ್ನು ಮಾರುವ ಬಗ್ಗೆ ಯೋಚಿಸಿದರು. ಇವರು ತಮ್ಮ ವೋಟಾರುಖಾನೆಯಿಂದ(garage) ಅಮೆಜಾನ್ ಅನ್ನು ಪ್ರಾರಂಭಿಸಿದರು. 1998ರಲ್ಲಿ ಅಮೆಜಾನ್ ಸಂಗೀತ(amazon music), ಡಿವಿಡಿ(dvd) ಮತ್ತು ವಿದ್ಯುಜ್ಜನಿತದಲ್ಲೂ(electronics) ವಿಸ್ತರಿಸಿತು(expand). 2000 ದಲ್ಲಿ ಅವರು ಅಮೆಜಾನ್ ಮಾರ್ಕೆಟ್ಪ್ಲೇಸ್(amazon marketplace) ಅನ್ನು ಪ್ರಾರಂಭಿಸಿದರು. ಇದರಲ್ಲಿ 15% ದಳ್ಳಾಳಿ(commission) ತೆಗೆದುಕೊಳ್ಳಲು ಪ್ರಾರಂಭಿಸಿದರು.

2000 ದಲ್ಲಿ ಬ್ಲೂ ಆರಿಜಿನ್(blue origin) ಎಂಬ ಬಾಹ್ಯಾಕಾಶ(space) ಕಂಪನಿಯನ್ನು ಪ್ರಾರಂಭಿಸಿದರು. 2002 ರಲ್ಲಿ ಅಮೆಜಾನ್ ವೆಬ್ ಸೇವೆಯನ್ನು(amazon web services) ಪ್ರಾರಂಭಿಸಿದರು. ಇದರಲ್ಲಿ ಕ್ಲೌಡ್ ಸೇವೆಗಳನ್ನು(cloud service) ನೀಡುವ ಬಗ್ಗೆ ಯೋಚಿಸಿದ್ದರು. 2005ರಲ್ಲಿ ಇವರು ಅಮೆಜಾನ್ ಪ್ರೈಮ್(amazon prime) ಅನ್ನು ಪ್ರಾರಂಭಿಸಿದರು. ಇದರಲ್ಲಿ $139 ಚಂದಾದಾರಿಕೆ ಶುಲ್ಕವನ್ನು(subscription fees) ಇಟ್ಟಿದ್ದರು. 2006 ರಂದು ಇವರು aws ಅನ್ನು ಸಾರ್ವಜನಿಕವಾಗಿ(public) ಬಿಡುಗಡೆ ಮಾಡಿದರು ಮತ್ತು ಇದೇ aws ಇಂದು ಅಮೆಜಾನ್ನ 70% ಲಾಭವನ್ನು ತರುತ್ತದೆ. ಇದರ ಬಗ್ಗೆ ಎಷ್ಟೋ ಜನಗಳಿಗೆ ತಿಳಿದಿರುವುದಿಲ್ಲ.

2007 ರಲ್ಲಿ ಇವರು ಕಿಂಡಲ್(kindle) ಪ್ರಾರಂಭಿಸಿದರು. ಇದರಲ್ಲಿ 30% ಪುಸ್ತಕ ದಳ್ಳಾಳಿ ತೆಗೆದುಕೊಂಡರು. 2013 ರಂದು ಇವರು $250M ಗೆ ವಾಷಿಂಗ್ಟನ್ ಪೋಸ್ಟನ್ನು(washington post) ಖರೀದಿಸಿದರು ಮತ್ತು 1998 ರಿಂದ ಇಲ್ಲಿಯವರೆಗೂ ಇವರು ಗೂಗಲ್(google), ಉಬರ್(uber), ಏರ್ಬಿಎನ್ಬಿ(airbnb) ರೀತಿಯ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತಲೇ ಇದ್ದಾರೆ. ಇಂದು ಇವರ ಹತ್ತಿರ 4 ಲಕ್ಷ ಎಕರೆಗಿಂತ ಅಧಿಕ ಜಮೀನು(land) ಇದೆ. ಇವರು ರಿಯಲ್ ಎಸ್ಟೇಟ್ ಉದ್ಯಮಿ(real estate tycoon) ಆಗಿದ್ದಾರೆ.

ಈ ಕಥೆಯಿಂದ ಒಂದು ವಿಷಯ ಚೆನ್ನಾಗಿ ಅರ್ಥವಾಗುತ್ತದೆ. ಈ ವ್ಯಕ್ತಿಯು ಮೊದಲಿಗೆ ಉದ್ಯೋಗ ಮಾಡುತ್ತಿದ್ದರು. ಒಂದು ಅವಕಾಶ ಕಂಡುಕೊಂಡು ಪುಸ್ತಕಕ್ಕೆ ಬಂದರು. ಪುಸ್ತಕದ ನಂತರ ಸಂಗೀತಕ್ಕೆ ಬಂದರು. ಹೀಗೆ ನಿಧಾನವಾಗಿ ವಿಸ್ತರಿಸುತ್ತ ಬಂದರು. ಅದು ಕೇವಲ ಒಂದು ಸಮಯದಲ್ಲಿ ಒಂದೇ ವಿಷಯವನ್ನು(one thing at a time) ವಿಂಗಡಿಸಿ(sort) ಮುಂದುವರೆದರು.

ಇದನ್ನು ಓದಿ: [TOXIC]ವಿಷಕಾರಿ ಜನರು ಹೇಗೆ ನಿಯಂತ್ರಣ ಮಾಡುತ್ತಾರೆ

3. Learn daily to reach your financial goals

what happens if you learn every day in kannada
learn daily

ಶ್ರೀಮಂತರ ಮೆದುಳಿನ ಬಗ್ಗೆ ಥಾಮಸ್ ಕಾರ್ಲಿ(thomas corley) ಅವರಿಗೆ ಆಸಕ್ತಿ ಇತ್ತು. ಇವರು ಒಬ್ಬ ಹಣಕಾಸು ಯೋಜಕನಾಗಿದ್ದರು(financial planner). ಇವರು ತಮ್ಮ ಶ್ರೀಮಂತ ಗ್ರಾಹಕರ ಮೆದುಳನ್ನು ಅರ್ಥ ಮಾಡಿಕೊಳ್ಳಲು ಬಯಸಿದ್ದರು. ಇವರು ತಮ್ಮ 233 ಶ್ರೀಮಂತ ಗ್ರಾಹಕರ ದಿನನಿತ್ಯದ ಹವ್ಯಾಸಗಳನ್ನು ಹಿಂಬಾಲಿಸಲು ಪ್ರಾರಂಭಿಸಿದರು ಮತ್ತು ಅವರಿಗೆ ತಿಳಿದಿರುವ ಬಡ ಜನರ ದಿನನಿತ್ಯದ ಹವ್ಯಾಸಗಳನ್ನು ಹಿಂಬಾಲಿಸಲು ಪ್ರಾರಂಭಿಸಿದರು. ಇದನ್ನು ಇವರು 5 ವರ್ಷಗಳಿಗೆ ಪ್ರತಿದಿನ ಮಾಡಿದರು. ಇದರಲ್ಲಿ ಕಂಡ ಒಂದು ವ್ಯತ್ಯಾಸ ಇವರಿಗೆ ಆಶ್ಚರ್ಯ ನೀಡಿತು.

ಅವರ 90% ನಷ್ಟು ಶ್ರೀಮಂತ ಗ್ರಾಹಕರು ಪ್ರತಿದಿನ 30 ನಿಮಿಷವಾದರೂ ನೀಡಿ, ಏನಾದರು ಹೊಸದನ್ನು ಕಲಿಯುತ್ತಿದ್ದರು. ಇದರ ಅರ್ಥ ಮನಬಂದಂತೆ(random) ಏನೋ ಕಲಿಯುತ್ತಿದ್ದರೆಂದಲ್ಲ. ಅವರು ಅರ್ಥಪೂರ್ಣ(meaningful) ಇರುವುದನ್ನು ಅವರಿಗೆ ಪ್ರಸ್ತುತ(relevent) ಇರುವುದನ್ನು ಕಲಿಯುತ್ತಿದ್ದರು. ಅದೇ 95% ನಷ್ಟು ಬಡವರು ಏನಾದರೂ ಹೊಸದನ್ನು ಕಲಿಯುತ್ತಿರಲಿಲ್ಲ. ಕೇವಲ ಕಾಲಹರಣ(timepass) ಮಾಡುತ್ತಿದ್ದರು.

ನಿಮಗೆ ಇನ್ನೊಂದು ಉದಾಹರಣೆ ನೀಡುವೆವು. ರಾಹುಲ್ ಮತ್ತು ಅಂಕುರ್ ಎಂಬ ಇಬ್ಬರು ಗೆಳೆಯರು ಇದ್ದರೆ ಎಂದುಕೊಳ್ಳಿ. ಇವರನ್ನು ಕೋವಿಡ್ ಲಾಕ್ಡೌನ್ನಿಂದಾಗಿ ಉದ್ಯೋಗದಿಂದ ತೆಗೆಯಲಾಗಿದೆ. ರಾಹುಲ್ ಯಾವಾಗಲೂ ನೆಟ್ಫ್ಲಿಕ್ಸ್(netflix) ನೋಡಿಕೊಂಡು ಇರುತ್ತಿದನು ಮತ್ತು ಅಂಕುರ್ ಅವರು ವಿಡಿಯೋ ಎಡಿಟಿಂಗ್ ಕಲಿಯಲು ಪ್ರಾರಂಭಿಸಿದನು.

9 ತಿಂಗಳ ನಂತರ ರಾಹುಲ್ ನಿರುದ್ಯೋಗಿಯಾಗಿದ್ದನು(unemployed). ಮಾರುಕಟ್ಟೆ ಮತ್ತು ಕೋವಿಡ್ಗೆ ಬೈಯುತ್ತಿದ್ದಾನೆ. ಅದೇ ಅಂಕುರ್ ಗ್ರಾಹಕರಿಗೆ ವಿಡಿಯೋ ಎಡಿಟಿಂಗ್ ಮಾಡಿ, ಪ್ರತಿ ತಿಂಗಳು 1.5 ಲಕ್ಷ ಗಳಿಸುತ್ತಿದ್ದಾನೆ. ಇಬ್ಬರ ಹತ್ತಿರ 9 ತಿಂಗಳು ಇತ್ತು, ಇಬ್ಬರ ಹತ್ತಿರ ಅದೇ ಇಂಟರ್ನೆಟ್, ಅದೇ ಅವಕಾಶಗಳು(opportunity) ಇತ್ತು. ಆದರೆ ಅವರ ಆಯ್ಕೆ ಬೇರೆ ಬೇರೆ ಇದ್ದವು, ಇದರಿಂದ ಅವರ ಪಲಿತಾಂಶ(result) ಕೂಡ ಬೇರೆ ಬೇರೆ ಇತ್ತು. ಈ ಪ್ರಯೋಗದಿಂದ ನಮ್ಮಲ್ಲಿ ನಾವು ಏನು ಬದಲಾವಣೆ ಮಾಡಿಕೊಳ್ಳಬೇಕು. ಇದಕ್ಕಾಗಿ ಇರುವ ಪ್ರಾಯೋಗಿಕ ಕ್ರಮಗಳು ಏನು, ಅವೆಂದರೆ,

1. Set a clear goal

ನೀವು ಒಂದು ಗುರಿಯನ್ನು ನಿರ್ಧರಿಸಿಕೊಳ್ಳಬೇಕು.

2. Identify skills needed

ನಂತರ ಅವುಗಳನ್ನು ಸಾಧಿಸಲು ಯಾವ ಯಾವ ಕೌಶಲ್ಯದ ಅವಶ್ಯಕತೆ ಇದೆ ಎಂಬುದನ್ನು ತಿಳಿಯಿರಿ.

3. Learn it daily

ದಿನವು ಆ ಕೌಶಲ್ಯವನ್ನು ಕಲಿಯುತ್ತೀರಿ. ಓದುವುದು ನಿಮ್ಮ ಮೇಲೆ ನಿಂತಿದೆ. ಅನೇಕರು ದಿನವು ಇಷ್ಟು ಪುಸ್ತಕ ಓದಬೇಕು ಎನ್ನುತ್ತಾರೆ. ಆದರೆ ನಾವು ಎಲ್ಲಿಂದನಾದರೂ ಕಲಿಯಬಹುದು. ನೀವು ಪುಸ್ತಕ, ಆನ್ಲೈನ್ ವೀಡಿಯೋ ಇಲ್ಲ, ಎಐ ಚಾಟ್(ai chat) ಬಳಸಿಕೊಂಡು ಯೋಜನೆ ಮಾಡಿ ಓದಬಹುದು. ಕೆಲವರು ಪಾಡ್‌ಕ್ಯಾಸ್ಟ್ನಿಂದ(podcast) ಕಲಿತರೆ, ಕೆಲವರು ಯುಟ್ಯೂಬ್ ವೀಡಿಯೋಗಳಿಂದ(youtube) ಕಲಿಯುತ್ತಾರೆ. ನೀವು ನಿಮಗೆ ಕಲಿಯುವ ಉತ್ತಮವೆನ್ನಿಸುವ ಮಾಧ್ಯಮ ಯಾವುದು ಎಂಬುದನ್ನು ತಿಳಿಯಿರಿ.

ನೀವು ಉದ್ಯೋಗ ಮಾಡಲು ಬಯಸಿದ್ದು, ಇಲ್ಲ ಹೂಡಿಕೆ(investing) ಇಲ್ಲ, ದೈಹಿಕ ಸದೃಢತೆ(fit) ಬಯಸಿದ್ದರೆ ಇವುಗಳ ಬಗ್ಗೆ ಕಲಿಯಬೇಡಿ, ಗುರಿಯಿಟ್ಟು(target) ಕಲಿಯಿರಿ. ಇದರ ಅರ್ಥ ನೀವು ಕಲಿತಿರುವುದನ್ನು ಕಾರ್ಯಗತಗೊಳಿಸಲು(implement) ಪ್ರಯತ್ನಿಸಿ. ನಾವು ಇಲ್ಲಿ ಕೇವಲ ಜ್ಞಾನವನ್ನು ಬೆಳೆಸಿಕೊಳ್ಳಲು ಹೇಳುತ್ತಿಲ್ಲ. ಜ್ಞಾನವನ್ನು ಬೆಳೆಸಿಕೊಳ್ಳುವುದು ನಿಮ್ಮನ್ನು ಶ್ರೀಮಂತನಾಗಿ ಮಾಡುತ್ತಿಲ್ಲವೆಂದರೆ ಅದು ವ್ಯರ್ಥವಾಗಿದೆ.

ಇದನ್ನು ಓದಿ: ಕೇಂದ್ರೀಕೃತ ಯಶಸ್ಸನ್ನು ಸಾಧಿಸಲು Deep Work ನ ಅಗತ್ಯ ನಿಯಮಗಳು

4. Own your financial life, no blame game

how do I build my financial life in kannada
own finance life

ಅಮೆರಿಕಾದವರು ಶ್ರೀಮಂತರ ಮೆದುಳಿನ ಬಗ್ಗೆ ಇಷ್ಟು ಸಂಶೋಧನೆ ಮಾಡಲು ತೊಡಗಿದಾಗ, ಲಂಡನ್(london) ಅವರು ಹಿಂದುಳಿಯುವವರೇ. 2017 ರಂದು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್(london school of economics) ಸಂಶೋಧಕರು ಒಂದು ಅದ್ಭುತವಾದ ವಿಷಯವನ್ನು ಮಾಡಿದ್ದರು. ಅವರು 5 ದೇಶಗಳಿಂದ 10,000 ಜನರನ್ನು ಆರಿಸಿದರು. ಅವರನ್ನು ಶ್ರೀಮಂತ ಮತ್ತು ಬಡವ ಎಂಬ ಎರಡು ಗುಂಪಾಗಿ ಮಾಡಿ, "ನೀವು ಇಂದು ಆರ್ಥಿಕವಾಗಿ ಎಲ್ಲಿರುವಿರೋ ಮತ್ತು ಅಲ್ಲಿ ಏಕೆ ಇರುವಿರಾ" ಎಂಬ ಸರಳ ಪ್ರೆಶ್ನೆಯನ್ನು ಕೇಳಿದರು. ಇದಕ್ಕೆ ಜನಗಳು ಏನೇನೋ ಉತ್ತರ ನೀಡಿರಬಹುದು.

ಬಡವರು, "ಆರ್ಥಿಕತೆ(economy) ಕುಸಿದದೆ, ಕುಟುಂಬದ ಪರಿಸ್ಥಿತಿ(family situation) ಸರಿ ಇಲ್ಲ. ಯಾವುದೇ ಅವಕಾಶಗಳಿಲ್ಲ, ಸರ್ಕಾರ(government) ನಿಷ್ಪ್ರಯೋಜಕವಾಗಿದೆ" ಎಂದರು. ಅದೇ ಶ್ರೀಮಂತರು, "ನಾನು ಸರಿಯಾದ ನಿರ್ಧಾರ ತೆಗೆದುಕೊಂಡೆನು, ಪಟ್ಟುಹಿಡಿದೆನು(persistent), ಬಿಟ್ಟುಕೊಡಲಿಲ್ಲ, ಜವಾಬ್ದಾರಿ(responsiblity) ತೆಗೆದುಕೊಂಡೆನು" ಎಂದರು. ನಂತರ ಎರಡು ಗುಂಪಿನ ಮೆದುಳನ್ನು ಕಣ್ಣುಹಾಯಿಸಲಾಯಿತು. ಬಡವರ ಮೆದುಳನ್ನು ಕಣ್ಣುಹಾಯಿಸಿದಾಗ, ಅವರ ಪ್ರಿಫ್ರಂಟಲ್ ಕಾರ್ಟೆಕ್ಸ್(prefrontal cortex) ಭಾಗವು ಸಕ್ರಿಯವಿರಲಿಲ್ಲ, ಭಯ ನೀಡುವ ಭಾಗವಾದ ಅಮಿಗ್ಡಾಲಾ(amygdala) ಭಾಗವು ಸಕ್ರಿಯವಿತ್ತು. ಅದೇ ಮಾಲೀಕತ್ವ(ownership) ತೆಗೆದುಕೊಳ್ಳುವವರ ಪ್ರಿಫ್ರಂಟಲ್ ಕಾರ್ಟೆಕ್ಸ್ ಭಾಗವು ಸಕ್ರಿಯವಿತ್ತು ಮತ್ತು ಅಮಿಗ್ಡಾಲಾ ಭಾಗವು ಸಕ್ರಿಯವಿರಲಿಲ್ಲ.

ಇದರ ಅರ್ಥ ನೀವು ನಿಮ್ಮ ಬದುಕಿನ ಆರ್ಥಿಕ ನಿರ್ಧಾರ ತೆಗೆದುಕೊಂಡರೆ, ನಿಮ್ಮ ಮೆದುಳು ರೂಪಾಂತರಿಸುತ್ತದೆ(transform) ಮತ್ತು ನೀವು ಶ್ರೀಮಂತಿಕೆಗೆ ಹತ್ತಿರವಾಗುತ್ತೀರಾ. ಈಗ ಪ್ರಾಯೋಗಿಕ ಕ್ರಮಗಳ ಬಗ್ಗೆ ಮಾತನಾಡೋಣ.

ನೀವು ಮೊದಲಿಗೆ ನಿಮ್ಮನ್ನು ಶ್ರೀಮಂತನಾಗಿ ಕಾಣದಿರಲು ಇರುವ 5 ನೆಪಗಳ(excuses) ಬಗ್ಗೆ ಬರೆಯಿರಿ. ನಂತರ ಅದನ್ನು ತಿರುಗಿಸಿ(flip). ಉದಾಹರಣೆಗೆ ನೀವು, "ನನಗೆ ಉದ್ಯೋಗ ಪ್ರಾರಂಭಿಸಲು ಸಾಧ್ಯವಿಲ್ಲ, ಏಕೆಂದರೆ ನನ್ನ ಹತ್ತಿರ ಹಣವು ಇಲ್ಲ" ಎನ್ನುತ್ತೀರಾ. ಇದನ್ನು ತಿರುಗಿಸಿ, "ಶೂನ್ಯ ಹೂಡಿಕೆ(zero investment) ಉದ್ಯೋಗವನ್ನು ಪ್ರಾರಂಭಿಸುವೇ ಎನ್ನಬೇಕು.

ಒಂದು ವೇಳೆ ನೀವು "ಸಮಯ ಇಲ್ಲವೆಂದರೆ" ತಿರುಗಿಸಿ, "ಪ್ರಯಾಣದ(travel) ಸಮಯ ಬಳಸಿಕೊಳ್ಳುವೆ ಎಂದು ಹೇಳಿ. ನೀವು, "ನನ್ನ ಹತ್ತಿರ ಸಂಪರ್ಕ(connections) ಇಲ್ಲ" ಎಂದರೆ, "ಆನ್‌ಲೈನ್ ಸಮುದಾಯದ(online community) ಜೊತೆಗೆ ಸೇರಿಕೊಳ್ಳುವೆ" ಎಂದು ಹೇಳಿ. ನೀವು, "ನನ್ನ ಹತ್ತಿರ ಕೌಶಲ್ಯ(skills) ಇಲ್ಲವೆಂದುಕೊಂಡರೆ" ಚಿಂತೆ ಬೇಡ ಇದನ್ನು ತಿರುಗಿಸಿ, "ಯೌಟ್ಯೂಬ್ ನಿಂದ ಕಲಿಯುವೆ" ಎಂದು ಹೇಳಿ. ಇವುಗಳನ್ನು ಕೇವಲ 30 ದಿನ ಮಾಡಿ ಮತ್ತು ನಿಮ್ಮ ಮೆದುಳಿನ ಮನಸ್ಥಿತಿ ಬದಲಾಗುತ್ತದೆ.

ಈ ಲೇಖನದಲ್ಲಿ ನಾವು ನಾಲ್ಕು ಅಧ್ಯಯನದ ಬಗ್ಗೆ ಮಾತನಾಡಿದೇವು. ಈ 4 ಅಧ್ಯಯನದಲ್ಲಿ ಶ್ರೀಮಂತ ಮೆದುಳು ಬಡವರ ಮೆದುಳು ಒದ್ದಾಟದಲ್ಲಿ(struggle) ಬೇರೆ ಬೇರೆ ಇರುತ್ತದೆ ಎಂಬುದನ್ನು ಕಂಡುಕೊಂಡೆವು.

ಸಿಹಿ ಸುದ್ದಿ ಏನೆಂದರೆ ನೀವು ನಿಮ್ಮ ಮೆದುಳನ್ನು ಶ್ರೀಮಂತರ ರೀತಿ ಮಾಡಬಹುದು. ನಿಮ್ಮ ಈ ಯೋಚನೆಯಿಂದ ಆ ರೂಪಾಂತರ(transformation) ಬಂದಾಗ ನೀವು ಶ್ರೀಮಂತಿಕೆಯ ಕಡೆಗೆ ಸಾಗುವಿರ ಎಂಬುದು ಪ್ರಾಯೋಗಿಕವಾಗಿ ಸಾಬೀತಾಗಿದೆ.

ಇನ್ನು ಇವುಗಳನ್ನು ಸಾರಾಂಶ ಮಾಡಿದರೆ,

• Always think long term

ಯಾವಾಗಲೂ ದೀರ್ಘಾವಧಿಯಲ್ಲಿ ಯೋಚಿಸಿ ಅಂದರೆ ನೀವು ತೆಗೆದುಕೊಳ್ಳುವ ನಿರ್ಧಾರಗಳು ದೀರ್ಘಾವಧಿಯಲ್ಲಿ ಫಲ ನೀಡಬೇಕು.

• Create a predictable income stream

ಒಂದು ಊಹಿಸಬಹುದಾದ ಆದಾಯದ ಹರಿವು ಮಾಡಿ, ನಂತರ ಇನ್ನೊಂದು ಅವಕಾಶವನ್ನು ಹುಡುಕಿ ಮತ್ತೊಂದು ಆದಾಯದ ಹರಿವು ಮಾಡಿ.

• Learn daily to reach your financial goal

ನಿಮ್ಮ ಗುರಿಗಳನ್ನು ಮುಟ್ಟಲು ಪ್ರತಿದಿನ ಏನಾದರೂ ಹೊಸದನ್ನು ಕಲಿಯಿರಿ.

• Own your financial life, no blame game

ನಿಮ್ಮ ಆರ್ಥಿಕ ಬದುಕಿನ ಹೊಣೆಯನ್ನು ತೆಗೆದುಕೊಳ್ಳಿ ಮತ್ತು ಯಾರಿಗೂ ಆರೋಪ(blame) ಮಾಡಬೇಡಿ. ನೀವು ಇದರ ನೇತ್ರತ್ವ(lead) ತೆಗೆದುಕೊಳ್ಳಿ, ಪೂರ್ತಿ ಹೊಣೆಗಾರಿಕೆ ತೆಗೆದುಕೊಳ್ಳಿ, ಅದು ಬಿಟ್ಟು ಇತರರನ್ನು ಆರೋಪ ಮಾಡುತ್ತಾ ಸಮಯ ವ್ಯರ್ಥ ಮಾಡಬೇಡಿ.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.