Website designed by @coders.knowledge.

Website designed by @coders.knowledge.

How to Invest with Less Amount | ಕಡಿಮೆ ಹಣದೊಂದಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಹೇಗೆ?

Watch Video

ಕಡಿಮೆ ಹಣದೊಂದಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಹೇಗೆ? ಈ ಪ್ರೆಶ್ನೆ ತುಂಬಾ ಜನರಿಗೆ ಬರುತ್ತದೆ. ಇದರ ಬಗ್ಗೆ ನಾವು ಈ ಲೇಖನದಲ್ಲಿ ಉತ್ತರಿಸಲಿದ್ದೇವೆ. ನೀವು ಕೇವಲ 100 ರೂಪಾಯಿಯಿಂದಲೇ ಹೂಡಿಕೆಯನ್ನು ಪ್ರಾರಂಭಿಸಬಹುದು. ಅದು ಹೇಗೆ ಎಂಬುದನ್ನು ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ.

ಆದರೆ ಇದರ ಬಗ್ಗೆ ತಿಳಿಯುವ ಮೊದಲು ನೀವು ನಿಮ್ಮ ಹೂಡಿಕೆಯ ಪಯಣದಲ್ಲಿ(journey) ಪಾಲಿಸಬೇಕಾದ 3 ಹಂತಗಳು ಇವೆ. ಈ ಹಂತಗಳಲ್ಲಿ ನೀವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಮೂರನೇ ಹಂತವಾಗಿದೆ. ಆಗಿದ್ದರೆ ಮೊದಲನೇ ಮತ್ತು ಎರಡನೇ ಹಂತ ಯಾವುದು? ಅದರ ಬಗ್ಗೆ ಈಗ ನೋಡೋಣ.

ಇದನ್ನು ಓದಿ: ಈ ಸರಳ ತಂತ್ರದ ಮೂಲಕ ಮಾರುಕಟ್ಟೆಯನ್ನು ಸೋಲಿಸಿ

1. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮೊದಲು ಪಾಲಿಸಬೇಕಾದ ಹಂತಗಳು ಯಾವುವು?

how much should be an emergency fund in kannada
3 steps of investing

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮೊದಲು ಪಾಲಿಸಬೇಕಾದ ಮೊದಲ ಹಂತ ಯಾವುದು? ಇದರ ಉತ್ತರ ತುರ್ತು ನಿಧಿ(emergency fund) ಆಗಿದೆ. ನಿಮ್ಮ ಹೂಡಿಕೆಯ ಪಯಣದಲ್ಲಿ ಎಮರ್ಜೆನ್ಸಿ ಫಂಡ್ ಮೊದಲನೇ ಸ್ಥಾನದಲ್ಲಿದೆ. ತುಂಬಾ ಜನ ಕೊರೊನಾ ಸಮಯದಲ್ಲಿ ತಮ್ಮ ಕೆಲಸಗಳನ್ನು ಕಳೆದುಕೊಂಡರು. ಎಷ್ಟೋ ಜನರ ಸಂಬಳವನ್ನು ಕಡಿತಗೊಳಿಸಲಾಯಿತು. ಇಂತಹ ಸಮಯದಲ್ಲಿ ನೀವು ನಿಮ್ಮ ಕುಟುಂಬದ ಖರ್ಚುಗಳನ್ನು ನಿಭಾಯಿಸಲು ಹುಡುಕುತ್ತಿದ್ದರೆ ಅದಕ್ಕೆ ಉಪಾಯವೇ ಎಮರ್ಜೆನ್ಸಿ ಫಂಡ್. ಆಗಿದ್ದರೆ ಎಮರ್ಜೆನ್ಸಿ ಫಂಡ್ ಎಂದರೇನು?

ಎಮರ್ಜೆನ್ಸಿ ಫಂಡ್ ಎಂದರೆ, ನಿಮ್ಮ 6 ತಿಂಗಳ ಖರ್ಚಿನಷ್ಟು ಹಣವಾಗಿದೆ. ಇದನ್ನು ನೀವು ನಗದು ರೂಪದಲ್ಲೋ ಅಥವಾ ನಿಮ್ಮ ಸೇವಿಂಗ್ ಅಕೌಂಟ್ನಲ್ಲಿ ಅಥವಾ ಬಡ್ಡಿ ನೀಡುವ ಫಿಕ್ಸೆಡ್ ಡೆಪಾಸಿಟ್ ರೀತಿಯಲ್ಲಿ ಇರಿಸಬಹುದು. ಈ ರೀತಿಯ ಯಾವುದೇ ಹಣವನ್ನು ನೀವು ತಕ್ಷಣವೇ ತೆಗೆಯಬಹುದಾದರೆ ಅದುವೇ ಎಮರ್ಜೆನ್ಸಿ ಫಂಡ್ ಆಗಿದೆ. ಹೆಸರಿನಂತೆ ಈ ಫಂಡನ್ನು ನೀವು ನಿಮ್ಮ ಎಮರ್ಜನ್ಸಿ ಸಂದರ್ಭಗಳಲ್ಲಿ ಬಳಸಬೇಕು. ಅದನ್ನು ಬಿಟ್ಟು ಇತರೆ ವಿಷಯಗಳಿಗೆ ಬಳಸಬೇಡಿ.

ನಿಮ್ಮ ಹೂಡಿಕೆಯ ಪಯಣದ ಎರಡನೇ ಹಂತ ವಿಮೆ(insurance) ಆಗಿದೆ. ತುಂಬಾ ಜನ ಇದನ್ನು ಮುಖ್ಯ ಎಂದು ಭಾವಿಸುವುದಿಲ್ಲ, ಆದರೆ ಇದು ತುಂಬಾ ಮುಖ್ಯವಾಗಿದೆ. ಕೊರೋನ ಸಮಯದ ಉದಾಹರಣೆ ತೆಗೆದುಕೊಂಡರೆ ಕುಟುಂಬದಲ್ಲಿ ದುಡಿಯುವ ವ್ಯಕ್ತಿ ಸತ್ತು ಹೋದರೆ, ಆತನ ಸ್ಥಾನವನ್ನು ತುಂಬಿಸುವುದು ನಿಜವಾಗಿಯೂ ಕಷ್ಟಕರವಾಗಿದೆ. ಆದರೆ ಆತ ಸಂಪಾದಿಸುತ್ತಿರುವುದನ್ನು ತುಂಬಿಸುವುದು ಅಸಾಧ್ಯವಾಗಿಲ್ಲ.

ಅದನ್ನು ನೀವು ಇನ್ಶೂರೆನ್ಸ್ ಮೂಲಕ ತುಂಬಿಸಬಹುದು. ತುಂಬಾ ಅಗ್ಗದ ಇನ್ಶೂರೆನ್ಸ್ ಅನ್ನು ನೀವು ಹುಡುಕುತ್ತಿದ್ದರೆ, ಟರ್ಮ್ ಇನ್ಶೂರೆನ್ಸ್(term insurance) ನಿಮಗೆ ಸೂಕ್ತವಾಗಿದೆ. ನಿಮಗೆ ಅನೇಕ ಇನ್ಶೂರೆನ್ಸ್ ಪಾಲಿಸಿಗಳು ಸಿಗುತ್ತವೆ. ಅವುಗಳಲ್ಲಿ ಉತ್ತಮವಾದ ಇನ್ಶೂರೆನ್ಸ್ ಪಾಲಿಸಿಯನ್ನು ಹುಡುಕಲು ಪಾಲಿಸಿ ಬಜಾರ್ ವೆಬ್‌ಸೈಟ್‌ ನಿಮಗೆ ಸಹಕಾರಿಯಾಗಿದೆ.

ಇನ್ನೂ ನಿಮ್ಮ ಹೂಡಿಕೆಯ ಮೂರನೇ ಹಂತ ಶೇರನ್ನು ಖರೀದಿಸುವುದಾಗಿದೆ. ಈಗ ನಿಮಗೆ ನಿಮ್ಮ ಹೂಡಿಕೆಯ ಪಯಣದ 3 ಹಂತಗಳ ಬಗ್ಗೆ ಚೆನ್ನಾಗಿ ತಿಳಿಯಿತು ಎಂದು ಭಾವಿಸುತ್ತೇವೆ ಈಗ ಬರುವ ಪ್ರೆಶ್ನೆಯೇ?

ಇದನ್ನು ಓದಿ: ಸ್ಟಾಕ್‌ನಲ್ಲಿ ಹೂಡಿಕೆ ಮಾಡುವ ಮೊದಲು ಇವುಗಳು ತಿಳಿದಿರಲಿ

2. ಕಡಿಮೆ ಹಣದೊಂದಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಹೇಗೆ?

how can i start investing with less money in kannada
invest with less amount

ನೀವು ಬೆಟ್ಟಿಂಗ್ ಮಾಡುವುದಾದರೆ ಕನಿಷ್ಠ 100 ರೂಪಾಯಿ ಹಾಕಿಯಾದರೂ ಮಾಡುತ್ತೀರಾ. ಈ 100 ರೂಪಾಯಿಯಿಂದಲೂ ನೀವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯನ್ನು ಪ್ರಾರಂಭಿಸಬಹುದು. ಆಗಿದ್ದರೆ ಈ 100 ರೂಪಾಯಿಯಿಂದ ಹೂಡಿಕೆ ಮಾಡುವುದು ಹೇಗೆ?

ನೀವು ಈ 100 ರೂಪಾಯಿಂದ ಷೇರು ಮಾರುಕಟ್ಟೆಯ ಟಾಪ್ 50 ಕಂಪನಿಗಳಲ್ಲಿ ಹೂಡಿಕೆ ಮಾಡಬಹುದು. ಆದರೆ ಡೈರೆಕ್ಟ್ ಆಗಿ ಅಲ್ಲ ಬದಲಿಗೆ ಇಂಡೈರೆಕ್ಟ್ ಆಗಿ. ಅಂದರೆ ನೀವು ಇಂಡೆಕ್ಸ್‌ ಫಂಡ್‌ನಲ್ಲಿ(index fund) ಹೂಡಿಕೆ ಮಾಡುವ ಮೂಲಕ ಈ ಟಾಪ್ 50 ಕಂಪನಿಗಳಲ್ಲಿ ಹೂಡಿಕೆ ಮಾಡಬಹುದು. ಕೆಲವರು ಪ್ರಾರಂಭದಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಯಸುವುದಿಲ್ಲ.

ಒಂದು ವೇಳೆ ನೀವು ರಿಟೈರ್ಮೆಂಟ್ನಲ್ಲಿ ಸಾಕಷ್ಟು ಹಣವನ್ನು ಉಳಿಸಲು ಬಯಸಿದ್ದು, ಷೇರುಮಾರುಕಟ್ಟೆ ಬೇಡವೆಂದರೆ, ನೀವು NPS ನಲ್ಲಿ ಹೂಡಿಕೆ ಮಾಡಬಹುದು. NPS ಎಂದರೆ National Pension System ಆಗಿದೆ. ನೀವು NPSನಲ್ಲಿ ಹೂಡಿಕೆ ಮಾಡಲು ಬಯಸಿದರೆ ಇಲ್ಲಿನ ಕನಿಷ್ಠ ಮೌಲ್ಯ 500ರೂ ಆಗಿದೆ. ಹೀಗಾಗಿ "ನನ್ನ ಹತ್ತಿರ ಹೂಡಿಕೆ ಮಾಡಲು ಹಣವಿಲ್ಲ" ಎಂಬ ಕಾರಣ ನೀಡಬೇಡಿ.

ಇದನ್ನು ಓದಿ: ಷೇರು ಮಾರುಕಟ್ಟೆಯಿಂದ ಉತ್ತಮ ರಿಟರ್ನ್ಸ್ ಪಡೆಯುವುದು ಹೇಗೆ?

3. ನೀವು ಷೇರು ಮಾರುಕಟ್ಟೆಯಲ್ಲಿ ಡೈರೆಕ್ಟಾಗಿ ಹೂಡಿಕೆ ಮಾಡಲು ಬಯಸಿದರೆ ಏನು ಮಾಡಬೇಕು?

what does quantity and quality mean in stock market in kannada
quality stocks

ಯಾವ ರೀತಿಯ ಆದ್ಯತೆಯಲ್ಲಿ(priority) ಕಂಪನಿಯನ್ನು ನೋಡಬೇಕು? ನಾನು ಕ್ವಾಂಟಿಟಿಯಲ್ಲಿ ಆರಿಸಬೇಕಾ ಅಥವಾ ಕ್ವಾಲಿಟಿಯಲ್ಲಿ ಆರಿಸಬೇಕಾ?

ತುಂಬಾ ಜನ ನಾನು ಇಂದು 1 ರೂಪಾಯಿಯ 10 ಸಾವಿರ ಶೇರ್ ಖರೀದಿಸಿ, 11 ಸಾವಿರ ಲಾಭ ಮಾಡಿಕೊಂಡೆ ಎನ್ನುತ್ತಾರೆ. ಹಾಗಿದ್ದರೆ ಇದು ಒಂದು ಒಳ್ಳೆಯ ಸ್ಟ್ಯಾಟರ್ಜಿ ಆಗಿದ್ದೆಯೇ?

10 ಸಾವಿರ ರೂಪಾಯಿಯನ್ನು 1 ರೂಪಾಯಿಯ ಸ್ಟಾಕ್‌ನಲ್ಲಿ ಹೂಡಿಕೆ ಮಾಡುವ ಬದಲು, ನೀವು ಮೂಲಭೂತವಾಗಿ(fundamentally) ಬಲವಾಗಿರುವ ಕ್ವಾಲಿಟಿ ಕಂಪನಿಯ ಸ್ಟಾಕ್ ಖರೀದಿಸುವುದು ಸೂಕ್ತವಾಗಿದೆ. ಆ ಬಲವಾದ ಕಂಪನಿಯ ಒಂದಯ ಸ್ಟಾಲಕ್ 1000 ರೂ ಇದ್ದು, ನೀವು 10 ಸ್ಟಾಕ್ ಖರೀದಿಸಿದರೂ ಪರವಾಗಿಲ್ಲ, ಅದರಲ್ಲೇ ತೃಪ್ತಿ ಪಡಬೇಕು. ಏಕೆಂದರೆ ಕ್ವಾಂಟಿಟಿಗಿಂತ ಕ್ವಾಲಿಟಿ ತುಂಬಾ ಮುಖ್ಯವಾಗಿದೆ.

ರೊನಾಲ್ಡೊ ರೀಡ್ ಎಂಬುವರು ತಮ್ಮ ಜೀವನದಲ್ಲಿ ಹೂಡಿಕೆ ಮಾಡುತ್ತಾ ತಮ್ಮ ಅಂತಿಮ ದಿನಗಳಲ್ಲಿ ಹೂಡಿಕೆಯಿಂದ 60 ಕೋಟಿ ರೂ ಗಳಿಸಿದರು. ಅವರು ಹೂಡಿಕೆ ಮಾಡಲು 3 ಹಂತಗಳನ್ನು ಪಾಲಿಸುತ್ತಿದ್ದರು ಅವೆಂದರೆ

  • • ಅವರು ಕ್ವಾಲಿಟಿ ಸ್ಟಾಕ್ ಆರಿಸುತ್ತಿದ್ದರು.
  • • ಅದರಲ್ಲಿ ಹೂಡಿಕೆ ಮಾಡಿದ ನಂತರ ತಾಳ್ಮೆಯಿಂದ ಇರುತ್ತಿದ್ದರೂ ಮತ್ತೆ.
  • • ಕನ್ಸಿಸ್ಟೆನ್ಸಿಯಾಗಿ ಸ್ಟಾಕನ್ನು ಖರೀದಿಸುತ್ತಿದ್ದರು.

ರೊನಾಲ್ಡೊ ರೀಡ್ ಬಡವರಾಗಿ ಹುಟ್ಟಿದರೂ, ಆದರೆ ಶ್ರೀಮಂತರಾಗಿ ಸತ್ತರೂ, ಅದು ಕೇವಲ ಕ್ವಾಲಿಟಿ ಸ್ಟಾಕ್‌ನಲ್ಲಿ ಹೂಡಿಕೆ ಮಾಡುವ ಮೂಲಕ. ಹೀಗಾಗಿ ನೀವೂ ಕೂಡ ಕ್ವಾಲಿಟಿ ಸ್ಟಾಕ್‌ಗಳನ್ನು ಮಾತ್ರ ಆರಿಸಿಕೊಳ್ಳಿ. ಅಲ್ಪಾವಧಿಯ ಖುಷಿಗಾಗಿ ಕ್ವಾಂಟಿಟಿಯಲ್ಲಿ ಸ್ಟಾಕ್ ಖರೀದಿಸಬೇಡಿ.

ಇದನ್ನು ಓದಿ: ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಗೇಮ್ ಪ್ಲಾನ್

4. ಹೂಡಿಕೆಯ ಜರ್ನಿಯಲ್ಲಿ ಕನ್ಸಿಸ್ಟೆನ್ಸಿ ನಿಭಾಯಿಸುವುದು ಮುಖ್ಯವೇ?

why consistency is important in share market in kannada
consistency

ನಿಮ್ಮ ಹೂಡಿಕೆಯ ಪಯಣದಲ್ಲಿ ಸ್ಥಿರತೆಯನ್ನು(consistency) ಮೆಂಟೇನ್ ಮಾಡುವುದು ತುಂಬಾ ಮುಖ್ಯವಾಗಿದೆ. 2011ರ ವಿಶ್ವಕಪ್‌ನಲ್ಲಿ ಧೋನಿ 6 ಹೊಡೆದಿದ್ದನ್ನು ಎಲ್ಲರೂ ನೆನೆಸಿಕೊಳ್ಳುತ್ತಾರೆ. ಆದರೆ ಅದನ್ನು ಒಡೆಯಲು ಅವರು ಎಷ್ಟು ಅಭ್ಯಾಸ(practice) ಮಾಡಿರಬಹುದೆಂಬುದನ್ನು ಯಾರೂ ನೆನೆಸಿಕೊಳ್ಳುವುದಿಲ್ಲ. ಧೋನಿ ಪ್ರತಿದಿನ ಎಷ್ಟೋ ಗಂಟೆಗಳ ಕಾಲ ಅದನ್ನು ಅಭ್ಯಾಸ ಮಾಡಿರುತ್ತಾರೆ.

ಹೀಗಾಗಿ ನಿಮ್ಮ ಫೈನಲ್ ರಿಸಲ್ಟ್ ಅಸಂಖ್ಯಾತ ದಿನಗಳ ಕಂಟೆಸ್ಟೆಂಟ್ಸ್ ಅಭ್ಯಾಸವಾಗಿದೆ. ಇದೇ ರೀತಿಯಲ್ಲಿ ನೀವು ನಿಮಗೆ ತಿಂಗಳು ಸಿಗುವ ಸಂಬಳದಲ್ಲಿ ಸ್ವಲ್ಪವನ್ನು ಶಿಸ್ತು ಮತ್ತು ಕನ್ಸಿಸ್ಟೆನ್ಸಿಯಾಗಿ ಹೂಡಿಕೆಯಲ್ಲಿ ಹಾಕುವ ಅಭ್ಯಾಸ ಮಾಡಿಕೊಂಡು ಬಂದರೆ, ಮಾತ್ರ ನೀವು ಜಾಕ್ ಪಾಟ್ ಹೊಡೆಯಲು ಸಾಧ್ಯವಾಗುತ್ತದೆ. ಹೂಡಿಕೆಯಲ್ಲಿ ನಿಮ್ಮ ಲಾಭ ಕಾಂಪಿಟೆನ್ಸಿ ಮೇಲೆ ನಿಂತಿದೆ ಎಂಬುದನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಿ.

ಇದನ್ನು ಓದಿ: ಸಮಯ ನಿರ್ವಹಣೆಗೆ ಹತ್ತು ಸಲಹೆಗಳು

5. ನಿಮ್ಮ ಹೂಡಿಕೆಯ ಪಯಣದಲ್ಲಿ ಇತರರಿಗೂ ನೀವು ಸಹಾಯ ಮಾಡಿ.

helping others financially in kannada
helping others

ನಿಮ್ಮ ಮನೆಗೆ ಕೆಲಸ ಮಾಡಲು ಬರುವವರು ನೀವು ತಿಂಗಳ ಅಂತ್ಯದಲ್ಲಿ ಸಂಬಳವನ್ನು ನೀಡುವಾಗ, "ಸ್ವಲ್ಪ ಹಣವನ್ನು ನೀವೇ ಇಟ್ಟುಕೊಳ್ಳಿ, ನಾವು ಕೇಳಿದಾಗ ನೀಡಿ" ಎಂದು ಹೇಳಬಹುದು. ಅವರಿಗೆ ನೀವು ಆ ಹಣವನ್ನು ಸೇವಿಂಗ್ ಅಕೌಂಟ್ನಲ್ಲಿ ಇಡುವಂತೆ ತಿಳಿಸಬಹುದು. ಏಕೆಂದರೆ ಎಷ್ಟೋ ಜನಗಳಿಗೆ ಫೈನಾನ್ಷಿಯಲ್ ಬಗ್ಗೆ ಅಷ್ಟಾಗಿ ತಿಳಿದಿರುವುದಿಲ್ಲ. ಹಣವನ್ನು ಸೇವಿಂಗ್ ಅಕೌಂಟ್ನಲ್ಲಿಡುವುದರಿಂದ ಅದಕ್ಕೆ ಬಡ್ಡಿ ಕೂಡ ಸಿಗುತ್ತದೆ. ಹೀಗಾಗಿ ನಿಮ್ಮ ಹೂಡಿಕೆಯ ಜರ್ನಿಯಲ್ಲಿ ಇತರರಿಗೂ ನೀವು ಸಹಾಯ ಮಾಡಿ. ಇದರಿಂದ ನಿಮ್ಮ ಮನಸ್ಸಿನಲ್ಲಿ ಒಂದು ತೃಪ್ತಿ ಇರುತ್ತದೆ ಮತ್ತು ಹೊಸ ಕಲಿಕೆಗಳನ್ನು ತಿಳಿದುಕೊಳ್ಳುತ್ತೀರಿ.

ಆಗಿದ್ದರೆ ಈಗ ಈ ಲೇಖನದಲ್ಲಿ ನಾವೇನು ಕಲಿತೆವು ಎಂಬುದರ ಮೇಲೆ ರೀಕ್ಯಾಪ್ ಮಾಡೋಣ.

ಮೊದಲನೆಯದಾಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮೊದಲು ಪಾಲಿಸಬೇಕಾದ 3 ಹಂತಗಳ ಬಗ್ಗೆ ತಿಳಿದೆವು. ಅವೆಂದರೆ ಎಮರ್ಜೆನ್ಸಿ ಫಂಡ್, ಇನ್ಶೂರೆನ್ಸ್, ಮತ್ತು ಸ್ಟಾಕ್‌ನಲ್ಲಿ ಹೂಡಿಕೆ ಮಾಡುವುದು.

ಎರಡನೆಯದಾಗಿ ಕಡಿಮೆ ಹಣದೊಂದಿಗೆ ಹೂಡಿಕೆ ಮಾಡುವುದು ಹೇಗೆ ಎಂಬುದನ್ನು ನೋಡಿದೆವು. ಅದರಲ್ಲಿ ನಾವು ಇಂಡೆಕ್ಸ್ ಫಂಡ್‌ನಲ್ಲಿ ಹಣ ಹೂಡಿಕೆ ಮಾಡಲು ತಿಳಿಸಿದೆವು. ಒಂದು ವೇಳೆ ರಿಟೈರ್ಮೆಂಟ್ ಪ್ಲಾನ್ ಆಗಿದ್ದರೆ, NPS ಸೂಕ್ತ ಎಂದು ಹೇಳಿದೆವು.

ಮೂರನೆಯದಾಗಿ ಷೇರು ಮಾರುಕಟ್ಟೆಯ ಕಂಪನಿಯಲ್ಲಿ ಡೈರೆಕ್ಟಾಗಿ ಹೂಡಿಕೆ ಮಾಡಲು ಕ್ವಾಂಟಿಟಿ ಅಥವಾ ಕ್ವಾಲಿಟಿ ಇವುಗಳಲ್ಲಿ ಯಾವುದೂ ಪ್ರಮುಖ ಎಂದು ತಿಳಿದುಕೊಂಡೆವು. ಅದರಲ್ಲಿ ಕ್ವಾಲಿಟಿ ಪ್ರಮುಖ ಎಂದು ರೊನಾಲ್ಡೊ ರೀಡ್ ಅವರ ಉದಾಹರಣೆ ಮೂಲಕ ತಿಳಿದೆವು.

ಇನ್ನು ನಾಲ್ಕನೆಯದಾಗಿ ಹೂಡಿಕೆಯಲ್ಲಿ ನೀವು ಕನ್ಸಿಸ್ಟೆನ್ಸಿಯನ್ನು ಪಾಲಿಸಬೇಕೆಂಬುದನ್ನು ನೋಡಿದ್ದೇವು. ಅದರಲ್ಲಿ ನಾವು ಎಂ.ಎಸ್.ಧೋನಿಯವರ ಕನ್ಸಿಸ್ಟೆನ್ಸಿ ಅಭ್ಯಾಸದಿಂದ 2011ರ ವಿಶ್ವಕಪ್‌ನಲ್ಲಿ 6 ಹೊಡೆದ ಉದಾಹರಣೆ ತಿಳಿಸಿದೆವು.

ಇನ್ನು ಐದನೆಯದಾಗಿ ನಿಮ್ಮ ಹೂಡಿಕೆಯ ಪಯಣದಲ್ಲಿ ಇತರರಿಗೆ ಸಹಾಯ ಮಾಡುವಂತೆ ತಿಳಿಸಿದೆವು. ಇದರಿಂದ ನಿಮಗೆ ತೃಪ್ತಿಯೂ ಸಿಗುತ್ತದೆ ಮತ್ತು ನಿಮ್ಮ ಕಲಿಕೆಯ ಸಾಮರ್ಥ್ಯ ಹೆಚ್ಚುತ್ತದೆ.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

commenters

deepak bankapur • November 23rd,2022

Nice