7 Important Money Lessons | ಪ್ರಮುಖ 7 ಹಣದ ಮೇಲಿನ ಪಾಠಗಳು
Info Mind 1651
Watch Video
ನಮ್ಮ ಮುಂಚಿನ ಲೇಖನದಲ್ಲಿ one up on wall street ಪುಸ್ತಕದ 8 ಚಾಪ್ಟರ್ವರೆಗೂ ತಿಳಿಸಿದ್ದೇವು. ಈ ಲೇಖನದಲ್ಲಿ ಉಳಿದ ಚಾಪ್ಟರ್ಗಳ ಸಾರಾಂಶವನ್ನು ಶೇರ್ ಮಾಡಲಿದ್ದೇವೆ.
ಇದನ್ನು ಓದಿ: One Up On Wall Street ಪುಸ್ತಕದ ಸಾರಾಂಶಇದರಲ್ಲಿ ಲೇಖಕರು ಅವರು ಎಂದಿಗೂ ಖರೀದಿಸದ ಸ್ಟಾಕ್ ಬಗ್ಗೆ ಮಾತನಾಡುತ್ತಿದ್ದಾರೆ.
ಲೇಖಕರು ಟ್ರೆಂಡಿ ಮತ್ತು ಪ್ರತಿಯೊಬ್ಬರೂ, "ಕೆಲವು ವರ್ಷದಲ್ಲಿ ಅದು ಒಳ್ಳೆಯ ರಿಟರ್ನ್ ಕೊಡುತ್ತದೆ" ಎಂದು ಮಾತನಾಡುತ್ತಿದ್ದಾರೆ, ಆ ರೀತಿಯ ಕಂಪನಿಗಳಲ್ಲಿ ಎಂದಿಗೂ ಹೂಡಿಕೆ ಮಾಡುವುದಿಲ್ಲ. ಇದು ಏಕೆಂದರೆ ಹಾಟ್ ಸ್ಟಾಕ್(hot stock) ಬೇಗನೇ ಮೇಲೋಗುತ್ತದೆ, ಆದರೆ ಒಮ್ಮೆ ಕೆಳಗೆ ಬಿದ್ದರೆ ಹೂಡಿಕೆದಾರರಿಗೆ ಅಧಿಕ ನಷ್ಟವಾಗುತ್ತದೆ. ನೀವು ಹಾಟ್ ಸ್ಟಾಕಿನ ಲಾಭದಿಂದ ಮನೆಯನ್ನು ನಡೆಸಲು ಬಯಸಿದರೆ ರಸ್ತೆಗೆ ಬರುವ ದಿನ ದೂರವಿರುವುದಿಲ್ಲ.
ಇದು ಮುಂದಿನ ಇಂಟೆಲ್(intel), ಇದು ಮುಂದಿನ ಮೈಕ್ಡೊನಾಲ್ಡ್(mcdonald) ಇದು ಮುಂದಿನ ಐಬಿಎಂ(ibm) ಎಂದು ಕೇಳಿ ಬರುವ ಕಂಪನಿಗಳಲ್ಲೂ ಪೀಟರ್ ಲಿಂಚ್ ಅವರು ಹೂಡಿಕೆ ಮಾಡುವುದಿಲ್ಲ.
ನಿಮಗೆ ಅತಿಯಾದ ಜ್ಞಾನವಿದ್ದರೂ ಒಂದೇ ಕಡೆ ನಿಮ್ಮ ಅಧಿಕ ಹಣವನ್ನು ಹೂಡಿಕೆ ಮಾಡಿದರೆ ಅದನ್ನು ಡೈವರ್ಸಿಫಿಕೇಶನ್(diworsification) ಎನ್ನುತ್ತಾರೆ. ಇದು ನಿಮಗೆ ಅಧಿಕ ಅಪಾಯಕಾರಿ(risky) ಆಗಿರಬಹುದು. ಉದಾಹರಣೆಗೆ ನೀವು ತಂತ್ರಜ್ಞಾನ, ಆರೋಗ್ಯ, ಗ್ರಾಹಕರ ಉತ್ಪನ್ನ ಮತ್ತು ಫೈನಾನ್ಸ್ನಲ್ಲಿ ಹೂಡಿಕೆ ಮಾಡಲು ಬಯಸಿದರೆ, ನಿಮಗೆ ಈ ಎಲ್ಲ ಇಂಡಸ್ಟ್ರಿಗಳ ಜ್ಞಾನವಿರುತ್ತದೆ. ಆದರೆ ನೀವು ಹೋಗುವ ಜಿಮ್ನಲ್ಲಿ ಇಬ್ಬರೂ ಸ್ಟೀಲ್ ಕಂಪನಿಯ ಬಗ್ಗೆ ಮಾತನಾಡುತ್ತಾರೆ. ನೀವು ಆ ಮಾತನ್ನು ಕೇಳಿ ಆ ಕಂಪನಿಯಲ್ಲಿ ಅತಿಯಾಗಿ ಹೂಡಿಕೆ ಮಾಡುತ್ತೀರಾ.
ಜನರು ಅತಿಯಾಗಿ ಊಹಾತ್ಮಕ(speculative) ಮಾಡುತ್ತಿರುವ ಸ್ಟಾಕ್ಸ್ ಅನ್ನು ವಿಸ್ಪೆರ್ ಸ್ಟಾಕ್ಸ್(whisper stock) ಎನ್ನಲಾಗುತ್ತದೆ. ಇದು ಅತಿಯಾಗಿ ಖಾಸಗಿಯಲ್ಲಿ(private) ನಡೆಯುತ್ತಿರುತ್ತದೆ. ಅಂದರೆ ಸಾಮಾಜಿಕ ಮಾಧ್ಯಮದ ಗ್ರೂಪ್, ವಾಟ್ಸಾಪ್ ಗ್ರೂಪ್. ಇದರಲ್ಲಿ ಜನರು ಅಲ್ಲಿ ನೀಡುವ ಟಿಪ್ಸ್ ಮೇಲೆ ಹೂಡಿಕೆ ಮಾಡುತ್ತಾರೆ ಮತ್ತು ಅಲ್ಲಿ ರಿಟರ್ನ್ ಬೇಗನೆ ಸಿಗುತ್ತದೆ ಎಂದು ಭರವಸೆ(promise) ನೀಡುತ್ತಾರೆ. ಲೇಖಕರು ಆ ರೀತಿಯ ಸ್ಟಾಕ್ಗಳನ್ನು ನಿರ್ಲಕ್ಷಿಸುತ್ತಾರೆ ಮತ್ತು ಈ ರೀತಿಯ ಗುಂಪಿನಿಂದಲೂ ದೂರವಿರುತ್ತಾರೆ.
ಹೂಡಿಕೆದಾರರು ಅತ್ಯಾಕರ್ಷಕ(exciting) ಹೆಸರು ಇರುವ ಕಂಪನಿಗಳಿಂದಲೂ ಉಳಿದುಕೊಳ್ಳಬೇಕು ಎಂದು ಪೀಟರ್ ಲಿಂಚ್ ಹೇಳುತ್ತಾರೆ. ಒಂದು ವೇಳೆ ಕಂಪನಿಯ ಹೆಸರಲ್ಲಿ advanced, leading ಮತ್ತು micro ಪದ ಕೂಡಿದ್ದರೆ, ಕೇವಲ ಆ ಬ್ರಾಂಡ್ ಹೆಸರಿನಿಂದ ಅದರಲ್ಲಿ ನೀವು ಹೂಡಿಕೆ ಮಾಡಬಾರದು. ಪೀಟರ್ ಲಿಂಚ್ ಅವರು ಹೂಡಿಕೆ ಮಾಡದಿರುವ 5 ಕೆಟಗರಿ ಸ್ಟಾಕ್ ಇವುಗಳಾಗಿವೆ.
ಇದನ್ನು ಓದಿ: ಪ್ರಮುಖ 7 ಹಣದ ಮೇಲಿನ ಪಾಠಗಳುಈ ಚಾಪ್ಟರ್ನಲ್ಲಿ ಒಂದು ಕಂಪನಿ ಅಧಿಕ ಗಳಿಸಿ ಅಧಿಕ ನೆಟ್ ಅಸೆಟ್(net asset) ನಿರ್ಮಿಸಿಕೊಂಡರೆ ಯಶಸ್ವಿಯಾಗುತ್ತದೆ ಎಂದು ತಿಳಿಸಿದ್ದಾರೆ. ನೀವು ಒಮ್ಮೆ ಎಲ್ಲವನ್ನು ತಿರಸ್ಕರಿಸಿ ಕಂಪನಿ ಎಷ್ಟು ಹಣವನ್ನು ಗಳಿಸುತ್ತಿದೆ ಎಂದು ನೋಡಿ ಮತ್ತು ಅವರ ಗಳಿಕೆಯು(earnings) ವರ್ಷದಿಂದ ವರ್ಷಕ್ಕೆ ಏರುತ್ತಿದೆಯೇ ಎಂದು ನೋಡಿ. ಒಂದು ವೇಳೆ ಏರುತ್ತಿದ್ದರೆ ಎಷ್ಟು ಪರ್ಸಂಟೇಜ್ನಲ್ಲಿ(persentage) ಎಂದು ನೋಡಿ.
ಇದರಲ್ಲಿ ಲೇಖಕರು ಈ pe ರೇಶಿಯೋವನ್ನು(pe ratio) ನೋಡಲು ಹೇಳುತ್ತಾರೆ. pe ರೇಶಿಯೋ ಎಂದರೆ price to earning ratio, ಸ್ಟಾಕ್ನ ಬೆಲೆ ಮತ್ತು ಕಂಪನಿಯ ಗಳಿಕೆಯ ಮೇಲಿನ ಸಂಬಂಧವನ್ನು ತೋರಿಸುತ್ತದೆ. pe ರೇಶಿಯೋದಿಂದ ನಾವು ಒಂದು ಸ್ಟಾಕ್ ಅಧಿಕ ಬೆಲೆಯದ್ದು(overpriced) ಆಗಿದೆಯಾ ಇಲ್ಲ, ಕಡಿಮೆ ಬೆಲೆಯದ್ದು(underprice) ಆಗಿದೆಯೇ ಎಂದು ತಿಳಿದುಕೊಳ್ಳಬಹುದು.
pe ರೇಶಿಯೋದ ಫಾರ್ಮುಲಾ ತುಂಬಾ ಸರಳವಾಗಿದೆ. ಯಾವುದೇ ಕಂಪನಿಯ ಪ್ರಸ್ತುತ ಸ್ಟಾಕ್ ಬೆಲೆಯಿಂದ(current stock price) ಅದರ ಪ್ರತಿ ಷೇರಿಗೆ ಗಳಿಕೆಯಿಂದ(earnings per share) ಭಾಗ ಮಾಡಿದರೆ ನಿಮಗೆ ಆ ಕಂಪನಿಯ pe ರೇಶಿಯೋ ಸಿಗುತ್ತದೆ. ಉದಾಹರಣೆಗೆ ಕಂಪನಿ "a" ಯಾ ಸ್ಟಾಕ್ ಬೆಲೆ 100 ರೂ ಇದ್ದು ಮತ್ತು ಹಿಂದಿನ ಒಂದು ವರ್ಷದ eps 10 ರೂ ಇದ್ದರೆ, ಕಂಪನಿಯ pe ರೇಶಿಯೋ 100/10 ಅಂದರೆ ಅದು 10 ಆಗುತ್ತದೆ. ಇದನ್ನು ಸರಳವಾಗಿ ತಿಳಿಸಬೇಕೆಂದರೆ, pe ರೇಶಿಯೋ ಒಬ್ಬ ಹೂಡಿಕೆದಾರ 1 ರೂ ಲಾಭಕ್ಕೆ ಎಷ್ಟು ಹಣವನ್ನು ನೀಡಲು ಸಿದ್ಧವಾಗಿದ್ದಾನೆ ಎಂಬುದನ್ನು ತಿಳಿಸುತ್ತದೆ. ಅಂದರೆ ಕಂಪನಿ "a"ಯಾ 1 ರೂ ಲಾಭಕ್ಕೆ ಹೂಡಿಕೆದಾರ 10 ರೂ ಕೊಡಲು ಸಿದ್ಧನಿದ್ದಾನೆ.
ಇದರಲ್ಲಿ ನೀವು ಕೆಲವು ಭಾರತೀಯ ಬ್ಯಾಂಕ್ಗಳ pe ರೇಶಿಯೋವನ್ನು ನೋಡಬಹುದು. ಹೆಚ್ಡಿಎಫ್ಸಿ(hdfc) ಬ್ಯಾಂಕ್ನ 1 ರೂ ಲಾಭಕ್ಕೆ ಹೂಡಿಕೆದಾರರು 19 ರೂ ಕೊಡಲು ಸಿದ್ದರಿದ್ದಾರೆ. ಅದೇ ಬ್ಯಾಂಕ್ ಬರೋಡಾದ(bank baroda) 1 ರೂ ಲಾಭಕ್ಕೆ, ಹೂಡಿಕೆದಾರರು 11 ರೂ ಕೊಡಲು ಸಿದ್ದರಿದ್ದಾರೆ. ನೀವು ಈಗ ಬ್ಯಾಂಕ್ ಬರೋಡಾ ಬದಲು ಹೆಚ್ಡಿಎಫ್ಸಿ ಬ್ಯಾಂಕಿಗೆ ಅಧಿಕ ಹಣವನ್ನು ಹೂಡಿಕೆದಾರರು ಏಕೆ ಕೊಡಲು ಬಯಸುತ್ತಾರೆ ಎಂದು ಯೋಚಿಸಬಹುದು. pe ರೇಶಿಯೋ ಆ ಕಂಪನಿಯು ಭವಿಷ್ಯದಲ್ಲಿ ಅಧಿಕ ರಿಟರ್ನ್ ನೀಡುತ್ತದೆ ಎಂಬ ಭರವಸೆಯನ್ನು ತಿಳಿಸುತ್ತದೆ. ಹೀಗಾಗಿ ಇದರಲ್ಲಿ ಹೂಡಿಕೆದಾರರು ಹೆಚ್ಡಿಎಫ್ಸಿ ಬ್ಯಾಂಕ್ ಇತರೆ ಬ್ಯಾಂಕುಗಳಿಗಿಂತ ಒಳ್ಳೆಯ ಪ್ರದರ್ಶನ(performance) ನೀಡುತ್ತದೆ ಎಂಬ ನಂಬಿಕೆ ಇದೆ.
ಈ ಚಾಪ್ಟರ್ನ ಇನ್ನೊಂದು ಭಾಗ ಭವಿಷ್ಯದ ಗಳಿಕೆಯಾ(future earnings) ಮೇಲಾಗಿದೆ. ಯಾವುದೇ ಕಂಪನಿಯ ಭವಿಷ್ಯದ ಗಳಿಕೆಯನ್ನು ಊಹಿಸಲೂ ಇರುವ ಸುಲಭ ಮಾರ್ಗವೆಂದರೆ ಅದರ ಪ್ರಸ್ತುತ ಗಳಿಕೆಯನ್ನು(current earnings) ನೋಡಬೇಕು. ಒಂದು ಕಂಪನಿ ಐದು ರೀತಿಯಲ್ಲಿ ತನ್ನ ಗಳಿಕೆಯನ್ನು ಹೆಚ್ಚಿಸಿಕೊಳ್ಳಬಹುದು.
ಅಂದರೆ ಖರ್ಚನ್ನು ಕಡಿಮೆ ಮಾಡುವುದು.
ಅಂದರೆ ತನ್ನ ಅಸ್ತಿತ್ವದಲ್ಲಿರುವ(existing) ವಸ್ತುಗಳ ಬೆಲೆಯನ್ನು ಹೆಚ್ಚಿಸುವುದು.
ಅಂದರೆ ಹೊಸ ಮಾರುಕಟ್ಟೆಗೆ ನಮೂದಿಸುವುದು.
ಅಂದರೆ ತನ್ನ ವಸ್ತುಗಳನ್ನು ಅತಿಯಾಗಿ ಹಳೆ ಮಾರುಕಟ್ಟೆ ಇಲ್ಲ ಹಳೆಯ ಗ್ರಾಹಕರಿಗೆ ಮಾರುವುದಾಗಿದೆ.
ಗಳಿಕೆ ಹೆಚ್ಚಿದರೆ ಸ್ಟಾಕ್ ಬೆಲೆ ಕೂಡ ಹೆಚ್ಚುತ್ತದೆ ಎಂದು ಲೇಖಕರು ಹೇಳುತ್ತಾರೆ. ಹೀಗಾಗಿ ಒಂದು ಕಂಪನಿಯ ಸ್ಟಾಕ್ ಬೆಲೆ ಹೆಚ್ಚಲು ಅದರ ಗಳಿಕೆ ಕೂಡ ಕಾರಣವಾಗಿದೆ.
ಇದನ್ನು ಓದಿ: ಶ್ರೀಮಂತರಿಗೆ ತಿಳಿದಿರುವ ಮತ್ತು ಬಡವರಿಗೆ ತಿಳಿದಿರದ ಹಣದ 5 ನಿಯಮಗಳುಲೇಖಕರು ಮೊದಲೂ ನಮಗೆ ಯಾವ ಕೆಟಗರಿಯ ಸ್ಟಾಕ್ ತೆಗೆದುಕೊಂಡೆವು ಎಂದು ನೋಡಲು ಹೇಳುತ್ತಾರೆ ಮತ್ತು ಅದರ pe ರೇಶಿಯೋ ಬಗ್ಗೆ ತಿಳಿದುಕೊಳ್ಳಬೇಕು. ಇದರ ಜೊತೆಗೆ ಅದರ ಭವಿಷ್ಯದ ಗಳಿಕೆ ಏನಾಗಿರುತ್ತದೆ ಎಂದು ತಿಳಿದುಕೊಳ್ಳಬೇಕು. ಇದು ಕಂಪನಿಯ ಮೌಲ್ಯಮಾಪನವನ್ನು(valuation) ವಿಶ್ಲೇಷಣೆ ಮಾಡಲು ಸಹಾಯ ಮಾಡುತ್ತದೆ.
ಅಂದರೆ ನೀವು ಕಂಪನಿಯ ಬಗ್ಗೆ ಎಷ್ಟೆಲ್ಲ ತಿಳಿದುಕೊಳ್ಳಲು ಸಾಧ್ಯವೊ ಅಷ್ಟು ತಿಳಿದುಕೊಳ್ಳಬೇಕು.
ಇದರ ನಂತರ ಲೇಖಕರು ಒಂದು ಆಸಕ್ತಿಕರ ಹಂತದ ಬಗ್ಗೆ ತಿಳಿಸಿದ್ದಾರೆ. ಅದುವೇ ಕಂಪನಿಯ ಎರಡು ನಿಮಿಷಗಳ ಕಥೆಯ ಮೇಲಾಗಿದೆ. ಅಂದರೆ ನೀವು ಯಾವುದೇ ಕಂಪನಿಯ ಸ್ಟಾಕ್ ಖರೀದಿಸಿದರೆ ಆ ಕಂಪನಿಯ ಮೇಲೆ ಏಕೆ ಆಸಕ್ತಿಯನ್ನು ಹೊಂದಿದ್ದೀರಿ? ಆ ಕಂಪನಿ ಬೆಳೆಯಲು ಇರುವ ಕಾರಣಗಳು ಯಾವುವು? ಎಂತಹ ಚಾಲೆಂಜ್ಗಳನ್ನು ಕಂಪನಿ ಎದುರಿಸಬಹುದು ಎಂಬುದನ್ನು ಎರಡು ನಿಮಿಷದಲ್ಲಿ ಹೇಳಬೇಕು.
ಉದಾಹರಣೆಗೆ ನಾನು ಹೆಚ್ಡಿಎಫ್ಸಿ ಬ್ಯಾಂಕಿನಲ್ಲಿ ಹೂಡಿಕೆ ಮಾಡಲು ಬಯಸಿದ್ದೇನೆ ಎಂದುಕೊಳ್ಳಿ. ಇದು ಸ್ಟಾಕ್ ಶಿಫಾರಸು(recommendation) ಆಗಿಲ್ಲ. ನನ್ನ ಎರಡು ನಿಮಿಷಗಳ ಕಥೆ ಈ ರೀತಿಯಾಗಿ ಇರುತ್ತದೆ. "ಹೆಚ್ಡಿಎಫ್ಸಿ ಬ್ಯಾಂಕ್ ಒಂದು ಸ್ಟಾಲ್ವಾರ್ಟ್ ಸ್ಟಾಕ್ ಆಗಿದೆ. ಅಂದರೆ ಇದು ಭಾರತದ ದೊಡ್ಡ ಖಾಸಗಿ ವಲಯದ ಬ್ಯಾಂಕ್ಗಳಲ್ಲಿ ಒಂದಾಗಿದೆ. ಇದು ದೀರ್ಘಾವಧಿಗೆ ಒಂದು ಒಳ್ಳೆಯ ಹೂಡಿಕೆಯಾಗಿದೆ(investment). ಏಕೆಂದರೆ ಭಾರತೀಯ ಬ್ಯಾಂಕಿಂಗ್ ಇಂಡಸ್ಟ್ರಿಯಲ್ಲಿ ಇವರದ್ದು ಗಟ್ಟಿಯಾದ ಸ್ಥಾನವಿದೆ. ಇದು ಒಳ್ಳೆಯ ಹಣಕಾಸಿನ ಕಾರ್ಯಕ್ಷಮತೆಯನ್ನು ನೀಡಿದೆ ಮತ್ತು ಇದರ ಆಡಳಿತ ಕೂಡ ಚೆನ್ನಾಗಿದೆ.
ಭಾರತದ ಬೆಳೆಯುತ್ತಿರುವ ಆರ್ಥಿಕತೆಯಿಂದ ಹೆಚ್ಡಿಎಫ್ಸಿ ಬ್ಯಾಂಕ್ಗೆ ಉಪಯುಕ್ತವಾಗಲಿದೆ. ಏಕೆಂದರೆ ಗ್ರಾಹಕರ ಬೇಡಿಕೆ ಕೂಡ ಹೆಚ್ಚುತಿದೆ. ಇವರ ಹತ್ತಿರ ವ್ಯಾಪಕ ಶಾಖೆಯ ಜಾಲ(extensive branch network), ತಾಂತ್ರಿಕ ಪ್ರಗತಿ ಮತ್ತು ಗಟ್ಟಿಯಾದ ಗ್ರಾಹಕರ ಗಮನವಿದೆ. ಎಚ್ಡಿಎಫ್ಸಿ ಬ್ಯಾಂಕ್ ಆರೋಗ್ಯಕರ ಲಾಭದಾಯಕತೆ, ಒಳ್ಳೆಯ ಅಸೆಟ್ ನಿರ್ವಹಣೆ ಮತ್ತು ಬೆಳವಣಿಗೆಯಲ್ಲಿ ಒಳ್ಳೆಯ ಸಾಧನೆ ದಾಖಲೆಯನ್ನು ಹೊಂದಿದೆ.
ಇದರ ಚಾಲೆಂಜ್ ಬಗ್ಗೆ ತಿಳಿಸಿದರೆ ಮೊದಲ ಚಾಲೆಂಜ್ ನಿಯಂತ್ರಕ ಪರಿಸರದ(regulatory environment) ಮೇಲಾಗಿದೆ. ಭಾರತದಲ್ಲಿ ಬ್ಯಾಂಕಿಂಗ್ ಸೆಕ್ಟರ್ಗಳು ನಿಯಂತ್ರಕ ಚೌಕಟ್ಟಿನ ಮೇಲೆ ಕಾರ್ಯನಿರ್ವಹಿಸುತ್ತವೆ. ಹೀಗಾಗಿ ಒಂದು ಹೊಸ ನಿಯಮ ಮತ್ತು ಕಾನೂನಿನಿಂದ ಇವರಿಗೆ ಸಮಸ್ಯೆಯಾಗಬಹುದು. ಇನ್ನೂ ಚಾಲೆಂಜ್ 2 ಬಗ್ಗೆ ತಿಳಿಸಿದರೆ ಹೆಚ್ಚಿನ ಸ್ಪರ್ಧೆಯ(high competation) ಮೇಲಾಗಿದೆ. ಭಾರತದಲ್ಲಿ ಸ್ಥಳೀಯ(local) ಮತ್ತು ಅಂತಾರಾಷ್ಟ್ರೀಯ(international) ಬ್ಯಾಂಕ್ಗಳ ಉಪಸ್ಥಿತಿ ಕೂಡ ಅಧಿಕವಿದೆ. ಇದರಿಂದ ಎಚ್ಡಿಎಫ್ಸಿ ಬ್ಯಾಂಕಿಗೆ ಅಧಿಕ ಸ್ಪರ್ಧಿಗಳು ಇದ್ದಾರೆ. ಹೀಗಾಗಿ ಹೆಚ್ಡಿಎಫ್ಸಿ ಬ್ಯಾಂಕ್ ತನ್ನನ್ನು ಸುಧಾರಿಸಿಕೊಳ್ಳುತ್ತಿರಬೇಕು.
ಇದೇ ರೀತಿ ಯಾವ ಕಂಪನಿಯ ಶೇರ್ ಖರೀದಿಸಲು ನೀವು ಆಸಕ್ತಿ ಹೊಂದಿರುತ್ತೀರೋ, ಅದರ 2 ನಿಮಿಷದ ಕಥೆಯನ್ನು ಕಮೆಂಟ್ನಲ್ಲಿ ತಿಳಿಸಿ.
ಇದನ್ನು ಓದಿ: ಸಂಪತ್ತು, ಆರೋಗ್ಯ ಮತ್ತು ಯಶಸ್ಸಿಗೆ 6 ಬೆಳಗಿನ ಅಭ್ಯಾಸಗಳುಇದರಲ್ಲಿ ಲೇಖಕರು ಕಂಪನಿಯ ವದಂತಿ(rumers) ಬದಲು ಸಂಗತಿಗಳ(facts) ಮೇಲೆ ಗಮನ ಹರಿಸಲು ಹೇಳುತ್ತಾರೆ. ಇದಕ್ಕಾಗಿ ನೀವು ಕಂಪನಿಯ ವಾರ್ಷಿಕ ವರದಿಯನ್ನು(annual report) ಓದಬೇಕು.
ಇದರಲ್ಲಿ ಲೇಖಕರು ನೀವು ಇಷ್ಟಪಟ್ಟ ಕಂಪನಿಯಲ್ಲಿ ಹೂಡಿಕೆ ಮಾಡುವ ಮೊದಲು ಕೆಲವು ಪ್ರಮುಖ ಸಂಖ್ಯೆಗಳನ್ನು ನೋಡಲು ತಿಳಿಸಿದ್ದಾರೆ. ಈ ಎಲ್ಲಾ ಸಂಖ್ಯೆಯನ್ನು ಅದರ ಪ್ರತಿಸ್ಪರ್ಧಿಯ ಜೊತೆ ಹೋಲಿಸಬೇಕು. ಇದನ್ನು ವಿವರಿಸಲು ಸಾಧ್ಯವಿಲ್ಲ, ಏಕೆಂದರೆ ಆರ್ಟಿಕಲ್ ದೊಡ್ಡದಾಗಬಹುದು. ಆದರೆ ಅವು ಯಾವುವು ಎಂದು ತಿಳಿಸುತ್ತೇವೆ:
ಉದಾಹರಣೆಗೆ ನೀವು ಹೆಚ್ಡಿಎಫ್ಸಿ ಬ್ಯಾಂಕ್ ಅನ್ನು ಬ್ಯಾಂಕ್ ಬರೋಡ ಜೊತೆ ಹೋಲಿಸಿದರೆ, ಈ ಎಲ್ಲಾ ಸಂಖ್ಯೆಯನ್ನು ನೀವು ಎಕ್ಸೆಲ್ ಶೀಟ್ನಲ್ಲಿ(excel sheet) ಹಾಕಿ ಹೋಲಿಕೆ ಮಾಡಬಹುದು.
ಇದನ್ನು ಓದಿ: ನೀವು ಎಂದಿಗೂ ಶ್ರೀಮಂತರಾಗದಿರಲು 7 ಕಾರಣಗಳುಲೇಖಕರು ಕೆಲವು ತಿಂಗಳ ನಂತರ ನೀವು ಆರಿಸಿಕೊಂಡಿರುವ ಕಂಪನಿಗಳನ್ನು ಮತ್ತೊಮ್ಮೆ ಪರಿಶೀಲಿಸಲು ತಿಳಿಸುತ್ತಾರೆ. ಅಂದರೆ ನೀವು ಯೋಚಿಸಿದ ರೀತಿಯಲ್ಲಿ ಅದು ನಿರ್ವಹಿಸುತ್ತಿದೆಯೇ ಎಂದು ನೋಡಬೇಕು. ಉದಾಹರಣೆಗೆ ಆ ಕಂಪನಿಯ ಮಾರಾಟ ಹೆಚ್ಚಿದೆಯೇ ಅಥವಾ ಇಲ್ಲವೇ, ನೀವು ಆಯ್ಕೆ ಮಾಡಿರೋ ಕಂಪನಿ, ವೇಗವಾಗಿ ಬೆಳೆಯುವುದಾದರೆ(fast grower), ಮುಂಬರುವ ಸಮಯದಲ್ಲಿ ಅದು ಬೆಳವಣಿಗೆಯನ್ನು ನಿರ್ವಹಿಸಲು ಸಾಧ್ಯವಾಗಲಿದೆಯೇ ಎಂಬುದನ್ನು ನೋಡಬೇಕು.
ಇದನ್ನು ಓದಿ: ರಾಬರ್ಟ್ ಕಿಯೋಸಾಕಿ ಅವರ ಎಲ್ಲಾ ಪುಸ್ತಕದ Summaryಈ ಚಾಪ್ಟರ್ನಲ್ಲಿ ಲೇಖಕರು ಪಾರ್ಟ್ 1 ಮತ್ತು ಪಾರ್ಟ್ 2 ಅನ್ನು ಸಾರಾಂಶ ಮಾಡಿದ್ದಾರೆ. ಆದರೆ ನಾವು ಇದರಲ್ಲಿ ಇಲ್ಲಿಯವರೆಗೆ ಚರ್ಚಿಸದ ಪಾಯಿಂಟ್ಗಳನ್ನು ಶೇರ್ ಮಾಡಲಿದ್ದೇವೆ. ಇದರಿಂದ ವಿಷಯ ಪುನರಾವರ್ತಿಸದೆ ನಿಮ್ಮ ಅಮೂಲ್ಯವಾದ ಸಮಯ ವ್ಯರ್ಥವಾಗದಿರಲಿ.
ದೊಡ್ಡ ಕಂಪನಿಗಳು ನಿಧಾನವಾಗಿ ನಡೆಯುತ್ತವೆ. ಚಿಕ್ಕ ಕಂಪನಿಗಳು ಬೇಗನೆ ನಡೆಯುತ್ತವೆ.
ನಿಮಗೆ ಎಷ್ಟು ಲಾಭವಾಗಲಿದೆ ಎಂಬುದು ಕಂಪನಿಯ ಗಾತ್ರದ ಮೇಲು ನಿಂತಿದೆ.
ಬೆಳವಣಿಗೆ ದರ 50% ಗಿಂತ ಹೆಚ್ಚಿರುವ ಕಂಪನಿಗಳಿಂದ ದೂರವಿರಿ.
ಶೂನ್ಯ ಸಾಲ ಇರುವ ಕಂಪನಿಗಳು ಬೀಳುವ ಅವಕಾಶ ತುಂಬಾ ಕಡಿಮೆ ಇರುತ್ತದೆ.
ವಾರದಲ್ಲಿ ಒಂದು ಗಂಟೆ ನಿಮ್ಮ ಹೂಡಿಕೆ ಮತ್ತು ಷೇರು ಮಾರುಕಟ್ಟೆಗೆ ನೀಡಿ ಮತ್ತು ನಿಮ್ಮ ಜ್ಞಾನ ಮತ್ತು ಅನುಭವವನ್ನು ಹೆಚ್ಚಿಸಿಕೊಳ್ಳಿ.
ಇದನ್ನು ಓದಿ: "Atomic Habits" ಪುಸ್ತಕದ ವಿವರಣೆಇದರಲ್ಲಿ ಲೇಖಕರು ನಮ್ಮ ಪೋರ್ಟ್ಫೋಲಿಯೋದಲ್ಲಿ ಕನಿಷ್ಠ 3 ರಿಂದ 10 ಸ್ಟಾಕ್ಸ್ ಇರಬೇಕೆಂದು ತಿಳಿಸಿದ್ದಾರೆ. ಆ ಎಲ್ಲಾ ಸ್ಟಾಕ್ ವಿಭಿನ್ನ ವರ್ಗದಾಗಿದ್ದಾರೆ ಉತ್ತಮವಾಗಿದೆ. ಇದರಿಂದ ನಿಮ್ಮ ಅಪಾಯ ಕಡಿಮೆಗೊಳ್ಳುತ್ತದೆ.
ಇದನ್ನು ಓದಿ: ಕಡಿಮೆ ಹಣದೊಂದಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಹೇಗೆ?ಮೊದಲ ಪ್ರಶ್ನೆಯೇ "when to buy stocks" ಇದಕ್ಕೆ ಲೇಖಕರು, "ನೀವು ತಯಾರಿದ್ದು ಒಂದು ಸ್ಟಾಕ್ ಮೇಲೆ ಪೂರ್ತಿ ಸಂಶೋಧನೆ ಮಾಡಿದ್ದಾರೆ, ಆ ದಿನವೇ ಆ ಸ್ಟಾಕ್ ಅನ್ನು ಖರೀದಿಸಲು ಉತ್ತಮ ದಿನವಾಗಿದೆ. ಆದರೆ ಸ್ಟಾಕ್ ಅನ್ನು ಯಾವಾಗ ಮಾರಬೇಕು ಎಂಬುದು ಅನೇಕ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಸಾಮಾನ್ಯವಾಗಿ ನಿಮ್ಮ ಹೂಡಿಕೆಯ ಸಂಶೋಧನೆ ವಿಫಲವಾದಾಗ, ಅಂದರೆ ಕಂಪನಿಯ ಮೂಲಭೂತ(fundamental) ಬಿದ್ದಾಗ, ಸ್ಪರ್ಧಾತ್ಮಕ ಅನುಕೂಲತೆ(competitive advantage) ಹೆಚ್ಚಿದಾಗ ಅಥವಾ ಇಂಡಸ್ಟ್ರಿಯಲ್ಲಿ ಪ್ರಮುಖ ಬದಲಾವಣೆ ತುಂಬಾ ಕಡಿಮೆ ಇದ್ದಾರೆ. ನೀವು ಅದನ್ನು ಮಾರಬಹುದು. ಇಲ್ಲ ಆ ಸ್ಟಾಕ್ ನಿಮ್ಮ ಗುರಿಯನ್ನು ಮುಟ್ಟಿದ ನಂತರ ನೀವು ಅದನ್ನು ಮಾರಬಹುದು. ಇಲ್ಲ ನಿಮ್ಮ ಪೋರ್ಟ್ಫೋಲಿಯೊವನ್ನು ಸಮತೋಲನ ಮಾಡಲು ಅಥವಾ ನಗದುವಿನ(cash) ಅವಶ್ಯಕತೆ ಇದ್ದರೆ ನೀವು ಆ ಸ್ಟಾಕ್ ಅನ್ನು ಮಾರಬಹುದು.
ಇದನ್ನು ಓದಿ: ಈ ಸರಳ ತಂತ್ರದ ಮೂಲಕ ಮಾರುಕಟ್ಟೆಯನ್ನು ಸೋಲಿಸಿಇದರಲ್ಲಿ ಲೇಖಕರು, ಜನರು ಸಾಮಾನ್ಯವಾಗಿ ಷೇರು ಮಾರುಕಟ್ಟೆಯ ಬಗ್ಗೆ ಮಾತನಾಡುವ 12 ವಿಷಯಗಳ ಬಗ್ಗೆ ತಿಳಿಸಿದ್ದಾರೆ. ಆದರೆ ನಾವು 5 ಪ್ರಮುಖ ಸಾಲುಗಳನ್ನು ಶೇರ್ ಮಾಡುತ್ತೇವೆ.
ಈ ಚಾಪ್ಟರ್ನಲ್ಲಿ ಲೇಖಕರು ಆಪ್ಷನ್, ಫ್ಯೂಚರ್ ಮತ್ತು ಶಾರ್ಟ್ ಟ್ರೇಡಿಂಗ್ ಮಾಡಬೇಡಿ ಎಂದು ತಿಳಿಸುತ್ತಾರೆ. ಏಕೆಂದರೆ ಇದರಲ್ಲಿ ಜನರು ಅಧಿಕ ನಷ್ಟವನ್ನು ಅನುಭವಿಸುತ್ತಾರೆ.
ಇದನ್ನು ಓದಿ: ಸ್ಟಾಕ್‌ನಲ್ಲಿ ಹೂಡಿಕೆ ಮಾಡುವ ಮೊದಲು ಇವುಗಳು ತಿಳಿದಿರಲಿಯಾರು ಏನೇ ಹೇಳಿದರೂ ನೀವು ನಿಮ್ಮ ತಂತ್ರದ(strategy) ಮೇಲೆ ನಿಂತಿರಬೇಕು. ನಿಮಗೆ ಪ್ರಮುಖವೆನಿಸುವ ಕಂಪನಿಯನ್ನು ಅರ್ಥ ಮಾಡಿಕೊಳ್ಳಿ. ಮಾರುಕಟ್ಟೆಯನ್ನು ಟೈಮ್ ಮಾಡಲು ನೋಡಬೇಡಿ. ನಿಮ್ಮನ್ನು ಯಾವಾಗಲೂ ವಿದ್ಯಾರ್ಥಿ ಎಂದುಕೊಳ್ಳಿ. ಇದರಿಂದ ನಿಮಗೆ ಬೆಳವಣಿಗೆ ಬೇಗನೆ ಸಿಗುತ್ತದೆ.
ಇದಾಗಿತ್ತು one up on wall street ನ ಅಧ್ಯಾಯವಾರು(chapter wise) ಸಾರಾಂಶ. ನಿಮಗೆ ಈ ಸಾರಾಂಶ ಇಷ್ಟವಾಯಿತು ಎಂದು ನಂಬಿರುತ್ತೇವೆ. ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.
Explore all our Posts by categories.
Info Mind 1651
Info Mind 3825
See all comments...