Website designed by @coders.knowledge.

Website designed by @coders.knowledge.

"The Education of a Value Investor" Book Summary | 5 ಕೋಟಿಯ ಭೋಜನದ ಕಥೆ

 0

 Add

Please login to add to playlist

Watch Video

ಒಂದು ಒಳ್ಳೆಯ ಮನೆ, ಒಳ್ಳೆಯ ಕಾರು, ಪೋಷಕರಿಗಾಗಿ ಸ್ಥಿರ ಠೇವಣಿ(fd), ವ್ಯಾಪಾರವನ್ನು(business) ಪ್ರಾರಂಭಿಸಲು ಹಣ, ಜಗತ್ತಿನಲ್ಲಿ ಎಲ್ಲಿಯಾದರೂ ಸುತ್ತಾಡಲು ನಿಧಿ, ಇತ್ತೀಚಿನ ಟೆಕ್ ಗ್ಯಾಜೆಟ್‌ಗಳನ್ನು ನೀವು 5 ಕೋಟಿಯಲ್ಲಿ ಪಡೆಯಬಹುದು. ಆದರೆ ಒಬ್ಬ ವ್ಯಕ್ತಿ ಇಷ್ಟು ಹಣವನ್ನು ಒಂದು ಭೋಜನಕ್ಕಾಗಿ(lunch date) ಬಳಸಿದರೂ ಮತ್ತು ಅದು ಆ ಸಮಯದ ದುಬಾರಿ ಭೋಜನವಾಗಿತ್ತು. ಖಿನ್ನತೆಗೆ ಒಳಗಾದ ಹೆಡ್ಜ್ ಫಂಡ್(hedge fund) ವ್ಯವಸ್ಥಾಪಕನ ಬದುಕನ್ನು 5 ಕೋಟಿಯ ಭೋಜನ ಹೇಗೆ ಬದಲಾಯಿಸಿತು ಎಂಬುದನ್ನು ತಿಳಿದುಕೊಳ್ಳಿ. ಇದರಿಂದ ನೀವು ತುಂಬಾನೇ ಕಲಿಯಬಹುದು. ವೆಬ್ಸೈಟ್ಗೆ ಹೊಸದಾಗಿ ಬಂದಿದ್ದಾರೆ ರಿಜಿಸ್ಟರ್ ಆಗಿ. ನಿಮ್ಮ ಹೂಡಿಕೆ ಪ್ರಯಾಣವನ್ನು ಪ್ರಾರಂಭಿಸಲು ನೀವು ಯೋಚಿಸುತ್ತಿದ್ದಾರೆ, ಕೆಳಗೆ ಉಚಿತ ಡಿಮ್ಯಾಟ್ ಖಾತೆಯನ್ನು ತೆರೆಯಲು ಒಂದು ಲಿಂಕ್ ನೀಡಲಾಗಿದೆ.

ನೀವು ಅನೇಕ ವರ್ಷಗಳು ಕಷ್ಟಪಟ್ಟು 5 ಕೋಟಿಯನ್ನು ಸಂಪಾದಿಸಿದ್ದೀರಿ ಎಂದುಕೊಳ್ಳಿ. ಆಗಿದ್ದರೆ 5 ಕೋಟಿಯಿಂದ ನೀವು ಏನು ಮಾಡುವಿರಿ. ಈ ಲೇಖನವನ್ನು ಸ್ವಲ್ಪ ನಿಮಿಷ ಓದುವುದನ್ನು ನಿಲ್ಲಿಸಿ, ಕಮೆಂಟ್ನಲ್ಲಿ ತಿಳಿಸಿ. ಕೆಲವರು ವ್ಯಾಪಾರವನ್ನು ಪ್ರಾರಂಭಿಸಬಹುದು, ಕೆಲವರು ಸ್ಟಾಕ್ನಲ್ಲಿ ಹೂಡಿಕೆ ಮಾಡಬಹುದು, ಕೆಲವರು ಸ್ವಂತ ಮನೆಯನ್ನು ಕಟ್ಟಿಸಬಹುದು, ಕೆಲವರು ಹೊಸ ಕಾರು, ಫೋನ್ ಇಲ್ಲ ಬಟ್ಟೆಗಳನ್ನು ಖರೀದಿಸುತ್ತಾರೆ. ಆದರೆ ವಾರೆನ್ ಬಫೆಟ್(warren buffet) ಜೊತೆಗೆ ಊಟ ಮಾಡಲು 5 ಕೋಟಿ ಬಳಸುವವರು ಯಾರು ಇಲ್ಲವೆಂದೆನಿಸುತ್ತದೆ. ಆದರೆ ಸ್ಪಿಯರ್(spier) ಮತ್ತು ಮೋನಿಶ್ ಪಾಬ್ರಾಯ್(monish pabrai) ಅವರು 2007 ರಂದು ವಾರೆನ್ ಬಫೆಟ್ ಜೊತೆ ಭೋಜನವನ್ನು ಮಾಡಲು 5 ಕೋಟಿಯನ್ನು ನೀಡಿದ್ದರು.

guy spier and warren buffet lunch date in kannada
5 crore lunch date

ಸ್ಪಿಯರ್ ವಾರೆನ್ ಬಫೆಟ್ ಅವರನ್ನು ತಮ್ಮ ಅಚ್ಚುಮೆಚ್ಚಿನ ವ್ಯಕ್ತಿ(idol) ಎಂದು ಭಾವಿಸಿದ್ದರು. ಒಮ್ಮೆ ವಾರೆನ್ ಬಫೆಟ್ ಜೊತೆಗೆ ಭೋಜನ ಮಾಡಬಹುದು ಎಂಬ ಆಫರ್ ಬಂದಾಗ, ಸ್ಪಿಯರ್ ಮತ್ತು ಮೋನಿಶ್ ಪಾಬ್ರಾಯ್ ಇದನ್ನು ಸ್ವೀಕರಿಸಿದರು. ಈ ಭೋಜನದ ನಂತರ ಸ್ಪಿಯರ್ ಅವರು ಬದುಕಿನಲ್ಲಿ ಏನು ಮಾಡಬೇಕೆಂಬುದನ್ನು ತಿಳಿದಿರಲಿಲ್ಲ. ಆದರೆ ಅಂದಿನಿಂದ ಅವರ ಮೌಲ್ಯ ಹೂಡಿಕೆ(value investing) ತಂತ್ರವನ್ನು ಪೂರ್ತಿಯಾಗಿ ಫಾಲೋ ಮಾಡಲು ಪ್ರಾರಂಭಿಸಿದರು. ಇದರಿಂದ ಸ್ವಲ್ಪ ಸಮಯದ ನಂತರ ಅಕ್ವಾಮರೀನ್(aquamarine) ಎಂಬ ಒಂದು ಫಂಡನ್ನು ಬಿಡುಗಡೆ ಮಾಡುತ್ತಾರೆ. ಇಂದು ಈ ಫಂಡ್ 2400 ಕೋಟಿಯಷ್ಟು ಹಣವನ್ನು ನಿರ್ವಹಿಸುತ್ತಿದೆ.

ಅಕ್ವಾಮರೀನ್ ಮೌಲ್ಯ ಹೂಡಿಕೆ ತಂತ್ರವನ್ನು ಫಾಲೋ ಮಾಡುತ್ತಿದೆ. ಇದರಲ್ಲಿ ನೀವು 10 ರಿಂದ 15 ಕಂಪನಿಗಳಲ್ಲಿ ಹೂಡಿಕೆ ಮಾಡುತ್ತೀರಾ. ಅವು ಉತ್ತಮ ಗುಣಮಟ್ಟದ ವ್ಯಾಪಾರ ಮಾಡುವ ಕಂಪನಿಗಳಾಗಿದ್ದು ಕಡಿಮೆ ಬೆಲೆ ಸಿಗುತ್ತಿರುವಾಗ ಇವುಗಳಲ್ಲಿ ನೀವು ಹೂಡಿಕೆ ಮಾಡುತ್ತೀರಾ. ನಂತರ ನಿಮ್ಮ ಪೋರ್ಟ್ಫೋಲಿಯೋವನ್ನು ದೀರ್ಘವಾದಿಗೆ ಹಿಡಿದುಕೊಳ್ಳುತ್ತಿರಿ(hold). ಇದುವೇ ಮೌಲ್ಯ ಹೂಡಿಕೆಯಾಗಿದೆ.

ಇಂದು ನಾವು ಗಯ್ ಸ್ಪಿಯರ್(guy spier) ಅವರು ಬರೆದಿರುವ "the education of a value investor" ಪುಸ್ತಕದ ಸಾರಾಂಶ ತಿಳಿಸಲಿದ್ದೇವೆ. ಈ ಪುಸ್ತಕವು ನಿಮ್ಮನ್ನು ಒಬ್ಬ ಉತ್ತಮ ಹೂಡಿಕೆದಾರನಾಗಲು ಸಹಕರಿಸುತ್ತದೆ ಮತ್ತು ನಾವು ನಿಮ್ಮ ಗರಿಷ್ಠ ಕಲಿಕೆಗಾಗಿ ಈ ಪುಸ್ತಕದ 8 ನಿಯಮಗಳನ್ನು ತಿಳಿಸಲಿದ್ದೇವೆ. ಇದರಿಂದ ನಿಮ್ಮ ಸ್ಟಾಕ್ ಹೂಡಿಕೆಯಿಂದ ಉತ್ತಮವಾದ ರಿಟರ್ನ್ಸ್ ಪಡೆಯಬಹುದು.

ಇದನ್ನು ಓದಿ: ರಾಬರ್ಟ್‌ ಕಿಯೋಸಾಕಿ ಅವರ ಎಲ್ಲಾ ಪುಸ್ತಕದ Summary

1. Choose your silent mentor

how do you become a value investor in kannada
silent mentor

ಸ್ಪಿಯರ್ ವಾರೆನ್ ಬಫೆಟ್ ಅವರನ್ನು ತಮ್ಮ ಮಾರ್ಗದರ್ಶಕರೆಂದುಕೊಂಡಿದ್ದರು(mentor) ಮತ್ತು ಮೌಲ್ಯ ಹೂಡಿಕೆ ತಂತ್ರವನ್ನು ಅವರಿಂದಲೇ ಕಲಿತಿದ್ದರು. ಆದರೆ ಇವರು ಪೀಟರ್ ಲಿಂಚ್(peter lynch), ಚಾರ್ಲಿ ಮುಂಗರ್(charlie munger), ಬೆಂಜಮೀನ್ ಗ್ರಾಹಂ(benjamin graham) ಅವರನ್ನು ತಮ್ಮ ಮಾರ್ಗದರ್ಶಕರೆಂದುಕೊಂಡಿದ್ದರು. ಆದರೆ ಇವರ ಬದುಕಿನಲ್ಲಿ ಬದಲಾವಣೆ ತರಲು ವಾರೆನ್ ಬಫೆಟ್ ಅವರದ್ದು ದೊಡ್ಡ ಪಾತ್ರವಿದೆ.

ಅವರು ಯಾವುದೇ ರೀತಿಯ ಕಠಿಣಕಾರ ನಿರ್ಧಾರ ತೆಗೆದುಕೊಳ್ಳಬೇಕಿದ್ದರೆ, ವಾರೆನ್ ಬಫೆಟ್ ನನ್ನ ಜಾಗದಲ್ಲಿ ಇದ್ದಿದ್ದರೆ ಏನು ಮಾಡುತ್ತಿದ್ದರೂ ಎಂದು ಯೋಚಿಸುತ್ತಿದ್ದರು. ಈ ರೀತಿಯ ಯೋಚನೆಯಿಂದಾಗಿ ಅವರು ಹಲವು ಬಾರಿ ತಪ್ಪಾದ ಹೂಡಿಕೆಯ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಉಳಿದುಕೊಂಡಿದ್ದಾರೆ. ನೀವು ಉದ್ಯೋಗ(job), ವ್ಯಾಪಾರ, ಇಲ್ಲ ಹೂಡಿಕೆ(investment) ಮಾಡುತ್ತಿದ್ದರು, ಒಬ್ಬ ಮಾರ್ಗದರ್ಶಕರನ್ನು ಆರಿಸಿಕೊಳ್ಳಿ. ಅವರ ಹವ್ಯಾಸಗಳನ್ನು ನಿಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಿ. ನನಗೆ ವೈಯಕ್ತಿಕವಾಗಿ ಬೆಂಜಮೀನ್ ಗ್ರಾಹಂ ಅವರ "ಇಂಟಲಿಜೆಂಟ್ ಇನ್ವೆಸ್ಟರ್"ನಿಂದ ತುಂಬಾನೇ ಸ್ಫೂರ್ತಿ ಪಡೆದಿದ್ದೇನೆ. ಅದರ ಸಾರಾಂಶವನ್ನು ತಿಳಿಸಿದ್ದು ಈ ಲೇಖನದ ನಂತರ ನೀವು ಅದನ್ನು ಓದಬಹುದು.

ಇದನ್ನು ಓದಿ: 10 ಹೆಚ್ಚುವರಿ ಆದಾಯದ ಐಡಿಯಾಗಳು

2. Importance of mastermind group

mastermind group education of value investor in kannada
mastermind group

ಲೇಖಕರು ತಮ್ಮ ವೃತ್ತಿಯನ್ನು ಡಿ ಎಚ್ ಬ್ಲೇರ್(d h blair) ಕಂಪನಿಯಿಂದ ಪ್ರಾರಂಭಿಸಿದರು. ಅಲ್ಲಿನ ಕಾರ್ಯನಿರ್ವಾಹಕ(executive) ಗ್ರಾಹಕರೊಂದಿಗೆ ವಂಚನೆ(fraud) ಮಾಡಿದ್ದರಿಂದ ಅದು ದಿವಾಳಿಯಾಯಿತು(bankrupt). ಈ ಸಮಯದಲ್ಲಿ ಲೇಖಕರು ತುಂಬಾ ಖಿನ್ನತೆಗೆ ಒಳಗಾಗಿದ್ದರು. ಏಕೆಂದರೆ ಆ ಕಂಪನಿ ತನ್ನ ಉದ್ಯೋಗಿಗಳಿಗೆ(employee) ಅಧಿಕ ಮಾರಾಟ ಮಾಡಿ ಎಂದು ಒತ್ತಡ ನೀಡುತ್ತಿತ್ತು. ಅಧಿಕ ಲಾಭ ಗಳಿಸಲು ಹೇಳುತ್ತಿತ್ತು. ಆದರೆ ಅವರು ಮೋನಿಶ್ ಪಾಬ್ರಾಯ್ ರೀತಿ ಇರುವ ಜನರನ್ನು ಭೇಟಿ ಮಾಡಿದ ನಂತರ ಅವರ ಬದುಕಿನಲ್ಲಿ ಪ್ರಮುಖ ಬದಲಾವಣೆಗಳು ಬಂದಿತ್ತು.

ನಮ್ಮ ಕುಟುಂಬವೂ ಕೂಡ ಗೆಳೆಯರನ್ನು ಜಾಗರೂಕತೆಯಿಂದ ಆಯ್ಕೆ ಮಾಡಲು ಹೇಳುತ್ತಾರೆ. ಏಕೆಂದರೆ ನಿಮ್ಮ ಚಿಂತನೆಯ ಪ್ರಕ್ರಿಯೆ(thought process), ಹವ್ಯಾಸ ಮತ್ತು ಮಾನಸಿಕ ಮಾದರಿಗಳು(mental state) ದಿನದಲ್ಲಿ ಕಳೆಯುವ 5 ಜನರಿಂದಲೇ ಬರುತ್ತದೆ. ಹೀಗಾಗಿ ನೀವು ಯಾರ ಜೊತೆ ಗೆಳೆತನ ಬೆಳೆಸುತ್ತೀರಿ ಎಂಬುದು ದೊಡ್ಡ ಅಂಶವಾಗಿದೆ ಎಂದು ಲೇಖಕರು ಹೇಳುತ್ತಾರೆ. ಒಂದು ವೇಳೆ ನಿಮ್ಮ ಹತ್ತಿರ ಆ ರೀತಿಯ ಗೆಳೆಯರು ಇಲ್ಲವಾದಲ್ಲಿ ಆನ್ಲೈನ್ ಮೂಲಕ ಮಾಡಿಕೊಳ್ಳಲು ಪ್ರಯತ್ನಿಸಿ. ಸ್ವಯಂ ಆಗಿ ಅವರನ್ನು ಭೇಟಿಯಾಗಿ, ಒಬ್ಬೊಬ್ಬರಿಗೆ ಸಹಕರಿಸುತ್ತಾ ನೀವು ಬೆಳೆಯಿರಿ.

ಇದನ್ನು ಓದಿ: ಈ ಸರಳ ತಂತ್ರದ ಮೂಲಕ ಮಾರುಕಟ್ಟೆಯನ್ನು ಸೋಲಿಸಿ

3. Have your own inner scorecard

what is the inner scorecard approach in kannada
inner scorecard

"ನಾನು ಬೇಕಾದರೆ ಬರ್ಕ್ಷೈರ್ ಹಾಥ್ವೇ(berkshire hathway) ಕಂಪನಿಯನ್ನು ಇನ್ನಷ್ಟು ಲಾಭದಾಯಕ ಮಾಡಬಹುದು" ಎಂದು ವಾರೆನ್ ಬಫೆಟ್ ಹೇಳುತ್ತಾರೆ. ಅಂದರೆ, "10 ರಿಂದ 15 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿ(layoff) ಕಂಪನಿಯ ವೆಚ್ಚವನ್ನು ಕಡಿಮೆ ಮಾಡಬಹುದು, ಇಲ್ಲ ತೆರಿಗೆ ಪ್ರಯೋಜನಗಳನ್ನು(tax benifits) ಪಡೆಯಲು ಕಡಿಮೆ ತೆರಿಗೆ ಇರುವ ದೇಶಗಳಲ್ಲಿ ಕಂಪನಿ ತೆರೆಯಬಹುದು. ಆದರೆ ನಾನು ಇವೆಲ್ಲವನ್ನೂ ಮಾಡುವುದಿಲ್ಲ. ಏಕೆಂದರೆ ನನ್ನ ಒಳ ಅಂಕಪಟ್ಟಿಯ(inner scorecard) ಮೇಲೆ ನಿರ್ಧಾರ ತೆಗೆದುಕೊಳ್ಳುತ್ತೇನೆ". ಸ್ಪಿಯರ್ ಕೂಡ ಅವರದೇ ಒಳ ಅಂಕಪಟ್ಟಿಯನ್ನು ಮಾಡಿದ್ದು ಅದರಲ್ಲಿ ಅವರನ್ನು ಖುಷಿ ಪಡಿಸುವ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅದು ಬಿಟ್ಟು ಇತರರನ್ನು ಖುಷಿ ಪಡಿಸಲು ಅವರು ನಿರ್ಧಾರ ತೆಗೆದುಕೊಳ್ಳುವುದಿಲ್ಲ.

ಇದಾಗಿತ್ತು ಪುಸ್ತಕದ 3 ಪ್ರಮುಖ ಪಾಠಗಳು. ಈಗ ಈ ಪುಸ್ತಕದಲ್ಲಿ ತಿಳಿಸಿದ 8 ನಿಯಮಗಳ ಬಗ್ಗೆ ತಿಳಿದುಕೊಳ್ಳೋಣ. ಇದು ನಿಮ್ಮನ್ನು ಒಳ್ಳೆಯ ಹೂಡಿಕೆದಾರನಾಗಿ ಅಧಿಕ ರಿಟರ್ನ್ ಗಳಿಸಲು ಸಹಕರಿಸುತ್ತದೆ.

Rule 1: Stop checking the stock price everyday

should you check your stocks everyday in kannada
stop checking stock

ಚಿಲ್ಲರೆ ಹೂಡಿಕೆದಾರರು(retail investor) ಸ್ಟಾಕ್ ಬೆಲೆಯನ್ನು ತುಂಬಾನೇ ಆಗಾಗ್ಗೆ ಪರಿಶೀಲಿಸುತ್ತಿರುತ್ತಾರೆ. ಅನೇಕರು ಪ್ರತಿ ನಿಮಿಷ ಸ್ಟಾಕ್ ಬೆಲೆಯನ್ನು ಪರಿಶೀಲಿಸಿ ಒತ್ತಡದಲ್ಲಿ(tension) ಇರುತ್ತಾರೆ. ಇದರಿಂದಾಗಿ ನೀವು ತುಂಬಾ ತಬ್ಬಿಬ್ಬು(distract) ಆಗುತ್ತೀರಾ. ತಬ್ಬಿಬ್ಬಿಂದ ಗಾಬರಿಯಾಗಿ ತಪ್ಪಾದ ಹೂಡಿಕೆಗಳನ್ನು ಮಾಡುತ್ತೀರಾ.

ಇದನ್ನು ಓದಿ: ಶ್ರೀಮಂತರಿಗೆ ತಿಳಿದಿರುವ ಮತ್ತು ಬಡವರಿಗೆ ತಿಳಿದಿರದ ಹಣದ 5 ನಿಯಮಗಳು

Rule 2: If someone tries to sell you something don't buy it

ಲೇಖಕರಿಗೆ ತಮ್ಮ ಫಂಡ್ನಿಂದ ಸ್ವಲ್ಪ ಲಾಭ ಬಂದ ನಂತರ, ಅನೇಕ ಮಾರಾಟಗಾರರು(salesman) ಅವರ ಹತ್ತಿರ ಉತ್ಪನ್ನ ಮತ್ತು ಸೇವೆಯನ್ನು(goods and product) ಮಾರಾಟ ಮಾಡಲು ಬರುತ್ತಿದ್ದರು. ಪ್ರಾರಂಭದಲ್ಲಿ ಲೇಖಕರಿಗೆ ಇದು ತುಂಬಾನೇ ಪ್ರಮುಖವೆನಿಸಿತು. ಆದರೆ ಸ್ವಲ್ಪ ದಿನದ ನಂತರವೇ ಅವರ ಹತ್ತಿರ ಮಾರಾಟ ಮಾಡುವವರಿಗೆ ಅಧಿಕ ಲಾಭ ಆಗುತ್ತಿದೆ ಹೊರತು ನಮಗಲ್ಲ ಎಂದು ತಿಳಿಯುತ್ತದೆ. ಅವರು ಅವರಿಗೆ ಅಧಿಕ ಕಮಿಷನ್ ಸಿಗುವ ಉತ್ಪನ್ನ ಮತ್ತು ಸೇವೆಯನ್ನು ಮಾರುತ್ತಾರೆ. ಹೀಗಾಗಿಯೇ ಅವರು ಒಂದು ನಿಯಮವನ್ನು ಮಾಡಿ ಅದನ್ನು ಇಂದಿಗೂ ಪಾಲಿಸುತ್ತಿದ್ದಾರೆ. ಮಾರಾಟಗಾರ ಏನಾದರೂ ಮಾರಲು ಬಂದರೆ ಅವರು ಅದನ್ನು ತಕ್ಷಣವೇ ತಿರಸ್ಕರಿಸುತ್ತಾರೆ.

Rule 3: Stop talking to management

ಲೇಖಕರು ಉನ್ನತ ಆಡಳಿತದ(top management) ಮಾತು ಕೇಳಿ ಇಲ್ಲ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿ ಸ್ಟಾಕ್ ಅನ್ನು ಖರೀದಿಸುವುದಿಲ್ಲ. ಇದು ಏಕೆಂದರೆ ಕಂಪನಿ ಚೆನ್ನಾಗಿ ನಿರ್ವಹಿಸುತ್ತಿಲ್ಲವೆಂದರು ಮುಂದೆ ಚೆನ್ನಾಗಿ ನಿರ್ವಹಿಸುತ್ತದೆ ಎಂದು ತೋರಿಸುವ ಬುದ್ಧಿವಂತಿಕೆ ಆಡಳಿತಕ್ಕೆ ಇರುತ್ತದೆ.

Rule 4: Gather investment research in right order

what is the best order to invest in kannada
right order

ಈ ಪುಸ್ತಕದಲ್ಲಿ ಈ ನಿಯಮ ತುಂಬಾನೇ ಪ್ರಮುಖವಾಗಿದೆ. ಲೇಖಕರು ಹೂಡಿಕೆಯನ್ನು ಮಾಡಲು ಸ್ಟಾಕ್ ಹುಡುಕುವಾಗ ಸರಿಯಾದ ಕ್ರಮದಲ್ಲಿ(right order) ಹುಡುಕಲು ಹೇಳುತ್ತಾರೆ. ಉದಾಹರಣೆಗೆ ಕಂಪನಿ "a" ಅಧಿಕ ಲಾಭ ಗಳಿಸುತ್ತಿದೆ ಎಂದು ನೀವು ನಂಬಿದ್ದರೆ, ಈ ಮೊದಲ ಅನಿಸಿಕೆಯಿಂದ(impression) ನೀವು ಕಂಪನಿಯನ್ನು ಇಷ್ಟಪಡುವಿರಾ. ನಾವು ಮನುಷ್ಯರು ಮೊದಲು ಮಾಹಿತಿಯಾ ಮೇಲೆ ಅಧಿಕ ಪ್ರಭಾವಿತರಾಗುತ್ತೇವೆ.

ಆದರೆ ಸರಿಯಾದ ಕ್ರಮವೇನೆಂದರೆ, ಮೊದಲಿಗೆ ಕಂಪನಿಯ ವಾರ್ಷಿಕ ವರದಿ(annual report) ಓದಿ. ಇದು ಬೇಸರದ ಕಾರ್ಯವಾಗಿರಬಹುದು. ಆದರೆ ಇದನ್ನು ಮಾಡಿದರೆ ಇಂಟರ್ನೆಟ್ನಲ್ಲಿ ಕಂಪನಿಯ ಬಗ್ಗೆ ಇರದ ವಿಷಯಗಳು ತಿಳಿಯುತ್ತದೆ. ಇದರ ನಂತರ ನೀವು ಉದ್ಯಮದ(industry) ಬಗ್ಗೆ ತಿಳಿದುಕೊಳ್ಳಿ, ನಂತರ ಪ್ರತಿಸ್ಪರ್ಧಿಯ(competitor) ವಿಶ್ಲೇಷಣೆ ಮಾಡಿ, ನಂತರ ಕಂಪನಿಯ ಆನ್ಲೈನ್ ಲೇಖನ ಮತ್ತು ವೀಡಿಯೋಗಳನ್ನು ನೋಡಿ. ಇದನ್ನೇ ಸ್ಪಿಯರ್ ಅವರು ಬಳಸುತ್ತಾರೆ. ಅವರು ಇದನ್ನು ವಾರೆನ್ ಬಫೆಟ್ ಮತ್ತು ಚಾರ್ಲಿ ಮುಂಗರ್ನಿಂದ ತಿಳಿದುಕೊಂಡರು. ಸಂಕೀರ್ಣ(complicated) ಕಾರ್ಯಗಳನ್ನು ಮಾಡುವಾಗ ನಮ್ಮ ಮೆದುಳು ತಪ್ಪು ಮಾಡುತ್ತದೆ. ಹೀಗಾಗಿ ನೀವು ಇವುಗಳನ್ನು ಫಾಲೋ ಮಾಡಿ ಅದನ್ನು ಕಡಿಮೆ ಮಾಡಬಹುದು.

ಇದನ್ನು ಓದಿ: Sip vs Lumpsum ಹೂಡಿಕೆಗೆ ಯಾವುದು ಉತ್ತಮ?

Rule 5: Share your investment ideas to whom who not get any benefit from your success

ಲೇಖಕರ ಅಧಿಕ ಹೂಡಿಕೆ ಮಾಡುವ ಗೆಳೆಯರು ಇದ್ದಾರೆ. ಅವರಿಗೆ ಸ್ಟಾಕ್ ಬಗ್ಗೆ ಕೇಳಿದಾಗ ಅವರ ಪ್ರಾಮಾಣಿಕ ವಿಮರ್ಶೆಯನ್ನು ನೀಡುತ್ತಾರೆ ಮತ್ತು ಆ ಸ್ಟಾಕ್ ಬಗ್ಗೆ ಐಡಿಯಾ ಇಲ್ಲದಿದ್ದರೆ ಅದನ್ನು ತಿರಸ್ಕರಿಸುತ್ತಾರೆ. ಹೀಗಾಗಿ ಸ್ಟಾಕ್ಗೆ ಸಂಬಂಧಿಸಿದಂತೆ ಹೆಚ್ಚುವರಿ ಜ್ಞಾನವನ್ನು ಪಡೆಯಲು ಸ್ವಯಂ ಆಸಕ್ತಿ ಇರದ ಪ್ರಾಯೋಗಿಕ ಜ್ಞಾನ ಹಂಚುವವರಿಗೆ ತಿಳಿಸಿ.

Rule 6: Never buy or sell stocks when the market is open

why not to buy stocks in kannada
never buy and sell

ಇದನ್ನು ಲೇಖಕರು ಮೋನಿಶ್ ಪಾಬ್ರಾಯ್ ಇಂದ ತಿಳಿದುಕೊಂಡರು. ಅವರು ಟ್ರೇಡಿಂಗ್(trading) ಸಮಯದಲ್ಲಿ ಟ್ರೇಡ್ ಮಾಡುವುದಿಲ್ಲ. ನೀವು ಷೇರು ಮಾರುಕಟ್ಟೆಯಲ್ಲಿ ಎಷ್ಟು ನಿಷ್ಕ್ರಿಯವಿರುತ್ತೀರೋ(inactive) ಅಷ್ಟು ಬೆಳೆಯುವ ಅವಕಾಶ ಇರುತ್ತದೆ ಎಂದು ಅವರು ಹೇಳುತ್ತಾರೆ.

Rule 7: If a stock tumbles after you buy it, don't sell it for 2 years

ನಿಮ್ಮ ಸಂಶೋಧನೆಯ ನಂತರವು, ನೀವು ಆಯ್ಕೆ ಮಾಡಿರುವ ಸ್ಟಾಕ್ ಚೆನ್ನಾಗಿ ನಿರ್ವಹಿಸುತ್ತಿಲ್ಲವೆಂದರೆ ನೀವು ಅದನ್ನು ಮಾರುವ ಅವಶ್ಯಕತೆ ಇಲ್ಲ, ಕನಿಷ್ಠ 2 ವರ್ಷಗಳಿಗಾದರೂ ಅದನ್ನು ಹಿಡಿದುಕೊಳ್ಳಿ. ಇದರಿಂದ ನಿಮ್ಮ ಮಾನಸಿಕ(psychological) ನಡವಳಿಕೆಯನ್ನು ನೀವು ನಿರ್ವಹಿಸಬಹುದು.

ಇದನ್ನು ಓದಿ: ಆರ್ಥಿಕವಾಗಿ ಸ್ವತಂತ್ರಗೊಳಿಸುವ 14 ಸ್ವತ್ತುಗಳು

Rule 8: Do not say anything publicly about your investments that you may live to regret

ನಿಮ್ಮ ಹೂಡಿಕೆಯ ಬಗ್ಗೆ ಎಷ್ಟು ಕಡಿಮೆ ಜನಗಳಿಗೆ ತಿಳಿಸಲು ಸಾಧ್ಯವೊ ತಿಳಿಸಿ. ಆದಷ್ಟು ಯಾರಿಗೂ ತಿಳಿಸಬೇಡಿ. ಏಕೆಂದರೆ ನಾವು ಭಾರತೀಯರು ಪ್ರತಿ ವಿಷಯಕ್ಕೆ ಅಭಿಪ್ರಾಯವನ್ನು(opinion) ನೀಡುತ್ತೇವೆ. ಹೀಗಾಗಿ ನಿಮ್ಮ ಹೂಡಿಕೆಯ ಬಗ್ಗೆ ಹತ್ತಿರ ಇರುವ ವ್ಯಕ್ತಿಗೆ ಬಿಟ್ಟು ಇತರರೊಂದಿಗೆ ಶೇರ್ ಮಾಡಬೇಡಿ.

ಇದಾಗಿತ್ತು ಪುಸ್ತಕದ 8 ನಿಯಮ. ಇದರ ಮುಕ್ತಾಯ ಮಾಡಿದರೆ ಇದರಲ್ಲಿ ನಾವು ಗಯ್ ಸ್ಪಿಯರ್ ಅವರ ಬಗ್ಗೆ ತಿಳಿದುಕೊಂಡೆವು. ಅವರು ಒಂದು ಒಳ್ಳೆಯ ವಿಶ್ವವಿದ್ಯಾಲಯದಿಂದ ಪದವಿಧರನಾದ ನಂತರವೂ, ತಮ್ಮ ಕೆಲಸದಿಂದ ಖುಷಿ ಇರಲಿಲ್ಲ. ಅವರ ದುರಾಸೆಯಿಂದ(greed) ಅವರು ಹಗರಣಕ್ಕೂ(scam) ಸಿಗಬಹುದು. ಅವರು ವಾರೆನ್ ಬಫೆಟ್ ಅನ್ನು ಮೂಕ ಮಾರ್ಗದರ್ಶಕ(silent mentor) ಎಂದುಕೊಂಡಿದ್ದರು. ಅವರ ಮೌಲ್ಯ ಹೂಡಿಕೆಯ ತತ್ವಶಾಸ್ತ್ರದಿಂದ ಗಯ್ ಸ್ಪಿಯರ್ ಅವರು ಅವರ ಬದುಕನ್ನು ಪೂರ್ತಿಯಾಗಿ ಬದಲಿಸಿಕೊಂಡರು.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

No Comments