Website designed by @coders.knowledge.

Website designed by @coders.knowledge.

Why Japan is years ahead from world | ಜಪಾನ್ ಜಗತ್ತಿಗಿಂತ ವರ್ಷಗಳಷ್ಟು ಏಕೆ ಮುಂದಿದೆ?

Watch Video

ಜಪಾನ್ ಅಂದರೆ ಭವಿಷ್ಯ, ಈ ಮಾತು ಸತ್ಯವಾಗಿದೆ. ಜಪಾನ್ ಯಾವಾಗಲು ದಕ್ಷತೆಗಾಗಿ ಶ್ರಮಿಸುತ್ತದೆ. ಜಪಾನ್ ಯಾವಾಗಲೂ ವಿಕಸನಗೊಳ್ಳುವ ಸಂಸ್ಕೃತಿಯಾಗಿದ್ದು, ನೀವು ಊಹಿಸುವುದಕ್ಕಿಂತ ಹೆಚ್ಚಿನ ರೀತಿಯಲ್ಲಿ ನಿಮ್ಮ ಕಣ್ಣುಗಳನ್ನು ತೆರೆಯುತ್ತದೆ. ಜಪಾನ್ ವಿಭಿನ್ನವಾಗಿದೆ, ಗೊಂದಲಮಯವಾಗಿದೆ, ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಜಪಾನೀಯರು ಆವಿಷ್ಕಾರರು. ಅವರು ಜಗತ್ತಿಗಿಂತ ದಶಕಗಳ ಮೊದಲೇ ವಿಷಯಗಳನ್ನು ಕಂಡುಕೊಳ್ಳುತ್ತಾರೆ. ಒಂದು ಅವರು ಮೇಧಾವಿಗಳು ಅಥವಾ ಅವರು ತಮ್ಮ ಸಂಪೂರ್ಣ ಅಸ್ತಿತ್ವವನ್ನು ಪ್ರತ್ಯೇಕವಾಗಿ ಬದುಕುತ್ತಿರುವುದು ಇದಕ್ಕೆ ಕಾರಣವಿರಬಹುದು. ಜಪಾನ್ ಜಗತ್ತಿಗಿಂತ ಹತ್ತು ವರ್ಷ ಮುಂದಿರುವ ಬಗ್ಗೆ ತಿಳಿಸುವ ಹತ್ತು ವಿಷಯಗಳು ಈ ಲೇಖನದಲ್ಲಿದೆ.

1. ಬುಲೆಟ್ ರೈಲು.

bullet trains in japan in kannada
youtube.com/c/drewbinsky

ಜಪಾನ್‌ನಲ್ಲಿ 2,300 ಕಿ.ಮೀಗಿಂತಲೂ ಹೆಚ್ಚು ರೈಲಿನ ಹಳಿಗಳಿವೆ. ಅದರ ಮೇಲೆ ರೈಲುಗಳು ಗಂಟೆಗೆ 320 ಕಿ.ಮೀನಷ್ಟು ವೇಗದಲ್ಲಿ ಹೋಗುತ್ತವೆ. ಇಲ್ಲಿನ ರೈಲುಗಳು ವರ್ಷಕ್ಕೆ 36 ಕೋಟಿಗೂ ಹೆಚ್ಚು ಪ್ರಯಾಣಿಕರನ್ನು ಸಾಗಿಸುತ್ತದೆ. ಅದು ಯುಎಸ್‍ಎಯ ಜನಸಂಖ್ಯೆಗೂ ಹೆಚ್ಚು. ಟೋಕಿಯೋ(tokyo)ದಿಂದ ಕ್ಯೋಟೋ(kyoto)ಗೆ 500 ಕಿ.ಮೀನಷ್ಟು ಪ್ರಯಾಣವು ಕಾರಿನಲ್ಲಿ 7 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಆದರೆ ನೀವು ಬುಲೆಟ್ ಟ್ರೈನ್ ನಿಂದ 2 ಗಂಟೆಯಲ್ಲೇ ಅದೇ ಪ್ರಯಾಣವನ್ನು ಪೂರ್ಣಗೊಳಿಸಬಹುದು.

ಇದನ್ನೂ ಓದಿ : ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಗೇಮ್ ಪ್ಲಾನ್

2. ರೋಬೋಟ್.

robots in japan in kannada
youtube.com/c/drewbinsky

ರೋಬೋಟ್ಗಳು ಜಪಾನ್‌ನಲ್ಲಿ ಇನ್ನೂ ಹತ್ತು ವರ್ಷಗಳ ಒಳಗೆ ಕಾರುಗಳನ್ನು ಓಡಿಸುತ್ತಾವೆ ಎಂದು ನಾನು ಭಾವಿಸುತ್ತೇನೆ. ಅಲ್ಲಿ ರೋಬೋಟ್ಗಳು(robot) ಈಗಾಗಲೇ ಮಳಿಗೆಗಳಲ್ಲಿ ಊಟ ತಯಾರಿಸಲು, ಮನೆಗಳನ್ನು ಶುಚಿಗೊಳಿಸಲು, ಕಾರ್ಖಾನೆಗಳಲ್ಲಿ ಕಾರುಗಳನ್ನು ತಯಾರಿಸಲು ಬಳಸಲಾಗುತ್ತಿದೆ. ಜಪಾನ್‌ನಲ್ಲಿ ಪ್ರತಿ ಪುನರಾವರ್ತಿತ(repeating) ಕೆಲಸಕ್ಕಾಗಿ ನೀವು ರೋಬೋಟ್ಗಳನ್ನು ಕಾಣಬಹುದು.

3. ಆರ್ಕೆಡ್ ಗೇಮಿಂಗ್.

arcade games in japan in kannada
youtube.com/c/drewbinsky

ಹೆಚ್ಚಿನ ಸಂಖ್ಯೆಯ ಜಪಾನಿನ ಪುರುಷರು ಆರ್ಕೆಡ್ ಆಟಗಳ(arcade gaming) ಬಗ್ಗೆ ಗೀಳನ್ನು ಹೊಂದಿದ್ದಾರೆ ಮತ್ತು ಅವರು ನಿಜವಾಗಿಯೂ ಕೌಶಲ್ಯಯುತವಾಗಿದ್ದಾರೆ. ಇಲ್ಲಿನ ಆಟಗಳು ನೀವು 23ನೇ ಶತಮಾನದಲ್ಲಿರುವಂತೆ ಭಾಸ ಮಾಡುತ್ತವೆ. ನೀವು ಬಾಲ್ಯದಲ್ಲಿ ಆಡಿದ ಮಾರಿಯೋ(mario) ಸೇರಿದಂತೆ ಜಪಾನ್‌ನಲ್ಲಿ ಪ್ರತಿಯೊಂದು ವೀಡಿಯೋ ಗೇಮ್ ಅನ್ನು ಆವಿಷ್ಕರಿಸಲಾಗಿರುವುದರಿಂದ ಗೇಮರ್ ಆಗುವುದು ಅವರ ರಕ್ತದಲ್ಲಿದೆ.

ಇದನ್ನೂ ಓದಿ : ಡೈನಾಸೋರ್ಗಳ ನಾಶದಿಂದ ಮನುಷ್ಯನ ಅಸ್ತಿತ್ವದ ತನಕ

4. ಮಾರಾಟ ಯಂತ್ರಗಳು(vending machines).

vending machines in japan in kannada
youtube.com/c/drewbinsky

ಮಾರಾಟ ಯಂತ್ರಗಳು ಅನನ್ಯವಾಗಿ ಜಪಾನೀಸ್ ಅಲ್ಲ. ಆದರೆ ಜಪಾನ್‌ನ ಮಾರಾಟ ಯಂತ್ರಗಳು ಅನನ್ಯ ಮತ್ತು ನವೀನವಾಗಿದೆ. ಈ ದೇಶವು 40 ಲಕ್ಷಕ್ಕೂ ಹೆಚ್ಚು ಮಾರಾಟ ಯಂತ್ರಗಳನ್ನು ಹೊಂದಿವೆ ಮತ್ತು ಇವುಗಳು ಕೇವಲ ತಂಪು ಪಾನೀಯಗಳಿಗೆ ಮಾತ್ರವಲ್ಲದೆ. ಬಿಸಿ ಕ್ಯಾಪುಸಿನೊ(cappuccino), ವಿಚಿತ್ರ ಆಟಿಕೆಗಳು ಮತ್ತು ಐಸ್‌ಕ್ರೀಮ್, ಪಾಪ್ಕಾರ್ನ್, ಎಲೆಕ್ಟ್ರಾನಿಕ್ಸ್ ನಂತಹ ಇತರ ವಿಲಕ್ಷಣ ವಸ್ತುಗಳ ಗುಂಪನ್ನು ಹೊಂದಿದೆ. ಇಲ್ಲಿ ಮಾರಾಟ ಯಂತ್ರಗಳಿಂದ ಊಟಗಳನ್ನು ಆದೇಶ(order) ಮಾಡುವುದು ಸಾಮಾನ್ಯವಾಗಿದೆ. ಇದು ಜಪಾನ್‌ನಲ್ಲಿ ಜೀವನವನ್ನು ಸುಲಭಗೊಳಿಸಿದೆ.

5. ಸೂಪರ್ ಶೌಚಾಲಯಗಳು.

super toilets in japan in kannada
youtube.com/c/drewbinsky

ಜಪಾನ್‌ನಲ್ಲಿ ಶೌಚಾಲಯಗಳಿಗಿಂತ ಹೆಚ್ಚು ಆಹ್ಲಾದಿಸಬಹುದಾದ ಸ್ಥಳವಿಲ್ಲ. ಜಪಾನ್‌ನಲ್ಲಿ ಶೌಚಾಲಯಗಳು ತುಂಬಾ ಮುಂದುವರೆದಿದ್ದು, ಅದು ನಿಮ್ಮ ಬುಡವನ್ನು ನಿಷ್ಕಳಂಕವಾಗಿ ಸ್ವಚ್ಛಗೊಳಿಸುತ್ತವೆ. ಕೆಲವು ಹೈಟೆಕ್ ಶೌಚಾಲಯಗಳು(hitech toilet) ನಿಮ್ಮ ರಕ್ತದೊತ್ತಡ, ಮೂತ್ರ, ತೂಕ ಮತ್ತು ದೇಹದ ಕೊಬ್ಬನ್ನು ಸಹ ಪರಿಶೀಲಿಸುತ್ತದೆ.

ಇದನ್ನೂ ಓದಿ : ಎತ್ತರವನ್ನು ಹೆಚ್ಚಿಸಲು 5 ಅತ್ಯುತ್ತಮ ವ್ಯಾಯಾಮಗಳು

6. ಸಾರ್ವಜನಿಕ ಸಾರಿಗೆ.

public transportation in japan in kannada
youtube.com/c/drewbinsky

3.8 ಕೋಟಿಯಷ್ಟು ಜನರಿರುವ ನಗರಗಳಲ್ಲಿ ಮೆಟ್ರೋ ವ್ಯವಸ್ಥೆಗಳು ಎಷ್ಟು ಪರಿಶುದ್ಧವಾಗಿದೆ ಎಂಬುದು ನನ್ನ ಮನಸ್ಸನ್ನು ತಲ್ಲಣಗೊಳಿಸುತ್ತದೆ. ಟೋಕ್ಯೋ ಮಹಾನಗರದಲ್ಲಿ 883 ಅಂತರ್ ಸಂಪರ್ಕಿತ ರೈಲು ನಿಲ್ದಾಣಗಳಿವೆ. ಶಿಂಜುಕು(shinjuku) ನಿಲ್ದಾಣವು ವಿಶ್ವದ ಅತ್ಯಂತ ಜನನಿಬಿಡ ರೈಲು ನಿಲ್ದಾಣವಾಗಿದ್ದು, ಪ್ರತಿದಿನ 3 ಕೋಟಿಗೂ ಹೆಚ್ಚು ಪ್ರಯಾಣಿಕರನ್ನು ಸಾಗಿಸುತ್ತದೆ.

7. ಸ್ವಯಂಚಾಲಿತ ಕಾರ್ ಪಾರ್ಕಿಂಗ್(automated car parking).

automated car parking in japan in kannada
youtube.com/c/drewbinsky

ಜಾಗವನ್ನು ಉಳಿಸಲು ಜಪಾನೀಯರು ಪಾರ್ಕಿಂಗ್ ಸ್ಥಳಗಳನ್ನು ಕಂಡುಕೊಂಡಿದ್ದಾರೆ. ಅಲ್ಲಿ ಅವರು ಒಂದರ ಮೇಲೊಂದು ಕಾರುಗಳನ್ನು ಜೋಡಿಸಬಹುದು. ಜಪಾನ್‌ನ ಅನೇಕ ಅಪಾರ್ಟ್ಮೆಂಟ್ ಸಂಕೀರ್ಣಗಳು, ಹೋಟೆಲ್ ಮತ್ತು ರೆಸ್ಟೋರೆಂಟ್ಗಳು ಅವುಗಳನ್ನು ಹೊಂದಿದೆ. ಇವುಗಳನ್ನು ನೀವು ಕಾರಿನ ವೆಡಿಂಗ್ ಮಷಿನ್ ಎಂದು ಭಾವಿಸಬಹುದು.

ಇದನ್ನೂ ಓದಿ : ಮೊಡವೆಗಳಿಂದ ಶಾಶ್ವತ ಪರಿಹಾರಕ್ಕೆ 14 ಸಲಹೆಗಳು

8. ಭವಿಷ್ಯದ ಫ್ಯಾಷನ್.

future fashion in japan in kannada
youtube.com/c/drewbinsky

ಟೋಕಿಯೋದ ಅಕಿಹಬಾರ(akihabara) ಜಿಲ್ಲೆಯ ರಸ್ತೆಯಲ್ಲಿ ನೀವು ನಡೆದು ಹೋಗಿ. ಅಲ್ಲಿ ಅನೇಕ ಜನರು 22ನೇ ಶತಮಾನದಂತೆ ಉಡುಪುಗಳನ್ನು ಧರಿಸಿರುವುದನ್ನು ನೀವು ಕಾಣಬಹುದು. ಜಪಾನೀಯರು retro sci-fi gear ಮತ್ತು ನೀವು ಎಂದಿಗೂ ಯೋಚಿಸದ ಶೈಲಿಯಲ್ಲಿ ಅಲಂಕರಿಸಿರುತ್ತಾರೆ.

9. ಟಚ್ ಸ್ಕ್ರೀನ್ ಮೆನುಗಳು.

touch screen menu in japan in kannada
youtube.com/c/drewbinsky

ಜಪಾನ್‌ನ ಅನೇಕ ರೆಸ್ಟೋರೆಂಟ್ಗಳಲ್ಲಿ ನೀವು ಆಹಾರಗಳನ್ನು ಆರ್ಡರ್ ಮಾಡಲು ಐಪ್ಯಾಡ್ ಅಥವಾ ಈ ರೀತಿಯ ಕಟಿಂಗ್ ಸ್ಕ್ರೀನ್ ಹೊಂದಿದ್ದರೆ ಆತಿಥೇಯರು(hosters) ಮತ್ತು ಮಾಣಿಗಳ(waiters) ಅಗತ್ಯವೇ ಇರುವುದಿಲ್ಲ. ರೆಸ್ಟೊರೆಂಟ್ಗಳ ಒಳಗೆ ನೀವು ಏನು ತಿನ್ನಲು ಬಯಸುತ್ತೀರಿ ಎಂಬುದನ್ನು ಅರಿತುಕೊಳ್ಳಬೇಕು ಮತ್ತು ನಿಮ್ಮ ಆಹಾರವು ಬರುತ್ತದೆ.

10. ಸಣ್ಣ ವಿಷಯಗಳಿಗೆ ತಂತ್ರಜ್ಞಾನದ ಬಳಕೆ.

use of technology for little things in japan in kannada
youtube.com/c/drewbinsky

ಜಪಾನ್‌ನ ಹೋಟೆಲ್‌ಗಳಲ್ಲಿ ನೀವು ಸ್ವಯಂಚಾಲಿತ ಶುಚಿಗೊಳಿಸುವ ಕಿಟಕಿಗಳನ್ನು ನೋಡಬಹುದು. ಇಲ್ಲಿನ ರಸ್ತೆಗಳ ಮಧ್ಯದಲ್ಲಿ ನೀವು ಟಚ್ ಸ್ಕ್ರೀನ್ ಮಾಹಿತಿ ಫಲಕಗಳನ್ನು ಪಡೆಯಬಹುದು. ಶಾಖೋತ್ಪಾದಕಗಳು ಸಮವಾಗಿ ಉಷ್ಣತೆಯನ್ನು ಹರಡಲು ಅವುಗಳ ಮೇಲೆ ಫ್ಯಾನ್ ಹೊಂದಿರುತ್ತವೆ. ಟ್ಯಾಕ್ಸಿಗಳು ಸ್ವಯಂಚಾಲಿತವಾಗಿ ನಿಮಗಾಗಿ ಬಾಗಿಲು ತೆರೆಯುತ್ತವೆ. ಇವುಗಳಲ್ಲಿ ಅನೇಕ ಇತರ ದೇಶಗಳಲ್ಲಿ ಇರಬಹುದು, ಆದರೆ ಜಪಾನ್ ಅವುಗಳನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುತ್ತದೆ.

ಸ್ನೇಹಿತರೇ, ಭವಿಷ್ಯದ ಜಪಾನ್ ಬಗ್ಗೆ ತಿಳಿಸುವ ಹತ್ತು ವಿಷಯಗಳು ಇವುಗಳಾಗಿವೆ. ಇದಿಷ್ಟೇ ಅಲ್ಲದೆ ಜಪಾನ್ ಇನ್ನೂ ಅನೇಕ ವಿಷಯಗಳಲ್ಲಿ ಮುಂದುವರೆದಿದೆ. ನಿಮಗೆ ಅದರ ಬಗ್ಗೆ ತಿಳಿದಿದ್ದರೆ ಕಮೆಂಟ್ ನಲ್ಲಿ ತಿಳಿಸಿ.

Mahithi Thana

More by this author

Similar category

Explore all our Posts by categories.

commenters

sushma • November 29th,2022

One of the new information thank you.